ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ…

ಈ ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ…

“ ನಾರೀ ಸ್ತನಭರ ನಾಭೀದೇಶಂ
ದೃಷ್ಟ್ವಾ ಮಾಗಾ ಮೋಹಾವೇಶಮ್ |
ಏತನ್ಮಾಂಸ ವಸಾದಿ ವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||

ಎಂದು ಆದಿಶಂಕರರು ಹೇಳಿರುವರಂತೆ. ಹೇಳಿದ್ದೇವಲ್ಲ-ಸುಂದರಿಯರಲ್ಲಿರುವ ‘ಸೂರ್ಯ-ಚಂದ್ರ’ರನ್ನು ನೋಡಿದ ತಕ್ಷಣವೇ ನಾವು ರನ್ನೌಟ್ ಆಗಿಬಿಡ್ತೇವೆ. ಸುಪುಷ್ಟವಾದ ಅವುಗಳ ಗುಂಡಗಿನ ಆಕಾರಗಳನ್ನು ಕಂಡಾಗ, ದಖನ್ ಪ್ರಸ್ಥಭೂಮಿಯಂತಿರುವ ಸಪಾಟಾದ ನಾಭೀ ಭಾಗವನ್ನು ಕಂಡಾದ ನಮಗೆ ಪ್ರಸ್ತದ ರಾತ್ರಿ ಹೇಗಿರಬಹುದೆಂಬ ಆಲೋಚನೆ ಬರುತ್ತದೆ. ಅಂತಹ ಅದೆಷ್ಟು ಸುಂದರಿಯರೊಂದಿಗೆ ಅನೌಪಚಾರಿಕವಾಗಿ ನಾವು ಪ್ರಸ್ಥ ಆಚರಿಸಿಕೊಂಡಿಲ್ಲ ಹೇಳಿ? ಅದನ್ನೆಲ್ಲ ನೆನೆದು ಕೆಲವೊಮ್ಮೆ ನಮ್ಮ ಜನ್ಮಸಾರ್ಥಕ ಎಂದುಕೊಳ್ಳುತ್ತೇವೆ ನಾವು.

ಯೋಗಿಗಳ ಅಭಿಮತದಂತೆ ನಮ್ಮ ಶರೀರದೊಳಗೂ ಸಹ ಗಂಗಾ, ಯಮುನಾ, ಸರಸ್ವತಿ ನದಿಗಳಿವೆ. ಇವುಗಳಿಗೆ ಇಡಾ, ಪಿಂಗಳಾ, ಸುಷುಮ್ನಾ ಎನ್ನುತ್ತಾರೆ.

ಸುಷುಮ್ನಾ ನಾಡಿಯು ಬೆನ್ನುಹುರಿಯ ಮಧ್ಯಭಾಗದಲ್ಲಿ ನೆಲೆಸಿರುವ ಅಧ್ಯಾತ್ಮ ನದಿಯಾಗಿದೆ. ಇದು ಪೆರಿನಿಯಂನಲ್ಲಿರುವ ಮೂಲಾಧಾರ ಚಕ್ರದಿಂದ ಆಗಮಿಸಿ ತಲೆಯ ನೆತ್ತಿಯಲ್ಲಿರುವ ಸಹಸ್ರಾರ (ಬ್ರಹ್ಮರಂಧ್ರ)ದಲ್ಲಿ ಕೊನೆಗೊಳ್ಳುತ್ತದೆ.

ಇಡಾನಾಡಿಯು ಮೂಲಾಧಾರದ ಎಡಭಾಗದಿಂದ ಹೊರಟು ಬೆನ್ನುಹುರಿಯನ್ನು ಸುರುಳಿಯಾಗಿ ಸುತ್ತಿಕೊಳ್ಳುತ್ತಾ ಪ್ರತಿಯೊಂದು ಚಕ್ರವನ್ನು ಅಂಕುಡೊಂಕಾಗಿ ಬಳಸಿಕೊಂಡು ಆಜ್ಞಾಚಕ್ರದ (ಭೂಮಧ್ಯ) ಎಡಭಾಗದಲ್ಲಿ ಕೊನೆಗೊಳ್ಳುತ್ತದೆ.

ಪಿಂಗಳಾನಾಡಿ ಮೂಲಾಧಾರದ ಬಲಭಾಗದಿಂದ ಹೊರಟು ಇಡಾನಾಡಿಗೆ ಅಭಿಮುಖವಾಗಿ ಹಾಯ್ದು, ಆಜ್ಞಾ ಚಕ್ರದ ಬಲಭಾಗದಲ್ಲಿ ಕೊನೆಗೊಳ್ಳುತ್ತದೆ.

ಇಡಾ ಪಿಂಗಳಾ ನಾಡಿಗಳು ನಮ್ಮೊಳಗೆ ಹರಿಯುತ್ತಿರುವ ಎರಡು ವಿರುದ್ಧ ಬಲಗಳನ್ನು ಪ್ರತಿನಿಧಿಸುತ್ತವೆ. ಇಡಾ ನಾಡಿಯು ನಿಷ್ಕ್ರಿಯ, ಅಂತರ್ಮುಖಿ ಹಾಗೂ ಸ್ತ್ರೀ ಗುಣಗಳನ್ನು ಹೊಂದಿದೆ. ಇದನ್ನು ಚಂದ್ರನಾಡಿ ಎಂದೂ ಕರೆಯುತ್ತಾರೆ. ಇದಕ್ಕೆ ಪ್ರತಿಯಾಗಿ ಪಿಂಗಳ ಸಕ್ರಿಯ, ಬಹಿರ್ಮುಖಿ ಹಾಗೂ ಪುರುಷ ಗುಣದ್ದಾಗಿದ್ದು, ಇದನ್ನು ಸೂರ್ಯನಾಡಿ ಎಂದೂ ಕರೆಯುತ್ತಾರೆ.

ಒಂದು ಕೂದಲನ್ನು ಸಾವಿರಭಾಗವಾಗಿ ಸೀಳಿದರೆ ಎಷ್ಟು ಸಣ್ಣದಾಗಿರಬಹುದೋ ಅಂತಹ ಸ್ವರೂಪದಲ್ಲಿ ವೃಷಣದ ಮೂಲಸ್ಥಾನದಿಂದ ಶಿರಸ್ಸಿನ ತುದಿಯ ಬ್ರಹ್ಮರಂಧ್ರದವರೆಗೆ ಸುಷುಮ್ನನಾಡಿ ಇರುತ್ತದೆ. ಈ ನಾಡಿ 5 ಪ್ರಭೇದಗಳಿಂದ ಕೂಡಿದೆ.

ಮಧ್ಯದಲ್ಲಿ ಸಷುಮ್ನಾ ಅದರ ಪಶ್ಚಿಮಕ್ಕೆ ಅಂದ್ರೆ ಹಿಂಭಾಗಕ್ಕೆ ವಜ್ರಕಾ, ಪೂರ್ವಕ್ಕೆ ಪ್ರಕಾಶಿನಿ, ದಕ್ಷಿಣಕ್ಕೆ ಅಂದ್ರೆ ಬಲಕ್ಕೆ ವೈದ್ಯುತ, ಎಡಭಾಗಕ್ಕೆ ಆರ್ಯಾ, ಮಧ್ಯಭಾಗ ಬ್ರಹ್ಮನಾಡಿ ಎಂಬ ಪ್ರಭೇದಗಳು ಈ ಒಂದೇ ಸುಷುಮ್ನನಾಡಿಯೇ 5 ಭಾಗದಲ್ಲಿ 5 ಹಸರಿನಿಂದ ಕೂಡಿದೆ.

ನಮ್ಮ ಎಡಮೂಗಿನಲ್ಲಿ ಇಡಾನಾಡಿಯ 50, ಬಲಮೂಗಲ್ಲಿ ಪಿಂಗಳಾನಾಡಿಯ 50 ಶಾಖೆಗಳಿವೆ. ಕಿರುನಾಲಿಗೆಯಿಂದ ಎಡಭಾಗದ ದವಡೆಯವರೆಗೂ ವಜ್ರಿಕಾನಾಡಿ ಇದೆ ಮತ್ತು ಬಲದವಡರೆಗೂ ನಂದಿನಿನಾಡಿ [‘ನಂದಿನಿ ಡೀಲಕ್’ ಅಲ್ಲ ಮತ್ತೆ] ಇದೆ. ಸಷುಮ್ನನಾಡಿ ನಮ್ಮ ತೋಳಿನಲ್ಲಿ 10, ತೊಡೆಯಲ್ಲಿ 10, ಕಣ್ಣಲ್ಲಿ2, ಕಿವಿಯಲ್ಲಿ2, ನಾಲಿಗಯಲ್ಲಿ 1, ಲಿಂಗದಲ್ಲಿ 1, ಗುದದಲ್ಲಿ 1, ಹೃದಯದಲ್ಲಿ 32, ಸಿರಸ್ಸಿನಲ್ಲಿ 39, ಬೆನ್ನಲ್ಲಿ 2, ಮುಖ್ಯನಾಡಿಯನ್ನು ಸೇರಿಸಿ ಒಟ್ಟ 101 ನಾಡಿಗಳು.

101 ನಾಡಿಗಳಿಂದ 100 ಶಾಖೆಗಳು.
101×100=10100 ಆಗುತ್ತವೆ.ಇವು ಮೂಲನಾಡಿಗಳು.
ಇದರಲ್ಲಿ
100 ನಾಡಿಗಳು 10 ಶಾಖೆಯನ್ನು ಹೊಂದಿದ ನಾಡಿಗಳು 100×10 =1000.
100 ನಾಡಿಗಳು 9 ಶಾಖೆಗಳಿಂದ ಕೂಡಿರುತ್ತದೆ 100×9 =900.
300 ನಾಡಿಗಳು 8 ಶಾಖೆಗಳಿಂದ ಕೂಡಿದೆ ಅಂದರೆ 300×8 =2400.
9600 ನಾಡಿಗಳು 6 ಶಾಖೆಗಳನ್ನು ಹೊಂದಿವೆ ಅಂದರೆ 9600×6 =57600.

ಮೂಲನಾಡಿಗಳು 10100
ಶಾಖೆಗಳು. 61900
ಒಟ್ಟು. 72000 ನಾಡಿಗಳು

ಪರಮಮೂಲನಾಡಿಗಳು 101 ಸೇರಿದರೆ
——————-
ಒಟ್ಟೂ – 72101 ನಾಡಿಗಳು

ಐದು ಜ್ಞಾನೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಸೇರಿ ಹತ್ತಾಯ್ತು. ಹತ್ತು ಇಂದ್ರಿಯಗಳನ್ನು ರಥದ ಗಾಲಿಗಳಂತೆ ಬಳಸಿಕೊಳ್ಳುವ ಹನ್ನೊಂದನೆಯ ಇಂದ್ರಿಯವಾದ ಮನಸ್ಸು ಎಂಬುದು ಎಪ್ಪತ್ತೆರಡು ನಾಡಿಗಳ ಮಿಡಿತವನ್ನು ಹಿಡಿತದಲ್ಲಿಡುತ್ತದೆ.

ಅಂತಹ ಮನಸ್ಸಿಗೆ ಸಾಮಾನ್ಯ ಮನುಷ್ಯ ಯಾವ ಆಹಾರ ಕೊಡಬೇಕು, ಯೋಗಿ ಯಾವ ಆಹಾರ ಕೊಡಬೇಕು ಎಂಬುದಕ್ಕೆಲ್ಲ ನಿಯಮಗಳಿವೆ. ನಾವು ತಿಂದ ಆಹಾರದ ಆರನೆಯ ಒಂದು ಭಾಗ ಮೆದುಳಾಗಿ ಅಂದರೆ ಮನಸ್ಸಾಗಿ ಪರಿವರ್ತಿತವಾಗುತ್ತದೆ.

ಈರುಳ್ಳಿ ಉಪ್ಪಿಟ್ಟು, ತರಾವರಿ ಮಸಾಲೆ ಖಾದ್ಯಗಳನ್ನು ನಾವು ತಿನ್ನುತ್ತೇವೆ ಯಾಕೆಂದರೆ ನಮಗೆ ಮೇಲೆ ಹೇಳಿದ ನಿಯಮಗಳು ಅನ್ವಯವಾಗುವುದಿಲ್ಲ; ನಾವು ನಿಯಮಾತೀತರು. ನಾವು ಸ್ವೀಕರಿಸುವ ಆಹಾರಗಳು ಮತ್ತು ಅಷ್ಟಾಂಗಯೋಗ ರಹಿತ ದಿನಚರಿ ನಮ್ಮ ಮೆದುಳಿನ ಚಂಚಲತೆಯನ್ನು ನಿಗ್ರಹಿಸುವಲ್ಲಿ ಸೋತಿವೆ.

ಹೀಗಾಗಿ ನಮಗೆ ಹುಲುಮಾನವ ಲೋಕದ ‘ಅಪ್ಸರೆಯರ’ನ್ನು ಕಂಡರೆ ಬಹಳ ಪ್ರೀತಿ. ಆಚಾರ್ಯರು ಹೇಳಿದ್ದಾರೆ ಅಥವಾ ಇನ್ನಾರೋ ಯೋಗಿ ಹೇಳಿದ್ದಾರೆಂದು ಇಂತಹ ಸುಂದರಿಯರನ್ನೆಲ್ಲ ಕಳೆದುಕೊಳ್ಳಲಿಕ್ಕೆ ಬರುತ್ತದೆಯೇ? ಅವರು ಹೇಳೋದನ್ನ ಹೇಳಿದ್ದಾರೆ; ಕೇಳಬೇಕದವರು ಕೇಳಿದರಾಯ್ತಪ್ಪ; ಅದು ನಮ್ಮನ್ನುದ್ದೇಶಿಸಿ ಹೇಳಿದ್ದೆಂದು ಅವರೇನೂ ಹೇಳಿಲ್ಲವಲ್ಲ?”

Thumari Ramachandra

source: https://www.facebook.com/groups/1499395003680065/permalink/1629886883964209/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s