ರಾಂಗಾನುಗ್ರಹ

ರಾಂಗಾನುಗ್ರಹ
[ಹಳದೀ ತಾಲಿಬಾನ್ ಬರೆದ ತಾಜಾ ತಾಜಾ ಪವಾಡ ಕತೆಗಳು]

ಪವಾಡ-೧

ಮೊನ್ನೆ ತಡರಾತ್ರಿ ಸುಮಾರು 1 ಗಂಟೆಯ ಹೊತ್ತು. ಮಲೆನಾಡಲ್ಲಿ ಮುಂಗಾರು ಮಳೆ ಧೋ ಎಂದು ಸುರಿದಿತ್ತು. ಮಳೆಯಿಂದಾಗಿ ಗುಡ್ಡ ಕುಸಿದಿತ್ತು. ಬಂಡೆ ಹಳಿಗೆ ಉರುಳಿತ್ತು. ಕತ್ತಲು ಸೀಳಿ, ಏದುಸಿರು ಬಿಡುತ್ತಾ ಘಾಟಿ ಏರುತ್ತಿದ್ದ ರೈಲಿನ ಮುಂಭಾಗದ ಎಂಜಿನ್‌ ಬಂಡೆಗೆ ಡಿಕ್ಕಿ ಹೊಡೆದು ಅದನ್ನು ತಳ್ಳುತ್ತಾ ಮುಂದೆ ಸಾಗಿತ್ತು. ಚಾಲಕನಿಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ. ನಮ್ಮ ’ಹಾವಾಡಿಗ’ ಗುರುಗಳನ್ನಿ ನೆನೆಸಿದವನೇ ಕರ್ತವ್ಯಪ್ರಜ್ಞೆ ಮೆರೆದು ತಕ್ಷಣ ಎಂಜಿನ್‌ ಬ್ರೇಕ್‌ ಹಾಕಿಬಿಟ್ಟ. ರೈಲಿನಲ್ಲಿದ್ದ ಸುಮಾರು 1500 ಪ್ರಯಾಣಿಕರು ಸುದೈವವಶಾತ್‌ ಸಂಭಾವ್ಯ ಅನಾಹುತದಿಂದ ಪಾರಾದರು…

ಇದು ಕಾದಂಬರಿ ಕಥೆಯಲ್ಲ. ಸಿನಿಮಾ ದೃಶ್ಯ ವೂ ಅಲ್ಲ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್‌ ರೈಲುಮಾರ್ಗದಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದ ನೈಜ ಘಟನೆ.

ಆದದ್ದಿಷ್ಟು: ಮಂಗಳೂರು ರೈಲು ನಿಲ್ದಾಣ ದಿಂದ ಕಾರವಾರ- ಮಂಗಳೂರು ರೈಲು ಭಾನುವಾರ ರಾತ್ರಿ 9.30ಕ್ಕೆ ಪ್ರಯಾಣ ಬೆಳೆಸಿತ್ತು. ಸಕಲೇಶಪುರ ರೈಲು ನಿಲ್ದಾಣದಿಂದ ಸುಮಾರು 30 ಕಿ.ಮೀ.ದೂರದಲ್ಲಿರುವ ಅರೆಬೆಟ್ಟ ಎಂಬ ಪ್ರದೇಶದಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿ, ದೊಡ್ಡ ದೊಡ್ಡ ಗಾತ್ರದ ಬಂಡೆಗಳು ರೈಲು ಹಳಿಗಳ ಮೇಲೆಯೇ ಬಿದ್ದಿದ್ದವು. ತಡರಾತ್ರಿ 1ರ ಸುಮಾರಿಗೆ ಈ ಪ್ರದೇಶಕ್ಕೆ ಬಂದ ರೈಲು ಬಂಡೆಗೆ ಡಿಕ್ಕಿ ಹೊಡೆಯಿತು. ಬಂಡೆಯನ್ನು ತಳ್ಳುತ್ತಾ ಚಲಿಸುತ್ತಿದ್ದಂತೆ, ಸಮಯಪ್ರಜ್ಞೆ ಮೆರೆದ ಚಾಲಕ ಬ್ರೇಕ್‌ ಹಾಕಿ, ರೈಲನ್ನು ನಿಲ್ಲಿಸಿದ. ಇದರಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರು ಸಂಭಾವ್ಯ ಅಪಾಯದಿಂದ ಪಾರಾದರು.

ಇದೀಗ ಹಳಿ ಮೇಲೆ ಬಿದ್ದಿದ್ದ ಬಂಡೆಗಳನ್ನು ತೆರವುಗೊಳಿಸಲಾಗಿದ್ದು, ಸೋಮವಾರ ರಾತ್ರಿ ಯಿಂದ ಈ ಮಾರ್ಗದಲ್ಲಿ ರೈಲು ಸಂಚಾರ ಪುನಾ ರಂಭಗೊಂಡಿದೆ.

ಪವಾಡ-೨

ರೈಲು ಸುಬ್ರಹ್ಮಣ್ಯಕ್ಕೆ: ಇದಕ್ಕೂ ಮುನ್ನ, ರೈಲ್ವೇ ಅಧಿಕಾರಿಗಳು ನಮ್ಮ ಗುರುಗಳನ್ನು ಸ್ಮರಿಸಿ, ದುರಂತದಿಂದ ಪಾರಾದ ರೈಲನ್ನು ತೀರ್ಥಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸಮೀಪದಲ್ಲಿರುವ ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ತರಲಾಯಿತು. ಅಲ್ಲಿಂದ ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್‌ಗಳ ಮೂಲಕ ಅವರು ತಲುಪಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು.

ಪವಾಡ-೩

ಇದೇ ವೇಳೆಗೆ, ಅತ್ತ ಬೆಂಗಳೂರಿನಿಂದ ಕಣ್ಣೂರು, ಕಾರವಾರಕ್ಕೆ ಹೋಗುವ ರೈಲು ಹೊರಟು ಬಂದುಬಿಟ್ಟಿತ್ತು. ನಮ್ಮ ಸಂಸ್ಥಾನದವರ ಬುಸ್ಸಪ್ಪನನ್ನು ಸ್ಮರಿಸಿದ ಅಧಿಕಾರಿಗಳು, ಇನ್ನೇನು ಬಂಡೆ ಉರುಳಿದ್ದ ಅದೇ ಹಳಿಯ ಅದೇ ಜಾಗದಲ್ಲಿ ಪಾಸಾಗುತ್ತಿದ್ದ ಅದನ್ನು ಘಾಟಿಯ ಮೇಲ್ಭಾಗದಲ್ಲಿರುವ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಲ್ಲಿಸಿಬಿಟ್ಟರು!

ಪವಾಡ-೪

ನಮ್ಮ ಸ್ವಾಮಿಗಳ ದಯದಿಂದ ಬೆಂಗಳೂರು ರೈಲಿನಲ್ಲಿದ್ದವರ ಕೂದಲೂ ಸಹ ಕೊಂಕಲಿಲ್ಲ ಮೇಲಾಗಿ ರೈಲಿನಲ್ಲಿ ಬಂದ ಬಹುತೇಕ ಪ್ರಯಾಣಿಕರಿಗೆ ಸಕಲೇಶಪುರ ರೈಲು ನಿಲ್ದಾಣದಲ್ಲಿಯೇ ನಿಂತುಕೊಂಡಿದ್ದು ಬೆಳಗಾಗುವ ವರೆಗೂ ಗೊತ್ತಾಗಿರಲಿಲ್ಲ. ಘಟನೆಯ ವಿವರ ತಿಳಿದ ನಂತರ ತಮ್ಮೂರಿಗೆ ಹೋಗುವುದು ಹೇಗೆ ಎಂದು ಪರದಾಡಿದರು. ನಮ್ಮ ಸಂಸ್ಥಾನದ ಪ್ರೇರಣೆಯಂತೆ ರೈಲ್ವೆ ಇಲಾಖೆ ಅಧಿಕಾರಿಗಳು ಪ್ರಯಾಣಿಕರಿಗೆ ಸಮಾಧಾನ ಹೇಳಿ ಬಸ್‌ ವ್ಯವಸ್ಥೆ ಮಾಡಿ ಕಳುಹಿಸಿದರು. ಒಟ್ಟು 40 ಬಸ್‌ ವ್ಯವಸ್ಥೆ ಮಾಡಿ ಮಂಗಳೂರು ಸೇರಿದಂತೆ ಪ್ರಯಾಣಿಕರು ಹೋಗಬೇಕಾದ ಸ್ಥಳಗಳಿಗೆ ಕಳುಹಿಸಲಾಯಿತು. ಬಸ್‌ ವ್ಯವಸ್ಥೆ ಮಾಡಿದ ನಂತರ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಪವಾಡ-೫

ರೈಲು ಸಂಚಾರ: ಶ್ರೀ ಸಂಸ್ಥಾನದ ದಯೆಯಿಂದ, ಗುಡ್ಡ ಕುಸಿದು ಹಳಿ ಮೇಲೆ ಬಿದ್ದಿದ್ದ ಬಂಡೆಗೆ ರೈಲು ಡಿಕ್ಕಿ ಹೊಡೆದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ರೈಲ್ವೆ ಸಿಬ್ಬಂದಿ, ಹಳಿಗಳ ಮೇಲೆ ಬಿದ್ದಿದ್ದ ಬಂಡೆ ಹಾಗೂ ಮಣ್ಣನ್ನು ತೆರವುಗೊಳಿಸಿದರು. ಸೋಮವಾರ ಹಗಲು ಸಂಚರಿಸಬೇಕಿದ್ದ ರೈಲುಗಳನ್ನು ರದ್ದುಗೊಳಿಸಲಾಯಿತು. ರಾತ್ರಿಯಿಂದ ರೈಲು ಸಂಚಾರ ಎಂದಿನಂತೆ ಆರಂಭಗೊಂಡಿತು.

ಪವಾಡ-೬

ಕೇರಳ ಮೂಲಕ ಬೆಂಗಳೂರಿಗೆ ಸಂಚರಿಸಿದ ರೈಲು: ಪ್ರಯಾಣಿಕರು ಇರಲಿ ಇಲ್ಲದಿರಲಿ ರೈಲು ಗಮ್ಯ ಸ್ಥಾನಕ್ಕೆ ತಲುಪಲೇ ಬೇಕಲ್ಲ? ನಮ್ಮ ಶ್ರೀಸಂಸ್ಥಾನದ ಅಪೇಕ್ಷೆಯಂತೆ, ಬಂಡೆಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಎಂಜಿನ್‌ನ್ನು ಬಿಟ್ಟು ಮರಳಿ ಮಂಗಳೂರಿಗೆ ಬಂದ ರೈಲು ಬೆಳಗ್ಗೆ 9ಗಂಟೆಗೆ ಕೇರಳ- ತಮಿಳುನಾಡು ಮೂಲಕ ಬೆಂಗಳೂರಿಗೆ ತೆರಳಿತು.

ಈ ಎಲ್ಲಾ ಸಂದರ್ಭದಲ್ಲಿ ನಮ್ಮ ಸಂಸ್ಥಾನದ ಮಂತ್ರಾಕ್ಷತೆ ಸಹ ಜೊತೆಗೆ ಇರಲಿಲ್ಲ; ಮಂತ್ರಾಕ್ಷತೆ ಇರದಿದ್ದರೂ ಸಂಸ್ಥಾನದವರ ಬುಸ್ಸಪ್ಪನನ್ನು ನೆನೆಸಿದ್ದಕ್ಕೆ ಇಷ್ಟೆಲ್ಲ ಪವಾಡಗಳು ಸಂಭವಿಸಿವೆ. ಹಾಗಾಗಿ ಪವಾಡಶಕ್ತಿಯುಳ್ಳ ಬುಸ್ಸಪ್ಪನನ್ನು ’ಮಹಿಳಾ ಸಬಲೀಕರಣ’ಕ್ಕೆ ಬಳಸುವುದು ಬಹಳ ಉಚಿತವಾಗಿದೆ ಎಂದು ನಮ್ಮ ಮಠದ ಏಕಮುಖ ಸರ್ವಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

Thumari Ramachandra

source: https://www.facebook.com/groups/1499395003680065/permalink/1629393794013518/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s