ಮನ್ಮಥ ಚಾತುರ್ಮಾಸ

ಮನ್ಮಥ ಚಾತುರ್ಮಾಸ

“ಚಾತುರ್ಮಾಸದ ಬಗ್ಗೆ ಈಗಲೇ ಸಾಕಷ್ಟು ಹೇಳಿದ್ದೇವಲ್ಲ ಬಿಡಿ. ಹೆಸರೇ ಹೇಳುವಂತೆ ಇದು ಮನ್ಮಥ ಸಂವತ್ಸರ. ಮನ್ಮಥ ಸಂವತ್ಸರದಲ್ಲಿಯೂ ನಮ್ಮ ಮನ್ಮಥ ಲೀಲೆಗಳಿಗೆ ಇಲ್ಲಿಯವರೆಗೇನೂ ಕೊರತೆಯಿರಲಿಲ್ಲ. ಹೊಸ ಹೊಸ ’ಸೂರ್ಯ-ಚಂದ್ರ’ರನ್ನು ಹಿಡಿಯಲಾಗದಿದ್ದರೂ..ಓ..ಸಾರಿ..ಸಾರಿ ದರ್ಶನ ಮಾಡಲಾಗದಿದ್ದರೂ, ಇರುವ ಮದ್ದಲೆಗಳನ್ನೇ ಚೆನ್ನಾಗಿ ನುಡಿಸಿದ್ದೇವೆ ನಾವು.

ಮನ್ಮಥ ಎಂಬವನ ಕೆಲಸ ಹೆಣ್ಣು-ಗಂಡುಗಳಲ್ಲಿ ಮೋಹವನ್ನು ಕೆರಳಿಸುವುದಂತೆ. ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲ ಎಂಬ ಪಂಚಬಾಣಗಳು [ಸಮ್ಮೋಹನ, ಸಂತಾಪನ, ಸಂದೀಪನ, ಸಂಶೋಷಣ, ದ್ರಾವಣ ಎಂದೂ ಅಥವಾ ಮನೋಮಥನ, ಮದನ, ಮೋಹನ, ಸಂತಾಪನ, ವಶೀಕರಣ ಎಂದೂ ಅವುಗಳ ಕ್ರಿಯಾ ರೂಪದ ಅರ್ಥವನ್ನು ವಿಶ್ಲೇಷಿಸುತ್ತಾರೆ]

ಮನ್ಮಥನ ಬಾಣ ಪ್ರಯೋಗದಿಂದ ಈ ಹಿಂದೆ ಏನೇನೆಲ್ಲ ನಡೆದಿದೆ ಎಂಬುದು ನಿಮಗೆಲ್ಲ ತಿಳಿದಿರಬಹುದು. ಶಿವ-ಪಾರ್ವತಿಯರ ನಡುವೆ ಮೋಹ ಕುದುರಿಸಿದ್ದು, ವಿಶ್ವಾಮಿತ್ರ-ಮೇನಕೆಯರ ನಡುವೆ ಮೋಹ ಕುದುರಿಸಿದ್ದು ಮೊದಲಾದ ಹಲವು ಮೋಹದ ಕಥೆಗಳ ಹಿಂದೆ ಮನ್ಮಥನ ಕೈವಾಡವಿದೆ ಎಂದು ಕೇಳಿದ್ದೇವಷ್ಟೇ? ಅಂತದ್ದೇ ಇನ್ನೊಂದು ಕತೆ ಪರಾಶರರದ್ದು.

ಪರಾಶರ ಮುನಿಗಳು ತೀರ್ಥಯಾತ್ರೆಗೆ ಹೊರಟವರು ಯಮುನಾ ನದಿಯನ್ನು ದಾಟುವವರಿದ್ದರು. ಯಮುನೆಯ ಆ ಭಾಗದಲ್ಲಿ ಬೆಸ್ತರ ನಾಯಕ ದಾಶರಾಜ ದೋಣಿ ನಡೆಸಬೇಕಾಗಿದ್ದವನು ಊಟ ಮಾಡುತ್ತಿದ್ದ. ತಡ ಮಾಡಿದರೆ ಮುನಿಗಳು ಮುನಿದು ಶಾಪ ಕೊಟ್ಟುಬಿಡುದೇನೋ ಎಂಬ ಅಂಜಿಕೆಯಿಂದ ಆಗತಾನೇ ಯೌವ್ವನಕ್ಕೆ ಕಾಲಿಟ್ಟಿದ್ದ ಮಗಳು ಮತ್ಸ್ಯಗಂಧಿಯನ್ನು ದೋಣಿ ನಡೆಸಲು ಕಳಿಸಿಕೊಟ್ಟ.

ಕೃಷ್ಣ ಸುಂದರಿಯಾದ ಮತ್ಸ್ಯಗಂಧಿಯ ಸುಪುಷ್ಟ ಅಂಗಸೌಸ್ಟವಗಳನ್ನು ಪರಾಶರರು ನೋಡುವಂತೆ ಮಾಡಿದ್ದು ಮರೆಯಲ್ಲಿನ ಮನ್ಮಥ. ಮನ್ಮಥನ ಬಾಣ ಅವರಲ್ಲಿ ಬಯಕೆಯನ್ನು ಕೆರಳಿಸಿತು. ಆಕೆ ಯೋಜನಗಂಧಿ ಬೇರೆ, ಆ ಗಂಧ ಯೋಜನಗಳಷ್ಟು ದೂರ ಹೋಗುವ ಗಂಧ ಎಂದರ್ಥ. ಸಾಮಾನ್ಯವಾಗಿ ಮಹಿಳೆಯರ ಗಂಧವನ್ನು ಹೀರುವ ’ವಾಸು’ಗಳಿಗೆ ಮಾತ್ರ ಅಂತಹ ಗಂಧದ ಪರಿಣಾಮ ಗೊತ್ತಿರುತ್ತದೆ. ಪರಾಶರರಿಗೆ ಮಾತ್ರ ಇಲ್ಲಿ ’ವಾಸು’ ಎಂಬುದು ಅಪ್ಲೈ ಆಗುವುದಿಲ್ಲ.

ಪರಾಶರ ಮುನಿಗಳಿಗೆ ಮತ್ಸ್ಯಗಂಧಿಯಲ್ಲಿ ಮೋಹ ಹುಟ್ಟಿತು. ಮತ್ಸ್ಯಗಂಧಿಗೆ ಪರಾಶರರ ಕಣ್ಣೋಟದಲ್ಲಿ ಹೊಸಜಗತ್ತೇ ಕಂಡಿತು. ಮುಂದಿನ ಪರಿಣಾಮದ ಬಗೆಗೆ ಯೋಚಿಸುವ ಬುದ್ಧಿಮಟ್ಟ ಮತ್ಸ್ಯಗಂಧಿಯದಲ್ಲ; ಅವಳಿಗೆ ಆ ಕ್ಷಣಕ್ಕೆ ಜಗತ್ತೇ ಸುಂದರ. ಪರಾಶರರ ದೇಹ ಸಮೀಪಿಸಿದಷ್ಟೂ ಆಕೆಗೆ ಹಿತವೆನ್ನಿಸಿತು. ಎಳೆಯ ಯೋಜನಗಂಧಿಗೆ ನಡುವಯದ ಕಟ್ಟುಮಸ್ತಾದ ಮುನಿ ಪರಾಶರರ ಬಿಸಿಯಪ್ಪುಗೆ ಬಹಳ ಖುಷಿಕೊಟ್ಟಿತು.

ಪರಾಶರರು ಮುಂದಿನ ಪಾಠವನ್ನು ಪ್ರಾಕ್ಟಿಕಲ್ಸ್ ಮೂಲಕ ಹೇಳಿಕೊಟ್ಟರು; ಪರಿಣಾಮವಾಗಿ ಹುಟ್ಟಿದ ಕಪ್ಪು ಮಗುವೇ ಕೃಷ್ಣ ದ್ವೈಪಾಯನ. ೨ ಮಿನಿಟ್ಸ್ ಮ್ಯಾಗಿಯ ಹಾಗೆ ಅದೆಷ್ಟು ಬೇಗ ಮಗುಹುಟ್ಟಿತು ಎಂಬುದು ಇಲ್ಲಿ ಪ್ರಶ್ನಾತೀತ; ಅದೊಂದು ಬೃಹತ್ ಸಂಕಲ್ಪ. ತಡವಾಗಿ ಎಚ್ಚರಗೊಂಡ ಮತ್ಸ್ಯಗಂಧಿ ತನ್ನ ಕನ್ಯತ್ವ ಲುಪ್ತವಾಗದಂತೆ ವರವನ್ನು ಬೇಡಿದಳು. ದೀರ್ಘಕಾಲದ ಯೌವ್ವನವನ್ನೂ, ಕನ್ಯತ್ವವನ್ನೂ, ದೇಹದ ನಾತದ ಬದಲಿಗೆ ಯೋಜನಗಳವರೆಗೆ ದಿವ್ಯ ಪರಿಮಳ ಸೂಸುವ ವರವನ್ನೂ ಕರುಣಿಸಿ, ಉಡುಗೆ ತೊಡುಗೆ, ದಿವ್ಯಾಭರಣಗಳನ್ನೂ ತನ್ನ ತಪೋಮಹಿಮೆಯಿಂದ ಒದಗಿಸಿಕೊಟ್ಟರು ಋಷಿ ಪರಾಶರ.

ಅಂದಿನಿಂದ “ಮತ್ಸ್ಯಗಂಧಿ” “ಯೋಜನಗಂಧಿ” ಎಂದು ಕರೆಯಲ್ಪಟ್ಟಳು. ಹುಟ್ಟಿದ ಮಗು ಅವಳಿಗೆ ಬೇಕಾಗಿರಲಿಲ್ಲ. ಏನು ಮಾಡಬೇಕು? ಹಾದಿಯಲ್ಲೇ ಎಸೆದು ಮುಂದೆ ಸಾಗಬೇಕೇ? ಛೆ, ಪರಾಶರರು ಅಂತವರಾಗಿರಲಿಲ್ಲ. ತನ್ನ ತಪಃಶಕ್ತಿಯನ್ನು ವ್ಯಯಿಸಿ ಮಗುವನ್ನು ದೊಡ್ಡವನನ್ನಾಗಿ ಮಾಡಿ, “ಕೃಷ್ಣದ್ವೈಪಾಯನ” ಎಂಬುದಾಗಿ ಹೆಸರಿಸಿ, ತನ್ನ ಜೊತೆಗೇ ಕರೆದುಕೊಂಡು ಹೊರಟು ಹೋದರು. ಯೋಜನಗಂಧಿಗೆ “ಯಾವುದೇ ಕಷ್ಟ ಬಂದಾಗ ನೆನದ ಮಾತ್ರಕ್ಕೆ ಬಂದೊದಗುವೆ” ಎಂಬ ಭರವಸೆಯೊಂದಿಗೆ ಕೃಷ್ಣದ್ವೈಪಾಯನ ಅಪ್ಪನೊಂದಿಗೆ ಹೊರಟು ಹೋದ. ಮುಂದೆ ಆ ಮಗುವೇ ಪ್ರಕೃತದ ವೇದವ್ಯಾಸನೆನಿಸಿದ.

ಕಷ್ಟ ಬಂದಾಗ ಕರೆಮಾಡಲು ಅಂದು ಮೊಬೈಲ್ ಇರಲಿಲ್ಲ. ವಾಟ್ಸಾಪ್, ಐಪ್ಯಾಡ್, ಐಫೋನ್ ಇರಲಿಲ್ಲ. ಅಂದು ಅವರಲ್ಲೆಲ್ಲ ವಿಶಿಷ್ಟ ಶಕ್ತಿಯಿರುತ್ತಿತ್ತು; ಅದರಿಂದ ಅವರೆಲ್ಲ ದೂರದಲ್ಲಿರುವವರೊಡನೆ ತಮ್ಮ ಸ್ಥಿತಿಗತಿಯನ್ನು ಹೇಳಿಕೊಳ್ಳಬಹುದಾಗಿತ್ತು.

ನಾವೂ ವೀರ್ಯ ಸನ್ಯಾಸಿಯೇ ಆಗಿರುವುದರಿಂದ ಮತ್ಸ್ಯಗಂಧಿಯರನ್ನು ಹುಡುಕಿ ಅವರನ್ನೆಲ್ಲ ಯೋಜನಗಂಧಿಯರನ್ನಾಗಿ ಮಾಡಲು ಇಚ್ಛಿಸಿದೆವು. ಹರೆಯದ ಕೆಲವು ಕನ್ಯೆಯರಿಗೆ ಅಂತಹ ಅವಕಾಶ ಮಾಡಿಕೊಟ್ಟು ಪರಿವಾರದ ಗಿಂಡಿಗಳಿಗೆ ಮದುವೆ ಮಾಡಿಸಿದೆವು. “ದೇವರಾದ ನಮ್ಮ ದಿವ್ಯ ಸಂಕಲ್ಪ ನಿನಗೆ ದೈವತ್ವವನ್ನು ಕೊಡುತ್ತದೆ” ಎಂದು ಭೋಂಗು ಬಿಟ್ಟೆವು. ನಮ್ಮ ಸಮ್ಮಿಲನದ ಸವಿನೆನನಪಿಗಾಗಿ ನಮಗಿಂದು ಹಲವು ಮಕ್ಕಳಿದ್ದಾವೆ.

ಮುಖ್ಯ ವಿಷಯ ಅದಲ್ಲ. ವಿಚಾರಣೆ ನಡೆಸುವವರು ಅವುಗಳ ಡಿ.ಎನ್.ಎ ಟೆಸ್ಟ್ ಮಾಡಿಸಬೇಕು ಎಂದು ಹಠಮಾಡಿಬಿಟ್ಟರೆ ಎಂಬ ಸಂದೇಹ ನಮ್ಮ ಮನದಲ್ಲಿ ಸದಾ ಕಾಡುತ್ತಿದೆ. ಕೂದಲು ಸಿಗುವುದಕ್ಕೆ ಕತೆ ಕಟ್ಟಿದ್ದೇವೆ ಬಿಡಿ, ಆದರೆ ಇದಕ್ಕೆ ಯಾವ ಕತೆ ಹೊಸೆಯುವುದು ಎಂದು ನಮ್ಮ ಸುರಕ್ಷಾ ಸಮಿತಿಯವರು ತಲೆಕೆಳಗಾಗಿ ತಪಸ್ಸಿಗೆ ನಿಂತಿದ್ದಾರೆ.

ಅದಿರಲಿ, ಮುಂದೆ ಹಸ್ತಿನಾವತಿಯ ಅರಸ ಶಂತನು ಸತ್ಯವತಿಯನ್ನು ಬಯಸಿ ಬಂದ. ಸುಂದರಿ ಸೆಕೆಂಡ್ ಹ್ಯಾಂಡ್ ಆದರೇನು ಫಸ್ಟ್ ಹ್ಯಾಂಡ್ ಆದರೇನು? ನಮ್ಮಲೆಕ್ಕದಲ್ಲಿ ಸುಂದರಿಯರು ಎಷ್ಟನೇ ಹ್ಯಾಂಡ್ ಆದರೂ ತೊಂದರೆಯಿಲ್ಲ, ನಮ್ಮ ಕೆಲಸಕ್ಕೆ ಅನುಕೂಲ ಇದ್ದರೆ ಸಾಕು. [ಅದಕ್ಕೇ ನಾವು ನಮ್ಮ ಕನ್ಯೆಯರಲ್ಲಿ “ಸನ್ಯಾಸಿಯಾದ ನಮ್ಮ ಆಸೆಯನ್ನು ಪೂರೈಸಿದ ನೀವೇನೂ ಚಿಂತಿಸುವ ಅಗತ್ಯವಿಲ್ಲ, ನಾಮಕೇ ವಾಸ್ಥೆಗೆ ನಿಮಗೆ ಗಂಡನೊಬ್ಬ ಬರಲಿದ್ದಾನೆ, ಮಿಕ್ಕಿದ್ದನ್ನೆಲ್ಲ ನಾವೇ ನೋಡಿಕೊಳ್ಳುತ್ತೇವೆ.”ಎಂದು ಹೇಳುತ್ತೇವೆ]

ಹೋಗಿಸೇರುವ ಮನೆಯಲ್ಲಿ ಮಗಳ ಸ್ಥಾನ-ಮಾನ ಎಂಥದ್ದು ಎಂಬುದರ ಬಗ್ಗೆ ಚಿಂತಿಸಿದ ದಾಶರಾಜ, “ನನ್ನ ಮಗಳಲ್ಲಿ ಹುಟ್ಟುವ ಸಂತಾನಕ್ಕೆ ರಾಜಪಟ್ಟ ನೀಡುವುದಾದರೆ ಮಾತ್ರ ನನ್ನ ಮಗಳನ್ನು ನಿನಗೆ ಕೊಡಬಲ್ಲೆ” ಎಂದು ಶಂತನುವಿಗೆ ಸವಾಲು ಎಸೆದುಬಿಟ್ಟ. ಮಗ ಗಾಂಗೇಯನಿರುವಾಗ ಮುಂದೆ ಹುಟ್ಟುವ ಮಗುವಿಗೆ ಹೇಗೆ ಪಟ್ಟಾಧಿಕಾರವನ್ನು ನೀಡಲಿ ಎಂದು ಶಂತನು ಯೋಚಿಸಿದ.

ಒಂದೆಡೆ ಮಗ, ಇನ್ನೊಂದೆಡೆ ಮನವನ್ನು ಮೋಹಿಸಿದ ಯೋಜನಗಂಧಿ. ಮನದ ತಿಕ್ಕಾಟದಲ್ಲಿ ಬಳಲಿದ ಶಂತನು ಜ್ವರಕ್ಕೆ ಬಿದ್ದ. ಊಟ ಬೇಡ, ತಿಂಡಿ ಬೇಡ. ನಾವೂ ಕೆಲವು ಸಲ ಹೀಗೇ ಅದೇ ಸ್ಥಿತಿಯನ್ನು ಅನುಭವಿಸಿದ್ದುಂಟು. ಕಾರಿನ ಬಾಗಿಲವರೆಗೂ ಬಂದು ನಗುಮೊಗದಲ್ಲಿ ಬೀಳ್ಕೊಟ್ಟ ಸ್ನಿಗ್ಧ ಸುಂದರಿಯರ ನೆನಪಿನಲ್ಲಿ ನಮಗೆ ಸ್ನಾನ ಬೇಡ, ಪೂಜೆ ಬೇಡ, ಭಿಕ್ಷವೂ ಬೇಡ, ಸದಾ ಅವರದ್ದೇ ಧ್ಯಾನ. ಅವರಲ್ಲಿನ ’ಸೂರ್ಯ-ಚಂದ್ರ’ರನ್ನು ಕಾಣುವ ತವಕ.

ಶಂತನು ಪುತ್ರ ದೇವವ್ರತ, ಹಸ್ತಿನಾವತಿಯ ರಾಜಸಿಂಹಾಸನವನ್ನು ತಾನು ಏರಲಾರೆನೆಂದೂ, ಅದು ನಿಮ್ಮ ಮಗಳ ಸಂತಾನಕ್ಕೇ ಮೀಸಲೆಂದೂ, ಮುಂದೆ ತನ್ನ ಮಡದಿಯಾಗುವವಳು ಪರಿಸ್ಥಿತಿ ಬದಲಾಯಿಸಿಯಾಳು ಎಂಬ ನಿಮ್ಮ ಆತಂಕ ನಿವಾರಣೆಗಾಗಿ ತಾನು ಆಜನ್ಮ ಬ್ರಹ್ಮಚಾರಿಯಾಗಿಯೇ ಉಳಿವೆನೆಂದೂ, ಪ್ರಪಂಚದ ಎಲ್ಲ ಸ್ತ್ರೀಯರು ತನಗೆ ತಾಯಿಯ ಸಮಾನವೆಂದೂ ವಾಗ್ದಾನ ಮಾಡಿದ; ಅದೇ ಭೀಷ್ಮಪ್ರತಿಜ್ಞೆ ಎನಿಸಿತು.

ತಂದೆಯ ಚಾಪಲ್ಯಕ್ಕೆ ತನ್ನ ಸಾಂಸಾರಿಕ ಜೀವನವನ್ನೇ ತ್ಯಜಿಸಿದ ಆ ಮಗ ಅದೆಷ್ಟು ಉದಾರಿಯಾಗಿರಬೇಡ? ಅಪ್ಪನ ವಿರಹ ವೇದನೆಯನ್ನು ಅರಿತು ಸಹಕರಿಸುವ ಮಕ್ಕಳೂ ಈ ಲೋಕದಲ್ಲಿ ಇದ್ದರೆಂಬುದಕ್ಕೆ ಭೀಷ್ಮನೇ ಸಾಕ್ಷಿ. ಅಷ್ಟೇ ಅಲ್ಲ ಗುರುವಿನ ವಿರಹ ವೇದನೆಯನ್ನು ತೆರವು ಮಾಡುವುದಕ್ಕೆ ತರತರವಾದ ರೀತಿಯಲ್ಲಿ ನಮಗೆ ಬೇಕಾದಂತೆಯೇ ನಡೆದುಕೊಳ್ಳುವ ನಮ್ಮ ಗಿಂಡಿಗಳಂತವರೂ ಈ ಲೋಕದಲ್ಲಿದ್ದಾರೆ.

ಬರಬಿದ್ದು ಎಲ್ಲೆಲ್ಲೂ ಎಂತೆಂತಹ ಸೂಪರ್ ಕ್ವಾಲಿಫೈಡ್ ಹುಡುಗರಿಗೆ ಹೆಣ್ಣು ಸಿಗದ ಈ ಕಾಲದಲ್ಲಿ ಏಳನೇ ಕ್ಲಾಸನ್ನೂ ಮುಗಿಸದ ಗಿಂಡಿಗಳಿಗೆ ಸುಂದರ ಹುಡುಗಿಯೊಂದಿಗೆ ಮದುವೆಯಾಗುತ್ತದೆ ಎಂದರೆ ಅದು ’ಗುರುಕೃಪೆ’ಯಲ್ಲವೇ? ಅದಕ್ಕೇ ಹೇಳೋದು-’ಹರಮುನಿದರೂ ಗುರು ಕಾಯುತ್ತಾನೆ’ಎಂದು. [ಯಾರೂ ಎತ್ತಿಕೊಂಡು ಹೋಗದಂತೆ ಈಗ ನಮ್ಮನ್ನೇ ಅವರು ಪಾಳಿಯಲ್ಲಿ ಕಾಯುತ್ತಿದ್ದಾರೆ ಎಂಬುದು ನಗಣ್ಯ]

ಮಹಾಸಮರ್ಥನಾಗಿದ್ದ ಭೀಷ್ಮನೇ ಹಸ್ತಿನಾವತಿಯನ್ನು ಆಳಿದ್ದರೆ ಮಹಾಭಾರತದ ಕಥೆಯ ದಿಕ್ಕೇ ಬದಲಾಗಿಬಿಡುತ್ತಿತ್ತು. ಸೃಷ್ಟಿಯ ನಿರ್ಧಾರ ಬೇರೆ ಇರುತ್ತದಲ್ಲ? ಶಂತನು-ಸತ್ಯವತಿ ಉರುಫ್ ಯೋಜನಗಂಧಿ ಸಂಧಿಸಿ ಚಿತ್ರವೀರ್ಯ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳು ಜನಿಸಿದರು. ಇಬ್ಬರ ಹೆಸರಲ್ಲೂ ವೀರ್ಯವಿತ್ತಾದರೂ ಅವರ ವೀರ್ಯ ಸಂತಾನಾನುಗ್ರಹ ನೀಡುವಷ್ಟು ಸಬಲವಾಗಿರಲಿಲ್ಲ. ಅಂದು ನಾವು ಅಲ್ಲಿರಲಿಲ್ಲ. ಹೀಗಾಗಿ ವೇದವ್ಯಾಸರನ್ನು ಕರೆದರು. ನಾವು ಅಲ್ಲಿದ್ದರೆ ’ನಿಯೋಗ’ ಮುಗಿದಮೇಲೆ ಇಡೀ ಹಸ್ತಿನಾವತಿಯನ್ನೇ ಡೀನೋಟಿಫೈ ಮಾಡಿಸಿಬಿಡುತ್ತಿದ್ದೆವು.

ಚಾತುರ್ಮಾಸದ ಪರ್ವಕಾಲದಲ್ಲಿ ಇಂತಹ ಪುಣ್ಯ ಕತೆಗಳನ್ನು ನೀವೆಲ್ಲ ಕೇಳುತ್ತಿರಬೇಕು. ಅದೇ ವೀರ್ಯಸನ್ಯಾಸದ ನಿರೀಕ್ಷೆ. ಹಾವಾಡಿಗ ಮಹಾಸಂಸ್ಥಾನದಲ್ಲಿ ಹಾವಾಡಿಗರ ಸಂಖ್ಯೆ ಹೆಚ್ಚಿದಷ್ಟೂ ನಮಗೆ ಖುಷಿ; ಹಂಚಿತಿನ್ನುವ ಸುಖ ಇನ್ನೇತರಲ್ಲಿ ಸಿಗಲು ಸಾಧ್ಯ, ಅಲ್ಲವೇ?

Thumari Ramachandra

source: https://www.facebook.com/groups/1499395003680065/permalink/1628062217480009/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s