ನಿಂಗಿ..ನಿಂಗಿ…ನಿಂಗಿ,,ನಿಂಗಿ……….ನಿದ್ದಿ …ಕದ್ದೀಯಲ್ಲೆ ..ನಿಂಗಿ

ನಿಂಗಿ..ನಿಂಗಿ…ನಿಂಗಿ,,ನಿಂಗಿ……….ನಿದ್ದಿ …ಕದ್ದೀಯಲ್ಲೆ ..ನಿಂಗಿ

“ಒಂದು ಬಲಿಷ್ಠ ವ್ಯವಸ್ಥೆಯಲ್ಲಿ ಬೇರು ಬಿಟ್ಟು ಕುಳಿತುಬಿಟ್ಟರೆ ಆಮೇಲೆ ಬೇರು ಕೀಳುವುದು ಸುಲಭವಲ್ಲ. ಕಂಪ್ಯೂಟರಿಗೆ ರ್‌ಯಾನ್ ಸಮ್ ವೇರ್ [Ransom ware] ಎಂಬ ರೀತಿಯ ವೈರಸ್ ಬಂದ ಹಾಗೆ; ಬಂದಿದ್ದು ಗೋತ್ತಾಗಲ್ಲ, ಹಾಳಾಗೋದನ್ನು ತಪ್ಪಿಸೋದು ಅತಿ ಕಷ್ಟ. ಇರುವ ಫೈಲ್ ಫಾರ್ಮ್ಯಾಟ್ ಗಳನ್ನೆಲ್ಲ ಬದಲಾಯಿಸಿ ಎಸೆದುಬಿಟ್ಟರೆ ವ್ಯವಸ್ಥೆ ಹೀಗೇಯೇ ಎಂಬ ಭಾವನೆ ಹೊಸದಾಗಿ ಬಳಸುವವರಲ್ಲಿ ಬರಬೇಕು.

ಸ್ವಾತಂತ್ರ್ಯಾ ನಂತರವೂ ಸುಭಾಶ್ಚಂದ್ರ ಬೋಸ್ ಬದುಕಿದ್ದರು; ಆದರೆ ಅದು ಅಧಿಕಾರದಲ್ಲಿರುವ ಮತ್ತು ರಾಜಕೀಯದಲ್ಲಿರುವ ಸೀಮಿತ ಜನರಿಗೆ ಮಾತ್ರ ಗೊತ್ತಿತ್ತು. ಗಾಂಧೀಜಿಯನ್ನು ದೇಶದ ಪಿತಾಮಹ ಎಂದು ಕರೆದು ಸ್ವಾತಂತ್ರ್ಯ ಬರೋದಕ್ಕೆ ಅವರ ಸಾತ್ವಿಕ ಚಳುವಳಿಯೇ ಕಾರಣ ಎಂದು ಬಿಂಬಿಸಲಾಗಿತ್ತು.

ಜೀವಂತವಿದ್ದ ಬೋಸ್ ಗಾಂಧೀಜಿಗೆ ಸಲ್ಲುತ್ತಿದ ಗೌರವ, ಮರ್ಯಾದೆಗಳನ್ನು ಕಿತ್ತುಕೊಳ್ಳಲು ಇಷ್ಟಪಡಲಿಲ್ಲ. ತಾನು “ಗುಮ್ನಾಮಿ ಬಾಬಾ” ಎಂಬ ಹೆಸರಿನಲ್ಲಿ ಫೈಜಾಬಾದ್‍ನಲ್ಲಿ ಸಂತನಂತೆ ವಾಸವಿದ್ದು ತನ್ನ ಉಳಿದ ಜೀವಿತವನ್ನು ಕಳೆದರು.

ಬ್ರಿಟಿಷರು ದೇಶ ಬಿಟ್ಟು ಹೋಗಿದ್ದು ಬೋಸ್ ಅವರ ಸಿಂಹಘರ್ಜನೆಗೆ. ವಿದೇಶೀ ನೆಲದಲ್ಲಿ ಭಾರತೀಯ ಸೈನ್ಯವನ್ನು ಕಟ್ಟಿದ ಬೋಸ್ ಹಿಟ್ಲರ್ ಮತ್ತು ನೆಪೋಲಿಯನ್ ಮೊದಲಾದ ಸರ್ವಾಧಿಕಾರಿಗಳನ್ನು ಭೇಟಿಮಾಡಿದರು. ಭೇಟಿಮಾಡಿದ್ದು ಅವರೆಲ್ಲರ ಅನುಯಾಯಿಯಾಗಲಿಕ್ಕಲ್ಲ; ನಮ್ಮ ದೇಶದಿಂದ ಬ್ರಿಟಿಷರನ್ನು ಓಡಿಸಲಿಕ್ಕೆ ಸಹಾಯ ಮಾಡಿ ಎಂಬ ಕೋರಿಕೆಯನ್ನು ಮಂಡಿಸಲಿಕ್ಕಾಗಿ.

ಬೋಸ್ ಅವರ ಮಿಂಚಿನ ವೇಗದ ಕಾರ್ಯಕ್ಷಮತೆ ಮತ್ತು ಕಾರ್ಯದಕ್ಷತೆಗೆ ಹೆದರಿ ಬ್ರಿಟಿಷರು ಜಾಗ ಖಾಲಿ ಮಾಡಿದರು. ಹೀಗಂತ ಅನೇಕ ಸಂಶೋಧಕರು ನೂರಾರು ಪುಸ್ತಕಗಳನ್ನೇ ಬರೆದಿದ್ದಾರೆ. ಯುವ ಬರಹಗಾರ ಅನುಜ್ ಧರ್ ತಮ್ಮ ಪುಸ್ತಕದಲ್ಲಿ ಇಂತಹ ರಾಜಕೀಯದ ಮೇಲಾಟಗಳೆಲ್ಲವನ್ನೂ ನೇರವಾಗಿ ಹೇಳಿದ್ದಾರೆ.

ಇಂದು ಈ ವ್ಯವಸ್ಥೆಯಲ್ಲಿ ಬೋಸ್ ಮತ್ತು ಸರ್ದಾರ್ ಪಟೇಲರಿಗಿಂತ ಹೆಚ್ಚಾಗಿ ಗಾಂಧಿ ಮತ್ತು ನೆಹರೂ ನಮಗೆ ಮಹಾತ್ಮರೆಂದು ಹೇಳುತ್ತಾರೆ. ಬೋಸ್ ಮತ್ತು ಪಟೇಲರ ಸುದ್ದಿ ಬರುವುದೇ ಅಪರೂಪ. ಅರ್ಧ ಶತಮಾನದಿಂದ ನಾವು ಒಪ್ಪಿದ್ದು, ನಂಬಿಕೊಂಡು ಬಂದಿದ್ದು, ಪಠ್ಯದಲ್ಲಿ ಓದಿದ್ದು, ಕೇಳಿದ್ದು, ನಮ್ಮ ಮಕ್ಕಳಿಗೆ ಬೋಧಿಸಿದ್ದು, ರಾಷ್ಟ್ರೀಯ ಹಬ್ಬಗಳಲ್ಲಿ ಫೋಟೋ ಇಟ್ಟು ಪೂಜಿಸಿದ್ದು, ಹಾರ ಹಾಕಿ ನಮಿಸಿದ್ದು ಗಾಂಧಿ ಮತ್ತು ನೆಹರೂ ಈರ್ವರಿಗೇ ಎಂದರೆ ತಪ್ಪಲ್ಲ.

ಇಂದು ನಮ್ಮ ಸಮಾಜದಲ್ಲಿಯೂ ಸಹ ಹಾಗೇ ಆಗಿಬಿಟ್ಟಿದೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಸಮಾಜದಲ್ಲಿ ಬೇರೆ ಬೇರೆ ರೀತಿಯಲ್ಲಿ ಜನರಿಗೆ ದುರ್ಬೋಧನೆಗಳನ್ನೇ ನಡೆಸಿದೆವು. ಜನರಿಗೆ ಕಣ್ಣಿಗೆ ಕಾಣುವಂತೆ ನಾವು ಬಹಳ ಚೆನ್ನಾಗಿ ಪೋಸು ಕೊಟ್ಟೆವು, ಯಾವಾಗಲೂ ಏನಾದರೊಂದು ಸಮಾರಂಭ ನಡೆಸುತ್ತ ಜನರ ಮನಸ್ಸಿನಲ್ಲಿ ಅದ್ವಿತೀಯ ಸನ್ಯಾಸಿಯಾಗಲು ಪ್ರಯತ್ನಿಸಿದೆವು.

ವಾಹನ, ವಿದ್ಯುತ್ತು ತಲುಪದ ಕುಗ್ರಾಮದ ಮೂಲೆಯ ಮನೆಯಲ್ಲೂ ಸಹ, ಪರಂಪರೆಯ ಮೂಲಪುರುಷನ ಭಾವಚಿತ್ರ ಇಡುವ ಬದಲು, ನಮ್ಮ ಭಾವಚಿತ್ರ ಇರುವಂತೆ ನೋಡಿಕೊಂಡೆವು. ಯಾರೋ ಪುಣ್ಯಾತ್ಮ ಇದನ್ನು ನೆನಪಿಸಿದರೂ ಮೊದಮೊದಲು ನಾವದನ್ನು ಒಪ್ಪಲೇ ಇಲ್ಲ. ಯಾಕೆಂದರೆ ಎಲ್ಲೆಲ್ಲೂ ಜನರಿಗೆ ನಮ್ಮ ಮುಖವೇ ಕಾಣಬೇಕು. ಉಂಗುರದಿಂದ ಅಂಬರದೆತ್ತರದ ಕಟೌಟಿನ ವರೆಗೆ ಎಲ್ಲದರಲ್ಲೂ ನಮ್ಮದೇ ಭಾವಚಿತ್ರ.

ಆರಂಭಿಕ ಹಂತದಲ್ಲಿ ನಮ್ಮ ಹೊಸ ಹೊಸ ಡೊಂಬರಾಟಗಳ ಅಂತಃಸತ್ವ ಏನೆಂಬುದು ಭಕ್ತರಿಗೆ ಅರ್ಥವಾಗಲಿಲ್ಲ. ನಾವು ಮಾಡಿದ್ದಕ್ಕೆಲ್ಲ ಜೈ ಎನ್ನ ಹತ್ತಿದರು. ಸಮಾಜದ ಉದ್ಧಾರಕ್ಕಾಗಿ ಇಪ್ಪತ್ತೈದು ಮೂವತ್ತು ಬೃಹತ್ ಯೋಜನೆಗಳನ್ನು ಹಾಕಿದ್ದೇವೆ ನೋಡಿ ಎಂದು ಆಗಲೇ ಭೋಂಗು ಬಿಟ್ಟೆವು. ಸಮಾಜದ ಸದ್ಗುಣಿಗಳು ವೇದಿಕೆಯಲ್ಲಿ, “ನೋಡಿ ನಮ್ಮ ಹಾವಾಡಿಗ ಸಂಸ್ಥಾನದ ಹಿರಿಮೆಯನ್ನು, ಇಂತಹ ಬುದ್ಧಿ, ದಕ್ಷತೆ, ಕಾರ್ಯದಕ್ಷತೆ, ಚಾಣಾಕ್ಷತನ ಇದನ್ನೆಲ್ಲ ಸಂಸ್ಥಾನ ಎಲ್ಲಿ ಕಲಿತರು? ಯಾವ ಎಂಬಿಎ ಆದವನಿಗೂ ಈ ಮಟ್ಟದ ವ್ಯಾವಹಾರಿಕ ಜ್ಞಾನ ಇರುವುದು ಕಷ್ಟ” ಎಂದು ನಮ್ಮನ್ನು ಹೊಗಳಿದ್ದೇ ಹೊಗಳಿದ್ದು.

ಅಲ್ಲಿಂದೀಚೆಗೆ ಬೋಳೆ ಭಕ್ತರು ನಮ್ಮನ್ನು ನೋಡುವ ರೀತಿಯೇ ಬದಲಾಗಿಬಿಟ್ಟಿತು. ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ತರಾವರಿ ಮೀಟಿಂಗುಗಳನ್ನು ಹಗಲೂ ರಾತ್ರಿ ಹಮ್ಮಿಕೊಳ್ಳುತ್ತೇವೆ ಎಂದಾಗ ಜನ ಖುಷಿ ಪಟ್ಟರು; ಪಾರಮಾರ್ಥಿಕ ವಿಷಯ ಎಕ್ಕುಟ್ಟೋಗಿ ಲೌಕಿಕ ವಿಷಯದಲ್ಲೇ ಭಕ್ತರೂ ಮೈಮರೆತರು.

ವಾಸ್ತವ ಏನೆಂದರೆ ಹಿಂದಿನವರು ಸ್ವಲ್ಪ ಬಿಗಿ ಇದ್ದರು, ಅವರಿಗೆ ಜನರ ಬಳಕೆ ಕಮ್ಮಿ ಇತ್ತು. ಅದೇ ವೀಕ್ ಪಾಯಿಂಟನ್ನು ನಾವು ಎನ್ ಕ್ಯಾಶ್ ಮಾಡಿಕೊಂಡೆವು. “ಗುರುಗಳ ಮುಖ ನೋಡೋ”, “ಸದಾ ಎಂತಾ ಮಂದಹಾಸ”, “ದಿವ್ಯ ತೇಜಸ್ಸು”, “ಮಹಾನ್ ತಪಸ್ವಿ”, ,”……ಅವತಾರ” ಎಂಬೆಲ್ಲ ಉದ್ಗಾರಗಳು ಜನರಲ್ಲಿ ಬಾಯಿಂದ ಬಾಯಿಗೆ ಹಬ್ಬಿದವು. ಭಕ್ತರ ಸಂಖ್ಯೆ ಹೆಚ್ಚಿತು.

ಮೊದಲು ಬರುತ್ತಿದ್ದ ಮಠದ ಹಳೆಯ ಭಕ್ತರಿಗೆ ನಮ್ಮ ಡೊಂಬರಾಟಗಳಲ್ಲಿ ಅನುಮಾನವಿತ್ತು; ಅವರಲ್ಲಿ ಎಷ್ಟೋ ಜನ ಬರುವುದನ್ನೇ ನಿಲ್ಲಿಸಿದರು; ಮುಪ್ಪಿನಲ್ಲಿದ್ದ ಕೆಲವರು ಟಿಕೆಟ್ ತೆಗೆದುಕೊಂಡಿದ್ದರಿಂದ ಹಿಂದಿನ ಸಂಪೂರ್ಣ ಕೊಂಡಿ ಕಳಚಿತು. ಬಂದ ಭಕ್ತರಲ್ಲಿ ಮಠದಲ್ಲೇನು ನಡೆಯಬೇಕೆಂಬುದು ಗೊತ್ತಿಲ್ಲದವರೇ ಜಾಸ್ತಿ. ಕಾಲ ನಮಗೆ ಬೇಕಾದಂತಿತ್ತು; ನಾಯಿ ಹಸಿದಿತ್ತು-ಅನ್ನ ಹಳಸಿತ್ತು.

ನಮ್ಮ ವಿವಿಧೋದ್ದೇಶ ಯೋಜನೆಗಳೆಲ್ಲದರ ಹಿಂದಿನ ದುರುದ್ದೇಶವೇ ಬೇರೆ ಇತ್ತು. ನಮಗೆ ಹೆಣ್ಣು, ಹಣದ ಚಟ ಆಗಲೇ ಮನದಲ್ಲಿತ್ತು. ಅದರೆ ಅದನ್ನು ಗೋಪ್ಯವಾಗಿ ಹಾಗೇ ಇರಿಸಿಕೊಂಡು ಮುಂದುವರಿದೆವು. ’ಸಮಾಜೋದ್ಧಾರಕ್ಕಾಗಿ ಭೂಮಿಗೆ ಬಂದ ಭಗವಂತ’ ಎಂದೇ ಜನ ಭಾವಿಸಿದರು; ನಾವು ಹೇಳಿದ್ದಕ್ಕೆ “ಇಲ್ಲ”, ’ಅಲ್ಲ” ಅಥವಾ “ಆಗುವುದಿಲ್ಲ” ಎಂಬ ನಕಾರಾತ್ಮಕ ಮಾತುಗಳೇ ಇರಲಿಲ್ಲ. ಏನೇ ಹೇಳಿದರೂ ಜೈ ಜೈ ಜೈ ಜೈ.

ಸಮಾಜದಲ್ಲಿ ರಾಜಕಾರಣಿಗಳಿಗೆ ನಮ್ಮ ಜನಬಲ ತೋರಿಸಲು ಒಂದೆರಡು ದೊಡ್ಡ ಸಮಾರಂಭ ಮಾಡಿದೆವು. ಕಂಡಲ್ಲಿಂದಲೆಲ್ಲಾ ಯಾವ್ಯಾವುದೋ ಕಾವಿಗಳು, ಖಾದಿಗಳು ಓಡೋಡಿ ಬಂದು ಹಾರಹಾಕಿ ಶುಭ ಕೋರಿದರು. ನಮ್ಮ ಪ್ರತಿಷ್ಠೆ ನೂರ್ಮಡಿಯಾಯಿತು. ಮಠಕ್ಕೆ ಕೋಟಿಗಟ್ಟಲೆ ಆದಾಯ ಬರತೊಡಗಿತು.

ಯಾವಾಗ ಹಣದ ಒಳಹರಿವು ನಿರೀಕ್ಷೆ ಮೀರಿ ಹೆಚ್ಚಿ ಅಣೆಕಟ್ಟು ತುಂಬಿ ಹರಿಯತೊಡಗಿತೋ, ಆ ಸಮಯದಲ್ಲಿ ನಾವು ಸುಂದರಿಯರಿಗೆಲ್ಲ ’ಬಾಗಿನ’ ಅರ್ಪಿಸಲು ಆರಂಭಿಸಿಬಿಟ್ಟೆವು. ಅಯ್ಯೋ ದೊಡ್ಡ ಪ್ರತಿಷ್ಠಿತ ವ್ಯಕ್ತಿ, ಅದರಲ್ಲೂ ಸಮಾಜದ ಗುರು ಎಂದುಕೊಳ್ಳುತ್ತ ನಮ್ಮ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಳ್ಳತೊಡಗಿದರು.

ನಮ್ಮೊಂದಿಗೆ ಖಾಸಗಿಯಾಗಿ ಮಾತನಾಡುತ್ತೇವೆ, ದೂರವಾಣಿಯಲ್ಲಿ ಮಾತನಾಡುತ್ತೇವೆ, ಪಕ್ಕದಲ್ಲೇ ಇರುತ್ತೇವೆ ಎಂದು ಸಮಾಜದ ಇತರರಿಗೆ ತೋರಿಸುವುದು ಕೆಲವು ಸುಂದರಿಯರ ಜಾಯಮಾನವಾಗಿಬಿಟ್ಟಿತು; ಅದು ಅವರಿಗೆ ಆ ಕ್ಷಣದಲ್ಲಿ ಅವರ ಪ್ರತಿಷ್ಠೆಯನ್ನು ಹೆಚ್ಚಿಸುವಂತೆ ಭಾಸವಾಗುತ್ತಿತ್ತು.

ಸುಂದರಿಯರಲ್ಲಿ ಒಬ್ಬರನ್ನು ನೋಡಿ ಇನ್ನೊಬ್ಬರು, ಇನ್ನೊಬ್ಬರನ್ನು ನೋಡಿ ಮತ್ತೊಬ್ಬರು, ಮತ್ತೊಬ್ಬರನ್ನು ನೋಡಿ ಮಗದೊಬ್ಬರು ಬರತೊಡಗಿದರು. ಆಗಲೇ ನಾವು ಕೆಲವರಿಗೆ ಬಿಸ್ಕೆಟ್ ಹಾಕಲು ಆರಂಭಿಸಿದೆವು. ಕಚ್ಚುವ ನಾಯಿಯೂ ಸಹ ಬಿಸ್ಕೆಟ್ ರುಚಿಗೆ ಬಾಯಿ ಮುಚ್ಚಿಕೊಂಡು ಸುಮ್ಮನೆ ಬಿದ್ದಿರುತ್ತದಲ್ಲ? ಅದರಂತೆ ಯಾರ್ಯಾರಿಗೆ ಏನೇನು ಕೊಟ್ಟರೆ ನಮಗೆ ಬೇಕಾದಂತೆ ಇರುತ್ತಾರೆ ಎಂಬುದನ್ನು ನಾವು ಕಲಿತದ್ದೇ ಆವಾಗ.

ಹಿಂದೆ ಭಕ್ತರ ಸಂಕಷ್ಟಗಳನ್ನು ಖಾಸಗಿಯಾಗಿ ಗೋಪ್ಯವಾಗಿ ತೋಡಿಕೊಳ್ಳಲು ಇದ್ದ ಖಾಸಗೀ ಭೇಟಿ ’ಏಕಾಂತ ದರ್ಶನ’ವಾಗಿ ರೂಪಾಂತರಗೊಂಡಿತು. ಕೈ ತೊಳೆದುಕೊಂಡು ಮುಟ್ಟಬೇಕು ಅಂತಾರಲ್ಲ ಅಂತಹ ಬೆಳ್ಳನೆಯ ಸುಂದರಿಯರು ಎದುರಿಗೆ ಅಷ್ಟು ಸನಿಹಕ್ಕೆ ಬಂದಾಗ ನಮಗೆ ಬೇಕಾದ್ದನ್ನೇ ನಾವು ನೋಡಿದೆವು, ಅದನ್ನೇ ಪರೋಕ್ಷವಾಗಿ ಪ್ರಸ್ತಾಪಿಸಿದೆವು.

ಆರಂಭಿಕ ಹಂತದ ’ಏಕಾಂತ ದರ್ಶನ’ಗಳು ಅಷ್ಟು ಬೇಗ ಎಲ್ಲೂ ಸುದ್ದಿ ಮಾಡಲಿಲ್ಲ ಯಾಕೆಂದರೆ ಸುಂದರಿಯರಿಗೂ ಹೆದರಿಕೆ ಇತ್ತು, ಪರಂಪರೆಯ ನಿಯಮಗಳನ್ನು ಅತಿಯಾಗಿ ಉಲ್ಲಂಘಿಸಿದ ನಮ್ಮಲ್ಲೂ ಸ್ವಲ್ಪ “ಯಾರಿಗಾದರೂ ತಿಳಿದುಬಿಡಬಹುದೇ?” ಎಂಬ ಭಯವಿತ್ತು. ಬರುಬರುತ್ತ ಕುಲಪತಿ ಬಾವಯ್ಯ ಕೂಡ ನಮ್ಮ ಭಾಗೀದಾರನಾದಾಗ ನಮ್ಮ ಗೋಪ್ಯದ ವ್ಯವಹಾರ ಅವನಿಗೂ ಗೊತ್ತಾಯಿತು.

ಕುಲಪತಿ ಬಾವಯ್ಯ ಅವನ ಲೆವೆಲ್ಲಿಗೆ ಸಿಗುವುದನ್ನು ಬಳಸಿಕೊಳ್ಳತೊಡಗಿದ, ನಮ್ಮ ಹೈ ಲೆವೆಲ್ಲಿಗೆ ಸಿಗುವುದನ್ನು ನಾವು ಬಳಸಿಕೊಳ್ಳತೊಡಗಿದೆವು. ಕುಲಪತಿ ಬಾವಯ್ಯನ ವಿರುದ್ಧ ಬಹಳ ದೊಡ್ಡ ಮಟ್ಟದಲ್ಲಿ ದೂರುಗಳು ಬಂದಾಗ ಅದನ್ನು ನಾವೇ ನಿವಾರಿಸಿದ್ದನ್ನು ಹಿಂದೆ ನಿಮಗೆ ಹೇಳಿದ್ದೇವಲ್ಲ? ಮಠದಿಂದ ಹೊರಗಟ್ಟಿದರೆ ನಮಗೆ ಉಳಿಗಾಲವಿರಲಿಲ್ಲ. ಯಾಕೆಂದರೆ ಆ ಖದೀಮನಲ್ಲಿ ಅಗಲೇ ಕೆಲವು ವೀಡಿಯೋ ತುಣುಕುಗಳಿದ್ದವು. ಹೀಗಾಗಿ ನಾವು ಗಪ್ ಚುಪ್ ಸುಮ್ಮನಾಗಿಬಿಟ್ಟೆವು.

ಹೊರಮುಖದಲ್ಲಿ ಮಾತ್ರ ಭಜನೆ, ಸತ್ಸಂಗ, ಸಹಸ್ರನಾಮಗಳು, ಜಪ, ಹೋಮ, ಹವನ, ಪಾದಪೂಜೆ, ಭಿಕ್ಷ ಎಲ್ಲವೂ ಅತಿಯಾಗಿ ನಡೆಯುತ್ತಿದ್ದವು. ನಮ್ಮ ಯೋಜನೆಗಳು ಎತ್ತುವಳಿಗಳೆಂದು ಯಾರಿಗೂ ಭಾಸವಾಗದಂತೆ ನುಣ್ಣಗೆ ಹೆರೆದು, ಎಣ್ಣೆ ಸವರಿದೆವು. ತೋರಿಕೆಗೆ ಒಂದಷ್ಟು ಕೆಲಸಗಳನ್ನು ಮಾಡಿ “ಬಹಳ ಬದಲಾವಣೆ ಮಾಡ್ತಿದ್ದಾರೆ” ಎಂಬ ಭಾವನೆ ಮೂಡಿಸಿದೆವು.

ನಮ್ಮ ಕಚೇರಿಗಳಲ್ಲಿ ಹುಡುಗಿಯರನ್ನೇ ಹೆಚ್ಚೆಚ್ಚು ಇರಿಸಿಕೊಂಡೆವು; ಕಾರಣ ಏನಂತ ನಿಮಗೆ ಗೊತ್ತು. ಆಗಾಗ ಕೆಲವು ಹುಡುಗರನ್ನೂ ಸೇರಿಸಿಕೊಂಡೆವು. ನಾವು ಬಳಸಿದ ಹುಡುಗಿಯರನ್ನು ’ಪ್ರಸಾದ ರೂಪ’ದಲ್ಲಿ ಅಂತಹ ಹುಡುಗರಿಗೇ ಕಟ್ಟಿದೆವು. ಬ್ರಹ್ಮಚಾರಿಯಾಗಿದ್ದ ಗಣೇಶನಿಗೂ ಮದುವೆಯ ಯೋಗ ಬಂತು. ಇಂದು ನಮ್ಮ ಪರಿವಾರದಲ್ಲಿ ಇರುವವರೆಲ್ಲರೂ ನಮ್ಮ ’ಪ್ರಸಾದ’ಕ್ಕೆ ಭಾಜನರಾದವರೇ.

ಎಲೈಟ್ ಕ್ಲಾಸಿನ ಮಹಿಳೆಯರನ್ನು ಗುರುತಿಸಿ ಗಾಳಹಾಕುವುದು ನಮಗೆ ಬಹಳ ಸುಲಭದ ಕೆಲಸವಾಯ್ತು. ನೀನು ದಿವ್ಯಳು ಭವ್ಯಳು ಮತ್ತಿನ್ನೇನೇನೋ ಅಂದು, ಆಣೆ ಪ್ರಮಾಣಗಳನ್ನು ಮಾಡಿಸಿ ಒಂದು ಹಂತಕ್ಕೆ ತಂದುಕೊಂಡು, ತಿನ್ನಲಿಕ್ಕೆ ವಿದೇಶೀ ಮಾದಕದ್ರವ್ಯ ಮಿಶ್ರಿತ ’ದಿವ್ಯ ಪ್ರಸಾದ’ವನ್ನು ಕೊಡುತ್ತಿದ್ದೆವು. ಎಲೈಟ್ ಕ್ಲಾಸಿನ ಸುಂದರಿ ಬುದ್ದುಗಳಲ್ಲಿ ಪ್ರತಿಷ್ಠೆ ಮತ್ತು ಭಕ್ತಿ ಎರಡೂ ಇರುತ್ತದೆ. ಇದನ್ನೇ ದಾಳವಾಗಿಸಿ ಅಂತವರನ್ನೆಲ್ಲ ಬಳಸಿಕೊಂಡು ವಿಶ್ವರೂಪ ದರ್ಶನ ನೀಡುತ್ತಿದ್ದೆವು.

ಹೊರಗೆಲ್ಲೂ ಇದು ಯಾರಿಗೂ ತಿಳುಯದಂತೆ ಯಾವ್ಯಾವ ನಾಯಿಗೆ ಯಾವ ಬಿಸ್ಕಿಟ್ ಎಸೆಯಬೇಕೋ ಅದನ್ನು ಕಾಲಕಾಲಕ್ಕೆ ಮಾಡಿಬಿಟ್ಟಿದ್ದೆವು. ಅವರಿಗಾಗಿ ನಾವು-ನಮಗಾಗಿ ಅವರು ಎಂದಾದಾಗ, ಗಂಡು ಭಕ್ತರಿಗೆ ಖಾಸಗೀ ಭೇಟಿ ಹಾರಿಹೋಗಿ ಕೇವಲ ರಾಣಿಯರಿಗೆ ಏಕಾಂತ ದರ್ಶನ ನಡೆಯುತ್ತಲೇ ಇತ್ತು.

ಆರ್ಥಿಕ ವ್ಯವಹಾರದಲ್ಲಂತೂ ಬಿಡಿ, ನಾವು ಸರ್ವತಂತ್ರ ಸ್ವತಂತ್ರರು; ಯಾರೂ ಹೇಳುವುದಕ್ಕೆ ಕೇಳುವುದಕ್ಕೆ ಅಧಿಕಾರವೇ ಇಲ್ಲ. ನಮ್ಮ ವಿರುದ್ಧ ಸೊಲ್ಲೆತ್ತಿದವರನ್ನು “ಮಾತುಕತೆಗೆ ಮಠಕ್ಕೆ ಬನ್ನಿ” ಎಂದು ಕರೆದು ನಮ್ಮ ನಾಯಿಗಳನ್ನು ಬಿಟ್ಟು ಮಗ್ಗುಲು ಮುರಿಸಿದೆವು. ಹೀಗಾಗಿ ನಮ್ಮ ವಿರುದ್ಧ ಸಾರ್ವಜನಿಕ ಸ್ಥಳಗಳಲ್ಲಿ ವಿಷಯ ಗೊತ್ತಿದ್ದರೂ ಯಾರೂ ಬಾಯ್ ಬಿಡುತ್ತಿರಲಿಲ್ಲ.

ನಡೆಯುತ್ತಿರುವ ಅಧರ್ಮ, ಅವ್ಯವಹಾರ, ಅನೈತಿಕ ವ್ಯವಹಾರ, ವ್ಯಭಿಚಾರ, ಬೂಟಾಟಿಕೆ, ಡೊಂಬರಾಟಗಳನ್ನು ಕಂಡ ಸಮಾಜದ ಕೆಲವು ಹಿರಿಯ ತಲೆಗಳು ಹಿಂದೆ ನಮ್ಮನ್ನು ಸೀಟಿಗೆ ತಂದದ್ದಕ್ಕೆ ಪಶ್ಚಾತ್ತಾಪ ಪಡುತ್ತ ತಮ್ಮ ಕೆನ್ನೆಗೆ ತಾವೇ ಹೊಡೆದುಕೊಂಡರು.

ತಲೆಯಿದ್ದವರು ಎನಿಸಿಕೊಂಡ ಕೆಲವು ಪ್ರಮುಖರು ವೇದಿಕೆ-ಮೈಕು ಬೇಕಾಗಿ ನಮ್ಮಲ್ಲಿಗೆ ಬಂದಾಗ, ಯೋಜನೆಗಳನ್ನು ಕಾರ್ಯಗತಗೊಳಿಸಲು ಅವರನ್ನು ಹಚ್ಚಿದೆವು. ಅವರೆಲ್ಲರ ಪರಿಶ್ರಮದ ಫಲವಾಗಿ ಹಣ ಉಕ್ಕಿಹರಿದು ಕಟ್ಟಡಗಳು ಮೇಲೆದ್ದವು, ಮೆರವಣಿಗೆಗಳು ನಡೆದವು, ಇನ್ನೂ ಏನೇನೋ ಎಲ್ಲಾ ನಿಗುರಿ ನಿಂತವು. ನಾವು ಮಾತ್ರ ಸದಾ ತಲೆ ಹಗುರವಿಟ್ಟುಕೊಂಡು ಏಕಾಂತ ದರ್ಶನ ನೀಡುವುದರಲ್ಲಿ ನಿರತರಾಗಿದ್ದೆವು.

ಹೊಸ ಸುಂದರಿಯ ಮುಖ ಕಂಡಾಗ ನಮಗೆ ಆ ಕ್ಷಣವೇ ಮಂಚಕ್ಕೆ ಕರೆಯುವ ಅಪೇಕ್ಷೆಯಾಗುತ್ತಿತ್ತು. ಸ್ಕೆಚ್ ಹಾಕಲು ತೊಡಗುವ ನಾವು ವಾರ, ತಿಂಗಳು, ವರ್ಷ, ವರ್ಷಗಳವರೆಗೂ ಕಾದು ತಂದು ಮಲಗಿಸಿದ್ದೇ ಗ್ಯಾರಂಟಿ. ನಮ್ಮ ನಿದ್ದೆಯನ್ನು ಕದ್ದ ಅಂತಹ ಹಲವು ನೂರು ನಿಂಗಿಗಳು ನಮ್ಮ ಸುತ್ತಲೇ ನಿಂತಿದ್ದರೂ ಒಬ್ಬರಿಗೊಬ್ಬರು ವಿಷಯ ಹೇಳಿಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರೂ ನಮ್ಮ ಕೆಳಗೆ ಮಲಗಿದ್ದು ತಮ್ಮ ಹೆಚ್ಚುಗಾರಿಕೆ ಮತ್ತು ’ಭಗವದರ್ಪಣೆ’ಎಂದೇ ಭಾವಿಸಿದ್ದರು.

ಮೊಂಡು ಭಕ್ತರ ಜೊಂಡು ತುಂಬಿದ ಭಕ್ತಸರೋವರದಲ್ಲಿ ನಮ್ಮ ಬೇರು ಆಳವಾಗಿ ಇಳಿದಿದ್ದರಿಂದ ಇಂದು ಯಾರೇ ಏನೇ ಮಾಡಿದರೂ ಅದನ್ನೆಲ್ಲ ಕೀಳುವುದು ಇತರರಿಗೆ ಕಷ್ಟ ಎಂಬುದು ನಮಗೆ ಗೊತ್ತಿದೆ. ನಾವೇ ಖುದ್ದಾಗಿ “ಹೌದಪ್ಪಾ ನಾವು ಕಳ್ಳ ಖದೀಮರು, ನಾವು ಲಂಪಟರು, ನಾವು ಕಚ್ಚೆಹರುಕರು” ಎಂದರೆ, “ಹಾಗೆಲ್ಲ ಹೇಳ್ಬಾರ್ದು ಸಂಸ್ಥಾನ, ನಮಗೆ ನೀವೇ ದೇವರು” ಎಂದು ನಮಗೇ ತಿಳಿಹೇಳುವ ಪ್ರಯತ್ನ ಮಾಡುವ ಬುದ್ಧಿಮಾಂದ್ಯರು ಅಲ್ಲಿದ್ದಾರೆ.

ಹೀಗಿರುವುದರಿಂದಲೇ ಸಮಾಜ ನಿರ್ದಾಕ್ಷಿಣ್ಯವಾಗಿ ನಿರ್ಧಾರವನ್ನು ಕೈಗೊಳ್ಳುವುದನ್ನು ಬಿಟ್ಟು ನ್ಯಾಯದ ಮೊರೆಹೊಕ್ಕಿದೆ. ಇಲ್ಲದಿದ್ದರೆ ಜನ ನಮ್ಮನ್ನು ಇಷ್ಟೊತ್ತಿಗಾಗಲೇ ದೇಶಭ್ರಷ್ಟನನ್ನಾಗಿಸುತ್ತಿದ್ದರು ಎಂಬುದರಲ್ಲಿ ನಮಗಂತೂ ಅನುಮಾನವೇ ಇಲ್ಲ. ಪರಂಪರೆ ಮತ್ತು ಸೀಟಿನ ರಕ್ಷಣೆ ಎಂಬ ಅಜ್ಜ ನೆಟ್ಟ ಆಲದಮರದ ಬೀಳಲುಗಳು ಮೇಲಿನಿಂದ ಭದ್ರವಾಗಿದ್ದರೆ, ಕೆಳಗೆ ನಾವು ಆಕ್ಟೋಪಸ್ ರೀತಿಯಲ್ಲಿ ಸಂದಿಗೊಂದಿಯಲ್ಲೆಲ್ಲಾ ಇಳಿಸಿದ್ದ ಬೇರುಗಳನ್ನು ಕಿತ್ತೆಗೆಯಲು ಜ್ಞಾತರು ಪ್ರಯತ್ನಿಸುತ್ತಿದ್ದಾರೆ.

ತುಮರಿ ರಾಮಚಂದ್ರ ಯಾರು ಎಂದು ಜಲಾನಯನ ಪ್ರದೇಶದ ಭಕ್ತರಲ್ಲಿ ನಾವು ಬಹಳ ಡೀಪ್ ಆಗಿ ವಿಚಾರಿಸಿದೆವು; ನಮ್ಮಲ್ಲಿಗೆ ಬರುವ ಯಾವ ಭಕ್ತರಿಗೂ ಅವನ ಪರಿಚಯ ಇರದ್ದರಿಂದ ಅವನನ್ನು “ಬೇನಾಮಿ” ಎಂದುಬಿಡಿ ಎಂದು ನಮ್ಮ ದೊಣ್ಣೆನಾಯಕನಿಗೆ ಅಪ್ಪಣೆ ಮಾಡಿದ್ದೇವೆ. ಆದರೂ ಒಂದಿಲ್ಲೊಂದು ದಿನ ಆ ಹೆಸರಿನ ವ್ಯಕ್ತಿ ನಮಗೆದುರಾಗಿ ಛೀಮಾರಿ ಹಾಕಿದರೆ ಆಗೇನು ಮಾಡುವುದು ಎಂಬ ಸಂದೇಹವೂ ನಮಗಿದೆ.”

Thumari Ramachandra

source: https://www.facebook.com/groups/1499395003680065/permalink/1627478917538339/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s