ನರಕ ಕರೆದ ಬಾ…..ಬಸಂತಿ

ನರಕ ಕರೆದ ಬಾ…..ಬಸಂತಿ
[ನಾಟಕದ ಮುಂದಿನ ಸೀನು….]

“ದ್ವಾಪರದ ಶ್ರೀಕೃಷ್ಣನ ಕಾಲಕ್ಕೆ ನರಕಾಸುರ ಎಂಬೊಬ್ಬನಿದ್ದನಂತೆ. ಆಗಿದ್ದು ಒಂದೋ ಎರಡೋ ರಾಕ್ಷಸ ವಿವಾಹ ….ಅಸುರೀ ಮದುವೆ. ಸೆರೆಯಲ್ಲಿಟ್ಟಿದ್ದು ಮಾತ್ರ ಬರೋಬ್ಬರಿ ಹದಿನಾರು ಸಾವಿರ ಕನ್ಯೆಯರನ್ನು. ನರಕನ ನಿತ್ಯ ನಾರಕೀ ಜೇವನಕ್ಕೆ ಬೇಸತ್ತ ಭುವಿಯಂಗಳದ ಅನೇಕ ಜನರೆಲ್ಲ ಅವನೊಡನೆ ಹೋರಾಡಿ ಸೋತರು.

ನರಕ ಸೋಲಲಿಲ್ಲ; ಕನ್ಯೆಯರ ಶೀಲಕ್ಕೆ ಉಳಿಗಾಲವಿರಲಿಲ್ಲ. ಹದಿನಾರು ಸಾವಿರ ಕನ್ಯೆಯರಿಗೆ ಊಟಕ್ಕೆ ತಿಂಡಿಗೆ ಎಲ್ಲ ಯಾವ ವ್ಯವಸ್ಥೆ ಮಾಡಿರಬಹುದು ಎಂದು ಯೋಚಿಸುತ್ತಿದ್ದೇವೆ ನಾವು. ಯಾಕೆಂದ್ರೆ……ಯಾಕೆಂದ್ರೆ……ಯಾಕೆಂದ್ರೆ ಅವರಲ್ಲಿ ಯಾರೂ ಈರುಳ್ಳಿ ಉಪ್ಪಿಟ್ಟು ಕೇಳೋ ಹಾಗಿಲ್ಲ. ಹೊರಗಡೆಯಿಂದ ಆಹಾರ ತಂದು ಕೋಡೋರಿಲ್ಲ. ನಂದಿನಿ ಡೀಲಕ್ಸ್ ಮೊದಲೇ ಇಲ್ಲ.

ನಾಳೆ ಪರಪ್ಪವನಕ್ಕೆ ಹೋದಮೇಲೆ ನಮಗೆ ಈರುಳ್ಳಿ ದೋಸೆ, ಬೆಳ್ಳುಳ್ಳಿ ಗೊಜ್ಜು, ಈರುಳ್ಳಿ ಉಪ್ಪಿಟ್ಟು, ಅಲೂ ಬೋಂಡ ಇದನ್ನೆಲ್ಲ ಮಾಡಿ ಸಪ್ಲೈ ಮಾಡುವವರಾರು? ದುಡ್ಡು ಕೊಟ್ಟರೆ ಏನನ್ನೇ ಬೇಕಾದ್ರೂ ಕೊಡ್ತಾರಂತೆ ಅಂತ ಸುದ್ದಿ ಕೇಳಿದ್ದೇವೆ ನಾವು; ಆದರೆ ಕೊಡುವುದಕ್ಕೆ ನಮ್ಮಲ್ಲಿ ಇರಬೇಕಲ್ಲ?

ಒಂದು ಕಾಲಕ್ಕೆ ಕಪ್ಪುಹಣವನ್ನು ಕೈಯೆತ್ತಿ ಹಂಚಿದ ಹಸ್ತ, ಈಗ ಕೈ ನೀಡಿ ಯಾಚಿಸುವ ಹಂತದಲ್ಲಿದೆ. ನಮ್ಮಿಂದ ಉಪಕಾರ ಪಡೆದವರೆಲ್ಲ ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಅಲ್ನೋಡಿ ಅಲ್ಲೊಬ್ಬ ಇದಾನೆ.

ಬ್ಯಾಂಕುಗಳಲ್ಲಿ ಕೋಟಿಗಟ್ಟಲೆ ಸಾಲ ಮಾಡ್ಕೊಂಡು ಭಿಕಾರಿಯಾಗಿದ್ದ. ಅವನ ಮಠ ಹರಾಜಿಗೆ ಬಂದಿತ್ತು. ದುಂಡಗಾಶಿ ನಮಗೆ ಸುದ್ದಿ ತಂದ. ನಮ್ಮಲ್ಲಿ ಹೇಗೂ ಹಣದ ಹೊಳೆಯೇ ಹರಿಯುತ್ತಿತ್ತಲ್ಲ. ಅವನನ್ನು ಕರೆಸಿದೆವು. ಗೋಪ್ಯವಾಗಿ ಮಾತುಕತೆ ನಡೆಸಿದೆವು. ಬೇರೆ ಯಾವ ಮಠಕ್ಕೂ ಕೊಡಬೇಡ, ನಮಗೇ ಕೊಡು ಎಂದೆವು.

ಆತ ಒಪ್ಪಿಕೊಂಡ. ನಾನು ಸತ್ತಮೇಲೆ ನಿನಗೇ ಈ ಮಠ ಎಂದು ಬರೆದು ಸಹಿಹಾಕುತ್ತೇನೆ ಅಂದ. ಆ ಮಠಕ್ಕೆ ಅವನೊಬ್ಬನೇ ವಿಶ್ವಸ್ಥ. ಅದರಲ್ಲಿ ಬೇರಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಅದು ಅವನ ಖಾಸಗಿ ಆಸ್ತಿ. ಅದನ್ನೆಲ್ಲ ನೋಡಿಕೊಂಡೇ ನಾವು ಅವನನ್ನು ಕರೆಸಿ ಮಾತಾಡಿದ್ದು. ತಾನು ಸತ್ತ ಮೇಲೆ ತನ್ನ ಮಠಕ್ಕೆ ನಾವೇ ಅಂದರೆ ಹಾವಾಡಿಗ ಮಹಾಸಂಸ್ಥಾನಾಧೀಶ್ವರ ಶೋಭರಾಜಾಚಾರ್ಯನೇ ಉತ್ತರಾಧಿಕಾರಿಯೆಂದು ಬರೆದ.

ಈಗ ನಮ್ಮ ವಿರುದ್ಧದ ಹುಲುಮಾನವರಿದ್ದಾರಲ್ಲ ಅವರೆಲ್ಲ ಒಟ್ಟಾಗಿದ್ದಾರೆ. ಎಲ್ಲಿ ಅವನಿಗೆ ಹೇಳಿಕೊಟ್ಟು ನಮ್ಮ ಉತ್ತರಾಧಿಕಾರಿ ವೀಲುನಾಮೆಯನ್ನು ಬದಲಿಸಬಹುದೋ ಎಂಬ ಸಂದೇಹ ನಮಗೆ. ಯಾಕೆಂದರೆ ಒಬ್ಬವ್ಯಕ್ತಿ ಅವನ ಖಾಸಗಿ ಆಸ್ತಿಗೆ ಅವನು ಸಾಯುವುದಕ್ಕೂ ಮೊದಲು ಎಷ್ಟು ಸಲ ಬೇಕಾದರೂ ವಿಲ್ ಬದಲಾಯಿಸಬಹುದು.

ಉತ್ತರದ ಕಡೆಗೆ ಹೋಗಿದ್ದ ಬಿಕನಾಸಿ ಮತ್ತೆ ಆಗಾಗ ತನ್ನ ಮಠಕ್ಕೆ ಬರುತ್ತಲೇ ಇದ್ದ. ನಮಗೋ ಆ ವ್ಯವಹಾರ ಮುಗಿಸಿ ಮಠವನ್ನು ಸಂಪೂರ್ಣ ನಮ್ಮ ಅಧಿಕಾರಕ್ಕೆ ತೆಗೆದುಕೊಳ್ಳುವ ತವಕ. ಮೊನ್ನೆ ಮೊನ್ನೆ ಅವನು ನಮ್ಮ ವಿರುದ್ಧ ದೂರು ಕೊಟ್ಟ. ಮಠದ ವ್ಯವಹಾರ ಸರಿಯಿಲ್ಲ, ತನಗೇ ಕೊಡಲಿ ಅಥವಾ ಆಳುವವರು ವಹಿಸಿಕೊಳ್ಳಲಿ ಎಂದ.

ಈ ವಿಷಯ ತಿಳಿದಿದ್ದೆ, ಕಾಗೆ ಹಾರಿಸಿ ಅಡ್ಡಗೇಟನ್ನು ಬಳಸಿಕೊಂಡು ನಾವು ನೋಟೀಸು ಕೊಟ್ಟಿದ್ದೇವೆ. ಇಲ್ಲಿಯೇ ಇದ್ದ ಅವನನ್ನು ನಮ್ಮ ತಾಲಿಬಾನಿನ ಸದಸ್ಯರು ಎತ್ತುಕೊಂಡು ಮಹಾಬಲನಿದ್ದೆಡೆಗೆ ಹೋದರು. ಅಲ್ಲಿ ಅವನನ್ನು ಇರಿಸಿಕೊಂಡು ಹವಾ ತೆಗೆದಿದ್ದಾಯ್ತು. ಪಾಪಿ, ನಮ್ಮಿಂದ ಸಹಾಯ ಪಡೆದು ನಮಗೇ ತೊಂದರೆ ಕೊಡ್ತಾನೆ. ಪೂರ್ಣಾಧಿಕಾರಕ್ಕೆ ಸಹಿಹಾಕುವಂತೆ ಅವನಿಗೆ ಧಮ್ಕಿ ಹಾಕಿದ್ದೇವೆ.

“ಈಗಲೇ ಅವನ ಮಠದ ಪೂರ್ಣಾಧಿಕಾರ ನಮಗೆ ಬೇಕು. ಸಹಿಹಾಕಲಿಲ್ಲ ಅಂದರೆ ಅವನ ಚ್ಯಾಪ್ಟರ್ ಕ್ಲೋಸ್ ಮಾಡಿ ಅಥವಾ ಯಾವಳನ್ನೋ ಹಿಡಿದು ಅವನ ಮೇಲೆ ಅತ್ಯಾಚಾರದ ಕೇಸ್ ಹಾಕಿಸಿ ಒಳಗೆ ಕೂರುವಂತೆ ಮಾಡಿ” ಎಂದು ನಮ್ಮ ಹಳದೀ ಗಣಗಳಿಗೆ ನಾವು ಅಪ್ಪಣೆಮಾಡಿದೆವು. ನಮ್ಮವರು ಹಾಕಿದ ಧಮ್ಕಿಗೆ ಆತ ಹೆದರಿದ ಬೆಕ್ಕಾಗಿ ಈಗ ಶುಶ್ರೂಷೆ ತೆಗೆದುಕೊಳ್ಳುತ್ತಿದ್ದಾನೆ. ನಾವು ಏನೇ ಮಾಡಿದರೂ ಅಷ್ಟೇ ವೀರ್ಯ ಸನ್ಯಾಸ; ಏಕ್ ಮಾರ್ ದೋ ಟುಕಡಾ. ಅವನೇನಾದರೂ ಪೂರ್ಣಾಧಿಕಾರಕ್ಕೆ ಸಹಿ ಹಾಕದಿದ್ದರೆ ಬೆಳ್ಳುಳ್ಳಿ ಗೊಜ್ಜು ಗ್ಯಾರಂಟಿ.

ನಮಗೆ ಎಂತೆಂತಹ ಶಿಷ್ಯೆಯರಿದ್ದಾರೆ ಗೊತ್ತೇ? ನೀತಾ ಗುಂಜಾಲಪ್ಪ ನಮ್ಮ ಪರಮ ಭಕ್ತೆ. ನಮಗೆ ಬಹಳ ಬಹಳ ಆಪ್ತಳು. ನಮ್ಮ ಸಲುವಾಗಿ ಅವಳ ಭಕ್ತಿಯ ಹೋರಾಟ ಎಂಬುದು ಚಿಕ್ಕಮಕ್ಕಳ ಹೇಲಾಟಕ್ಕಿಂತ ಜೋರಾಗಿದೆ. ನಮ್ಮ ವಿರುದ್ಧ ನೀವು ಬರೆದರೆ ಅಲ್ಲಿ ಬಂದು ಅವಳು ಹೇಸಿಗೆ ಮಾಡದಿದ್ದರೆ ಹೇಳಿ.

ನಮ್ಮ ಕೋಟಿಗಟ್ಟಲೆ ಖಾಸಗೀ ಹಣವನ್ನು ದೂರದಲ್ಲಿ ನಿಭಾಯಿಸಿ ಸುರಕ್ಷಿತವಾಗಿರಿಸುವ ಕೆಲಸವನ್ನು ಆಕೆಗೆ ಒಪ್ಪಿಸಿದ್ದೇವೆ ನಾವು. ಹಾಗಾಗಿ ಆಕೆಗೆ ನಮ್ಮ ಮೇಲೆ ಎಲ್ಲಿಲ್ಲದ ಪ್ರೀತಿ ವಿಶ್ವಾಸ. ಮುಂದಿನ ಸಲ ಬಂದಾಗ ಮತ್ತೆ ಏಕಾಂತ ದರ್ಶನಕ್ಕೆ ಬರುತ್ತೇನೆ ಸಂಸ್ಥಾನ ಎಂದಳು. “ನೀನು ಏಕಾಂತಕ್ಕೆ ಬರೋದಕ್ಕಿಂತ ಅಲ್ಲೇ ನಮ್ಮ ಗಂಟನ್ನು ಕಾಯ್ದುಕೊಂಡಿರು”ಎಂದಿದ್ದೇವೆ.

ನಮ್ಮ ಯಾವುದೇ ಚಿತ್ರವನ್ನೂ ತೆಗೆದುನೋಡಿ, ಅದರಲ್ಲಿ ನಮ್ಮ ಕಣ್ಣು ಸದಾ ಪರಮಾತ್ಮನ ’ಮೋಹಿನಿ ಅವತಾರ’ದಮೇಲೆ ನಾಟಿರುತ್ತದೆ. ಅದು ಬಸ್ಸಿನಲ್ಲಿರಲಿ, ಬಾರ್ಜ್ ನಲ್ಲಿರಲಿ, ನಾವೆಯಲ್ಲಿರಲಿ, ವಿಮಾನದಲ್ಲಿರಲಿ, ಎಲ್ಲಿದ್ದರೂ ನಮಗೆ ಮೋಹಿನಿ ಅವತಾರದ ದರ್ಶನ ಸಿಕ್ಕೇ ಸಿಗುತ್ತದೆ. ಕಣ್ಣಲ್ಲಿ ’ದರ್ಶನ’ ಪಡೆದುಕೊಳ್ಳುವುದಕ್ಕೆ ಯಾವ ಮೋಹಿನಿಯಾದೇನು? ಅವಳು ಬೇರೆಡೆಗೆ ನೋಡುವಾಗ ಅವಳ ಅಂಗಾಂಗಗಳನ್ನೆಲ್ಲ ನೋಡುವುದು, ಅವಳು ನಮ್ಮನ್ನೇ ನೋಡುವಾಗ ಕಣ್ಣಲ್ಲೇ ಕರೆಯುವುದು.

ಕರೆದರೂ ಕೇಳದೇ…..ಸುಂದರಿಯೆ
ಏಕೆ ಈ ಮೌನ ನಾ ಕರೆದರೂ ಕೇಳದೇ……

ಜಯಪ್ರದ ’ಕರೆದರೂ ಕೇಳದೇ’ ಎಂದು ನಮ್ಮಲ್ಲಿ ಹೇಳಿದ್ದರೆ, ಕೇಳಿದೆ ಬಾ ಎಂದು ಸೀದಾ ಏಕಾಂತ ದರ್ಶನ ಕೊಟ್ಟುಬಿಡುತ್ತಿದ್ದೆವು. ಸುಂದರಿಯರಿಗೆ ಏಕಾಂತ ಬೇಕಾದರೆ ಅರೆನಿಮಿಷದಲ್ಲೇ ಅನುಮತಿ ಸಿಗುತ್ತದೆ.

ಯಾರೋ ಬುಡ್ಡಾಗಳು ಬುದ್ಧಿಮಾಂದ್ಯ ಭಕ್ತರು ಖಾಸಗಿಯಾಗಿ ಮಾತನಾಡಬೇಕು ಎಂದು ಬೆಳಗಿನಜಾವದಿಂದ ಮಧ್ಯರಾತ್ರಿಯ ವರೆಗೆ ಕುಳಿತರೂ ಕೊನೆಗೆ ನಾವು ಕೈ ತಿರುಗಿಸುವುದೇ ಹೆಚ್ಚು. ಯಾಕೆಂದ್ರೆ…..ಯಾಕೆಂದ್ರೆ….ಯಾಕೆಂದ್ರೆ ಹಾರಾಟದ ನಡುವೆ ನಮಗೆ ಪುರ್ಸೊತ್ತು ಸಿಗಬೇಕಲ್ಲ. ಅದೂ ಮಧ್ಯೆ ಮಧ್ಯೆ ಕಾವಿವೇಷದಲ್ಲಿ ಹೊರಗೆ ಕಾಣಿಸಿಕೊಳ್ಳಬೇಕು; ಬಟ್ಟೆ ಉಟ್ಟು ಬಿಚ್ಚಿ ಹಾಕಲಾದರೂ ಸಮಯಬೇಕಲ್ಲವೇ?

ಯಾವ ದೇವಸ್ಥಾನವಿರಲಿ, ಕ್ಷೇತ್ರವಿರಲಿ ಅಲ್ಲಿಂದ ಏನಾದರೂ ನಮಗೆ ಲಾಭವಿದೆ ಎಂದರೆ ಬಿಡುವವರಲ್ಲ ನಾವು. ಭಗಂದೂರು ತೋಷಗಿರಿಯೂ ನಮಗೆ ತಿಂಗಳು ತಿಂಗಳು ಒಂದಷ್ಟು ಕೊಡುವುದೆಂತ ರಾಜಿ ಪಂಚಾಯ್ತಿ ಆಗಿದೆ. ಅದಿಲ್ಲದಿದ್ದರೆ ಅವನಿಗೆ ಅಲ್ಲಿ ಉಳಿಗಾಲವಿಲ್ಲ. ನಾಮಪ್ಪಂಗೆ ಹೇಳಿ ಅವನನ್ನು ಒಕ್ಕಲೆಬ್ಬಿಸಿಬಿಡ್ತೇವೆ ನಾವು. ಹೀಗಾಗಿ ಅಂವ ಮುಚ್ಕೊಂಡು ಕಳಿಸ್ತಾನೆ ಈಗ.

ಈಗೀಗ ಕೆಲವು ಕಡೆ ನಮ್ಮನ್ನು ಓಡಿಸಿದ್ದಾರೆ, ಅದು ಬಿಡಿ, ಬೇರೆ ಪ್ರಶ್ನೆ. ನವಗುಂದ ದೇವಸ್ಥಾನಕ್ಕೆ ನಾವೇ ಪ್ರಮುಖರು ಎಂದು ಅದರ ವ್ಯವಸ್ಥಾಪಕರು ಹೇಳಿದ್ದರು. ಆದರೆ ಆಮೇಲೆ ಪ್ಲೇಟ್ ಚೇಂಜ್ ಮಾಡಿಬಿಟ್ಟರು. ಅದಕ್ಕೆ ಇನ್ನೊಂದು ಮಠ ಕಾರಣ ಎನ್ನುತ್ತೇವೆ ನಾವು.

ಆ ಮಠದವರಿಗೆ ನಮ್ಮ ಏಳ್ಗೆಯನ್ನು ಕಂಡರೆ ಆಗೋದಿಲ್ಲ. ನಾವು ಎಲ್ಲೇ ಹೋದರೂ ಅವರ ಹದ್ದಿನ ಕಣ್ಣು ನಮ್ಮ ಮೇಲೇ ಇರುತ್ತದೆ. ನಮ್ಮ ವಿರುದ್ಧ ನಡೆಯುತ್ತಿರುವ ಎಲ್ಲ ಷಡ್ಯಂತ್ರಗಳಲ್ಲೂ ಅವರ ಕೈವಾಡವಿದೆ ಎಂದು ನಾವು ಕಳೆದ ಚಾತುರ್ಮಾಸದಲ್ಲೇ ಹೇಳಿದ್ದೇವೆ. “ಅವರಿಗೇನಾದರೂ ಬೇಕಾದರೆ ನೇರವಾಗಿ ನಮ್ಮಲ್ಲಿ ಬೇಡ ಬಹುದಿತ್ತು, ನಾವೇ ಕೊಡುತ್ತಿದ್ದೆವು,ಅದನ್ನು ಬಿಟ್ಟು ವಿನಾಕಾರಣ ಈ ರೀತಿ ಷಡ್ಯಂತ್ರ ಮಾಡೋದು ಸರಿಯಲ್ಲ’ ಎಂದಿದ್ದೆವು ನಾವು,

ಈಗ ನಮ್ಮ ಹಳದೀ ತಾಲಿಬಾನ್‍ಗಳ ಸರದಿ. ಅವರಿಗೆ ಆ ಮಠದ ಆಡಳಿತಾಧಿಕಾರಿಯ ಮೇಲೆ ಅನುಮಾನವಿದೆ. ನಮಗೂ ಅಷ್ಟೆ. ಆ ಮನುಷ್ಯನೂ ನಮ್ಮ ಕುಲಪತಿ ಬಾವಯ್ಯ ಇದ್ದಹಾಗೆ ಅಂದುಕೊಂಡುಬುಟ್ಟಿದ್ದೇವೆ ನಾವು. ಇನ್ಹೇಗಿರ್ತಾನೆ ನಮ್ಮಲ್ಲಿ ಥೇಟ್ ನಮ್ಮ ಬಾವಯ್ಯ ಇದ್ದಂಗೆ ಇರ್ತಾನೆ ಎಂಬುದು ನಮ್ಮ ತೀರ್ಮಾನ.

ನಮ್ಮ ವಿರುದ್ಧ ದಾಖಲಾದ ಎಲ್ಲಾ ದೂರುಗಳ ಹಿಂದೆಯೂ ಅವನ ಕೈವಾಡ ಇದ್ದೇ ಇದೆ ಎಂಬುದರಲ್ಲಿ ನಮಗೆ ಅನುಮಾನವಿಲ್ಲ. ಹಾಗಾಗಿಯೇ ನಮ್ಮ ತಾಲೀಬಾನಿಗಳಿಗೆ ನಾವು ಇದನ್ನೇ ಹೇಳಿದ್ದೇವೆ. “ಏ ಹೋಗ್ರೊ, ಕಂಡಲ್ಲೆಲ್ಲ ಈ ಸುದ್ದಿ ಹಬ್ಬಿಸಿ” ಅಂತ ಹೇಳಿದ್ದೇವೆ. ನಾಳೆ ಕಾಲಬುಡಕ್ಕೆ ಬಂದಾಗ “ನಮ್ಮ ಸಂಸ್ಥಾನಕ್ಕೂ ಅದಕ್ಕೂ ಸಂಬಂಧವಿಲ್ಲ, ನಮ್ಮ ಭಕ್ತರು ಏನು ಹೇಳುತ್ತಾರೋ ಅದಕ್ಕೆಲ್ಲ ಸಂಸ್ಥಾನ ಜವಾಬ್ದಾರಿಯಲ್ಲ” ಎಂದು ನುಣುಚಿಕೊಳ್ಳುತ್ತೇವೆ ನಾವು.

ಇದೆಲ್ಲದರ ಜೊತೆಗೆ, ಯಾವುದೋ ಅಡ್ಡಗೇಟು ಹೇಳಿದ್ದೆನ್ನುತ್ತ ಕತೆ ಕಟ್ಟಿ, “ದೊಡ್ಡವರ ಸಣ್ಣತನ ಇದು. ಅವರ ಷಡ್ಯಂತ್ರ ಅಲ್ಲದಿದ್ದರೆ ಶಿವ ನಮಗೇ ಒಲಿಯುತ್ತುದ್ದ. ನೀವು ಹೋಗುವ ಮುನ್ನ ಇಮೊಂದನ್ನು ಮುಗಿಸಿ ಹೋಗಿ ಎಂದು ಅವರು ಹೇಳಿದರಂತೆ. ಹಾಗಾಗಿ ಅಂವ ಇನ್ನೂ ಕಾರ್ಯ ನಿರ್ವಹಿಸುತ್ತಲೇ ಇದ್ದಾನೆ.” ಎಂದು ಕತೆ ಹಬ್ಬಿಸಿದ್ದೇವೆ.

ಆ ಮಠದವರು ಗಾಳಿ ಊದಿದರೆ ನಾವು ಹಾರಿ ಹೋಗುತ್ತೇವೆ, ಅದು ಬೇರೆ ಪ್ರಶ್ನೆ. ಆದರೂ ಶ್ರೀಮಹಾಸಂಸ್ಥಾನದವರಾದ ನಾವು ಹೊರಗೆ ಹಾಗೆ ಹೇಳುವುದುಂಟೇ? ಸಾನಾತನ ಧರ್ಮಕ್ಕೆಷ್ಟು ಸಹನೆ ಇದೆಯೋ ಅಷ್ಟೇ ಸಹನೆ ಆ ಮಠಕ್ಕೆ ಇದೆ ಎಂದು ನಮ್ಮ ಅಂತರಂಗಕ್ಕೆ ಗೊತ್ತು. ನಾವು ಅವರ ವಿರುದ್ಧ ಏನೇ ಹೇಳಿದರೂ ಇಲ್ಲಿಯವರೆಗೆ ಏನೊಂದೂ ಮಾತನಾಡಲಿಲ್ಲ. ಹೀಗಾಗಿ ’ಕೋತಿ ಬೆಣ್ಣೆ ತಿಂದು ಮೇಕೆ ಮೂತಿಗೆ ಕೈ ಒರೆಸಿತ್ತು” ಅನ್ನೋ ಹಾಗೆ ನಾವು ಮಾಡಿದ, ಮಾಡುತ್ತಿರುವ ಮತ್ತು ಮಾಡಬೇಕೆಂದಿರುವ ಸಮಸ್ತ ಉಡಾಫೆ, ಉಪದ್ವ್ಯಾಪ, ಕಾಮಕೇಳಿ, ದ್ರೋಹ, ಆಸ್ತಿ ಕಬಳಿಕೆ ಎಲ್ಲದಕ್ಕೂ ಅವರೇ ಮೂಲ ಕಾರಣ ಎಂದು ಹೇಳಿಬಿಡುತ್ತೇವೆ ನಾವು.

ನಮ್ಮ ಕಾಮಕತೆಯ ಕವಿಗೆ ಯಾರೋ ಮೇಲ್ ಮಾಡಿದ್ದಾರಂತೆ ಈ ಹಾಡನ್ನು-

ನರಕ ಕರೆದ…. ಬಾ ವಸಂತಿ
ಹಾಗೆ ಹೊರಗೆ ಯಾಕೆ ಕುಂತಿ?

ಏಕಾಂತದ ಸವಿಯೂಟವ ಸವಿಯೋಣ ಬಾ
’ಭಾರತ ರತ್ನ’ವನೀಗ ಸೃಜಿಸೋಣ ಬಾ

ವಿಶ್ವರೂಪ ನೋಡಿ ದಿವ್ಯ ಭವ್ಯಳಾಗು ನೀ
ಪೇಶ್ವೆಯಂತ ಯೆನಗೆ ರಾಣಿ ಧನ್ಯಳಾಗು ನೀ

ಭಕ್ತಿಯಿಂದ ಎಲ್ಲ ಬಿಚ್ಚಿ ಭಗವದರ್ಪಣೆ
ಯುಕ್ತಿಯಿಂದ ಧನಕನಕವು ನಿನಗೆ ’ಅಪ್ಪಣೆ’

ಮಂಚವೇರು ಕೆಳಗೆ ಜಾರು ಕೊಸರಬೇಡ ನೀ
ಕೊಂಚ ಅಡ್ಜಸ್ಟ್ ಮೆಂಟು ಅಂಟು ಪರಮನೆಂಟಿದು

ಕಾಮಕತೆಯ ಕವಿಗೆ ಇದು ಅರ್ಥವಾಗಲಿಲ್ಲವಂತೆ. ಅವರು ಪ್ರಿಂಟ್ ಕೊಟ್ಟು ಹೋದರು. ಪರವಾಗಿಲ್ಲ, ಯಾರೋ ಸರಿಯಾಗೇ ಬರೆದಿದ್ದಾನೆ. ನಾಳೆ ಇವನೂ ಕತೆಗೆ ಸಾಹಿತ್ಯ ಒದಗಿಸಬಹುದು. ಅಲ್ಲೆಲ್ಲೋ ಯಾವುದೋ ಹಾಡು ಕೇಳಿಸ್ತಿದೆಯಲ್ಲಾ…….ಎಲ್ಲೋ ಕೇಳಿದ ಹಾಗಿದೆಯಲ್ಲಾ???????
.
.
.

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ…..
ಈ ನೀರಿಗೆ ಹಾತೊರೆದರೆ ವಿಷಪಾನವೆ ನಿನ್ನ ಗತಿ …..
…..
….

..
,”

????????????????

Thumari Ramachandra

source: https://www.facebook.com/groups/1499395003680065/permalink/1626939734258924/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s