ಹಾವಾಡಿಗ ಸಂಸ್ಥಾನದ ಹೆಸರು ಹಾಳುಮಾಡಲು ಷಡ್ಯಂತ್ರ ನಡೆಸಿದ್ದಾರೆ……..!!

ಹಾವಾಡಿಗ ಸಂಸ್ಥಾನದ ಹೆಸರು ಹಾಳುಮಾಡಲು ಷಡ್ಯಂತ್ರ ನಡೆಸಿದ್ದಾರೆ……..!!

“ನಾವು ಎಲ್ಲಿಂದೆಲ್ಲಿಯವರೆಗೆ ಮಾಡಿದ್ದೂ ಲಫಡಾಗಳೇ ಎಂಬುದು ನಮ್ಮಾತ್ಮಕ್ಕೆ ಗೊತ್ತು. ಆದರೆ ಅದನ್ನು ಹೇಳಿದರೆ ನಮಗೆ ಬೇಕಾದಂತೆ ಬದುಕಲು ಸಾಧ್ಯವೇ?

ರಾಜ ಸನ್ಯಾಸ ಎಂಬುದರ ಅರ್ಥ ಕೆಲವರಿಗೆ ಇನ್ನೂ ಗೊತ್ತಿಲ್ಲ. ರಾಜ ಸನ್ಯಾಸ ಎಂದರೆ ರಾಜನ ಹಾಗೆ ಇರಬೇಕೆಂದೇ ಅರ್ಥವಲ್ಲ. ರಾಜರು ಬಳಸುತ್ತಿದ್ದ ಛತ್ರ, ಚಾಮರ, ದೀವಟಿಗೆ, ಪಲ್ಲಕ್ಕಿ ಇದನ್ನೆಲ್ಲ ಕಡ್ಡಾಯವಾಗಿ ಬಳಸಲೇಬೇಂಬ ಯಾವ ನಿಯಮವೂ ಇಲ್ಲ.

ರಾಜರಿಗೆ ಧರ್ಮಮಾರ್ಗ ಬೋಧನೆ ಮಾಡುವ, ರಾಜರಿಗೂ ಗುರುವಾಗಿರುವ ಹುದ್ದೆ ಎಂಬುದನ್ನು ಸಾಂಕೇತಿಕವಾಗಿ “ರಾಜಸನ್ಯಾಸ”ಎನ್ನುತ್ತಾರೆ. ರಾಜ ದಿಕ್ಕೆಟ್ಟರೆ, ಕಂಗೆಟ್ಟರೆ, ಅಧರ್ಮಿಯಾದರೆ, ಅನೈತಿಕತೆಗಿಳಿದರೆ, ದಾರಿತಪ್ಪಿದರೆ, ಧರ್ಮಸಂಕಟದಲ್ಲಿ ಸಿಲುಕಿಹಾಕಿಕೊಂಡರೆ ಸನ್ಮಾರ್ಗ ಯಾವುದು? ಯಾವುದು ಧರ್ಮಮಾರ್ಗ? ಹೇಗೆ ನಿಭಾಯಿಸಬೇಕು? ಎಂಬುದನ್ನು ರಾಜನಿಗೆ ಬೋಧಿಸುವ ಮಟ್ಟದ ಪ್ರಜ್ಞಾವಂತಿಕೆಯನ್ನೂ ಪಾಂಡಿತ್ಯವನ್ನೂ ಇರಿಸಿಕೊಂಡೂ, ತಾನು ಮಾತ್ರ ನಿರ್ಮೋಹಿಯಾಗಿರುವ ವ್ಯಕ್ತಿ ಎಂದರ್ಥ.

ಹಿಂದಕ್ಕೆ ಶಂಕರಾಚಾರ್ಯರು ಎಂಬೊಬ್ಬರಿದ್ದರಂತೆ. ತೀರಾ ಎಳೆಯ ವಯಸ್ಸಿನಲ್ಲಿಯೇ ಅವರಿಗೆ ಅಗಣಿತ ವಿದ್ವತ್ತು ಪ್ರಾಪ್ತವಾಗಿತ್ತು. ಹೇಳಬೇಕೆಂದರೆ ಅವರ ಇತಿಹಾಸ ನೋಡಿದರೆ, ವಿದ್ವತ್ತು ಜನ್ಮಜಾತವಾಗಿ ಅವರಿಗೆ ಬಂದಿತ್ತು; ಲೌಕಿಕವಾಗಿ ಅದನ್ನು ಪ್ರಚುರಪಡಿಸಲು ನೆಪಕ್ಕೆ ಗುರು ಮುಖವೊಂದು ಬೇಕಾಗಿತ್ತು. ೫-೬ ವಯಸ್ಸಿನಲ್ಲೇ ವೇದಾಧ್ಯಯನದಲ್ಲಿ ನಿರತರಾದರು. ೯ ವರ್ಷದೊಳಗೆ ಸಕಲ ವೇದೋಪನಿಷತ್ತುಗಳು,ಪುರಾಣಗಳು, ಷದ್ದರ್ಶನಗಳು ಎಲ್ಲದರಲ್ಲೂ ಪಾರಂಗತರಾಗಿಬಿಟ್ಟಿದ್ದರು.

ರಾಜಪ್ರಭುತ್ವದ ಕಾಲದಲ್ಲಿ ಬಹುತೇಕ ರಾಜರುಗಳು ಸಂಸ್ಕೃತ ಭಾಷೆಯನ್ನು ಕಲಿತುಕೊಳ್ಳುತ್ತಿದ್ದರು; ತಕ್ಕಮಟ್ಟಿಗೆ ವೇದ,ಶಾಸ್ತ್ರಗಳ ಅಧ್ಯಯನವೂ ನಡೆದಿರುತ್ತಿತ್ತು. ಅವರಲ್ಲಿ ಕೆಲವರು ಸ್ವಯಂ ಪಾಂಡಿತ್ಯ ಉಳ್ಳವರಾಗಿದ್ದು ಜನಸಾಮಾನ್ಯರ ಜ್ಞಾನವೃದ್ಧಿಗಾಗಿ ಸಾಹಿತ್ಯಕ ಕೃತಿಗಳನ್ನು ರಚಿಸುತ್ತಿದ್ದರು. ಅಂತಹ ಸಾಂಸ್ಕೃತಿಕ ಪರಂಪರೆ ನಮ್ಮ ಮೈಸೂರು ಮಹಾರಾಜರುಗಳ ಆಳ್ವಿಕೆಯ ವರೆಗೂ ಹರಿದುಬಂದಿತ್ತು. ಅದಿರಲಿ.

ಪಾಂಡಿತ್ಯದಲ್ಲಿ ಸಹಜ ಸವ್ಯಸಾಚಿಯೆನಿಸಿದ ಶಂಕರರ ತೇಜಸ್ಸನ್ನೂ, ಘನಮಹಿಮೆಯನ್ನೂ ದೂರದಿಂದಲೇ ತಿಳಿದ ಹಲವು ಅರಸರು ಪಲ್ಲಕ್ಕಿ, ಛತ್ರ, ಚಾಮರಾದಿ ಗೌರವಗಳನ್ನು ಸಮರ್ಪಿಸಿ ತಮ್ಮಲ್ಲಿಗೆ ದಯಮಾಡಿಸಬೇಕೆಂದು ಸ್ವಾಗತಿಸುತ್ತಿದ್ದರು. ಶಂಕರರ ತವರು ಕಾಲಟಿಯ ಪ್ರದೇಶವನ್ನು ಆಳುತ್ತಿದ್ದ ಕೇರಳದ ರಾಜ ರಾಜಶೇಖರ, ಶಂಕರರು ತಮ್ಮಲ್ಲೇ ಇರಬೇಕೆಂದೂ ಏನು ಸೌಕರ್ಯ, ವ್ಯವಸ್ಥೆ, ಧನ-ಕನಕ ಕೇಳಿದರೂ ಒದಗಿಸುತ್ತೇನೆಂದೂ ಹೇಳಿದ್ದ.

ಮಿಥ್ಯಾ ಪ್ರಪಂಚದ ಜನರನ್ನು ಓಲೈಸುವ ಸಲುವಾಗಿ ಹುಟ್ಟಿದ ಜನ್ಮ ಶಂಕರರದ್ದಲ್ಲ. ಹೀಗಾಗಿ ಅವರು ಯಾವ ರಾಜ ಏನನ್ನೇ ಕೊಡಲು ಮುಂದೆ ಬಂದರೂ ನಯವಾಗಿಯೇ ತಿರಸ್ಕರಿಸಿದರು. ಅಂದಿನ ಅಖಂಡ ಭಾರತವನ್ನು ಮೂರು ಸಲ ಓಡಾಡಿದರು; ನೆನಪಿಡಿ ಬಾಲ ಸನ್ಯಾಸಿ, ಕಾಲ್ನಡಿಗೆಯಲ್ಲಿ, ಕಾಡುಮೇಡುಗಳುಳ್ಳ, ಗುಡ್ಡಬೆಟ್ಟಗಳುಳ್ಳ, ನದಿ ಕಣಿವೆಗಳುಳ್ಳ ಮಾರ್ಗದಲ್ಲಿ.

ಇಂದು ನಾವು ಯಾವುದೋ ರಾಜ ಕೊಟ್ಟ ಎಂಬ ಕತೆ ಕಟ್ಟಾದರೂ ಇಲ್ಲದ ಅಡ್ಡವೇಷಗಳನ್ನು ಬರೆದುಕೊಳ್ಳುತ್ತೇವೆ. ಹಾರ ತುರಾಯಿ, ಛತ್ರ, ಚಾಮರ, ಮಕರತೋರಣ, ಪಲ್ಲಕ್ಕಿ, ಕಿರೀಟ ಇತ್ಯಾದಿ ಎಷ್ಟಿದ್ದರೂ ನಮಗೆ ಸಾಲುವುದೇ ಇಲ್ಲ. ಸದ್ಯ ಸೀಟಿನಲ್ಲಿರುವ ನಮಗಂತೂ ಅವುಗಳನ್ನೆಲ್ಲ ಧರಿಸಿ ಹೊರಟಾಗ ಸುಂದರ ಮಹಿಳೆಯರಿಗೆ ಚಂದದ ಪೋಸು ಕೊಡುವಾಸೆ.

ನಮ್ಮ ಕತೆಗೆ ಸಾಹಿತ್ಯವೊದಗಿಸುವ ಜನ ಹೇಳಿದರೆಂದು ಕಾಳಿದಾಸನಿಂದ ಡಿವಿಜಿಯವರೆಗೆ ಎಲ್ಲರ ಕೃತಿಗಳನ್ನೂ ನಾವು ಬಳಸುತ್ತೇವೆ. ಸಂತ, ದಾರ್ಶನಿಕ ಮಹಾಕವಿ ಕಾಳಿದಾಸ ವೇಶ್ಯೆಯ ಮನೆಯಲ್ಲಿ ವಿಶ್ರಮಿಸುತ್ತಿದ್ದರೂ ಅವಳನ್ನೆಂದೂ ಕಾಮದ ಕಣ್ಣುಗಳಿಂದ ನೋಡಲೇ ಇಲ್ಲ. ಆಕೆ ಅದೆಷ್ಟೇ ಯತ್ನಿಸಿದರೂ ಕಾಳಿದಾಸ ಅವಳ ದೇಹಸೌಂದರ್ಯ ಒದಗಿಸಬಹುದಾದ ಅಲ್ಪತೃಪ್ತಿಗಾಗಿ ತಯಾರಾಗಲೇ ಇಲ್ಲ. ಆಕೆಯನ್ನು ತನ್ನ ಸಹೋದರಿಯಂತೆಯೇ ಕಂಡ.

ಜ್ಞಾಪಕ ಚಿತ್ರಶಾಲೆಯಲ್ಲಿ ತಮ್ಮ ಜೀವನದ ಹಲವು ಪ್ರಮುಖರ ವ್ಯಕ್ತಿತ್ವಗಳನ್ನು ಅಕ್ಷರಗಳಲ್ಲಿ ಚಿತ್ರಿಸಿದ ದಾರ್ಶನಿಕ ಕವಿ ಡಿವಿಜಿ, ಒಂದೆಡೆ ತಮ್ಮ ತಾತ [ಅಜ್ಜ-ತಂದೆಯ ತಂದೆ]ನನ್ನು ಪರಿಚಯಿಸುತ್ತಾರೆ. ತಮ್ಮ ತಾತನಿಗೆ ಎರಡು ಹೆಂಡಿರೆಂದೂ, ಕಟ್ಟಿಕೊಂಡವಳೊಬ್ಬಳು ಮತ್ತು ಇಟ್ಟುಕೊಂಡವಳೊಬ್ಬಳು ಎಂದೂ ಶಾರ್ಟ್ ಆಗಿ ತಿಳಿಸಿ, “ನಮಗ್ಯಾತಕ್ಕೆ ಅವೆಲ್ಲ; ಅವರಲ್ಲಿದ್ದ ಒಳ್ಳೆಯತನವನ್ನು ನಾವು ಅನುಸರಿಸಿಕೊಂಡರಾಯಿತು” ಎನ್ನುತ್ತಾರೆ.

ಬೆಂಗಳೂರಿನ ನಾಗರತ್ನಮ್ಮ ಎಂಬ ಹೆಸರಾಂತ ವೇಶ್ಯೆಗೆ ಇನ್ನೂ ವಯಸ್ಸಿರುವ ಕಾಲದಲ್ಲಿ ಡಿವಿಜಿ ಸ್ವತಃ ಒಮ್ಮೆ ಅವಳ ಮನೆಗೆ ಹೋಗಿದ್ದರು; ಮಲಗಲಿಕ್ಕಲ್ಲ-ಸಂದರ್ಶನ ಮಾಡಲಿಕ್ಕೆ. ಅನೇಕ ಗಂಡಸರ ತನುವನ್ನು ತಣಿಸಿದ ನಾಗರತ್ನಮ್ಮಳನ್ನು ಡಿವಿಜಿ ಬಯಸ ಬಹುದಿತ್ತು; ಯಾಕೆಂದರೆ ತೀರಾ ಪ್ರಾಯದಲ್ಲಿಯೇ ಹೆಂಡತಿ ಭಾಗೀರಥಮ್ಮನನ್ನು ಕಳೆದುಕೊಂಡಿದ್ದರು ಡಿವಿಜಿ. ಆದರೆ ಅವರ ಮನಸ್ಸು ಕಾಮಕ್ಕೆ ಫುಲ್ ಸ್ಟಾಪ್ ಹಾಕಿತ್ತು. ಗುಂಡಗಿದ್ದ ಗುಂಡಪ್ಪನವರು ಕಾಮಕೇಳಿಯಲ್ಲಿ ತೊಡಗಲು ಅನೇಕ ಅವಕಾಶಗಳಿದ್ದರೂ ಅವರು ತ್ರಿಕರಣ ಪೂರ್ವಕ ಬ್ರಹ್ಮಚರ್ಯವನ್ನು ಪಾಲಿಸಿದರು.

ಕನ್ನಡ ಸಾಹಿತ್ಯ ರಂಗದಲ್ಲಿ ನುಡಿದಂತೆಯೇ ನಡೆದ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ ಡಿವಿಜಿ. ನೆಂಟರ ಮನೆಯ ಸಮಾರಂಭಕ್ಕೆ, ಇರುವ ಒಂದೇ ಹರುಕು ಸೀರೆಯಲ್ಲಿ ಹೇಗೆ ಹೋಗಲಿ ಎಂದು ಯೋಚಿಸಿ. ಗಂಡನಿಗೆ ಬಡತನದ ನೋವು ತಾಗಬಾರದೆಂದು ನಿಜವಾದ ಕಾರಣ ತಿಳಿಸದೇ, ಯಾವುದೋ ಸಬೂಬು ಹೇಳಿ ನಿರಾಕರಿಸಿದ ಸಾಧ್ವಿ ಅವರ ಮಡದಿ. ಕಿತ್ತುತಿನ್ನುವ ಬಡತನವನ್ನು ಅನುಭವಿಸಿದ ಡಿವಿಜಿ ಬ್ರಿಟಿಷರ ಕಾಲದಲ್ಲಿ ಶ್ರೀಮಂತ ಶೇಕ್ ದಾರ್ ಕುಟುಂಬದಲ್ಲಿ ಜನಸಿದವರು.

ಸಿರಿತನ ಮತ್ತು ಬಡತನಗಳ ಮೇಲಾಟಗಳನ್ನು ಕಂಡುಂಡು ಹಣ್ಣಾದ ಜೀವ ಈ ಲೋಕಕ್ಕೆ ಕಗ್ಗವನ್ನೂ ಜೀವನಧರ್ಮಯೋಗವನ್ನೂ ಅನುಗ್ರಹಿಸಿತು. ತನಗೆ ಬರಬೇಕಾಗಿದ್ದ ಹಣವನ್ನೂ ಬಳಸದೇ ಬಿಟ್ಟ, ಮೈಸೂರು ಸಂಸ್ಥಾನದಿಂದ ನೀಡಲ್ಪಟ್ಟ ಚೆಕ್‍ಗಳನ್ನು ಎನ್ ಕ್ಯಾಶ್ ಮಾಡಿಸದೇ ಬಿಟ್ಟ ನಿರ್ಮೋಹಿ ಸಂತ. ಹೀಗಾಗಿಯೇ ಇಡೀ ಕರ್ನಾಟಕ ಇಂದಿಗೂ ಅವರನ್ನು ಸ್ಮರಿಸುತ್ತದೆ. ದಾರ್ಶನಿಕರೆಂದು ಗೌರವಿಸುತ್ತದೆ.

ಕಚ್ಚೆಹರುಕರಾದ ನಮಗೆ ಇವರೆಲ್ಲರ ಜೀವನಾದರ್ಶಗಳು ಕಣ್ಣಿಗೆ ಕಾಣಿಸುವುದಿಲ್ಲ. ಯಾರೋ ಏನನ್ನೋ ಬರೆದುಕೊಡುತ್ತಾರೆ; ಅದನ್ನೇ ನಾವು ಐಪ್ಯಾಡಿನಲ್ಲಿ ಹಾಕಿಕೊಂಡು ಓದುತ್ತೇವೆ. ಕೆಸರೊಳಗಿದ್ದೂ ಮೇಲೇಳುವ ಕಮಲ, ಮೇಲಿಂದ ನೀರನ್ನು ಹೀರದ ಕಮಲಪತ್ರ ನಮಗೆ ಕಾಣಿಸುವುದಿಲ್ಲ. ಒಬ್ಬ ಕಾಳಿದಾಸ, ಒಬ್ಬ ಡಿವಿಜಿ ಅನುಸರಿಸಿದ ಸಂತ ಜೀವನ, ನಿರ್ಮೋಹೀ ಜೀವನ ನಮ್ಮ ಯೋಚನೆಗೂ ನಿಲುಕಲಾರದ್ದು.

ಒಡೆಯನೆಂದೋ ಬಂದು ಕೇಳ್ವನದಕ್ಕುತ್ತರವ |
ಕೊಡಬೇಕು ತಾನೆನುವವೊಲು ಋಜತೆಯಿಂದ ||
ಒಡಲ ಜಾಣಿನ ಜೀವ ಶಕ್ತಿಗಳನೆಲ್ಲವನು |
ಮುಡುಪುಕೊಟ್ಟನು ಭರತ-ಮಂಕುತಿಮ್ಮ ||

ಭರತನ ವ್ಯಕ್ತಿತ್ವ, ಅವನಲ್ಲಿದ್ದ ಸತ್ಯ, ಕಾರ್ಯತತ್ಪರತೆ, ನೈತಿಕತೆ, ಜವಾಬ್ದಾರಿ, ಭಯ ಮೊದಲಾದ ಅಂಶಗಳನ್ನೆಲ್ಲ ಅದೆಷ್ಟು ಎಳೆ ಎಳೆಯಾಗಿ ಸೆರೆಹಿಡಿದಿದ್ದಾರೆ ಡಿವಿಜಿ. ಪ್ರಾಯಶಃ ಸಂತರ ಚಿಂತನೆ ಎಂದರೆ ಇಂತದ್ದೇ ಸಾತ್ವಿಕ ಮತ್ತು ಉದಾತ್ತ ಚಿಂತನೆ. ಇವುಗಳನ್ನು ಬಿಟ್ಟು ರೌಡೀರಾಜ್ಯಭಾರ ಮಾಡಲು ಹೊರಟ ಕಾವಿ ವೇಷದವನಿದ್ದರೆ ಅವನು ಸಂತನಲ್ಲ ಶೋಭರಾಜ.

ಆದಿಶಂಕರ, ಕಾಳಿದಾಸ ಮತ್ತು ಡಿವಿಜಿ ಈ ಮೂರೂ ಹೆಸರಿಗೆ ಮಸಿ ಹಚ್ಚಿದ್ದೇವೆ ನಾವು; ಯಾಕೆಂದರೆ ಅವರ ಹೆಸರು ಹೇಳುವ ಅರ್ಹತೆಯೂ ನಮಗಿಲ್ಲ. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಏನೇ ಬಂದರೂ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಪಟಾಲಮ್ಮಿನ ಕೆಲವರನ್ನು ಕಳಿಸಿ “ಇದೆಲ್ಲ ನಮ್ಮ ಸಂಸ್ಥಾನದ ಹೆಸರು ಹಾಳುಮಾಡುವ ಷಡ್ಯಂತ್ರ” ಎಂದು ಹೇಳಿಸುತ್ತೇವೆ ನಾವು.

ಉತ್ತಮ ಮಾರ್ಗದಲ್ಲಿ ನಡೆಯುವ ಸನ್ನಡತೆಯ ಸನ್ಯಾಸಿಯ ವಿರುದ್ಧ ಯಾರೂ ಯಾವಕಾಲಕ್ಕೂ ಯಾವ ಷಡ್ಯಂತ್ರವನ್ನೂ ಮಾಡುವುದಿಲ್ಲ. ’ಷಡ್ಯಂತ್ರ’ ಎಂಬುದು ದುಷ್ಟಬುದ್ಧಿಯ ಕಾಲದಲ್ಲಿ ಜನಿಸಿದ ರಾಜಕೀಯ ಪದ; ರಾಜಕಾರಣಿಗಳು ಬಳಸುವ ಪದ.

ಅದರಲ್ಲಂತೂ ನಮ್ಮ ಸಮಾಜದಲ್ಲಿ ಯಾರೊಬ್ಬರೂ ಸಹ ಯವುದೇ ಸನ್ಯಾಸಿಯ ವಿರುದ್ಧ ವಿನಾಕಾರಣ ತಿರುಗಿ ಬೀಳುವುದಿಲ್ಲ. ನಮ್ಮ ನಡತೆಗೆಟ್ಟ ನಡಾವಳಿಗಳನ್ನು ಕಂಡು ಬೇಸತ್ತ ಬಹುತೇಕ ಸಮಾಜ ಬಾಂಧವರು ಇಂದು ಒಳಗೊಳಗೇ ತಿರುಗಿಬಿದ್ದಿದ್ದಾರೆ. ಯಾವಕ್ಷಣದಲ್ಲಿ ನಾವು ಒಳಗೆ ಹೋಗುತ್ತೇವೋ ಎಂದು ನೋಡುತ್ತಿದ್ದಾರೆ. ಅವರೆಲ್ಲರ ಮನದಿಂಗಿತವೂ ಅದೇ ಆಗಿದೆ.

ನಮ್ಮ ಒತ್ತಾಯಕ್ಕೆ ಕಟ್ಟುಬಿದ್ದ ಬೆರಳೆಣಿಕೆಯ ಮುತ್ಸದ್ದಿಗಳಿಗೆ ನಮಗಿಂತ ನಮ್ಮ ಸೀಟಿನ ಗೌರವದ ಪ್ರಶ್ನೆ ಇದಾಗಿಬಿಟ್ಟಿದೆ; ನಾವು ಒಳಗೆ ಹೋದರೆ ಸೀಟಿಗೆ ಅವಮಾನವಾಗುತ್ತದೆ ಎಂಬ ಯೋಚನೆ ಅವರಲ್ಲಿದೆ. ನಮ್ಮನ್ನು ಕಳಿಸಿ ಸೀಟನ್ನು ಶುದ್ಧೀಕರಿಸಲು ಅವರು ಒಪ್ಪುತ್ತಿಲ್ಲ. ಇನ್ನು ನಾವೇ ಸೃಷ್ಟಿಸಿದ ಹಳದೀ ತಾಲಿಬಾನ್, ಜೊತೆಗೆ ಬುದ್ಧಿಮಾಂದ್ಯ ಭಕ್ತರು. ಇವರನ್ನುಳಿದು ಇನ್ಯಾರೂ ನಮ್ಮನ್ನು ಒಪ್ಪುತ್ತಿಲ್ಲ.

ಪತ್ರಿಕೆಗಳು ನಮ್ಮ ನಖಶಿಖಾಂತ ಎಲ್ಲಕಡೆಗೂ ಫೋಕಸ್ ಮಾಡಿ ಜನ್ಮ ಜಾಲಾಡಿವೆ. ಸಾಕಷ್ಟು ಹಗರಣಗಳು ಸಾರ್ವಜನಿಕ ಕಿವಿಗೆ ಒಂದೊಂದಾಗಿ ಕೇಳಿಬಂದಿವೆ. ಇನ್ನೂ ನಮಗೆ ಮರ್ಯಾದೆ ಇದೆ, ಸ್ಥಾನಮಾನ ಇದೆ, ಘನತೆ ಇದೆ ಎಂದು ಹೇಳುವುದು ನಮಗಿರುವ ದಾಂಡಿಗತನದ ದರ್ಪವಷ್ಟೆ.

ಒಪ್ಪಿತದ ರತಿಕ್ರೀಡೆಯೋ ಸಮ್ಮತಿಯ ಜಲಕ್ರೀಡೆಯೋ; ಅದಲ್ಲ ವಿಷಯ. ರತಿಕ್ರೀಡೆ ನಡೆದಿದ್ದು ಹೌದು ಎಂಬುದು ಸಾಬೀತಾಗಿದೆ. ಹೀಗಾಗಿ ನಾವು ಕಪಟ ಸನ್ಯಾಸಿ ಎಂಬುದೂ ಜನರಿಗೆ ತಿಳಿದುಹೋಗಿದೆ. ಇನ್ನೂ ನಾವು ಇಲ್ಲೇ ಇದ್ದರೆ ಮುಂದೊಂದು ದಿನ ಸಾರ್ವಜನಿಕರು ಕಲ್ಲು ಹೊಡೆದಾರು ಎಂಬ ಭಯವೂ ಇದೆ. ಆದರೂ ತಾಲಿಬಾನಿಗಳ ಪಹರೆ ಕಾವಲಿನಲ್ಲಿ ಅಷ್ಟಮಂಗಲ ಪ್ರಶ್ನೆಗಳನ್ನು ಕೇಳುತ್ತ, ನಾನಾವಿಧ ಡೊಂಬರಾಟಗಳನ್ನು ನಡೆಸುತ್ತ ಬಿಲ್ಡಪ್ ತೋರಿಸುತ್ತಿದ್ದೇವೆ ನಾವು.

ವೃತ್ತಿಯಲ್ಲಿ ವೇಶ್ಯೆಯಾಗಿದ್ದ ಬೆಂಗಳೂರಿನ ನಾಗರತ್ಮಮ್ಮ ಮಾನಸಿಕವಾಗಿ ತನ್ನ ದೇಹವನ್ನು ಎಂದೋ ಬಿಟ್ಟುಬಿಟ್ಟಿದ್ದಳು. ಸಂತ ತ್ಯಾಗರಾಜರ ಪುಣ್ಯಜೀವನಕ್ಕೆ ಮಾರುಹೋಗಿ, ಅವರ ಹಾಡುಗಳ ಮೂಲಕ ಭಗವಂತನನ್ನು ಆರಾಧಿಸುತ್ತ, ತಾನು ದುಡಿದ ಹಣವನ್ನೆಲ್ಲ ಸುರಿದು ತಮಿಳುನಾಡಿನಲ್ಲಿ ತ್ಯಾಗರಾಜರಿಗೊಂದು ಭವ್ಯ ಸ್ಮಾರಕ ಕಟ್ಟಿಸಿದಳು. ಇಂತಹ ವೇಶ್ಯೆಗಿರುವ ಮನೋನ್ನತಿ ನಮಗಿಲ್ಲ ಎಂದು ನಮಗೆ ಗೊತ್ತಾಗುವುದೇ ಇಲ್ಲ.

ನಮ್ಮ ಕಾಮಕೇಳಿ. ದರ್ಪ, ದುರಹಂಕಾರ, ಆಸ್ತಿ ಕಬಳಿಕೆ, ತಪಸ್ಸು ರಹಿತ ಜೀವನ, ಬೂಟಾಟಿಕೆಯ ಮಾತುಗಳು, ಬುದ್ಧಿ ಹೇಳಿದವರ ಮೇಲ ರೌಡಿಸಂ, ಕೆಟ್ಟ ರಾಜಕಾರಣ, ಒಡೆದಾಳುವ ಅನೀತಿ, ಪಾಪದ ಹಣಸಂಗ್ರಹ, ಪರಂಪರೆಗೆ ವಿದೋಧವಾದ, ಯತಿಧರ್ಮಕ್ಕೆ ನಿಷಿದ್ಧವಾದ ನಡಾವಳಿಗಳು, ಐಶಾರಾಮೀ ಜೀವನ ಇದನ್ನೆಲ್ಲ ಕಂಡ ಭಕ್ತರು ನಿಜವಾಗಿಯೂ ಕೆಲವು ವರ್ಷಗಳಿಂದ ಧರ್ಮಸಂಕಟದಲ್ಲಿ ಬಿದ್ದಿದ್ದಾರೆ; ಧರ್ಮಸಂಕಟಕ್ಕೆ ಪರಿಹಾರೋಪಾಯಗಳನ್ನು ಹೇಳಬೇಕಾದ ಜಾಗದಲ್ಲಿದ್ದ ನಾವೇ ಅವರನ್ನು ಧರ್ಮಸಂಕಟದಲ್ಲಿ ಇರಿಸಿದ್ದೇವೆ.

ಬತ್ತಿಯ ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದಂತೆ, ನಮ್ಮ ಗತಿಯೂ ಹಾಗೆಯೋ ಎಂಬ ಅನುಮಾನದಲ್ಲೇ ಮುಂದಿನ ಜಲಸ್ತಂಭನಕ್ಕೆ ರೆಡಿಯಾಗುತ್ತಿದ್ದೇವೆ ನಾವು. ಯಾರಲ್ಲಿ? ಸಂಜಯ………… ”

Thumari Ramachandra

source: https://www.facebook.com/groups/1499395003680065/permalink/1626177201001844/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s