ಕ್ಷೌರಿಕ ಕಿತ್ತೆದ್ದು ಓಡಿದ ಕಥಾಪ್ರಸಂಗ

ಕ್ಷೌರಿಕ ಕಿತ್ತೆದ್ದು ಓಡಿದ ಕಥಾಪ್ರಸಂಗ

“ನಾವು ಎಲ್ಲೇ ಹೋಗುವುದಾದರೂ ಸಾಕಿಕೊಂಡ 20-25 ಹಳದೀ ತಾಲಿಬಾನ್ ಬೇಟೆ ನಾಯಿಗಳು ನಮ್ಮನ್ನು ಎಸ್ಕಾರ್ಟ್ ಮಾಡುತ್ತವೆ. ನಾವು ಎಲ್ಲೇ ಇದ್ದರೂ ಅಲ್ಲಿ ಪಾಳಿಯಲ್ಲಿ ಪಹರೆ ನಡೆಸುವಂತೆ ನಾವು ಅಪ್ಪಣೆ ವಿಧಿಸಿದ್ದೇವೆ. ಇದು ಹೆಚ್ಚು-ಕಮ್ಮಿ ಕಳೆದ ಎಂಟತ್ತು ತಿಂಗಳಿಂದ ಜಾರಿಯಲ್ಲಿದೆ.

ಹಳದೀ ತಾಲಿಬಾನ್ ಮುಖಂಡರಿಗೆ ನಾವು ಒಳಗೆ ಹೋದರೆ ಎಂಬ ಹೆದರಿಕೆ ಇದೆ. ಯಾಕೆಂದರೆ ನಾವು ಒಳಗೆ ಹೋದರೆ ಹಲವರ ಬಣ್ಣ ಬಯಲಾಗುತ್ತದೆ. ಹಲವರ ಹೆಸರುಗಳನ್ನು ನಾವು ಅಲ್ಲಿ ನೀಡುತ್ತೇವೆ. ಅವರೆಲ್ಲರೂ ನಮ್ಮ ಜೊತೆಗೇ ಮುದ್ದೆ ಮುರಿಯಲು ಕೆಲವು ದಿನಗಳವರೆಗಾದರೂ ಸಹಕಾರ ಕೊಡುವಂತಾಗುತ್ತದೆ.

ಆರಂಭದಿಂದ ನಾವು ಅವರನ್ನೆಲ್ಲ ತಯಾರು ಮಾಡಿದ್ದೇ ಹಾಗೆ. ನಾವೆಲ್ಲೇ ಹೋದರೂ ಅವರು ನಮ್ಮನ್ನು ಬಿಡುವಂತಿರಬಾರದು , ನಾವೇ ಇಷ್ಟಪಟ್ಟು ಅವರನ್ನೆಲ್ಲ ಯಾಮಾರಿಸಿ ಬೇರೆ ದೇಶಕ್ಕೆ ಹೋದರೆ ಮಾತ್ರ ಪ್ರಶ್ನೆ ಬೇರೆ ಇತ್ತು. ಈಗ ನಾವು ಹೋಗುವಂತಿಲ್ಲ. ಹೀಗಾಗಿ ನಾವು ಹಳದೀ ತಾಲಿಬಾನನ್ನು ಇನ್ನಷ್ಟು ಸ್ಟ್ರಾಂಗ್ ಮಾಡಿದ್ದೇವೆ. ಕೊಚ್ಚು ಅಂದರೆ ಕೊಚ್ಚಬೇಕು, ಕಡಿ ಅಂದರೆ ಕಡಿಯಬೇಕು, ಬಹಿಷ್ಕರಿಸಿ ಅಂದರೆ ಬಹಿಷ್ಕರಿಸಬೇಕು, ಏಕಾಂತ ಅಂದರೆ ಏಕಾಂತಕ್ಕೆ ಅನುಕೂಲ ಕಲ್ಪಿಸಿ ಬೇಕಾದವರನ್ನು ಪುಸಲಾಯಿಸಿ ಕರೆತಂದು ಒಪ್ಪಿಸಬೇಕು.

ಹಳದೀ ತಾಲಿಬಾನಿನಲ್ಲಿ ನಮ್ಮಂತೆಯೇ ಕಚ್ಚೆ ಹರುಕರೂ ಇರುವುದನ್ನು ನಾವು ಬಲ್ಲೆವು ಮತ್ತು ಅದನ್ನು ಈ ಹಿಂದೆ ನಿಮಗೆಲ್ಲ ಹೇಳಿದ್ದೆವು. ನಮ್ಮ ಶೊಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನದ ಹೆಸರಿನಲ್ಲಿ ಅವರು ನೂರೆಂಟು ವಿಧಗಳ ಪೂಜೆ ಮಾಡಿಸುವುದಕ್ಕೆ, ಸೇವಾ ವಿನ್ಯೋಗಕ್ಕೆ ಅಂತ ವಸೂಲಿಗೆ ಇಳಿಯುತ್ತಾರಲ್ಲಾ ಅದರಲ್ಲಿ ಎಷ್ಟನ್ನು ತಾವಿಟ್ಟುಕೊಂಡರು ಮತ್ತು ಎಷ್ಟನ್ನು ಸಂಸ್ಥಾನಕ್ಕೆ ಕೊಟ್ಟರು ಎಂದು ನಾವೆಂದೂ ಕೇಳಿದ್ದಿಲ್ಲ, ಕೇಳುವುದೂ ಇಲ್ಲ. ಡೂಪ್ಲಿಕೇಟ್ ರಸೀದಿ ಮಾಡಿ ಕೊಟ್ಟರೂ ಸಹ ಕೇಳುವುದಿಲ್ಲ.

ಹಾಗೆ ವಸೂಲಿಗೆ ಇಳಿದವರೇ ತಮ್ಮ ಹಿತರಕ್ಷಣೆಗಾಗಿ ಒಂದಷ್ಟು ಭಾಗವನ್ನು ನಮ್ಮ ಸಂಸ್ಥಾನಕ್ಕೆ ಕೊಟ್ಟೇ ಕೊಡುತ್ತಾರೆ. ಮಿಕ್ಕಿದ್ದನ್ನು ಇಟ್ಟುಕೊಂಡು ಹಾಯಾಗಿ ಜೀವನ ಸಾಗಿಸುತ್ತಿದ್ದಾರೆ. ಸಂಸ್ಥಾನಕ್ಕೆ ಅರೆಕಾಲಿಕ ಅಥವಾ ತಾತ್ಕಾಲಿಕ ಸೇವೆ ಸಲ್ಲಿಸಿದವರೆಲ್ಲ ಹೊಸ ಮನೆಗಳನ್ನು ಕಟ್ಟಿಸಿದ್ದಾರೆ, ಕುತ್ತಿಗೆಗೆ ಮತ್ತು ಕೈಗೆ ಬಂಗಾರದ ಹಗ್ಗಗಳನ್ನು ಮಾಡಿಸಿಕೊಂಡಿದ್ದಾರೆ. ಎರಡು ಮೂರು ಹಲಗೆ ಮೊಬೈಲುಗಳನ್ನು ಇಟ್ಟುಕೊಂಡಿದ್ದಾರೆ. ಅದಕ್ಕೆಲ್ಲ ನಮ್ಮ ತಕರಾರಿಲ್ಲ.

ಯಾರೋ ನಮ್ಮಲ್ಲಿ ನಿಮ್ಮ ಪರಿಚಾರಕರು ಸರಿಯಿಲ್ಲ ಎಂದು ಆಪಾದಿಸಿದಾಗ “ನಮ್ಮಲ್ಲಿಗೆ ಸರಿ ಇರುವವರು ಸೇವೆಗೆ ಬರುವುದಿಲ್ಲ. ನಾವು ಗೊತ್ತಿದ್ದೂ ಅಂತವರನ್ನೇ ಇಟ್ಟುಕೊಳ್ತೇವೆ. ಅವರನ್ನು ಕಳಿಸಿದರೆ ನಮಗಿಲ್ಲಿ ಯಾರು ಬರ್ತಾರೆ? ನೀವು ಬರ್ತೀರಾ?” ಎಂದು ಕೇಳಿಬಿಟ್ಟೆವು. ಆ ಮನುಷ್ಯ ಮರುಮಾತಾಡಲಿಲ್ಲ. ಹೀಗಾಗಿ ನಮ್ಮ ಜೊತೆಗಿರುವವರೆಲ್ಲ ಅಂತವರೇ ಗೊತ್ತಾಯ್ತಲ್ಲ?

ಕಾಂಚಾಣದ ರುಚಿ ಕಂಡವರು ಕಾಲಿನಿಂದ ಮುಸುಡಿ, ತಲೆಯವರೆಗಿನ ನಮ್ಮ ಛಾಯಾಚಿತ್ರಗಳನ್ನಿಟ್ಟುಕೊಂಡು ಆರಾಧಿಸುತ್ತಾರೆ. ಅವರಿಗೆ ನಿತ್ಯ ಕಾಂಚಾಣ ದಾಸೋಹ ನಡೆಸುತ್ತಿರುವ ನಮ್ಮನ್ನು ಬಿಡಲು ಸಾಧ್ಯವೇ? ಬಿಟ್ಟರೆ ಅವರಿಗೆ ಮುಂದಿನ ಆದಾಯಕ್ಕೆ ಎಲ್ಲಿಗೆ ಹೋಗಬೇಕು? ಯಾರ ಕೈಕೆಳಗೆ ಇಷ್ಟು ಸಲೀಸಾಗಿ ಮುಂಡಾಯಿಸುವ ಜಾಬ್ ಸಿಗುತ್ತದೆ? ಹೀಗಾಗಿ ಅವರಿಗೆ ನಾವು ಬೇಕು, ನಮಗೆ ಅವರು ಬೇಕು, ಈ ಚೋರ-ಚಾಂಡಾಲ ನಡುವಿನ ಕಾಮಿನಿ, ಕಾಂಚಾಣ ಬಾಂಧವ್ಯ ಅನನ್ಯ ಮತ್ತು ಸಾಮಾನ್ಯ ಭಕ್ರರಿಗೆ ಅನೂಹ್ಯ.

ತಿಂಗಳುಗಳ ಹಿಂದೆ ನಾವು ಮಂಗನಕಟ್ಟೆ ಗ್ರಾಮಕ್ಕೆ ಹೋಗಿದ್ದೆವಲ್ಲ. ನಾವು ಹೋಗಿದ್ದೇ ಬೇರೆ ಲೆಕ್ಕಾಚಾರಕ್ಕೆ. ಪ್ರಯೋಗಾಲಯದಲ್ಲಿ ನಮ್ಮ ವೀರ್ಯಾಣುವಿನ ಜೊತೆಗೆ ನಮ್ಮ ಕೆಳಗಿನ ಕೂದಲುಗಳೂ ಸಿಕ್ಕಿದ ಬಗ್ಗೆ ನಮಗೆ ಖಾತ್ರಿಯಾಗಿದೆ. ಮತ್ತು ವಿವರ ಪಡೆದುಕೊಂಡವರು ನಮ್ಮ ಅಂಗಾಂಗಗಳ ಸಂಪೂರ್ಣ ಚಹರೆಗಳನ್ನು ನಮ್ಮ ವಿರೋಧಿಗಳಿಂದ ಕೇಳಿ ಬರೆದುಕೊಂಡಿದ್ದಾರಂತೆ. ಹೀಗಾಗಿ ಏನು ಮಾಡುವುದು ಎಂದು ನಮ್ಮ ಸಂಸ್ಥಾನದ ಕಿಚನ್ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಚರ್ಚಿಸಿದ್ದೆವು.

ನಮ್ಮ ಕಿಚನ್ ಕ್ಯಾಬಿನೆಟ್ ನವರಿಗೆ ನಮ್ಮ ಅಷ್ಟೂ ವಿಷಯ ಗೊತ್ತಿದೆ. ಅದೇನೂ ಅಂತರಂಗವಲ್ಲ; ಅವರ ವಿಷಯಗಳೂ ನಮಗೆ ಗೊತ್ತಿವೆ. ಇಲ್ಲಿ ಹಣ-ಹೆಣ್ಣುಗಳನ್ನು ಹಂಚಿತಿನ್ನುತ್ತ ಬದುಕುವಂತ ವಹಿವಾಟು ಇರೋದು. ನಮ್ಮನ್ನವರು ಇಂದು ರಕ್ಷಿಸದಿದ್ದರೆ ನಾಳೆ ಅವರೂ ನಮ್ಮಂತೆಯೇ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಹೀಗಾಗಿ ನಮ್ಮನ್ನು ಅವರು ಸೇಫ್ ಗಾರ್ಡ್ ಮಾಡುತ್ತಾರೆ. ಇದರಲ್ಲಿ ಯಾರೋ ಒಂದಿಬ್ಬರು ಮಾತ್ರ ಚಟ ರಹಿತರು; ಅವರು ಆಗಾಗ ’ಸುವರ್ಣ ಮಂತ್ರಾಕ್ಷತೆ’ ತೆಗೆದುಕೊಂಡು ಸಹಾಯ ಮಾಡುತ್ತಾರೆ.

ಮಂಗನಕಟ್ಟೆ ಗ್ರಾಮಕ್ಕೆ ನಾವು ಹದಿನೈದಿಪ್ಪತ್ತು ’ಬೇಟೆ ನಾಯಿ’ಗಳೊಡನೆ ಹೋಗಿದ್ದೆವು. ಅಲ್ಲಿನ ನಮ್ಮ ಭಕ್ತರಲ್ಲಿ ಕೆಲವು ಜನರೂ ಸೇರಿದಂತೆ ಒಂದು ಸಭೆ ನಡೆಸಿದೆವು. ಅಲ್ಲಿಗೆ ಹತ್ತಿರದ ಕಗ್ಗಾಡಿನ ಜಂಬುನಾತ ಬಂಡೂರಿ ಎಂಬ ಕ್ಷೌರಿಕನನ್ನು ಕರೆಸಿದೆವು.

“ನೋಡಯ್ಯ, ಹಾವಾಡಿಗ ಸಂಸ್ಥಾನಧೀಶ್ವರರ ಎಲ್ಲಾ ಅಂಗಾಂಗಗಳ ಕೂದಲನ್ನೂ ತಾನು ತೆಗೆದಿದ್ದೇನೆ ಮತ್ತು ಅವರ ದೇಹದ ಸಂಪೂರ್ಣ ಚಹರೆ ತನಗೆ ಗೊತ್ತಿದೆ. ಈ ವಿಷಯವನ್ನು ತಿಳಿದು ………ಯವರು ತನ್ನನ್ನು ಸಂಪರ್ಕಿಸಿದರು. ’ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಸ್ವಲ್ಪ ಸಂಸ್ಥಾನಾಧೀಶ್ವರರ ಕೆಳಗೂದಲು ಕೊಡು ಮತ್ತು ಚಹರೆಗಳನ್ನು ಹೇಳು’ ಎಂದು ಕೇಳಿದರು. ತಾನು ಅದೇ ಪ್ರಕಾರ ಅವರಿಂದ ಹಣ ತೆಗೆದುಕೊಂಡು ಕೂದಲನ್ನು ಕೊಟ್ಟು ವಿವರಗಳನ್ನು ನೀಡಿದೆ ಎಂದು ಹೇಳಬೇಕು ನೀನು, ನಿನಗೆ ಕೇಳಿದಷ್ಟು ಹಣ ಕೊಡುತ್ತೇವೆ ನಾವು” ಎಂದೆವು.

ಜಂಬುನಾತ ಬಂಡೂರಿ ಹೆದರಿ, ಕುಳಿತಲ್ಲೇ ಮೈಯ್ಯೆಲ್ಲ ಬೆವರಿ, ಏನೂ ಉತ್ತರಿಸಲೂ ನಿಲ್ಲದೇ ಕಿತ್ತೆದ್ದು ಹಾರಿ ಹೋಗಿಬಿಟ್ಟ. ಹೀಗಾಗಿ ನಮ್ಮ ಅಂದಿನ ಆ ಪ್ರಯತ್ನ ನೆಗೆದುಬಿದ್ದು ಹೋಯಿತು. ಆದರೂ ನಮ್ಮ ಇಂತಾ ’ಸಾಹಸಗಳು’ ನಡೆಯುತ್ತಲೇ ಇವೆ. ತಪ್ಪಿಸಿಕೊಳ್ಳಲು ಏನು ಬೇಕೋ ಅದೆಲ್ಲವನ್ನೂ ತಯಾರಿಮಾಡಿಕೊಳ್ಳುತ್ತಿದ್ದೇವೆ ನಾವು. ನಡುವೆ ನಮಗೆ ಅವರು ಸಾಕಷ್ಟು ಸಮಯವನ್ನೂ ಒದಗಿಸಿದ್ದು ಬಹಳ ಉಪಕಾರವಾಗಿದೆ.

ಇನ್ನೊಂದು ಮಗ್ಗುಲಲ್ಲಿ ನಮ್ಮ ಸೇವೆಯಲ್ಲಿರುವ ಸಿಂಗಳೀಕಗಳಲ್ಲಿ ಯಾವುದಾದರೂ ಬಲಿಪಶುವಾಗುವುದಕ್ಕೆ ಸಿದ್ಧವಿದೆಯೇ ಎಂದೂ ನಾವು ಹುಡುಕುತ್ತಿದ್ದೇವೆ. “ಹಾವಾಡಿಗ ಸಂಸ್ಥಾನಾಧೀಶ್ವರಿಗೆ ಅನಾರೋಗ್ಯ ಬಾಧಿಸಿದ್ದಾಗ ಹಾಸಿಗೆಯಲ್ಲಿ ಡೈಪರ್ ಹಾಕುವ ಕೆಲಸ ನಾನೇ ಮಾಡುತ್ತಿದ್ದೆ. ಅವರ ಶರೀರಕ್ಕೆ ಸ್ಪಾಂಜ್ ಬಾತ್ ಒದಗಿಸುವಾಗ ಇಡೀ ಶರೀರವನ್ನು ನೋಡಿದ್ದೆ. ಇದನ್ನು ತಿಳಿದ …….ಯವರು ನನ್ನನ್ನು ಸಂಪರ್ಕಿಸಿ ’ಎಷ್ಟು ಹಣ ಬೇಕಾದರೂ ಕೊಡುತ್ತೇವೆ. ಸಂಸ್ಥಾನಾಧೀಶ್ವರರ ಒಂದೆರಡು ಕೆಳಗೂದಲು ಕೊಡು ಮತ್ತು ಚಹರೆಗಳನ್ನು ಹೇಳು’ ಎಂದು ಕೇಳಿದರು. ನಾನು ಅದೇ ಪ್ರಕಾರ ಅವರಿಂದ ಹಣ ತೆಗೆದುಕೊಂಡು ಕೂದಲನ್ನು ಕೊಟ್ಟು ವಿವರಗಳನ್ನು ನೀಡಿದೆ”ಎಂದು ಆತ ಹೇಳಿದರಾಯಿತು.

ಇಂದು ರಾಜಕಾರಣಿಗಳು ಎಂತೆಂತಹ ಕೇಸುಗಳಲ್ಲಿ ಬಡಪಾಯಿಗಳನ್ನು ಹೀಗೆ ಬಲಿಪಶುಗಳನ್ನಾಗಿ ಮಾಡುವುದಿಲ್ಲ?ಹಣಕೊಟ್ಟು ಅವರನ್ನು ಖರೀದಿಸುವುದಿಲ್ಲ? ನಾವೂ ಕೂಡ ಅದೇ ಹಾದಿಯಲ್ಲಿದ್ದೇವೆ. ಆದರೆ ಎದುರಿಗೆ ಎಂದಿನಂತೆ ಕೃತಕ ಮಂದಹಾಸದ ಕಾಮಚಂದಿರ ಮುಖವನ್ನು ತೋರಿಸುತ್ತ, ಢಾಂಬಿಕ ಪೂಜಾದಿಗಳನ್ನು ನಡೆಸುತ್ತ ಬುದ್ಧಿಮಾಂದ್ಯ ಭಕ್ತರಿಗೆ ಶ್ರೀಸಂಸ್ಥಾನವಾಗಿಯೇ ತೋರುವಂತೆ ನಡೆದುಕೊಳ್ಳುತ್ತಿದ್ದೇವೆ.

ಮೇಲಿನಿಂದ ಸುಂದರ ಮಾರ್ಬಲ್ ನೆಲಹಾಸಿನ ಕೆಳಭಾಗದ ನೆಲದಲ್ಲಿರುವ ಹೆಗ್ಗಣದ ದೋಬು, ಸುರಂಗಗಳನ್ನು ಬಲ್ಲವರಷ್ಟೇ ಬಲ್ಲರು. ಅಲ್ಲಿಯೇ ಮೇಲೆ ಆಡಂಬರದ ಧಾರ್ಮಿಕ ಕಾರ್ಯಗಳೆಲ್ಲವೂ ಕಾರ್ಪೊರೇಟ್ ಸ್ಟೈಲಿನಲ್ಲಿ ನಡೆಯುತ್ತವೆ; ತಾಲಿಬಾನಿಗಳು ವೇದಿಕೆಯಲ್ಲಿ ನಮ್ಮನ್ನು ಅತಿಮಾನುಷ ಶಕ್ತಿ ಎಂಬಂತೆ ಹೊಗಳುತ್ತಾರೆ. ಅವರ ಹೊಗಳಿಕೆಯ ಭಾಷಣಗಳನ್ನೂ ಪವಾಡದ ಕತೆಗಳನ್ನೂ ನೆಲದಲ್ಲಿ ಕುಳಿದು ಬಾಯ್ದೆರೆದು ಕೇಳುವ ಬುದ್ಧಿಮಾಂದ್ಯ ಭಕ್ತರು ತಾಲಿಬಾನಿಗಳ ದನಿಗೆ ದನಿಗೂಡಿಸಿ ಜೈಕಾರ ಕೂಗುತ್ತಾರೆ.

ಕೆಳಗೆ ಒಳ ಸುರಂಗಗಳಲ್ಲಿ ನಮ್ಮ ಖಾಸಗೀ ವಸಾಹತು ವ್ಯವಹಾರ ನಡೆಸುತ್ತದೆ ಎಂಬಂತೆ ನಾವಿದ್ದೇವೆ. “ನಾವಿದ್ದೇವೆ” ಗುಟ್ಟು ತಿಳಿಯಿತಲ್ಲ? ಹೀಗಾಗಿ ನಮಗೆ ಬೇಕಾದವರ ಜೊತೆ ನಾವಿದ್ದೇವೆ, ನಮ್ಮ ಜೊತೆ ಇರುವ ಅವರು ನಮಗಾಗಿ ಹೇಳುತ್ತಾರೆ “ನಾವಿದ್ದೇವೆ.”

ಹುಟ್ಟುವಾಗಿನ ಬುದ್ಧಿಮಾಂದ್ಯತೆ ಎಂಬುದೊಂದು ನ್ಯೂನತೆ. ಆದರೆ ಇಲ್ಲಿ ಹಾಗಲ್ಲ; ಸಮಾಜದಲ್ಲಿ ಬುದ್ಧಿಯಿದ್ದೂ ಬುದ್ಧಿಹೀನರಾದ ಹಲವರಿದ್ದಾರೆ. ಅವರನ್ನು ’ಬುದ್ಧಿಮಾಂದ್ಯರು’ ಎಂದರೇ ಸರಿ, ಅವರು ನಮ್ಮ ಒಂದೇ ಮುಖವನ್ನು ಮಾತ್ರ ಕಾಣಬಲ್ಲರು.

ಮಡದಿ ಚಂದ್ರಮತಿಯ ಮಾಂಗಲ್ಯ ಗಂಡ ಹರಿಶ್ಚಂದ್ರನಿಗೆ ಮಾತ್ರ ಹೇಗೆ ಕಾಣಿಸುತ್ತಿತ್ತೋ ಹಾಗೆಯೇ ನಮ್ಮ ಇನ್ನೊಂದು ಮುಖ ಹಳದೀ ತಾಲಿಬಾನಿಗೆ ಮಾತ್ರ ಕಾಣಿಸುತ್ತದೆ. ಅವರ ಕೆಳಹಂತದ ಯಾವ ’ಬುದ್ಧಿಮಾಂದ್ಯ’ಭಕ್ತನೂ ಅದನ್ನು ಕಾಣಲಾರ. ಹೀಗಾಗಿ ಇನ್ನೂ ಕೆಲವೆಡೆ ನಾವು ಬಿಲ್ಡಪ್ ತೋರಿಸುವ ಸಲುವಾಗಿ ಹೋಗುತ್ತೇವೆ; ನಮ್ಮ ಪಾದಪೂಜೆ, ಭಿಕ್ಷ, ಮಂಗಳಾರತಿ ಮತ್ತು ಏಕಾಂತ ಎಲ್ಲವೂ ನಡೆಯುತ್ತಲೇ ಇದೆ.

“ಉಮೇಶ್ ರೇಡ್ಡಿಯಂತಹ ವಿಕೃತ ಕಾಮಿಯನ್ನು ಸೀಟಿನ ಮೇಲೆ ಕೂರಿಸಿದಂತಾಗಿದೆ” ಎಂದು ಯಾರೋ ಹೇಳಿದರಂತೆ. ಅಂತಹ ಹೇಳಿಕೆಗಳೆಲ್ಲ ನಮಗೆ ನಾಟುವುದಿಲ್ಲ. ಹಸಿ ಹಸಿ ಸುಳ್ಳನ್ನೇ ಅಪ್ಪಟ ಸತ್ಯವೆಂದು ನಾವು ನಮ್ಮ ಬುದ್ಧಿಮಾಂದ್ಯ ಭಕ್ತರಿಗೆ ಪ್ರವಚನಮಾಡುತ್ತೇವೆ. ಅವರು ನಂಬಿದ್ದರು, ನಂಬಿದ್ದಾರೆ, ನಂಬುತ್ತಾರೆ. ಅವರು ಹಾಗೆಯೇ ನಂಬಿರುವವರೆಗೆ ನಮಗೆ ಬೇಕಾದಂತೆಯೇ ನಾವು ಬದುಕುತ್ತೇವೆ.”

Thumari Ramachandra

https://www.facebook.com/groups/1499395003680065/permalink/1625773684375529/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s