ತುಮರಿ ತುರ್ಯಾನಂದ ಮಹಾಸಂಸ್ಥಾನದಲ್ಲಿ ವಿದ್ವಾನ್ ಬಾವಯ್ಯನ ಹುದ್ದೆ ಖಾಲಿ ಇದೆ

ತುಮರಿ ತುರ್ಯಾನಂದ ಮಹಾಸಂಸ್ಥಾನದಲ್ಲಿ ವಿದ್ವಾನ್ ಬಾವಯ್ಯನ ಹುದ್ದೆ ಖಾಲಿ ಇದೆ

“ನಮ್ಮ ವಿರುದ್ಧ ಇಡೀ ಕರ್ನಾಟಕವೇ ಎದ್ದು ನಿಲ್ಲಲು ಸಜ್ಜಾಗುತ್ತಿದೆ ಎಂಬ ಸತ್ಯದ ಅರಿವು ನಮಗೀಗೀಗ ಆಗುತ್ತಿದೆ ಗೊತ್ತಾಯ್ತಲ್ಲ? ನಮ್ಮ ವಿರುದ್ಧ ಯಾರು ಎಷ್ಟೇ ಸುಳ್ಳು ಹೇಳಿದರೂ ನಾವು ನಿಜವನ್ನೇ ಹೇಳಬೇಕೆಂದು ತೀರ್ಮಾನಿಸಿದ್ದೇವೆ ಅರ್ಥವಾಯ್ತಲ್ಲ?

“ಸೀತೆಯ ಗಂಡನ ಮೇಲೆ ಆಣೆಮಾಡಿ ಹೇಳುತ್ತೇವೆ ಸತ್ಯವನ್ನೇ ಹೇಳುತ್ತೇವೆ, ಸತ್ಯವಲ್ಲದೆ ಬೇರೇನನ್ನೂ ಹೇಳುವುದಿಲ್ಲ, ನಾವು ಹೇಳುವುದೆಲ್ಲ ಸತ್ಯ” ಎಂದು ಕಟಕಟೆಯಲ್ಲಿ ನಿಂತು ಹೇಳುವ ಸಮಯ ಹತ್ತಿರ ಬಂದಿದೆ. ಹೀಗಾಗಿ ಸುಳ್ಳನ್ನೇ ಸತ್ಯವೆಂದು ಪಕ್ಕಾ ಮಾಡಬೇಕೆಂಬುದು ನಮ್ಮ ಆಲೋಚನೆ ಈಗ.

ನಮ್ಮನ್ನು ಅಂದರೆ ಜಗದ್ಗುರು ಶೋಭರಾಜಾಚಾರ್ಯ ಹಾವಾಡಿಗ ಮಹಾಸಂಸ್ಥಾನದ ಪೀಠಾಧೀಶ್ವರರನ್ನು ಇತ್ತೀಚೆಗೆ ಪಾದಪೂಜೆ ಮತ್ತು ಭಿಕ್ಷಕ್ಕೆ ಆಹ್ವಾನಿಸುವ ಜನವೂ ಕಮ್ಮಿ ಆಗಿದ್ದಾರೆ. ಅಲ್ಲಿ ನಾವು ಹೇಳುವ ಕಾಣಿಕೆ ರೇಟ್ ಎಲ್ಲ ಹಾರಿಹೋಗಿ ಈಗೊಂತರ ಫೂಟ್ ಪಾತ್ ನಲ್ಲಿ ನಡೆಯುವ ಬಾರ್ಗೇನ್ ವ್ಯಾಪಾರಕ್ಕೆ ಬಂದು ನಿಂತಿದೆ. ಎಲ್ಲಾದರೂ ಯಾರಾದರೂ ಕರೆಯುತ್ತಾರಾ ಎಂದು ನಾವು ಹುಡುಕುತ್ತಲೇ ಇದ್ದೇವೆ. ಆದರೂ ಕೆಲವು ಕುರಿಗಳು ಜನ್ಮದಲ್ಲೇ ಬದಲಾಗುವುದಿಲ್ಲ ಎಂಬುದಕ್ಕೆ ನಮ್ಮನ್ನು ಇನ್ನೂ ಪೂಜಿಸುತ್ತಿರುವುದೇ ಸಾಕ್ಷಿ.

ಜಗದ್ವಿಖ್ಯಾತಿ ಪಡೆಯಯುತ್ತಿದ್ದೇವೆಂದು ಸುದ್ದಿ ಹಬ್ಬಿದ್ದರಿಂದ ಸೀಟಿನಲ್ಲೇ ಇದ್ದರೆ ಅಮೆರಿಕದಲ್ಲೊಂದು ಬ್ರ್ಯಾಂಚ್ ತೆರೆಯೋಣ ಅಂದುಕೊಂಡಿದ್ದೆವು. ಅಲ್ಲಿನ ಮಹಿಳೆಯರ ಬಣ್ಣ ಆಹಹ ಅದೆಂತಹ ಬಣ್ಣ ಅಂತೀರಿ. ಜೊತೆಗೆ ಅನಿವಾಸಿ ಭಾರತೀಯರು ಹೇಗೂ ಇರ್ತಾರಲ್ಲ. ಅಲ್ಲಿಗೆ ಹೋದಾಗ ಏಕಾಂತ ಜೋರಾಗೇ ನಡೆಸಬಹುದಿತ್ತು ಎಂಬ ಆಲೋಚನೆಯೂ ಇತ್ತು. ಆದರೆ ನಡುವೆ ಹೀಗಾಗಿಬಿಡ್ತು.

ಎರಡನೇ ಐಡಿಯಾ ಇದ್ದಿದ್ದು-ಇದೆಲ್ಲ ಯಾಕೆ? ಯಾವ್ದಾದ್ರೂ ರಂಭೆಯನ್ನು ಕಟ್ಟಿಕೊಂಡು ಅಮೆರಿಕಕ್ಕೆ ಹಾರಿ, ಅಲ್ಲಿ ಹಾಯಾಗಿ ಇನ್ನಷ್ಟು ಸಖಿಯರನ್ನು ಮಾಡಿಕೊಂಡು ಇರೋಣ ಅನ್ನಿಸ್ತಿತ್ತು; ಯಾಕೆಂದರೆ ಪರ್ಸನಲ್ ಅಕೌಂಟಿನಲ್ಲಿ ಕೋಟಿಗಟ್ಟಲೆ ಹಣ ಇದೆಯಲ್ಲ, ಅದಕ್ಕೆ.

ಈಗ ನಮ್ಮ ಅವಸ್ಥೆ ನಾಯಿ ನರಿಗೆ ಕೊಟ್ಟರೂ ಬೇಡ ಅನ್ನೋ ಹಂತ ತಲುಪುತ್ತಿದೆ. ಒಂದುಕಡೆ ಶರೀರವನ್ನು ಅಮರಿಕೊಂಡು ಅಲ್ಲಾಡಿಸುತ್ತಿರುವ ಕಾಯಿಲೆಗಳು, ಇನ್ನೊಂದೆಡೆ ಸೀಟನ್ನೇ ಅಲ್ಲಾಡಿಸುತ್ತಿರುವ ಹುಲುಮಾನವ ವಿರೋಧಿಗಳು, ಮತ್ತೊಂದೆಡೆ ಹಿಡಿದು ಶಿಕ್ಷಿಸಲು ಯತ್ನಿಸುತ್ತಿರುವ ಮಾನವ ಲೋಕದ ಕಾನೂನು ತಜ್ಞರು, ಮಗದೊಂದೆಡೆ ಘೇರಾವ್ ಹಾಕಲು ರೆಡಿಯಾಗುತ್ತಿರುವ ಸಾರ್ವಜನಿಕರು ಯಾರಿಗ್ ಬೇಕು ಹೇಳಿ? ತಲೆ ಮರೆಸಿಕೊಂಡು ಓಡಿ ಹೋಗಿ, ಅನ್ಯಮತಕ್ಕೆ ಮತಾಂತರಗೊಂಡು, ಅಲ್ಲಿ ಸಿಗುವ ಸಖಿಯರೊಡನೆ ಸುಖವಾಗಿರೋಣವೇ? ಚಂದ್ರಶೇಖರ ಇಟ್ಲ ಬಿಡುತ್ತಿಲ್ಲ-ಕಾವಲಿಗೆ ಬೇಹುಗಾರಿಕೆ ಜನರನ್ನು ಇಟ್ಟಿದ್ದಾನೆ.

ಈ ನಡುವೆ ಅದ್ಯಾವುದೋ ಕವಳದ ಗೋಪಣ್ಣನಂತೆ. ಅವನ ಸಲಹೆಯ ಮೇರೆಗೆ ಆ ತುಮರಿ ರಾಮಚಂದ್ರ ಎಂಬಾತ ನಮಗೆ ಕಾಂಪೀಟ್ ಮಾಡುವುದಕ್ಕೆ ಮುಂದಾಗಿದ್ದಾನಂತೆ. ತಾನೇ ಏಕೆ ಕಾವಿ ಹಾಕಬಾರದು ಎಂದುಕೊಂಡು ’ತುಮರಿ ತುರ್ಯಾನಂದ’ ಎಂಬ ನಾಮದೊಂದಿಗೆ ’ತುಮರಿ ತುರ್ಯಾನಂದ ಮಹಾಸಂಸ್ಥಾನ’ವನ್ನು ಅಮೆರಿಕದಲ್ಲಿ ಆರಂಭಿಸಿಕೊಂಡು ಈ ಸರ್ತಿ ಚಾತುರ್ಮಾಸಕ್ಕೆ ಕೂರ್ತಾನಂತೆ.

ಚಾತುರ್ಮಾಸ ಕಾಲದಲ್ಲಿ ಬೆಲ್ಲಿ ಡಾನ್ಸ್, ಸಲ್ಸ, ಜಾಜ್, ಹಿಪ್ ಹಾಪ್, ಟ್ಯಾಪ್, ಯಾಂಗ್ ಕೋ, ಗಂಗ್ನಮ್ ಸ್ಟೈಲ್ [ಜೊತೆಗೆ ದೇಸೀ ಗಂಗಮ್ಮನ ಸ್ಟೈಲೂ ಪ್ರತ್ಯೇಕ ಇದೆ], ಬಿ-ಬಾಯಿಂಗ್, ಬ್ಯಾಲೆ, ಲೈನ್ ಮೊದಲಾದ ಜಗತ್ತಿನ ಎಲ್ಲ ವಿಧದ ನರ್ತನ ಕಾರ್ಯಕ್ರಮಗಳನ್ನು ದಿನಕ್ಕೊಂದರಂತೆ ಹಮ್ಮಿಕೊಳ್ಳುತ್ತಾನಂತೆ. ಜಗತ್ತಿನ ವಿವಿಧ ದೇಶಗಳ ರಮಣಿಯರು, ಅವರ ಹೊಕ್ಕುಳು, ನಿತಂಬ ….ಇನ್ನೂ ಏನೇನೋ ನೆನೆಸಿಕೊಂಡರೆ ಬಾಯಲ್ಲಿ ನೀರೂರುತ್ತದೆ ನಮಗೆ. ವಾಸ್ತವವಾಗಿ ಇದನ್ನೆಲ್ಲ ನಾವು ಮುಂದಿನ ಚಾತುರ್ಮಾಸಗಳಲ್ಲಿ ನಡೆಸಬೇಕೆಂದಿದ್ದೆವು. ಆದರೆ ಆ ತುಮರಿ ನಮಗೇ ಟಾಂಗ್ ಕೊಡುತ್ತಿದ್ದಾನೆ ನೋಡಿ.

ಯಾಕೆ ಸನ್ಯಾಸಿ ಆಗ್ತೀಯ ಅಂತ ಕೇಳಿದ್ದಕ್ಕೆ, “ಅದಕ್ಕೆ ಯಾವುದೇ ಪರಿಶ್ರಮವಾಗಲೀ, ಸ್ಪರ್ಧಾತ್ಮಕ ಪರೀಕ್ಷೆಗಳಾಗಲೀ ಇಲ್ಲ, ಎಸ್.ಎಸ್.ಎಲ್.ಸಿ ಫೇಲಾಗಿದ್ದರೂ ಆಗಬಹುದು, ಹೈಸ್ಕೂಲ್ ಮೆಟ್ಟಿಲು ಹತ್ತದವನಾದರೂ ಆಗಬಹುದು, ವೇದ ಉಪನಿಷತ್ತು ಶಾಸ್ತ್ರಗಳೆನ್ನೆಲ್ಲ ಓದಿದ್ದೇನೆ ಎಂದು ಕತೆ ಕಟ್ಟಿದರಾಯ್ತು, ಜಾತಕ ಕೇಳಿದರೆ ನಮಗೆ ಬೇಕಾದ ಹಾಗೆ ಬರೆಸಿಕೊಟ್ಟರಾಯ್ತು.

ಯಾವ್ದಾದ್ರೂ ಪರಂಪರೆ ಸೀಟು ಬೇಕಂದ್ರೆ ಅದರ ಭಕ್ತರ ಕಾಲು ಹಿಡಿದು, ಮುಖಂಡರ ಜೊತೆ ಸ್ವಲ್ಪ ರಾಜಕೀಯ ಮಾಡಿದ್ರೆ ಆಯ್ತು. ಸತ್ಯಾನಂದನಂತೆ ಪರಂಪರೆ ರಹಿತವಾದರೆ ಅದಕ್ಕೆ ಹೇಳೋರಿಲ್ಲ ಕೇಳೋರಿಲ್ಲ, ಬರೋರೆಲ್ಲ ಭಕ್ತರೇ. ಹೊರಗೆ ಕಾಣಿಸಿಕೊಳ್ಳುವಾಗ ಕಾವಿ ಹಾಕಿಕೊಂಡರಾಯ್ತು; ಒಳಗೆ ಏನ್ಮಾಡ್ಕೋತೀವೋ ಅದು ನಮಗೇ ಬಿಟ್ಟಿದ್ದು.

ಭಾಷಣ ಚೆನ್ನಾಗಿ ಬಿಗಿಯೋದಕ್ಕೆ ಕಲಿತುಕೊಂಡರೆ ಸರಿ. ಹೇಳಬೆಕ್ಕಾದ್ದೆಲ್ಲ ಸತ್ಯವೇ ಆಗಿರಬೇಕೆಂದೇನಿಲ್ಲ, ಸಮಯ, ಸನ್ನಿವೇಶ ಮತ್ತು ಅನುಕೂಲ ನೋಡಿಕೊಂಡು ಯಾವ ಕತೆಯನ್ನಾದರೂ ಕಟ್ಟಿ ಹೇಳಬಹುದು. ಭಕ್ತರು ಮಳ್ಳು ಬೀಳ್ತಾರೆ. ಹಾರ, ತುರಾಯಿ, ಕಾಣಿಕೆ ಎಲ್ಲವೂ ಬರ್ತದೆ. ಪಾದಪೂಜೆ ಮಾಡ್ತಾರೆ, ಗುರು ಭಿಕ್ಷ ಅಂತ ಮಾಡ್ತಾರೆ.

ಸ್ಥಳೀಯ ರಾಜಕಾರಣಿಗಳ ಸಹವಾಸ ಬೆಳೆಸಿಕೊಂಡು ಅವರ ಕಪ್ಪು ಹಣವನ್ನು ಸೇಫಾಗಿ ಇಟ್ಕೋಬಹುದು. ನಮಗೆ ಬೇಕಾದ ಕೆಲಸನೆಲ್ಲ ಅವರನ್ನು ಹಿಡಿದು ಮಾಡಿಸ್ಕೊಳ್ಳಬಹುದು. ಇದಕ್ಕೆಲ್ಲ ಏನ್ ಐ.ಎ.ಎಸ್ ಓದಬೇಕೇ? ಎಂಜಿನೀಯರಿಂಗ್ ಪಾಸಾಗಬೇಕೆ? ಇದರಷ್ಟು ಸಲೀಸ್ ಧಂದೆ ಬೇರಾವುದೂ ಇಲ್ಲ. ಕೋಟಿಗಟ್ಟಲೆ ಆದಾಯ.

ಪಾಪದ ಹೈಕ್ಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಜಾಬ್ ಹಿಡಿದು ಜೀವಮಾನವಿಡೀ ದುಡದ್ರೂ ಕೋಟಿಗಳಲ್ಲಿ ಎಣಿಸೋದು ಕಷ್ಟ. ಹೀಗಿದ್ದಾಗ ಯಾವುದು ಮೇಲು? ಆ ಕಾರಣದಿಂದ ಇರುವ ಜಾಬ್ ಬಿಟ್ಟು ಕಾವಿ ತೊಡಲು ಮನಸ್ಸಾಗಿದೆ” ಎಂದು ಹೇಳಿಕೆ ಕೊಟ್ಟಿದ್ದಾನಂತೆ ತುಮರಿ.

ನಮ್ಮಲ್ಲಿ ಕುಲಪತಿ ಬಾವಯ್ಯ ಇರುವ ಹಾಗೆ ಭಾವೀ ’ತುಮರಿ ತುರ್ಯಾನಂದ ಮಹಾಸಂಸ್ಥಾನ’ದಲ್ಲಿ ಬಾವಯ್ಯನ ಹುದ್ದೆ ಖಾಲಿ ಇದೆಯಂತೆ. ಬಾವಯ್ಯನ ಹುದ್ದೆ ಎಂದರೆ ನಿಮಗೆ ಗೊತ್ತಾಗ್ತದಲ್ಲ, ಬಾವಯ್ಯ ಅಂದರೆ ನವನವೀನ ಯೋಜನೆಗಳನ್ನು ಹಮ್ಮಿಕೊಂಡು, ಬರುವ ಆಸ್ತಿಕ ಭಕ್ತರ ಬೋಳಿಗೆ ಎಣ್ಣೆ ಹಚ್ಚಿ, ಅವರ ಒಳ ಉಡುಪು ಕಿತ್ತೋಗುವವರೆಗೂ ಅವರನ್ನು ಆರ್ಥಿಕವಾಗಿ ಸುಲಿಯುವವರು ಎಂದರ್ಥ.

ಹೊರನೋಟಕ್ಕೆ ಬಾವಯ್ಯನ ಹುದ್ದೆಯವರು ಸಂಸ್ಥಾನದ ಮಹಾ ಘನಪಾಠಿಗಳು, ಪಂಡಿತ ವರೇಣ್ಯರು ಮತ್ತು ಮಹಾಭಕ್ತರು. ವೇದಿಕೆಯಲ್ಲಿ ಮಹಾಸಂಸ್ಥಾನದವರು ಸೀಟಿನಲ್ಲಿ ಆಸೀನರಾದಾಗ, ಮಹಾಸಂಸ್ಥಾನದವರ ಮೇಲೆ ಎಂಜಲು ಹನಿ ಹಾರಿಬೀಳದಂತೆ ಬಾಯಿಗೆ ಬಟ್ಟೆ ಅಡ್ಡಹಿಡಿದುಕೊಂಡು ಹತ್ತಿರದಿಂದ ಮಾತನಾಡುವವರು. ಒಳಗೆ ಅವರ ವ್ಯವಹಾರವೇ ಬೇರೆ. ಬೀದಿ ನಾಯಿಗೆ ಒದೆದ ಹಾಗೆ ಒದೆಯುವ ಬಾವಯ್ಯಂದಿರೂ ಇರುತ್ತಾರೆ ಬಿಡಿ. ಅದೊಂದು ಖಾಸಗಿ ಜಾಯಿಂಟ್ ಅಕೌಂಟ್ ಹುದ್ದೆ. ಇಂತದ್ದೊಂದು ಅಸಿಸ್ಟೆಂಟ್ ಹುದ್ದೆಗೆ ತುಮರಿಗೆ ಇನ್ನೂ ಯಾರೂ ಸಿಗದೇ ಹುಡುಕಾಟದಲ್ಲಿದ್ದಾನೆ ಎಂದು ಸುದ್ದಿ ಬಂದಿದೆ.

ಅಂತೂ ನಮ್ಮನ್ನು ನೋಡಿದ ಅನೇಕ ಕಚ್ಚೆ ಹರುಕರು ಈಗ ಕಾವಿ ತೊಡಲು ಮುಂದಾಗಿದ್ದಾರೆ ಬಿಡಿ. ತುಮರಿ ಕಚ್ಚೆಹರುಕನಲ್ಲ ಅಂತ ನಮ್ಮ ಭಾತ್ಮೀದಾರರು ಹೇಳಿದ್ದಾರೆ; ಆದರೆ ತಾನೂ ಏಕೆ ಸಂಸ್ಥಾನ ಮಾಡಿತೋರಿಸಬಾರದು ಎಂಬ ಹಠದಿಂದ ಸ್ನೇಹಿತ ಕವಳದ ಗೋಪಣ್ಣನ ಜೊತೆ ಸೇರಿ ಈ ಕೆಲಸಕ್ಕೆ ಮುಂದಾಗಿದ್ದಾನಂತೆ ಎಂದು ಕೇಳಿದ್ದೇವೆ. ತುಮರಿಯೂ ನಮ್ಮ ಹಾಗೆ ಕಚ್ಚೆಹರುಕನೇ ಅಂತ ಕತೆ ಕಟ್ಟಿ ಅವನನ್ನೂ ನಮ್ಮ ಸಾಲಿಗೆ ಸೇರಿಸಿಬಿಟ್ಟರಾಯ್ತು ಬಿಡಿ.

ಯಾಕೆ ಹಾಗೆ ನೋಡ್ತೀರಿ? ಈಗ ನಾವು ಈ ಹಿಂದೆ ನಮ್ಮ ವಿರುದ್ಧ ತಿರುಗಿಬಿದ್ದ ಮಹಿಳೆಯರ ಚಾರಿತ್ರ್ಯವೇ ಸರಿ ಇಲ್ಲ ಎಂದು ಕತೆ ಕಟ್ಟಲಿಲ್ಲವೇ? ನಾವೇ ದೇವರು ಆಂತ ನಂಬಿಸಿ, ಅಂತಹ ಮಹಿಳೆಯರ ಚಾರಿತ್ರ್ಯ ಹರಣ ಮಾಡಿದವರೇ ನಾವು; ತಪ್ಪು ನಮ್ಮದೇ ಇದ್ದರೂ “ನಾವು ಯಾವುದೇ ತಪ್ಪು ಮಾಡಿಲ್ಲ. ನಾವು ದೋಷಮುಕ್ತರಾಗಿ ಹೊರಬರುತ್ತೇವೆ. ತಪ್ಪು ನಮ್ಮ ವಿರೋಧಿಗಳದ್ದೇ. ಅವರೆಲ್ಲ ಚಾರಿತ್ರ್ಯ ಹೀನರು” ಎಂದು ಜನರನ್ನು ನಂಬಿಸಬೇಕೆಂಬುದು ನಮ್ಮ ಇಚ್ಛೆ.”

thumari

Thumari Ramachandra

source: https://www.facebook.com/groups/1499395003680065/permalink/1625302351089329/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s