ಅಕ್ಕಯ್ಯಂದಿರು ಬಾವಯ್ಯನ ಪೂಜೆ ಮಾಡಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ.

ಅಕ್ಕಯ್ಯಂದಿರು ಬಾವಯ್ಯನ ಪೂಜೆ ಮಾಡಲು ಅವನನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ.

“ಗುರುಮಂದಿರದಲ್ಲಿ ಸದಾ ಏನಾದರೂ ಚಟುವಟಿಕೆಗಳು ನಡೆಯುತ್ತಿರಬೇಕೆಂಬ ಭಾವನೆ ಗುರುಭಕ್ತರಲ್ಲಿರುತ್ತದೆ. ಆದರೆ ನಮ್ಮಲ್ಲಿ ಅದು ಆಧ್ಯಾತ್ಮಿಕ ಚಟುವಟಿಕೆಗೇ ಮೀಸಲಾಗಿರಬೇಕೆಂದಿಲ್ಲ. ನಮ್ಮ ಲೈನಿನಲ್ಲಿರುವ ಕೆಲವರು ಪಂಚಾಗ್ನಿ ತಪಸ್ಸನ್ನು ಆಚರಿಸಿ ಜಗತ್ತಿನ ಕಣ್ತೆರೆಸಿದರು.

ಅಂತದ್ದೇನಾದರೂ ಮಾಡಿದರೆ ಜನ ಬರ್ತಾರೆ ಐವತ್ತು ಸಾವಿರಕ್ಕೂ ಅಧಿಕ ಹಣ ಕೊಟ್ಟು ಸೇವೆ ಮಾಡ್ತಾರೆ ಅಂತ ನಮ್ಮ ಬಾವಯ್ಯ ಹೇಳಿದ. ಈ ಜಗತ್ತೇ ಹಾಗೆ ಕಣ್ರೀ….ನೀವು ಎಷ್ಟೇ ಕುಲಗೆಟ್ಟು ಹೋಗಿದ್ರೂ ಒಂದಷ್ಟು ಜನ ನಿಮಗೆ ಜೈಕಾರ ಹಾಕ್ತಾನೇ ಇರ್ತಾರೆ. ಅವರದು ಕುರುಡು ಅಭಿಮಾನ.

ನಾವು ಇದನ್ನೆಲ್ಲ ತಿಳ್ಕೊಳ್ಳೋದಕ್ಕೆ ಪಿಜಿ ಡಿಗ್ರಿ ಪಡೆದವರಿಗಿಂತ ಎಕ್ಸ್ ಪರ್ಟು. ಜನರ ನಾಡಿಮಿಡಿತ ಅಂತಾರಲ್ಲ ಅದನ್ನು ನಾವು ಸದಾ ತಿಳಿದುಕೊಳ್ತೇವೆ. ಈಗ ಎಷ್ಟು ಜನ ನಮ್ಮ ವಿರುದ್ಧ ತುರುಗಿಬಿದ್ದಿದ್ದಾರೆ ಎಂಬುದೂ ಸಹ ನಮಗೆ ಗೊತ್ತು. ಆದರೂ ಎಲ್ಲರೂ ನಮ್ಮೊಂದಿಗೇ ಇದ್ದಾರೆ ಎಂದು ಬಿಂಬಿಸುವುದು ನಮ್ಮ ಆದ್ಯತೆ.

ಯಾವ ಯೋಜನೆಗೂ ಜನ ಬರದಾಗ ಮತ್ತು ಎಲ್ಲಾದರೂ ಜನರನ್ನು ಕರೆಸಿ ಸಮ್ಮೋಹನ ಗೊಳಿಸಬೇಕೆಂಬ ವಿಚಾರ ಬಂದಾಗ ನಮಗೆ ಬಾವಯ್ಯ ಸಲಹಾ ಮಂಡಳಿ ನೀಡಿದ ಸಲಹೆಯೇ ಬಾವಯ್ಯ ಪೂಜೆ. ನಾವು ಅಕ್ಕಯಂದಿರ ಪೂಜೆಯನ್ನು ನಿತ್ಯ ತ್ರಿಕಾಲದ ಕೈಂಕರ್ಯವಾಗಿ ಮಾಡಿಕೊಂಡಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ಹೇಳಲಾಗುವುದೇ? ಛೆ ಛೆ ನಮ್ಮ ಘತನೆಯೇನು? ಸ್ಥಾನಮಾನವೇನು?

ಯಾರನ್ನು ಹಿಡಿದು ಎಲ್ಲಿಗೆ ಹೋದರೆ ಅಲ್ಲಿ ಪ್ರಮುಖ ರಾಜಕಾರಣಿಗಳನ್ನು ಕಂಡು ಅವರಿಗೊಂದು ಶಾಲು ಹೊದೆಸಿದ ನೆಪದಲ್ಲಿ ಅದರಲ್ಲೇ ಒಂದಷ್ಟು ’ಮಂತ್ರಾಕ್ಷತೆ’ ಎಸೆದು ಸೆಂಟಿಮೆಂಟ್ಸ್ ಆರಂಭಿಸಬಹುದು ಎಂದು ಯೋಚಿಸುತ್ತೇವೆ ನಾವು. ಅಂದಹಾಗೆ ನಮ್ಮಲ್ಲಿ ಕೆಲವು ರಾಜಕಾರಣಿಗಳೂ ಬಡ್ಡಿರಹಿತ ಹಣ ಹೂಡಿಕೆ ಮಾಡಿದ್ದರು. ನಮ್ಮಲ್ಲಿ ಇಟ್ಟುಬಿಟ್ಟರೆ ಸ್ವಿಸ್ ಬ್ಯಾಂಕಿಗಿಂತ ಸೇಫು.

ಕಳೆದವರ್ಷ ಆನೆಮರಿಯ ಇಮ್ಮಡಿ ವಿಶ್ವೇಶ್ವರಯ್ಯನವರು ನಿದ್ದೆ ನಾಮಯ್ಯನನ್ನು ನಮಗೆ ಭೇಟಿ ಮಾಡಿಸಿದ್ದರು. ಅದಾದ ಎರಡು ಮೂರು ತಿಂಗಳಿಗೆ ಆ ಭೇಟಿ ಬಹಳ ಉಪಕಾರಕ್ಕೆ ಬಂತು ನಮಗೆ. ಆದರೆ ಅವರು ನಮ್ಮಲ್ಲಿ ಹಣಹೂಡಿಕೆ ಮಾಡಲಿಲ್ಲ. ಹಿಂದಿನ ಒಂದಿಬ್ಬರು ನಮ್ಮಲ್ಲಿ ವ್ಯವಹಾರ ಇರಿಸಿಕೊಂಡಿದ್ದರು. ಆಗಾಗ ನಮ್ಮಲ್ಲಿಗೆ ಬರುತ್ತಿದ್ದರು, ವೇದಿಕೆಯಲ್ಲಿ ಎಲ್ಲಿಲ್ಲದ ಭಕ್ತಿಯನ್ನು ಪ್ರದರ್ಶಿಸುತ್ತಿದ್ದರು-ಜನ ನೋಡಬೇಕಲ್ಲ ಅದಕ್ಕೆ. ವೋಟೂ ಸಿಗಬೇಕು ಕಪ್ಪುಹಣವೂ ಸೇಫಾಗಬೇಕು.

ಈಗ ಅಂತವರು ಯಾರೂ ಬರುತ್ತಿಲ್ಲ. ಹಣ ಹೂಡಿಕೆ ಮಾಡಿದವರು ವಾಪಸ್ ಕೇಳುತ್ತಲೇ ಇದ್ದಾರೆ ಆದರೆ ನಮಗೆ ಮರಳಿಸಲು ಸಾಧ್ಯವಾಗುತ್ತಿಲ್ಲ. ಅಧಿಕೃತವಾಗಿ ಅವರು ನಮ್ಮ ಮೇಲೆ ಕ್ರಮ ಜರುಗಿಸುವಂತಿಲ್ಲ ಆದರೆ ಅನಧಿಕೃತವಾಗಿ ಯಾವ ಕ್ರಮವನ್ನು ಬೇಕಾದರೂ ಜರುಗಿಸಬಹುದು. ಹಾಗೊಮ್ಮೆ ಕ್ರಮ ಜರುಗಿಸಿದರೆ ಅವರ ಹಣ ಮರಳಿ ಸಿಗುತ್ತದೆಯೇ? ಇಲ್ಲ. ನಾವು ಇದ್ದರೆ ಮಾತ್ರ ಅವರ ಹಣ ವಾಪಸ್ ಕೊಡುತ್ತೇವೆ ಎಂದು ನಾವು ಹೇಳಿದ್ದೇವೆ. ಹಾಗಾಗಿ ಅವರೆಲ್ಲರೂ ನಮ್ಮ ಹಿಂದೆ ನಮ್ಮ ಬೆಂಬಲಕ್ಕೆ ನಿಂತುಬಿಟ್ಟಿದ್ದಾರೆ.

ನಾವು ಇರಿಸಿಕೊಂಡ ಹಣದಲ್ಲಿ ಕೆಲವು ಪಾಲನ್ನು ನಾವು ಬೇಟೆನಾಯಿಗಳಂತೆ ಸಾಕಿಕೊಂಡ ಕೆಲವು ಉದ್ಯಮಿಗಳಿಗೆ ನೀಡಿದ್ದೇವೆ. ಅವರಲ್ಲಿ ಕೆಲವರು ಪಡೆದುಕೊಂಡಿದ್ದನ್ನು ಮರಳಿಸಬೇಕಾಗುತ್ತದೆಂದು ಆದಷ್ಟೂ ಪರೋಕ್ಷವಾಗಿ ನಮ್ಮ ವಿರುದ್ಧವೇ ಇದ್ದಾರೆ ಈಗ. ಎದುರಿಗೆ ಮಾತ್ರ ಜೈ ಎನ್ನುತ್ತಾರೆ. ಅವರಿಗೂ ಗೊತ್ತು, ನಾಳೆ ತಮ್ಮ ಕಾಲಬುಡದ ವರೆಗೂ ಬರುವ ವ್ಯವಹಾರ ಇದು. ಆದಷ್ಟೂ ಹೇಗಾದರೂ ಮಾಡಿ ಬೀಳುವ ಕುಣಿಕೆಯಿಂದ ಜಾರಿಕೊಳ್ಳಬೇಕು ಎಂದು ಅವರ ಯೋಚನೆ.

ಈ ಜಗತ್ತಿನಲ್ಲಿ ಹಣಕ್ಕಿರುವಷ್ಟು ಮಾನ ಸನ್ಮಾನ ಇನ್ನವುದಕ್ಕೂ ಇಲ್ಲ ಎಂಬ ಸತ್ಯವನ್ನು ನಾವು ಚೆನ್ನಾಗಿ ತಿಳ್ಕೊಂಡಿದ್ದೇವೆ. ಎಳ್ಳಷ್ಟೂ ಯತಿಧರ್ಮ ಪಾಲಿಸದ ನಮ್ಮಲ್ಲಿ ಅಲೌಕಿಕವಾದ ಯಾವ ಬೆಂಬಲವಾಗಲೀ ಶಕ್ತಿಯಾಗಲೀ ಇಲ್ಲ. ’ಸರ್ವಂ ಕಾಂಚಾಣಮಯಂ’ ಆದ್ದರಿಂದ ನಾವೂ ಅದನ್ನೇ ಆಶ್ರಯಿಸಿದ್ದೇವೆ. ಭಕ್ತಕುರಿಗಳಿಂದ ಎತ್ತುವಳಿ ಮಾಡಿದ ಹಣವನ್ನು ನಮ್ಮ ಸ್ವೇಚ್ಛಾಚಾರ ಮತ್ತು ರಕ್ಷಣೆಗೆ ಬಳಸಿಕೊಳ್ಳುತ್ತಲೇ ಇದ್ದೇವೆ.

ಈಗೇನಾಗಿದೆಯೆಂದರೆ ಮೊದಲು ಹೂಡಿಕೆ ಮಾಡುತ್ತಿದ್ದ ರಾಜಕೀಯ ಮುಖಂಡರು ಈಗ ನಮ್ಮಲ್ಲಿಂದ ಬರಲಿ ಎಂದು ಅಪೇಕ್ಷಿಸುತ್ತಾರೆ. ಅನಿವಾರ್ಯ ಅಂತ ನಾವು ಕೆಲವು ಸೂಟ್ ಕೇಸ್ ಕಳಿಸಿಕೊಟ್ಟಿದ್ದೇವೆ. ಕತ್ತಲಲ್ಲಿ ನಮ್ಮವರು ಅದನ್ನು ಹಸ್ತಾಂತರಿಸಿದ್ದು ನಿಮಗೆ ಕಾಣಿಸಿಲ್ಲ ಅಷ್ಟೆ. ಹೀಗಾಗಿ ಅವರೆಲ್ಲ ನಮ್ಮನ್ನು ಇಲ್ಲಿಯವರೆಗೆ ಸಂರಕ್ಷಿಸಿದ್ದಾರೆ. ಇನ್ನು ಮುಂದೆ ಕಷ್ಟವಾಗಿದೆ.

ಸಮುದ್ರದಲ್ಲಿ ಅಟ್ಟಿಸಿಕೊಂಡು ಬರುವ ಶಾರ್ಕ್ ಮತ್ತು ತಿಮಿಂಗಿಲಗಳಿಗೆ ಧೂಳಿನ ಮೂಟೆ ಎಸೆಯುತ್ತ ತಪ್ಪಿಸಿಕೊಳ್ತಾರಂತಲ್ಲ ಹಾಗೆ ನಾವೂ ಹಣದ ಮೂಟೆ ಎಸೆಯುತ್ತ ತಪ್ಪಿಸಿಕೊಳ್ಳುತ್ತಲೇ ಇದ್ದೆವು. ಈಗ ನಮ್ಮಲ್ಲಿ ಹಣದ ಮೂಟೆಗಳಿಲ್ಲ. ಬಾವಯ್ಯ ಹಳೆಯ ಬ್ಯಾಂಕ್ ಅಕೌಂಟಿನ ಸಂದು ಮೂಲೆ ಎಲ್ಲಾ ಹುಡುಕಿ ಬಾಚಿ ಬರಗಿ ಒಂದಷ್ಟು ರೆಡಿಮಾಡಿ ಇಟ್ಟಿದ್ದಾನೆ. ಇನ್ನೂ ಕುರಿಗಳಾಗಿಯೇ ಇರುವ ಕೆಲವು ಪುಣ್ಯಾತ್ಮರು ಬಾವಯ್ಯನ ಪೂಜೆಗೆ ಹಣ ಕೊಡ್ತಾರಲ್ಲ-ಅದರಿಂದ ಒಂದಷ್ಟು ಬರುತ್ತದೆ. ಇದನ್ನೆಲ್ಲ ಸೇರಿಸಿ ಗಂಟು ಮಾಡಿ ಕಳಿಸುತ್ತಿದ್ದೇವೆ ನಾವು.

ಮುಂದಕ್ಕೆ ವಿಚಾರಣೆಯ ಗತಿ ಹೆಚ್ಚಿದಾಗ ನಮ್ಮ ಬಾವಯ್ಯ ಎಲ್ಲಾದರೂ ತಪ್ಪಿಸಿಕೊಂಡು ಓಡಿಹೋಗುವ ಸಾಧ್ಯತೆ ಇದೆ. ಹೀಗಾಗಿ ಅವನೂ ನಮ್ಮ ಜೊತೆಗಿರುವಂತೆ ನೋಡಿಕೊಳ್ಳುತ್ತಲೇ ಇದ್ದೇವೆ ನಾವು. ಉತ್ತರದ ಕಡೆಗೆ ಮಂಡನಮಿಶ್ರರಂತಹ ಅಪ್ಪಟ ವಿದ್ವತ್ತು ತನ್ನದೆಂದು ಭೋಂಗು ಬಿಟ್ಟು ಸನ್ಮಾನ ಮಾಡಿಸಿಕೊಂಡ ಈ ಕುಳ್ಳನನ್ನು ನಾನು ಸಂಪೂರ್ಣ ನಂಬುವ ಹಾಗಿಲ್ಲ ಪರಿಸ್ಥಿತಿ. ಗಾದೆಯೇ ಇದೆಯಲ್ಲ ಕಳ್ಳರನ್ನು ನಂಬಿದರೂ ಕುಳ್ಳರನ್ನು ನಂಬಬಾರದು ಅಂತ.

ವೀಸಾ ಪಾಸ್ ಪೋರ್ಟು ರೆಡಿ ಇಟ್ಟುಕೊಂಡ ನಮ್ಮ 420 ಬಾವಯ್ಯ ಮಾರುವೇಷದಲ್ಲಿ ಮಾರ್ವಾಡಿಯ ವೇಷ ತೊಟ್ಟು ಹಾರಿಹೋಗಬಾರದೆಂದೇನೂ ಇಲ್ಲ. ಅದಕ್ಕಾಗಿ “ಅಕ್ಕಯ್ಯಂದಿರು ಬಾವಯ್ಯನನ್ನು ಇಲ್ಲೇ ಇರಿಸಿಕೊಳ್ಳಬೇಕು. ಮುಂದೊಂದು ದಿನ ಬಾವಯ್ಯನ ಪೂಜೆಯನ್ನು ಚೆನ್ನಾಗಿ ಮಾಡಲು ಬೇಕೆಂಬ ಕಾರಣಕ್ಕೆ ಅಕ್ಕಯ್ಯಂದಿರು ಅವನನ್ನು ಹಿಡಿದಿಟ್ಟುಕೊಂಡರೆ ಒಳ್ಳೇದು” ಅಂತ ಹೊರಗಡೆ ಯಾರೋ ಹೇಳಿದರಂತೆ. ನಾವು ನೇರವಾಗಿ ಹಾಗೆ ಹೇಳಲಿಕ್ಕಾಗುತ್ತದೆಯೇ?

ಅಂದಿನಿಂದ ಇಂದಿನವರೆಗೂ ನಾನೂ ನೀನೂ ಒಟ್ಟಿಗೇ ಇದ್ದೇವೆ.
ಮಂದದ ಬೋಳುಗಳಿಗೆ ಗಂಧದೆಣ್ಣೆ ಹಚ್ಚಿ ನಮ್ಮ ಕನಸುಗಳನ್ನೆಲ್ಲ ಒಟ್ಟಿಗೇ ಸಾಕಾರ ಮಾಡಿಕೊಂಡಿದ್ದೇವೆ.
ಚಂದದ ಹುಡಿಗಿಯರು ಹೆಂಗಸರನ್ನು ಒಟ್ಟಿಗೇ …………..
ಬಂಧುಗಳು ನೀವೆಲ್ಲ ಎಂದು ರಾಜಕಾರಣಿಗಳನ್ನು ಕರೆದು ಒಟ್ಟಿಗೇ ಕುಳಿತು ಮಾತನಾಡಿಸಿದ್ದೇವೆ
ತಿಂದಿದ್ದು ಉಂಡಿದ್ದು ಎಲ್ಲವೂ ಒಟ್ಟಿಗೇ ನಡೆದಿದೆ ಬಾವಯ್ಯ
ಮುಂದೆ ಮುದ್ದೆ ಮುರಿಯುವುದಾದರೆ ಅದನ್ನೂ ಒಟ್ಟಿಗೇ ಮಾಡೋಣ ಎಂಬುದು ನಮ್ಮ ಅನಿಸಿಕೆ.

ಹೀಗಾಗಿ ನಮ್ಮ ಹಾವಾಡಿಗ ಮಹಾಸಂಸ್ಥಾನದ ಘನಪಂಡಿತರಾದ ಕುಲಪತಿ ಬಾವಯ್ಯನವರನ್ನು ಎಲ್ಲರೂ ರಕ್ಷಣೆ ಮಾಡಿಕೊಳ್ಳಿ. ನಮ್ಮಂತಹ ಕಳ್ಳರಿಗೂ ಗುರು ಎಂಬವರು ಇರುತ್ತಾರೆ. ಹೊರಗೆ ವೇದಿಕೆಯಲ್ಲಿ ಗಂಟಲು ಬಿಗಿದುಕೊಂಡು ಮೈಕಿನಲ್ಲಿ”ಮಹಾಸಂಸ್ಥಾನದವರ ಅಪ್ಪಣೆಯಾಗಿದೆ” ಎನ್ನುವ ಬಾವಯ್ಯ ನಮ್ಮ ಎಲ್ಲಾ ಕೆಲಸಗಳಿಗೂ ಗುರು. ಜನರೆದುರು ಬಾಯಿಗೆ ಪಂಚೆ ಅಡ್ಡಹಿಡಿದು ನಮ್ಮೊಂದಿಗೆ ಮಾತನಾಡುವ ಬಾವಯ್ಯ ಒಳಗೆ ನಮಗೆ ಬಳಸುವ ಪದಗಳನ್ನು ದೇವರೇ ಬಲ್ಲ. ನಾವು ಏಕಾಂತದಲ್ಲಿ ಮಹಿಳೆಯರಿಗೆ ಒದ್ದರೆ ನಮ್ಮಿಬ್ಬರ ಮೀಟಿಂಗಿನಲ್ಲಿ ಬಾವಯ್ಯ ನಮಗೆ ಒದೆಯುತ್ತಾನೆ.

ಅಂದಹಾಗೆ, ನಮ್ಮ ಬಾವಯ್ಯ ಕೂಡ ಎಸ್.ಟಿ.ಡಿ ಬೂತು ಎನ್ನುವುದು ನಿಮಗೂ ತಿಳಿದಿರಲಿ.”

Thumari Ramachandra

source: https://www.facebook.com/groups/1499395003680065/permalink/1624914254461472/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s