ಜಗದ್ಗುರು ಶೋಭರಾಚಾಚಾರ್ಯ ಹಾವಾಡಿಗ ಮಹಾಸಂಸ್ಥಾನ ಎಂದರೆ ದೊಡ್ಡ ಎಸ್.ಟಿ.ಡಿ ಬೂತ್

ಜಗದ್ಗುರು ಶೋಭರಾಚಾಚಾರ್ಯ ಹಾವಾಡಿಗ ಮಹಾಸಂಸ್ಥಾನ ಎಂದರೆ ದೊಡ್ಡ ಎಸ್.ಟಿ.ಡಿ ಬೂತ್
[ಇದು ವೈಜ್ಞಾನಿಕ ಮಾಹಿತಿಯುಳ್ಳ ಲೇಖನ, ಅಶ್ಲೀಲತೆ ಇಲ್ಲಿ ನಗಣ್ಯ]

“ನಾವು ಅವರ ಕ್ಲಿನಿಕ್ಕಿಗೆ ಟ್ರೀಟ್ ಮೆಂಟ್ ಸಲುವಾಗಿ ಹೋದಾಗ, ನಮಸ್ಕರಿಸಿಯೇ ನಮ್ಮನ್ನು ಸ್ವಾಗತಿಸಿದ್ದ ಶಿವಮೊಗ್ಗ ಜಿಲ್ಲೆಯ ಚರ್ಮ ವೈದ್ಯರೊಬ್ಬರು ನಮ್ಮ ಕಾಯಿಲೆಗಳ ಬಗ್ಗೆ ಪರೀಕ್ಷಿಸಿದ ನಂತರ ಕಂಗಾಲಾಗಿ ಹೋಗಿದ್ದರು. ಅವರ ಮುಖದಲ್ಲಿ ಯಾಕೆ ಅಂತಹ ಭಾವನೆ ಎಂದು ನಮಗೆ ಅರ್ಥವಾಗಿರಲಿಲ್ಲ.

ತೊಡೆಯ ಸಂದಿಯಲ್ಲಿ ಸನ್ಯಾಸಿಗೆ ಇಂತಹ ಕಪ್ಪು ವರ್ತುಲಗಳು ಹೇಗೆ ಮೂಡುತ್ತವೆ? ಸನ್ಯಾಸಿಯ ಶಿಶ್ನದಲ್ಲಿ ಈ ಸೋಂಕು ಹೇಗೆ ಕಾಣಿಸಿಕೊಂಡಿತು? ಪರಮಹಂಸ, ಪರಿವ್ರಾಜಕ, ಸರ್ವಸಂಗ ಪರಿತ್ಯಾಗಿ ಎನಿಸಿಕೊಂಡ ಸನ್ಯಾಸಿಗೆ ಇಂತಹ ಕಾಯಿಲೆಗಳು ಹೇಗೆ ಬರಲು ಸಾಧ್ಯ? ವೈದ್ಯರಲ್ಲಿ ಮೂಡಿದ ಸಂದೇಹಗಳು ಒಂದೆರಡಲ್ಲ. ನಮ್ಮಲ್ಲಿ ಅಂತದ್ದನ್ನು ಅವರು ನಿರೀಕ್ಷಿಸದಿದ್ದರಿಂದ ಕಂಗಾಲಾಗಿದ್ದರಷ್ಟೆ.

ಅನ್ಯ ಶರೀರದ ಸಂಪರ್ಕದ ಹೊರತು ಬೇರೆ ಯಾವ ಕಾರಣದಿಂದ ಈ ಕಾಯಿಲೆಗಳು ಬರಬಹುದು ಎಂದು ಅವರು ಅಂತರ್ಜಾಲದಲ್ಲಿ ಮಾಹಿತಿಗಾಗಿ ಹುಡುಕಾಡಿದ್ದರಂತೆ. ನಂತರ ಪರಿಚಿತ, ಪರಿಣತ ಹಿರಿಯ ವೈದ್ಯರಲ್ಲಿಯೂ ವಿಚಾರಿಸಿದ್ದರಂತೆ. ಬೇರಾವುದೇ ಕಾರಣದಿಂದ ಅಂತಹ ರೋಗಗಳು ಬರಲು ಸಾಧ್ಯವಿಲ್ಲ ಎಂಬುದನ್ನರಿತ ಅವರು ತಮ್ಮಲ್ಲೇ ವಿಷಾದದ ನಗೆ ನಕ್ಕು ಸುಮ್ಮನಾಗಿದ್ದರು.

ಏಕಾಂತಕ್ಕೆ ಬಂದ ವಿಜಯನಗರದ ಕಡೆಗಿನ ನಮ್ಮ ಭಕ್ತೆಗೆ ನಾವು ನಮ್ಮಲ್ಲಿದ್ದ ಹಲವು ರೋಗಗಳನ್ನು ಅನುಗ್ರಹಿಸಿದ್ದೇವೆ. ಅವಳೀಗ ಬಳಲುತ್ತಲೇ ಇದ್ದಾಳೆ; ನಮ್ಮ ಪವಾಡದಿಂದ ವಾಸಿಯಾಗಲಿಲ್ಲ. ತನಗೇನಾದರೂ ಆಗಲಿ ತನ್ನ ಸರ್ಪಾಸ್ತ್ರ ಗುರು ಮಾತ್ರ ಚೆನ್ನಾಗಿರಲಿ ಎಂದು ಬಯಸುವ ಆ ಮುಗ್ಧೆ ನಮ್ಮಮೇಲೆ ಆಪಾದನೆ ಬಂದಾಗ ಮುಂದೇನು ಮಾಡ್ತೀರಿ? ಹೇಗೆ ತಪ್ಪಿಸಿಕೊಳ್ತೀರಿ? ಎಂದು ಪೋನಾಯಿಸಿದ್ದಳು. “ನೋಡ್ತಾ ಇರು ನಾವು ದೋಷಮುಕ್ತರಾಗಿ ಬರ್ತೇವೆ, ಏನೂ ಚಿಂತಿಸಬೇಡ, ಮತ್ತೆ ಅನುಕೂಲವಾದಾಗ ದರ್ಶನಕ್ಕೆ ಬಾ” ಎಂದು ಹೇಳಿದ್ದೇವೆ.

ಎಸ್.ಟಿ.ಡಿ ಎಂಬ ಪದ ಕಿವಿಗೆ ಬಿದ್ದ ತಕ್ಷಣ ನಮ್ಮ ಸಮಾಜದವರಿಗೆ ನೆನಪಾಗೋದು ದೂರದ ಟೆಲಿಫೋನ್ ಕಾಲ್. ಹಳ್ಳಿಗಳಿಂದ ತಮ್ಮ ಮಕ್ಕಳನ್ನು ಮಹಾನಗರಗಳಿಗೆ ಓದಲೋ, ನೌಕರಿಗೋ ಕಳಿಸಿದ ನಮ್ಮಜನ, ಮಕ್ಕಳೊಡನೆ ಸಂವಹಿಸಲು ದಶಕದ ಹಿಂದೆ ಬಳಸುತ್ತಿದ್ದುದು ಎಸ್.ಟಿ.ಡಿ ಸೌಲಭ್ಯ. ಮದುವೆಯಾಗಿ ಗಂಡನೊಟ್ಟಿಗೆ ದೂರ ಪ್ರದೇಶಗಳಲ್ಲಿ ನೆಲೆಸಿದ ಮಗಳನ್ನು ಸಂಪರ್ಕಿಸಲೂ ಅದೇ ಬಳಕೆಯಾಗುತ್ತಿತ್ತು. ಅದನ್ನು ಬಿಟ್ಟರೆ ಎಸ್.ಟಿ.ಡಿ ಎಂಬ ಪದದ ಉಳಿದ ಅರ್ಥ ವಿಸ್ತರಣೆ ತಿಳಿಯಿದ ಮುಗ್ಧಜನ ನಮ್ಮವರು.

ಈಗ ದೂರವಾಣಿ ಸಂಬಂಧಿಸದ ಎಸ್.ಟಿ.ಡಿ ಎಂದರೇನು ಎಂದು ನೋಡೋಣ. ಎಸ್.ಟಿ.ಡಿ ಎಂದರೆ ಸೆಕ್ಸ್ವಲಿ ಟ್ರಾನ್ಸ್‍ಮಿಟೆಡ್ ಡಿಸೀಸ್ ಅಂತ; ಅಂದರೆ ಲೈಂಗಿಕ ಕ್ರಿಯೆಯಿಂದ ಸಾಂಸರ್ಗಿಕವಾಗಿ ಹರಡುವ ಗುಹ್ಯ ರೋಗ ಎಂದರ್ಥ.

ಲೈಂಗಿಕ ಕ್ರಿಯೆ ಇಲ್ಲವೇ ಲೈಂಗಿಕ ಚಟುವಟಿಕೆಗಳ ಮೂಲಕ ಹರಡುವ ಕಾಯಿಲೆಗಳನ್ನು ಲೈಂಗಿಕ ಕಾಯಿಲೆಗಳು [ Sexually Transmitted Diseases ]ಅಥವಾ S.T.D ಎಂದು ಕರೆಯುತ್ತಾರೆ. ಈ ಕಾಯಿಲೆಗಳನ್ನು ಹಿಂದೆ Venereal Diseases ಎಂದು ಕರೆಯುತ್ತಿದ್ದರು.

ಲೈಂಗಿಕ ಕಾಯಿಲೆಗಳು ಮುಖ್ಯವಾಗಿ ನಾಲ್ಕು ವಿಧಗಳಿಂದ ಹರಡುತ್ತವೆ.

೧. ಯೋನಿ ಇಲ್ಲವೇ ಗುದ ಸಂಭೋಗ
೨. ಬಾಯಿಯಿಂದ ಬಾಯಿಗೆ ಆಳವಾದ ಚುಂಬನ
೩. ಯೋನಿ, ಶಿಶ್ನ ಇಲ್ಲವೇ ಗುದಕ್ಕೆ ಮುಖ ಮೈಥುನ
೪. ಮುಖ, ಶಿಶ್ನ ಅಥವಾ ಯೋನಿ ಕಾಯಿಲೆಯಿರುವ ಚರ್ಮದೊಂದಿಗೆ ಸ್ಪರ್ಶ.

[ಇದೆಲ್ಲ ನಮಗೊಂದು ರೀತಿ ಮಾರ್ಷಿಯಲ್ ಆರ್ಟ್ಸ್ ಇದ್ದಹಾಗೆ, ಇವೆಲ್ಲದರಲ್ಲೂ ನಾವು ಎಕ್ಸ್‍ಪರ್ಟ್ ಇದ್ದು, ವಿಕೃತ ಕಾಮಕ್ಕೆ ಗೌರವ ಡಾಕ್ಟರೇಟ್ ಕೊಡುವುದಾದರೆ ಅದು ಪ್ರಥಮವಾಗಿ ನಮಗೇ ಸಲ್ಲಬೇಕು. ಯಾಕೆಂದರೆ ಋತುಸ್ರಾವವನ್ನು ಅನುಭವಿಸುತ್ತಿರುವ ಮಹಿಳೆಯರನ್ನೂ ಸಹ ಒತ್ತಡಹಾಕಿ ಏಕಾಂತಕ್ಕೆ ಕರೆಯುತ್ತೇವೆ ನಾವು.

ಋತುಸ್ರಾವದ ಸಮಯದಲ್ಲಿ ಮಹಿಳೆ ದೈಹಿಕ ನೋವು, ಹತಾಶೆ ಮೊದಲಾದವುಗಳನ್ನು ಅನುಭವಿಸುತ್ತ ದುರ್ಬಲೆಯಗಿರುತ್ತಾಳೆ ಎಂದು ಹಿಂದಿನವರು ನಾಲ್ಕು ದಿನ ಬಹಿಷ್ಠೆಯಾಗಿರು ಎಂದು ಶಾಸ್ತ್ರ ಮಾಡಿದರು; ಆ ಸಮಯ ಅಸಹ್ಯವೆಂಬಂತೆ ನಡೆದುಕೊಳ್ಳುವ ಗಂಡಂದಿರು ಕೂಡ ತಮ್ಮ ಹೆಂಡಂತಿಯನ್ನು ಮುಟ್ಟುತ್ತಿರಲಿಲ್ಲ. ಆದರೆ ಕಾವಿ[ಹಗಲು]ವೇಷದ ನಮಗೆ ಈ ನಿಯಮ ಅನ್ವಯಿಸುವುದಿಲ್ಲ.]

ಕೆಲವು ಲೈಂಗಿಕ ಕಾಯಿಲೆಗಳು ತೀವ್ರವಾದ ದೈಹಿಕ ಮತ್ತು ಮಾನಸಿಕ ತೊಂದರೆಗಳಿಗೆ ಕಾರಣವಾಗಬಹುದು. ಅದರಲ್ಲೂ ಏಡ್ಸ್, ಹೆಪಟಿಟಿಸ್ ಮತ್ತು ಹರ್ಪಿಸ್ ಕಾಯಿಲೆಗಳಿಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆಗಳಿಲ್ಲ. ಮುಂಜಾಗರುಕತೆ ವಹಿಸುವುದೇ ಇದಕ್ಕಿರುವ ಸದ್ಯದ ದಾರಿ. ಆದರೂ ಲೈಂಗಿಕ ರೋಗಗಳು ಇತ್ತೀಚೆಗೆ ತೀವ್ರ ಗತಿಯಲ್ಲಿ ಹರಡುತ್ತಿರುವುದಂತು ಸತ್ಯ.

ಲೈಂಗಿಕ ಕಾಯಿಲೆಗಳ ಯಾದಿ ಇಲ್ಲಿದೆ-

೧. ಜನನೇಂದ್ರಿಯಗಳ ಮೇಲೆ ಗಾಯ, ಹುಣ್ಣುಗಳಾಗುವ ಲೈಂಗಿಕ ಕಾಯಿಲೆಗಳು
ಲೈಂಗಿಕ ಹರ್ಪಿಸ್ ಕಾಯಿಲೆ [herpes]
ಸಿಪಿಲಿಸ್ [Syphilis ]
ಲಿಂಪೋಗ್ರಾನುಲೋಮ ವೇನೇರಿಯಂ [Lymphogranuloma Venereum ]
ಷಾಂಕ್ರಾಯಿಡ್ [Chancroid ]
೨. ಚರ್ಮದ ಮೇಲೆ ಕಾಣುವ ಕಾಯಿಲೆಗಳು
ಲೈಂಗಿಕ ನರೂಲಿ ಅಥವಾ ನರೆಹುಲಿ [Genital Warts ]
೩. ಗೋನೋಕಾಕ್ಕಲ್ ಕಾಯಿಲೆಗಳು; ಗನೋರಿಯಾ [Gonorrhea ]
೪. ಕ್ಲಾಮಿಡಿಯಾ ಕಾಯಿಲೆಗಳು
೫. ಹೊರ ಪರ ಪಿಂಡಿಕ [Parasitic ]
ಗುಂಜಲುವಿನ ಹೇನು [pubic lice] ಕಜ್ಜಿ [ Scabies ]
೬. ಚಲ್ಕಣಬೇನೆ [AMOEBIASIS]
೭. ಯೋನಿಯ ಉರಿಯೂತಗಳು
ಟ್ರ್ಕೋಮೊನಿಯಾಸ್ [Trichomoniasis ]
ಹುದುಗು [vaginal Yeast infections ]
೮. ಕಿಳ್ಗುಳಿಯ ಉರಿಯೂತ [pelvic inflammatory Disease ]

ಕ್ರಿಸ್ಟೊಫರ್ ಕೋಲಂಬಸ್ ಅಮೆರಿಕ ಕಂಡುಹಿಡಿದದ್ದು ಇತಿಹಾಸದ ಪುಟಗಳಲ್ಲಿ ಬರೆಯಲ್ಪಟ್ಟ ಬಹು ಮುಖ್ಯ ಘಟನೆ. ಆದರೆ ಕೋಲಂಬಸ್ ಮತ್ತು ಅವನ ತಂಡದವರು ಸಾಹಸಮಯ ಚಾರಿತ್ರಿಕ ಯಾತ್ರೆಯನ್ನು ಪೂರೈಸಿ 1492ರಲ್ಲಿ ತಾಯ್ನಾದಿಗೆ ಹಿಂತಿರುಗಿದ ವೇಳೆ ‘ಸಿಫಿಲಿಸ್~ ರೋಗ ಹರಡುವಿಕೆಗೂ ಕಾರಣರಾದರು ಎನ್ನುತ್ತದೆ ಹೊಸ ಅಧ್ಯಯನ.

‘ಟ್ರೆಪೊನಿಮಾ ಪಲ್ಲಿಡಮ್’ ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಈ ಕಾಯಿಲೆಗೆ ಔಷಧ ಕಂಡುಹಿಡಿಯಲಾಗಿದ್ದರೂ ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಹೃದಯ, ಮಿದುಳು, ಕಣ್ಣು ಮತ್ತು ಮೂಳೆಗೆ ಹಾನಿಯಾಗುವ ಸಾಧ್ಯತೆ ಇದೆಯಂತೆ.

ಇನ್ನು, ಪ್ರಜನನಾಂಗಗಳ ಮೇಲೆ ಚರ್ಮ ಮತ್ತು ಲೋಳೆಪದರಗಳಲ್ಲಿ ಉಂಟಾಗುವ ಮೃದುವಾದ ಗುಳ್ಳೆಗಳನ್ನು ಪ್ರಜನನಾಂಗದ ಗುಳ್ಳೆ ಎನ್ನುವರು. ಲೈಂಗಿಕ ಸಂಪರ್ಕದಿಂದ ’ಹ್ಯೂಮನ್ ಪ್ಯಾಪಿಲ್ಲೋಮ’ಎಂಬ ವೈರಸ್ ನ ಸೋಂಕಿನಿಂದ ಈ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.

ಹೆಚ್.ಐ.ವಿ ಸೋಂಕು ಹರಡುವ ವಿಧಾನಗಳು ಹೀಗಿವೆ-

* ಸೋಂಕಿತ ವ್ಯಕ್ತಿ ಜೊತೆ ಲೈಂಗಿಕ ಸಂಪರ್ಕ
* ಸೋಂಕಿತ ರಕ್ತಪೂರಣ
* ಸೂಜಿ,ಸಿರಿಂಜುಗಳನ್ನು ಸೋಂಕಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳುವುದು
* ಸೋಂಕಿತ ತಾಯಿಯಿಂದ ಭ್ರೂಣಕ್ಕೆ ಜರಾಯುವಿನ ಮೂಲಕ

ರೋಗಗಳ ಬಗ್ಗೆ ಹೆಚ್ಚಿನ ವಿವರಣೆ ನೀಡುವ ಅಗತ್ಯ ಇಲ್ಲಿಲ್ಲ. ಮನುಷ್ಯ ಪ್ರಜನನಾಂಗ/ಗುಹ್ಯ ಎಂಬುದು ಅತ್ಯಂತ ಸೂಕ್ಷ್ಮ ಸಂವೇದೀ ಅಂಗ. ಕಾಮಾಸಕ್ತರಾದಾಗ ಹೆಚ್ಚಿನ ಪ್ರಮಾಣದಲ್ಲಿ ರಕ್ತಪರಿಚಲನೆ ಇಲ್ಲಿ ಉಂಟಾಗುತ್ತದೆ, ಜೊತೆಗೆ ಹಲವು ಜೀವದ್ರವಗಳೂ ಸ್ರವಿಸಲ್ಪಡುತ್ತವೆ. ಇವೆಲ್ಲ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇಲ್ಲಿ ಹಲವು ರೀತಿಯ ಬ್ಯಾಕ್ಟೀರಿಯಾಗಳು ಇರುತ್ತವೆ.

ನಿರೋಗಿಯಾದ ಗಂಡು ಮತ್ತು ಹೆಣ್ಣು ಸೇರುವುದರಿಂದ ಯಾವುದೇ ತೊಂದರೆಯೂ ಆಗುವುದಿಲ್ಲ; ಆದರೆ ’ದೇಶೋದ್ಧಾರ’ಕ್ಕೆ ನಮ್ಮಂತಹ ಸುಪುತ್ರರು ಜನಿಸಬಹುದಷ್ಟೆ. ಯಾವಾಗ ವ್ಯಕ್ತಿಯ ದೈಹಿಕ ಸಂಬಂಧ ಒಬ್ಬರಿಗಿಂತ ಹೆಚ್ಚಿನ ನಿರೋಗಿಯೊಡನೆ ನಡೆಯುತ್ತದೋ ಆಗ ಬ್ಯಾಕ್ಟೀರಿಯಾಗಳ ಬೀಗತನದಲ್ಲಿ ಜಗಳ ಆರಂಭವಾಗುತ್ತದೆ. ಬ್ಯಾಕ್ಟೀರಿಯಾಗಳ ನಡತೆಯಲ್ಲಿ ವ್ಯತ್ಯಯ ಉಂಟಾದಾಗ ಅವೇ ವೈರಾಣುಗಳಾಗಿ ಮಾರ್ಪಡುತ್ತವೆ.

ಹೀಗಾಗಿ, ಜೀವಶಾಸ್ತ್ರದ ಪ್ರಕಾರ ಮನುಷ್ಯ ಪ್ರಾಣಿವರ್ಗಕ್ಕೇ ಸೇರಿದ್ದರೂ, ಉಳಿದ ಪ್ರಾಣಿಗಳಂತೆ ಹಲವು ತಾತ್ಕಾಲಿಕ ಸಂಗಾತಿಗಳನ್ನು ರೆಡಿ ಮಾಡಿಕೊಂಡು ರತಿಕ್ರೀಡೆಯಲ್ಲಿ ನಿರತನಾ/ಳಾಗುವಂತಿಲ್ಲ. ಇದನ್ನೆಲ್ಲ ಮನಗಂಡ ಭಾರತೀಯ ಋಷಿಗಳು ಆರೋಗ್ಯಕರ ಬದುಕಿಗಾಗಿ ’ಕುಟುಂಬ’ ಎಂಬ ಜೀವನ ವಿಧಾನವನ್ನು ರೂಪಿಸಿದರು.

ಕುಟುಂಬದ ನಿಯಮಗಳೆಲ್ಲ ನಿಮಗೆ ಹೇಳಿದ್ದೇ ಹೊರತು ಕಪಟ ಸನ್ಯಾಸಿಯಾದ ನಮಗೆ ಇದೆಲ್ಲ ಅನ್ವಯಿಸುವುದಿಲ್ಲ. ಹೀಗಾಗಿ ನಾವು ನೂರರ ಮೇರೆಯನ್ನೂ ಮೀರಿ ಹಾರುತ್ತಲೇ ಇದ್ದೇವೆ. ಕಾಯಿಲೆಗಳ ಗೂಡಾಗಿದ್ದೇವೆ;ಹೊರಗೆ ಕಾಣಿಸುತ್ತಿಲ್ಲ ಅಷ್ಟೆ.

೨೦೦೯-೧೦ ರಲ್ಲಿ ನಾವು ಹಲವು ದಿನಗಳ ಕಾಲ ಯಾರಿಗೂ ಸಿಗಲೇ ಇಲ್ಲ; ಕಾರಣ ನಮ್ಮ ಅನಾರೋಗ್ಯ. ಅನಾರೋಗ್ಯ ಯಾವುದೆಂದು ಕೇಳಬೇಡಿ, ಅದು ಇದೇ ಅನಾರೋಗ್ಯ. ಜನರೆಲ್ಲ ಎಲ್ಲೆಲ್ಲೋ ಹುಡುಕಿದರೂ ನಾವು ಗುಪ್ತ ಜಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆವು.

ಶಿರಸಿ ಕಡೆಯ ಚರ್ಮವೈದ್ಯರಲ್ಲೂ ನಾವು ಹೋಗಿದ್ದೆವು. ದಕ್ಷಿಣ ಕನ್ನಡದ ವೈದ್ಯರಲ್ಲೂ ನಾವು ಚಿಕಿತ್ಸೆ ಪಡೆದಿದ್ದೆವು, ಉತ್ತರ ಭಾರತ ಮತ್ತು ಪಶ್ಚಿಮ ಭಾರತದಲ್ಲೂ ನಾವು ಚಿಕಿತ್ಸೆ ಪಡೆದಿದ್ದಿದೆ. ನಾವು ಚಿಕಿತ್ಸೆ ಪಡೆದುಕೊಂಡ ವೈದ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿರುವುದರಿಂದಲೂ ಮತ್ತು ವೈದ್ಯರು ರೋಗಿಯ ಗೋಪ್ಯತೆ ಕಾಪಾಡಬೇಕೆಂಬ ನಿಯಮ ಇರುವುದರಿಂದಲೂ ನಮ್ಮ ವಿಷಯ ಬಹಿರಂಗಗೊಳ್ಳಲಿಲ್ಲ ಅಷ್ಟೆ.

ಏಕಾಂತದ ವಿಶ್ವರೂಪ ದರ್ಶನದಲ್ಲಿ ನಮ್ಮನ್ನೇ ದೇವರೆಂದು ನಂಬಿ, ’ದೇವರಿಗೆ’ ತಮ್ಮ ಮೈ ಅರ್ಪಿಸಿಕೊಂಡ ಮತ್ತು ಅರ್ಪಿಸಿಕೊಳ್ಳುತ್ತಿರುವ ಹಲವು ಮಹಿಳೆಯರಿಗೆ, ಕೆಲವು ಪಿಜಿ ಹೆಣ್ಣುಮಕ್ಕಳಿಗೆ ಈಗಾಗಲೇ ಕೆಲವು ಎಸ್.ಟಿ.ಡಿ ಗಳನ್ನು ನಾವು ಅನುಗ್ರಹಿಸಿದ್ದೇವೆ.

ಮೊದಮೊದಲು ಸರ್ಪಾಸ್ತ್ರ ಪ್ರಯೋಗಕ್ಕೆ ಒಪ್ಪದ ಕೆಲವು ಮಹಿಳೆಯರೂ ಸಹ, ಸರ್ಪಾಸ್ತ್ರ ಪ್ರಯೋಗಕ್ಕೆ ಒಳಗಾಗಿ ನಮ್ಮಿಂದ ಆರ್ಥಿಕ ಸಹಾಯವನ್ನು [ಸುವರ್ಣ ಮಂತ್ರಾಕ್ಷತೆ ಎನ್ನುತ್ತೇವೆ ನಾವು] ಪಡೆದುಕೊಂಡಿದ್ದನ್ನು ಕಂಡ ನಂತರ, ಅಂತಹ ಆಮಿಷಕ್ಕೊಳಗಾಗಿ ಒಪ್ಪಿಕೊಂಡು ದರ್ಶನ ಪಡೆದಿದ್ದಾರೆ. ಕೌಂಟುಂಬಿಕ ಘನತೆ ಗೌರವ ಹಾಳಾಗುವ ಪ್ರಮೇಯದಿಂದ ಅವರ್ಯಾರೂ ನಮ್ಮ ವಿರುದ್ಧ ದೂರು ನೀಡುವುದಿಲ್ಲ ಎಂಬುದನ್ನು ನಾವು ಎಂದೋ ಮನದಟ್ಟು ಮಾಡಿಕೊಂಡಿದ್ದೇವೆ.

ವಿಚಾರಣೆ ನಡೆಸುವವರು ಪ್ರಮುಖ ಪರೀಕ್ಷೆಗಳಿಗೆ ನಮ್ಮನ್ನು ಒಡ್ಡಿದರೆ ಸಿಕ್ಕಿ ಬೀಳುವುದಂತೂ ಗ್ಯಾರಂಟಿ ಎಂಬುದೂ ಸಹ ನಮಗೆ ಗೊತ್ತಿದೆ. ನಮ್ಮಲ್ಲಿರುವ ಗುಹ್ಯರೋಗಗಳ ನಿವಾರಣೆಗೆ ನಾವು ಈ ನಡುವೆ ಬಹಳ ಪ್ರಯತ್ನ ನಡೆಸಿದ್ದೇವೆ. ಹಲವಾರು ವಿದೇಶೀ ಚುಚ್ಚುಮದ್ದು ಮತ್ತು ಲಸಿಕೆಗಳನ್ನು ತೆಗೆದುಕೊಂಡಿದ್ದೇವೆ. ಆದರೂ ಕೆಲವು ರೋಗಗಳು ಸಂಪೂರ್ಣವಾಗಿ ವಾಸಿ ಆಗುವ ಲಕ್ಷಣ ಕಾಣುತ್ತಿಲ್ಲ.

ಪರೀಕ್ಷಿಸಿದವರು ನಾವು ಹೇಳಿದ ಹಾಗೆ ಕೇಳೋದಾದರೆ ನಮ್ಮದೇನೂ ಅಭ್ಯಂತರವಿರಲಿಲ್ಲ; ಆದರೆ ಅವರು ಹಾಗೆ ಮಾಡದೆಯೂ ಇರಬಹುದಲ್ಲ? ಮೊದಲೇ ನಮ್ಮ ಖಜಾನೆ ಬರಿದಾಗಿರೋದರಿಂದ ನಮ್ಮ ಬಾವಯ್ಯ ಎತ್ತುವಳಿಗಾಗಿ ಹೊಸ ಗೊತ್ತುವಳಿ ಯೋಜನೆಯನ್ನು ಹಮ್ಮಿಕೊಂಡು ಯಕ್ಷಗಾನದ ಭಾಷೆಯಲ್ಲಿ ಹೇಳುವುದದರೆ ಗೇಟ್ ಕಲೆಕ್ಷನ್ ಆಗದೇ ಮಿಕಿಮಿಕಿ ನೋಡುತ್ತಿದ್ದಾನೆ.

Thumari Ramachandra

source: https://www.facebook.com/groups/1499395003680065/permalink/1624714531148111/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s