ಜಗದ್ಗುರು ಚಾರ್ಲ್ಸ್ ಶೋಭರಾಜಾಚಾರ್ಯ

ಜಗದ್ಗುರು ಚಾರ್ಲ್ಸ್ ಶೋಭರಾಜಾಚಾರ್ಯ

“ನಿಮಗೆ ಚಾರ್ಲ್ಸ್ ಶೋಭರಾಜ್ ಎಂಬ ಅಂತಾರಾಷ್ಟ್ರೀಯ ಕುಖ್ಯಾತಿಯ ಕ್ರಿಮಿನಲ್. ಸರಣಿ ಕೊಲೆಗಾರ, serial killer. ನೆನಪಿರಬಹುದಲ್ಲ? ಹಲವಾರು ಹೆಣ್ಣು ಮಕ್ಕಳನ್ನು ಕೊಲೆಗೈದಿದ್ದ ಈತನನ್ನು ’ಬಿಕಿನಿ ಕಿಲ್ಲರ್’ ಎಂದೂ ಕರೆಯುತ್ತಾರೆ. ಪೂಲೀಸರಿಗೆ ಲಂಚ ಕೊಟ್ಟೋ ಚಳ್ಳೆ ಹಣ್ಣು ತಿನ್ನಿಸಿಯೋ ತಪ್ಪಿಸಿಕೊಳ್ಳುತ್ತಿದ್ದುದು ಇವನ ಜಾಯಮಾನ.

ಒಮ್ಮೆ ಯಾರೋ, “ಒಬ್ಬ ಭಾರತೀಯ ಪೊಲೀಸರು ನಿಮ್ಮ ಹಿಂದೆ ಬಿದ್ದಿದ್ದಾರೆ” ಎಂದು ಪ್ರಸ್ತಾಪಿಸಿದಾಗ, “ಓಹ್, ಭಾರತೀಯ ಪೊಲೀಸರು ಐದು ರೂಪಾಯಿ ಪೊಲೀಸರು, ಐದು ರೂಪಾಯಿಯ ನೋಟನ್ನು ಕೊಟ್ಟರೆ ಬಿಟ್ಟು ಬಿಡುತ್ತಾರೆ” ಎಂದು ಗಹ ಗಹಿಸಿ ನಕ್ಕಿದ್ದ. ಕೊನೆಗೆ ಇವನಿಗೆ ಮುಳುವಾಗಿದ್ದು ಒಬ್ಬ ದಕ್ಷ ಭಾರತೀಯ ಪೊಲೀಸ್ ಅಧಿಕಾರಿಯೇ. ಮಧುಕರ್ ಜೆನ್ಡೇ ಎಂಬ ಚಾಣಾಕ್ಷ ಪೊಲೀಸ್ ಅಧಿಕಾರಿ 1996ರಲ್ಲಿ ಅತ್ಯದ್ಭುತವಾದ ಕಾರ್ಯಾಚರಣೆಯೊಂದರಲ್ಲಿ ಚಾರ್ಲ್ಸ್ ನನ್ನು ಅರೆಸ್ಟ್ ಮಾಡಿದ್ದರು.

ನಾವು ಖುದ್ದಾಗಿ ಹೇಳಿದರೂ ನೀವು ನಂಬದ ಒಂದು ವಿಷಯವೇನು ಗೊತ್ತೇ? ನಮಗೂ ಚಾರ್ಲ್ಸ್ ಶೋಭರಾಜ್ ಗೂ ಎಲ್ಲಾ ವಿಷಯಗಳಲ್ಲೂ ಹೋಲಿಕೆ ಇದೆಯೆಂದು ಅನೇಕರು ಹೇಳುತ್ತಿದ್ದಾರೆ. ನಾವು [ಕಪಟ]ಸನ್ಯಾಸಿ ಅವನೋ ಪ್ರೊಫೆಶನ್ ಬಿಕನಿ ಕಿಲ್ಲರ್.

ನಾವು ಏಕಾಂತದ ನಂತರ ನೇರವಾಗಿ ಕೊಲೆಮಾಡುವುದಿಲ್ಲ ಏಕೆಂದರೆ ಏಕಾಂತಕ್ಕೆ ಬಂದವರನ್ನೇ ದಾಳವಾಗಿ ನಮ್ಮ ಕೆಲಸಕ್ಕೂ ಬಳಸಿಕೊಳ್ಳುತ್ತೇವೆ. ಮತ್ತೆ ಬಯಸಿದರೆ ಅವರು ಏಕಾಂತಕ್ಕೆ ಬರುತ್ತಲೇ ಇರುತ್ತಾರೆ. ಹೀಗಾಗಿ ನಾವು ಬಿಕನಿ ಹಾಕಿಸಿ ನರ್ತನವನ್ನು ನೋಡಿದರೂ ಸಹ ’ಬಿಕನಿ ಕಿಲ್ಲರ್’ ಎಂಬ ಬಿರುದನ್ನು ಪಡೆಯಲು ಇಷ್ಟಪಡಲಿಲ್ಲ.

ಹಣ, ಹೆಣ್ಣುಗಳ ಜೊತೆಗೆ ಆಸ್ತಿಯನ್ನು ಬರಗುವ ಚಟವೂ ನಮಗಿದೆ. ಐದಾರು ವರ್ಷಗಳ ಹಿಂದೆ ಮಠವೊಂದು ದಿವಾಳಿ ಎದ್ದಿದೆ ಎಂಬ ಸುದ್ದಿ ಬಂದಿತ್ತು. ನಮ್ಮಲ್ಲಿ ಹಣದ ಥೈಲಿಯಲ್ಲಿ ಝಣ ಝಣದ ಝಣತ್ಕಾರ ಜೋರಾಗಿತ್ತು. ಒಂದು ಕರೆಮಾಡಿದರೆ, ಕಿವಿಯ ಮೇಲೆ ನಮ್ಮಿಂದಲೇ ಪ್ಲಾಸ್ಟಿಕ್ ಹೂವಿರಿಸಿಕೊಂಡು ಹಣೆಗೆ ನಾಮ ಎಳೆಸಿಕೊಂಡ ನಮಾಮಿಯ ಬೋಳೆ ಶಂಕರ ಬೇಕಾದಷ್ಟು ಸುರಿಯುತ್ತಿದ್ದ.

ಜೊತೆಗೆ ಲೋಕಲ್ ಉದ್ಯಮಿಗಳಿಗೆ ಕರೆಮಾಡಿಸಿ “ಏನೂ? ಬರಲೇ ಇಲ್ಲಾ ಮಠದ ಕಡೆಗೆ? ಮಹಾಸಂಸ್ಥಾನದವರು ನಿಮ್ಮನ್ನು ಕಾಣಬೇಕಂತೆ” ಅಂದರೆ ಅವರು ಎದ್ನೋಬಿದ್ನೋ ಎಂದುಕೊಂಡು ಓಡೋಡಿ ಬರುತ್ತಿದ್ದರು.”ನಿಮ್ಮಿಂದ ಈ ಕೆಲಸ ಆಗಬೇಕೆಂದು ಹಾವಾಡಿಗ ಮಹಾಸಂಸ್ಥಾನದವರ ಅಪ್ಪಣೆಯಾಗಿದೆ” ಎಂದು ಪಕ್ಕದ ರೂಮಿನಲ್ಲಿ ಕೂರಿಸಿಕೊಂಡು ನಮ್ಮ ಬಾವಯ್ಯ ಅವರಿಗೆಲ್ಲ ತಾಕೀತು ಮಾಡುತ್ತಿದ್ದ.

ಮಹಾಪ್ರಭುಗಳ ಅಪ್ಪಣೆ ಎಂದಮೇಲೆ ಕೇಳಬೇಕೇ? ನಡೆಸಿಕೊಡದಿದ್ದರೆ ನಾಳೆ ಸಮಾಜದಲ್ಲಿ ಯಾರು ತಮ್ಮನ್ನು ಕೀಳಾಗಿ ನೋಡ್ತಾರೋ ಎಂಬ ಅಳುಕಿನಿಂದ ಒಪ್ಪಿಸಿದ ಕೆಲಸವನ್ನು ಮರುಮಾತಿಲ್ಲದೆ, ಸಾಲವೋ ಸೋಲವೋ ಮಾಡಿಯಾದರೂ ನಡೆಸಿಕೊಡುತ್ತಿದ್ದರು. ಹೀಗಾಗಿ ಅವರಿಂದಲೂ ನಾವು ಹಣ ಪೀಕುತ್ತಿದ್ದೆವು.

ದಿವಾಳಿಯೆದ್ದ ಮಠದ ಖರೀದಿಗೆ ಹರಾಜಿನಂತಹ ಸ್ಥಿತಿ ಏರ್ಪಟ್ಟಾಗ, ಅನ್ಯ ಮಠಗಳು ಕೊಡಲಾರದ ಮೊತ್ತವನ್ನು ಕೊಡುವುದಾಗಿ ನಂಬಿಸಿ ಭಾಗಶಃ ಹಣವನ್ನೂ ಕೊಟ್ಟು, ಆ ಮಠವನ್ನು ವಹಿಸಿಕೊಂಡೆವು. ಹೊರನೋಟಕ್ಕೆ ಹಗಲು[ಕಾವಿ]ವೇಷದಲ್ಲಿ ಬಹಳ ಸುಭಗರೆನಿಸಿದ್ದ ನಾವು ಆ ಮಠದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದೆವು ಎಂದು ನಮ್ಮ ಹಳದೀ ತಾಲಿಬಾನ್ ಜನರನ್ನು ಅಲ್ಲಿಗೆ ಕಳಿಸಿ ಹೋಮ ಸುಟ್ಟಿದ್ದೇ ಸುಟ್ಟಿದ್ದು, ಗೋಮಯ ಹಾಕಿದ್ದೇ ಹಾಕಿದ್ದು.

ನಿಜ ಹೇಳಬೇಕೆಂದರೆ ಅಂತಹ ಹೋಮದ ಮತ್ತು ಗೋಮಯದ ಅಗತ್ಯ ನಮ್ಮ ಸಂಸ್ಥಾನದಲ್ಲಿ ಬಹಳ ಹೆಚ್ಚಿನ ಪ್ರಮಾಣದಲ್ಲಿದೆ. ಹೋದಲ್ಲೆಲ್ಲಾ ವೀರ್ಯಾಣು ತುಂಬಿರುವೆಡೆ ಸೀತೆಯ ಗಂಡ ಪೂಜೆಗೊಳ್ಳುವುದಾದರೂ ಹೇಗೆ? ಹೋಗಲಿಬಿಡಿ, ಶಿರಸಿ ಕಡೆಯ ಕೆಲವು ಹುಲುಮಾನವರು ’ಪ್ರಶಸ್ತಿ ಪ್ರಹಸನ’ ಎಂಬ ನಾಟಕವನ್ನು ಅಭಿನಯಿಸಿದ್ದಾರಂತೆ. ಅದರಲ್ಲಿ ಮಠಗಳ ರಾಜಕೀಯ, ಢೋಂಗಿ ಸನ್ಯಾಸಿಗಳು, ಕಪಟ ಸನ್ಯಾಸಿಗಳಿಗಿರುವ ಮಾಧ್ಯಮದ ತೆವಲು, ಪ್ರಚಾರ ಪಡೆದುಕೊಳ್ಳುವ ಹುನ್ನಾರಗಳು ಎಲ್ಲವನ್ನೂ ಅಭಿನಯಿಸಿದ್ದಾರಂತೆ. ಅದನ್ನು ಬ್ಯಾನ್ ಮಾಡಬೇಕೆಂದು ನಾವು ಬುಲ್-ಪೀನ ತಟ್ಟಿ ಘೋಷಿಸುತ್ತೇವೆ.

ನಾವು ಪಾತಾಳಕ್ಕೇ ಬಿದ್ದರೂ ನಮ್ಮ ಕಣ್ಣುಮಾತ್ರ ಆಕಾಶವನ್ನೇ ನೋಡುತ್ತಿರುತ್ತದೆ ಎಂಬುದನ್ನು ನೀವೆಲ್ಲ ಮರೆಯಬಾರದು. ನಾವು ಓವರ್ ಟೇಕ್ ಮಾಡಿದ ಮಠದವ ಕೆಲವು ಸಮಯದಿಂದ ಒಂದೇ ಸಮನೆ “ನಮಗೆ ವಾಪಸ್ ಕೊಡಿ”, “ನಿಮ್ಮ ವ್ಯವಹಾರ ಸರಿಯಿಲ್ಲ, ನಮಗೇ ವಾಪಸ್ ಕೊಡಿ” ಎಂದು ಬೆನ್ನುಬಿದ್ದಿದ್ದ.

ಅಂತಹ ಪೀಡೆಗಳನ್ನೆಲ್ಲ ನಿವಾರಿಸಿಕೊಳ್ಳುವುದು ನಮಗ್ಯಾವ ಮಹಾ? ನಮ್ಮ ಹಳದೀ ತಾಲಿಬಾನ್ ಸದಸ್ಯರನ್ನು ಬಿಟ್ಟು,ಆತನ ಚಲನವಲನಗಳನ್ನು ನೋಡಿಕೊಂಡು ಅಪಹರಿಸಿಬಿಟ್ಟೆವು. ತಾನು ಸಂಕಷ್ಟದಲ್ಲಿ ಸಿಲುಕಿದ್ದೇನೆ ಎಂದು ತಿಳುಯೋದರೊಳಗೆ ಆತ ಶೋಕರಹಿತ ಜಾಗ ಎಂಬಲ್ಲಿ ಸೆರೆಯಾಗಿಬಿಟ್ಟ!

ಆತನ ಕೈಲಿ ಮೊಬೈಲ್ ಇತ್ತೆಂದು ನಮಗೆ ತಿಳಿದಿರಲಿಲ್ಲ. “ನನ್ನ ಅಪಹರಣವಾಗಿದೆ” ಎಂದು ಕೆಲವರಿಗೆ ಸುದ್ದಿ ಬಿಟ್ಟುಬಿಟ್ಟ ಅಂತ ಕಾಣುತ್ತದೆ. ಸುದ್ದಿ ಹಂಚುವ ದರಿದ್ರದವರ ವ್ಯಾಪಾರ ನಮ್ಮ ಕೆಲಸ ಅಷ್ಟು ಸುಲಭವಾಗಿ ಆಗಲಿಲ್ಲ. ಇಲ್ಲಾಂದರೆ ನಮಗೆ ಬೇಕಾದ ಕಡೆಗೆಲ್ಲ ಅವನಿಂದ ಸಹಿಗಳನ್ನು ಪಡೆದುಕೊಂಡು, ಮಗ್ಗುಲು ಮುರಿಯುವಂತೆ ನಾಲ್ಕು ತದುಕಿ ಅಟ್ಟಿಸಿ ಓಡಿಸುವಂತೆ ಮಾಡುತ್ತಿದ್ದೆವು.

ನಾವು ಹಿಂದೆ ದರ್ಪದಿಂದ ಕಾಲಿಟ್ಟಲ್ಲೆಲ್ಲ ಇತ್ತೀಚೆಗೆ ಹೀಗೇ ಆಗುತ್ತಿದೆ. ಕೆಲವು ದೇವಸ್ಥಾನಗಳು ಕೈತಪ್ಪಿ ಹೋದವು. ಈಗ ಈ ಮಠವೂ ಕೈತಪ್ಪಿ ಹೋಗುವ ಸಾಧ್ಯತೆ ಇದೆ. ನಂತರ ಯಾವ್ಯಾವುದು ಕೈತಪ್ಪುವುದೋ ಆ ಮಹಾಬಲನೇ ಬಲ್ಲ. ಆದರೆ ಸದ್ಯಕ್ಕಂತೂ ’ನಾವು ಗಟ್ಟಿ ಇದ್ದೇವೆ’ ಎಂದೇ ಬೋರ್ಡು ಹಾಕಿ ಕೂತಿದ್ದೇವೆ. ಆ ಬೋರ್ಡು ಗಟ್ಟಿ ನೇತಾಡುವವರೆಗೆ ತಾಲೀಬಾನಿನವರು “ನಾವಿದ್ದೇವೆ”. “ನಾವಿದ್ದೇವೆ” ಎನ್ನುತ್ತಿರುತ್ತಾರೆ; ಹೀಗಾಗಿ ಆ ಬೋರ್ಡು ಸುರಕ್ಷಿತವಾಗಿ ಬಾಗಿಲ ಮೇಲೆ ನೇತಾಡುತ್ತಿರುವಂತೆ ನೋಡಿಕೊಂಡಿದ್ದೇವೆ.

ಧರ್ಮವನ್ನು ಪುನರುತ್ಥಾನ ಮಾಡಿದ ಐತಿಹಾಸಿಕ ಸಾಧಕ ಸನ್ಯಾಸಿಗಳಿಗೆ ನಮ್ಮನ್ನು ಹೋಲಿಸುವ ಭಕ್ತ ಕುರಿಗಳು ಹಲವಿದ್ದಾವೆ. ಇನ್ನೂ ಕೆಲವು ಮಹಾನ್ ತಪಸ್ವಿಗಳಿಗೆ ನಮ್ಮನ್ನು ಹೋಲಿಸುತ್ತಾರೆ.

’ಪುಷ್ಪಕ ವಿಮಾನ’ ಸಿನಿಮಾದಲ್ಲಿ ಹೀರೋ ಕಮಲ್ ಹಾಸನ್ ಸುಂದರ ಪೆಟ್ಟಿಗೆಯೊಂದರಲ್ಲಿ ಕಕ್ಕವನ್ನು ತುಂಬಿ ಗಿಫ್ಟ್ ಕೊಡುತ್ತಾನಲ್ಲ? ಹಾಗೆ ನಾವೂ ಸಹ ಅಂತದೇ ’ಗಿಫ್ಟ್’ ಕೊಟ್ಟು, ನಮ್ಮ ಬಾವಯ್ಯ ಹೋಗಿ, “ಹಾವಾಡಿಗ ಮಹಾಸಂಸ್ಥಾನದವರು ಅನುಗ್ರಹಿಸಿದ ಧಾರವಾಡ ಪೇಡಾ ಪ್ರಸಾದ, ಎಲ್ಲರೂ ಭಕ್ತಿಯಿಂದ ಸ್ವೀಕರಿಸಿ ಹಂಚಿಕೊಳ್ಳಬೇಕೆಂದು ಅಪ್ಪಣೆಯಾಗಿದೆ” ಎಂದುಬಿಟ್ಟರೆ ಭಕ್ತಕುರಿಗಳೆಲ್ಲ ಅದನ್ನೇ ಪೇಡಾ ಪ್ರಸಾದವೆಂದು ತಿನ್ನುವುದರಲ್ಲಿ ನಮಗೆ ಅನುಮಾನವಿಲ್ಲ.

ನಮ್ಮ ಇಂತಹ ಸಾಧನೆಗಳನ್ನು ಕಂಡೇ ಅವರೆಲ್ಲ ಹಾಗೆ ಹೋಲಿಸಿರಬಹುದು. ಆದರೆ ನಾವು ಶೋಭರಾಜ್‍ಗೆ ಯಾವ ಲೆಕ್ಕದಲ್ಲೂ ಕಮ್ಮಿಯಿಲ್ಲ, ಅದಕ್ಕಿಂತ ದೊಡ್ಡ ಕ್ರಿಮಿನಲ್ ಐಡಿಯಾ ಇರುವವರು ಎಂಬುದು ಭಕ್ತ ಕುರಿಗಳಿಗೆ ಹೇಗೆ ಗೊತ್ತಾಗಬೇಕು? ಶ್ಶ್ ಶ್ಶ್ … ಗೊತ್ತಾಗ್ಬಾರ್‍ದು ಗೊತ್ತಾಗ್ಬಾರ್‍ದು ಗೊತ್ತಾಗ್ಬಿಟ್ರೆ ನಮ್ಮ ಕೆಲಸ ಹೇಗೆ ನಡೀಬೇಕು, ಅಲ್ವೇ?

ನಾವು ಇಲ್ಲೀವರೆಗೆ ನಿಭಾಯಿಸಿದ ಎಲ್ಲಾ ವ್ಯವಹಾರಗಳನ್ನೂ ಬೇಕಾದರೆ ತೆಗೆದುನೋಡಿ, ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದೇವೆ ನಾವು, ಇನ್ನು ವಿಚಾರಣೆ ನಡೆಸುವವರಿಗೆ ಹೇಗೆ ಮಾಡಬೇಕೆಂಬುದು ನಮಗೆ ಗೊತ್ತಿಲ್ವಾ? ಹೀಗಾಗಿಯೇ ನಮ್ಮ ನಡತೆಗಳನ್ನು ಕೂಲಂಕಷವಾಗಿ ಅರಿತವರು ನಮ್ಮನ್ನು ಅತ್ಯಂತ ಗೌರವದಿಂದ “ಜಗದ್ಗುರು ಚಾರ್ಲ್ಸ್ ಶೋಭರಾಜಾಚಾರ್ಯ” ಎಂದು ಕರೆಯುತ್ತಿದ್ದಾರಂತೆ.”

Thumari Ramachandra

source: https://www.facebook.com/groups/1499395003680065/permalink/1623577261261838/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s