ಡಿವೈಡ್ ಅಂಡ್ ರೂಲ್ ಪಾಲಿಸಿ

ಡಿವೈಡ್ ಅಂಡ್ ರೂಲ್ ಪಾಲಿಸಿ

“ಇದು ನಮಗೆ ಹೊಸದೇನೂ ಅಲ್ಲ. ಬ್ರಿಟಿಷರು ಇದನ್ನು ಕಲಿಸಿಕೊಟ್ಟು ತೆರಳಿದ್ದಾರೆ. ಮನುಷ್ಯನಿಗೆ ದೇವರು ತಲೆ ಕೊಟ್ಟಿದ್ದೇಕೆ? ಉಪಯೋಗಿಸಲಿಕ್ಕೆ. ಯಾವ ಸಮಯದಲ್ಲಿ ಯಾವುದನ್ನು ಡಿವೈಡ್ ಮಾಡಿದರೆ ಅನುಕೂಲ ಎಂಬುದನ್ನು ನೋಡಿ ಉಪಾಯದಿಂದ ಡಿವೈಡ್ ಮಾಡಬೇಕು.

ಅದು ಕೆಲಸವೇ ಇರಬಹುದು, ಭಕ್ತ ಕುರಿಗಳ ಮೆಂದೆಯೇ ಇರಬಹುದು, ನಮ್ಮಿಂದ ಪ್ರಯೋಜನ ಪಡೆದುಕೊಂಡು ನಮ್ಮ ಕೆಲಸಗಳನ್ನು ನಡೆಸಿಕೊಡುತ್ತ ಜೈಕಾರ ಕೂಗುವ ಹಳದೀ ತಾಲಿಬಾನ್ ಪಡೆಯೇ ಇರಬಹುದು, ನಮಗೆ ಆಗಾಗ ಬೇಕಾಗುವ ರಾಜಕಾರಣಿಗಳ ದಂಡೇ ಇರಬಹುದು, ಸೇವೆಯಲ್ಲಿರುವ ಗಿಂಡಿಗಳೇ ಇರಬಹುದು ಅಥವಾ ಮಂಚಕ್ಕೆ ಬರುವ ಲಲನೆಯರ ಗುಂಪೇ ಇರಬಹುದು.

ಯಾರಗುಂಪನ್ನು ಯಾವಾಗ ಒಡೆಯಬೇಕು ಮತ್ತು ಯಾರಿಗೆ ಎಲ್ಲಿ ಬತ್ತಿ ಇಡಬೇಕೆಂಬುದನ್ನು ಯತಿಯಾದವ ಮೊದಲು ತಿಳಿದುಕೊಳ್ಳಬೇಕೆಂಬುದು [ಕಳ್ಳ]ಸನ್ಯಾಸಿಯಾದ ನಮ್ಮ ಸಲಹೆ. ಬತ್ತಿ ಇಡುವುದಕ್ಕೆ ಹಲವು ಅರ್ಥಗಳಿವೆ. ಶಿಲೆಯ ಬಂಡೆಯನ್ನು ಒಡೆಯಲು ಡೈನಮೈಟ್ ಇಡುತ್ತಾರಲ್ಲ ಅಲ್ಲಿ ಬಳಸುವುದೂ ಬತ್ತಿಯನ್ನೇ. ಸಾಮಾನ್ಯವಾಗಿ ಬೆಂಕಿ ಹಚ್ಚಲು ಹಲವೆಡೆ ಕಾಮನ್ ಆಗಿ ಬಳಸುವುದು ಬತ್ತಿಯನ್ನೇ. ಬತ್ತಿ ಇಡುವುದು ಎಂಬ ಕೆಲಸದ ಅರ್ಥ ನಿಮಗೀಗ ತಿಳಿದಿರಬಹುದಲ್ಲವೇ?

ಭಕ್ತಕುರಿಗಳಲ್ಲಿ ಹಲವಂತೂ ಶತಮಾನ ಕಳೆದರೂ ಮತ್ತೆ ಕುರಿಯಾಗಲೇ ಲಾಯಕ್ಕು ಎಂಬುದು ನಮಗೆ ಗೊತ್ತಿತ್ತು. ಕೆಲವು ಮಾತ್ರ ಟ್ಯೂಬ್ ಲೈಟ್ ರೀತಿ ಇದ್ದವು, ಹೀಗಾಗಿ ಈಗಲೂ ನಾವು ಹೇಳುತ್ತಿರುವುದು ಎಲ್ಲರಿಗೂ ಅರ್ಥವಾಗುತ್ತದೆ ಎನ್ನಲು ಸಾಧ್ಯವಿಲ್ಲ.

ನಾವು ಬತ್ತಿ ಇಡುವ ಕೆಲಸ ಸಾಮಾನ್ಯ ಯಾರಿಗೂ ತಿಳಿಯೋದಿಲ್ಲ. ಹಿಂದೆಲ್ಲ ದೇವತೆಗಳು ರಾತ್ರೋರಾತ್ರಿ ಶಿಲಾಮಯ ದೇವಸ್ಥಾನಗಳನ್ನು ಕಟ್ಟಿ ನಿರ್ಮಿಸುತ್ತಿದ್ದರಂತಲ್ಲ? ಹಾಗೆಯೇ ನಮ್ಮ ಬತ್ತಿ ಇಡುವ ಕೆಲಸವೂ ಸಹ. ಎಷ್ಟು ಹೊತ್ತಿನಲ್ಲಿ ಯಾರಿಗೇ ಬೇಕಾದರೂ ನಾವು ಬತ್ತಿ ಇಡಬಹುದು. ಯಾಕೆಂದ್ರೆ…ಯಾಕೆಂದ್ರೆ…..ಯಾಕೆಂದ್ರೆ ನಾವು ಸರ್ವತಂತ್ರ ಸ್ವತಂತ್ರರು.

ಆರು ವರ್ಷಗಳ ಹಿಂದೆ ನಮ್ಮ ಕುಲಪತಿ ಬಾವಯ್ಯನ ರಾಸಲೀಲೆಗಳು ಮತ್ತು ಬಾಲಕಿಯರ ಮೇಲೆಸಗಿದ ದೌರ್ಜನ್ಯಗಳು ಬಯಲಾಗುತ್ತಿದ್ದಂತೆ ದೂರಕ್ಕೆ ಹಾರಿಬಿಟ್ಟೆವು ನಾವು. ಮರಳಿ ಬರುವುದರೊಳಗೆ ಹೇಗೂ ಒಂದು ಲೆವೆಲ್ಲಿಗೆ ಕುರಿಗಳು ಸಮಾಧಾನಗೊಂಡಿರುತ್ತವೆ ಎಂಬುದು ನಮ್ಮ ಅನಿಸಿಕೆಯಾಗಿತ್ತು.

ಮರಳಿ ಬಂದ ನಾವು ಮೊದಲು ಮಾಡಿದ್ದೇ ಕಂಡಲ್ಲೆಲ್ಲ ಹೋಗಿ ಭಕ್ತಕುರಿಗಳ ಮೆಂದೆಗಳ ಮುಂದೆ ಮೊಸಳೆ ಕಣ್ಣೀರು ಹಾಕಿದ್ದು. ನಂತರ ಮಾಡಿದ್ದೇ ನಮ್ಮ ಎಲ್ಲಾ ಮಂಡಲದ ಸೋ ಕಾಲ್ಡ್ ಅಧಿಕಾರಿಗಳನ್ನೆಲ್ಲ ಕಿತ್ತೆಸೆದು ಬದಲಾಯಿಸಿದ್ದು. ಈ ಕೆಲಸ ರಾತ್ರೋರಾತ್ರಿಯೇ ನಡೆಯಿತು. ಅನೇಕರಿಗೆ ನಾವು ಹೀಗೆ ಬತ್ತಿ ಇಡುತ್ತೇವೆ ಎಂಬ ಕನಸೂ ಕೂಡ ಬಿದ್ದಿರಲಿಲ್ಲ. ಮೊದಲಿದ್ದವರನ್ನೇ ಮುಂದೆಯೂ ಇಟ್ಟುಕೊಂಡರೆ ನಮಗೂ ಕಷ್ಟ, ನಮ್ಮ ಬಾವಯ್ಯನಿಗಂತೂ ಸಾಧ್ಯವೇ ಇಲ್ಲ. ಹೀಗಾಗಿ ಬದಲಾಯಿಸಿಬಿಟ್ಟೆವು.

ನಾವು ಹೀಗೆಲ್ಲ ಬದಲಾಯಿಸಿದರೂ “ಯಾಕೆ ಬದಲಾಯಿಸುತ್ತೀರಿ?” ಎಂದು ಕೇಳುವ ಎದೆಗಾರಿಕೆ ಯಾವ ಗಂಡಸಿಗೂ ಇಲ್ಲ ಬಿಡಿ; ನಮ್ಮಲ್ಲಿ ನಾವು ಮಹಿಳೆಯರಲ್ಲೇ ಸಕತ್ ’ಎದೆಗಾರಿಕೆ’ಯನ್ನು ಕಂಡಿದ್ದು, ಪುರುಷರಲ್ಲಲ್ಲ. ನಮ್ಮೆದುರು ಜಾಸ್ತಿ ಎದೆಗಾರಿಕೆ ತೋರುವ ಮಹಿಳೆಯರನ್ನು ’ಸಬಲೀಕರಣ’ಕ್ಕೆ ತೊಡಗಿಸಿದೆವು ಅಷ್ಟೆ. ಮಹಿಳೆಯರ ಸಬಲೀಕರಣ ನಡೆಸುವಾಗ ಅವರ ಗಂಡಂದಿರು ಎನ್ನುವ ಕುರಿಗಳನ್ನು ರೂಮಿನ ಹೊರಗೆ ಕೂರಲು ಹೇಳುತ್ತಿದ್ದೆವು. ಅಂತಹ ಅನೇಕ ಗಂಡ-ಹೆಂಡಿರ ನಡುವೆ ನಾವಿಟ್ಟ ಬತ್ತಿ ಅಂತಿಂತದ್ದಲ್ಲ.

ಕೈಮುಗಿದು ಗಂಟೆಗಟ್ಟಲೆ ಹೊರಗೆ ಕಾಯುತ್ತ ಕುಳಿತ ಒಂದೇ ಒಂದು ಗಂಡ ಯಾನೇ ಗಂಡು ಕುರಿಯೂ, ’ಯತಿ’ಯೊಡನೆ ಒಳಗುಳಿದ ತನ್ನ ಹೆಣ್ಣುಕುರಿಯ ಗತಿಯೇನಾಗಿರಬಹುದೆಂದು ಯಾವ ಕ್ಷಣದಲ್ಲೂ ಯೋಚಿಸದಂತೆ ಸಮ್ಮೋಹನಾಸ್ತ್ರವನ್ನು ಪ್ರಯೋಗಿಸಿದ್ದೆವು. ಹೀಗಾಗಿ ಒಳಗೆ ಬಂದವರಿಗೂ ಹೊರಗೆ ಕುಳಿತವರಿಗೂ ನಾವಿಡುತ್ತಿರುವ ಬತ್ತಿಯ ರಹಸ್ಯ ಗೊತ್ತಾಗಲೇ ಇಲ್ಲ.

ಹಿಂದೆ ಬೀಚಿನಲ್ಲಿ ನಾವು ವಿದೇಶೀ ’ಸೂರ್ಯ-ಚಂದ್ರ’ರನ್ನು ಕಣ್ತುಂಬಿಸಿಕೊಳ್ಳುತ್ತಿದ್ದುದು ಮತ್ತು ಭಟ್ಟರ ಮಗಳನ್ನು ಹಿಡಿಯಲು ಹೋಗಿದ್ದು, ದಶಕದಿಂದ ಏಕಾಂತದಲ್ಲಿ ಸರ್ಪಾಸ್ತ್ರ ಪ್ರಯೋಗ ನಡೆಸುತ್ತಿರುವುದು ಇವೆಲ್ಲವೂ ನಮ್ಮ ಕುಲಪತಿ ಬಾವಯ್ಯನಿಗೆ ನೂರಕ್ಕೆ ಇನ್ನೂರರಷ್ಟು ಗೊತ್ತು. ಅನೇಕ ಘಟನೆಗಳಲ್ಲಿ ನಾವೀರ್ವರೂ ಭಾಗೀದಾರರು.

ಆರು ವರ್ಷಗಳ ಹಿಂದೆ ಬಾವಯ್ಯನನ್ನು ಹೊರದೂಡಬೇಕಾದ ಪ್ರಸಂಗ ಎದುರಾದಾಗ “ನನ್ನನ್ನು ಹೊರದೂಡಿದರೆ ನಿನ್ನ ಸರ್ವ ಬಣ್ಣವನ್ನೂ ಬಯಲು ಮಾಡುತ್ತೇನೆ” ಎಂದು ಆತ ಗುಡುಗಿದ್ದರಿಂದ ಬಾವಯ್ಯನನ್ನು ಆಚೆ ಹಾಕಲಾರದ ಅನಿವಾರ್ಯ ಸ್ಥಿತಿಯಲ್ಲಿ ನಾವು ಸಿಲುಕಿಕೊಂಡೆವು. ತಿಂದರೂ ಉಂಡರೂ ನಮ್ಮ ಬಾವಯ್ಯನೇ ತಾನೇ? ಬಿದ್ಕೊಂಡಿರ್‍ಲಿ ಎಂದು ಬಿಟ್ಟುಬಿಟ್ಟೆವು.

ಬಾವಯ್ಯನ ವಿರುತ್ತ ದಂಡೆತ್ತಿ ಬಂದವರ ಮಧ್ಯೆ ಬತ್ತಿ ಇಟ್ಟು, ಅವರನ್ನೆಲ್ಲ ಒಡೆದಾಳುವ ಮೂಲಕ ಬಾವಯ್ಯನನ್ನು ಸೇಫ್ ಗಾರ್ಡ್ ಮಾಡಿ, “ಕೆಲವು ತಿಂಗಳು ಬಿಸಿ ತಣ್ಣಗಾಗುವವರೆಗೆ ಬೆಂಗಳೂರಲ್ಲಿರು ಮಾರಾಯ” ಎಂದು ಕಳಿಸಿಕೊಟ್ಟೆವು; ನಮ್ಮ ಹಾವಾಡಿಗ ಮಹಾಸಂಸ್ಥಾನದ ಗಿಂಡಿಗಳು,ಪಾರುಪತ್ತೆದಾರರು ಯಾರೇ ಇರ್ಲಿ, ಇಂತದ್ದೇ ಎಡವಟ್ಟುಗಳಲ್ಲಿ ಸಿಲುಕಿಕೊಂಡರೆ ಈಗಲೂ ನಾವು ಮಾಡುವುದೇ ಹಾಗೆ. ಸಸ್ಪೆಂಡ್ ಆದ ನೌಕರರು ಮತ್ತೆ ನಿಧಾನವಾಗಿ ಅದೇ ಜಾಗಕ್ಕೆ ಸೇರಿಕೊಳ್ಳುವ ಟ್ರಿಕ್ ನಿಮಗೆ ಗೊತ್ತಲ್ಲವೇ? ಅದೇ ವಿದ್ಯೆ ಇಲ್ಲೂ ಸಹ.

ಮರಳಿ ಪುರಪ್ರವೇಶ ಮಾಡಿದ ನಮ್ಮ ಬಾವಯ್ಯ ’ಗಾಂವ್ ಕಾ ಶೇರ್’ ಕತೆಯ ಬೃಹತ್ ಹೋರಿಯಂತೆ ಎದೆ ಸೆಟೆದು ಎದ್ದು ನಿಂತು, ಈ ಹಿಂದೆ ತಾನೇ ಹಾಕಿಟ್ಟ ಹಲವು ಎತ್ತುವಳಿ ಯೋಜನೆಗಳನ್ನು ಹಳದೀ ತಾಲಿಬಾನ್ ಮೂಲಕ ಪ್ರಚುರಪಡಿಸಿ, ಇನ್ನೊಂದಷ್ಟು ಮಸಾಲೆಯನ್ನು ಅರೆದು ಸೇರಿಸಿ ಗುಟುರು ಹಾಕಿದ.

“ದೊಡ್ಡ ಸಂಸ್ಥಾನ ಅಂದರೆ ಸುಳ್ಳು ಆಪಾದನೆಯೆಲ್ಲ ಇದ್ದಿದ್ದೇ ಅಲ್ವೆ?”

“ಅಲ್ವೇ ಮತ್ತೆ?”

ಎಂದು ಕೆಲವು ಬೊಚ್ಚುಬಾಯಿ ಭಕ್ತಕುರಿಗಳು ಜುಟ್ಟಾಲ್ಲಾಡಿಸುತ್ತ ತಮ್ಮತಮ್ಮಲ್ಲೇ ಪ್ರಶ್ನೋತ್ತರ ನಡೆಸಿ ಸಮಸ್ಯೆಗೆ ಮಂಗಳ ಹಾಡಿದವು; ನಮ್ಮ ಕೆಲಸ ಸಲೀಸಾಯಿತು.

ನಮ್ಮ ಅರ್ಥಾತ್ ’ಹಾವಾಡಿಗ’ ಮಹಾಸಂಸ್ಥಾನದವರ ಹೊರಗಡೆಯ ವ್ಯಾವಹಾರಿಕ ’ಸ್ನೇಹ’ದ ಫಲವಾಗಿ ಬಾವಯ್ಯ ಕೇಸಿನಲ್ಲಿ ವಿಜಯ ಪತಾಕೆ ಹಾರಿಸಿದ. ಸೋತವರು ಪಾನಿಪೂರಿ ಹಾಕಲೂ ಗತಿಯಿಲ್ಲದಷ್ಟು ಬಡತನಕ್ಕಿಳಿಯುವಂತೆ ನಾವು ನೋಡಿಕೊಂಡೆವು. ಅಷ್ಟೇ ಅಲ್ಲ; ನಡುವಯಸ್ಸಿನ ಆ ದಂಪತಿಯ ಮಧ್ಯೆ ಬತ್ತಿ ಇಟ್ಟು ಹೆಂಡತಿ ಗಂಡನನ್ನು ಬಿಟ್ಟುಹೋಗುವಂತ ಪುಣ್ಯಕಾರ್ಯ ನಡೆಸಿದೆವು.

ನಮ್ಮಲ್ಲಿ ಕೌಟುಂಬಿಕ ಸಮಸ್ಯೆ ಹೊತ್ತುಬಂದ ಯಾವುದೇ ದಂಪತಿಯನ್ನೂ ಒಟ್ಟಿಗೇ ನೆಟ್ಟಗೆ ಇರಲು ಬಿಡಲೇ ಇಲ್ಲ ನಾವು; ನಮ್ಮಲ್ಲಿ ಬಂದವರೆಲ್ಲ ಬೇರೆ ಬೇರೆಯಾಗಿ ಹೆಂಡಂದಿರಿಗೆ ನಮ್ಮ ’ವಿಶ್ವರೊಪ ದರ್ಶನ’ ಪ್ರಾಪ್ತಿಯಾಗಿ ಎಲ್ಲರೂ ’ಸುಖ’ವಾಗಿದ್ದಾರೆ ಈಗ.

ಸಮಸ್ಯೆ ಎದುರಾದಾಗ ವಿರೋಧೀ ಬಣವನ್ನು ಒಡೆದು ಬಿಡುವುದು ನಮ್ಮ ಸಾಧನೆ; “ಇಂತಹ ಮನೆಹಾಳ ಕಚ್ಚೆಹರುಕು ಮಹತ್ಸಾಧನೆ ಮಾಡಲು ಯತಿಯಾಗಬೇಕಿತ್ತೇ?” ಎಂದು ಯಾರೋ ಒಂದಷ್ಟು ಜನ ಕೇಳಿದ್ದರಂತೆ, ಹೋಗಲಿ ಬಿಡಿ; ಅದರಿಂದ ನಮಗೇನೂ ನಷ್ಟವಿಲ್ಲ.

ಈಗಲೂ ನಾವು ನಮ್ಮ ಬೇಳೆ ಬೇಯಿಸುತ್ತಿರುವುದು ಒಡೆದಾಳುವ ನೀತಿಯಿಂದಲೇ ಎಂಬುದು ಕುರಿಗಳಿಗೆ ಇನ್ನೂ ಅರ್ಥವಾಗಿಲ್ಲ; ಹಾಗಾಗಿಯೇ ನಾವು ಇನ್ನೂ ಸೀಟಿನಲ್ಲೇ ಇದ್ದೇವೆ. ಕಾವಿ ಎಂಬ ಹಗಲುವೇಷ ತೊಟ್ಟು ಬೆಳಗಾದರೆ ಪೂಜೆ,ಪ್ರವಚನ,ಪ್ರಸಾದ, ಸಂಜೆಯಾದರೆ ಬಾಯಲ್ಲಿ ಪುರಾಣ, ಪುಣ್ಯ ಕತೆ, ಜೊತೆಜೊತೆಗೆ ಅಂದಂದಿನ ಇರುಳಿನ ಏಕಾಂತದಲ್ಲಿ ಯಾರಿಗೆ ದೋಖಾ ಕೊಡೋಣ ಎಂಬ ಯೋಚನೆ, ರಾತ್ರಿ ’ವಿಶ್ವರೂಪ ದರ್ಶನ’ ವಿನಿಯೋಗ.

ಉತ್ತರದ ಕಡೆಗೆ ಹೇಗೂ ಬಡಕುರಿಗಳಿದ್ದಾವೆ, ದಕ್ಷಿಣದವು ತೀರಾ ಕುರಿಗಳಿರಲಿಕ್ಕಿಲ್ಲ ಎಂದುಕೊಂಡು ಕಳೆದ ಸಲ ಸೀದಾ ’ಕುರಿವಾಡೆ’ಗೆ ಹೋಗಿ ಝಾಂಡಾ ಹೂಡಿಬಿಟ್ಟೆವು. ನಂತರ ತಿಳಿದದ್ದು ದಕ್ಷಿಣದಲ್ಲೂ ಸಾಕಷ್ಟು ಕುರಿಗಳಿವೆ ಎಂಬುದು. ಅಂತಹ ಕುರಿಗಳನ್ನೆಲ್ಲ ನಮ್ಮ ಹಳದೀ ತಾಲೀಬಾನಿಗರ ಮೂಲಕ ಸಂಪರ್ಕಿಸಿ, ಒಟ್ಟಿಗೆ ಇಟ್ಟುಕೊಂಡೆವು.

ಮೆಂದೆಯಿಂದ ತಪ್ಪಿಸಿಕೊಳ್ಳಲಾರದಂತೆ ಸಲಹಿಕೊಂಡ ಕುರಿಗಳೆದುರಲ್ಲಿ ನಾವು ನಡೆಸಿದ್ದೇ ಪೂಜೆ, ಎತ್ತಿದ್ದೇ ಮಂಗಳಾರತಿ, ಕೊಟ್ಟಿದ್ದೇ ತೀರ್ಥ,ಪ್ರಸಾದ, ಹಾಕಿದ್ದೇ ಅಭಿವೃದ್ಧಿ ಯೋಜನೆ. ಏನೇ ಮಾಡಿದರೂ “ಜೈ ಜೈ ಜೈ ಜೈ ಮೇ ಮೇ ಮೇ” ಎನ್ನುತ್ತವೆಯೇ ವಿನಃ ಯಾವುದೂ ಹುಲಿಯಂತೆ ಗುರ್ರ್ ಎನ್ನುವುದಿಲ್ಲ.

ಇಂತಿಪ್ಪ ಕುರಿಮೆಂದೆಗೆ ಧರ್ಮ,ತರ್ಕ, ಶಾಸ್ತ್ರ,ವೇದ ಇವುಗಳಲ್ಲಿ ಆಳವಾದ ಪಾಂಡಿತ್ಯ ಇರಲು ಸಾಧ್ಯವೇ? ಇದ್ದರೆ ಪರಿಸ್ಥಿತಿ ಹೀಗಿರುತ್ತಿರಲಿಲ್ಲ ಎಂದು ಚಿತ್ರಗುಪ್ತ ಹೇಳಿದ್ದಾನೆ. ’ಯತಿ’ವೇಷದ ನಮಗೇ ಏನೊಂದೂ ಗೊತ್ತಿಲ್ಲ, ಇನ್ನು ನಮ್ಮನ್ನೇ ದೇವರೆಂದು ಆರಾಧಿಸುವ ಅವುಗಳ ಕತೆ ಏನು?

ಮಧ್ಯೆ ಮಧ್ಯೆ, “……..ಇತಿಹಾಸವುಳ್ಳ ಪರಂಪರೆಯ ಯತಿಯ ಮೇಲೆ ಎಂತಹ ಆಪಾದನೆ ನೋಡಿ. ನಾವು ಆಪಾದನೆಗಳಿಗೆಲ್ಲ ಜಗ್ಗುವರಲ್ಲ. ಬಾಗಿದವರಿಗೆ ಹರಸಲೂ [ಬೋಳಿಸಲೂ?] ಗೊತ್ತು, ತಿರುಗಿ ಬಿದ್ದವರಿಗೆ ಬಾಣ ಬಿಡಲೂ ಗೊತ್ತು,ನಮ್ಮದು ವೀರ್ಯಸನ್ಯಾಸ” ಎಂದು ಭಾಷಣ ಮಾಡಿಬಿಟ್ಟರೆ ಎಲ್ಲಾ ಕುರಿಗಳು ಯಪರು ತೆಪರು ಮುಖಮಾಡಿಕೊಂಡು “ಮೇ ಮೇ” ಎನ್ನುತ್ತ ಸದ್ದುಹೊರಡಿಸುತ್ತವೆ.”

——————-

ಸಾರ್ವಜನಿಕರಲ್ಲಿ ಕೇಳಿಬಂದ ದನಿ-

“ಹೆಣ್ಣಿಗೆ ಶೀಲ, ಕೋತಿಗೆ ಬಾಲ, ಭಕ್ತಕುರಿಗಳಿಗೆ ಯಾವುದು ಭೂಷಣ?”

“ಕಚ್ಚೆಹರುಕನ ಭಾಷಣ.”

Thumari Ramachandra

source: https://www.facebook.com/groups/1499395003680065/permalink/1623200834632814/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s