ಭಸ್ಮಾಸುರ ಮೋಹಿನಿ ಪ್ರಸಂಗಕ್ಕೊಂದು ಹೊಸ ಭಾಷ್ಯ
“ಕಾಲ ಹೀಗೇ ಇರುತ್ತದೆಂದು ಯಾರೂ ಹೇಳಲು ಸಾಧ್ಯವಿಲ್ಲ. ನಮ್ಮ ಸನ್ಯಾಸದ ಆರಂಭದಿಂದಲೂ ನಾವು ಉಪಯೋಗಿಸಿದ ಟ್ರಿಕ್ಕುಗಳನ್ನು ನಾವೀಗ ಮನನ ಮಾಡುತ್ತಿದ್ದೇವೆ. ನಮ್ಮ ಟ್ರಿಕ್ಕುಗಳನ್ನು ಬೇರೆಯವರು ಅರಿಯುವ ಮೊದಲೇ ನಾವು ಬದಲಾಯಿಸಬೇಕಾಗಿತ್ತು. ಅಲ್ಲೇ ನಾವು ಎಡವಟ್ಟುಮಾಡಿಬಿಟ್ಟಿದ್ದೇವೆ.
ಬುಸ್ಸಪ್ಪನ ಆಟ ಕಾಟ ಏನಾದ್ರೂ ಅಂದ್ಕೊಳಿ ಅದರಿಂದ ನಮಗೆ ’ಹಾವಾಡಿಗ ಮಹಾಸಂಸ್ಥಾನ’ವೆಂಬ ’ಬಿರುದ’ನ್ನು ಜನತೆ ದಯಪಾಲಿಸಿದೆ. ಮೊದಮೊದಲು ಇಂತದ್ದೆಲ್ಲ ಅಂತರ್ಜಾಲದಲ್ಲಿ ಪ್ರಸಾರವಾದಾಗ ತಕ್ಷಣವೇ ಕೌಂಟರ್ ಅಟ್ಯಾಕ್ ಮಾಡಿಸಿ, ಸಂಬಂಧಿಸಿದವರ ಮೂಲ ಹುಡುಕಿಸಿ ಅವರ ಸಂಬಂಧಿಕರಿಗೆಲ್ಲ ಬೆದರಿಕೆಯ ಕರೆಗಳನ್ನು ಮಾಡಿಸುತ್ತಿದ್ದೆವು ನಾವು. ಇಂದು ನಮ್ಮ ಬೆದರಿಕೆಗಳಿಗೆ ಬೆಲೆಯೇ ಇಲ್ಲ. ಬೆದರಿಕೆ ಕರೆಗಳನ್ನು ಮಾಡುತ್ತಿದ್ದ ನಮ್ಮ ತಾಲಿಬಾನಿನವರೇ ಈಗ ಹಣಕ್ಕಾಗಿ ನಮ್ಮನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ.
ಆಸ್ತಿಯಲ್ಲಿ ಸರಿಯಾಗಿ ಹಿಸ್ಸೆ ಬರೆದು ವಿಲ್ ಮಾಡುವವರೆಗೆ ಅಪ್ಪ ಹೇಳಿದಂತೆ ಕೇಳುವ ಮಕ್ಕಳು ಹಲವರಿದ್ದಾರೆ; ಆಮೇಲೆ ಅಪ್ಪ ಯಾರೋ ಮಕ್ಕಳು ಯಾರೋ ಎಂಬಂತೆ ನಡೆದುಕೊಳ್ಳುವುದೂ ಉಂಟು; ಅಪ್ಪನನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವುದೂ ಉಂಟು.
ಸನ್ಯಾಸ ದೀಕ್ಷೆ ಸಿಗುವವರೆಗೆ ಬಳಲುತ್ತಿದ್ದ ಸ್ವಾಮಿಗಳ ಕೈಕಾಲು ಹಿಡಿದವರು ನಾವು. ಆಗ ಅವರು ಹೇಳಿದ್ದಕ್ಕೆಲ್ಲ ಅಸ್ತು ಎಂದೆವು; ಅಧ್ಯಯನಕ್ಕಾಗಿ ಹರಿದ್ವಾರಕ್ಕೆ ಹೋಗಲೂ ಒಪ್ಪಿಕೊಂಡಿದ್ದೆವು-ಅದು ಸಮಾಜದ ಗಣ್ಯರೆದುರಲ್ಲಿ ಮಾತ್ರ. ಮಾರನೇ ದಿನವೇ ನಾವು ಹಾಕಿದ ಪ್ಲೇಟ್ ಬದಲಾಯಿಸಿ ಹರಿದ್ವಾರಕ್ಕೆ ಹೋಗಲು ನಿರಾಕರಿಸಿದೆವು ನಾವು. “ಮಳ್ಳು ಹೇಳ್ತಿ, ಇಲ್ಲಿನ ಈರುಳ್ಳಿ ಉಪ್ಪಿಟ್ಟು, ಮಸಾಲೆ ದೋಸೆ, ಬಣ್ಣದ ಹುಡುಗಿಯರನ್ನೆಲ್ಲ ಬಿಟ್ಟು ಯಾರಾದ್ರೂ ಹರಿದ್ವಾರಕ್ಕೆ ಹೋಗ್ತಾರಾ?” ಎಂದುಕೊಂಡವರು.
ನಮಗೆ ಸಂಸ್ಥಾನದ ಆಸ್ತಿ ಮತ್ತು ಅದರಿಂದ ನಮಗೆ ಮತ್ತು ಕುಟುಂಬಕ್ಕೆ ಸಿಗುವ ಸುಲಭ ಆದಾಯದ ಮೇಲೆ ಕಣ್ಣಿತ್ತೇ ಹೊರತು ಸನ್ಯಾಸ ನಮಗೆ ಮುಖ್ಯವಾಗಿರಲಿಲ್ಲ. ಸನ್ಯಾಸ ತೆಗೆದುಕೊಂಡಮೇಲೆಯೂ ನಮಗೆ ಬೇಕಾದಂತೆ ನಾವು ನಡೆಯುತ್ತಿದ್ದೇವೆಯೇ ವಿನಃ ಸನ್ಯಾಸ ಧರ್ಮಕ್ಕೆ ನಾವು ಅಂಟಿಕೊಂಡಿಲ್ಲ. ಹೊರಗೆ ಇದನ್ನೆಲ್ಲ ಹೇಳಿದರೆ ಭಕ್ತ ಕುರಿಗಳಿಂದ ಬರುವ ಅದಾಯ ನಿಂತು ಹೋಗುತ್ತದೆಂಬ ತಿಳುವಳಿಕೆಯಿಂದ ಹೊರನೋಟಕ್ಕೆ ನಾವು ಮಹಾತಪಸ್ವಿಗಳು!
ಈಹ್ವರ ಭಸ್ಮವನ್ನು ಚೆಲ್ಲಿದಾಗ ಹುಟ್ಟಿದವ ಭಸ್ಮಾಸುರ. ಅಪ್ಪನಿಗಿಂತ ಮಗ ಶಕ್ತಿವಂತ ಎಂಬಷ್ಟು ಮೆರೆದಾಡಿದವ. “ನಿನ್ನಮ್ಮ” ಎಂದರೂ ಪಾರ್ವತಿಯನ್ನೇ ಮೋಹಿಸಿ ಕಾಡಲು ತೊಡಗಿದವ. ಬೋಳೇ ಶಂಕರ ತನ್ನ ಸಾತ್ವಿಕತೆಯಿಂದ ವರವನ್ನು ನೀಡಿದ ತಕ್ಷಣ ಮೊದಲು ಪ್ರಯೋಗಿಸಲು ಹೊರಟಿದ್ದೇ ಎದುರಿದ್ದ ಅಪ್ಪನಮೇಲೆ!
ನಾವೂ ಸಹ ಮೊದಲಿನಿಂದಲೂ ಮಾಡಿದ್ದು ಇದನ್ನೇ. ನಮ್ಮ ನಡತೆಗಳನ್ನು ಸರಿಯಾಗಿ ವಿಶ್ಲೇಷಿಸಿದವರಿಗೆ ಮಾತ್ರ ಇದು ಅರ್ಥವಾಗಿದೆ. ಅಲ್ಲಿಂದಿಲ್ಲಿಗೂ ನಾವು ಹಾಕಿದ ಪ್ಲೇಟ್ ಚೇಂಜ್ ಮಾಡುತ್ತಲೇ ಬಂದಿದ್ದೇವೆ. ಮೊದಲು ಹೇಳಿದ್ದಕ್ಕೆ ಗಂಟೆಗಳ ನಂತರ ಬೆಲೆ ಇರುವುದಿಲ್ಲ. ಹಾಗಾಗಿಯೇ ನಮ್ಮ ಯೋಜನೆಗಳೂ ಸಹ ಹಳ್ಳಹಿಡಿದಿದ್ದು.
ಮೇಲಾಗಿ ಅಂತಹ ಯೋಜನೆಗಳೆಲ್ಲದರ ಗುರಿ ಖಾಸಗಿ ಬೊಕ್ಕಸಕ್ಕಾಗಿ ಎತ್ತುವಳಿ ಮಾಡುವುದಾಗಿದ್ದು ಕುಲಪತಿ ಬಾವಯ್ಯ ಯೋಜನೆಗಳ ಸೂತ್ರಧಾರನಾಗಿದ್ದಾನೆ. ಬಂದದ್ದರಲ್ಲಿ, ಕೊಂಕಣಿಗರು ಹೇಳುವ ಹಾಗೆ ’ತುಕ್ ಅರ್ಧ ಮಕ್ ಅರ್ಧ’ ಎಂಬ ಲೆಕ್ಕಾಚಾರ.
ದುರುದ್ದೇಶಪೂರಿತ ಯಾವುದೇ ಕೆಲಸವೂ ಸಹ ದುರಂತವನ್ನೇ ಕಾಣುವುದು ಎಂಬುದು ಇಂದು ನಮಗೆ ಅರಿವಾಗುತ್ತಿದೆ; ಆದರೂ ಬಹಿರಂಗವಾಗಿ ಒಪ್ಪಿಕೊಳ್ಳಲು ನಾವು ಸಿದ್ಧರಿಲ್ಲ. ಏನಿದ್ದರೂ ನಮ್ಮ ವ್ಯವಹಾರ ನಾಲ್ಕು ಗೋಡೆಗಳ ಮಧ್ಯವೇ ನಡೆಯಬೇಕೆಂಬುದು ನಮ್ಮ ನಿಯಮ. ನಾವು ಪರಕಾಯ ಶಯನ ಮಾಡಿದ ಪಲ್ಲಂಗದ ವ್ಯವಹಾರವೂ ಅದೇ ನಾಲ್ಕುಗೋಡೆಗಳ ನಡುವೆಯೇ ನಡೆದಿದ್ದು ಅದಕ್ಕೆ ಸಂಬಂಧಿಸಿದ ಮಾತುಕತೆಗಳೂ ಸಹ ಅಂತಲ್ಲೇ ನಡೆದಿದ್ದವು.
ಬೋಳೇ ಶಂಕರನ ಸಹಾಯಕ್ಕೆ ಮಹಾವಿಷ್ಣು ಮೋಹಿನಿಯಾಗಿ ಬಂದಂತೆ, ಇಲ್ಲಿ ಬೋಳೆ ಶಂಕರರಾದ ನಮ್ಮ ಭಕ್ತಕುರಿಗಳ ಸಹಾಯಕ್ಕೆ ಸೀತೆಯ ಗಂಡ ’ಗಾಯನಮೋಹಿನಿ’ಯ ರೂಪದಲ್ಲಿ ಬಂದ ಎಂದರೆ ತಪ್ಪಾಗಲಾರದು. ಮೋಹಿನಿಯ ಸೌಂದರ್ಯಕ್ಕೆ ಮನಸೋತ ಭಸ್ಮಾಸುರ ಆಕೆ ಹೇಳಿದ ಹಾಗೆಲ್ಲ ನಡೆದುಕೊಂಡು ಭಸ್ಮವಾಗಿ ಬಿದ್ದ. ’ಗಾಯನಮೋಹಿನಿ’ಯನ್ನು ನಾವಿಷ್ಟಪಟ್ಟಂತೆ ನಡೆದುಕೊಳ್ಳ ಹೇಳಿದ್ದರಿಂದ ನಾವು ಸಿಕ್ಕಿಬಿದ್ದು ಪರಪ್ಪ ವನವಾಸಕ್ಕೆ ದಿನ ಎಣಿಸುತ್ತಿದ್ದೇವೆ.
ಜಗವ ಸುತ್ತಿರುವುದು ನಿನ್ನಯ ಮಾಯೆ
ನನ್ನ ಸುತ್ತಿರುವುದು ನಿನ್ನ ದಯೆ ನೋಡಾ
ಎಂಬ ಹಾಡೊಂದನ್ನು ನಾವು ಕೇಳಿದ್ದೇವೆ. ಜಗವನ್ನೇ ಸುತ್ತಿರುವ ’ಜಗನ್ಮೋಹಿನಿ’ಗಳ ಮಾಯೆ ನಮ್ಮನ್ನೂ ಬಿಡಲಿಲ್ಲ; ವೇದವಿದ್ಯೆ, ತಪಸ್ಸು, ಸಿದ್ಧಿ ಯಾವುದೂ ಇಲ್ಲದ ನಮ್ಮನ್ನು ಭಗವಂತನ ದಯೆ ಸುತ್ತಿಕೊಳ್ಳಲಿಲ್ಲ. ಹಾಗಾಗಿಯೇ ಅಡಿಗೆ ಬಿದ್ದರೂ ಮೂಗು ಮೇಲೇ ಇದೆ ಎಂಬ ವಿತಂಡವಾದದೊಂದಿಗೆ ನಾವು ಮುನ್ನಡೆಯುತ್ತಲೇ ಇದ್ದೆವು.
ಒಳಕೋಣೆಯಲ್ಲಿ “ಆಯ್ತು ನಾವು ಸೀಟು ಬಿಟ್ಟು ಹೋಗುತ್ತೇವೆ, ದಮ್ಮಯ್ಯ, ಮರ್ಯಾದೆ ತೆಗೆಯಬೇಡಿ, ಈ ವಿಷಯ ಯಾರಿಗೂ ಬಹಿರಂಗ ಪಡಿಸಬೇಡಿ” ಎಂದ ನಾವು ವೇಗವಾಗಿ ಕುರಿವಾಡೆಗೆ ಹೋಗಿ ಅಲ್ಲಿ ಕುಳಿತು ಪ್ಲೇಟು ಬದಲಾಯಿಸಿಬಿಟ್ಟೆವು. ಹುಟ್ಟುಗುಣ ಘಟ್ಟ ಇಳಿದರೂ ಬಿಡುವುದಿಲ್ಲ ಎಂಬುದಕ್ಕೆ ಸಾಕ್ಷಿಯಾದೆವು.
ನಮ್ಮ ಬಾಲಬಡುಕರಿಗೆಲ್ಲ ನಮ್ಮ ಅಸಲೀಯತ್ತಿನ ಪರಿಚಯವಿದೆ; ಆದರೆ ಭಕ್ತ ಕುರಿಗಳಿಗೆ ಮಾತ್ರ ನಮ್ಮ ನಿಜ ಮುಖದ ದರ್ಶನ ಇದುವರೆಗೂ ಆಗದಂತೆ ಸಂರಕ್ಷಿಸಿಕೊಂಡಿದ್ದೇವೆ ನಾವು. ಅಳುವ ಮಕ್ಕಳನ್ನು ರಮಿಸುವಾಗ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಹಾಗೆ ನಮ್ಮ ಕಚ್ಚೆಹರುಕತನದ ಭಯಂಕರ ಭಾನಗಡಿಗಳನ್ನು ಮುಚ್ಚಿಹಾಕಲು ಹಲವು ಹೊಸ ಯೋಜನೆಗಳನ್ನು ಹೊರಡಿಸುತ್ತಲೇ ಇದ್ದೇವೆ ನಾವು.
ನಮ್ಮ ಬಣ್ಣದ ಡೊಂಬರಾಟಗಳನ್ನು ನೋಡುತ್ತ, “ನಾವೇ ದೇವರು” ಎಂದು ನಾವು ಹೇಳಿದ್ದಕ್ಕೆ, ನಮ್ಮನ್ನೇ ದೇವರೆಂದು ನಂಬಿದ್ದ ಸಕಲ ಕುರಿಗಳಿಗೂ ಹೋಲ್ ಸೇಲ್ ಮಾದರಿಯಲ್ಲಿ ’ಅನುಗ್ರಹ’ವೆಂಬ ಲೇಬಲ್ಲು ಹಚ್ಚಿ ದ್ರೋಹ ಎಸಗಿದವರು ನಾವು. ಈಗ ನಿಧಾನವಾಗಿ ಒಂದೊಂದಾಗಿ ವಿಷಯವನ್ನು ಅರಿಯತೊಡಗಿದ ಕುರಿಗಳಲ್ಲಿ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದನ್ನು ಗಮನಿಸುತ್ತಿದ್ದರೆ ಮುಂದೆ ನಾವೆಲ್ಲಿಗೆ ಓಡಬೇಕು ಎಂಬುದರತ್ತ ಗಮನ ಹರಿಸಬೇಕಾಗಿದೆ.
ಓಡುವುದಕ್ಕಾದರೂ ಬಿಡುತ್ತಾರೆಯೇ? ಆ ಹಾಳಾದ ಚಂದ್ರಶೇಖರ ಇಟ್ಲ ಈ ಮೊದಲೇ ನಮ್ಮ ನಡೆಗಳ ಮೇಲೆ ಕಣ್ಣಿಟ್ಟಿದ್ದಾಗಿ ಹೇಳಿದ್ದಾನೆ. ನವನವೀನ ಆವಿಷ್ಕಾರಗಳ ಸ್ಕೆಚ್ ಬರೆಯುತ್ತಿದ್ದ ಇಮ್ಮಡಿ ವಿಶ್ವೇಶ್ವರಯ್ಯನವರ ಮಾತಿಗೆ ಈಗ ದಮ್ಮಡಿ ಬೆಲೆಯೂ ದೊರೆಯುತ್ತಿಲ್ಲ. ಈಗೀಗ ನಿತ್ಯ ’ಅರುಣೋದಯ ಕಾಲ’ದಲ್ಲಿ ’ಚೊಂಬ’ನ್ನು ಹಿಡಿದು ಹೋಗಿಬಂದರೂ ಮಲಬದ್ಧತೆಯಾದಂತೆ ಇನ್ನೂ ತಿಣುಕುತ್ತಲೇ ಇರುತ್ತೇವೆ ನಾವು.
“ಸೀಟು ಇಳಿದು ಹೋಗು ಎನ್ನುತ್ತಾರೆ ಆದರೆ ಎಲ್ಲಿಗೆ ಹೋಗಬೇಕೆಂದು ಹೇಳುವುದಿಲ್ಲ” ಎಂಬ ನಮ್ಮ ಮಾತಿಗೆ ಕೆಲವರು “ಎಲ್ಲಾದ್ರೂ ಹೋಗು, ಹಾಳಾಗಿ ಹೋಗು” ಎಂದು ಶಪಿಸಿದ್ದಾರಂತೆ; ’ನೊಂದವರು ಶಪಿಸುವ ಅಗತ್ಯವಿಲ್ಲ’ ಎಂಬ ಜಾಣ್ನುಡಿಯಂತೆ ಲಕ್ಷೋಪಾದಿಯ ಜನರ ಕ್ಷೋಭೆ ಮತ್ತು ಶಾಪ ನಮಗೆ ತಟ್ಟದಿರಲು ಸಾಧ್ಯವೇ? ಅವರು ಹಾಕಿದ ಭಿಕ್ಷೆಯಲ್ಲೇ ಆಲ್ಲವೇ ನಾವು ಬದುಕುತ್ತಿರುವುದು? ಇದನ್ನೆಲ್ಲ ಈಗೀಗ ನಾವು ಯೋಚಿಸುತ್ತಿದ್ದೇವೆ.
ನಮ್ಮ ಅಸಡ್ಡಾಳ ಧರ್ಮಬಾಹಿರ ನಡತೆಯಿಂದ ನಾವು ಪೂಜಿಸುವ ವಿಗ್ರಹಗಳಲ್ಲಿ ದೈವಾಂಹವೇ ಉಳಿದಿಲ್ಲ. ಸೀಟಿನಲ್ಲಿ ಯಾವ ಪ್ರಭಾವವೂ ಇರುವುದು ನಮಗೆ ಕಾಣುವುದಿಲ್ಲ. ನಮ್ಮ ಶಾಪವೆಲ್ಲ ನಮಗೇ ಉರುಳಾಗಿ ಮರಳುತ್ತಿದೆ. ಆದ್ದರಿಂದ ಮಾಂತ್ರಿಕ ಷಟ್ಕರ್ಮಗಳಾದ ಮಾರಣ, ಮೋಹನ, ಸ್ತಂಭನ, ಉಚ್ಛಾಟನ, ಆಕರ್ಷಣ, ಪ್ರತಿಗ್ರಹ ಇವುಗಳಲ್ಲಿ ಯಾವುದದರೂ ನಡೆಯುತ್ತದೋ ಎಂಬುದನ್ನು ಆಟದ ಕೊನೆಯ ದಾಳವಾಗಿ ಪ್ರಯೋಗಿಸುತ್ತಿದ್ದೇವೆ ನಾವು. ಅದೂ ಪ್ರಯೋಜನಕ್ಕೆ ಬಾರದಿದ್ದರೆ ಮುಂದೇನು? ಎಂಬುದು ಹೆಬ್ಭೂತದಂತೆ ಕಾಡುತ್ತಿರುವ ಸಮಸ್ಯೆ ನಮಗೆ.
ನೋಡೋಣ ನಮ್ಮ ಸ್ನೇಹಿತ ರಾಂ ಪಾಲ್ ಕಟ್ಟಿಕೊಂಡಂತೆ ನಾವೂ ಸಹ ಹಳದೀ ತಾಲಿಬಾನ್ ನಿರ್ಮಿಸಿಕೊಂಡಿದ್ದೇವೆ. ಅದನ್ನಾದರೂ ಗಟ್ಟಿಯಾಗಿ ಇರಿಸಿಕೊಂಡರೆ ಜಯವನ್ನು ಗಳಿಸಲಾದೀತು ಎಂಬುದು ನಮ್ಮ ಅನಿಸಿಕೆ; ನಾವು ಒಳಗೆ ಹೋದರೆ ಹಳದೀ ತಾಲಿಬಾನ್ ಬಳಗವೇ ಜೈಲ್ ಭರೋ ಚಳುವಳಿಯಂತೆ ಜೊತೆಗೆ ಬರಲೆಂದು ಅವರನ್ನೆಲ್ಲ ಪ್ರೇರೇಪಿಸುತ್ತಿದ್ದೇವೆ.
ಅಕ್ಷಮ್ಯ ವಿದ್ರೋಹ ಎಸಗಿದರೂ ಇನ್ನೂ ಕೆಲವು ಮೂರ್ಖ ಭಕ್ತ ಶಿಖಾಮಣಿಗೆ ಅದು ಅರ್ಥವಾಗದ ಕಾರಣ ಜೊತೆಗಿದ್ದಾರೆ. ನಮ್ಮ ಸಮಾಜ ಊಟ ತಿಂಡಿಗೆ ಒಗ್ಗಟ್ಟು ಎಂಬುದು ಗೊತ್ತಲ್ಲ? ಜೈಲಿಸ ಸುದ್ದಿ ಬಂದರೆ ತಲೆಯಮೇಲೆ ಟವಲ್ ಮುಚ್ಚಿಕೊಂಡು-ಕಣ್ಣಿಗೆ ಮಾತ್ರ ಜಾಗ ಬಿಟ್ಟುಕೊಂಡು, ಎಲ್ಲರೂ ಓಡುತ್ತಾರೇನೋ ಎಂಬ ಅನುಮಾನವೂ ನಮ್ಮನ್ನು ಕಾಡುತ್ತಿದೆ”.
Thumari Ramachandra
source: https://www.facebook.com/groups/1499395003680065/permalink/1622690454683852/