ಇಂದು ಹಾವಿನಹಳ್ಳಿ ದೊಣ್ಣೆನಾಯಕನ ಕತೆ

ಇಂದು ಹಾವಿನಹಳ್ಳಿ ದೊಣ್ಣೆನಾಯಕನ ಕತೆ
[ಯಕ್ಷಗಾನ ಪ್ರಹಸನ]

ಭಾಗವತರು: ಇತ್ತ ಹಳದೀ ಕೋಟೆ ದ್ವಾರದೊಳ್
ಕತ್ತೆಯಂತಹ ಹಾವಿನಳ್ಳಿಯು
ಬೆತ್ತ ಹಿಡಿದತ್ತಿತ್ತ ತಿರುಗಾಡುತೆದ್ದು
ಮತ್ತಿನ ಗುರುವನ್ನು ಗುಣಗಾನ ಮಾಡುತ್ತ
ಗತ್ತಿನಲಿ ಕಲ್ಲಾಸನದಲಿ

ತೈ ತೈ ತದ್ದಿನ ಧೇಂ ತದಿಕಿಟ ತಾ ತೈ ತದ್ದಿನ ..ಧೇಂ…..
ತೈ ತೈ ತದ್ದಿನ ಧೇಂ ತದಿಕಿಟ ತಾ ತೈ ತದ್ದಿನ ..ಧೇಂ…..
ತೈ ತೈ ತದ್ದಿನ ಧೇಂ .ತದಿನ್ನ ತಾ……ತಾ ತೈ ತಕ ತೈ ತಾ ತೈ ತಕ ತೈ
ದ್ದಿದ್ದಿದ್ದಿನ ದ್ದಿದ್ದಿದ್ದಿನ ಧೇಂ ಧೇಂ ದಿನ್ನ ತಾ….

“ಭಳಿರೇ ಪರಾಕ್ರಮ ಕಂಠೀರವ”

“ಬಲ್ಲಿರೇನಯ್ಯ? ಹಾವಾಡಿಗ ಮಹಾಸಂಸ್ಥಾನದ ಪ್ರತಿನಿಧಿ ಕೋಟೆಯ ಮಹಾದ್ವಾರದ ಕಾವಲಿಗೆ ಯಾರು ಎಂದು ತಿಳಿದಿದ್ದೀರಿ?”

“ಮಹಾಪ್ರಭುಗಳು ತಮ್ಮ ನಾಮಧೇಯವನ್ನು ತಿಳಿಸುವಂತವರಾಗಬೇಕು”

“ನಮ್ಮನ್ನು ನಮ್ಮ ವಿರೋಧಿಗಳೆಲ್ಲ ಪ್ರೀತಿಯಿಂದ “ಹಾವಿನಹಳ್ಳಿ ದೊಣ್ಣೆನಾಯಕ” ಎನ್ನುತ್ತಾರೆ. ನಿನ್ನೆ ಪ್ರಸ್ತುತಗೊಂಡ ಗಪ್ಪಜ್ಜನ ಮಗನ ವಿವಾಹ ಪ್ರಹಸನದಲ್ಲಿ ಇರುವ ಗಪ್ಪಜ್ಜನ ಮಗನಂತದೇ ಕ್ಯಾರೆಕ್ಟರು ನಾವು. ಹಾವಾಡಿಗ ಮಹಾಸಂಸ್ಥಾನದವರು ಖಾಲಿ ಇರುವ ನಮ್ಮ ’ಪ್ರತಿಭೆ’ಯನ್ನು ಗುರುತಿಸಿ ಇಡೀ ದಿನ ನಮಗೆ ಮನ್ನಣೆ ಕೊಡಬೇಕೆಂದು ತೀರ್ಮಾನಿಸಿದ ಪ್ರಕಾರ, ಅವರ ಅಪ್ಪಣೆಯ ಮೇರೆಗೆ, ಅವರ ಹಳದೀ ತಾಲಿಬಾನ್ ಪ್ರತಿನಿಧಿ ಕೋಟೆಯ ಬಾಗಿಲ ಭಟರಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ನಾವು.”

“ಮಹಾಪ್ರಭುಗಳೆ, ತಾವೂ ಒಂದರ್ಥದಲ್ಲಿ ದೈವಾಂಶ ಸಂಭೂತರೆಂದು ಕೇಳಿದೆವು ನಿಜವೇ?”

“ನಮ್ಮ ಹಾವಾಡಿಗ ಜಗದ್ಗುರುಗಳು ಮಹಾವಿಷ್ಣುವಿನ ಅವತಾರವೆಂದು ತಮ್ಮನ್ನು ಹೇಳಿಕೊಂಡಿದ್ದರಿಂದ ವೈಕುಂಠದ ಮಹಾದ್ವಾರದನ್ನು ಕಾಯುವ ಜಯ-ವಿಜಯರ ಬಗೆಗೆ ನಿಮಗೆ ತಿಳಿದಿರುತ್ತದೆಯಷ್ಟೆ? ಜಯ-ವಿಜಯರು ಮೂರು ಅವತಾರಗಳನ್ನೆತ್ತಿದ್ದು ನಿಮಗೆ ನೆನಪಿರಬಹುದು. ಜಯ-ವಿಜಯರಲ್ಲಿ ವಿಜಯನ ನಾಲ್ಕನೇ ಅಪರಾವತಾರವೇ ನಾವು ಎಂದು ಹೇಳುತ್ತೇವೆ.”

“ತಾವು ಉಂಡಾಡಿ ಗುಂಡರೆಂದೂ ಗೋಕರ್ಣದ ಶಾಸ್ತ್ರಿಗಳಂತವರು ತಮಗೆ ಈ ಹಿಂದೆ ಒಮ್ಮೆ ಮದುವೆ ಮಾಡಿಸಿದ್ದರೆಂದೂ ಯಾರೋ ಹೇಳಿದರಲ್ಲ?”

“ಯಾವನ್ರೀ ಅವನು ಉಂಡಾಡಿ ಗುಂಡ ಅಂದಿದ್ದು? ಅವನ ಚರ್ಮ ಸುಲಿದುಬಿಡ್ತೀನಿ ನೋಡಿ. ನಮ್ಮ ಹಾವಾಡಿಗ ಜಗದ್ಗುರುಗಳ ಕೃಪೆಯಿಂದ ನಿತ್ಯ ಚೆನ್ನಾಗಿ ಊಟ ತಿಂಡಿ ಹೊಡೆದುಕೊಂಡು ಅವರ ಪ್ರತಿನಿಧಿ ಕೋಟೆಯನ್ನು ಕಾಯುತ್ತಿದ್ದೇವೆ ನಾವು. ಎಳೆಯ ಹೆಣ್ಣುಮಕ್ಕಳಿಂದ ಹಳೆಯ ಮುದುಕಿ ಅಮ್ಮಮ್ಮಂದಿರ ವರೆಗೆ ಎಲ್ಲರನ್ನೂ ನಾವು ಅತಿ ಸಲುಗೆಯಿಂದಲೇ ಮಾತನಾಡಿಸುವುದರಿಂದ, ಹೆಂಡತಿ ಎನ್ನುವ ಕೆಲಸಕ್ಕೆ ಬಾರದ ಪ್ರಾಣಿ ನಮ್ಮ ಮೇಲೆ ಆಕ್ಷೇಪಿಸತೊಡಗಿದಳು. ಆಗ ನಾವೇ ಮುಂದಾಗಿ ವಿಚ್ಛೇದನ ನೀಡಿಬಿಟ್ಟೆವು. ಎಲ್ಲವೂ ನಮ್ಮ ಗುರುಗಳ ದಯೆ, ಈಗ ಒಂಟಿ ಹೋರಿಯಂತೆ ಆರಾಮಾಗಿದ್ದೇವೆ.”

“ಓಹೋ ಹಾಗೆ, ತಾವೇ ಮುಂದಾಗಿ ವಿಚ್ಛೇದನ ನೀಡಿದ್ದು, ಹಾಗಾದರೆ ತಾವು ಉಂಡಾಡಿಯಲ್ಲ ಅಂತಾಯ್ತು?”

“ಮತ್ತೆ ಅದೇ ಪದವನ್ನು ಬಳಸಿದರೆ ನನಗೆ ಕೆಟ್ಟ ಕೋಪ ಬರುತ್ತದೆ ಗೊತ್ತಾಯ್ತಾ? ಪ್ರಶಾಂತವಾಗಿದ್ದ ಸರೋವರಕ್ಕೆ ಕಲ್ಲೆಸೆದು ಗುಲ್ಲೆಬ್ಬಿಸಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡುವುದು ನಮ್ಮ ಕರ್ತವ್ಯದ ಭಾಗವೆಂದು ನಮ್ಮ ಗುರುಗಳು ಹೇಳಿದ್ದಾರೆ. ಭಕ್ತಕುರಿಗಳನ್ನು ಕನ್ ಫ್ಯೂಸ್ ಮಾಡಿ,ಬೇರೆ ಹೊಲಕ್ಕೆ ಹೋಗದಂತೆ ಇಲ್ಲೇ ಕಾಪಾಡುವ ಹೊಣೆಗಾರಿಕೆ ಸಹ ನಮ್ಮ ಮೇಲಿದೆ. ಇಲ್ಲದ ಕತೆಗಳನ್ನೆಲ್ಲ ಕಟ್ಟಿ ’ಪವಾಡಗಳ ಮಹಿಮೆ’ಯನ್ನು ಹೊಸೆದು ಎಲ್ಲರ ಬೋಳಿಗೆ ಎಣ್ಣೆಹಚ್ಚಲು ಸಹಕರಿಸುವುದು ನಮ್ಮ ಕಾಯಕ.”

“ಪ್ರಭುಗಳು ಮನ್ನಿಸಬೇಕು. ಇತ್ತೀಚೆಗೆ ನಿಮ್ಮ ಕಾಯಕಕ್ಕೆ ತುಮರಿ ರಾಮಚಂದ್ರ ಎಂಬಾತನಿಂದ ಕಲ್ಲು ಬೀಳುತ್ತಿದೆ ಎಂದು ಕೇಳಿದ್ದೇವೆ?”

“ಅವನ್ಯಾವನೋ ತುಮರಿ ರಾಮಚಂದ್ರ ಅನ್ನೋನು ಬಂದಿರೋದು ನಿಜವಾದ ಸತ್ಯವೆಂದು ನಮ್ಮ ಗುರುಗಳು ಹೇಳಿದ್ದಾರೆ. ಆತ ಯಾರೆಂದು ತಲಾಶ್ ಮಾಡಲಿಕ್ಕೆ ಮಹಾಸಂಸ್ಥಾನದವರ ಅಪ್ಪಣೆಯಾದ ಪ್ರಕಾರ ನಾವು ಜಲಾನಯನ ಪ್ರದೇಶದ ಹಳೆಯ ಮುದುಕಿಯರನ್ನೆಲ್ಲ ಹುಡುಕಿ ಕೇಳಿದೆವು. ಅವರಲ್ಲಿ ಓರ್ವ ಅಮ್ಮಮ್ಮನ ಪ್ರಕಾರ ಮರ್ಯಾದೆ ಬಿಟ್ಟವರನ್ನೆಲ್ಲ ಊರು ಬಿಡಿಸಿದ್ದು ಹಿಂದೆ ನಡೆದಿದೆಯಂತೆ. ಅವರಲ್ಲಿ ಯಾವುದೋ ಕುಟುಂಬದ ಕವಲಿನ ವ್ಯಕ್ತಿ ಇರಬೇಕು ಎಂದರು.”

“ಹಾವಿನಹಳ್ಳಿ ಮಹಾಪ್ರಭುಗಳೆ, ಹಿಂದಿನ ಶತಮಾನಗಳಲ್ಲಿ ತಮ್ಮ ಜಾಗದಲ್ಲಿ ಬೇರೆ ಯಾರೋ ಇದ್ದರೆಂದು ಕಾಣುತ್ತದೆ. ತಾವೇ ಇದ್ದರೆ ಹಲವು ಬಾಲ ವಿಧಯೆಯರು ಮತ್ತೆ ಮದುವೆಯಾಗದಂತೆ ತಾವೇ ಇರಿಸಿಕೊಂಡು ಧರ್ಮವನ್ನು ಸಂರಕ್ಷಿಸುತ್ತಿದ್ದಿರಿ ಅಲ್ಲವೇ? ನಿಮ್ಮಂತವರ ಅನೈತಿಕ ಬೆಳವಣಿಗೆಗಳನ್ನು ಕಂಡು ಸಹಿಸದೆ ಉಸಿರೆತ್ತಿದ ಕುಟುಂಬಗಳ ಮೇಲೆ ಬಹಿಷ್ಕಾರ ಹಾಕಿಸಿ ಧರ್ಮರಕ್ಷಣೆ ಮಾಡುತ್ತಿದ್ದಿರೆಂದು ನಮ್ಮ ಭಾವನೆ.”

“[ಸ್ವಗತದಲ್ಲಿ: ಏನು ಹೇಳುತ್ತಿದ್ದಾನೆ ಅರ್ಥವಾಗಲಿಲ್ಲ..ನಮ್ಮನ್ನು ಹೋಗಳುತ್ತಿರಬೇಕು]ಓಹೋಹೋ, ಅಗತ್ಯವಾಗಿ… ಅಗತ್ಯವಾಗಿ. ನಮ್ಮಂತಹ ಧರ್ಮಾತ್ಮರು ಇರುವುದೇ ಅಂತದ್ದಕ್ಕೆ. ನಮ್ಮಂತವರು ಇಲ್ಲದಿದ್ದರೆ ಇಷ್ಟೊತ್ತಿಗೆ ಹಾವಾಡಿಗ ಮಹಾಸಂಸ್ಥಾನದವರು ಹಾದಿಯಲ್ಲಿ ಬೀಳುವ ಪ್ರಸಂಗ ಬರುತ್ತಿತ್ತು. ಅದು ಅವರಿಗೂ ಚೆನ್ನಾಗಿ ಗೊತ್ತಿರೋದರಿಂದ ಆಯಕಟ್ಟಿನ ಜಾಗಗಳಲ್ಲಿ ನಮ್ಮೆನ್ನೆಲ್ಲ ಸಾಕಿಕೊಂಡಿದ್ದಾರೆ.”

ಭಾಗವತರು: ಏರಿ ಶಿಖರದ ನಗರದೆಲ್ಲಡೆ
ಭೂರಿ ಭೋಜನ ನೆಗೆದು ವೈರಿಗೆ
ಚೂರಿಯಿಕ್ಕಲು ಹಾವಿನಳ್ಳಿಯು ಘೋರರೂಪದಲಿ

ಜಾರಿ ಬಿದ್ದನು ಎಲ್ಲರೆದುರಲಿ
ಭಾರಿ ತೂಕದ ಮೈಯ ಕೊಡವುತ
ವೀರ ತಾನಹುದೆಂದ ವೀರ್ಯಾನಂದ ತಾರಕದಿ……
.ಆಅ……ಆಅ……ಆಆಆಆಆಆಅ ಆಆಅ.

ಹಾವಿನಹಳ್ಳಿ ದೊಣ್ಣೆನಾಯಕ: “ನಮ್ಮ ಹಾವಾಡಿಗ ಮಹಾಸಂಸ್ಥಾನದ ಮರ್ಯಾದೆ ಮಣ್ಣುಪಾಲು ಮಾಡುವ ದುರುದ್ದೇಶದಿಂದ ಅನೇಕ ಹುಲುಮಾನವರು ಷಡ್ಯಂತ್ರಗಳನ್ನು ಹೆಣೆದಿದ್ದಾರೆ. ನಮ್ಮ ಗುರುಗಳ ಏಕಾಂತ ಸೇವೆಗೆ ಎಣ್ಣೆ ಒದಗಿಸುತ್ತ ಅಮಿತಾನಂದದಲ್ಲಿದ್ದ ನಮಗೆ ಮುಂದೊಂದು ದಿನ ಅವರ ಪ್ರಸಾದ ರೂಪದಲ್ಲಿ ಯಾವುದಾದರೊಂದು ಅಥವಾ ಒಂದಷ್ಟು ಬಾಚಲು ಸಿಗಬಹುದೆಂಬ ದೂ[ದು]ರಾಲೋಚನೆಯಲ್ಲಿದ್ದವರು ನಾವು.

ಈಗ ನಮ್ಮ ಸಂಸ್ಥಾನದ ವಿರುದ್ಧ ಸೊಲ್ಲೆತ್ತುವ ಯಾವನೇ ಆಗಲಿ ಅವನನ್ನು ಹಿಡಿದು, ತದುಕಿ, ಬೆತ್ತದಿಂದ ಅವನ ಕೈಕಾಲು ಮುರಿದು, ವೈದ್ಯನಾದರೆ ಅವನ ಅಂಗಿ ಹರಿದು ಬುದ್ಧಿ ಕಲಿಸುವ ಭರದಲ್ಲಿ ನಾವು ಮುನ್ನಡೆಯುತ್ತಿದ್ದೇವೆ. ಕಡ್ತೋಕೆ ರಾಂಭಟ್ಟ, ಶಾಂತಾರಾಮ ಹೆಗಡೆಕಟ್ಟೆ, ಬಾಲಕೃಷ್ಣರಾಜ್ ನೀರ್ಚಾಲು ಮೊದಲಾದ ಅರಿಗಳನ್ನು ಹೆಡೆಮುರಿ ಕಟ್ಟಲು ಹೋಗಿ ಹೈರಾಣಾಗಿದ್ದೇವೆ. ಇಂತಿಪ್ಪ ಸಮಯದಲ್ಲಿ ತುಮರಿ ರಾಮಚಂದ್ರ ಎಂಬ ಬ್ರಹ್ಮರಾಕ್ಷಸ ನಮಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಅವನನ್ನು ಸದೆಬಡಿಯಲು ಯಾವೆಲ್ಲ ಹಿಕಮತ್ತು ಮಾಡಬೇಕೋ ಅದೆಲ್ಲವನ್ನೂ ನಡೆಸುತ್ತ ನಮ್ಮ ಹಳದೀ ತಾಲಿಬಾನಿನೊಟ್ಟಿಗೆ ಅಲ್ಲಿಗೆ ಬಿಜಯಂಗೈಯುತ್ತೇವೆ ನೋಡೋಣ.”

ಭಾಗವತರು: ಹೊರಟನಾಚೆಗೆ ಬೈಕನೇರುತ ಗುಡುಗುಡಿಸಿ ಎಕ್ಸಿಲರೇಟರು
ತಿರೆಯೆ ತೀರ್ವೆಯನೆಲ್ಲ ತರುವೆನು ಎನ್ನುತಲಿ ಭರದಿ
ತೈತ ತೈತ ತೈತ ತದ್ದಿನ
ತೈತ ತೈತ ತೈತ ತದ್ದಿನ
ತೈತ ತೈತ ತೈತ ತದ್ದಿನ
ತೈತ ತೈತ ಧೇಂ…………………..

[ಭಾಗವತರಿಗೆ ಗಂಟಲು ನೋವಿರುವುದರಿಂದ ಪ್ರಸಂಗವನ್ನು ಇಲ್ಲಿಯವರೆಗೆ ತಂದು ನಿಲ್ಲಿಸಲಾಗಿದೆ,ಬೇಕಾದರೆ ಸಂದರ್ಬಕ್ಕೆ ತಕ್ಕಂತೆ ಮುಂದುವರಿಸಬಹುದು ಎಂದು ವ್ಯವಸ್ಥಾಪಕರು ತಿಳಿಸಿದ್ದಾರೆ.]

Thumari Ramachandra

source: https://www.facebook.com/groups/1499395003680065/permalink/1622139761405588/

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s