ಯಾರೇ ನೀನು ಚಲುವೆ?……. ನಿನ್ನಷ್ಟಕ್ಕೆ ನೀನೆ ಏಕೆ ನಗುವೆ?

ಯಾರೇ ನೀನು ಚಲುವೆ?……. ನಿನ್ನಷ್ಟಕ್ಕೆ ನೀನೆ ಏಕೆ ನಗುವೆ?

“ಕಾವಿ ಧರಿಸಿದ ಮಾತ್ರಕ್ಕೆ ಮನುಷ್ಯ ದೇವರಾಗಿಬಿಡುತ್ತಾನೆ ಎಂದು ನಾವು ಬಹಿರಂಗದಲ್ಲಿ ಆ ರೀತಿ ಪೋಸು ನೀಡುತ್ತಿದ್ದರೂ ಕಾವಿಯೊಳಗಿನ ಸಾಮಾನ್ಯ ಮನುಷ್ಯನ ಮನೋದೈಹಿಕ ಹಿತಾಸಕ್ತಿಗಳನ್ನು ಬಲಿಕೊಡುವುದನ್ನು ನಾವು ಒಪ್ಪುವುದಿಲ್ಲ; ಮಾನವ ಹಕ್ಕುಗಳ ಪ್ರಕಾರ ಮನೋದೈಹಿಕ ಬೇಡಿಕೆಗಳನ್ನು ಅಲ್ಲಗಳೆಯುವುದು ಮಹಾಪರಾಧ. ಅದಕ್ಕಾಗಿ ನಾವು ಕಾವಿಗಿಂತ ಹೆಚ್ಚಾಗಿ ಮಾನವ ಹಕ್ಕುಗಳಿಗೇ ಆತುಕೊಳ್ಳುತ್ತೇವೆ.

ಅತ್ಯಾಚಾರ, ಕಾಮುಕತನ, ಕಚ್ಚೆಹರುಕು ಪ್ರವೃತ್ತಿ, ಕಪಟಸನ್ಯಾಸ, ರಾಂಗ್ ವೇಷ ಎಂಬ ಪದಗಳು ಬಂದುಬಿಟ್ಟರೆ, ತಕ್ಷಣವೇ ಮಾನವ ಹಕ್ಕುಗಳಿಂದ ಕಾವಿಗೆ ಲಾಂಗ್ ಜಂಪ್ ಹೊಡೆದು ಜಾರಿಕೊಳ್ಳುತ್ತೇವೆ.

ಸನ್ಯಾಸಿಯ ಬುಸ್ಸಪ್ಪ ಅತಿಸಣ್ಣ ಸುಟ್ಟ ಬದನೆಕಾಯಿಯಂತಿರುತ್ತದೆ ಎಂದು ಯಾರೋ ನಮಗೆ ಹೇಳಿದ್ದಾರೆ. ಆದರೆ ನಮ್ಮ ವೀರ್ಯ ಸನ್ಯಾಸದಲ್ಲಿ ಹಾಗೆಲ್ಲ ಇಲ್ಲ. ಬುಸ್ಸಪ್ಪ ಜನಸಾಮಾನ್ಯರ ವೆರೈಟಿಗಿಂತ ಬಹಳ ಜೋರಾಗಿದ್ದು ಒಂದೊಮ್ಮೆ ಅವರು ಪರೀಕ್ಷೆಗೆ ಇಳಿದುಬಿಡಬಹುದು ಎಂದು ನಮ್ಮ ಅಡ್ಡಗೇಟುಗಳ ಮುಖಾಂತರ ನಾವು “ಸಮರ್ಥ ಪುರುಷ” ಎಂದು ಘೋಷಿಸಿಬಿಟ್ಟಿದ್ದೇವೆ.

ನಾವೇ ಹಾಗೆ ಘೋಷಿಸಿರುವಾಗ ನಾವು ಪುರುಷತ್ವ ಇರುವವರೆಂದು ಒಪ್ಪಿಕೊಂಡಂತಾಗಿ ಪುರುಷತ್ವ ಪರೀಕ್ಷೆ ಕಡ್ಡಾಯ ಮಾಡಬೇಕಾಗಿ ಬರುವುದಿಲ್ಲ ಎಂದು ನಮ್ಮ ಚೊಂಬು ಹೇಳಿದೆ. ಈ ಚೊಂಬಿನ ಕತೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ. ಹಿಂದೊಮ್ಮೆ ಸ್ಥೂಲವಾಗಿ ಚೊಂಬಿನ ಕತೆಯನ್ನು ನಾವೇ ನಿಮಗೆ ಹೇಳಿದ್ದೇವೆ. ರಾಸಲೀಲೆಯಲ್ಲಿ ಚೊಂಬಿನ ಪಾತ್ರ ಬಹಳ ಕಲರ್ ಫುಲ್. ಹೀಗಾಗಿ ತಪ್ಪುಮಾಡಿಯೂ ತಪ್ಪಿಸಿಕೊಳ್ಳುವ ಬಗೆ ಹೇಗೆ ಎಂಬುದಕ್ಕೆ ಎಲ್ಲಾ ಮಸಾಲೆ ಸಾಮಾನುಗಳೂ ಚೊಂಬಿನಲ್ಲಿವೆ.

ನಾವು ನಡೆಸಿದ ಬುಸ್ಸಪ್ಪನ ಕತೆಯಲ್ಲಿ ನಮಗೆ ಆಪತ್ತು ಎದುರಾದಾಗ ಅರೆಸ್ಟ್ ಆಗುವ ದಿನ ಲೆಕ್ಕಹಾಕುತ್ತ ಮುಂದೂಡಿದವರು ನಾವು. ಹಾಗೆ ಮುಂದೂಡಲು ಕುರಿಗಳು ಕೊಟ್ಟ ಕಾಣಿಕೆಗಳಲ್ಲಿ ದಿನಕ್ಕೆ ಒಂದು ಲಕ್ಷದಂತೆ ತೆಗೆದು ಚೊಂಬಿಗೆ ಸುರುವಿದ್ದೇವೆ. ಮಾಯಕದ ಚೊಂಬಿನಲ್ಲಿ ಬಿದ್ದಿದ್ದು ಎಲ್ಲಿ ಹೋಯಿತು ಎಂಬುದು ನಮಗೆ ಗೊತ್ತಿಲ್ಲ.

ನಮ್ಮ ವಿರೋಧಿಗಳು ಕೊಡಗಿನಿಂದ ನಿರ್ಮಿಸಿತಂದ ಸಬಲವಾದ ಅಡ್ಡಗೇಟನ್ನು ಎದುರು ಹಿಡಿದಾಗ ಅದನ್ನೇ ಖರೀದಿಸಿ ನಮ್ಮದಾಗಿಸಿಕೊಂಡ ನಮ್ಮ ’ಮಾಂತ್ರಿಕತೆ’ಯನ್ನು ನೀವು ಮೆಚ್ಚಲೇಬೇಕು.

ಅದಿರಲಿ ಕುಮಾರವ್ಯಾಸ ಭಾರತದಲ್ಲಿ ಸುಭದ್ರಾ ಪರಿಣಯದ ಸನ್ನಿವೇಶವನ್ನು ಕವಿ ಕಾವ್ಯದಲ್ಲಿ ವರ್ಣಿಸಿದ ಬಗೆಯನ್ನು ನಮ್ಮ ಕನ್ನಡದ ಇನ್ನೊಬ್ಬ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿಯವರು ಹೀಗೆ ವ್ಯಾಖ್ಯಾನಿಸಿದ್ದಾರೆ-

ಈ ದೇಶದಲ್ಲಿ ಸನ್ಯಾಸಿ ಮೋಹ (ಸನ್ಯಾಸಮೋಹವಲ್ಲ!) ಲಾಗಾಯ್ತಿನಿಂದ ನಡೆದುಕೊಂಡುಬಂದದ್ದಲ್ಲವೇ? ಮುಗ್ಧರನ್ನು ಮರುಳುಮಾಡಲಿಕ್ಕೆ ಅತ್ಯಂತ ಸುಲಭ ಮತ್ತು ಸೂಕ್ತ ವೇಷವೆಂದರೆ ಮುನಿಪತಿಯ ವೇಷ. ಕಾವಿನೋಡಿದರೆ ಸಾಕು, ದೀರ್ಘದಂಡ ಪ್ರಣಾಮ! ಜೊತೆಗೆ ಒಂದೆರಡು ಸಂಸ್ಕೃತ ಸೂಕ್ತಿಗಳನ್ನು ಅಸ್ಖಲಿತ ವಾಣಿಯಲ್ಲಿ ಉರುಹೊಡೆದು ಉರುಳಿಸಿಬಿಟ್ಟರೆ ಮುಗಿದೇ ಹೋಯಿತು! ಅವ ಅಧ್ಯಾತ್ಮಾಕಾಶದ ಸಾಕ್ಷಾತ್ ಪರಮಹಂಸನೇ!

ಬಲರಾಮನಂಥ ಅಧ್ಯಾತ್ಮವ್ಯಸನಿಗಳಿಗೆ ಈ ದೇಶದಲ್ಲಿ ಬರವೇ? ಕೃಷ್ಣ ಮತ್ತು ಅರ್ಜುನ ಬಲರಾಮನ ಈ ದೌರ್ಬಲ್ಯವನ್ನೇ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾರೋ ಮಾಹಾನುಭಾವ ನಗರದ ಹೊರಗಿನ ವನಪ್ರದೇಶಕ್ಕೆ ಬಂದಿದ್ದಾನೆ! ಆತ ಸಾಮಾನ್ಯನಲ್ಲ! ಪರಮಹಂಸ ಎಂಬುದು ತಿಳಿದಿದ್ದೇ ಬಲರಾಮ ಸನ್ಯಾಸಿಯ ಬಳಿಗೆ ಪಂಚೆ ಅಡರುಕಟ್ಟಿಕೊಂಡು ಧಾವಿಸುತ್ತಾನೆ.

ಅರ್ಜುನನ ನಟನಾ ಸಾಮರ್ಥ್ಯವೂ ಅದ್ಭುತವಾದುದೇ! ತನಗೆ ಅಡ್ಡಬಿದ್ದ ದೊರೆಗೆ ಆಶಿರ್ವದಿಸಿ ಹದಿನಾಲಕ್ಕು ವಿದ್ಯೆಗಳ ಬಗ್ಗೆ ಈ ಕಳ್ಳ ಸನ್ಯಾಸಿ ದೊಡ್ಡ ಭಾಷಣವನ್ನೇ ಹೊಡೆಯುತ್ತಾನೆ! ಅಗೂಲ ಹಣೆ ಸಿಕ್ಕರೆ ಯಾರು ನಾಮಹಾಕುವುದಿಲ್ಲ ಹೇಳಿ! ಓಹೋಹೋ! ನಮ್ಮ ಅರ್ಜುನ ಚೆನ್ನಾಗಿ ತಯ್ಯಾರಿಮಾಡಿಕೊಂಡೆ ಬಂದಿದ್ದಾನೆ. ಬಲರಾಮ ಮರುಳಾದ. ಸನ್ಯಾಸಿಯನ್ನು ಚಾತುರ್ಮಾಸ್ಯಕ್ಕೆ ತನ್ನ ಅರಮನೆಗೇ ಆಹ್ವಾನಿಸಿದ. ಸುಲಭಕ್ಕೆ ಮುನಿಪತಿ ಒಪ್ಪುವುದಿಲ್ಲ.

ನಾವು ಭಿಕ್ಷುಕರೆಮಗೆ ರಾಜ ಗೃ
ಹಾವಲಂಬನವೇಕೆ ಶೈಲ ವ
ನಾವಳಿಗಳಲಿ ವರ ನದೀತೀರದಲಿ ವಾಸಿಪೆವು|
ಭಾವಿತ ಪ್ರಾರಬ್ಧ ಕರ್ಮ ಫ
ಲಾವಳಿಯನುಪಭೋಗಿಸುತ ದೇ
ಹಾವಸಾನವನೀಕ್ಷಿಸುತ್ತಿಹೆವೆಂದನಾ ಪಾರ್ಥ||

ಆಹಾ! ದೇಹಾವಸಾನದ ನಿರೀಕ್ಷೆಯಲ್ಲಿದ್ದಾನಂತೆ ಈ ಕಪಟ ಮುನಿ! ಬಲರಾಮ ಸನ್ಯಾಸಿಯನ್ನು ತನ್ನ ಅರಮನೆಗೆ ಕರೆತಂದು ಅವನನ್ನು ಕನ್ಯಾಭವನದಲ್ಲಿ ಉಳಿಸಿದ್ದಲ್ಲದೆ ಸುಭದ್ರೆಯನ್ನೇ ಅವನ ಶುಶ್ರೂಶೆಗೆ ನೇಮಿಸುತ್ತಾನೆ. ಬ್ರೆಡ್ಡು ಕೈಜಾರಿ ಬೆಣ್ಣೆಯ ಮೇಲೆ ಬಿದ್ದಂತಾಯಿತು! ಮುಂದಿನ ನಾಟಕ ತುಂಬ ಸ್ವಾರಸ್ಯಕರವಾಗಿದೆ.

ಹೀಗೆ ಸನ್ಯಾಸಿಯೊಬ್ಬನನ್ನು ಕನ್ಯಾಭವನಕ್ಕೆ ಕರೆತಂದದ್ದು, ಸುಭದ್ರೆಯನ್ನು ಅವನ ಸೇವೆಗೆ ನೇಮಿಸಿದ್ದು ತನಗೆ ಸುತರಾಂ ಒಪ್ಪಿಗೆಯಿಲ್ಲ ಎಂಬುದು ಕೃಷ್ಣನ ಅಂಬೋಣ. ಮೈಮರೆದು ತಂಗಿಯನೊಯ್ದು ಬಿಸುಟಿರೆ ಬಣಗು ತಿರುಕನಲಿ! ಎಂದು ಸ್ಪಷ್ಟವಾಗಿ ಕೃಷ್ಣ ತನ್ನ ಅಸಮ್ಮತಿಯನ್ನು ಸೂಚಿಸುತ್ತಾನೆ. ಬಲರಾಮನ ಉತ್ತರ?

“ಹುಚ್ಚ ಕಣಯ್ಯ ನೀನು! ಯಾರು ಎಂಥವರು ಎಂಬುದೇ ನಿನಗೆ ತಿಳಿಯುವುದಿಲ್ಲ! ಬಂದಿರುವ ಯತಿ ಸಾಕ್ಷಾತ್ ಸರ್ವಜ್ಞ! ತಿರುಕ ಅನ್ನುತ್ತೀಯಲ್ಲ! ಒಳ್ಳೇದೋ ಕೆಟ್ಟದೋ ಜವಾಬ್ದಾರಿ ನನ್ನದಯ್ಯ! ಯಾರು ಏನು ಎತ್ತ ಅಂತ ನಮಗೆ ಗೊತ್ತಾಗೋದಿಲ್ಲವೇ?”

ಬಲರಾಮ ಉದ್ದಕ್ಕೂ ತನ್ನನ್ನು ಬಹುಬಚನದಲ್ಲೇ ಸಂಬೋಧಿಸಿಕೊಳ್ಳುವಂಥದ್ದು! ಬಲರಾಮ ನಿರೀಕ್ಷಿಸಿದ್ದು ಒಂದು: ಆಗಿದ್ದು ಅದಕ್ಕೆ ತದ್ವಿರುದ್ಧವಾದದ್ದು!

ಬಾಲಕಿಗೆ ಸನ್ಯಾಸಿದೇವರ
ಮೇಲೆ ಮನವಾಯ್ತವರಿಗೀಕೆಯ
ಮೇಲೆ ನೆಲೆಸಿತು ಚಿತ್ತ ಕಾಣೆನು ಜಪ ಸಮಾಧಿಗಳ
ಮೇಳವಿಸಿತನ್ಯೋನ್ಯರಾಗ ಛ
ಡಾಳಿಸಿದುದಭಿಳಾಷೆ ಕಾಮನ
ಬೇಳುವೆಗೆ ಬೆಂಡಾದುದಿಬ್ಬರ ಧೈರ್ಯವಡಿಗಡಿಗೆ||

ಬಾಲಕಿಗೆ ಸನ್ಯಾಸಿದೇವರು ಯಾರೆಂಬ ಸೂಚನೆ ದೊರಕಿರಬೇಕೆಂದೇ ನಾವು ಊಹಿಸಬಹುದು. ಇಡೀ ಪ್ರಸಂಗದಲ್ಲಿ ನಡೆಯುತ್ತಿರುವುದು ಒಂದು ಹೊರ ನಾಟಕ; ಇನ್ನೊಂದು ಒಳನಾಟಕ. ಕೃಷ್ಣ, ಸನ್ಯಾಸಿ ಯಾರು ಎತ್ತ ಎಂಬ ಬಗ್ಗೆ ವಸುದೇವ, ದೇವಕಿ, ತಾತ ವಜ್ರ ಎಲ್ಲರಿಗೂ ತಿಳಿಸಿದ್ದಾನೆ. ಬಲರಾಮನೊಬ್ಬನೇ ಅರ್ಜುನನನ್ನು ಪರಮಹಂಸನೆಂದೇ ನಂಬಿರುವ ಬುದ್ದು.

ಪಾಪ! ರಾಗವಿರಾಗಗಳ ತಿಕ್ಕಾಟದಲ್ಲಿ ಸುಸ್ತಾಗಿಹೋಗಿರಬೇಕು ನಮ್ಮ ಕಳ್ಳಸನ್ಯಾಸಿ! ಒಂದು ಆಂಗಿಕ; ಇನ್ನೊಂದು ಅಂತರಾಂಗಿಕ! ಜಪ, ಪೂಜೆ, ಸಮಾಧಿ ಯಾವುದನ್ನೂ ಅವನು ಬಿಡುವಂತಿಲ್ಲ. ಬಾಯಲ್ಲಿ ಮಂತ್ರ; ಮನಸ್ಸಲ್ಲಿ ಸುಭದ್ರೆ! ಜಪಮಾಲೆ ಬೆರಳಲ್ಲಿ! ಕಣ್ಣುಗಳು ಹುಡುಗಿಯನ್ನೇ ನುಂಗುವಂತೆ ನೋಡುತ್ತಿವೆ! ಕೈ ಶಿವಪೂಜೆಯಲ್ಲಿ! ಸುಭದ್ರೆಯ ಹಿಡಿಹಿನಲ್ಲಿ ಮನಸ್ಸು! ಹೊರಗೆ ವರಸಮಾಧಿಯ ತೊಡಹು! ಒಳಗೆ ಇಂದುಮುಖಿ!

ಮಳೆಗಾಲದ ಆ ನಾಲಕ್ಕು ತಿಂಗಳು ಹೇಗೆ ಕಳೆದವೋ! ಎಲ್ಲಾ ಶರತ್ಕಾಲದ ಮುಹೂರ್ತ ನೋಡುತ್ತಿದ್ದರು ಕಾಣುತ್ತದೆ. ಒಳಗೊಳಗೇ ಮದುವೆ ತಯಾರಿ ನಡೆಯುತ್ತಿದೆ. ಎಲ್ಲಾ ಬಲರಾಮನ ಮೂಗಿನ ಕೆಳಗೇ . ನಿಜಕ್ಕೂ ಸೀದಾಸಾದಾ ಮನುಷ್ಯ ಅವ. ಮದುವೆ ಮುಹೂರ್ತ ನಿಶ್ಚಯಿಸಲಾಗಿದೆ. ಮಧ್ಯರಾತ್ರಿಯ ಮುಹೂರ್ತ! ಹಿರಿಯರ ಸಮಕ್ಷಮ ವಿವಾಹದ ಮಂಗಳಕಾರ್ಯ ನಡೆದೇ ಹೋಯಿತು.

ತನ್ನ ಮನೆಯಲ್ಲೇ ನಡೆದ ಈ ಮದುವೆಯ ವಾಸನೆ ಕೂಡ ಬಲರಾಮನಿಗೆ ಬಡಿಯಲಿಲ್ಲ! ಒಳ್ಳೆ ರಥ ದೊರಕಿಸಿ (ತೀರ್ಥಯಾತ್ರೆ ಅರ್ಜುನನಿಗೆ ಪಾದಯಾತ್ರೆಯಾಗಿತ್ತು ತಾನೇ!) ಮದವಳಿಗೆ ಸಮೇತ ಕೃಷ್ಣ ಅರ್ಜುನನನ್ನು ದ್ವಾರಾವತಿಯಿಂದ ರಾತ್ರೋರಾತ್ರಿ ಕಳುಹಿಸಿಕೊಡುತ್ತಾನೆ! ಬೆಳಿಗ್ಗೆ ಅರಮನೆಯಲ್ಲಿ ಅಬ್ಬರಣೆ! ನಾಕು ತಿಂಗಳಿಂದ ಕನ್ಯಾಭವನದಲ್ಲಿ ಠಿಕಾಣಿ ಹೂಡಿದ್ದ ಸನ್ಯಾಸಿದೇವರೂ ಇಲ್ಲ; ಅವರ ಸೇವೆಗೆ ಒಪ್ಪಿಸಲಾಗಿದ್ದ ಕನ್ಯಾಮಣಿ ಸುಭದ್ರೆಯೂ ಇಲ್ಲ! ಕಾಲಕಾಲಕ್ಕೂ ಸಂಭವಿಸುತ್ತಲೇ ಬಂದಿರುವ ಯಾವತ್ತಿನ ವಿದ್ಯಮಾನ! ಹುಡುಗ ಹುಡುಗಿ ಒಮ್ಮೆಗೇ ನಾಪತ್ತೆ!

ಕೃಷ್ಣ ಬಲರಾಮನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. “ನಾವು ನಿಮಗೆ ಮೊದಲೇ ಹೇಳಿದ್ದೆವು! ನಮ್ಮ ಮಾತು ಕೇಳಲಿಲ್ಲ ನೀವು! ಈಗ ನಮ್ಮ ಯದುವಂಶಕ್ಕೇ ಅಪಕೀರ್ತಿ ಬಂತಲ್ಲಾ!”. ಬಲರಾಮ ಕೋಪಾವೇಶದಿಂದ ಕತ್ತಿ ಹಿರಿದು ಅರ್ಜುನನ ರಥವನ್ನು ಹಿಂಬಾಲಿಸಿ (ಪಡೆ ಸಮೇತ) ಹೊರಟೇ ಬಿಡುತ್ತಾನೆ. ನಿರೀಕ್ಷೆಯಂತೆ ಯುದ್ಧದಲ್ಲಿ ಅರ್ಜುನನ ಕೈ ಮೇಲಾಗುತ್ತದೆ.

-ಇಂತೀಪರಿಯಲ್ಲಿ ವೆಂಕಟೇಶ್ ಮೂರ್ತಿಗಳ ವ್ಯಾಖ್ಯಾನವನ್ನು ಕೇಳಿದಿರಲ್ಲವೇ? ಈಗ ಮತ್ತೆ ವಿಷಯಕ್ಕೆ ಬರೋಣ. ನಾವೂ ಸಹ ಉಪ್ಪು-ಖಾರ ತಿಂದವರೇ. ಸನ್ಯಾಸಿ ವೇಷ ತೊಟ್ಟಮೇಲೆಯೂ ಸಹ ಈರುಳ್ಳಿ ಉಪ್ಪಿಟ್ಟು ಮುಕ್ಕಿದವರು ನಾವು. ಈರುಳ್ಳಿ ಬಜೆ, ಪಕೋಡ, ಮನೆಯಲ್ಲೇ ಮಾಡಿದ [ಅಥವಾ ವಿದೇಶದಿಂದ ತರಿಸಿದ] ಸುರೆ ಎಲ್ಲವೂ ನಮಗಿಷ್ಟವೇ. ದೇವತೆಗಳೇ ಸುರಾಪಾನ ಪ್ರಿಯರಾಗಿರುವಾಗ ನಾವು ಸುರಾಪಾನ ಮಾಡುವುದರಲ್ಲಿ ತಪ್ಪೇನಿದೆ?

ಏಕಾಂತದಲ್ಲಿ ವಿಶ್ವರೂಪ ದರ್ಶನ ಪಡೆದುಕೊಳ್ಳಲಿಕ್ಕೆ ಬಂದ ಸುಂದರ ಸ್ತ್ರೀರೂಪಕ್ಕೆ ನಾವು ಮೊದಲು ಪ್ರಸಾದ ರೂಪದಲ್ಲಿ ಇದನ್ನೇ ತಿನಿಸಿಗೆ ಕಲಸಿ ಅನುಗ್ರಹಿಸುತ್ತೇವೆ. ನಂತರ ನಮ್ಮದೇ ಆದ ಪದಗಳನ್ನು ಬಳಸಿ ನೀನು ದಿವ್ಯಳು ಭವ್ಯಳು ಮಾನ್ಯಳು, ತ್ರಿಲೋಕ ಸುಂದರಿ ಎಂದೆಲ್ಲ ಹೊಗಳಲು ಆರಂಭಿಸುತ್ತೇವೆ.

ತನ್ನ ಸೌಂದರ್ಯವನ್ನು ಹೊಗಳಿದಾಗ ಖುಷಿಪಡದ ಯಾವುದಾದರೂ ಸ್ತ್ರೀರೂಪ ಈ ಭೂಮಿಯಲ್ಲಿದೆಯೇ? ಮುಂದೆ ಹೊಗಳಿಕೆಯ ಖುಷಿ, ಒಳಗಿಳಿದ ’ಪರಮಾತ್ಮ’ ನ ಪ್ರಸಾದದ ನೆಶೆ ಇವೆರಡರ ಸಂಗಮದಲ್ಲಿ ಸ್ತ್ರೀರೂಪಕ್ಕೆ ಸಾಕ್ಷಾತ್ ದೇವೇಂದ್ರನ ನಂದನ ಕಾಣುತ್ತದೆ. ಸ್ವಲ್ಪ ಓರೆಕೋರೆಯಾಗಿ ನಮ್ಮ ಕಡೆಗೆ ವಾಲತೊಡಗುವ ಸ್ತ್ರೀರೂಪವನ್ನು ತೊಡೆಯಮೇಲಿಂದ ಕೆಳಗೆ ಜಾರಿಸಿ ಮಲಗಿಸಿ ಬುಸ್ಸಪ್ಪನಿಗೆ ಚಾರ್ಜ್ ವಹಿಸುತ್ತೇವೆ. ಮುಂದೆ ನಡೆಯುವುದೇ ನಮ್ಮ ಬುಸ್ಸಪ್ಪನ ತಾಂಡವ ನೃತ್ಯ.

ತಾಂಡವ ನೃತ್ಯ ಮುಗಿದಾಗ, ವಿಶ್ವರೂಪ ದರ್ಶನಪಡೆದ ಸ್ತ್ರೀರೂಪದಲ್ಲಿ ಕೆಲವು ಕೃತಾರ್ಥ ಭಾವದಿಂದ ಹೊರಗೆ ಹೋದರೆ, ಇನ್ನೂ ಕೆಲವು ಅಳುಮುಖ ಹೊತ್ತು ಹೊರಟು ಹೋಗುತ್ತವೆ. ಯಾರು ಹೇಗೇ ಹೋದರೂ ನಮ್ಮ ಕೆಲಸವಂತೂ ಅಲ್ಲಿಗೆ ನಡೆದುಹೋಗಿರುತ್ತದೆ.

ಬಲಭದ್ರನ ಬೋಳಿಗೆ ಎಣ್ಣೆ ಸವರಿದ ಅರ್ಜುನನ ಸನ್ಯಾಸಿಯ ಪಾತ್ರವನ್ನು ನಾವು ಬಹಳವಾಗಿ ಮೆಚ್ಚಿದ್ದೇವೆ. ನಟ, ನಿರ್ಮಾಪಕರಂತೆ ನಾವೂ ಸುಂದರಿಯರ ಒಂಟಿತನವನ್ನು ಕಳೆಯುವ ಸಂಕಲ್ಪ ಮಾಡಿಕೊಂಡು “ನಿನ್ನಷ್ಟಕ್ಕೇ ನೀನೇಕೆ ನಗುವೆ? ಇಲ್ಲಿ ಬಾ…ದೇವರೊಡನೆ ಸೇರಿ ನಗು, ನಿನಗೆ ಸ್ವರ್ಗ ದೊರಕುತ್ತದೆ” ಎಂದು ಏಕಾಂತ ದರ್ಶನಕ್ಕೆ ಕರೆಯುತ್ತೇವೆ.”

Thumari Ramachandra

source: https://www.facebook.com/groups/1499395003680065/permalink/1621291541490410/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s