ಚಾತುರ್ಮಾಸವೆಂದರೆ ಕಳ್ಳ ಸನ್ಯಾಸಿಗಳಿಗೆ ಹೆಣ್ಣುಮಕ್ಕಳನ್ನು ಧ್ಯಾನಿಸುವ ಸಮಯ

ಚಾತುರ್ಮಾಸವೆಂದರೆ ಕಳ್ಳ ಸನ್ಯಾಸಿಗಳಿಗೆ ಹೆಣ್ಣುಮಕ್ಕಳನ್ನು ಧ್ಯಾನಿಸುವ ಸಮಯ

“ನಾವೀಗ ಮುಂದಿನ ಚಾತುರ್ಮಾಸ ಎಷ್ಟು ಬೇಗ ಬರುತ್ತದೆಂಬ ಕಾತರದಲ್ಲಿದ್ದೇವೆ. ಜೈಕಾರದ ಕುರಿಗಳು ಜಾಸ್ತಿ ಇರುವೆಡೆಗೆ ಈ ಸಲದ ನಮ್ಮ ಚಾತುರ್ಮಾಸ. ಅದು ಹೆಚ್ಚಿನಪಕ್ಷ ಕಳೆದ ಸಲ ನಡೆದ ಕುರಿವಾಡೆಯಲ್ಲೇ ಆಗಬಹುದು; ಬೇರೆಡೆಗೆ ಅಷ್ಟೊಂದು ಕುರಿಗಳು ಸಿಗುವುದು ಕಷ್ಟ ಹೀಗಾಗಿ.

ಚಾತುರ್ಮಾಸದ ಕಾಲದಲ್ಲಿ ಸನ್ಯಾಸಿಗಳು ನಾಲ್ಕು ತಿಂಗಳು ಒಂದೇ ಕಡೆ ನೆಲೆಸಿ ಪರಿಸರದಲ್ಲಿ ಮಳೆಗಾಲದಲ್ಲಿ ಸಂತಾನಾಭಿವೃದ್ಧಿ ನಡೆಸುವ ಹುಳುಹುಪ್ಪಟೆ ಸರೀಸೃಪಗಳ ಅಂಡ, ಅಂಡಾಣುಗಳು,ಮೊಟ್ಟೆ-ಮರಿಗಳು ತಮ್ಮ ಕಾಲಡಿ ಸಿಕ್ಕು ನಾಶವಾಗದಂತೆ ಇರಬೇಕೆಂಬುದು ಹಿಂದಿನವರ ತಿಳುವಳಿಕೆ.

ಎಂಟು ತಿಂಗಳು ಚರರಾಗಿರುವ ಸನ್ಯಾಸಿಗಳು ನಾಲ್ಕು ತಿಂಗಳು ಸ್ಥಿರವಾಗಿ ಒಂದೆಡೆ ನಿಂತು,ದೂರದಿಂದ ತಮ್ಮನ್ನು ಕಾಣಬರುವ ಭಕ್ತರಿಗೆ ಆಶೀರ್ವದಿಸಬೇಕೆಂಬುದು ಇನ್ನೊಂದು ತಿಳುವಳಿಕೆ. ಭಗವಾನ್ ಶ್ರೀಧರ ಸ್ವಾಮಿಗಳಂತಹ ಮಹಾನ್ ಸಾಧಕರು ಅನೇಕ ಚಾತುರ್ಮಾಸಗಳಲ್ಲಿ ಆರಂಭದ ದಿನದ ನಂತರ ಭಕ್ತರಿಗೆ ದರ್ಶನ ನೀಡುತ್ತಿದ್ದುದು ಮುಕ್ತಾಯದ ದಿನವೇ.

ಚಾತುರ್ಮಾಸದಲ್ಲಿ ಕತೆ, ಪುರಾಣ, ಯಕ್ಷಗಾನಗಳಂತಹ ಲೌಕಿಕತೆಗೆ ಅವರು ಪುರಸ್ಕಾರ ನೀಡಲೇ ಇಲ್ಲ. ಚಾತುರ್ಮಾಸವೆಂದರೆ ಸನ್ಯಾಸಿ ತನ್ನ ವೈಯಕ್ತಿಕ ತಪಸ್ಸಾಧನೆಯನ್ನು ಹೆಚ್ಚಿಸಿಕೊಳ್ಳುವ ಕಾಲ. ಬ್ಯಾಂಕ್ ವ್ಯವಹಾರದ ರೀತಿಯಲ್ಲಿ ಹೇಳುವುದಾದರೆ ಠೇವಣಿ ಸಂಗ್ರಹ ಕಾಲ; ಇಲ್ಲಿ ಠೇವಣಿ ಎಂದರೆ ಹಣವಲ್ಲ, ಸಿದ್ಧಿ-ಸಾಧನೆ.

ಕಳ್ಳಸನ್ಯಾಸಿಯಾದ ನಮಗೆ ಇದೆಲ್ಲ ಅನ್ವಯಿಸುವುದಿಲ್ಲ. ನಮ್ಮ ಚಾತುರ್ಮಾಸ ಅಂದರೆ ನಿಜವಾಗಿಯೂ ಠೇವಣಿ ಸಂಗ್ರಹಣೆ ಮತ್ತು ’ಮಹಿಳಾ ಸಬಲೀಕರಣ’ಕ್ಕೆ ಸಂಗ್ರಹಿತ ಠೇವಣಿಯ ಯತಾನ್ ಶಕ್ತಿ ವಿನಿಯೋಗ.

ಹಬ್ಬ,ಹುಣ್ಣಿಮೆ,ಚಾತುರ್ಮಾಸ ಬಂದರೆ ’ಹಾವಾಡಿಗ’ರಾದ ನಮಗದು ನಿಜವಾಗಿಯೂ ಹಬ್ಬ. ಭಕ್ತ ಕುರಿಗಳು ಜೈಕಾರ ಹಾಕುತ್ತ ಒಂದೆಡೆ ಸಭೆ ನಡೆಸುತ್ತ ನಮ್ಮ ಸೋ ಕಾಲ್ಡ್ ಪ್ರವಚನ, ಮಂತ್ರಾಕ್ಷತೆಗಾಗಿ ಕಾಯುತ್ತವೆ. ಇನ್ನೊಂದೆಡೆ ಹಸುಗಳು ಹೋರಿಯ ಮಿಲನಕ್ಕಾಗಿ ಹಾತೊರೆಯುತ್ತಿರುತ್ತವೆ. ಯಾವ ಹಸುವಿಗೆ ಯಾವ ಹೋರಿಯನ್ನು ಸೇರಿಸಬೇಕು ಎಂಬುದನ್ನೂ ಹೇಳಬಲ್ಲ ತಳಿ ಶಾಸ್ತ್ರಜ್ಞರು ನಾವು. ಹಸುವಿಗೆ ಹೋರಿ ಸೇರಿಸುವ ದೃಶ್ಯವನ್ನು ನಮಗೆ ಬೇಕಾದ ಹಸುವಿಗೆ ನೆನಪಿಸಿಕೊಡುವುದು ನಮ್ಮ ಉದ್ದೇಶ; [ಕಳ್ಳ]ಸನ್ಯಾಸಿಗೆ ಹೇಳಿದ ಕೆಲಸ ಇದೇ ತಾನೇ?

ಈ ಹಿಂದೆ ಶಿವರಾತ್ರಿ, ನವರಾತ್ರಿ, ರಾಮನವಮಿ ಯಾವ ಪರ್ವಕಾಲದಲ್ಲೂ ನಮ್ಮ ಹಾರುವಿಕೆ ನಿಲ್ಲಲಿಲ್ಲ. ಸಮಾಜ ಬಾಂಧವರಂತೂ ಒಬೊಬ್ಬರೇ ಮಕ್ಕಳು ಸಾಕು ಎನ್ನುತ್ತಾರಲ್ಲ? ನಾಳೆ ಸಮಾಜದಲ್ಲಿ ಜನಸಂಖ್ಯೆ ಕಮ್ಮಿ ಆದರೆ ಏನುಮಾಡೋಣ? ಅದಕ್ಕಾಗಿಯೇ ನಾವು ಮುಂದಾಲೋಚನೆ ಮಾಡಿ, ಮುಂಜಾಗೃತಾ ಕ್ರಮವಾಗಿ, ನಮ್ಮ ಶಕ್ತಿಯುಕ್ತಿ ಮೀರಿ ಅನೇಕ ಮಹಿಳೆಯರಿಗೆ ಸಂತಾನ ಭಾಗ್ಯ ಕರುಣಿಸಿದ್ದೇವೆ.

ತಣ್ಣಗಿನ ಹವೆಯ ಚಾತುರ್ಮಾಸ ಕಾಲದಲ್ಲಿ ಸುಂದರ ಹೆಣ್ಣುಮಕ್ಕಳು ಮತ್ತು ಮಹಿಳೆಯರು ಜೀನ್ಸ್ ಧರಿಸಿ ಮಂತ್ರಾಕ್ಷತೆಗೆ ಬರಬೇಕೆಂಬುದು ನಮ್ಮ ಅಪೇಕ್ಷೆ. ಅವನ್ಯಾವನೋ ಭಾರತೀಯ ಇಲ್ಲಿನ ಹೆಂಗಸರು ಸೀರೆ ಉಡಬೇಕೆಂದು ಹೇಳಿದ್ದಾನಪ್ಪ; ಆದರೆ ನಿಜವಾದ ಸತ್ಯ ಹೇಳುವುದಾದರೆ ನಮಗೆ ವಿದೇಶೀ ಮಾದಕ ಉಡುಪುಗಳಲ್ಲಿ ಬರುವ ಸುಂದರ ಸ್ತ್ರೀಯರನ್ನು ಕಂಡರೆ ಬಹಳ ಪ್ರೀತಿ. ಅವರು ಹೆಚ್ಚುಹೊತ್ತು ನಮ್ಮ ಜೊತೆಗಿದ್ದು ನಿಧಾನವಾಗಿ ಮಂತ್ರಾಕ್ಷತೆ ತೆಗೆದುಕೊಳ್ಳಲಿ ಎಂದು ಬಯಸುತ್ತೇವೆ ನಾವು. ಕೆಲವರನ್ನು ಕಣ್ಣಲ್ಲೇ ಆಮಂತ್ರಿಸುತ್ತೇವೆ.

ಈ ಸಲ ಇದೆಲ್ಲದರ ಜೊತೆಗೆ ಸೇಫ್ಟಿ ಬಹಳ ಮುಖ್ಯವಾಗಿದೆ. ನಮ್ಮ ವಿರೋಧಿಗಳು ಕಣ್ಣಲ್ಲಿ ಎಣ್ಣೆಬಿಟ್ಟುಕೊಂಡು ಪ್ರತಿದಿನದ ನಮ್ಮ ಇಂಚಿಂಚು ಸರಿದಾಟವನ್ನೂ ಗಮನಿಸುತ್ತಿದ್ದಾರೆ. ನಾವು ಎಲ್ಲೇ ಹೋಗಲಿ ಸಂಪೂರ್ಣ ವಾರ್ತೆ ಅವರಿಗೆ ಅದು ಹೇಗೋ ಸಿಕ್ಕಿಬಿಡುತ್ತದೆ ಅಷ್ಟೇ ಅಲ್ಲ; ನಾವು ಇನ್ನೂ ಏಕಾಂತ ನಡೆಸುತ್ತಿರುವುದೂ ಸಹ ಅವರಿಗೆ ತಿಳಿದಿದೆ.

ಈಗ ನಮ್ಮ ಏಕಾಂತ ದರ್ಶನ ನಡೆಯುವುದು ಶಾಶ್ವತ ಸೇವೆಯವರಿಗೆ ಮಾತ್ರ. ದೇವಸ್ಥಾನಗಳಲ್ಲಿ ಶ್ರೀದೇವರ ಅಮೃತಪಡಿ ಶಾಶ್ವತ ಸೇವಾನಿಧಿಗೆ ಸದಸ್ಯರಾಗುವ ಮಂದಿ ಇರುತ್ತಾರಲ್ಲಾ? ಅವರೆಲ್ಲ ಅಲ್ಲಿ ಒಂದಷ್ಟು ಹಣವನ್ನು ಕೊಟ್ಟಿರುತ್ತಾರೆ. ಇಲ್ಲಿ ಹಾಗಲ್ಲ;ನಮ್ಮ ಶಾಶ್ವತ ಸೇವೆಗೆ ಸದಸ್ಯರಾದವರಿಗೆ ನಾವೇ ಹಣವನ್ನು ನೀಡುತ್ತೇವೆ. ನಮ್ಮ ಕಾರುಗಳಲ್ಲೇ ಓಡಾಡಿಸುತ್ತೇವೆ.

ನಮ್ಮ ಕಾರುಗಳಲ್ಲಿ ಓಡಾಡಿದರೆ ಗೊತ್ತಾಗಬಹುದೆಂದು ಕೆಲವೊಮ್ಮೆ ಬಸ್ಸುಗಳಲ್ಲಿ ಬರಲು ಹೇಳುತ್ತೇವೆ. ಅದು ಅವರಿಗೆಲ್ಲ ಗೊತ್ತು; ಅವರು ಸರ್ಪಾಸ್ತ್ರ ಪ್ರಯೋಗವನ್ನು ಬಯಸುವುದರಿಂದ ನಾವು ಎಲ್ಲಿಗೇ ಹೋದರೂ ಅವರು ಅಲ್ಲಿಗೇ ಬರುತ್ತಾರೆ. ಇದು ಚಾತುರ್ಮಾಸದಲ್ಲಿಯೂ ನಡೆಯುತ್ತಲೇ ಇರುತ್ತದೆ.

ಇಷ್ಟವಿಲ್ಲದ ಕಾವಿತೊಟ್ಟು, ಕಷ್ಟವೆನಿಸುವ ಮರದ ಚಪ್ಪಲಿ ತೊಟ್ಟು ಕಟ ಕಟವೆನಿಸುತ್ತ ಹಾವಾಡಿಗ ಮಹಾಸಂಸ್ಥಾನದವರು ಅಂದರೆ ನಾವು ವೇದಿಕೆಯತ್ತ ನಡೆದರೆ ಗಿಂಡಿಗಳು ಎಂದಿನಂತೆ ಗಂಟಲು ಹರಿದುಹೋಗುವಂತೆ ಪರಾಕು ಕೂಗುತ್ತವೆ. ಹಳದೀ ತಾಲಿಬಾನಿಗಳು ಜಯಜಯಕಾರ ಘರ್ಜಿಸುತ್ತ ನಮ್ಮ ವಿರೋಧಿಗಳಿಗೆ ತಮ್ಮ ತೋಳ್ಬಲ ಗಟ್ಟಿ ಇದೆ ಎಂದು ಸಂದೇಶ ರವಾನಿಸುತ್ತವೆ.

ನಮ್ಮ ಹಾರವೇನು? ತುರಾಯಿಯೇನು? ಕಪಟ ನಗೆಯೇನು? ಆಹಹಹ ಭಕ್ತ ಕುರಿಗಳು ಮಡಿಪಂಚೆಯಲ್ಲಿ ಬಂದು ಅಡ್ಡಬೀಳಲು ಇಷ್ಟು ಸಾಕು. ಒಳಗೆ ಹೋದರೆ ರಸಮಯ ವೀರ್ಯ ಸನ್ಯಾಸ, ಹೊರಗೆ ಬಂದರೆ ಪರಮ ವೈರಾಗ್ಯವೆಂದು ಬಾಯಲ್ಲಿ ಕೊಚ್ಚುವ ವೇಷ, ಜನರನ್ನು ಮರುಳು ಮಾಡಲು ಇನ್ನೇನು ಬೇಕು? ಠೇವಣಿ ಸಂಗ್ರಹಕ್ಕೆ ’ವಿವಿಧೋದ್ದೇಶ ಯೋಜನೆಗಳ’ನ್ನು ಹಾಕಲು ನಮ್ಮ ಕುಲಪತಿ ಬಾವಯ್ಯ ಸದಾ ಆಸ್ಥಾನ ವಿದ್ವಾನ್ ಆಗಿ ಜೊತೆಗೇ ಇದ್ದಾರಲ್ಲ?

ಯಾವ ಕುರಿಗಾದರೂ ನಮ್ಮ ವಿರುದ್ಧ ಮಾತನಾಡುವ ಧೈರ್ಯವಿದೆಯೇ? ಯಾಕೆ ಕುಲಪತಿ ಬಾವಯ್ಯನನ್ನು ಜೊತೆಗೇ ಇರಿಸಿಕೊಂಡಿದ್ದೀರಿ ಎಂದು ಕೇಳುವ ದಮ್ಮಿದೆಯೇ? ನಾವು ಮಾಡಿದ ಮತ್ತು ಮಾಡುತ್ತಿರುವ ಅಪರಾಧಗಳನ್ನು ಪ್ರಶ್ನಿಸುವ ಎದೆಗಾರಿಕೆ ಇದೆಯೇ? ಯಾರೂ ಮಾತನಾಡುವುದಿಲ್ಲ ಯಾಕೆ ಗೊತ್ತೇ? ನಮ್ಮ ವೀರ್ಯಸನ್ಯಾಸದ ರೌಡಿಸಂ ಹಾಗಿದೆ. ನಮ್ಮ ವಿರುದ್ಧ ಸಮಾಜದಲ್ಲಿ ಚಕಾರವೆತ್ತದಂತೆ ಹವಾ ಮ್ಯಾಂಟೇನ್ ಮಾಡಿದ್ದೇವೆ ನಾವು.

ನಮ್ಮ ವಿರೋಧಿಗಳು ಕೇಸು ದಾಖಲಿಸಿದಾಗ ನಮ್ಮ ತಾಲೀಬಾನ್ ಪಡೆಗೆ ಹೇಳಿ, ನಮ್ಮ ’ಸೇವೆ’ಗೆ ಬಂದು ಹೋಗಿ ಅಲ್ಲಲ್ಲಿ ಅಪಸ್ವರ ಎತ್ತತೊಡಗಿದ್ದವರಿಗೆಲ್ಲ ಫೋನ್ ಮೇಲೆ ಫೋನ್ ಮಾಡಿಸಿ ಅವರ ಸೊಲ್ಲಡಗಿಸಿದ್ದೇವೆ ನಾವು. ಈಗಲೂ ’ಹಾವಾಡಿಗ ಮಹಾಸಂಸ್ಥಾನ’ ಎಂದರೆ ಸಾಕು, ಕನಸಿನಲ್ಲೂ ಅವರೆಲ್ಲ ಹಾರಿಬೀಳುತ್ತಾರೆ. ಅದಕ್ಕೇ ಹೇಳೋದು ವೀರ್ಯಸನ್ಯಾಸ ಎಂದರೆ ಹೀಗಿರುತ್ತದೆ.

ಚಾತುರ್ಮಾಸದಲ್ಲಿ ಯತಿಗಳಿಗೆ ಅಂತಾ ನಿಯಮವಿದೆ ಇಂತಾ ನಿಯಮವಿದೆ ಎಂದು ಹೇಳಿಸಿ ಬಂದೋಬಸ್ತು ಮಾಡಿಸಿಬಿಟ್ಟರೆ ಚಾತುರ್ಮಾಸ ಮುಗಿಯುವವರೆಗೂ ನಾವು ಸೇಫ್ ಆಗುತ್ತೇವೆ; ಹಾಗಿದ್ದೂ ಯಾರಾದರೂ ಎಳೆದೊಯ್ಯಲು ಬಂದರೆ ಕುರಿವಾಡೆಯಲ್ಲಿ ಉರುಳುಸೇವೆಗೆ ನಮಗೆ ಜನ ಸಿಗುತ್ತಾರೆ. ಪಾಳಿಯಲ್ಲಿ ಕಾಯುವ ಬಕರಾಗಳು ಬೇಕಷ್ಟು ಇರುವಾಗ ನಾವೇಕೆ ಬೇರೆಡೆಗೆ ತೆರಳಬೇಕು?

ಅನ್ಯ ಸಮಾಜದಲ್ಲಾಗಿದ್ದರೆ ಇಷ್ಟೊತ್ತಿಗೆ ಯಾವಾಗಲೇ ಕಳ್ಳ ಸನ್ಯಾಸಿಗೆ ಚೆನ್ನಾಗಿ ತದುಕಿ, ಕೆಲವು ಹಲ್ಲುಗಳನ್ನು ಹೊಟ್ಟೆಗೆ ಕಳಿಸಿ, ಮುಖಮೈಮೇಲೆ ಬಾಸುಂಡೆ ಬರಿಸಿ ಪರಪ್ಪನ ವನವಾಸಕ್ಕೆ ಬಿಟ್ಟುಬರುತ್ತಿದ್ದರು. ಪರದೇಶಿಗಳು ಎಂದು ವಾಡಿಕೆಯಲ್ಲಿ ಸಮಾಜದವರು ಹೇಳುವ ಸಾತ್ವಿಕ ಗುಣ ಸ್ವಭಾವದ ನಮ್ಮ ಜನ ಗಂಜಿಯಲ್ಲಿ ಬಿದ್ದ ನೊಣದಂತೆ ತಾವೇ ಒದ್ದಾಡುತ್ತಾರೆಯೇ ವಿನಃ ನಮ್ಮ ತಂಟೆಗೆ ಬರುವುದಿಲ್ಲ ಎಂಬುದು ನಮಗೆ ಗೊತ್ತು.

ಮೇಲಾಗಿ ಸೀಟಿನ ಇತಿಹಾಸವನ್ನು ಮುಂದಿಡುತ್ತ ಸೆಂಟಿಮೆಂಟ್ ಕ್ರಿಯೇಟ್ ಮಾಡಿಟ್ಟಿದ್ದೇವಲ್ಲ? ಸೀಟಿಗೆ ಬೆಲೆ ಬರುವುದು ಅದರಲ್ಲಿ ಹಾಲಿ ಕೂತ ವ್ಯಕ್ತಿಯಿಂದ ಎಂಬುದು ನಮ್ಮ ಭಕ್ತ ಕುರಿಗಳಿಗೆ ಇನ್ನೂ ಅರ್ಥವಾಗಿಲ್ಲ. ಹಿಂದಿಯ ಗಾದೆಯೊಂದರ ಅರ್ಥ ಹೀಗಿದೆ-’ಎಲ್ಲಿಯವರೆಗೆ ಟೋಪಿ ಹಾಕಿಸಿಕೊಳ್ಳುವ ಜನ ಇರುತ್ತಾರೋ ಆಲ್ಲಿಯವರೆಗೆ ಟೋಪಿ ಹಾಕುವ ಜನ ಇದ್ದೇ ಇರುತ್ತಾರೆ’, ಇದನ್ನರಿತ ನಾವು ಟೊಪಿ ಹಾಕುವ ’ಶಾಸ್ತ್ರ’ದಲ್ಲಿ ಪಾರಂಗತರಾಗಿದ್ದೇವೆ.

ಬರುವ ಚಾತುರ್ಮಾಸದಲ್ಲಿ ದರ್ಶನಕ್ಕೆ ಎಂತೆಂತಹ ಬಣ್ಣದ ಹಕ್ಕಿಗಳು ಬರಬಹುದೆಂದು ಒಳಗೆ ಕುಳಿತು ಯೋಚಿಸುತ್ತೇವೆ; ಹೊರಗೆ ಕುಳಿತ ಕುರಿಗಳು ನಾವು ಧ್ಯಾನದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ದಿನ ಹೀಗೇ ಸಾಗುತ್ತಿದೆ.

Thumari Ramachandra

Source: https://www.facebook.com/groups/1499395003680065/permalink/1620908431528721/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s