ಗೊತ್ತಿದ್ದೂ ಮೈಮೇಲೆ ಚಪ್ಪಡಿ ಎಳೆದುಕೊಳ್ಳುವುದಕ್ಕೆ ಇಚ್ಛಾಪ್ರಾರಬ್ಧವೆನ್ನುತ್ತಾರೆ

ಗೊತ್ತಿದ್ದೂ ಮೈಮೇಲೆ ಚಪ್ಪಡಿ ಎಳೆದುಕೊಳ್ಳುವುದಕ್ಕೆ ಇಚ್ಛಾಪ್ರಾರಬ್ಧವೆನ್ನುತ್ತಾರೆ

ಸಮಾಜ ನೀತಿ ತಪ್ಪಿ ನಡೆಯಬಾರದು ಎಂಬರ್ಥದಲ್ಲಿ ಚಾಣಕ್ಯ, ಭರ್ತೃಹರಿ ಮತ್ತು ವಿದುರ ನೀತಿಸೂತ್ರಗಳನ್ನು ಹೇಳಿದ್ದಾರೆ. ವಿರುದನ ನೀತಿಯಲ್ಲಿ ಅಧರ್ಮವನ್ನು ಬೆಂಬಲಿಸುವ ಧರ್ಮಾತ್ಮನೂ ಕೂಡ ಅಧರ್ಮಿಯೇ ಎಂಬುದನ್ನು ಉದಾಹರಿಸಿದ್ದಾನೆ.

ಮಹಾಭಾರತದ ಕರ್ಣನ ಪಾತ್ರವನ್ನು ನಾವು ಕಾಣುತ್ತೇವಲ್ಲ? ಕರ್ಣ ದುಷ್ಟನೇ?ಅಲ್ಲ; ಆತನನ್ನು ದುಷ್ಟನೆನ್ನಲು ಮನಸ್ಸು ಬರುವುದಿಲ್ಲ ಅಲ್ಲವೇ? ಆದರೆ ವೇದವ್ಯಾಸರು ’ದುಷ್ಟ ಚತುಷ್ಟಯ’ರಲ್ಲಿ ಕರ್ಣನೂ ಒಬ್ಬ ಎಂದಿದ್ದಾರೆ. ಹಾಗಾದರೆ ಕರ್ಣ ಮಾಡಿದ ತಪ್ಪೇನು?

ತನ್ನ ಸ್ವಾಭಿಮಾನಕ್ಕೆ ಘಾಸಿಯಾಯಿತೆಂಬ ಒಂದೇ ಕಾರಣಕ್ಕೆ ಕರ್ಣ ಕೌರವನ ಆಶ್ರಯವನ್ನು ಸೇರಿಕೊಳ್ಳುತ್ತಾನೆ. ತನ್ನ ಬೆಂಬಲಿಗ ಪಡೆಯಲ್ಲಿ ಶಕ್ತಿಶಾಲಿಗಳನ್ನು ಇರಿಸಿಕೊಳ್ಳುವ ಸಲುವಾಗಿ ಕೌರವ ಅವನಿಗೆ ಅಂಗರಾಜ್ಯವನ್ನು ಆಳಲು ಹೇಳುತ್ತಾನೆ.

ಅಧರ್ಮಿಯಾದ ಕೌರವನ ಎಂಜಲಿಗೆ ಕೈಯೊಡ್ಡಿದ ಕರ್ಣ, ಸವ್ಯಸಾಚಿಯಾದ ಪಾರ್ಥನನ್ನೂ ಮೀರಿಸುವ ಅಸಮಾನ್ಯ ಪ್ರತಿಭಾವಂತ. ಪಾಂಡವರಿಗೆ ಆತನ ಗುರುತು ಹತ್ತಲಿಲ್ಲ; ಸೂತ ಸುತನೆಂದೇ ತಿಳಿದರು. ಹಡೆದಮ್ಮ ಕುಂತಿ ತನ್ನ ಭಾನಗಡಿಯನ್ನು ಬಚ್ಚಿಟ್ಟಿದ್ದರಿಂದ ನಿಜ ವಿಷಯ ಪಾಂಡವರಿಗೆ ತಿಳಿಯದೇ ಹೋಯಿತು.

ಅಷ್ಟೇ ಅಲ್ಲ, ತಾನು ಯಾರ ಮಗ ಎಂಬುದು ಸೂತ ಸುತನೆನಿಸಿ ಬೆಳೆದ ಕರ್ಣನಿಗೂ ತಿಳಿಯಲೇ ಇಲ್ಲ. ಸಂಧಾನಕ್ಕೆ ಕರೆಯಲು ಕೃಷ್ಣ ತನ್ನೆಡೆ ಬಂದಾಗ ನೀಡಿದ ಹೇಳಿಕೆಯಲ್ಲಿ ಯಾಕೋ ಡೌಟು ಹೊಡೆಯಿತು; ಕೃಷ್ಣ ಕುಟಿಲ ಕಾರಸ್ಥಾನಿ ಎಂಬುದು ಅದಕ್ಕೆ ಕಾರಣವಾಗಿದ್ದಿರಬಹುದು. ಕುಂತಿ ಸ್ವಯಂ ತಾನೇ ಬಂದು ಹೇಳಿದಾಗ ಪಾಂಡವ ಸಹೋದರನೆಂಬುದು ಗೊತ್ತಾದರೂ ಆಶ್ರಯದಾತನನ್ನು ತೊರೆಯಲಾರದ ಮಾನಸಿಕ ಸ್ಥಿತಿಯಲ್ಲಿ ಕರ್ಣನಿದ್ದ.

ಅಮ್ಮನ ಅಣತಿಗೆ ಮಣಿದು ತೊಟ್ಟ ಬಾಣವ ತೊಡದೆ ಯುದ್ಧ ಮಾಡಿದ. ಪುನರ್ಬಳಕೆಗೆ ಅರ್ಹವಾದ ಶಕ್ತಿಶಾಲಿ ಅಸ್ತ್ರಗಳನ್ನೆಲ್ಲ ಕಳೆದುಕೊಂಡ. ರಥದ ಗಾಲಿ ಹೂತು ಹೋದಾಗ ಅಶಕ್ತನಾದ. ಪರೀಕ್ಷೆಗೆ ಬಂದ ಬ್ರಾಹ್ಮಣ ವೇಷಧಾರಿ ಭಗವಂತ ಬೇಡಿದ ಕರ್ಣಕುಂಡಲಗಳಿಗೆ ಹೃದಯ ಬಗೆದು ಅಮೃತ ಕಲಶದಿಂದ ಧಾರೆ ಎರೆದು ಕೊಟ್ಟ; ಸಾಕ್ಷಾತ್ಕಾರ ಪಡೆದ.

ಪರಿಸ್ಥಿತಿಯಲ್ಲಿ ಕರ್ಣ ಅಧರ್ಮವನ್ನು ಬೆಂಬಲಿಸಿದ. ತಾನು ಅಧರ್ಮಿಯ ಆಶ್ರಯದಲ್ಲಿದ್ದೇನೆಂಬುದು ಗೊತ್ತಾದರೂ ಬಿಟ್ಟು ಬರಲು ಸಿದ್ಧನಾಗಲಿಲ್ಲ. ಹೀಗಾಗಿ ಆತ ದುಷ್ಟನೆನಿಸಿದ. ಕರ್ಣನ ಹೃದಯವಂತನಾಗಿದ್ದ, ನಿಷ್ಕಪಟನಾಗಿದ್ದ, ಸಚ್ಚಾರಿತ್ರ್ಯವಂತನಾಗಿದ್ದ. ಕೊನೆಗೆ ಆತನ ಪರಿಸ್ಥಿತಿಗೆ ಭಗವಂತನೇ ಆತನಿಗೆ ಶರಣಾಗಿ ಮುಕ್ತಿ ನೀಡಿದ.

ಈ ಕತೆಯನ್ನು ಆಧಾರವಾಗಿಟ್ಟುಕೊಂಡ ಕೆಲವು ಶಿಖಾಮಣಿಗಳು ಅಧರ್ಮಿ ರಾಂಗ್ ವೇಷವನ್ನು ಬೆಂಬಲಿಸುತ್ತಿದ್ದಾರೆ. ಹಾಗೆ ಬೆಂಬಲಿಸುತ್ತಿರುವವರಲ್ಲಿ ಕರ್ಣರಿಲ್ಲ. ನೀವು ಇಂತವರು ಎನ್ನಲು ಕುಂತಿಯರಿಲ್ಲ. ಮುಕ್ತಿ ನೀಡುವ ಮಾಧವ ಮೊದಲೇ ಎದ್ದುಹೋಗಿದ್ದಾನೆ. ಹೀಗಿರುವಾಗ, ಸೀಟಿನ ಗೌರವ ಕಾಪಾಡಲು ನಿಂತ ಮೂರ್ಖ ಶಿಖಾಮಣಿಗಳಿಗೆ ಏನೆನ್ನಬೇಕು?

ತನ್ನ ಲಂಪಟತನವನ್ನು ಮರೆಮಾಚಲು ಹಲವು ವಿಧಗಳಲ್ಲಿ ಶತಾಯ ಗತಾಯ ಪ್ರಯತ್ನ ನಡೆಸುತ್ತಿರುವಾತ ನೆಲದ ಮೇಲೆ ಕೂರಲೂ ಸಿದ್ಧ, ಕತ್ತೆ ನಾಯಿ ಹಂದಿಗಳ ಕಾಲು ಹಿಡಿಯಲೂ ಸಿದ್ಧ. ’ಹೊತ್ತು ಬಂದಾಗ ಕತ್ತೆಯ ಕಾಲನ್ನಾದರೂ ಹಿಡಿಯಬೇಕು’ ಎಂಬ ಗಾದೆಯನ್ನು ಆತ ಚೆನ್ನಾಗಿ ಬಲ್ಲ. ತನ್ನ ಬೆಂಬಲಿಗರೆಲ್ಲ ಕತ್ತೆ ಬಡವರು ಕುರಿಗಳೇ ಎಂಬುದನ್ನೂ ಆತ ಬಲ್ಲ. “ಕುರಿಗಳು” ಎಂದು ಕುರಿಗಳನ್ನು ಕುರಿತು ಸಂಬೋಧಿಸಿದರೂ ಅವುಗಳಿಗೆ ಪ್ರಜ್ಞೆಯಿಲ್ಲ.

ಇವನ ಜಗದೋದ್ಧಾರಕ ಯೋಜನೆಗಳು ಒಂದೆರಡಲ್ಲ. ಯಾಕೆ? ಇನ್ನೆಲ್ಲೂ ಜನರಿಗೆ ಅಂತಹ ಯೋಜನೆಗಳು ಕಾಣುವುದಿಲ್ಲವೇ? ಅದಕ್ಕೆ ಇವನೇ ಆಗಬೇಕೆ? ಎಲ್ಲಾದಕ್ಕೂ ’ನಪುಂಸಕ ಭವನ’ವೇ ಆಗಬೇಕೆ? ಊರಲ್ಲಿ ಇನ್ನೆಲ್ಲೂ ಜಾಗಗಳಿಲ್ಲವೇ? ಎಲ್ಲಾ ಕೋಟಿಗಳ ಲೆಕ್ಕಾಚಾರದಲ್ಲೇ ಖರ್ಚು. “ಕೊಟ್ಟವರ ಹೆಸರನ್ನು ಕಲ್ಲಿಗೆ ಹಾಕುತ್ತೇವೆ” ಎಂಬ ಹೇಳಿಕೆ; ಕೊಟ್ಟವರನ್ನು ಗಲ್ಲಿಗೆ ಹಾಕುವುದೊಂದು ಬಾಕಿ ಉಳಿಯುತ್ತದೆ!

ಜೀವನ ಪರ್ಯಂತ ಎಂಜಲು ಕೈಲಿ ಕಾಗೆ ಓಡಿಸದ ಕೆಲವರು ವೃದ್ಧಾಪ್ಯದಲ್ಲಿ ಜ್ಞಾನೋದಯವಾಗಿ ಹೆಸರಿಗೆ ಬೇಕಾಗಿ ಕೆಲವಷ್ಟು ಕಕ್ಕುತ್ತಾರೆ. ಆ ಕಕ್ಕುಲಾತಿಗೆ ರಾಂಗ್ ವೇಷದಂತ ಬಿಕ್ಕಳಿಕೆ ಸೋಗಿನವರು ಸೆರಗೊಡ್ಡುತ್ತಾರೆ. ಸಿಕ್ಕಿದ್ದನ್ನು ಮುಕ್ಕುವ ಕುಲಪತಿ ಬಾವಯ್ಯನವರು “ಮಹಾದಾನಿ”ಗಳನ್ನು ಹಾವಾಡಿಗ ಮಹಸಂಸ್ಥಾನದ ವತಿಯಿಂದ ಸನ್ಮಾನಿಸುವುದನ್ನು ಘೋಷಿಸುತ್ತಾರೆ; ಬಾವ-ನೆಂಟರ ಖಾಸಗಿ ಬ್ಯಾಂಕ್ ಅಕೌಂಟ್‍ಗಳು ಚಕಚಕನೆ ಅಪ್ಡೇಟ್ ಆಗುತ್ತವೆ.

ಅನೈತಿಕ ಚಟುವಟಿಕೆಗಳು ನಡೆಯುವಲ್ಲಿ ಕೊಲೆ, ಸುಲಿಗೆ, ದರೋಡೆ ಎಲ್ಲವೂ ನಡೆಯುತ್ತಿರುತ್ತವೆ; ಅದು ಧರ್ಮದ ದಪ್ಪ ಹಾಸಿನ ಕೆಳಗೆ ಹಾಸಲ್ಪಟ್ಟ ಚಾಪೆಯಂತಿರಬಹುದು ಅಥವಾ ಅದೇ ಧರ್ಮವೆಂಬ ಶಿರೋನಾಮೆಯನ್ನು ಧರಿಸಿಕೊಂಡು ನಡೆಯಬಹುದು. ಹೀಗಾಗಿಯೇ ಪಾಪದ ವ್ಯಕ್ತಿಯೊಬ್ಬ ಅನ್ಯಾಯವಾಗಿ ಜೀವ ಕಳೆದುಕೊಂಡ. ಆತನ ಸಾವಿನ ಅಸಹನೀಯ ಕ್ಷಣದಲ್ಲಿ ರಾಂಗ್ ವೇಷದ ’ದಿವ್ಯ ಸಂದೇಶ’ದ ಮೇರೆಗೆ ಹಳದೀ ತಾಲಿಬಾನಿಗಳು ನಿಷೇಧಾಜ್ಞೆಯನ್ನು ಜಾರಿಗೊಳಿಸಿದರು; ಹೋದವರಿಗೆ ಬಹಿಷ್ಕಾರವೆಂದು ಘೋಷಿಸಿದರು.

ಇಂದು ಮಾಧ್ಯಮಗಳಲ್ಲಿ ಕತ್ತೆ, ಕುದುರೆ, ಮಂಗ ಇತ್ಯಾದಿ ಜೀವಿಗಳು ಸತ್ತಾಗ ಕೂಡ ಅವುಗಳನ್ನು ಮಣ್ಣುಮಾಡುವಾಗ ಎಷ್ಟೊಂದು ಜನ ಸೇರಿ ಸಂತಾಪ ಸೂಚಿಸುವುದನ್ನು ಕಾಣುತ್ತೇವೆ. ಇದೇ ನಾಗರಿಕ ಸಮಾಜದ ಒಂದು ಭಾಗವಾದ ಕುರಿಮೆಂದೆ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಯಾವ ತಪ್ಪನ್ನೂ ಎಸಗದ ತಮ್ಮ ಸಮಾಜದ ಅತ್ಯುತ್ತಮ ವ್ಯಕ್ತಿಯೊಬ್ಬ, ರಾಂಗ್ ವೇಷದ ಹಾದರದ ಕತೆಗೆ ಬಲಿಯಾದಾಗ ಕೈತಟ್ಟಿ ನಕ್ಕವರು ಈ ಹಳದೀ ತಾಲಿಬಾನಿಗರು. ನಂತರ ’ಪವಾಡ’ದ ಕತೆ ಕಟ್ಟಿದವರೂ ಅವರೇ. ಗತಿಸಿದ ವ್ಯಕ್ತಿಯ ಎಳೆಯ ಮಕ್ಕಳ ಕತೆಯೇನು, ಮೂವತ್ತರ ಹರೆಯದ ವಿಧವೆಯ ಮುಂದಿನ ಜೀವನದ ಗತಿಯೇನು? ’ನಪುಂಸಕ ಭವನ’ ಕಟ್ಟುವ ನಪುಂಸಕರು ಇದಕ್ಕೆ ಉತ್ತರಿಸುವರೇ?

ಸ್ವಸ್ಥ ಸಮಾಜಕ್ಕೆ ಬೇಕಾದ ಸಾಕಷ್ಟು ವ್ಯವಸ್ಥೆಗಳು ಸುತ್ತಮುತ್ತ ಇರುವಾಗ ಹೊಸದೊಂದರ ನಿರ್ಮಾಣಕ್ಕೆ ಎತ್ತುವಳಿ ಮಾಡುವ ಯೋಜನೆ ತಯಾರಾಗಿದೆ. ಇದೇ ಮೇಳದ ಕೆಲವರು ಇನ್ನೊಂದೆಡೆ ಮತ್ತೊಂದು ಕಟ್ಟಡವನ್ನು ಕಟ್ಟುತ್ತಿದ್ದಾರೆ. ಅಲ್ಲಿಯೂ ಅಂತದ್ದೇ ವ್ಯವಸ್ಥೆಗಳಿವೆ. ಅಲ್ಲಿಯೂ ಎತ್ತುವಳಿ ಸಾಗಿದೆ. ಹೀಗಾಗಿ ಎಷ್ಟು ಮುಖದಲ್ಲಿ ಎತ್ತುವಳಿ ನಡೆದರೂ ತೆರೆಬೇಕಾದ ಮೂಲ ಒಂದೇ. ಇದಕ್ಕಾಗಿ ತೆರೆಬೇಕಾದ ಜನಸಾಮಾನ್ಯನ ಆದಾಯಮೂಲದಲ್ಲಿ ಹೆಚ್ಚುವಳಿ ಆಗುವುದೇ?

ವರ್ಷಗಳಿಂದ ರಾಂಗ್ ವೇಷ ತನ್ನ ಸ್ವಾರ್ಥಕ್ಕಾಗಿ ಚಟಕ್ಕಾಗಿ ಹುಡಿಹಾರಿಸಿದ ಹಣ ಎಲ್ಲಿಂದ ಬಂತು? ರಾಂಗ್ ವೇಷ ಕಾವಿಧಾರಿಯದ್ದರಿಂದ ಸರ್ಪಾಸ್ತ್ರ ಬಿಟ್ಟು ಸಂತಾನಾನುಗ್ರಹ ನೀಡುವ ಕರ್ಮದ ಹೊರತು ಉಳಿದ ಕರ್ಮಗಳಿಗೆ ಅಧಿಕಾರವಿಲ್ಲ; ಸಂಡಾಸಿಗೆ ಹೋಗುವುದಾದರೂ ಗಿಂಡಿಯೇ ನೀರು ಹಾಕಬೇಕು. ಇಂತಿಪ್ಪ ರಾಂಗ್ ವೇಷದ ಅಸಡ್ಡಾಳ ಅಡ್ಡಚಟಗಳಿಗೆ ಖರ್ಚು ಮಾಡುವ ಹಣ ಯಾರಪ್ಪನ ಮನೆಯದ್ದು?

ತನ್ನ ಹಾದರದ ಕತೆಯನ್ನು ಮುಚ್ಚಿ ಹಾಕಲು ರಾಂಗ್ ವೇಷ ಇಲ್ಲಿಯವರೆಗೆ ತೆತ್ತ ಹಣಕ್ಕೆ ಲೆಕ್ಕವುಂಟೇ? ಮೂರ್ನಾಲ್ಕು ಅಡ್ಡಗೇಟುಗಳು, ವಿಚಾರಣೆ ನಡೆಸಲು ಬಂದ ’ಅಮ್ಮಂದಿರು’, ಚಿತ್ರವಿಚಿತ್ರ ಸಬೂಬು ನೀಡಿ ದಿನದೂಡಿದ ’ನಾಗೇಂದ್ರ’ರು, ಸುದ್ದಿ ಬೀರುವ ಮಂದಿ ಹೀಗೆ ಇನ್ನೂ ಹಲವರು ಸಾಕಷ್ಟು ಹಣಮಾಡಿಕೊಂಡರು. ಅದರಲ್ಲಿ ಯಾರ್‍ಯಾರು ಎಷ್ಟೆಷ್ಟು ಹೊಡೆದುಕೊಂಡರು ಎಂಬುದನ್ನು ಸಂಜಯ ಉರುಫ್ ಇಮ್ಮಡಿ ವಿಶ್ವೇಶ್ವರಯ್ಯನೇ ಹೇಳಬೇಕು; ಯಾಕೆಂದರೆ ಹೊಡೆದುಕೊಳ್ಳುವ ಕಲೆಯ ಬಗ್ಗೆ ಈ ಸಂಜಯ ಚೆನ್ನಾಗಿ ವ್ಯಾಖ್ಯಾನಿಸಬಲ್ಲ.

ತನ್ನ ಹೊಟ್ಟೆಬಟ್ಟೆ ಕಟ್ಟಿ ಉಳಿಸಿದ ಹಣವನ್ನು ಸದ್ವಿನಿಯೋಗವಾಗಲೆಂದು ಸಮಾನ್ಯನೊಬ್ಬ ದಾನ ದೇಣಿಗೆಯಾಗಿ ನೀಡಿದರೆ ಅದು ಇಂತಹ ಕೆಟ್ಟ ಕೆಲಸಗಳಿಗೆ ವಿನಿಯೋಗವಾಗುತ್ತಿದೆ ಎಂಬುದನ್ನು ಕಂಡ ಈ ಸಮಾಜದ ಸದ್ಗುಣಿಗಳು, ಸ್ವಚ್ಛಗೊಳಿಸಬೇಕಾದ ಮಡಿವಾಳರು ಇನ್ನೂ ಮೊದಲಾದವರು ಶುದ್ಧೀಕರಣಕ್ಕೆ ಹೊಸ ಗೋಮಯ ತರುವ ಬದಲು ಹೋರಿಯ ಹಾರುವಿಕೆಯನ್ನೇ ಪರೋಕ್ಷವಾಗಿ ಬೆಂಬಲಿಸುತ್ತಿರುವುದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ.

ಮನೆ ಚೆನ್ನಾಗಿದ್ದರೆ ಸಾಲದು, ಚೆನ್ನಾಗಿರುವ ಮನೆಯೊಳಗೆ ಮಂಗ ನುಗ್ಗಿದರೆ ಶಾಂತಿ ಮಾಡಿಸಬೇಕಾಗುತ್ತದೆ; ಯಾಕೆಂದರೆ ಮಂಗ ಅಶಾಂತಿಯ ಸಂಕೇತ. ’ಮಂಗ ಹೊಕ್ಕ ಬಾಳೆ ತೋಟ’ ಎಂಬ ಗಾದೆ ಇದೆಯಲ್ಲ? ಪ್ರಬುದ್ಧ ಸಂಸ್ಥಾನವೆಂದು ಹೆಸರಾಗಿದ್ದೆಡೆ ಅಂತಹ ಖದೀಮ ಮಂಗವೊಂದು ಹೊಕ್ಕಿ ದಶಕಗಳೇ ಕಳೆದಿವೆ; ಅದು ಗೊತ್ತಾಗಿದ್ದೇ ತಡವಾಗಿ; ಮೊದಮೊದಲು ಗೊತ್ತಾಗಿದ್ದೂ ಕೆಲವರಿಗೆ ಮಾತ್ರ. ಇಂತಹ ಮಂಗವನ್ನು ಓಡಿಸುವ ಬದಲು ಅದು ಬೋಧಿಸುವ ’ಮರ್ಕಟ ಶಾಸ್ತ್ರ’ವನ್ನೇ ಧರ್ಮಶಾಸ್ತ್ರವೆಂದು ಜೈಕಾರ ಹಾಕುವ ಬಳಗಕ್ಕೆ ಏನೆನ್ನೋಣ?

ಮರ್ಕಟಸ್ಯ ಸುರಾಪಾನಂ ಮಧ್ಯೆ ವೃಶ್ಚಿಕ ದಂಶನಂ
ತನ್ಮಧ್ಯೆ ಭೂತ ಸಂಚಾರಂ ಯದ್ವತದ್ವಾ ಭವಿಷ್ಯತಿ

ಎಂಬ ಶ್ಲೋಕಕ್ಕೆ ಹೊಸ ಉದಾಹರಣೆಯ ಅಗತ್ಯವಿದೆಯೇ? ಈ ಲೋಕಕ್ಕೆ ಬಂದ ಮನುಷ್ಯನಿಗೆ ಪ್ರಾರಬ್ಧ ಕರ್ಮಗಳು ಲಾಗೂ ಆಗುವವಂತೆ. ಪ್ರಾರಬ್ಧ ಎಂದರೆ ಸಂಚಿತ ಯಾ ಪೂರ್ವಜನ್ಮಕೃತ ಕರ್ಮಫಲಗಳು ಎಂದು ಪ್ರಾಜ್ಞರು ಹೇಳುತ್ತಾರೆ. ಪ್ರಾಯಶಃ ಸಮಾಜಕ್ಕೂ ಒಂದು ವಿಧದ ಪ್ರಾರಬ್ಧ ಕರ್ಮ ಎಂದಿರುತ್ತದೆ. ಇಡೀ ಸಮಾಜವೇ ಅದರ ಹೊಣೆಹೊರಬೇಕಾಗಿ ಬರುತ್ತದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಅದಿಲ್ಲದಿದ್ದರೆ ಇಂದು ಈ ಸಮಾಜ ಅನುಭವಿಸುತ್ತಿರುವ ಆಸಹಾಯಕತೆ ಮತ್ತು ಅಪಮಾನಕ್ಕೆ ಇದೇ ಸಮಾಜದ ಕೆಲವು ಪಾಕಂಡಿಗಳು ಕಾರಣರಾಗಿದ್ದಾರೆ; ಕಣ್ಣಿದ್ದೂ ಕುರುಡರಾದ, ಕಿವಿಯಿದ್ದೂ ಕಿವುಡರಾದ, ಬಾಯಿದ್ದೂ ಮೂಕರಾದ ಸಮಾಜ ಬಾಂಧವರು ಕುರಿಗಳಾಗಿ ಇಚ್ಛಾಪ್ರಾರಬ್ಧವೆಂಬ ಚಪ್ಪಡಿಯನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ.

Thumari Ramachandra

source: https://www.facebook.com/groups/1499395003680065/permalink/1620341381585426/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s