ನಿಮ್ಮನೆ ಕೂಸಿಗೆ ಗಾಳಿ ಮೆಟ್ಟಿಕೊಂಡಿದೆ

ನಿಮ್ಮನೆ ಕೂಸಿಗೆ ಗಾಳಿ ಮೆಟ್ಟಿಕೊಂಡಿದೆ

“ನಾವು ಹೋದಲ್ಲೆಲ್ಲ ಸದಾ ನಮಗೆ ಜೈಕಾರ ಬೀಳಬೇಕು. ಜೈಕಾರಗಳು ಕಡಿಮೆಯಾದಲ್ಲಿ ಅಲ್ಲಿ ರಕ್ತ ಬೀಜಾಸುರರು ಜನಿಸಿದ್ದಾರೆಂದೇ ಅರ್ಥ. ರಕ್ತ ಬೀಜಾಸುರರ ಸಂತತಿ ಮೂಲದಲ್ಲಿ ಆರಂಭವಾಗಿದ್ದು ಫೇಸ್ ಬುಕ್ ನಿಂದ. ನಮ್ಮ ಬೋಳೇ ಶಂಕರ ಇದ್ದ ಹಾಗಿರುವ ಜ್ಯೂಕರ್ ತನ್ನ ಜಾಲತಾಣ ಬಳಕೆದಾರರಿಗೆ ವರವೊಂದನ್ನು ನೀಡಿಬಿಟ್ಟಿದ್ದಾನೆ;ಇದರಿಂದ ನಮ್ಮ ವಿರೋಧಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಹಿಂದೆ ಕುರಿಗಳಾಗಿದ್ದವರು ಇಂದು ಬಲಾಡ್ಯ ಹುಲಿಗಳಾಗಿ ನಮ್ಮ ವಿರುದ್ಧ ಘರ್ಜಿಸುತ್ತಿದ್ದಾರೆ. ಬೇನಾಮಿ ಹೆಸರುಗಳಲ್ಲಿ ಸಾವಿರಾರು ಅಕೌಂಟು ಕ್ರಿಯೇಟ್ ಮಾಡಿಕೊಂಡು ನಮ್ಮಮೇಲೆ ನುಗ್ಗಿ ಬರುತ್ತಿದ್ದಾರೆ. ನಿಶ್ಶಸ್ತ್ರಧಾರಿಯ ಮೇಲೆ ಯುದ್ಧ ಮಾಡಬಾರದೆನ್ನುತ್ತದೆ ಶಾಸ್ತ್ರ. ಅದರಲ್ಲೂ ನಾವು ಶಸ್ತ್ರಗಳನ್ನೆಲ್ಲ ಬಳಸಿ ಖಾಲಿ ಹೊಡೆದುಕೊಂಡ ಕಳ್ಳಸನ್ಯಾಸಿ, ಹೀಗಿದ್ದೂ ನಮ್ಮ ಮೇಲೆ ಯುದ್ಧಕ್ಕೆ ಬರುವುದು ರಣನೀತಿಯಲ್ಲ.

ಹಿಂದೆ ನಾವು ಹೋದಲ್ಲೆಲ್ಲ ’ಏಕಾಂತ ದರ್ಶನ’ಕ್ಕೆ ವ್ಯವಸ್ಥೆ ಮಾಡಿಕೊಂಡು ಒಳಗೆ ಸೇರಿಕೊಂಡು ಕೂಸು[ಹರೆಯದ ಹೆಣ್ಣುಮಕ್ಕಳು]ಗಳನ್ನು ಕರೆಸಿಕೊಳ್ಳುತ್ತಿದ್ದೆವು. ಕೂಸು ಒಳಗೆ ಬರುತ್ತಿದ್ದಂತೆ ಅವಳಿಗೆ ’ವಿಶ್ವರೂಪ’ವನ್ನು ನೋಡಲು ’ದಿವ್ಯಚಕ್ಷು’ಗಳನ್ನು ಕರುಣಿಸುತ್ತಿದ್ದೆವು. ಗುರುವೆಂಬ ಭಯದಿಂದ, ಗಬ್ಬುನಾತ ಹೊಡೆಯುವ ನಮ್ಮ ಬಾಯಿಗೆ ಬಾಯೊಡ್ಡಿ ನಮ್ಮ ಆಟಕ್ಕೆ ಸಹಕರಿಸುವ ಕೂಸಿನ ಕತೆ ಮುಂದಿನ ಹಂತಕ್ಕೆ ಹೋಗುತ್ತಿತ್ತು.

ಕೊಸರಾಡಿಕೊಂಡು ಜಗಳಮಾಡುತ್ತಲೇ ಕೋಣೆಯಿಂದ ಹೊರಗೆ ಹೋಗುವ ಕೂಸು ನಮ್ಮ ವಿರುದ್ಧ ಪಾಲಕರಲ್ಲಿ ಹೇಳಬಹುದಲ್ಲ? ಆ ಕಾರಣಕ್ಕಾಗಿ ನಾವೇ ಮೊದಲಾಗಿ [ಕೊಲೆಗಡುಕನೇ ಪೋಲೀಸ್ ಕಂಪ್ಲೇಂಟ್ ಕೊಟ್ಟಂತೆ] ಅವಳ ಪಾಲಕರಿಗೆ ಹೀಗೆ ಹೇಳುತ್ತಿದ್ದೆವು,”ನಿಮ್ಮ ಕೂಸಿಗೆ ಯಾವುದೋ ಗಾಳಿ ಮೆಟ್ಟಿಕೊಂಡಿದೆ. ಚಿಕಿತ್ಸಕರಿಂದ ದೈವಿಕ ಚಿಕಿತ್ಸೆ ನಡೆಸಿ ಪರಿಹರಿಸಿಕೊಳ್ಳಿ.” ನಮ್ಮ ಮಾತನ್ನು ಕೇಳಿದ ಕೂಸಿನ ಪಾಲಕರು ಹಳ್ಳ ಬೀಳುತ್ತಿದ್ದರು; ತಮ್ಮ ಮಗಳಲ್ಲಿ ಯಾವುದೋ ಭೂತವೋ ಪ್ರೇತವೋ ಸೇರಿಕೊಂಡಿದೆ ಎಂಬಂತೆ ಭಾವಿಸುತ್ತಿದ್ದರು. ತಿಂಗಳುಗಟ್ಟಲೆ ಅವಳ ಪಾಡು ನರಕಸದೃಶವಾಗುತ್ತಿತ್ತು.

ಒಮ್ಮೆ ಒಂದು ಮನೆಗೆ ಹೋದಾಗ ಅವರ ಮನೆಯ ಪ್ರಾಯದ ಕೂಸು ನಮ್ಮ ಕಣ್ಣಿಗೆ ಬೀಳಲಿಲ್ಲ. ನಂತರ ನಾವು ಹೊರಡುವಾಗ ಗೊತ್ತಾದದ್ದು ಅವಳು ರಜಸ್ವಲೆಯಾಗಿದ್ದು ಕೋಣೆಯಲ್ಲಿದ್ದಾಳೆ ಎಂಬುದು. ನಾವು ಹೊರಡುವ ಮುನ್ನ ಆ ಕೋಣೆಯ ವರೆಗೂ ಹೋಗಿ “ನಿನ್ನನ್ನು ನೋಡಲು ಇನ್ನೊಮ್ಮೆ ಬರುತ್ತೇವೆ” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ದಾಖಲೆ ಮಾಡಿದೆವು. ಆ ಕೂಸು ನಮ್ಮನ್ನು ಬೈದುಕೊಂಡಿತು ಎಂಬುದು ಬೇರೆ ಪ್ರಶ್ನೆ.

ನಮ್ಮ ಟ್ರಿಕ್ಕುಗಳು ಅರ್ಥವಾಗುವ ಮೊದಲು ’ಮಹಾಸಂಸ್ಥಾನ’ದವರ ಜೊತೆಗೆ ನಿಂತುಕೊಂಡು ಫೋಟೊ ತೆಗೆಸಿಕೊಳ್ಳುವುದು ಒಂದು ಕ್ರೇಜ್ ಆಗಿತ್ತು. ಜೊತೆಗೆ “ಸಂಸ್ಥಾನ ನಮ್ಮೊಂದಿಗೆ ಫೋನ್‍ನಲ್ಲಿ ಗಂಟೆಗಟ್ಟಲೆ ಮಾತನಾಡುತ್ತಾರೆ” ಎಂದು ಇತರ ಭಕ್ತ ಕುರಿಗಳಲ್ಲಿ ಹೇಳಿಕೊಳ್ಳುವುದು ಒಂದು ಪ್ರೆಷ್ಟೀಜ್ ರೀತಿ ಆಗಿತ್ತು. ಸಾಮಾನ್ಯರಿಗೆ ಸೋ ಕಾಲ್ಡ್ ಮಂತ್ರಾಕ್ಷತೆ ನೀಡಲೂ ಸಿಗದ ಮಹಾಲಪಂಗರೆನಿಸಿದ ನಾವು ಹುಡುಗಿಯರ ಜೊತೆಗೆ ಮಾತ್ರ ದೂರವಾಣಿಯಲ್ಲಿ ಗಂಟೆಗಟ್ಟಲೆ ಹರಟುತ್ತಿದ್ದುದು ನಿಜ.

ಹುಡುಗಿಯರ ಜೊತೆಗೆ ನಾವೇನು ಮಾತನಾಡುತ್ತಿದ್ದೇವೆ ಎಂಬುದು ಭಕ್ತ ಕುರಿಗಳಿಗೆ ಗೊತ್ತಾಗುವುದಿರಲಿ ನಮ್ಮ ಗಿಂಡಿಗಳಿಗೇ ತಿಳಿಯುತ್ತಿರಲಿಲ್ಲ. ಅತ್ಯಂತ ಖಾಸಗಿ ಅಂಗಾಂಗಗಳ ವರೆಗಿನ ವಿಷಯಗಳನ್ನೂ ನಾವು ಮಾತನಾಡಿ ಖುಷಿಪಟ್ಟಿದ್ದೇವೆ. ಪ್ರತಿ ಕೂಸಿನ ಜೊತೆಗೆ ಮಾತನಾಡಲು ಆರಂಭಿಸಿದಾಗ ಸ್ವಲ್ಪ ಸ್ವಲ್ಪವೇ ಸಲುಗೆ ತೆಗೆದುಕೊಳ್ಳುತ್ತ ನಂತರ ಏಕಾಂತಕ್ಕೆ ಕರೆಯುತ್ತಿದ್ದೆವು.

ನೀವು ಯಾವುದೇ ವೀಡಿಯೋ ನೋಡಿದರೂ ಅದರಲ್ಲಿ ಹಾವಾಡಿಗ ಮಹಾಸಂಸ್ಥಾನದವರು ಅಂದರೆ ನಾವು ಅಲ್ಲಾಡಿಸುತ್ತ ತೊನೆಯುತ್ತ ಬರುವುದನ್ನು ಕಾಣಬಹುದು. ತೊನೆಯುವುದು ನಮ್ಮ ಜನ್ಮ ಸಿದ್ಧ ಹಕ್ಕು. ಮಹಿಳಾ ಸಬಲೀಕರಣದಲ್ಲಿ ಸಭೆಗಳಲ್ಲೇ ನಾವು ತೊನೆಯುತ್ತ ಹಲವು ಸುಂದರ ಮಹಿಳೆಯರ ಮೈಗೆ ಮೈ ಸೋಕಿಸಿದ್ದಿದೆ. ನಿಜವಾದ ಸನ್ಯಾಸಿಯಾದರೆ ಸಪ್ತಚಕ್ರಗಳನ್ನು ಸಮತೋಲನದಲ್ಲಿರಿಸಿಕೊಳ್ಳುವ ಸಲುವಾಗಿ ತೊನೆಯುವುದು ನಿಷಿದ್ಧವಾಗಿದೆ. ಮನುಷ್ಯ ಸಹಜವಾಗಿ ಎಲ್ಲೋ ಗಂಟೆಗೊಮ್ಮೆ ಅಲ್ಲಾಡಬಹುದು; ಆದರೆ ತೊನೆಯುವಂತಿಲ್ಲ. ಕಳ್ಳಸನ್ಯಾಸಿಯಾದ ನಮಗೆ ಈ ಕಾನೂನು ಅಪ್ಲೈ ಆಗುವುದಿಲ್ಲ.

ನಮ್ಮ ಕಳ್ಳಸನ್ಯಾಸದ ಸಕಲ ’ಸಲ್ಲಕ್ಷಣ’ಗಳನ್ನೂ ಮೆಂದೆಯಿಂದ ತಪ್ಪಿಸಿಕೊಂಡು ಮನುಷ್ಯರಾದವರು ಕಂಡು ಹಿಡಿದುಬಿಟ್ಟರು. ನಮ್ಮ ನಡಾವಳಿಗಳನ್ನೆಲ್ಲ ದಾಖಲಿಸಿ ದೂರು ದಾರರಿಗೆ ಬೆಂಬಲ ನೀಡಿದರು. ಅದಕ್ಕೆ ಅವರನ್ನೆಲ್ಲ ನಾವು “ರಕ್ತಬೀಜಾಸುರರು” ಎಂದು ಕರೆಯುತ್ತೇವೆ.

ನಮ್ಮ ಕೋಪತಾಪಗಳ ಅಟಾಟೋಪ ನಿಮಗೆ ತಿಳಿದಿಲ್ಲ. ಆ ಹಾಳು ತುಮರಿ ಕೆಲವೊಂದಷ್ಟು ಸಂಗತಿಗಳನ್ನು ಈ ಮೊದಲೇ ಹೇಳಿದ್ದಾನೆ. ಕೋಪ ಬಂದಾಗ ನಾವು ಮನುಷ್ಯರೇ ಅಲ್ಲ ಸಾರಿ….ಸಾರಿ…… ದೇವರೇ ಅಲ್ಲ. ಕೋಪದಲ್ಲಿ ಕೆಲವು ಗಿಂಡಿಗಳು ನಮ್ಮಿಂದ ಚೆನ್ನಾಗಿ ತಿಂದಿದ್ದಾರೆ. ಕೆನ್ನೆ, ತಲೆ, ಬೆನ್ನು ಎಲ್ಲೆಂದರಲ್ಲಿ ನಾವು ಜಪ್ಪುತ್ತೇವೆ. ಹಾವು ಬಿಡುವುದಕ್ಕೆ ಸಹಕರಿಸಿದ ಕೂಸುಗಳಿಗೆ ಮತ್ತು ಮಹಿಳೆಯರಿಗೂ ನಾವು ಚೆನ್ನಾಗಿ ಜಪ್ಪಿದ್ದೇವೆ.

ನಮ್ಮ ಕೋಪದ ಅಟಾಟೋಪಗಳನ್ನು ವಿಡೀಯೋ ಮಾಡುವವನು ಬದುಕಿರಲಾರ; ಹಾಗಾಗಿಯೇ ಹೆದರಿಕೊಂಡು ನಾವು ಕೋಪಗೊಂಡಾಗ ಯಾರೂ ಫೋಟೋ ಸಹ ತೆಗೆಯೋದಿಲ್ಲ. ವೀಡಿಯೋ ಮತ್ತು ಫೋಟೋಗಳಿಗೆ ಪೋಸ್ ಕೊಡುವಾಗ ನಾವು ನಡೆದುಕೊಳ್ಳುವ ರೀತಿಯೇ ಬೇರೆ. ’ಗೋಮುಖ ವ್ಯಾಘ್ರ’ ಎಂಬುದಕ್ಕೆ ನಾವೇ ಸಾಕ್ಷಾತ್ ಉದಾಹರಣೆ. ದೂರದಿಂದ ಫೋಟೋ ಮತ್ತು ವೀಡಿಯೋಗಳಲ್ಲಿ ನಮ್ಮನ್ನು ನೋಡಿದವರು ನಮ್ಮ ಕಪಟ ಮಂದಹಾಸಕ್ಕೆ ಮಳ್ಳುಬೀಳುತ್ತಾರೆ. ಕಳ್ಳಸನ್ಯಾಸಿಯಾದ ನಮ್ಮ ನಯವಂಚನೆ ಅವರಿಗೆ ತಿಳಿಯುವ ಮೊದಲೇ ಅವರಿಂದೇನು ಪ್ರಯೋಜನ ಪಡೆದುಕೊಳ್ಳಬೇಕೋ ಅದನ್ನು ಪಡೆದಾಗಿರುತ್ತದೆ.”

Thumari Ramachandra

source: https://www.facebook.com/groups/1499395003680065/permalink/1619679624984935/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s