ಮಣಿಮಂತ್ರ ತಂತ್ರಸಿದ್ಧಿಗಳ ಸಾಕ್ಷಗಳೇಕೆ?

ಮಣಿಮಂತ್ರ ತಂತ್ರಸಿದ್ಧಿಗಳ ಸಾಕ್ಷಗಳೇಕೆ?

“ನಮಗೆ ದಕ್ಕುವವರೋ ಅಲ್ಲವೋ ಈ ಹೆಣ್ಣುಮಕ್ಕಳು ಎಂದು ಮೊದಲ ನೋಟದಲ್ಲೇ ನಿರ್ಧರಿಸುವುದರಲ್ಲಿ ನಾವು ಪರಿಣತರು. ಸಾಮಾನ್ಯವಾಗಿ ಹೆಣ್ಣುಮಕ್ಕಳು ಬಹಳ ಹೊತ್ತು ಕಣ್ಣಿಗೆ ಕಣ್ಣು ಕೊಟ್ಟು ನೋಡುವ ರಿವಾಜಿನವರಲ್ಲ. ತಾವು ಚೆನ್ನಾಗಿ ಕಾಣಿಸಬೇಕೆಂಬ ಬಯಕೆಯಿಂದ ಚೂಡಿದಾರ ಹಾಕಿಕೊಂಡರೂ ಯಾರದೋ ದೃಷ್ಟಿ ಎದೆಭಾಗದ ಮೇಲೆ ಜಾಸ್ತಿ ಹೊತ್ತು ನಿಂತರೆ ತಟ್ಟನೆ ಗುರುತಿಸಿ ವೇಲ್ ಎಳೆದುಕೊಳ್ಳುವಷ್ಟು ಮರ್ಯಾದೆ ಉಳ್ಳವರು.

ನಮ್ಮಲ್ಲಿಗೆ ಬಂದಾಗ ನಮ್ಮ ಕಣ್ಣಿಗೆ ಒಮ್ಮೆ ಕಣ್ಣು ಕೀಲಿಸಿದಾಗ ಲೇಸರ್ ಬೀಮ್ ರೀತಿಯಲ್ಲಿ ನಾವು ನೀಡುವ ಸ್ಪೆಶಲ್ ಇಫೆಕ್ಟ್ ನಿಂದ ಮತ್ತೆ ನಮ್ಮನ್ನು ಹೆಚ್ಚಿಗೆ ನೋಡಲಾರದೆ ತಲೆ ತಗ್ಗಿಸುತ್ತಾರೆ. ಮುಚ್ಚಿಕೊಳ್ಳುವುದನ್ನೂ ಮರೆತುಬಿಡುತ್ತಾರೆ. ಹಲಸಿನಕಾಯಿಯ ಮೈಮೇಲಿನ ಮುಳ್ಳು ಲೆಕ್ಕಮಾಡಿದಂತೆ,ನಮ್ಮಲ್ಲಿಗೆ ಒಮ್ಮೆ ಬಂದವರ ಒಳ ಹೊರಗಿನ ಆದ್ಯಂತ ವಿಚಾರಗಳನ್ನು ನಾವು ಲೆಕ್ಕಮಾಡಿ ಮನದಲ್ಲಿ ಧಾರಣೆ ಮಾಡುತ್ತೇವೆ.

ಯಾವ ಹುಡುಗಿ ಅಥವಾ ಹೆಂಗಸು ಏನನ್ನು ಹೇಳಿಕೊಳ್ಳಲು ಬಯಸುತ್ತಾಳೆ? ಅವಳ ಮನೆಯ ಪರಿಸರ ಹೇಗಿದೆ?ಅವಳ ಮನೆಯವರನ್ನು ಒಲಿಸಿಕೊಳ್ಳುವುದು ಹೇಗೆ?ಅವರ ಬೋಳಿಗೆ ಎಣ್ಣೆ ಹಚ್ಚಿದ ನಂತರ ಅವರಿಗೆ ಸಂಬಂಧಿಸಿದ ಆ ಹೆಣ್ಣನ್ನು ಪದೇ ಪದೇ ನಮ್ಮಲ್ಲಿಗೆ ಬರುವಂತೆ ಮಾಡಿಕೊಳ್ಳುವುದು ಹೇಗೆ? ಎಂಬುದಕ್ಕೆ ನಾವೇ ಒಂದು ವಿಶ್ವಕೋಶ..!

ನಮ್ಮಲ್ಲಿಗೆ ಬಂದ ಹುಡುಗಿ ಅಥವಾ ಮಹಿಳೆಯ ವಯಸ್ಸು,ಬುದ್ಧಿಮತ್ತೆ,ಧೈರ್ಯ,ಆಧ್ಯಾತ್ಮದಲ್ಲಿ ಆವಳಿಗಿರುವ ಆಸಕ್ತಿ,ನಮ್ಮ ಮೇಲೆ ಅವಳಿಗಿರುವ ಭಕ್ತಿಯ ಪರ್ಸಂಟೇಜ್,ನಂಬಿಕೆಯ ಲೆವೆಲ್ಲು,ನಮ್ಮ ಮಾತನ್ನು ಅಲ್ಲಗಳೆಯಲಾರದ ಸಾಧ್ಯತೆ ಎಲ್ಲವನ್ನೂ ನಾವು ಕರಾರುವಾಕ್ಕಾಗಿ ಲೆಕ್ಕ ಹಾಕಿಕೊಳ್ಳುತ್ತೇವೆ.

ಹುಲಿ ಸಿಂಹಗಳು ಬಲಿಪಡೆಯುವಾಗ ಪಾಪದ ಮಿಕಗಳ ಕುತ್ತಿಗೆಯ ಶ್ವಾಸನಾಳವನ್ನೇ ಕಚ್ಚಿಹಿಡಿದು ಕೊಲ್ಲುತ್ತವಷ್ಟೆ? ನಾವೂ ಸಹ ಅದೇ ರೀತಿಯಲ್ಲಿ ಹುಡುಗಿಯ ಅಥವಾ ಹೆಂಗಸಿನ ದೌರ್ಬಲ್ಯದ ನರವನ್ನು ಪತ್ತೆ ಹಚ್ಚಿ ಅದನ್ನೇ ಹಿಡಿಯುತ್ತೇವೆ.

ಆದರೂ ಕೆಲವೊಮ್ಮೆ ನಮ್ಮಲ್ಲಿಗೆ ಏಕಾಂತಕ್ಕೆ ಪ್ರಥಮವಾಗಿ ಬರುವ ಕೆಲವು ಹೆಣ್ಣುಮಕ್ಕಳು ಮೈಮುಟ್ಟಿದ್ದನ್ನು ಹೊರಗೆ ತಮ್ಮ ಸ್ನೇಹಿತೆಯರಲ್ಲಿ ಹೇಳಿಕೊಂಡುಬಿಟ್ಟಿದ್ದಾರೆ.”ಎಲ್ಲೆಲ್ಲೆಲ್ಲ ಕೈ ಹಾಕುತ್ತಾರೆ. ನಿನಗೂ ಹಾಗೇ ಮಾಡ್ತಾರಾ?” ಎಂದು ಕೇಳಿದವರಿದ್ದಾರೆ;ನಂತರ ಅವರು ನಮ್ಮಲ್ಲಿಗೆ ಬರದೇ ತಪ್ಪಿಸಿಕೊಂಡ ಬಗ್ಗೆ ನಮಗೆ ಬೇಸರವಿದೆ.

“ನೀನು ಉದ್ದ ಲಂಗ ಹಾಕಿಕೊಂಡು ಬರ್ತೀಯಲ್ಲ ನಾನೂ ನಿನ್ನ ಹಾಗೆ ಉದ್ದ ಲಂಗ ಹಾಕಿಕೊಂಡರೆ ಅವರಿಗೆ ಇಷ್ಟವಾಗಬಹುದೇನೋ,ಅಲ್ವೇನೇ?” ಎಂದು ಕೇಳಿದ ಹದಿಹರೆಯದ ಮುಗ್ಧೆಯರೂ ಇದ್ದಾರೆ. ಇನ್ನೂ ಹದಿಹರೆಯಕ್ಕೆ ಕಾಲಿರಿಸಿದ ಹುಡುಗಿಯರಿಗೆ ಮೊದಲ ದರ್ಶನದಲ್ಲೇ ನಾವು ಎಲ್ಲವನ್ನೂ ಮುಗಿಸಿಬಿಡುತ್ತೇವೆ; ಅಂತವರು ಮರಳಿ ಮರಳಿ ನಮ್ಮಲ್ಲಿಗೆ ಬರುವುದಕ್ಕೆ ಆರಂಭಿಸಿಬಿಡುತ್ತಾರೆ.

ಶಂಕರಾಚಾರ್ಯರ ಕೃತಿಯೊಂದರ ಬಗೆಗೆ ವಿವರಿಸುವಂತೆ ಕೇಳಿದ ಹುಡುಗಿಯ ಕೈಲಿದ್ದ ಶಂಕರರ ಪುಸ್ತಕವನ್ನು ಕಿತ್ತೆಸೆದು ಅವಳಿಗೆ ಚೆನ್ನಾಗಿ ಬೈದು,”ನೀನು ಬರುವುದು ನಮ್ಮ ದರ್ಶನಕ್ಕೋ ಅಥವಾ ಶಂಕರರ ಕೃತಿಯ ಬಗ್ಗೆ ಕೇಳಲೋ?” ಎಂದು ಗದರಿಸಿದ್ದೆವು.

ಯಾವುದೋ ಶಂಕರಾಚಾರ್ಯರು ಕೃತಿಗಳನ್ನು ಬರೆದರಂತೆ. ಅವರ ಹೆಸರಿನಲ್ಲಿ ನಾವು ಬದುಕಿತ್ತಿದ್ದೇವೆ ಬಿಟ್ಟರೆ ಅವರ ಕೃತಿಗಳಿಂದ ನಮಗೇನು ಪ್ರಯೋಜನ? ಹಾಂ…ಎಲ್ಲೋ ಕೆಲವು ಕ್ಷುಲ್ಲಕ ಪ್ರಯೋಜನವಿದೆ ಬಿಡಿ. ಉದಾಹರಣೆಗೆ ಸೌಂದರ್ಯ ಲಹರಿಯ ೧೯ನೇ ಮತ್ತು ೮ನೇ ಶ್ಲೋಕಗಳು. ನಮಗೆ ಚಿತ್ರವಿಚಿತ್ರ ಕತೆಗಳನ್ನು ಕಟ್ಟಿಕೊಂಡು ಬದುಕಿಕೊಳ್ಳಲು ಎಷ್ಟು ಬೇಕೋ ಅಷ್ಟರಮಟ್ಟಿಗೆ ಮಾತ್ರ ನಾವು ಅವರ ಹೆಸರನ್ನು ಬಳಸಿಕೊಂಡು ಅವರ ಹೆಸರಿಗೂ ಕಳಂಕ ತರುವುದಕ್ಕೆ ಮುಂದಾಗಿದ್ದೇವೆ.

ಕಾಲ್ನಡಿಗೆಯಲ್ಲಿ ತಿರುಪತಿ ಬೆಟ್ಟಹತ್ತಿ ಶ್ರೀನಿವಾಸನ ದರ್ಶನ ಪಡೆದ ಶ್ರದ್ಧಾಳುಗಳಿಗೆ ಸಾಕ್ಷಾತ್ ವೈಕುಂಠವನ್ನೆ ಕಂಡಂತಾಗುತ್ತದೆ. ಅದೇ ರೀತಿಯಲ್ಲಿ ಪರಮ ಭಕ್ತಿ ಶ್ರದ್ಧೆಯನ್ನು ತುಂಬಿಕೊಂಡು ನಮ್ಮಲ್ಲಿಗೆ ಬರುವ ಹುಡುಗಿಯರು ಅಥವಾ ಹೆಂಗಸರಿಗೂ ಸಹ ಅವರ ಉತ್ಕೃಷ್ಟ ಭಾವನೆ ಅವರ ಮನಸ್ಸಿನಲ್ಲಿ ಅಂತದೇ ಕೆಲಸವನ್ನು ಮಾಡುತ್ತದೆ. ಈ ಕೀ ಪಾಯಿಂಟ್ ತಿಳಿದುಕೊಂಡ ನಾವು ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿದ್ದೇವೆ.

“ಮಹಾಸಂಸ್ಥಾನದವರು ನಮ್ಮನ್ನೆಲ್ಲ ಎಲ್ಲಿ ಮಾತನಾಡಿಸ್ತಾರೆ” ಎಂಬ ಸ್ವಗತದಲ್ಲಿ ಬರುವ ಕೆಲವು ಹೆಣ್ಣುಮಕ್ಕಳನ್ನು ನಮ್ಮ ಸಹಜ ಕಾಮೋತ್ಕಟತೆಯಿಂದ ಕುರಿಗಳ ಸಭೆಯಲ್ಲೇ ಅಪ್ಪಿಕೊಳ್ಳಲೂ ನಮಗೆ ಬೇಸರವಿಲ್ಲ. ನಂತರ ಅವರು ನಮ್ಮ ’ಸೇವೆ’ಯನ್ನು ಸದಾ ನಡೆಸಲು ಒಪ್ಪಿದರೆ,ನಮ್ಮ ವಿರುದ್ಧ ಬರೆಯುವ ಪೀತ ಪತ್ರಿಕೆಯೊಂದರ ಯಜಮಾನನ ಖಾಸಗೀ ದರ್ಬಾರ್‌ನಂತೆ ನಾವೂ ’ಡಿಎನ್‍ಡಿ’ ಬೋರ್ಡ್ ಹಾಕಿಕೊಂಡು ದಿನವೂ ವಿಶ್ವರೂಪ ದರ್ಶನ ನಡೆಸಲು ಶುರುವಿಟ್ಟುಕೊಳ್ಳುತ್ತೇವೆ.

ಅಂತಹ ಸೇವೆಗೆ ನಿಂತವರು ನಮ್ಮ ಹಾವಾಡಿಗ ಸಂಸ್ಥಾನದ ಸಕ್ರಿಯ ಕಾರ್ಯಕರ್ತೆಯೆನಿಸುತ್ತಾರೆ. ಸರ್ಪಾಸ್ತ್ರ ಪ್ರಯೋಗ ಎಂಬ ಮಹಾಂದೋಲನದಲ್ಲಿ ಅವರು ಸಕ್ರಿಯ ಸದಸ್ಯರಾಗಿರುತ್ತಾರೆ. ಅವರ ಆಗುಹೋಗುಗಳನ್ನು ವಿಚಾರಿಸಿಕೊಳ್ಳುವ ನಾವು ನಮ್ಮ ತೆವಲಿಗೆ ಸಹಕರಿಸುತ್ತಿರುವುದಕ್ಕೆ ’ಸುವರ್ಣ ಮಂತ್ರಾಕ್ಷತೆ’ನೀಡಿ, ಅವರಿಗೆ ಮನೆಮಠಗಳನ್ನು ನಿರ್ಮಿಸಿಕೊಡುತ್ತೇವೆ. ಓದುತ್ತಿದ್ದರೆ ಮುಂದಕ್ಕೆ ಓದಿಸುತ್ತೇವೆ. ಗಂಡ ಮಾಡಬಹುದಾದ ಕೆಲಸವನ್ನೆಲ್ಲ ನಾವೇ ಮಾಡುತ್ತಿರುತ್ತೇವೆ.

’ಶಂಕರ್ ಗುರು’ಚಲನ ಚಿತ್ರದಲ್ಲಿ ರಾಜ್ ಕುಮಾರ್ ದ್ವಿಪಾತ್ರದಲ್ಲಿ ನಟಿಸಿದಂತೆ, ಏಕಾಂತದಲ್ಲಿ ಗಂಡನಾಗಿ ಲೋಕಾಂತದಲ್ಲಿ ಗುರುವಾಗುವ ನಮ್ಮದೂ ಸಹ ದ್ವಿಪಾತ್ರ. ನಮ್ಮ ಮೇಲೆ ಯಾರೂ ಡೌಟು ಪಡಬಾರದೆಂದು ಅಂತಹ ಹುಡುಗಿಯರಿಗೆ ನಾಮಕೇವಾಸ್ಥೆಗೆ ನಮ್ಮ ಗಿಂಡಿ ಪರಿವಾರದಲ್ಲಿ ಒಬ್ಬನನ್ನು ’ಗಂಡ’ ಎಂದು ಕಟ್ಟುತ್ತೇವೆ.

ನಮ್ಮ ಸ್ತ್ರೀಕರಾರ್ಚಿತ ಸರ್ಪಾಸ್ತ್ರದ ಪ್ರಾಯೋಜಕರಲ್ಲಿ ಕೆಲವರು ಮೊದಲ ಭೇಟಿಯಲ್ಲೇ ಜೀವನದ ದಿಕ್ಕನ್ನೇ ಬದಲಾಯಿಸಿದ ಖುಷಿ ತಮಗೆ ಎಂದು ಹೇಳಿಕೊಂಡಿದ್ದಾರೆ. ಕುಲಪತಿ ಬಾವಯ್ಯನವರು ಕಂಠಬಿಗಿದುಕೊಂಡು “ಮಹಾಸಂಸ್ಥಾನದವರು….ಮಹಾಸಂಸ್ಥಾನದವರು” ಎಂದು ಒದರುವ ರೀತಿಯಲ್ಲಿ,ಅವರೇ ಖುದ್ದಾಗಿ ಕನ್ನಡ ನಿಘಂಟಿನಲ್ಲಿರುವ ಅತ್ಯಂತ ಅರ್ಥಗರ್ಭಿತ ಪದಗಳನ್ನೆಲ್ಲ ಹುಡುಕಿ ಕೋಷ್ಟಕ ಬರೆದಂತೆ ತಮ್ಮ ಕೈಯಾರೆ ಬರೆದುಕೊಟ್ಟ ಬರೆಹಗಳ ಮೂಲಕ ಅಂತವರು ನಮ್ಮನ್ನು ಆರಾಧಿಸುತ್ತಾರೆ. ಇದು ಪಳಗಿದ ಆನೆಯಿಂದ ನೂತನ ಕಾಡಾನೆಯನ್ನು ಹಿಡಿದು ಪಳಗಿಸುವ ತಂತ್ರದಂತೆ ಕೆಲಸಮಾಡುತ್ತದೆ.

ನಮ್ಮೊಡನಿದ್ದು “ಪರಮಾತ್ಮನ ತದ್ರೂಪ”ದ ಸಾಕ್ಷಾತ್ಕಾರ ಪಡೆದ ಹೆಣ್ಣುಮಕ್ಕಳು ಮತ್ತು ಹೆಂಗಸರ ಸಂಖ್ಯೆ ನೂರಕ್ಕೂ ಅಧಿಕವಾಗಿದೆ. ದೊಡ್ಡದೊಂದು ಭವನ ನಿರ್ಮಿಸಿ, ಅಲ್ಲಿ ನೂರಾರು ಕೋಣೆಗಳನ್ನು ಇರಿಸಿ,ಪ್ರತಿ ಕೋಣೆಯಲ್ಲೂ ಇಂತಹ ಸುಂದರಿಯರೋರ್ವಳಿಗೆ ವಸತಿ ವ್ಯವಸ್ಥೆ ಕಲ್ಪಿಸಿ,ನಿತ್ಯವೂ ಶಕ್ತ್ಯಾನುಸಾರ ದರ್ಶನವನ್ನು ನೀಡುವ ವೀರ್ಯಸಿಂಹಾಸನವನ್ನು ಮುನ್ನಡೆಸಬೇಕೆಂದು ನಮ್ಮ ದೀರ್ಘಾಲೋಚನೆಯಿತ್ತು.

ಲೋಕದಲ್ಲಿರದ ಚಿತ್ರ ವಿಚಿತ್ರ ಯೋಜನೆಗಳ ಮೂಲಕ ಎತ್ತುವಳಿ ಮಾಡುವುದನ್ನು ನಾವು ಮತ್ತು ನಮ್ಮ ಬಾವಯ್ಯ ಬಹಳ ಚೆನ್ನಾಗಿ ಬಲ್ಲೆವು.ಇಲ್ಲಿಯವರೆಗೆ ಸಾವಿರ ಹೋದರೆ ಲಕ್ಷ ಬಾಚಿಕೊಳ್ಳುವ ಮೋಡಿಮಾಡುತ್ತ ಬಂದಿದ್ದೆವು; ಈಗೀಗ ನೂರು ಖರ್ಚಾದರೂ ಹತ್ತು ರೂಪಾಯಿ ಹುಟ್ಟುವುದು ಕಷ್ಟವಾಗುತ್ತಿದೆ.

ಮಣಿಮಂತ್ರತಂತ್ರಸಿದ್ಧಿಗಳ ಸಾಕ್ಷಗಳೇಕೆ
ಮನಗಾಣಿಸಲು ನಿನಗೆ ದೈವದದ್ಭುತವ?
ಮನಜರೊಳಗಾಗ ತೋರ್‍ಪ ಮಹನೀಯಗುಣ
ವನುವಾದ ಬೊಮ್ಮನದು- ಮಂಕುತಿಮ್ಮ

ಎಂದು ನಮ್ಮ ಸಖಿಯರಿಗೆ ನಾವು ಹೇಳಿದ್ದೇವೆ. ಹಾಗಂತ ಮಣಿ ಮಂತ್ರ ತಂತ್ರ ಸಿದ್ಧಿಗಳನ್ನು ನಾವು ಬಳಸುವುದಿಲ್ಲವೆಂದಲ್ಲ;ನಮ್ಮ ವಿರೋಧಿಗಳನ್ನು ಹಣಿಯಲು ನಾವು ಬಳಸದೇ ಬಿಟ್ಟ ಮಾಟ ಮಂತ್ರ ತಂತ್ರಗಳು ಯಾವುದೂ ಇಲ್ಲ.

ಏಕಾಂತದಲ್ಲಿ ನಾವು ಬಳಸುವ ಪದಗಳನ್ನೆಲ್ಲ ನಿಮಗೆ ಹೇಳಿದರೆ ಅವುಗಳ ’ಪವರ್’ ಕಡಿಮೆಯಾಗಿಬಿಡುತ್ತದೆ;ಹಾಗಾಗಿ ಹೇಳೋದಿಲ್ಲ. ಮೇಲಾಗಿ ’ಉಪದೇಶ’ ಪಡೆದವರು ಮಾತ್ರ ಅಂತಹ ಪದಗಳನ್ನು ಕೇಳಲು ಅರ್ಹರಾಗಿರುತ್ತಾರೆ. ”

Thumari Ramachandra

source: https://www.facebook.com/groups/1499395003680065/permalink/1614396582179906/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s