ಹಾವು ಸಾಯುವಂತಿಲ್ಲ ಕೋಲು ಮುರಿಯುವಂತಿಲ್ಲ ಆದರೆ ಹಾವಿಗೆ ನೋವಾಗಬೇಕು

ಹಾವು ಸಾಯುವಂತಿಲ್ಲ ಕೋಲು ಮುರಿಯುವಂತಿಲ್ಲ ಆದರೆ ಹಾವಿಗೆ ನೋವಾಗಬೇಕು

ಆಂಗ್ಲ ಹೇಳಿಕೆಯೊಂದು ಹೀಗಿದೆ. You can convince a dullard & you can convince a knowledgeable, but you can’t convince a foolish. ಇದು ನಮ್ಮ ಸಮಾಜವನ್ನೇ ಅವಲೋಕಿಸಿ ಹೇಳಿದ್ದು ಎಂದರೆ ತಪ್ಪಾಗಲಾರದೇನೋ.

ಇಡೀ ಸಮಾಜದಲ್ಲಿ ಹಲವರಿಗೆ ಅರ್ಥವಾದ ವಿಷಯ ಕೆಲವರಿಗೆ ಅರ್ಥವಾಗುತ್ತಿಲ್ಲವೇಕೆಂದರೆ ಅವರು ಮೂರ್ಖರು ಮತ್ತು ಮೂಢರು. ಮೊಲ ಹಾರುತ್ತಿದ್ದಾಗ ಮೂರೇ ಕಾಲನ್ನು ಕಂಡು “ಮೊಲಕ್ಕೆ ಮೂರೇ ಕಾಲು” ಎಂದವರು.

ಹಳ್ಳಿಯೊಂದರ ಹವ್ಯಕ ಹೈದನೊಬ್ಬ ಕಾಡಂಚಿನ ಊರೊಂದರಲ್ಲಿ ಹೊಸದಾಗಿ ಜಮೀನು ಮಾಡಿದ. ಜಮೀನಿನ ದೇಖರೇಖಿ ನೋಡಿಕೊಳ್ಳುತ್ತ ಅಲ್ಲಿಯೇ ವಸತಿ ಹೂಡಿದ. ಮದುವೆಯ ವಯಸ್ಸಾಗಿದ್ದರಿಂದ ಹದಿನೆಂಟರ ಸುಂದರ ಬಡ ಹವ್ಯಕ ಹುಡುಗಿಯನ್ನು ಮದುವೆಯಾದ. ವಿಶಾಲವಾದ ಜಮೀನಿನ ಸಾಗುವಳಿ ಕೆಲಸಕ್ಕೆ ಸಹಾಯಕ್ಕಾಗಿ ತನ್ನ ಸೋದರಳಿಯನನ್ನು ಜೊತೆಗೆ ಇರಿಸಿಕೊಂಡ.

ಮದುವೆಗೆ ಮೊದಲೇ ಅನ್ಯ ಹುಡುಗಿಯೊಟ್ಟಿಗೆ ಸಂಬಂಧ ಬೆಳೆಸಿದ್ದ ಅವನಿಗೆ ತಾನಿಲ್ಲದ ಹೊತ್ತಿನಲ್ಲಿ, ಎಳೆಯ ವಯಸ್ಸಿನ ತನ್ನ ಹೆಂಡತಿ ಅವಳಿಗಿಂತ ಸ್ವಲ್ಪ ಹಿರಿಯದನಾದ ತನ್ನಳಿಯನ ಜೊತೆಗೆ ಚಕ್ಕಂದವಾಡುತ್ತಾಳೆಂಬ ಸಂದೇಹ ಮೂಡಿತು. ಮೊದಲ ಹುಡುಗಿಯಲ್ಲಿ ಈ ವಿಷಯವನ್ನು ಹೇಳಿಕೊಂಡ. ಸಂದೇಹಕ್ಕೆ ಅವಳ ಮಾತು ರೆಕ್ಕೆಪುಕ್ಕ ಹಚ್ಚಿತು.

ಬಡವರ ಮನೆಯ ಹುಡುಗಿಯಾದ ತಾನು ಶೀಲವಂತೆ, ತನ್ನನ್ನು ವಿನಾಕಾರಣ ಸಂದೇಹಿಸಬೇಡಿರೆಂದು ಅವನ ಹೆಂಡತಿ ಗೋಗರೆದಳು. ನಿತ್ಯ ಜಗಳವಾಡುತ್ತಿದ್ದ ಆತ ಮದುವೆಯಾಗಿ ವರ್ಷದಲ್ಲೇ ದೋಷರೋಪಣೆ ಮಾಡಿದ. ಆಗವಳು ಗರ್ಭಿಣಿ. ಅಳಿಯನನ್ನು ಸಂಶಯಿಸಿದ್ದಕ್ಕೆ ಅಳಿಯ ಮಾವನನ್ನು ತೊರೆದು ತನ್ನೂರಿಗೆ ಮರಳಿದ.

ಹೈದನ ತಂದೆ ಮತ್ತು ಸಹೋದರರು ಸೇರಿ ಹೈದ ಹೇಳಿದ್ದೇ ಸರಿಯೆಂದರು. ತಮಗೆ ನಿಮ್ಮ ತಂಗಿ ಬೇಡವೆಂದು ಅವಳ ಸಹೋದರರಿಗೆ ತಿಳಿಸಿದರು. ಅವಳ ತಂದೆ ತಾಯಿ ಮೊದಲೇ ಗತಿಸಿದ್ದರಿಂದ ಅಷ್ಟು ಎಳೆಯ ವಯಸ್ಸಿಗೇ ಮದುವೆಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಂಡ ಭರದಲ್ಲಿದ್ದ ಅವಳ ಸಹೋದರರು ನಿಶ್ಚೇಷ್ಟಿತರಾದರು.

ಕೇಸು ನ್ಯಾಯಾಲದ ಮೆಟ್ಟಿಲೇರಿ ಆವಳ ಉಪಜೀವನಕ್ಕೆ ಸ್ವಲ್ಪ ಜಮೀನು ಕೊಡಬೇಕೆಂದು ತೀರ್ಮಾನ ಬಂತು. ಮೂಲಊರಿನ ಒಂದು ಭಾಗದಲ್ಲಿ ಮೂಲ ಮನೆಯಿಂದ ಬಹಳ ದೂರದಲ್ಲಿ ಚಿಕ್ಕದೊಂದು ತೋಟದ ತುಂಡಿತ್ತು; ಅದನ್ನೇ ಕೊಟ್ಟು ಸಂಬಂಧ ಕಡಿದುಕೊಂಡರು.

ಮದುವೆಯಾದ ತಾನು ಅಣ್ಣಂದಿರ ಸಂಸಾರಕ್ಕೆ ಭಾರವಾಗಬಾರದೆಂಬ ಭಾವನೆಯಿಂದ ತನಗೆ ಗಂಡನ ಮನೆಯಲ್ಲಿ ಕೊಟ್ಟ ಚಿಕ್ಕದೊಂದು ಮನೆ ಮತ್ತು ತೋಟವನ್ನು ನೋಡಿಕೊಳ್ಳುತ್ತ ಆವಳು ಅಲ್ಲೇ ಉಳಿದಳು. ಆಗಾಗ ಸಹೋದರರು ಬಂದುಹೋಗುತ್ತಿದ್ದರು. ಆ ವೇಳೆಗಾಗಲೆ ಅವಳಿಗೆ ೩-೪ ವರ್ಷದಪುಟ್ಟ ಮಗುವೊಂದಿತ್ತು. ಆ ಮನೆಯಲ್ಲಿ ಮೊದಲ ಮಳೆಗಾಲದಲ್ಲಿ ಆಟವಾಡುತ್ತಿದ್ದ ಆ ಮಗು ಮನೆಯ ಅಂಗಳದ ಕೊನೆಯಲ್ಲಿದ್ದ ನೀರು ತುಂಬಿದ ಹೊಂಡಕ್ಕೆ ಬಿದ್ದಿದ್ದು ತಾಯಿಗೆ ತಿಳಿಯುವ ಮೊದಲೇ ಅಸುನೀಗಿತ್ತು.

ಗಂಡ ಬಿಟ್ಟ,ಮಗ ಸತ್ತುಹೋದ. ಹೀಗೆ ಆ ಎಳೆಯ ಗೃಹಿಣಿ ಅನುಭವಿಸಿದ ನೋವು ಹೇಳಲಿಕ್ಕೆ ಆಗದಂತದ್ದು. ಆ ಊರಲ್ಲಿ ಕೆಲವು ’ವಾಸು’ಗಳಿದ್ದರು; ನೋಡಲಿಕ್ಕೆ ಸುಂದರ ರಾವಣರು. ಎಳೆಯ ಗೃಹಿಣಿ ಒಬ್ಬಳೇ ಅಲ್ಲಿರುವುದು ಹಸಿದ ಹೆಬ್ಬುಲಿಗೆ ಕೊಸರಲಾರದ ಜಿಂಕೆಯ ಮರಿ ಸಿಕ್ಕಂತಾಗಿತ್ತು. ಸಾಂತ್ವನ ಹೇಳುವ ನೆಪದಲ್ಲಿ ಒಬ್ಬೊಬ್ಬರೇ ಅವಳ ಮನೆಗೆ ಹೋಗಿ ಬರತೊಡಗಿದರು. ಊರ ಜನ ಕತೆ ಹೆಣೆಯತೊಡಗಿದರು.

ಮಹಿಳೆಯರನ್ನು ತಮ್ಮ ವರಸೆಗಳಿಂದ ಬುಟ್ಟಿಗೆ ಕೆಡವಿಕೊಳ್ಳುವುದರಲ್ಲಿ ’ವಾಸು’ಗಳು ಪರಮ ನಿಷ್ಣಾತರಾಗಿರುತ್ತಾರೆ. ಯವುದೋ ವಿಷಮ ಗಳಿಗೆಯಲ್ಲಿ ಅವಳ ಹರೆಯದ ದೇಹ ಮನಸ್ಸನ್ನು ಮೀರಿ ’ವಾಸು’ ಒಬ್ಬನಿಗೆ ತನ್ನನ್ನು ಒಪ್ಪಿಸಿಕೊಂಡಿತು. ಅದನ್ನು ಬಲಾತ್ಕಾರವೆನ್ನುತ್ತೀರೋ? ಅನಿವಾರ್ಯತೆ ಎನ್ನುತ್ತೀರೋ? ದೌರ್ಬಲ್ಯವೆನ್ನುತ್ತೀರೋ ನಿಮಗೆ ಬಿಟ್ಟಿದ್ದು; ನಡೆಯುವುದಂತೂ ನಡೆದೇ ಹೋಯಿತು. ಜನರು ಊಹೆಯಿಂದ ಕಟ್ಟಿದ ಕತೆ ಈಗ ನಿಜವಾಗಿತ್ತು.

ಸಮಾಜದ ಎದುರು ಈಗ ಅವಳು ತಪ್ಪಿತಸ್ಥಳು; ಅವಳನ್ನು ಮನಸೋ ಇಚ್ಛೆ ಭೋಗಿಸಿದ ’ವಾಸು’ಮಾತ್ರ ಬಹಳ ಸಂಭಾವಿತ. ಜನರಿಗೆ ಆ ಗಂಡಸು ’ವಾಸು’ವೆಂಬುದು ಗೊತ್ತಿತ್ತು. ಆದರೆ ಜನ ಅವನೆದುರು ಅದನ್ನು ಪ್ರಶ್ನಿಸಲು ಹೆದರುತ್ತಿದ್ದರು. ಊರಲ್ಲಿ ಯಾವುದೋ ಕಾರಣಕ್ಕೆ ಪಂಚಾಯತಿ ಸೇರಿದರೆ ಅವನೊಬ್ಬ ಮುಖಂಡ. ಅಂತವನು ಹಾಗೆ ಮಾಡಲು ಸಾಧ್ಯವೇ? ಛೆಛೆ.

ನಂತರದ ದಿನಗಳಲ್ಲಿ ’ವಾಸು’ ಅವಳನ್ನು ಹಿಂಡಿ ಹಿಂಡಿ ಹಿಪ್ಪೆಮಾಡಿದ. ಅನಾರೋಗ್ಯ ಬಾಧಿಸಿದರೂ ಅವಳನ್ನು ಕೇಳುವವರೇ ಇರಲಿಲ್ಲ. ಹಗಲೋ ರಾತ್ರಿಯೋ ನೆನಪಾದಾಗಲೆಲ್ಲ ವಾಸುವಿನ ಆಗಮನ. ಹೊರಗೆ ಏಕಾಂಗಿಯಾಗಿ ತಲೆಯೆತ್ತಿ ಓಡಾಡಲಾರದ ಅವಳಿಗೆ ಅವಳದ್ದೇ ಗೃಹಬಂಧನ.

ಇದು ಶಿಷ್ಟ ಸಮಾಜದ ಇನ್ನೊಂದು ಮುಖ. ಇದನ್ನೆಲ್ಲ ಪ್ರಶಿಸುವವರೇ ಇಲ್ಲ. ಯಾರು ಪ್ರಶ್ನಿಸಬೇಕಾದ ಮುಖಂಡರೋ ಅಂತವರೇ ಕಚ್ಚೆಹರುಕರು. ಪ್ರಶ್ನಿಸಲು ಅರ್ಹತೆಯುಳ್ಳ ಇನ್ನೂ ಕೆಲವರು ತಮಗೇಕೆ ಊರ ಉಸಾಬರಿಯೆಂದು ಹತ್ತಿರಕ್ಕೂ ಹೋಗರು.

ಕನ್ನಡಪ್ರಭದಲ್ಲಿ ಅರುಣಾ ಶಾನಭಾಗ್ ಎಂಬ ನತದೃಷ್ಟೆಯ ಬಗ್ಗೆ ಮತ್ತೆ ಓದಿದೆ. ಅತ್ತ ಸಾಯದೇ ಇತ್ತ ಬದುಕದೇ ಮೆದುಳು ನಿಷ್ಕ್ರಿಯವಾದ ಸ್ಥಿತಿಯಲ್ಲಿ ಆಕೆ ಅದೆಷ್ಟು ವರ್ಷಗಳನ್ನು ಕಳೆದಿದ್ದಾಳಲ್ಲವೆ? ಇದಕ್ಕೆಲ್ಲ ನಾಗರಿಕ ಸಮಾಜ ಏನೆನ್ನುತ್ತದೆ?

ಈ ಕತೆಗಳನ್ನು ಬಿಡಿ, ಈಗ ಪ್ರಮುಖ ಕತೆಗೆ ಬರೋಣ. ಇಂದು ನಮ್ಮ ಸಮಾಜಕ್ಕೆ ತಪ್ಪಿನ ಅರಿವಾಗಿದೆ. ಅನೇಕ ಜನ ತಪ್ಪನ್ನು ತಪ್ಪು ಎಂದು ಬಹಿರಂಗವಾಗಿ ಹೇಳದಿದ್ದರೂ ಒಳಗಿನಿಂದ ಕುದಿಯುತ್ತಿದ್ದಾರೆ. ಹಾಗಂತ ನೇರವಾಗಿ ಹೊಡೆದರೆ ’ಕೋಲು’ ಮುರಿಯುತ್ತದೆಂಬ ಭಯ,ಅತಂಕ ಎರಡೂ ಇವೆ.

ಈಗ ನಮ್ಮ ಸಮಾಜ ಅನುಸರಿಸುತ್ತಿರುವುದು ’ಹಾವು ಸಾಯಬಾರದು ಮತ್ತು ಕೋಲು ಮುರಿಯಬಾರದು’ ಎಂಬ ತತ್ವ. ವಿಷದ ಹಾವಿಗೆ ಹೊಡೆತ ಬೀಳಬೇಕು; ಆದರೆ ಅದು ಸಾಯಬಾರದು. ಹೊಡೆವ ಕೋಲು ಮತ್ತೆ ಹೊಡೆಯಲು ಬರುವಂತಿರಬೇಕು. ಹೀಗಾಗಿ ಹಾವು ಸಾಯುತ್ತಿಲ್ಲ ಕೋಲು ಮುರಿಯುತ್ತಲೂ ಇಲ್ಲ; ತಂತಾನೇ ರೀಪ್ಲೇ ಆಗುವ ಫ್ಲಾಶ್ ವೀಡಿಯೋ ತುಣುಕಿನ ರೀತಿ ಈ ಸನ್ನಿವೇಶವಿದೆ.

ತಾವು ಏನನ್ನೇ ಹೇಳಿದರೂ ಇಡೀ ಸಮಾಜ ತಮ್ಮ ಬೆಂಬಲಕ್ಕೆ ನಿಲ್ಲುತ್ತದೆ. ತಮ್ಮಲ್ಲಿ ಹಣಬಲ ಜನಬಲ ಎಲ್ಲವೂ ಇದೆ,ಧಕ್ಕಿಸಿಕೊಳ್ಳಬಹುದು ಎಂದುಕೊಂಡು ಸಿಕ್ಕಲ್ಲಿ ಸಿಕ್ಕಲ್ಲಿ ತೆಕ್ಕೆಹಾಕಿಕೊಳ್ಳಿತ್ತಿದ್ದ ’ಹಾವಾಡಿಗ’ ಮತ್ತು ಕುಲಪತಿ ಬಾವಯ್ಯ ಈಗ ಕಂಗಾಲಾಗಿದ್ದಾರೆ.

ಅತ್ತ ಇಮ್ಮಡಿ ವಿಶ್ವೇಶ್ವರಯ್ಯನವರಿಗೆ ಕುಳಿತುಕೊಳ್ಳಲೇ ಜಾಗ ಇಲ್ಲದಂತಾಗಿ ಮಲಬದ್ಧತೆಯಾಗಿದೆ. ಅವರ ಎಂಜಿನೀಯರಿಂಗ್ ಪ್ಲಾನೆಲ್ಲ ಗೋತಾ ಹೊಡೆಯಲಾರಂಭಿಸಿದ್ದರಿಂದ ’ಹಾವಾಡಿಗ’ ಮತ್ತು ಬಾವಯ್ಯ ಹಲ್ಲುಮುರಿದ ಹಾವಿನಂತಾಗಿದ್ದಾರೆ. ಹಲ್ಲು ಮುರಿದ ಹಾವು ಬಹಳ ಕಾಲ ಬದುಕಲಾರದು; ಅದರ ಆಯುಷ್ಯ ದಿನದಿನವೂ ಕಡಿಮೆಯಾಗುತ್ತಲೇ ಬರುವುದು.

A source said, “All intellectuals are shifted; Foolish People are still left out, we better not to convince them. Let them enjoy their freedom of faith. A day comes when automatically they are convinced to accept the bitter truth.”

– Thumari Ramachandra

source: https://www.facebook.com/groups/1499395003680065/permalink/1613960098890221/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s