ಅವಿವೇಕದ ಪತ್ರಿಕೆ,ತುಮರಿ ಯಾರು? ಅಶ್ಲೀಲ ಬರಹ ಇತ್ಯಾದಿಗಳ ಬಗ್ಗೆ

ಅವಿವೇಕದ ಪತ್ರಿಕೆ,ತುಮರಿ ಯಾರು? ಅಶ್ಲೀಲ ಬರಹ ಇತ್ಯಾದಿಗಳ ಬಗ್ಗೆ

ಸಮಾಜದ ಮುಖವಾಣಿ ಎಂದು ಹೇಳಿಕೊಳ್ಳುವ ಪತ್ರಿಕೆಯೊಂದರ ಲೇಟೆಸ್ಟ್ ಸಂಚಿಕೆಯನ್ನು ನಮ್ಮ ಕವಳದ ಗೋಪಣ್ಣ ಸ್ಕ್ಯಾನ್ ಮಾಡಿಸಿ ಮೇಲ್ ಮಾಡಿದ್ದಾನೆ. ಪುಟಪುಟಗಳಲ್ಲೂ ಪಟಾಲಮ್ಮುಗಳ ವ್ಯವಹಾರವೇ ಕಾಣಿಸುತ್ತಿದೆ. ಯಾರೋ ಪುಣ್ಯಾತ್ಮ ಕವನವನ್ನೂ ಬರೆದಿದ್ದಾನೆ. ಎಲ್ಲವೂ ಕಳ್ಳ ಸನ್ಯಾಸಿಯ ಪರವಾಗಿ ಎಂಬುದನ್ನು ಬಿಡಿಸಿ ಹೇಳಬೇಕೆ?

ಸಮಾಜದ ಮುಖವಾಣಿಯಾದರೆ ಸಮಾಜಕ್ಕೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಮಧ್ಯಸ್ಥಿಕೆ ವಹಿಸಿ ಬಗೆಹರಿಸುವ ವರದಿಗಳನ್ನು ಪ್ರಕಟಿಸಬೇಕಿತ್ತು. ಇಲ್ಲಿ ಹಾಗಿಲ್ಲ. ಜೈಕಾರವೋ ಜೈಕಾರ…..”ಮೇ….ಮೇ….ಮೇ….ಮೇ.” ಬೆಂಕಿ ಇಲ್ಲದೆ ಹೊಗೆ ಏಳುವುದು ಸಾಧ್ಯವಿಲ್ಲವೆನ್ನುತ್ತದೆ ವಿಜ್ಞಾನ. ಹೊಗೆಯೆದ್ದಲ್ಲೆಲ್ಲ ಯಾವುದೋ ರೂಪದ ಬೆಂಕಿ ಇರೋದು ಖಾತ್ರಿಯಂತೆ. ಇಲ್ಲಿ ಈ ಪತ್ರಿಕೆ, “ಬೆಂಕಿಯೇ ಇಲ್ಲದೆ ಹೊಗೆ ಎದ್ದಿದೆ” ಎಂದು ಸಮರ್ಥಿಸಲು ಟೊಂಕಕಟ್ಟಿ ನಿಂತಿದೆ.

ಅಲ್ಲಿರುವವರೆಲ್ಲ ನೆಗೆದೋಡಿ,ಕಾಂತಪ್ಪ ಇಂತವರೇ; ಎಲ್ಲರೂ ಸನ್ಯಾಸಿಯ ಚೇಲಾಗಳೇ. ಹಳದೀ ತಾಲಿಬಾನಿನ ಭಾಗವೇ ಅಲ್ಲೂ ಕೆಲಸಮಾಡುತ್ತಿರುವುದರಿಂದ ಭಿನ್ನವಾದ ಬರಹಗಳನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಇಂತದ್ದೇ ವಿಷಯ ಪ್ರಕಟಗೊಳ್ಳಬೇಕು ಮತ್ತು ಇಂತದ್ದು ಬೇಡ ಎನ್ನಲು ಅಲ್ಲಿ ಯಾವುದೇ ಸುವ್ಯವಸ್ಥೆಯಿಲ್ಲ. ಇರುವವರೇ ದೊಣ್ಣೆನಾಯಕರು ಮತ್ತು ಅವರೇ ವಿಷಯಗಳನ್ನು ಮಂಡಿಸುವವರು. ಅವರಿಗೆಲ್ಲ “ಹೀಗೇ ಬರೆಯಿರಿ” ಎಂದು ’ಅಪ್ಪಣೆ’ಯಾಗಿದೆ.

ತುಮರಿ ಯಾರು?

ಹಲವು ಜನರಲ್ಲಿ ಹಲವು ಊಹೆಗಳಿಗೆ ಕಾರಣವಾದ ಹೆಸರು ನನ್ನದು. ನರಸತ್ತ ಮಾಣಿಯೊಬ್ಬ ಫೇಕ್ ಅಕೌಂಟೆಂದು ಬರೆಯಲೂ ಬರದೆ ಒದ್ದಾಡಿ,ಕೊನೆಗೆ ತಿಳಿದ ಅಕ್ಷರಗಳನ್ನು ಬರೆದಿದ್ದಾನೆ ಪಾಪ. ಬನಾರಿ ಬಾವಯ್ಯ ಹೇಳಿದ ಹಾಗೆ “ವಾರ್ಡ್ರು” ಪಡೆಯುವವರೆಲ್ಲ ಅದೇ ತರಗತಿಯ ಜನವೇ ಆಗಿದ್ದಾರೆ. ಎದೆ ಸಿಗಿದರೆ ಮೂರಕ್ಷರ ಜ್ಞಾನದ ಕೊರತೆ ಕಂಡರೂ ಹೆಚ್ಚಲ್ಲ. ಸಚ್ಚಿದಾನಂದ ಹೆಗಡೆಯವರು ಬಸ್ಸಿನಲ್ಲಿ ಕಂಡ ಹದಿಹರೆಯದ ’ಹೀರೋ’ ’ಹೀರೋಯಿನ್’‍ಗಳಂತೆ ತಮಗೂ ಅಂತದೇ ಅವಕಾಶ ಸಿಗಲಿ ಎಂಬ ನೀಚ ಮಂದಿ.’ಚೋರ ಗುರುವಿಗೆ ಚಾಂಡಾಲ ಶಿಷ್ಯ’ನೆಂಬ ಗಾದೆ ನಿಮಗೆ ಹೊಸದೇನೂ ಅಲ್ಲವಲ್ಲ?

ಮೂಲ ಶರಾವತಿ ನದಿಯ ಸರಹದ್ದಿನಲ್ಲಿ ಲಿಂಗನಮಕ್ಕಿಯೂ ಸೇರಿದಂತೆ ಹಲವು ಹಳ್ಳಿಗಳಿದ್ದವು. ನಿತ್ಯ ಹರಿದ್ವರ್ಣದ ಪಶ್ಚಿಮಘಟ್ಟದ ಕಾಡುಗಳ ಸೆರಗಿನ ಪ್ರದೇಶವು ನೈಸರ್ಗಿಕ ಸಂಪನ್ಮೂಲಗಳಿಂದ ಸಮೃದ್ಧವಾಗಿತ್ತು. ಶರಾವತಿಯನ್ನು ಜಲವಿದ್ಯುತ್ ತಯಾರಿಸಲು ಬಳಸಿಕೊಂಡಾಗ ನಮ್ಮ ಪೂರ್ವಿಕರ ಮನೆಮಠಗಳು ಮುಳುಗಡೆಯಾದವು.

ಕನ್ನಡದ ’ಭೂಮಿಗೀತ’ ಸಿನಿಮಾ ನೋಡಿದವರಿಗೆ ಇಂತಹ ಪ್ರಾಜೆಕ್ಟ್‍ಗಳು ನಡೆಯುವಾಗ ಸ್ಥಳೀಯರನ್ನು ಹೇಗೆ ಒಕ್ಕಲೆಬ್ಬಿಸುತ್ತಾರೆ ಎಂದು ಅರ್ಥವಾಗುತ್ತದೆ. ಶತಮಾನಗಳಿಂದ ಬೀಡುಬಿಟ್ಟು ಉಂಡುಟ್ಟು ಸುಖವಾಗಿದ್ದ ನಾವು,ನಮ್ಮ ನೆಲ,ಜಲ,ವಸತಿಗಳನ್ನೆಲ್ಲ ಕಳೆದುಕೊಂಡು ಕಾಶ್ಮೀರಿ ಪಂಡಿತರು ಹೊರಟಂತೆ ನಿರಾಶ್ರಿತರಾಗಿ ಹೊರಟವರು.

ಸರಕಾರೀ ಪರಿಹಾರದ ಬಗ್ಗೆ ಪ್ರತ್ಯೇಕವಾಗಿ ವ್ಯಾಖ್ಯಾನಿಸುವ ಬದಲು ನಮ್ಮ ಉಸ್ತುವಾರಿಯನ್ನು ನಾವೇ ನೋಡಿಕೊಳ್ಳಬೇಕಾಯ್ತು ಎಂಬುದು ಉತ್ತಮ. ಆಗ ನಾನಿನ್ನೂ ಅರಿಯದ ಚಿಕ್ಕ ಬಾಲಕ. “ಮುಳುಗುತ್ತದೆ” ಎಂಬ ಬರಸಿಡಿಲಿನಂತ ಸುದ್ದಿಯನ್ನು ಕೇಳಿಯೇ ಬಡತನದಲ್ಲಿದ್ದ ನಮ್ಮವರು ಊರು ಬಿಟ್ಟರು. ಅನ್ನವನ್ನು ಹುಡುಕುತ್ತ ನಗರ, ತೀರ್ಥಹಳ್ಳಿ, ಶಿವಮೊಗ್ಗ ಮೊದಲಾದ ಪ್ರದೇಶಗಳಲ್ಲಿ ಕೆಲಕಾಲ ಕಳೆದರು.

ಬಡತನದ ಬೇಗುದಿ ನನ್ನನ್ನು ಓದುವಂತೆ ಮಾಡಿತು. ಅದಿಲ್ಲದಿದ್ದರೆ, ಹೊಟ್ಟೆತುಂಬಿದ್ದರೆ ಪ್ರಾಯಶಃ ನಾನೂ ಮೆಂದೆಯ ಕುರಿಯಾಗಿಯೋ ಅಥವಾ ಪಟಾಲಮ್ಮಿನ ಜೈಕಾರದ ಸದಸ್ಯನಾಗಿಯೋ ಬೆಳೆಯುತ್ತಿದ್ದೆನೇನೋ. ಕಷ್ಟಾರ್ಜಿತದ ಹಣದಲ್ಲಿ ನನ್ನನ್ನು ಓದಿಸಿದ ಪಾಲಕರಿಗೆ ನಾನು ಕೃತಜ್ಞ. ಪದವಿ ವಿದ್ಯೆಗಳನ್ನು ಪೂರೈಸಿ ಇಂದು ಇಲ್ಲಿ ನೆಲೆನಿಲ್ಲಲು ನನಗೆ ಅಂದಿನ ಸ್ಥಿತಿಗತಿಯೇ ಕಾರಣವಾಯಿತು.

ಹತ್ತು ವರ್ಷಗಳಿಂದ ನಾನಿಲ್ಲಿಯೇ ಇದ್ದರೂ ದೇಶ,ಭಾಷೆ,ಸಮಾಜ ಇವುಗಳ ಮೇಲಿನ ಅಭಿಮಾನವನ್ನು ತೊರೆದಿಲ್ಲ. ಚಿಕ್ಕಂದಿನಲ್ಲಿ ಓದಿದ್ದು ಮಾತೃಭಾಷೆಯಾದ ಕನ್ನಡದಲ್ಲೇ ಆಗಿದ್ದರಿಂದ ಕನ್ನಡವನ್ನು ಓದುವುದು,ಬರೆಯುವುದು ಮತ್ತು ಪುಷ್ಕಳವಾಗಿ ಭಾಷಣ ಬಿಗಿಯುವುದು ನನಗೆ ಗೊತ್ತು. ಕನ್ನಡದ ಬಹುತೇಕ ಸಾಹಿತಿಗಳ ಕೃತಿಗಳನ್ನು ಬಿಡುವಿರುವಾಗ ಓದುತ್ತಿರುತ್ತೇನೆ.

ರಾಂಗ್ ವೇಷ “ಅವತರಿಸಿದ್ದು” ನಮ್ಮ ಪಕ್ಕದೂರಿನಲ್ಲೇ ಎಂದು ಹೇಳಲು ಖೇದವೆನಿಸುತ್ತದೆ. ಇಂತಾ ವೇಷದವರೆಲ್ಲ ನಮ್ಮ ಓರಗೆಯ ನಂತರದ ಪೀಳಿಗೆಯವು. ನಮ್ಮ ಮೂಲ ಅವಿಭಕ್ತ ಕುಟುಂಬದ ಸದಸ್ಯರಲ್ಲಿ ಕೆಲವರು ಇನ್ನೂ ತುಮರಿಯಲ್ಲೇ ಇದ್ದಾರೆ; ಅವರ ಹೆಸರನ್ನೆಲ್ಲ ನಾನು ಹೇಳಲು ಹೋಗುವುದಿಲ್ಲ.

ನಾನು ಬರೆಯುವ ಎಲ್ಲಾ ಕತೆಗಳಲ್ಲೂ ಹಾದುಹೋಗುವ ಪಾತ್ರಗಳ ನಿಜವಾದ ಹೆಸರುಗಳನ್ನು ಬಹಿರಂಗಗೊಳಿಸಿದರೆ ನೀವು ಹೌಹಾರುತ್ತೀರಿ. “ಕಳ್ಳರು”, “ಖೂಳರು” ಎಂದು ಜನತೆಯಿಂದ ಗುರುತಿಸಲ್ಪಟ್ಟವರೂ ಇಂದು ನ್ಯಾಯಾಲಯಗಳಲ್ಲಿ ಗೆಲುವನ್ನು ಸಾಧಿಸುತ್ತಾರೆ ಎಂಬುದನ್ನು ನೀವು ನೋಡುತ್ತಲೇ ಇದ್ದೀರಿ. ಒಂದೊಮ್ಮೆ ಘಟನೆಗಳನ್ನು ನೇರವಾಗಿ ಹಾಕಿದರೆ ನನ್ನ ಮೇಲೆ ದೂರು ಸಲ್ಲಿಸಲಾಗುತ್ತದೆ. ಈ ಕಾರಣದಿಂದ ಬೀದಿನಾಯಿ ನನ್ನನ್ನು ಅಥವಾ ನಮ್ಮನ್ನು ಕಚ್ಚದಂತೆ ಜಾಗರೂಕನಾಗಿ ಕಲ್ಲು ಬೀಸಿ ಓಡಿಸಲು ಪ್ರಯತ್ನಿಸುತ್ತಿದ್ದೇನೆ.

ಹಳದೀ ತಾಲಿಬಾನ್ ನಡೆಸುತ್ತಿರುವ ಇನ್ನೊಂದು ಕೆಲಸವೇ ಯಾರನ್ನು ಎಲ್ಲಿ ಒಳಹಾಕಿಸಬಹುದು ಎಂದು ಹುಡುಕುವುದು. ಇಲ್ಲಿ ಬರವಣಿಗೆಯಲ್ಲಿ ನಿರತರಾದ ಕೆಲವರ ಮೇಲೆ ಈಗಾಗಲೇ ಅಂತಹ ಯತ್ನಗಳು ನಡೆದಿದ್ದು ನಮಗೆಲ್ಲ ಗೊತ್ತಿದೆಯಲ್ಲ? ಈ ಕಾರಣಗಳಿಂದ ವಿಷಯವನ್ನಷ್ಟೆ ನಿವೇದಿಸುತ್ತಿದ್ದೇನೆ. ಇಷ್ಟಕ್ಕೇ ಉರಿದುಬಿದ್ದು ಕಾಮೆಂಟುಗಳ ಮೂಲಕ ತಮ್ಮ ಕಚಡಾ ಬುದ್ಧಿ ತೋರಿದ ತಾಲಿಬಾನ್ ಸದಸ್ಯರನ್ನು ನೀವು ಗಮನಿಸಬಹುದು.

ಮುಖ್ಯ ಹುದ್ದೆಯಲ್ಲಿರುವ ನನಗೆ ಹೊರದೇಶಗಳ ಕರೆಗಳನ್ನು ಸ್ವೀಕರಿಸುವುದು ಮತ್ತು ನಿಮ್ಮಲ್ಲಿನ ಸಮಯ ನೋಡಿ ಲೇಖನ ಮಂಡಿಸುವುದು ಎಲ್ಲವೂ ಕಷ್ಟವೇ. ಕರೆಗಳ ಮೂಲಕ ಅಭಿಮಾನ ವ್ಯಕ್ತಪಡಿಸುವುದು ಬೇಡ,ಸದಭಿರುಚಿಯ ಸಂಘಟನೆಗೆ ಬೆಂಬಲ ನೀಡುವ ಮೂಲಕ ನಡೆಯಲಿ ಎಂಬುದು ನನ್ನ ಅನಿಸಿಕೆ. ಹೀಗಾಗಿ ಯಾರೇ ಖಾಸಗಿಯಾಗಿ ನನ್ನಲ್ಲಿ ವಿನಂತಿಸಿದರೂ ನನ್ನ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಇದನ್ನೆಲ್ಲ ನೀಡೋದಿಲ್ಲ ಎಂದು ಈ ಮೂಲಕ ಮತ್ತೊಮ್ಮೆ ಸ್ಪಷ್ಟಪಡಿಸುತ್ತೇನೆ.

ಸಮಯ ಬಂದಾಗ ನಿಮ್ಮೆಲ್ಲರ ಮುಂದೆ ಖುದ್ದಾಗಿ ನಾನೇ ಹಾಜರಾದಾಗ ತುಮರಿ ಎಂದರೆ ಫೇಕ್ ಅಲ್ಲ ಎಂಬುದು ಗೊತ್ತಾಗುತ್ತದೆ; ಅಲ್ಲಿಯವರೆಗೆ ಫೇಕ್ ಎಂದುಕೊಂಡರೂ ಬಿಟ್ಟರೂ ನನಗಾಗುವ ನಷ್ಟವೇನೂ ಇಲ್ಲ.

ಈ ನಡುವೆ ನನ್ನ ಬರಹಗಳನ್ನು ಇನ್ನೊಬ್ಬ ಬರಹಗಾರರ ಬರಹಗಳೊಂದಿಗೆ ಹೋಲಿಸಿ ಅವನೇ ಇವ ಎಂದು ಅಂದಾಜು ತೆಗೆದ ಎಲ್ಲರಿಗೂ ಒಂದೇ ಮಾತಿನಲ್ಲಿ ಉತ್ತರಿಸುವುದಾದರೆ ಅವನು ಇವನಲ್ಲ, ಇವನು ಬೇರೆಯೇ ಮತ್ತು ಇವ ತುಮರಿ ರಾಮಚಂದ್ರನೇ; ರೋಬಾಟ್ ಅಲ್ಲ, ಜೀವಂತ ವ್ಯಕ್ತಿ.

ಅಶ್ಲೀಲವೆನಿಸುವ ಬರಹಗಳನ್ನು ಬರೆಯುವುದು ತುಮರಿಗೆ ಇಷ್ಟದ ಕೆಲಸವಲ್ಲ; ಅನಿವಾರ್ಯದ ಕೆಲಸ. ಇಲ್ಲಿನ ಎಲ್ಲ ಕತೆಗಳ ಹುಟ್ಟುವಿಕೆಗೆ ಕಾರಣವಾದ ಮೂಲಕತೆಯೇ ತೀರಾ ಅಶ್ಲೀಲವಾಗಿರುವುದರಿಂದ ಮತ್ತು ಈಗಲೂ ಸಂಬಂಧಿತ ಜಾಗದಲ್ಲಿ ಅಂತಹ ಅಶ್ಲೀಲ ಕತೆಗಳು ಅವ್ಯಾಹತವಾಗಿ ನಡೆಯುತ್ತಲೇ ಇರುವುದರಿಂದ,ನಾನು ಬರೆಯುವ ಕತೆಗಳು ಮೈಲಿಗೆ ಎನ್ನಲು ಸಾಧ್ಯವಿಲ್ಲ. ನೋವಿನಲ್ಲಿ,ದುಃಖದಲ್ಲಿ,ಖೇದ ವಿಷಾದಗಳಲ್ಲಿ ಮೂಡಿದ ಕೆಲವು ಬರಹಗಳು ನಿಮಗೆಲ್ಲ ಅಪಸವ್ಯವೆನಿಸಿದರೆ ಅದನ್ನು ಈ ಮೊದಲೇ ವಿನಂತಿಸಿದಂತೆ ಹೊಟ್ಟೆಗೆ ಹಾಕಿಕೊಳ್ಳಿ; ಮನಸ್ಸಿನಲ್ಲಿ ತುಂಬಿಸಿಕೊಳ್ಳಬೇಡಿ.

ಓದುವ ಹಲವರಿಗೆ ಅನೇಕ ವಿಷಯಗಳು ಅರಿವಿಗಿಲ್ಲ ಎಂಬುದು ನನಗೆ ತಿಳಿದುಬಂದಿದೆ. ನಿಜಸಂಗತಿಗಳ ಅರಿವಿಲ್ಲದೆ ಮೊದಲು “ಮೇ”ಎನ್ನುತ್ತಿದ್ದ ಹಲವು ಕುರಿಗಳು ನಿಜದ ಅರಿವಾದ ನಂತರ ಈಗ ಮನದಲ್ಲೇ “ಧಿಕ್ಕಾರ” ಕೂಗುತ್ತ ಈ ಕಡೆ ಬಂದಿವೆ; ಮನುಷ್ಯರಾಗಿವೆ. ಹೆಜ್ಜೆಹೆಜ್ಜೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಎಲ್ಲರೂ ಅರಿಯುವಂತಾಗಲಿ ಎಂಬ ಉದ್ದೇಶದಿಂದ ಭಿನ್ನ ರೀತಿಯಲ್ಲಿ ಬರೆಯಲು ಸಾಧ್ಯವಾಗದ ಕತೆಗಳನ್ನೂ ಸಹ ಸರಿಯಾಗಿ ತಲುಪಿಸಲು ಯತ್ನಿಸಿದ್ದೇನೆ.

ಕೆಲವರ ಅಭಿಮಾನ,ಪ್ರೀತಿ ಮತ್ತೆ ಕೆಲವರ ಶಂಕೆ,ಸಂದೇಹ, ತಾಲೀಬಾನಿಗಳ ಕೆಟ್ಟ ಕಾಮೆಂಟು ವಿರೋಧ ಎಲ್ಲವನ್ನೂ ಸಹಿಸುತ್ತ,ನನ್ನ ಕರ್ತವ್ಯವೆಂಬಂತೆ ಸಮಾಜಕ್ಕೆ ತನ್ನ ನಡೆಗಳಲ್ಲಿ ಉತ್ತಮ ಆಯ್ಕೆಯನ್ನು ಕಂಡುಕೊಳ್ಳುವಲ್ಲಿ ಸಲಹೆಗಾರನಾಗಿ ಮುನ್ನಡೆಯುತ್ತೇನೆ.

Thumari Ramachandra

source: https://www.facebook.com/groups/1499395003680065/permalink/1612685525684345/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s