ಅದೆಂತದ್ರ ಮರ್ರೆ ಸನ್ಯಾಸಿ ಸಾಮಾನು ಅಸ್ಟ್ ಜೋರ್ ಹಾರ್ತಿತ್ತ್ ಕಾಣಿ

ಅದೆಂತದ್ರ ಮರ್ರೆ ಸನ್ಯಾಸಿ ಸಾಮಾನು ಅಸ್ಟ್ ಜೋರ್ ಹಾರ್ತಿತ್ತ್ ಕಾಣಿ

“ರಾಮಣ್ಣ ಯಾವಾಗ್ ಬಂದೀರಿ ಮರ್ರೆ? ಬಾಳಾ ವರ್ಸಾಗಿತ್ತಲೆ ನಿಮ್ನ ಕಾಂಬುಕೆ ಇಲ್ಲೆ,ಎಲ್ಲ ಘನಾಕಿದ್ರ?” ಎಂದು ನಮ್ಮ ಕುಂದಾಪ್ರ ಸುಬ್ರಾಯ ಆಚಾರಿ ಮಾತು ಆರಂಭಿಸಿದರು. ನಮ್ಮ ಊರಕಡೆಗೆ ಮರದ ಕೆಲಸಕ್ಕೆ ಆಗಾಗ ಬರ್ತಿರ್ತಾರೆ ಅವರು. ನಾನು ಊರಿಗೆ ಬಂದಿದ್ದಾಗ ಸಿಕ್ಕಿದ ಜನರಲ್ಲಿ ಅವರೂ ಒಬ್ಬರು.

ಸುಬ್ರಾಯ ಆಚಾರಿ ಮಾತು ಮುಂದುವರಿಸಿದರು.”ವಿವಾದದ್ ಕಾಮಣ್ಣನ ಬಗ್ಗೆ ನಿಮ್ಗೆ ಗೊತ್ತಿತ್ತ? ಗೊತ್ತಿತ್ತಾ ಕಾಣಿ. ಕ್ಯಾಸೆಟ್ ಯಾಪಾರ ಮಾಡ್ತೀರಂತೆ ಅವರು. ಮದ್ವ್ಯಾಯ್ತು ಮಕ್ಳಾಯ್ತು. ಕ್ಯಾಸೆಟ್ ಯಾಪಾರಾನು ಜೋರಾಗೆ ಇತ್ತಂಬ್ರ.

ಈಗೆಲ್ಲ ಕಾಲ ಬದಲಾದೊಡ್ತಗೆ ಕ್ಯಾಸೆಟ್ ಯಾಪಾರೆಲ್ಲ ನಿಂತೋಗಿ ಸೌಂಡ್ ಸಿಸ್ಟಮ್ ಬಾಡ್ಗಿ ಕೊಡುಕೆ ಸುರುಮಾಡೀರು. ಊರ್ ಬದಿಗೆ ಅಲ್ಲಿ ಇಲ್ಲಿ ಚಿಲ್ಲರಿ ಬಾಡ್ಗಿಗೆ ಹೋಯ್ತಿರು. ಊರ್ಕಡಿಗೆ ಎಲ್ಲೆ ನಾಟ್ಕ,ಸಂಗೀತ,ಭಜನೆ,ಕೀರ್ತನೆ[ಹರಿಕಥೆ]ಇದ್ರೂ ಬಾಡ್ಗಿಗೆ ಹೋಯ್ತೀರು.

ಚಿಲ್ಲರಿ ಬಾಡ್ಗಿಗಿಂತ ಯಾವ್ದಾರು ಕಾಯಂ ಬಾಡ್ಗಿ ಸಿಗ್ತದ್ಯೋ ಹೇಳಿ ಹುಡುಕ್ತೆ ಇದ್ರು. ಆಗ ಬಂತು ಕಾಣಿ ಸ್ವಾಮಿ ಕತೆ ಸುದ್ದಿ. “ಅಲ್ಲಿ ಸೌಂಡ್ ಸಿಸ್ಟಂ ಕಾಯಂ ಬೇಕಂತೆ ಹೋಯ್ತ್ಯಾ?” ಕೇಳ್ದ್ರಂತೆ ಅದ್ಯಾರೋವ. ವಿವಾದದ್ ಕಾಮಣ್ಣ “ಅಲ್ಲಿಗ್ ಹೋಯ್ ಬತ್ತೆ ಕಾಂಬ” ಅಂತಿ ಹಿಣ್ತಿಗೆ ಹೇಳಂದೆ ಅಲ್ಲಿಗೆ ಮೈಕ್ ಹೊತ್ತಿತ್ತ್.

ಸ್ವಾಮಿ ಕತೆಯೋರು “ನಮಗಿದೆಲ್ಲಾ ಬ್ಯಾಡಾ,ದೊಡ್ಡ ದೊಡ್ಡ ಸೌಂಡ್ ಬಾಕ್ಸು ಎಲ್ಲ ಬೇಕಿತ್ತ್” ಅಂದ್ರೊಟ್ಗೆ ಅದ್ನೆಲ್ಲಾ ಖರುದೀ ಮಾಡಿ ಬಾಡ್ಗಿಗೆ ಕೊಟ್ಟಿತ್ತ್. ಸ್ವಾಮಿ ಕತೆ ಇದ್ದಲ್ಲೆಲ್ಲಾ ಬಾಡ್ಗಿಗೆ ಹೋಯ್ತಿತ್ತಲ್ರೀ ಅಲ್ಲಿ ರಾತ್ರಿಯಾಗ್ತಿದ್ದಂಗೆ ಕತಿ ಒಳಗಿದ್ದ ಗೀತೆ, ಪಲ್ಲವಿ ಎಲ್ಲ ಕಂಡು ಕೇಳಿ ಒಳ್ಳೆ ಖುಸಿ ಆತಿತ್ತಂತೆ.ಮಸ್ತ್ ಮಸ್ತ್ ಹೆಂಗಸ್ರನೆಲ್ಲ ಕಂಡಿದ್ದೆ ಪ್ಯಾಂಟೊಳಗೆ ಸಾಮಾನ್ ಹಾರೂಕೆ ಸುರ್ವಾಯ್ತು.

ಹೆಂಗಸ್ರೆಲ್ಲ ಇರ್ವಾಗೆ ಚಂದ ಕಾಣ್ಬೇಕು ಅಂತೇಳಿ ನಾನಾ ನಮೂನಿ ಹೊಸ ಪ್ಯಾಂಟು ಸರ್ಟೆಲ್ಲ ಖರೂದಿ ಮಾಡೀರು. ಕಾಮಣ್ಣ ಏನ್ಮಾಡ್ತರೆ ಹೇಳಿ ಹಿಣ್ತಿಗೆ ತಿಳಿತಿರ್ಲಿಲ್ಲ. ಒಂದ್ ನಮೂನಿ ಹಿಂದೆಲ್ಲ ಯಕ್ಶಗಾನದೋರು ಹೋದಲ್ಲೆಲ್ಲ ಹೆಂಗಸ್ರಿಗೆ ಮಳ್ ಬಿದ್ದಂಗೆ ಕಾಮಣ್ಣಂಗೂ ಅದೇ ರೀತಿ ಆಯ್ತು.

ಪದೇ ಪದೆ ಸಿಕ್ತಿರೋವಾಗೆ ಮಾತುಕತೆ ಸುರ್ವಾಗಿ ಕೆಲವರು ಬಾಳಾ ಕ್ಲೋಜ್ ಆಗ್ಬುಟ್ರಂತೆ. ದೊಡ್ಡ್ ಸಂಸ್ಥಾನದ ಸೌಂಡ್ ಸಿಸ್ಟಂ ಯವಸ್ಥಿ ಮಾಡೋರು ಅಂದ್ಮೇಲೆ ಅದೆಂತ ಶಣ್ ಕೆಲ್ಸವಾ? ರಾಜರ ಆಸ್ಥಾನದಗೆ ಕಂಬಕ್ಕೂ ಗೌರವ ಅಂದಂಗೆ ಯಾಪಾರ ಇಲ್ದೆ ದಿವಾಳಿ ಎದ್ದಿದ್ದ ಕಾಮಣ್ಣಂಗೂ ಅಲ್ಲಿ ಬೆಲೆ ಬಂತು.

ವಿವಾದದ್ ಕಾಮಣ್ಣಂಗೆ ಬಾಡ್ಗಿ ಸುದ್ದಿಗಿಂತ ಹೆಂಗಸರು ಕ್ಲೋಜ್ ಆಗಿದ್ದೆ ಮಜಾ ಕೊಡ್ತಿತ್ತ್. ನೀವು ಯಾರ್ಗೂ ಹೇಳ್ಬೇಡಿ ಹೋಯ್…ಕಾಮಣ್ಣ ಅಲ್ಲಲ್ಲೆ ಜಾಗ ಸಿಕ್ದಲ್ಲೆ ಸಾಮಾನಾಡ್ಸುಕೆ ಸುರು ಮಾಡ್ದ. ಈಗಲೂ ಇದು ಅವರ ಹಿಣ್ತಿಗೂ ಗೊತ್ತಿಲ್ಯೆ ಹೋಯ್.

ನಂತ್ರ ಕಾಮಣ್ಣಂಗೆ ಸ್ವಾಮ್ಗೋಳೂ ತನ್ನಂಗೇಯ ಸಾಮಾನಾಡಸ್ತಾರೆ ಅಂತ ಗೊತ್ತಾಗಿತ್ ಕಾಣಿ. ಏನಾರೂ ಮಾಡ್ಕಳ್ಳಿ ನಂಗೆ ಬಾಡ್ಗಿ ಮತ್ತೆ ಸಾಮಾನಾಡ್ಸೂಕೆ ಹೆಂಗಸ್ರು ಸಿಕ್ರೆ ಸಾಕು ಹೇಳಿ ಸೌಂಡ್ ಸಿಸ್ಟಂ ಯವಸ್ಥಿ ಮಾಡ್ಕೊಡ್ತಾ ಅಲ್ಲೆ ಉಳ್ಕಂಡಿತ್ತ್.

ಒಂದಿನ ಮ್ಯೂಜಿಕ್ ನಡಿತಿರ್ವಂಗೆ ಗೊರಗೊರ ಸೌಂಡು ಹೆಚ್ಚಾಗಿತ್ತಂಬ್ರ. ಸ್ವಾಮ್ಗೋಳ್ ಬಾವಯ್ಯ “ಇದೆಲ್ಲ ನಮಗ್ ಸೆಟ್ ಆತಿಲ್ಯೆ ಬ್ಯಾಡಾ. ನಮ್ಗೆ ಸಂಸ್ಥಾನದ್ದೆ ಅಂತ ಒಂದಿರ್ಲಿ. ಖರ್ಚೆಷ್ಟಾರೂ ತೊಂದ್ರಿಲ್ಲೆ” ಅಂತಿ ಮೀಟಿಂಗ್ ಮಾಡ್ದ್ರಂತೆ. ಕಾಮಣ್ಣ ಒಟ್ಟೂ ತನ್ನ ಹೊಟ್ಟಿಮೇಲೆ ತಣ್ಣೀರ್ ಪಟ್ಟಿಯೇ ಸೈ ಅಂದ್ಕಂಡು ಅಡ್ಡ ಬಿದ್ದು ಅನುಗ್ರಹ ಬೇಡಿದ್ರಂತೆ.

“ಇಸ್ಟ್ ದಿನ ಜೊತೆಗಿರೋ ಅವನ ಬಿಡುಕಾತಿಲ್ಲೆ. ಸಂಸ್ಥಾನಕ್ಕೆ ಹೊಸ ಸೌಂಡ್ ಸಿಸ್ಟಮ್ ಅವನೇ ಖರೂದಿ ಮಾಡ್ಲಿ” ಅಂತ ಸ್ವಾಮ್ಗೋಳ್ ಆಪ್ಪಣೆ ಆಯ್ತಂತೆ. ಮುಂದಿನ ಚಾತುರ್ಮಾಸದ ಹೊತ್ಗೆ ಎಲ್ಲಾ ಯವಸ್ಥಿ ಮಾಡ್ವ ಅಂದು ಹೇಳಿ ಕಳ್ಸೀರು.

ವಿವಾದದ ಕಾಮಣ್ಗೆ ಅಲ್ಲಿದ್ದು ಸಾಮಾನಾಡ್ಸಿ ರೂಢಿಯಾಗಿತ್ತಲೆ ಮನಿಗೆ ಬರುಕು ಅದೆಲ್ಲ ನೆನಪಾಗಿ ಮುಂದೇನ್ ಮಾಡುದು ಅಂತ ಚಿಂತಿಮಾಡ್ರಂತೆ. ಅತ್ಲಗೆ ಸ್ವಾಮ್ಗೊಳ್ ಬಾವಯ್ಯಂಗೆ ಸ್ವಾಮ್ಗೊಳ್ ಎಲ್ಲೈಸಿ ಕಂತು ಕಟ್ಟೂಕೆ ಬಂತಂತೆ. ಪುತ್ತೂರ್ ಕಡಿಗೆ ಇಪ್ಪತ್ತೆಕ್ರಿ ಜಮೀನ್ ಬೇರೆ ಖರೂದಿ ನಡೀತಿತ್ತ್. ಅದ್ರ ಮಧ್ಯದಗೆ ತನ್ ಕೆಲ್ಸ ಆಗುದಿಲ್ಲ ಅಂಬುದು ಕಾಮಣ್ಣಂಗೆ ಅಂದಾಜಾಯ್ತಂತೆ.

ಸೀದಾ ಬಾವಯ್ನೋರ್ ಹತ್ರೆ “ಏನಾದೂ ಮಾಡ್ರ ಒಡ್ಯಾ” ಅಂತಿ ಬೇಡ್ಕಂಡೀರು. ಒಟ್ಟೂ ಸುಮಾರು ನಲ್ವತ್ತ್ ಲಕ್ಸದ ಬಜೆಟ್ಟು. ಏನಿಲ್ಲ ಅಂದ್ರು ಕಾಮಣ್ಣಂಗೆ ಹತ್ತಲಕ್ಸ ಉಳಿತಿತ್ತ್. ಅಸ್ಟೊತ್ಗೆ ಎಲ್ಲ ನಿಂತೋಯ್ತಲ್ರೆ ಅದ್ಕೇ ವಿವಾದದ ಕಾಮಣ್ಣ ಖಾಲಿ ಕುಳ್ತು ತಲಿ ಮೇಲೆ ಕೈ ಹೊತ್ಗಂಡರೆ ಹೇಳಿ ಸುದ್ದಿ.

ಇಸ್ಟ್ ದಿನ ಬಾಡ್ಗಿ ಬೀಡ್ಗಿ ಸಿಕ್ತಿತಲ್ರಿ ಅದ್ಕೇಯ ಸ್ವಾಮ್ಗೋಳ್ ಅಪ್ಪಣೆ ಅಂತಿ ಎಲ್ಲಾರ್ ಜೊತಿಗೆ ಹಳದೀ ಶಾಲು ಹೊದ್ಕಂಡಿ ಜೈಕಾರ ಹಾಕೂಕ್ ಹೋಗರ್‍ಯಂತೆ. ಅಲ್ಲೆ ಯಾರಾರೂ ಹೆಂಗಸ್ರು ಸಿಕ್ರೆ “ಅಕ್ಕಯ್ಯ”,”ಅಕ್ಕಯ್ಯ” ಅಂದ್ಕಂಡೆ ಈ ಮಾಳಬೆಕ್ಕಯ್ಯ ಅವರ ಸೌಂಡ್ ಸಿಸ್ಟಮ್ಮು ಸ್ಪೀಕರು ಎಲ್ಲ ಸರಿಮಾಡುಕಾಗುದು ಹೇಳಿ ಯೋಚ್ನಿ ಮಾಡೀರು.

ಅದ್ಯಂತ ಮರ್ರೆ ಈಗೀಗೆ ಎಲ್ಕೇಳ್ದ್ರೂ ಸನ್ಯಾಸಿ ಸಾಮಾನ್ ಆಡ್ಸು ಸುದ್ದಿಯೇ ಬತ್ತಿತಲೆ. ನಮ್ಮ ಮಾಬ್ಲಗಿರಿ ಇದ್ರಲೆ? ಅವರ ಮಗಂಗೆ ಕುಮಟಿ ಕಡಿಗ್ನ ಸಮಂದ ಕೂಡ್ ಬಂದಿತು. ಹೆಣ್ಣು ಗಂಡು ನೋಡಿಬೀಡಿ ಎಲ್ಲಾ ಮುಗ್ದೋಗಿತು…ಆಯ್ತಲ್ರೆ,ಮೊನ್ನಿತ್ಲಗೆ ಮಾಬ್ಲಗಿರ್‍ಯೋರು ಬ್ಯಾಡಾ ಅಂದ್ಬುಟ್ರಂತೆ.

ಇಲ್ಲಿಗ್ ಬರೂತ್ಲೆ ಅವರ ಮನಿಕಡಿಗೆ ಹೋಯ್‍ಬಂದೆ. “ಹೋಯ್… ಎಂತಕ್ರೆ ಮದ್ವಿ ಮುರ್ಕಂಡ್ರಿ ಮರ್ರೆ?” ಕೇಳ್ದೊಡ್ತಗೆ “ಸುಬ್ರಾಯ,ಕೂಸು ಮಠಕ್ಕ್ ಹೋಯ್ತಿತ್ತಂತೆ ಮಾರಾಯ. ನಂಬೂಕಾತಿಲ್ಲೆ” ಅಂದ್ರು. ಚಾಯ್‍ನೀರ್ ಕೊಟ್ರು. ಕುಡ್ಕಂಡ್ ಎದ್ದೆ.

ಇಲ್ಲಿವರಿಗೂ ನಾವೆಲ್ಲ ಯಾವ್ದೆ ಸ್ವಾಮ್ಗೊಳ್ ಕಂಡ್ರೂ ಅಡ್ಬಿದ್ದು ಕೈಮುಗ್ದಾಯ್ತಿತ್ ಕಾಣಿ..ಆದ್ರೆ ಇನ್ನೆಲ್ಲ ಪಕ್ಕಾ ನೋಡ್ಕಂಡೆ ಕೈಮುಗಿವ ಹೇಳಿ ನಮ್ ಜನರೆಲ್ಲ ಮೀಟಿಂಗ್ ಮಾಡೀರು. ಅಲ್ರ,ಅದ್ಯಂತ ಸನ್ಯಾಸಿ ಸಾಮಾನು ಅಸ್ಟ್ ಜೋರಾಗಿ ಹಾರ್‍ತಿತ್ತಲೆ ಮರ್ರೆ? ನಮ್ಗೆ ನಂಬುಕೆ ಆತಿಲ್ಯೆ. ನೂರಾರ್ ಹೆಂಗಸ್ರು ಹೋಯ್ ಬಂದಾರಂತೆ. ಕಾವಿ ಬಣ್ಣಕ್ಕೂ ಮಸಿ ಹಚ್ದಂಗಾಗದೆ ಈಗ.

ನಾವು ಆಚಾರಿ ಮಂದಿ ಎಲ್ಲಕಡಿಗೂ ಕೆಲ್ಸ್ಕೆ ಹೋಯ್ತೀವಿ. ಇವರಂಗೆ ಸಾಮಾನ್ ಆಡ್ಸಿರೆ ಏನಾಯ್ತದೆ ಹೇಳಿ. ನಮ್ಗಾರೂ ಒಂದ್ ಧರ್ಮ ನೀತಿ ಅದೆ ಮರ್ರೆ. ಥೂ… ಇಸ್ಸಿ ಇವರ ಹೆಸರ ಹೇಳೂಕೂ ಬ್ಯಾಡ ಹಾಳಾಲಿ.”

ನಾನು ಪ್ರಶ್ನೆ ಕೇಳುವ ಮೊದಲೇ ಸವಿಸ್ತಾರವಾಗಿ ಒಂದೊಂದನ್ನೆ ಬಿಡಿಸಿ ಕುಂದಾಪ್ರ ಭಾಷೆಯಲ್ಲಿ ಹೇಳುತ್ತಿದ್ದ ಸುಬ್ರಾಯ ಆಚಾರಿಯವರ ಮಾತನ್ನು ಅರ್ಥಮಾಡಿಕೊಳ್ಳೋದು ವ್ಯಾಸರು ಹೇಳ್ತಿರೋವಾಗ ಮಹಾಭಾರತ ಬರೆಯುತ್ತಿದ್ದ ಗಣಪತಿಯ ಪೊಸಿಷನ್ನಿಗಿಂತ ಕಷ್ಟವಾಗಿತ್ತು.

Thumari Ramachandra

source: https://www.facebook.com/groups/1499395003680065/permalink/1609231532696411/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s