ಕಚ್ಚೆ ಹರುಕರಿಗೆ ಹಚ್ಚೆ ಹರುಕರದ್ದೇ ಬೆಂಬಲ

ಕಚ್ಚೆ ಹರುಕರಿಗೆ ಹಚ್ಚೆ ಹರುಕರದ್ದೇ ಬೆಂಬಲ

“ನಮ್ಮ ಸಲಹೆಗಾರರೆಲ್ಲ ಎಂತೆಂತಹ ’ಉತ್ತಮ’ರಿದ್ದಾರೆ ಎಂದು ನೀವು ಹುಡುಕಬೇಕು. ನಮ್ಮ ಅಡ್ಡಗೇಟೊಂದು ತನ್ನ ಕಚೇರಿಯಲ್ಲಿದ್ದ ಅನ್ಯ ಮತೀಯ ಹುಡುಗಿಯೊಡನೆ ಚಕ್ಕಂದವಾಡಿತು.

ಅದಕ್ಕೆ ಮನೆಯಲ್ಲಿ ಹೆಂಡತಿ ಮಕ್ಕಳೆಲ್ಲ ಇದ್ದರೂ ಅದು ಚಪಲ ಚನ್ನಿಗರಾಯನಾಗಿತ್ತು. ಬಸಿರಾದ ಹುಡುಗಿ ತಿರುಗಿ ಬಿದ್ದು ಕಟ್ಟಿಕೋ ಎಂದು ಹಠಮಾಡಿದಾಗ ನಮ್ಮ ಅಡ್ಡಗೇಟು ಅದನ್ನು ಕಟ್ಟಿಕೊಂಡು ಸಾಧ್ವಿ ಶಿರೋಮಣಿಯಂತಿದ್ದ ಧರ್ಮಪತ್ನಿಗೆ ಡೈವೋರ್ಸ್ ನೀಡಿತು.

ನಮ್ಮ ಹಾವಾಡಿಗ ಮಹಾಸಂಸ್ಥಾನದಲ್ಲಿ ಈಗಿರುವುದು ಕಚ್ಚೆಹರುಕರ ಸಂಘಟನೆಯೇ ಎನ್ನಬಹುದು. ಅದರಲ್ಲೂ ಹಳದೀ ತಲಿಬಾನಿನ ಅನೇಕ ಸದಸ್ಯರು ವಿಚ್ಛೇದಿತರು. ಕಾರಣವೇನು? ಎಷ್ಟೋ ವಿಚ್ಛೇದನಕ್ಕೆ ನಾವು ಮತ್ತು ನಮ್ಮ ಕುಲಪತಿ ಬಾವಯ್ಯ ಕಾರಣ. ಯಾಕೆಂದ್ರೆ…ಯಾಕೆಂದ್ರೆ ……ಯಾಕೆಂದ್ರೆ ನಮಗೆ ಅವರ ಹೆಂಡತಿಯರಿಗೆಲ್ಲ ಆಗಾಗ ಏಕಾಂತ ದರ್ಶನ ನೀಡಬೇಕು.

ನ್ಯಾಯಕಲಾಪಕ್ಕೆ ಸಂಬಂಧಿಸಿದ ಪ್ರಾಯದ ಮಹಿಳೆಯೋರ್ವಳ ಕುರಿತು ಈ ಹಿಂದೆ ಹೇಳಿದ ನಮ್ಮ ತಾಲೆಬಾನ್ ಪಡೆಯ ಅಡ್ಡಗೇಟೊಂದು ತನ್ನೂರಿನ ಸಹೋದ್ಯೋಗಿಗಳ ನಡುವೆ ಕುಳಿತು ಎಷ್ಟು ಕೆಟ್ಟದೃಷ್ಟಿಯಿಂದ ವರ್ಣಿಸಿತೆಂದರೆ “ಎಂತಾ ಫಿಗರ್ರು ಒಮ್ಮೆ ಚಾನ್ಸ್ ಸಿಕ್ಕಿದ್ರೆ ನೋಡಬಹುದಿತ್ತು” ಎಂದು ಹೇಳಿದೆ.
ಅಲ್ಲಿಗೆ ಅಡ್ಡಗೇಟು ಹೋದಲ್ಲೆಲ್ಲ ಹುಡುಕುವುದು ಸ್ಫುರದ್ರೂಪಿ ಮಹಿಳೆಯರನ್ನೆ ಅಂತಾಗಲಿಲ್ಲವೇ? ಆ ಅಡ್ಡಗೇಟು ನಮ್ಮ ಹಾಗೇ ’ವಾಸು’. ನಾವು ’ವಾಸು’-ದೇವ ಆದರೆ ಅದು ಬರೇ ’ವಾಸು’. ಅಂತಹ ಅಡ್ಡಗೇಟು ಸಮಾಜಕ್ಕೆ ಎಂದಾದರೂ ಒಳಿತನ್ನು ಮಾಡಲು ಸಾಧ್ಯವೇ?

ಸಮಾಜದ ಒಳಿತನ್ನು ಕಟ್ಟಿಕೊಂಡು ನಮಗೇನಾಗಬೇಕು? ನಮಗೆ ನಮ್ಮ ಸಮಸ್ಯೆಗೆ ಪರಿಹಾರಬೇಕು. ಈ ಹುಲುಮಾನವರು ನಿರ್ಮಿಸಿಕೊಂಡ ನ್ಯಾಯಾಲಯಗಳಲ್ಲಿ ನಮಗೆ ಸುಳ್ಳು ಸತ್ಯದಿಂದ ಗೆಲುವು ಸಿಗಬೇಕು. ಅದಕ್ಕೆ ತಕ್ಕ ಅದ್ದಗೇಟು ಯಾವುದು ಎಂದು ನಾವು ಹುಡುಕುತ್ತಿದ್ದೆವು.

ನಮ್ಮ ಹತ್ತಿರವೇ ಗಿಂಡಿಯಾಗಿದ್ದ ಅಡ್ಡಗೇಟಿಗೆ ಹಿಂದೆ ನಾವೇ ಪ್ರಸಾದವನ್ನು ಕಟ್ಟಿದ್ದೇವೆ. ನಾವು ಹಲವರಿಗೆ ನಮ್ಮ ಪ್ರಸಾದ ಕಟ್ಟುವುದಿದೆ ಗೊತ್ತಲ್ಲ? ನಮ್ಮ ಗಿಂಡಿಯಾಗಿದ್ದ ಅಡ್ಡಗೇಟು ಅಷ್ಟೆಲ್ಲ ತಾಕತ್ತಿನದಲ್ಲ ಅನಿಸಿದಾಗ ನಮಗೆ ಈ ಅಡ್ಡಗೇಟು ಸಿಕ್ಕಿತು.

ಈ ಅಡ್ಡಗೇಟಿನ ಸಾಮಾರ್ಥ್ಯವೇ ರೌಡಿಸಂ. ಎದುರಾಗಿ ಯಾರಿಗೂ ಮಾತನಾಡಲು ಕೊಡದೇ ಕಿವಿಯ ಹಿಂದಿನವರೆಗೂ ಬಾಯಿ ತೆರೆದು ಸಾಧ್ಯವಾಗುವಷ್ಟೂ ದೊಡ್ಡದನಿಯಲ್ಲಿ ಕೂಗಿ ಹೆದರಿಸುವುದು ಈ ಅಡ್ಡಗೇಟಿನ ಪವರು.

ಎಂತೆಂತಹ ಮುತ್ಸದ್ದಿಗಳು ಅಂಕಿ ಅಂಶ ಸಹಿತ ದಾಖಲೆ ಹಿಡಿದು ಹೇಳಿದರೂ ಅವರ್‍ಯಾರಿಗೂ ಮಾತನಾಡಲಿಕ್ಕೇ ಅವಕಾಶ ಕೊಡದಂತೆ ಸುಳ್ಳನ್ನೇ ಸತ್ಯವೆಂದು ಮತ್ತು ತಾನು ಹೇಳುತ್ತಿರುವುದೇ ಪರಮ ಸತ್ಯವೆಂದೂ ಮೇಲ್ನೋಟಕ್ಕೆ ಸುಭಗತನದಿಂದ ತೋರಿಸುವ ಚಾಣಾಕ್ಷ ನಮ್ಮ ಈ ಅಡ್ಡಗೇಟು.
ಏನು ಮಾಡೋದು ಪಾಪ ನಮ್ಮಹಾಗೆ ಸ್ವಲ್ಪ ಹಾವಿನ ಕಾಟ. ಹೋದಲ್ಲೆಲ್ಲ ಹಾವಾಡಿಸುವ ಕಲೆ ಕರಗತವಾಗಿದೆ. ಹೇಗೂ ಅಡ್ಡಗೇಟಾದ್ದರಿಂದ ಕೇಸು ಬಿದ್ದರೆ ತಪ್ಪಿಸಿಕೊಳ್ಳಲೂ ಗೊತ್ತು. ಅದಕ್ಕಾಗಿ ಅದು ಸುಮಾರು ‘ಸೂರ್ಯಚಂದ್ರ’ರ ದರ್ಶನ ಪಡೆದಿದೆ. ಇನ್ನೀಲ್ಲಾದರೂ ಬೇರೆ ಹುಡುಗಿ ಬಸಿರಾದರೆ ಮಾತ್ರ ತೊಂದರೆಯಾಗಬಹುದು. ಹಾಗಾಗದಂತೆ ಅದು ಎಚ್ಚರವಹಿಸುತ್ತದೆ.

ನಾವು ವಾಸು-ದೇವರಾದ್ದರಿಂದ ನಮಗೆ ಆ ಬವಣೆಯಿಲ್ಲ. ನಾವು ಸನ್ಯಾಸಿಯಾದ್ದರಿಂದ ಯಾರೂ ಡೌಟಿಗೂ ಬೀಳೋದಿಲ್ಲ. ಯಾರಾದರೂ ನಮ್ಮ ವಿರುದ್ಧ ದೂರು ಕೊಟ್ಟರೆ ಜನ ಅವರನ್ನೇ ವಕ್ರದೃಷ್ಟಿಯಿಂದ ನೋಡುತ್ತಾರೆ.

ಆದರೆ ನಮಗೊಂದು ಸಂಶಯ ಕಾಡುತ್ತಿದೆ. ಎಲ್ಲಾದರೂ ಏಕಾಂತ ನೀಡುವಾಗ ಯಾವುದೋ ಹಾಳು ಬ್ರಹ್ಮರಾಕ್ಷಸ ನಾವು ಹಾರುತ್ತಿರುವುದನ್ನು ಲೈವ್ ಆಗಿ ರೆಕಾರ್ಡಿಂಗ್ ಮಾಡಿ ಇಟ್ಟಿರಬಹುದೇ? ಅಂತ. ಒಮ್ಮೆ ಹಾಗಿದ್ರೂ ಅದು ಮಾರ್ಫಿಂಗ್ ವೀಡಿಯೋ ನಮ್ಮದಲ್ಲವೇ ಅಲ್ಲವೆಂದು ಸುಳ್ಳು ಸತ್ಯವನ್ನು ಹೇಳುತ್ತೇವೆ ನಾವು.

ನಮಗೊಂದು ಖುಷಿಯಿದೆ. ನಮ್ಮ ಕುರಿಗಳು ಜಗತ್ತಿನ ಜನಾಂಗಗಳಲ್ಲೇ ವಿಶಿಷ್ಟ ಕುರಿಗಳು ಎಂಬುದು ನಮ್ಮ ಭಾವನೆ. ಯಾಕೆ ಗೊತ್ತೇ? ಯಾರೇ ನಿಜವಾದ ಸತ್ಯವನ್ನು ಹೇಳಿದರೂ ನಂಬದ ಅವು ನಾವು ಹೇಳಿದ ಸುಳ್ಳು ಸತ್ಯವನ್ನೇ ನಿಜವಾದ ಸತ್ಯ ಅಂದುಕೊಳ್ತವೆ. ಹೀಗಾಗಿ ನಾವು ಇಷ್ಟು ದಿನ ಈ ಸೀಟಿಗೆ ಅಂಟಿಕೊಂಡೇ ಇರಲು ಸಾಧ್ಯವಾಯ್ತು.

ಇಷ್ಟುದಿನ ನಾವು ಚಂದ ಚಂದದ ಪಲ್ಲಂಗದ ಮೇಲೆ ಹಂಸತೂಲಿಕಾ ತಲ್ಪದ ಮೇಲೆ ದರ್ಶನವನ್ನು ನೀಡಿದ್ದೆವು. ಹೊರಗೆ ಭವ್ಯ ಡೊಂಬರಾಟಗಳನ್ನು ನಡೆಸಿದ್ದೆವು. ಪರಪ್ಪನ ವನಕ್ಕೆ ತೆರಳಿದಮೇಲೆ ಕೆಸವೆ ಎಲೆಯ ಮೇಲೆ ಕೂರಿಸಬಹುದೇ ಎಂಬುದು ಆಲೋಚನೆ.

ಅಲ್ಲಿಗೆ ಹೋದವರು ಮುದ್ದೆ ಮುರಿಯುತ್ತಾರೆ ಎಂದೆಲ್ಲ ನಾವು ಕೇಳಿದ್ದುಂಟು. ನಮ್ಮ ವಿರುದ್ಧ ದೂರು ಕೊಟ್ಟವರನ್ನು ನಾವು ಅಂತಲ್ಲಿಗೆ ಕಳಿಸಿ ವೀರ್ಯಸನ್ಯಾಸದ ಪ್ರಪಾತ ಅಲ್ಲಲ್ಲ ಸಾರಿ ಪ್ರತಾಪ ತೋರಿಸಿದ್ದೆವು. ಆದರೆ ಈಗ ನಮಗೇ ಅಲ್ಲಿಗೆ ಹೋಗಿ ಮುದ್ದೆ ಮುರಿಯಬೇಕಾಗಿ ಬಂದಿದೆ ಎಂಬುದು ಸಂಕಟ.

ನೇಪಾಳದ ಭೂಕಂಪ ಸಂತ್ರಸ್ತರಿಗೆ ಮಂತ್ರಾಲಯದವರು ೩೦-೪೦ ಲಕ್ಷದ ಔಷಧ,ಬಟ್ಟೆ ಮತ್ತು ನಿಧಿಯನ್ನೂ ಸಹ ಕಳಿಸ್ತುದ್ದಾರಂತೆ. ನಾವೂ ಸರಿ ಇದ್ರೆ ಸ್ವಲ್ಪನಾದ್ರೂ ಮಾಡ್ಬಹುದಿತ್ತು. ನಾವು ಎತ್ತುವಳಿ ಮಾಡಿದ್ದೆಲ್ಲ ನಮ್ಮನ್ನು ರಕ್ಷಿಸಿಕೊಳ್ಳೋದಕ್ಕೆ ಕರ್ಚಾಗ್ತಿದೆ. ಮೇಲಾಗಿ ನಮ್ಮ ಸಖಿಯರಿಗೆ ಬೇಕಲ್ಲ?

ಸದ್ಯ ಹಾವಾಡಿಗ ಮಹಾಸಂಸ್ಥಾನ ಏನೂ ಕೊಡಲಿಲ್ಲ ಅಂತ ಜನ ಅದ್ಕೊಂಡ್ರೂ ಪರವಾಗಿಲ್ಲ. ನಾವ್ ಮಾತ್ರ ಹೇಗಾದ್ರೂ ಸೇಫಾಗಿದ್ರೆ ಸಾಕು. ಈ ಭೂಕಂಪ ಸುನಾಮಿ ಇದೆಲ್ಲ ಆಗ್ತಿರುವಂತದ್ದೆ ಮತ್ತೊಮ್ಮೆ ಮುಂದೆ ಆದಾಗ ಮಾಡಿದರೆ ಆಯ್ತು. ಈಗ ನಾವು “ಭೂಕಂಪ ಸಹಾಯಕ್ಕೆ” ಕೊಡಿ ಎಂದು ಡಬ್ಬ ಹಿಡಿದವರನ್ನು ಕಳಿಸಿದರೂ ಜನ ಊರಾಚೆಗೆ ಓಡಸ್ತಾರೆ. ಹಿಂಗಾಗಿ ಸುಮ್ನಿದ್ಬುಡದೇ ವಾಸಿ.

Thumari Ramachandra

source: https://www.facebook.com/groups/1499395003680065/permalink/1608964306056467/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s