ಇಮ್ಮಡಿ ಮತ್ತು ನರನಾದ ಭೇಟಿಗೆ ಹೋಗಿ ಬೆವರಿಳಿದು ಬಂದರು

ಇಮ್ಮಡಿ ಮತ್ತು ನರನಾದ ಭೇಟಿಗೆ ಹೋಗಿ ಬೆವರಿಳಿದು ಬಂದರು

“ನಾವು ಮರಳಿ ಈಗ ಕ್ಯಾಪಿಟಲ್ ವಿಷಯಕ್ಕೆ ಬಂದಿದ್ದೇವೆ. ಯಾಕೆಂದರೆ ನಮಗೆ ತುರ್ತಾಗಿ ರಾಜಕೀಯದ ಕೆಲಸವಾಗಬೇಕಿದೆ. ನರನಾದನೆಂದರೆ ನಮಗೆ ತುಂಬ ಪ್ರೀತಿ. ನರನಾದನ ಕುಟುಂಬಕ್ಕೂ ನಮ್ಮನ್ನು ಕಂಡರೆ ದೇವರನ್ನು ಕಂಡಷ್ಟೆ ಪ್ರೀತಿ.

ಕುರಿಗಳ ಪ್ರೀತಿ ಹೆಚ್ಚಿದ್ದರಿಂದಲೇ ಅನೇಕರ ಕುಟುಂಬಕ್ಕೆ ಸಂತಾನ ಭಾಗ್ಯವನ್ನು ಕರುಣಿಸಿದ್ದೇವೆ ನಾವು. ಹಲವರಿಗೆ ನಮ್ಮಿಂದ ಸಂತಾನಾನುಗ್ರಹ ಆಗಿದೆ. ನಾವು ಅನುಗ್ರಹಿಸಿ ಸಂತಾನಪಡೆದ ಹೆಣ್ಣುಕುರಿಗಳೆಲ್ಲ ಇಂದಿಗೂ ನಮ್ಮ ಸಖ್ಯದಲ್ಲಿಯೇ ಇವೆ. ಅವುಗಳಿಗೆ ಅವುಗಳದ್ದೇ ಆದ ಗಂಡುಕುರಿಗಳು ಬೇಕಾಗಿಲ್ಲ. ಅವುಗಳಿಗೆ ಎಲ್ಲಕ್ಕಿಂತ ನಾವೇ ಹೆಚ್ಚು. ಯಾಕೆಂದರೆ ನಾವು ದೇವರಲ್ಲವೇ?

ನಮ್ಮನ್ನು ರಕ್ಷಿಸುವ ಹೊಣೆಹೊತ್ತು ಎಂಜಿನೀಯರಿಂಗ್ ನಡೆಸುತ್ತಿರುವ ಇಮ್ಮಡಿ ವಿಶ್ವೇಶ್ವರಯ್ಯನವರು, ಸ್ಮಾಲ್ ಎಲ್ಲಾ ಸಾಲೋದಿಲ್ಲ ಅಂತ ನಮ್ಮ ನರನಾತನ ಜೊತೆಮಾಡಿಕೊಂಡು ಮೊನ್ನೆ ಲಾರ್ಜ್ ಇದ್ದಲ್ಲಿ ಹೋಗಿದ್ದರು.

“ಇಲ್ಲೀವರೆಗೆ ಹೇಗೋ ಸಹಿಸಿಕೊಂಡ್ವಿ. ಅಷ್ಟೆಲ್ಲ ದಾಖಲೆಗಳು ಸಿಗುವ ಇದನ್ನು ಇನ್ನು ಮುಂದೆ ತಡೆಯಲು ಸಾಧ್ಯವಿಲ್ಲ. ಒಂದೊಮ್ಮೆ ತಡೆದರೆ ಗಂಟುಮೂಟೆ ಕಟ್ಟಿಕೊಂಡು ನಾವು ಮನೆಗೆ ಹೋಗಬೇಕಾಗುತ್ತೆ. ಮಾಡೋದಕ್ಕೆ ನಿಮಗೆ ಬೇರೆ ಕೆಲಸ ಇಲ್ವೇ? ಹೋಗ್ ಹೋಗಿ ನಿಮ್ಮ ಕೆಲ್ಸ ನೋಡ್ಕೊಳಿ” ಎಂದು ಉಗಿಸಿಕೊಂಡು ಎದ್ದುಬಂದಿದ್ದಾರೆ.

“ದಾಖಲೆಗಳ ಕಡತವನ್ನು ತರಿಸಿ ತೋರಿಸುತ್ತೇನೆ ಬೇಕಾದರೆ” ಅಂದರಂತೆ. ಹಲವು ರೀತಿ ಮಾತನಾಡಿಸಿ ಹೇಗಾದರೂ ಮಾಡಿ ತಡೆಹಿಡಿಯಿರಿ ಎಂದು ಕೇಳಿಕೊಂಡಿದ್ದಕ್ಕೆ ಆಗೋದಿಲ್ಲ ಎಂದು ಎಬ್ಬಿಸಿ ಕಳಿಸಿದ್ದಾರೆ. ಒದೆಯೋದೊಂದು ಬಾಕಿ ಇತ್ತು.

ಈಗೀಗ ನಮ್ಮ ಕೆಲಸ ಅನ್ನೋದು ಎಲ್ಲರಿಗೂ ಬೇಸರ ತರಿಸುತ್ತಿದೆ. ಕೊಟ್ಟಿಗೆ ಗೊಬ್ಬರ ಹೊತ್ತವನು ಎಲ್ಲಿ ಹೋದರೂ ಗೊಬ್ಬರ ಹೊತ್ತಿದ್ದೇನೆಂದು ಯಾರಿಗೋ ಹೇಳೋದು ಬೇಕಾಗಿಲ್ಲ. ಅವನು ಸರಿದುಹೋದರೆ ಬರುವ ವಾಸನೆಯೇ ಹೇಳುತ್ತದೆ. ನಮ್ಮ ಕೆಲಸ ಅನ್ನೋದು ಗೊಬ್ಬರವೂ ಅಲ್ಲ ಮಲಹೊರುವ ಕೆಲಸದಂತೆ ಆಗಿಬಿಟ್ಟಿದೆ.

ಕೆಲವರಿಗಂತೂ ನಮ್ಮ ಮುಖ ನೋಡಲೂ ಬೇಸರವಾಗಿದೆ. ಬಹಳ ಉತ್ತಮರು ಬರುವುದನ್ನೇ ನಿಲ್ಲಿಸಿದ್ದಾರೆ. ಇನ್ನು ಕೆಲವರಿಗೆ ನಮ್ಮ ಸೀಟಿನ ಬಗ್ಗೆ ಗೌರವ ಇರೋದರಿಂದ ಅವರೇ ಸ್ವಲ್ಪ ಓಡಾಡ್ಕಂಡಿದಾರೆ. ಸೀಟಿನ ಮಹಿಮೆ ಸೀಟಿನಲ್ಲಿ ಕುಳಿತ ವ್ಯಕ್ತಿಯನ್ನು ಅವಲಂಬಿಸಿರುತ್ತದೆ ಎಂದು ಅವರಿಗೆ ತಿಳಿಯೋದಿಲ್ಲ.

ಸೀಟಿನ ಗೌರವಕ್ಕಾಗಿ ನಮ್ಮನ್ನೂ ಕಾಪಾಡ್ತಾರೆ ಅನ್ನೋದು ನಮಗೆ ಗೊತ್ತಾದ ನಿಜವಾದ ಸತ್ಯ. ಅದಕ್ಕಾಗಿಯೇ ನಾವು ಸೀಟನ್ನು ಬಿಡಲು ಸಿದ್ಧರಿಲ್ಲ. ಕೊನೆಗೊಮ್ಮೆ ಸೀಟಿನಿಂದಲೇ ಎಳೆದುಕೊಂಡು ಹೋದರೂ ಬೇಜಾರಿಲ್ಲ. ಅಲ್ಲಿವರೆಗೆ ನಾವಂತೂ ಅಲ್ಲಾಡೋದಿಲ್ಲ.

ಈಗ ನಮಗೆ ಸ್ವಲ್ಪ ಜಾಸ್ತಿ ಪುಕು ಪುಕು ಹತ್ತಿದ್ದು ನಿಜ. ಅದಕ್ಕಾಗೆ ಊರ್‍ಅಕಡೆ ಡೊಂಬರಾಟಗಳನ್ನು ಮುಂದೂಡಿದ್ದೇವೆ ನಾವು. ಅಂತೂ ಇಲ್ಲಿವರೆಗೆ ದಿನ ದೂಡ್ತಾ ಬಂದಿದ್ದೇವೆ. ಎಲ್ಲವೂ ಮುಚ್ಚೋಯ್ತು ಅನ್ನುವಷ್ಟರಲ್ಲಿ ಎಲ್ಲವೂ ಮತ್ತೆ ಬಿಚ್ಚಿಕೊಳ್ತಾ ಇದೆ. ನಮ್ಮ ವಿರೋಧಿ ಹುಲುಮಾನವರು ಸಿಕ್ಕಿದರೆ ಚಚ್ಚಿಬಿಡೋಣ ಎಂಬಷ್ಟು ಕೋಪ ಬಂದರೂ ಮನಸ್ಸಿನಲ್ಲೆ ಬಚ್ಚಿಟ್ಟುಕೊಂಡಿದ್ದೇವೆ.

ಹಿಟ್ಲರ್ ಸದ್ದಾಂ ಹುಸೇನ್ ಅವರೆಲ್ಲ ಮಾಡಿದ್ದು ನೆನಪಾಗ್ತಾ ಇದೆ ನಮಗೆ. ನೇರವಾಗಿ ತಾವು ಸಿಕ್ಕಿಬೀಳ್ತೇವೆ ಅನಿಸಿದಾಗ ಯುದ್ಧರಂಗದಿಂದ ಪರಾರಿಯಾಗಿ ಎಲ್ಲೆಲ್ಲೋ ಹೋಗಿದ್ದರು. ಹಿಟ್ಲರ್ ಯುದ್ಧದಲ್ಲೆ ಸತ್ತ ಎಂದು ಸುಳ್ಳು ದಾಖಲಿಸಿಲಾಗಿದೆ. ಹಿಟ್ಲರ್ ಬೇರೆಡೆಗೆ ಜೀವಂತ ಇದ್ದ. ಸದ್ದಾಂ ಹುಸೇನ್ ಬಂಕರ್ ನಿರ್ಮಿಸಿಕೊಂಡಿದ್ದು ನಿಮಗೆಲ್ಲ ಗೊತ್ತಲ್ಲ?

ಈಗ ನಮ್ಮ ಮುಂದಿರುವ ಪ್ರಶ್ನೆ ನಾವೂ ಇಂತಹ ಭೂಗತ ಬಂಕರ್ ಮಾಡಿಸಿಕೊಂಡು ಇದ್ದುಬಿಡಬಹುದೇ? ಯಾರು ಎಲ್ಲೇ ಹುಡುಕಿದರೂ ಸಿಗಬಾರದು. ಹಾಗಿರಬೇಕು ಅದು. ಜೊತೆಗೆ ಒಂದು ತಪ್ಪಿದರೆ ಎರಡು ಗಿಂಡಿಗಳಿದ್ದರೆ ಸಾಕು. ಅದಕ್ಕೊಂದಕ್ಕೆ ಎಲ್ಲಾದರೂ ವ್ಯವಸ್ಥೆಯಾಗಬಹುದೇ ಎಂಬುದು ನಮ್ಮ ಯೋಚನೆ.

ಹಾಳಾದ ಚಂದ್ರಶೇಖರ ಇಟ್ಲ ಎಲ್ಲಾ ಕಡೆ ಕಣ್ಣಿಟ್ಟಿದ್ದಾನಂತೆ. ಇಲ್ಲಾಂದ್ರೆ ಅದನ್ನೂ ಏರ್ಪಾಟು ಮಾಡಿಸಿಬಿಡುತ್ತಿದ್ದೆವು ನಾವು. ಅಕ್ಷತೆ ಒಗೆದು ತಯಾರಿಸಿಕೊಳ್ಳಲಿಕ್ಕೆ ನಮ್ಮಲ್ಲಿ ಪವಾಡ ಶಕ್ತಿ ಇಲ್ಲ ಎಂಬುದು ನಮಗಷ್ಟೆ ಗೊತ್ತಿದೆ. ಹಿಂಗಾಗಿ ಅಕ್ಷತೆ ಒಗ್ಯೋದ್ರಿಂದ ಅದು ಸಾಧ್ಯ ಇಲ್ಲ.

ಏನು ಮಾಡೋಣ? ಜಲಸ್ತಂಭನ ವಿದ್ಯೆ ನಮಗೆ ಗೊತ್ತಿಲ್ಲ. ಪಕ್ಕಾ ಗೊತ್ತಿರುವುದು ಛಾಟಕ ವಿದ್ಯೆ ನಡೆಸುವವರ ಮೊಬೈಲ್ ಸಂಖ್ಯೆಗಳು ಮಾತ್ರ. ಅವರೇ ವಾಸಿ. ನೋಡೋಣ, ಯಾವ್ದಾದರೂ ಪ್ರತ್ಯಂಗಿರಾ ಬಗಳಾಮುಖಿ ರಕ್ತಾಕ್ಷಿ ಹೋಮ ಮಾಡ್ತಾರಾ ವಿಚಾರಿಸೋಣ ಎಂದುಕೊಂಡಿದ್ದೇವೆ ನಾವು.

ಹೋಮನೆಲ್ಲ ಇಲ್ಲೇ ಮಾಡೋದಿಲ್ಲ. ಅದನ್ನು ಮಾಡಿಸೋದಕ್ಕೆ ದೇವರ ಅಪ್ಪ ಇದ್ದಾನೆ. ಎಲ್ಲಾದರೂ ವಾಹನಹೋಗದ ಕಾಡಿನ ಮಧ್ಯೆ ಗುಟ್ಟಾಗಿ ಮಾಡ್ತಾರೆ. ಈ ಹಿಂದೆ ಕೋಗಾರ್ ಘಾಟಿ ಮಧ್ಯೆ ಒಳಭಾಗದ ಕಾಡಿನಲ್ಲಿ ಮಾಡಿರಲಿಲ್ವೆ? ಇದೂ ಹಾಗೆ.”.

Thumari Ramachandra

source: https://www.facebook.com/groups/1499395003680065/permalink/1608612579424973/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s