ಸಂಗೀತದ ಹುಚ್ಚೆದ್ದಾಗ ಹಾಡೂ ಒಂದೆ ಹಾಡಿನ ಪಲ್ಲವಿಯೂ ಒಂದೇ

ಸಂಗೀತದ ಹುಚ್ಚೆದ್ದಾಗ ಹಾಡೂ ಒಂದೆ ಹಾಡಿನ ಪಲ್ಲವಿಯೂ ಒಂದೇ

“ಈಗ ನಮ್ಮಲ್ಲಿ ಜನರ ಅಭಾವ ಆಗ್ತಾ ಇದೆ. ನಮ್ಮ ತಾಲೀಬಾನ್ ಕಾರ್ಯಕರ್ತರಲ್ಲಿ ಕೆಲವರು ಇದ್ದಲ್ಲೇ ಮಾಯವಾಗಿದ್ದಾರೆ. ಇನ್ನೂ ಕೆಲವರು “ಬೇಸಿಗೆ ಕೆಲಸ ಅರ್ಜೆಂಟಾಗಿ ಮುಗಿಸಿ ಬರುತ್ತೇನೆ” ಎಂದು ಹೋದವರು ತಮ್ಮನ್ನೂ ಬಂಧಿಸಬಹುದು ಎಂದು ಮರಳಿ ಬರುತ್ತಿಲ್ಲ.

ಊರ್‍ಅಕಡೆಗೆ ಕತೆ ಕೊಚ್ಚಲಿಕ್ಕೆ ಎಲ್ಲಿ ಜಾಗ ಸಿಗುತ್ತದೆ ಎಂದು ನೋಡುತ್ತಿದ್ದೇವೆ ನಾವು. ದುಡ್ಡು ನಾವೇ ಕೊಡೋದಾದ್ರೂ ಪರವಾಗಿಲ್ಲ ವ್ಯವಸ್ಥೆಗೆ ಸಹಾಯ ಮಾಡಿದ್ರೆ ಸಾಕು. ಮತ್ತೆ ಊರ್ತುಂಬ ಅಪಪ್ರಚಾರ ಹೆಚ್ಚಿಸುತ್ತಿದ್ದೇವೆ.

ಹಾವಾಡಿಗರಾದ ನಮಗೆ ’ಸಂಗೀತ’ದ ಹುಚ್ಚೆದ್ದಾಗ ಹಳೆಯ ಸಂಗೀತ ಆದರೂ ಸರಿ, ಹೊಸ ಪಲ್ಲವಿಯೂ ಸರಿ. ಒಟ್ನಲ್ಲಿ ನಮಗೆ ’ವಿಶ್ರಾಂತಿ’ ಸಿಗಬೇಕು ಅಷ್ಟೆ.

ಬಹಳ ಹಿಂದೆ ನಾವು ಲಂಗೋಟಿ ತೊಡುವುದಕ್ಕಿಂತ ಮೊದಲೆ ಮಾಣಿಯೆಂದು ಕರೆಸಿಕೊಳ್ಳುತ್ತಿದ್ದಾಗ ಹಳ್ಳಿಕೊಂಪೆಯೊಂದರ ದೇವಸ್ಥಾನ ಒಂದರಲ್ಲಿ ಒಂದೆರಡು ದಿನ ಪೂಜೆ ಮಾಡಿದ್ವಿ ನಾವು. ಅದನ್ನೆಲ್ಲ ಸಂಶೋಧಿಸಿ ಕರಪತ್ರ ತಯಾರಿಸಿ ಜನರನ್ನು ಒಟ್ಟಾಕಲು ಪ್ರಯತ್ನಿಸುತ್ತಿದ್ದೇವೆ ನಾವು.

ಕಾಗೋಡು ಹೆಸರಿನಂತದ್ದೇ ಇನ್ನೊಂದು ಊರಿದೆ ಸಾಗರದಲ್ಲಿ. ಅಲ್ಲಿ ಮೇ ತಿಂಗಳಲ್ಲಿ ನಮ್ಮ ತಾಲೀಬಾನ್ ನವರು ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿಕೊಂಡಿದ್ದರು. ಈಗ ನಮಗೇ ಅನುಮಾನ, ಯಾಕೆಂದ್ರೆ….ಯಾಕೆಂದ್ರೆ……ಯಾಕೆಂದ್ರೆ ಎಷ್ಟೊತ್ತಿಗೆ ಎಲ್ಲಿ ನಮ್ಮನ್ನ ಎತ್ತಾಕ್ಕೊಂಡೋಗ್ತಾರೋ ಗೊತ್ತಿಲ್ಲ. ಅದ್ಕೇ ಕಾರ್ಯಕ್ರಮ ಮುಂದೂಡಿ ಎನ್ನುತ್ತಿದ್ದೇವೆ ನಾವು.

ನಾವು ಆಸ್ವಾದಿಸಿ ಅನುಭವಿಸಿದ ಮಧುರ ಸಂಗೀತ ಪಲ್ಲವಿಗಳಿಂದ ನಮ್ಮ ಲೌಕಿಕ ಯಾತನೆಗಳೆಲ್ಲ ಶಮನಗೊಂಡಿವೆ. ಇಷ್ಟು ದಿನ ಅಲಕಾಪುರಿಯ ಅಧೀಶ ಕುಬೇರನ ಬೊಕ್ಕಸಕ್ಕೆ ಬರುವಷ್ಟು ಹಣ ಹರಿದುಬರುತ್ತಿತ್ತು. ಆದರೆ ಈಗ ಅದೆಲ್ಲ ನಿಂತು ನಾವು ಮೇಲೆ ಕೆಳಗೆ ನೋಡುತ್ತಿದ್ದೇವೆ.

ಹೀಗೇ ಆದರೆ ಕಾರಿಗೆ ಪೆಟ್ರೋಲು ಹಾಕಿಸಲೂ ತುಟ್ಟಿಯಾಗುವ ದಿನಗಳು ದೂರವಿಲ್ಲ. ಎತ್ತುವಳಿಗೆ ಯಾವ ಪ್ರಾಜೆಕ್ಟು ಹಾಕಿಕೊಂಡರೂ ಜನರ ಬೆಂಬಲ ಸಿಗುತ್ತಿಲ್ಲ. “ಏ ಹೋಗ್ರಿ ಸನ್ಯಾಸಿಯಾದವನಿಗೆ ಅಷ್ಟೆಲ್ಲ ಆಸ್ತಿ ಮಾಡುವ ಚಪಲ ಯಾಕಂತೆ? ಎಲ್ಲಾದ್ರೂ ಗುಡ್ಡ ಹತ್ತಿ ಕುಳ್ತು ತಪಸ್ಸು ಮಾಡಕ್ಕೆ ಹೇಳಿ” ಎನ್ನುತ್ತಾರಂತೆ.

ನಮ್ಮ ಬಾವಯ್ಯನೂ ಕುರಿಗಳ ಬೋಳಿಗೆ ಎಣ್ಣೆ ಹಚ್ಚಿ ವಿದ್ವತ್ಪೂರ್ಣವಾಗಿ ತಿಕ್ಕಿ ತಿಕ್ಕಿ ಕೈನೋವು ಬರಿಸಿಕೊಂಡು ಕೋಪಗೊಂಡು ’ಸಾಮಾನು’ ಕತ್ತರಿಸಿದ ಗಂಡುಹಂದಿ ಕೂಗಿದ ಹಾಗೆ ಕೂಗ್ತಾ ಇದಾನೆ. ಕೋಪಗೊಂಡಾಗ ಅವನ ಮುಖ ನೋಡುವ ಧೈರ್ಯವೂ ನಮಗಿಲ್ಲ. ದೇವರು ಹಾಗೆಲ್ಲ ನೋಡಕೂಡದು. ಯಾಕೆಂದ್ರೆ….ಯಾಕೆಂದ್ರೆ…..ದೇವರು ನಿರ್ಗುಣ. ಅವನು ಎಲ್ಲವನ್ನೂ ಬಿಟ್ಟವನು.

ಮೊದಲೆಲ್ಲ ನಮ್ಮ ಕಾರ್ಯಕ್ರಮ ವರ್ಷಗಟ್ಲೆ ಮೊದಲೇ ಬುಕ್ ಆಗುತ್ತಿತ್ತು. ಬೇಕಾದರೆ ಭಕ್ತ ಕುರಿಗಳು ಕಾಯಬೇಕಿತ್ತು. ಈಗ ಹಾಗಲ್ಲ ನಾವೇ ಬರುತ್ತೇವೆ ಕಾರ್ಯಕ್ರಮ ಮಾಡಿ ಎಂದು ಹೇಳಿದರೂ ಮುಂದಾಗುವವರು ಕಾಣುತ್ತಿಲ್ಲ. ಚೊಂಬು ಹಿಡಿಯುವವರಿಂದ ಹಿಡಿದು ಪಾದಪೂಜೆ ಮಾಡುವವರ ವರೆಗೂ ಕಣ್ಣಿನಲ್ಲಿ ಏನೇನೋ ಭಾವನೆಗಳು ಕಾಣಿಸ್ತಾ ಇವೆ ನಮಗೆ.

ಪಾದಪೂಜೆಗೆ ಕಾಸು ಹಾಕದೇ ಇದ್ರೂ ಪರವಾಗಿಲ್ಲ ಕತೆ ಕರ್ಚು ನಮ್ಮದೇ ಆದರೂ ತೊಂದ್ರೆಯಿಲ್ಲ ಫೋಟೋ ವೀಡಿಯೋ ಮಾಡಿಸ್ಕೆಳಕಾದರೂ ಅವಕಾಶ ಕೊಡಿ ಅಂದ್ರೆ ಪ್ರತಿ ಊರಿನಲ್ಲೂ ಅರ್ಧ ಜನ ಬೇಡ ಅಂತಾರಂತೆ.

ಅತ್ಲಾಗಿ ಅವನ್ಯಾರೋ ಅಚ್ಚುಗಿಚ್ಚು ಎಲ್ಲ ಗಚ್ಚಾಗಿ ಸರಿಯಾಗಿದೆ ಶೀಘ್ರವೇ ಹಾಕ್ತೀವಿ ಅಂತ ಬೇರೆ ಗುಟರ್‍ತಾ ಇದಾನೆ. ಹೊಳೆಯುವ ನಕ್ಷತ್ರಗಳನ್ನೂ ಪ್ರಕಾಶಮಾನವಾದ ’ಸೂರ್ಯಚಂದ್ರ’ರನ್ನೂ ಸರಿಯಾಗಿ ನೋಡ್ಲಿಕ್ಕೇ ಆಗ್ತಾ ಇಲ್ಲ. ವಿಶ್ರಾಂತಿ ಸರಿಯಾಗಿ ಆಗ್ತಾ ಇಲ್ಲ. ಅದಕ್ಕೇ ಹೇಳ್ದೆ ಕೇಳ್ದೆ ಕಂಡಲ್ಲೆಲ್ಲ ವಿಶ್ರಾಂತಿ ತಗೊಳೊದಕ್ಕೆ ನೋಡ್ತೇವೆ ನಾವು.

ಒಂದೊಂದ್ಸಲ ಅನ್ಸೋದಿದೆ. ನಾವು ’ಇಷ್ಟೆಲ್ಲ ಮಾಡಿದ್ವಿ’ ನಮಗೆ ಸಮಾಜ ಏನು ಕೊಡ್ತು? ನಾವು ಸಮಾಜದ ಹಲವು ಮಹಿಳೆಯರಿಗೆ ಕೊಟ್ಟ ’ಮುಕ್ತ ಸ್ವಾತಂತ್ರ್ಯ’ಕ್ಕೆ ಸಮಾಜ ನಮಗೆ ಕೊಡುವ ಪ್ರತಿಫಲ ಇದೇನಾ? ಬೇಡಬೇ ಬೇಡ ಅನ್ನಿಸ್ತದೆ ನಮಗೆ. ಆದರೂ ಇದ್ದಕ್ಕಿದಲ್ಲೆ ಹಾವು ಹೆಡೆಯೆತ್ತಿ ಬುಸ್ ಅನ್ನೋದಿದ್ಯಲ್ಲ. ಅದ್ಕೊಂದಕ್ಕಾಗಿ ಸಾಯ್ತಾ ಇದೇವೆ ನಾವು.

ನಾವು ಪರಪ್ಪನವನಕ್ಕೆ ಹೋದ್ರೆ ಎಲ್ಲಿ ನಮಾಮಿ ಗ್ರೂಪಿನ ಜನ ನಮ್ಮನ್ನು ಬಿಟ್ಟು ಹೋಗ್ತಾರೋ ಎಂಬ ಭಯ ಮತ್ತು ಆತಂಕ ನಮ್ಮಲ್ಲಿದೆ. ನಮ್ಮ ವಿದ್ವಾನ್ ಬಾವಯ್ಯ ಅವರಿಗೆ ಹಚ್ಚಿದ್ದು ವಿದೇಶೀ ಮೂಲದ ಬೋಳೆಣ್ಣೆ. ಅವರಿಗೆಲ್ಲ ಕೂದಲು ಕಮ್ಮಿ ಇದ್ದಿದ್ರಿಂದ ದೇವರು ಕೊಟ್ಟ ಗಟ್ಟಿ ಹಣೆಯಿಂದ್ಲೇ ಬದುಕ್ತಾ ಇರೋ ಜನ ಅವರು. ನಮ್ಮ ಬಾವಯ್ಯನಿಗೆ ಅಂತವರು ಸಿಕ್ಕಿದ್ರೆ ಕೇಳಬೇಕೆ?

ನಮ್ಮ ಒತ್ತಾಯಕ್ಕೆ ಫೋನಿನಲ್ಲಿ ಹರುಕು ಪುರ್ಕು ಹಿಂದಿಯಲ್ಲಿ ನಾವು ಮಾತನಾಡಿದಾಗ ಉತ್ತರಿಸುತ್ತಾರೆ. ಆದರೂ ಅವರಿಗೆ ನಮ್ಮ ಮೇಲೆ ಮೊದಲಿನ ಗೌರವ ಇಲ್ಲ ಅನ್ನೋದು ಗೊತ್ತಾಗ್ತಾ ಇದೆ. ಅವರೆಲ್ಲರ ಮನೆಲೂ ರಾಟೆ ತಿರುಗಿಸಿ ದಾರ ಹೊಸೆಯಲು ಯತ್ನಿಸಿದ್ದೇವೆ ನಾವು. ನಮ್ಮ ಬಾವಯ್ಯನ ಪ್ರಯತ್ನಕ್ಕೆ ನಾವೂ ಸಾಥ್ ಕೊಡಬೇಕಲ್ಲ?

ಉತ್ತರದ ಮಹಿಳೆಯರಲ್ಲಿ ಕೆಲವರು ಬಹಳ ಧಾರಾಳಿಗಳು. ಅವರು ಬಹಳ ಮುಕ್ತ ಮನಸ್ಸಿನವರು. ಎಲ್ಲಿಯೇ ಸ್ಪರ್ಶಿಸಿದರೂ ಒದೆಯದ ಬಡಗೋವಿನಂತವರು. ಅದನ್ನೆಲ್ಲ ಅನುಭವಕ್ಕೆ ತೆಗೆದುಕೊಂಡಿದ್ದೇವೆ ನಾವು. ” ಪರಮಾತ್ಮ ಕಾ ಪರಿಪೂರ್ಣ್ ಕೃಪಾ ಕಟಾಕ್ಷ್ ಮಿಲತಾ ಹೈ ಆಪ್ಕೋ” ಎಂದರೆ ಸಾಕು ಮೈಗೆ ಅಂಟಿಕೊಂಡೇ ಸಮಾಧಾನ ನೀಡುತ್ತಿದ್ದರು ಅವರೆಲ್ಲ.

ದೇವರನ್ನು ಭೂಮಿಯಲ್ಲಿ ಕಾಣುವುದು ಬಹಳ ಕಷ್ಟ. ಅನಾಯಾಸವಾಗಿ ತಾವು ಸಾಕ್ಷಾತ್ ದೇವರನ್ನೆ ನೋಡುತ್ತಿದ್ದೇವೆ ಎಂದುಕೊಂಡು ನಮ್ಮ ಕುಲಪತಿ ವಿದ್ವಾನ್ ಬಾವಯ್ಯನ ಪೌರೋಹಿತ್ಯದ ಅಧ್ವರ್ಯುತನದಲ್ಲಿ ಎರಡೂ ಕಿವಿಗಳ ಮೇಲೆ ಪ್ಲಾಸ್ಟಿಕ್ ಹೂವುಗಳನ್ನು ಇಟ್ಟುಕೊಂಡಿದ್ದಾರೆ.

ಉತ್ತರದವರೂ ನಮ್ಮ ಕೈಬಿಟ್ಟರೆ ನಮ್ಮ ಕಾರುಗಳ ಗತಿಯೇನು? ಮಿಥ್ಯಾನಂದನಂತೆ ದೇಶ ವಿದೇಶಗಳಿಗೆ ಹಾರುತ್ತ ಮತ್ತು ಅಲ್ಲೆಲ್ಲ ಹಾರುತ್ತ ಹಾವಾಡಿಸುತ್ತ ಎಲ್ಲ ಮಹಿಳೆಯರಿಗೂ ’ವಿಶ್ವರೂಪದರ್ಶನ’ವನ್ನು ಕರುಣಿಸುವ ನಮ್ಮ ಪ್ಲಾನಿನ ಕತೆಯೇನು?

ಬಾವಯ್ಯ ಬೋಳೆಣ್ಣೆ ಹಿಡಿದು ಎಲ್ಲೋ ಬೇಟೆಗೆ ಹೋಗಿದ್ದಾನೆ. ಬರಲಿ ಏನಾಗ್ತದೆ ಎಂದು ನೋಡೋಣ. ಬರೇ ಕಾಮ….ಬರೇ ಕಾಮ”

Thumari Ramachandra

source: https://www.facebook.com/groups/1499395003680065/permalink/1608278666125031/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s