ಕವಳದ ಗೋಪಣ್ಣ ’ಸನ್ಯಾಸಿ’ ಆಗ್ತಾನಂತೆ

ಕವಳದ ಗೋಪಣ್ಣ ’ಸನ್ಯಾಸಿ’ ಆಗ್ತಾನಂತೆ

ಕವಳದ ಗೋಪಣ್ಣ ಹೇಳಿದ್ದನ್ನು ಅವನದೇ ಆಡುಭಾಷೆಯಲ್ಲಿ ಹೇಳಿದರೆ ಎಲ್ಲರಿಗೂ ಅರ್ಥವಾಗಲಿಕ್ಕಿಲ್ಲ. ತಾನೇಕೆ ಸನ್ಯಾಸಿಯಾಗಬಾರದು ಎಂಬುದು ಅವನ ಪ್ರಶ್ನೆ.

ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕೆ ಜನ ಸಿಗೋದಿಲ್ಲ. ದನಗಳನ್ನು ಸಾಕೋದು ಕಷ್ಟವಾಗಿದ್ರಿಂದ ಗೊಬ್ಬರದ ಸಮಸ್ಯೆಯೂ ಇದೆ. ಸಕಾಲಕ್ಕೆ ಮಳೆಬೀಳದೆ ಕಾಲಮಾನವೇ ಬದಲಗ್ತಾ ಇದೆ. ಬಿದ್ರೆ ಬಿತ್ತು ಇಲ್ಲಾಂದ್ರೆ ಇಲ್ಲ. ನೇಪಾಳದಲ್ಲಿ ನೋಡದ್ರೆ ಭೂಕಂಪ.

ಇದನ್ನೆಲ್ಲ ನೋಡಿ ಗೋಪಣ್ಣನಿಗೆ ವೈರಾಗ್ಯ ಹುಟ್ಟಿಬಿಟ್ಟಿದೆ.

“ಅಲ್ದನ ರಾಮು ಬುಸ್ ಹಾಂವನವ ಊರಕಡಿಗೆ ಬಂದ್ರೆ ಈಗ ಎಷ್ಟೋ ಕಡಿಗೆ ಕಾಡಾನೆ ಗುಂಪು ಊರೊಳಗೆ ನುಗ್ಗದ ರೀತಿಲಿ ನೋಡ್ತಾರ ಮಾರಾಯ. ಇನ್ನಿನ್ನು ಓಡ್ಸದೊಂದೆ ಬಾಕಿ ಇದ್ದು.

ಮೊನ್ನೆ ಇತ್ಲಾಗಿ ಬೆಂಗಳೂರಿಂದ ಊರ್ಕಡಿಗೆ ಹೋಯ್ದ ಹೇಳಿ ಕೇಳಿದ್ದಿ. ಅಲ್ಲೆಲ್ಲೋ ಒಂದ ಕಡಿಗೆ ಎರಡು ತಾಸು ’ವಿಶ್ರಾಂತಿ’ ಇತ್ತಡ. ’ವಿಶ್ರಾಂತಿ’ ಗೊತ್ತಿದ್ದಲ? ಹಾಂ…ಅದೇಯ.

ಪಾಪ ಕುರಿಮೆಂದೆಯವೆಲ್ಲ “ದರ್ಶನ ಭಾಗ್ಯ” “ದರ್ಶನ ಭಾಗ್ಯ” ಹೇಳ್ಕೆಂಡು ಕುಣಿತಾ ಇದ್ದಿದ್ವಡ. ಲಾಲೂ ಪ್ರಸಾದ್ ಯಾದವು ಮುಲಾಯಂ ಸಿಂಗ್ ಯಾದವು ಎಲ್ಲರಿಗೂ ಸರ್ಕಾರ ಮಾಡಲೆ ಬೆಂಬಲ ಕೊಡೊ ಜನ ಅವರನ್ನ ಗೆಲ್ಸೋ ಜನ ಇಲ್ಯನ? ಇದೂ ಒಂದ್ ರೀತಿ ಹಾಂಗೇಯ.

ಸನ್ಯಾಸಿ ಅಗ್ಬುಟ್ರೆ ಆರಾಮು ತಗಳ. ಹಾವಿನಾಟ ಬೇಕಾದ್ರೂ ಆಡ್ಲಕ್ಕು ಗೋವಿನಾಟ ಬೇಕಾದ್ರೂ ಆಡ್ಲಕ್ಕು. ಎಲ್ಲಾ ನಮಸ್ಕಾರ ಹಾಕ್ಕೆಂಡು ಕಾಣಿಕೆ ಹಾಕ್ತ. ಒಬ್ಬ ಬಾವಯ್ಯನ್ನ ಜೊತಿಗಿಟ್ಕಂಡ್‍ಬುಟ್ರೆ ಬೇಕ್ ಬೇಕಾದ ಯೋಜನೆ ಮಾಡ್ಕೆಂಡು ಹಣ ಯಾವ ರೀತಿ ಬೇಕಾದ್ರೂ ಎತ್ತಲಡ್ಡಿಲ್ಲೆ.

ಯಾವ್ದೂ ಟ್ಯಾಕ್ಸು ಪಾಕ್ಸು ಎಂತದೂ ಇಲ್ಲೆ. ಆರಾಮಾಗಿ ಎರಡು ಹೊತ್ತು ಸ್ನಾನ ಹೊಡ್ಕಂಡು ಬೇಕಾದಾಗೆಲ್ಲ ’ಏಕಾಂತ’ ಮಾಡ್ಕೆಂಡು ಹಾಯಾಗಿ ಇದ್ಬುಡದು ಹೆಂಗೆ?

ಆದರೆ ಯನಗೊಂದು ಕಷ್ಟಿದ್ದು ಮಾರಾಯ. ಯನಗೆ ತಂಬಾಕು ಅಂದ್ರೆ ಜೀವ. ಕವಳಕ್ಕೆ ಪಲ್ಯಕಾಪಷ್ಟೆ ತಂಬಾಕು ತಂದಿಟ್ಕತ್ತಿ ಆನು. ಬೀನ್ಸ್ ಕೊಚ್ಚಿದ ಹಾಗೆ ಕೊಚ್ಚಿಟ್ಕತ್ತಿ. ಈಗ ಹಂಸ ಮಧು ಎಲ್ಲ ಬೈಂದನ. ಎನಗದ್ಕಿಂತಾ ಬಾಂದ್ಲಿ ತಂಬಾಕೆ ಇಷ್ಟ್ವ.

ಮಿಕ್ಕಿದ್ದೆಲ್ಲಾ ಹೆಂಗೂ ಏಕಾಂತದಲ್ಲಿ ಆಗೋಗ್ತನ, ತಂಬಾಕಿನ ಕವಳವೊಂದು ಬಹಿರಂಗದಲ್ಲೂ ಬಿಡಲೆ ಸಾಧ್ಯ ಇಲ್ಲೆ ಯನಗೆ. “ಶ್ರೀಸಂಸ್ಥಾನದವರು ಉತ್ತಮವಾದ ಕವಳ ಹಾಕಿಕೊಂಡಿದ್ದರಿಂದ ಇಂದಿನ ಪ್ರವಚನವನ್ನು ನಾಳೆಗೆ ಮುಂದೂಡಲಾಗಿದೆ. ಭಕ್ತ ಮಹಿಳೆಯರು ಇಂದು ಇಲ್ಲೇ ಇದ್ದು ಏಕಾಂತ ದರ್ಶನವನ್ನು ಪಡೆಯಬಹುದು” ಅಂತ ಮೈಕಗೆ ಹೇಳಿಸ್ಬುಡದು ಹೆಂಗೆ?”

ನಾನು ಹೇಳಿದೆ, “ಗೋಪಣ್ಣಾ, ಅದು ಅಷ್ಟೆಲ್ಲ ಸುಲಭದ ಕೆಲಸ ಅಲ್ಲ ಮಾರಾಯ. ನಿಂಗೆ ಒಳಗಡೆಗೆ ಒಂದ್ ರೀತಿ ಹೊರಗಡೆಗೆ ಶ್ರೀರಾಮಚಂದ್ರನ ರೀತಿ ಇರಲೆ ಬತ್ತಿಲ್ಲೆ. ಕ್ಯಾಮರಾಕ್ಕೆ ನಗ್ತ ನಗ್ತ ಪೋಸ್ ಕೊಡಲೂ ಬತ್ತಿಲ್ಲೆ. ಎಂತಾರು ವಿಷಯ ನೆನಪಾದ್ರೆ ಮೈಮೇಲೆಲ್ಲ ಕವಳ ಪುರ್ ಗುಡಸ್ಕೆಂಡ್ಬುಡ್ತಿ.

ಕಾವಿ ಮೇಲೆ ಕವಳ ಬಿದ್ರೆ ತೀರಾ ಗೊತ್ತಾಗದೆ ಇದ್ರೂ ಜನ ಅದನ್ನೆ ದೊಡ್ಡ ಇಶ್ಯೂ ಮಾಡ್ತ ಮಾರಾಯ. ಮತ್ತೆ ನಿಂಗೆ ಹಾಂವ್ ಬಿಡೊ ಅಭ್ಯಾಸವೂ ಇದ್ದಂಗಿಲ್ಲೆ. ಇದ್ದನ ಮತೆ? ಹಾಂವ್ ಬಿಡದೂ ಒಂದ್ ಕಲೆ. ಅದು ಎಲ್ಲರಿಗೂ ಬತಲ್ಲೆ. ಅದಕ್ಕೆ ಅಂತಂತಾ ಕಲಾವಿದರೇ ಆಯಕು.

ಹಾಂವ್ ಬಿಡ್ತಾ ಇದ್ದ ಮೇಲೆ ತಿಂಗಳಿಗೊಂದ ಸಲ ಇಂಜೆಕ್ಷನ್ ಬೇರೆ ತಗಳವು. ಮೇಲಾಗಿ ಸುಳ್ಳು ಸತ್ಯ ಮತ್ತು ನಿಜವಾದ ಸತ್ಯ ಹೇಳಿ ಸತ್ಯದಲ್ಲೆ ಎರಡು ಭಾಗ ಸ್ಟಡಿ ಮಾಡ್ಕೆಳವು.

ನಿನ್ನ ಪಾಪದ ಮುಖ ನೋಡಿರೆ ಹೆಣ್ಣ ಮಕ್ಕಳು ಬರದೂ ಕಷ್ಟ. ನೀನೇ ಖುದ್ದಾಗಿ ಕಣ್ ಹೊಡೆದು ಕರೆದ್ರೂ ಎಲ್ಲರೂ ಓಡಿ ಹೋಗ್ತ ಬಿಟ್ರೆ ’ಏಕಾಂತ’ಕ್ಕೇನ್ ಬರದಿಲ್ಲೆ. ಮೇಲಾಗಿ ಬಾಗಲಗೆಲ್ಲ ಬ್ರಹ್ಮರಾಕ್ಷಸ ಇದ್ನ ಎಂತು? ಎಲ್ಲೆಲ್ಲಿ ಯಾರ್‍ಯಾರಿದ್ದ? ಯಾವ ರೀತಿ ಹಾಂವ್ ಬಿಟ್ರೆ ಏನ್ ಪರಿಣಾಮ ಆಗ್ಲಕ್ಕು ಇದೆಲ್ಲ ಐಡಿಯಾ ಮಾಡ್ಕಳಕೆ ಬರವು.

ಕಿತಾಪತಿ ಬಾವಯ್ಯ ತಾನು ಮೊದಲು ಅಂದ್ರೆ ಅವಂಗೆ ಮೊದಲು ಹಾರಕ್ಕೆ ಬಿಡವು. ನಂತ್ರ ನೀ ಹಾರವು. ನಿಂಗಿದೆಲ್ಲ ಆಗದಲ್ಲ. ಸುಮ್ನೇ ಕಷ್ಟವೋ ಸುಖವೋ ಇಷ್ಟದಿನ ಇದ್ದಂಗೆ ಇದ್ಬುಡು”

“ನೀ ಏನೇ ಹೇಳು ರಾಮು, ಆನೊಂದ್ ಸಲ ಪ್ರಯತ್ನ ಮಾಡೋದ್ ಮಾಡ್ತಿ. ಸಕ್ಸೆಸ್ ಆದರೆ ಆಗಲಿ. ಇಲ್ದಿದ್ರೆ ಎಲ್ಲಾರ್ಜೊತಿಗೂ ರಾಜಿ ಮಾಡ್ಕೆಂಡು “ಮಾಜಿ ಶ್ರೀಸಂಸ್ಥಾನ” ಆಗ್ಬುಡ್ತಿ. ಮಾಜಿ ಆದ್ರೂ ಒಂದ್ ರೀತಿ ಮಾಜಿ ಎಂ.ಎಲ್.ಎ ಇದ್ದಂಗೆ ಇರ್ತು ಮಾರಾಯ. ಹೀಂಗಾಗಿ ಯನಗೆ ನೀನು ಇಂಗ್ಲೀಷು ಹಿಂದಿ ಹೇಳ್ಕೊಡವು. ಈಗಲೇ ಕತೆಯೆಲ್ಲ ಹೊಡ್ಯದಿಲ್ಲೆ ಅದನ್ನ ಆಮೇಲ್ ನೋಡ್ಕಳನ.”

ಗೋಪಣ್ಣ ನನ್ನ ಸಲಹೆಯ ಜೊತೆಗೆ ರಾಜಿಯಾಗುವ ಮೂಡ್‍ನಲ್ಲಿ ಇದ್ದ ಹಾಗಿರಲಿಲ್ಲ. “ಆಯ್ತಪ್ಪ ನಿನ್ನಿಷ್ಟ” ಅಂತ ಸ್ಕೈಪ್ ಆಫ್ ಮಾಡಿದೆ.

Thumari Ramachandra

source: https://www.facebook.com/groups/1499395003680065/permalink/1607249146227983/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s