ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್

ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್

“ಯಾವ ಮಂತ್ರವನ್ನು ಉಪಯೋಗಿಸಿದರೆ ಶೀಘ್ರ ಫಲದೊರೆಯುತ್ತದೆ ಎಂದು ನೋಡುತ್ತಿದ್ದೇವೆ ನಾವು. ಸಾಗರದ ನಮ್ಮ ಸಮಾಜಕ್ಕೆ ನಮ್ಮ ಹಳದೀ ತಾಲಿಬಾನ್ ಹೀಗೆ ಹೇಳಿದೆ, “ನೋಡ್ರಪಾ ನಿಂಗಳ ಕೈಲಿ ಎಷ್ಟೆಷ್ಟಾಗ್ತೊ ಮಾಡಿ ಹನುಮಾನ ಚಾಲೀಸಾ. ಒಟ್ಟು ಹತ್ತುಲಕ್ಷ ಮಾಡವು. ಇವತ್ತು ಅಂದರೆ ಇವತ್ತೇ ಮುಗದ್ರೆ ಬರ್ತಿ ಒಳ್ಳೇದು. ಆ ರಾಗ ಈ ರಾಗ ಅಂತಿಲ್ಲೆ. ಯಾವ್ದೋ ಒಂದು ರಾಗ ಹಿಡ್ಕಂಡು ಮಾಡಿ ಲೆಕ್ಕಕೊಡಿ. ಹಾಗಂತ ಅಪ್ಪಣೆ ಆಯ್ದು.”

’ಅಪ್ಪಣೆ’ ’ಅರ್ಪಣೆ’ ಎಂಬ ಪದಗಳ ಮೌಲ್ಯವನ್ನೆಲ್ಲ ಕಳೆದುಬಿಟ್ಟಿದ್ದೇವೆ ನಾವು. ನಮ್ಮ ಹಾವಾಡಿಗತನದಿಂದ ಹಳ್ಳ ಹಿಡಿದ ಸಂಸ್ಥಾನದ ವ್ಯವಸ್ಥೆಯನ್ನು ಪುನಾರಚಿಸಿಕೊಳ್ಳಲಿಕ್ಕೆ ಒದ್ದಾಡುತ್ತಿದ್ದೇವೆ. “ಅಪ್ಪಣೆಯಾಗಿದೆ” ಎಂದರೆ ಈಗೀಗ ಯಾರೂ ಬೆಲೆ ಕೊಡುತ್ತಿಲ್ಲ. “ಹೀಂಗೆ ವಿನಂತಿ ಮಾಡ್ಕೈಂದ” ಅಂದ್ರೆ ಸ್ವಲ್ಪನಾದ್ರೂ ಕೆಲಸವಾದೀತು.

ದಶಕದ ಹಿಂದೆ “ಅಪ್ಪಣೆಯಾಗಿದೆ” ಎಂದರೆ ಸಾಕಾಗಿತ್ತು. ಎಲ್ಲರೂ ಭಕ್ತಿ ಶ್ರದ್ಧೆಯಿಂದ ಹೇಳಿದ್ದನ್ನು ಮಾಡ್ತಿದ್ರು. ಈಗ “ಅಪ್ಪಣೆಯಾಗಿದೆ” ಅಂದ್ರೆ “ಅಪ್ಪಣೆ ಮಾಡ್ತ ಅಪ್ಪಣೆಯ…ಇಂವನ ಹಾದರಕ್ಕೆ ನಾವು ಸಾಯವು” ಎಂದು ಗೊಣಗಿದವರೂ ಇದ್ದಾರಂತೆ.

ಉರಿಮೂತ್ರದ ನೋವಿನ ಉಪಶಮನಕ್ಕೆ ಎಳನೀರು, ಶರಬತ್ತು, ಮಜ್ಜಿಗೆ, ನೀರು ಇನ್ನೇನೇನೋ ಕಂಡಿದ್ದನ್ನೆಲ್ಲ ಕುಡಿದರಂತೆ ಅನ್ನೋ ಹಾಗೆ ನಮ್ಮ ಪರಪ್ಪನವನ ವಾಸವನ್ನು ತಪ್ಪಿಸಿಕೊಳ್ಳಲಿಕ್ಕಾಗಿ ನಾವು ಮಾಡದೇ ಬಿಟ್ಟ ಕಸರತ್ತಿಲ್ಲ. ವೈದಿಕ ಮತ್ತು ಅವೈದಿಕ[ತಾಂತ್ರಿಕ] ಎರಡೂ ಮಾರ್ಗಗಳಲ್ಲಿ ಸಿಗುವ ಎಲ್ಲಾ ವಿಧಾನಗಳನ್ನು ನಡೆಸುತ್ತಿದ್ದೇವೆ ನಾವು.

ಹನುಮಾನ್ ಚಾಲೀಸಾ ಎಂಬುದು ಉತ್ತರಭಾರತದಲ್ಲಿ ಹೆಚ್ಚಿಗೆ ಬಳಸಲ್ಪಡುವ ಒಂದು ವಿಧದ ಹಾಡು. ಅದರಲ್ಲಿ ಆಂಜನೇಯನನ್ನು ಹಲವಾರು ವಿಧದಲ್ಲಿ ಹೊಗಳಿ ತಮಗೆ ರಕ್ಷಣೆ ಒದಗಿಸು ಎಂದು ಪ್ರಾರ್ಥಿಸಲಾಗುತ್ತದೆ. ಗೋಸ್ವಾಮಿ ತುಲಸೀದಾಸರು ಅದನ್ನು ರಚಿಸಿದರಂತೆ. ಅದು ಬಹಳ ಪರಿಣಾಮಕಾರಿ ಎಂದು ಉತ್ತರದವರು ಹೇಳಿದರು. ಅದಕ್ಕೆ ಅದನ್ನು ಜಪಿಸಲು ಹೇಳಿದ್ದೇವೆ.

ನಮ್ಮ ಸಲುವಾಗಿ ಅನೇಕ ಕುರಿಗಳು ಕಳೆದ ೬-೭ ತಿಂಗಳಿಂದ ಸರಿಯಾಗಿ ನಿದ್ರೆ ಊಟ ಮಾಡದೆ ಜಪ ತಪ ನಡೆಸುತ್ತಿವೆ. ನಾವು ಹೇಳಿದ ಮತ್ತು ಅವುಗಳಿಗೆ ತೋಚಿದ ಎಲ್ಲ ಜಪತಪ ಪೂಜೆ ಪುನಸ್ಕಾರಗಳನ್ನು ಮಾಡುತ್ತ ನಮ್ಮ ಮರ್ಯಾದೆ ಕಾಪಾಡುವಂತೆ ಪ್ರಾರ್ಥಿಸುತ್ತಿವೆ.

ನೀವೀಗ ಕೇಳಬಹುದು. ದೇವರಿಗೆ ತನ್ನಲ್ಲೇ ತಾಕತ್ತಿಲ್ಲವೇ? ಬೇರೆ ಜಪತಪ ಯಾಕೆ ಎಂದು. ರಾಮಾಯಣದಲ್ಲಿ ರಾವಣನನ್ನು ವಧಿಸುವ ಮೊದಲು ಅಗಸ್ತ್ಯ ಮುನಿಗಳು ಉಪದೇಶಿಸಿದ ಆದಿತ್ಯ ಹೃದಯವನ್ನು ಪಠಿಸಿದನಂತೆ. ಅಂದಹಾಗೆ ನಮ್ಮ ತಾಲೀಬಾನಿಗೆ ಮುಂದಿನ ಅಪ್ಪಣೆ “ಏ ಎಲ್ಲರಿಗೂ ಆದಿತ್ಯ ಹೃದಯ ಮಾಡದಕ್ಕೆ ಹೇಳ್ರಪ್ಪಾ” ಅಂತ.

ನಮ್ಮ ಪವಾಡವನ್ನು ಮಾತ್ರ ನೀವು ಮೆಚ್ಚಲೇಬೇಕು. ಅವನ್ಯಾರೋ ತುಮರಿ ರಾಮಚಂದ್ರ ಅನ್ನೋ ಬ್ರಹ್ಮರಾಕ್ಷಸ ನಮ್ಮ ಬಗ್ಗೆ ಬಹಳ ಬರೆದಿದ್ದಾನಂತೆ. ಅದಕ್ಕೆ ನಾವು ಶಾಪ ಕೊಟ್ಟುಬಿಟ್ಟಿದ್ದೇವೆ. ಶಾಪ ಕೊಟ್ಟಿದ್ದೇ ತಡ ಆತನ ಲ್ಯಾಪ್ ಟಾಪು ಕ್ರಾಷ್ ಆಗಿಬಿಟ್ಟಿತಂತೆ. [ಅಮೇಲೆ ಮತ್ತೆ ಸರಿಯಾಯ್ತಂತೆ ಅದು ಇಲ್ಲಿ ಬೇಡ]

ನಮ್ಮ ಕುರಿಗಳಿಗೆ ದೊಡ್ಡ ದೊಡ್ಡ ಆಸೆ ಹುಟ್ಟಿಸಬೇಕೆಂಬುದು ನಮ್ಮ ಇಚ್ಛೆ ಅದಕ್ಕೆ ಕೋಟಿಕೋಟಿಗಳ ಹೊಸ ಹೊಸ ಪ್ರಾಜೆಕ್ಟ್ ಮುಂದೆ ಇಟ್ಟಿದ್ದೇವೆ. ಅದನ್ನು ನೋಡಿಕೊಂಡಾದರೂ ಅವರೆಲ್ಲ ಸೇರಿ ನಮ್ಮ ಪರಪ್ಪನವನ ವಾಸವನ್ನು ತಪ್ಪಿಸಬಹುದು ಎಂಬುದು ನಮ್ಮ ಒಳಗುಟ್ಟು.

ಅದೇನೋ ಹಾಡುಗಳ ಸೀಡಿಯಂತೆ, ನಮ್ಮ ಹಳದೀ ತಾಲಿಬಾನಿನವರು ಬಿಡುಗಡೆ ಮಾಡಲು ಅಡ್ಡಿಪಡಿಸುತ್ತೇವೆ ಅಂತಿದ್ರು. ಆಮೇಲೆ ಮತ್ತೆ ಬೇರೆ ಕೇಸು ಜಡೀತಾರೆ ಅಂತ ನಾವೇ ಬೇಡ ಅಂದ್ವಿ. ನಮ್ಮ ವಿರುದ್ಧ ಯಾರೂ ಸೊಲ್ಲೆತ್ತಕೂಡದು. ಏನಾದರೂ ಹೇಳಿದ್ದಾರೆಂದರೆ ಅವರು ಜೀವನಪೂರ್ತಿ ಕಷ್ಟದಲ್ಲೇ ಕಳೆಯುವಂತೆ ಮಾಡುತ್ತಾರೆ ನಮ್ಮ ತಾಲೀಬಾನ್ ಭಕ್ತರು.

ನಮ್ಮ ವಿರೋಧಿಗಳಾದ ಆ ಹುಲುಮಾನವರಿಗೆ ನಾವು ಹೇಳುವುದೇನಿದೆ? “ಕಾಮಾತುರಾಣಾಂ ನ ಭಯಂ ನ ಲಜ್ಜಾ” ಎಂದು ಶಂಕರ ಭಗವತ್ಪಾದರು ಹೇಳಿದ್ದನ್ನು ಪ್ರಾಕ್ಟಿಕಲ್ ಮಾಡಿ ತೋರಿಸುತ್ತಿರುವ ಸಾಧಕರು ನಾವು. ಇದನ್ನು ಅರ್ಥಮಾಡಿಕೊಳ್ಳಲಾರದ ಜನರಿಗೆ ಏನೆನ್ನೋಣ?

ವಿ.ಸೂ. ನಿಮ್ಮಲ್ಲಿ ಮುಖಂಡರಿಗೆ ಯಾರಿಗಾದರೂ ಪಕ್ಷಾಂತರ ಮಾಡುವ ಇಚ್ಛೆಯಿದ್ದರೆ ಬರಬಹುದು. ನಿಮ್ಮ ಕರ್ಚಿಗೆ ವ್ಯವಸ್ಥ ಮಾಡಲಾಗುತ್ತದೆ. ನಿಮ್ಮಲ್ಲಿ ವಿಶೇಷ ಫಲವುಳ್ಳ ಯಾವುದಾದರೂ ಮಂತ್ರವಿದ್ದರೆ ತಿಳಿಸಿ. ಇದು ಸಂಸ್ಥಾನದ ಮರ್ಯಾದೆ ಪ್ರಶ್ನೆ. ಸಂಸ್ಥಾನ ಉಳಿದರೆ ನೀವೂ ಸಹ ಉಳಿಯುತ್ತೀರಿ.

ಅವನ್ಯಾರೋ ಚಂದ್ರಶೇಖರ ಇಟ್ಲನಂತೆ. ಬೆಂಗಳೂರು, ಚೆನ್ನೈ, ಹೈದರಾಬಾದು ಸುತ್ತಮುತ್ತಲ ಎಲ್ಲ ಏರ್ ಪೋರ್ಟಿನಲ್ಲೂ ಅವನ ಜನರನ್ನು ಇಟ್ಟಿದ್ದಾನಂತೆ. ನಮಗೆ ಹಾರಿ ಹೋಗಿ ತಪ್ಪಿಸಿಕೊಳ್ಳಲೂ ಆಗುತ್ತಿಲ್ಲ. ಈಗೇನಿದ್ದರೂ ಕೇರಳದ ಮಾಂತ್ರಿಕರೇ ಗತಿ. ಬರನಾಡಿಗ ಜನರಿಗೆ ಹೇಳಿ ಅವರನ್ನೆಲ್ಲ ಕರೆಸಿಕೊಳ್ತೇವೆ. ದೂರದಲ್ಲಿರುವವರನ್ನು ಕರೆಸಬೇಕೆಂದರೆ ಈ ಬರನಾಡಿಗರು ಬಹಳ ಹೆಲ್ಪ್ ಮಾಡ್ತಾರೆ.

ಮತ್ತೇನಿಲ್ಲ ಈಗ ಮಲ್ಲಿಕ ತೋತಾಪುರಿ ನೀಲಂ ಸೀಸನ್ ಬಂದಿದೆ. ಮತ್ತೆ ನಳನಳಿಸುವ ರಸಭರಿತ ಬಣ್ಣಬಣ್ಣದ ರಸಗುಲ್ಲಗಳಂತ ಹಣ್ಣುಗಳು. ಈ ಜನ್ಮದಲ್ಲಿ ಮತ್ತೆ ನಮಗೆ ಅವುಗಳನ್ನೆಲ್ಲ ರುಚಿನೋಡಲು ಸಾಧ್ಯವಾಗುತ್ತದೋ ಇಲ್ಲವೋ ಗೊತ್ತಿಲ್ಲ.

ವಸಂತಮಾಸದಲ್ಲಿ ಹಣ್ಣುಗಳನ್ನು ಕಂಡಾಗ ಹಾವುಗಳೂ ಹೊರಗೆ ಬರುವುದು ಹೆಚ್ಚು. ಮನ್ಮಥನ ಬಾಣಕ್ಕೆ ಇಡೀ ಪರಿಸರವೇ ಹೂ ಹಣ್ಣುಗಳು ಮತ್ತು ಚಿಗುರು ಹೊಸ ಎಲೆಗಳಿಂದ ಸಂಭ್ರಮಿಸುವಾಗ ಅಲ್ಲಲ್ಲಿ ಮೆಲ್ಲಮೆಲ್ಲಗೆ ಮುದ್ದಾದ ಹೆಜ್ಜೆಗಳನ್ನಿಟ್ಟು ಓಡಾಡುವ ’ಹರಿಣಿ’ಗಳನ್ನು ಕಂಡಾಗಲಂತೂ ’ಹಾವಾಡಿಗ’ ತನ್ನನ್ನೇ ಮರೆಯುತ್ತಾನೆ.

ತೆಳ್ಳನ ’ಜಿಂಕೆಗಳ’ನ್ನು ಬಿಟ್ಟು ದಪ್ಪದ ’ಆನೆಗಳು’ ಬಂದರೆ ನಾವು ’ಹಾವಾಡಿಗ’ ಇದ್ದವರು ’ಕಾವಾಡಿಗ’ರಾಗಿಬಿಡ್ತೇವೆ. ಒಟ್ನಲ್ಲಿ ಯಾವ ಆಕಾರ ಬಣ್ಣ ನಮಗೆ ಮುಖ್ಯವಲ್ಲ. ’ಸೂರ್ಯಚಂದ್ರ’ರು ಇದ್ದರೆ ಸಾಕು. ಹೊಲಗಳಲ್ಲಿ ಹಾವಿಗೆ ಬಿಲಗಳಿದ್ದರೆ ಸಾಕು.

ಸದ್ಯ ಯಾಕೋ ಕಾಮನೆಗಳು ಹೆಚ್ಚುತ್ತಿವೆ. ಈಗ ಒಟ್ಟಾಗಿ ಸೇರಿ ಕಾಮನ ಭಜನೆ ಮಾಡೋಣ.

ಸ್ತ್ರೀ ಕಾಮಚಂದಿರನೆ ಸ್ತ್ರೀಲೋಲ ಸುಂದರನೆ ಸ್ತ್ರೀಗಳ್ಳರಾಯಣ ಕಾಮ್ ಕಾಮ್ ಕಾಮ್
..ಕಾಮನೆ ನಿಸ್ಸೀಮನೆ ….ಕಾಮನೆ ನಿಸ್ಸೀಮನೆ
….
ಲೋಕೈಕ ಸುಂದರನೆ ಆ ರತಿ ವಲ್ಲಭನೆ
ಸುಂದರಿಯರ ಸಪ್ಲೈ ಮಾಡು ಕಾಮ್ ಕಾಮ್ ಕಾಮ್.”

Thumari Ramachandra

source: https://www.facebook.com/groups/1499395003680065/permalink/1606749559611275/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s