ಕಚ್ಚೆಹರುಕನ ಮಹಾಸಂಸ್ಥಾನದಲ್ಲಿ ಪಾದುಕಾ ಪಟ್ಟಾಭಿಷೇಕ

ಕಚ್ಚೆಹರುಕನ ಮಹಾಸಂಸ್ಥಾನದಲ್ಲಿ ಪಾದುಕಾ ಪಟ್ಟಾಭಿಷೇಕ

“ಇನ್ನೇನು ನಾವು ಪರಪ್ಪನವನ ವಾಸಕ್ಕೆ ತೆರಳುವ ದಿನ ಬಂತು. ನಾವೇ ಸೀಟಿನಲ್ಲಿರಬೇಕೆಂದು ನಮ್ಮ ಕುರಿಗಳು ಹಠಹೊತ್ತಿದ್ದರಿಂದ ನಮಗೂ ಸೀಟು ಬಿಡಲು ಸಾಧ್ಯವಿಲ್ಲ.

ಸೀಟು ಬಿಡಬೇಡಿ ಎಂದು ಹೇಳುವ ಕುರಿಗಳನ್ನು ನಾವೇ ತಯಾರು ಮಾಡಿಕೊಂಡಿದ್ದರಿಂದ ನಾವು ಸ್ನಾನ ತಿಂಡಿ ’ವಿಶ್ರಾಂತಿ’ಗೆ ಮೇಲೆದ್ದರೂ ಅವು “ಮೇ” ಎನ್ನುತ್ತವೆ. “ಇಲ್ಲಪ್ಪಾ ಸೀಟು ಬಿಡೋದಿಲ್ಲ” ಎಂದು ಹೇಳುತ್ತಲೇ ಇರಬೇಕು.

ನಮ್ಮ ಜೊತೆಗೆ ನಮ್ಮ ಮಹಾಮಂತ್ರಿ ಕುಲಪತಿ ಬಾವಯ್ಯನೂ ಪರಪ್ಪನ ವನವಾಸಕ್ಕೆ ಹೊರಡುವುದು ಬಹುತೇಕ ಖಚಿತವಾಗಿರುವುದರಿಂದ ನಮ್ಮ ಪಾದುಕೆಗಳನ್ನು ಕುರಿಗಳಿಗೆ ನೀಡಲು ಮನಸ್ಸು ಮಾಡಿದ್ದೇವೆ.

ರಾಮನಾದರೆ ಹದಿನಾಲ್ಕು ವರುಷ, ನಾವಾದರೆ ಹೆಚ್ಚೆಂದರೆ ೭-೮ ವರ್ಷ, ಇನ್ನೇನು ಹಾಗೆ ಕಳೆದುಹೋಗುತ್ತದೆ. ಅಲ್ಲಿಯವರೆಗೆ ನೀವೆಲ್ಲರೂ ಸೇರಿ ಮುಂಚೂಣಿಯ ತಾಲಿಬಾನ್ ಸಮಿತಿಯ ನಾಯಕತ್ವದಲ್ಲಿ ನಮ್ಮ ಪಾದುಕೆಗಳನ್ನೇ ಪ್ರತಿನಿಧಿಯಾಗಿ ಇರಿಸಿಕೊಂಡು ಮಠಭಾರ [ರಾಜ್ಯಾಡಳಿತವಾದರೆ ಮಾತ್ರ “ರಾಜ್ಯಭಾರ” ಎನ್ನಬೇಕು]ಮಾಡಿ.

ಹೇಗೂ ನಮ್ಮ ಕಚ್ಚೆಹರುಕನ ಸಂಸ್ಥಾನ ಭಕ್ತರಿಗೆ ಈಗೀಗ ಭಾರವೇ. ಮುಂಚಿನಿಂದಲೂ ನಮ್ಮ ಸಂಸ್ಥಾನ ನಡೆಸಿದ ದುರ್ವ್ಯಾಜ್ಯಗಳು ಒಂದೆರಡಲ್ಲ. ಸನ್ಯಾಸಿಗಳಾದವರಿಗೆ ಆಸ್ತಿ ಮಾಡುವ ಆಸೆ ಅದ್ಯಾಕೋ ಅರಿವಿಗಿಲ್ಲ.

ಕೆ.ಪ್.ಟಿ.ಸಿ.ಎಲ್ ನ ನಿವೃತ್ತ ಅಧಿಕಾರಿಯೊಬ್ಬರನ್ನು ಕೇಳಿದರೆ ಜೀವನದಲ್ಲಿ ಅವರುಂಡ ನೋವು ಗೊತ್ತಾಗುತ್ತದೆ. ಕೊನೆಗೂ ಅವರಿಂದ ಜಮೀನು ಹೊಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಶತಮಾನಗಳ ಹಿಂದೆ ಕುರಿವಾಡೆ ಮಠವೂ ನಮಗೆ ಹಾಗೆಯೇ ದೊರಕಿದ್ದು.

ಹಿಂದಿನಕಾಲದಲ್ಲಿ ಹೇಳೋರು ಕೇಳೋರು ಇರ್ಲಿಲ್ಲ. ಗುರಿಕ್ಕಾರರ ತಾಲೀಬಾನ್ ಸಂಸ್ಕೃತಿ ಹೇಳಿದ್ದೇ ವೇದ; ತಪ್ಪಿದರೆ ಸಾಮಾಜಿಕ ಬಹಿಷ್ಕಾರ. ಬಹಿಷ್ಕಾರ ಎಂಬ ಅಂಕುಶವನ್ನು ಹಿಡಿದುಕೊಂಡೆ ಕುರಿಗಳ ಆತ್ಮಬಲವೆಂಬ ಆನೆಯನ್ನೆ ಅಂದು ಉಡುಗಿಹಾಕಿದ್ದರು ಅವರೆಲ್ಲ.

ಗುರಿಕ್ಕಾರರಿಗೆ ಒತ್ತಕ್ಷರ ಇರುವುದೇ ಅದಕ್ಕೆ. ಭಕ್ತಜನ ಅವರು ಇಂತವರು ಎಂದು ಅವರ ಹುದ್ದೆಯನ್ನು ಹೇಳಲೂ ಪ್ರಯಾಸಪಡಬೇಕು. ಹರಿಶ್ಚಂದ್ರನಿಗೆ ನಕ್ಷಕ್ತ್ರಿಕ ಪೀಡಿಸಿದ ರೀತಿ ಅವರು ಭಕ್ತರನ್ನು ಪೀಡಿಸುತ್ತಲೇ ಇರಬೇಕು.

ಆನೆಯ ಕಾಲಿಗೆ ಕಟ್ಟಿದ ಸರಪಳಿ ಮನಸ್ಸು ಮಾಡಿದರೆ ಆನೆಗೆ ಯಾವ ಲೆಕ್ಕ? “ಹರಿದುಕೊಳ್ಳಲು ಮನಸ್ಸು ಮಾಡಿದರೆ ಸಿಕ್ಕಾಪಟ್ಟೆ ನೋವು ಅನುಭವಿಸುತ್ತೀಯ” ಎಂದು ಆನೆಗೆ ಮೊದಲಿನಿಂದಲೂ ಪಾಠ ಕೇಳಿ ಕೇಳಿ ಮನಸ್ಸಿನಲ್ಲಿ ಅದೇ ಕೂತುಬಿಟ್ಟಿರುತ್ತದೆ. ನಮ್ಮ ಕುರಿಗಳೂ ಹಾಗೇ. ಅದೇ ನಮ್ಮ ಬಂಡವಾಳ.

ಇಂದು ಗುರಿಕ್ಕಾರರ ಕಾಲವಲ್ಲ. ಕಾಲ ಬದಲಾಗಿದೆ. ನಾವು ಕಲಿಸಿದ ತಾಲೀಬಾನ್ ಸಂಸ್ಕೃತಿಯನ್ನು ವಿರೋಧಿಸುವ ಜನ ಕೂಡ ಇದ್ದಾರೆ ಎಂಬ ಬಿಸಿ ನಮಗೀಗ ತಟ್ಟುತ್ತಿದೆ. ತಾಲೀಬಾನ್ ನವರಿಗೆ ಅವರು ಹೆದರುವುದಿಲ್ಲ ಮಾತ್ರವಲ್ಲ ಯಾವ ಮಾತಿಗೂ ಸೊಪ್ಪೂ ಹಾಕುವುದಿಲ್ಲ.

ಇತ್ತೀಚೆಗೆ ನಾವು ಎಷ್ಟೇ ದೊಂಬರಾಟಮಾಡಿದರೂ ಕೆಲವರು ನಮ್ಮ ಕಚ್ಚೆಹರುಕನ ಸಂಸ್ಥಾನಕ್ಕೆ ಬರುವುದನ್ನೇ ನಿಲ್ಲಿಸಿದ್ದಾರೆ. ಒಂದೆರಡು ಬಾರಿ ಫೋನ್ ಮಾಡಿದಾಗ ಬರಲು ಯತ್ನಿಸುತ್ತೇವೆ ಎಂದರು. ಈಗ ನಮ್ಮ ಕರೆ ಎಂದು ಗೊತ್ತಾದ್ರೆ ಫೋನ್ ಕೂಡ ರಿಸೀವ್ ಮಾಡುವುದಿಲ್ಲ.

“ಮಠಕ್ಕೆ ಬರದೇ ಬಹಳ ದಿನ ಆಯ್ತಲ್ಲ. ಕಚ್ಚೆಹರುಕರು ಕೇಳುತ್ತಿದ್ದಾರೆ” ಎಂದು ನಮ್ಮ ಗಿಂಡಿಗಳು ಕರೆ ಮಾಡಿದರೆ, “ಅವರಿಗೆ ಹೇಳಿ ನಾವಿನ್ನು ಅಲ್ಲಿಗೆ ಬರುವ ಯಾವ ಅಗತ್ಯವೂ ಉಳಿದಿಲ್ಲ” ಎಂದು ಹೇಳಿದ್ದಾರಂತೆ.

ನಮ ಸಂಸ್ಥಾನದಲ್ಲಿ ದುಡ್ಡು ಕಾಸು ನೀರಿನ ಹಾಗೆ ಕರಗುತ್ತಿದೆ. ಯಾರೂ ಹೆಚ್ಚಿನ ಕಾಣಿಕೆ ನೀಡುತ್ತಿಲ್ಲ. ಹೀಗಾಗಿ ನಾವೀಗ ದಾನಿಗಳನ್ನು ಹುಡುಕುತ್ತಿದ್ದೇವೆ. ಬಾವಯ್ಯನ ಯಾವ ಪ್ರಾಜೆಕ್ಟೂ ವರ್ಕೌಟ್ ಆಗುತ್ತಿಲ್ಲ.

ನಮ್ಮ ದುಷ್ಟಬುದ್ಧಿ ಬಾವಯ್ಯನವರು ತಮ್ಮ ಪ್ಲಾನ್ ಎಲ್ಲಾ ಉಲ್ತಾ ಹೊಡೆಯುತ್ತಿರುವುದನ್ನು ಕಂಡು ನಮಗಿಂತ ಮೊದಲೇ ಜಾಗ ಖಾಲಿ ಮಾಡುವ ಮನದಿಂಗಿತ ವ್ಯಕ್ತಪಡಿಸಿದ್ದಾರೆ. ನಾವೂ ಹಾಗೆ ಓಡಿ ಹೋಗೋಣವೆಂದರೆ ಹಾಳಾದವರು ಹುಡುಕದೆ ಬಿಡ್ತಾರೆಯೇ? ಹಾಗೂ ನಾವೊಮ್ಮೆ ಜೀನ್ಸ್ ಹಾಕ್ಕೊಂಡು ಪ್ರಯತ್ನಿಸಿದ್ದೆವಲ್ಲ?

ಏನೋ ನಮ್ಮ ಇಮ್ಮಡಿ ವಿಶ್ವೇಶ್ವರಯ್ಯನವರ ಎಂಜಿನೀಯರಿಂಗ್ ದಯೆ, ಇಲ್ಲಿಯವರೆಗೆ ಅವರ ಮೂಲಕ ಸಲ್ಲಿಸಿದ ಪ್ಯಾಕೆಟ್ಟಿನ ಫಲಹಾರ ತಿಂದು ಅವರ ಲೈನಿನವರೆಲ್ಲ ಸುಮ್ಮನಿದ್ದರು. ಹಲ್ಲಿಬಿದ್ದ ಬಿಸಿಯೂಟ ತಿಂದು ಹಠಾತ್ತಾಗಿ ಅಡ್ಡಮಲಗಿದ ಮಕ್ಕಳಂತಿದ್ದ ಅವರೆಲ್ಲ ಈಗ ನಿಧಾನಕ್ಕೆ ಎದ್ದು ಕುಳಿತು ಕಣ್ ಕಣ್ ಬಿಡುವುದನ್ನು ನೋಡಿದರೆ ಎಲ್ಲಿ ಹಿಂದಿನಿಂದ ನಮ್ಮ ಇತಿಹಾಸ ತೆಗೆದುಬಿಡುತ್ತಾರೋ ಎಂಬ ಆತಂಕವಿದೆ ನಮ್ಮಲ್ಲಿ.

ನಮ್ಮ ಕುಲಪತಿ ಬಾವಯ್ಯನಿಗೆ ಹೇಳಿ ಬೇನಾಮಿ ಹೆಸರುಗಳಲ್ಲಿರುವ ಎಲ್ಲಾ ಜಮೀನು ಸೈಟುಗಳನ್ನೂ ಎಲ್ಲೆಲ್ಲಿ ಹೇಗೇಗೆ ಮಾಡಿ ಇರಿಸಬೇಕೆಂದು ವಾರ್ನಿಂಗ್ ಮಾಡಿದ್ದೇವೆ ನಾವು. ವನವಾಸದ ಖರ್ಚಿಗೆ ಕೆಲವನ್ನು ಮಾರಬೇಕಾಗಿ ಬಂದರೂ ತೊಂದರೆಯಿಲ್ಲ ಅಂದಿದ್ದೇವೆ. ಬಾವಯ್ಯ ಬಿಡಿ ಸಮಯ ಬಂದರೆ ಸೆರಗೊಡ್ಡಿ ಹೆಂಗಸರಿಗಿಂತ ಜಾಸ್ತಿ ಅತ್ತು ಕೆಲಸಮಾಡಿಸಿಕೊಳ್ತಾನೆ. ನಾವೂ ಹಾಗೆಯೇ.

ಪಾದುಕೆಯನ್ನು ಸೀಟಿನಲ್ಲಿಡುವ ಕ್ರಮ ತ್ರೇತಾಯುಗದ್ದು. ನಾವು ’ವನವಾಸ’ಕ್ಕೆ ಹೋಗುವ ಕ್ರಮ ದ್ವಾಪರದ ಶ್ರೀಕೃಷ್ಣ ಹುಟ್ಟುವ ಸಮಯದ್ದು. ಎರಡಕ್ಕೂ ಎರಡು ಯುಗಗಳಲ್ಲಿ ನಡೆದ ಅವತಾರಗಳ ಘಟನೆಗಳ ಆಧಾರಗಳಿವೆ. ಹಾಗಾಗಿ ಕುರಿಗಳು ಆತಂಕ ಪಡಬೇಕಾಗಿಲ್ಲ.

ನಮ್ಮ ಇಲ್ಲಿಯವರೆಗಿನ ಬದುಕಿನಲ್ಲಿ ನಿಜವಾದ ಸತ್ಯ ಮತ್ತು ಸುಳ್ಳು ಸತ್ಯ ಎಂಬ ಎರಡು ಸತ್ಯಗಳಿವೆ. ಅದಕ್ಕಾಗಿ ನಿಜವಾದ ಸತ್ಯವೇ ಹೊರಗೆ ಬರಬೇಕೆಂದು ನಾವು ಮೊದಲೇ ಹೇಳಿಬಿಟ್ಟಿದ್ದೇವೆ. ಸುಳ್ಳನ್ನೇ ಸತ್ಯವೆಂದು ಇಲ್ಲಿಯವರೆಗೆ ಕುರಿಗಳನ್ನೆಲ್ಲ ನಂಬಿಸಿದ ನಮಗೆ ನಿಜವಾದ ಸತ್ಯ ಹೊರಬಂದಾಗ “ಇದು ಸುಳ್ಳು ಸತ್ಯ” ಎಂದು ಅವರಿಗೆಲ್ಲ ಕನ್ವಿನ್ಸ್ ಮಾಡುವುದು ಕಷ್ಟವೇನಲ್ಲ.

ಈಗ ನಮಗೆ ಮತ್ತು ನಮ್ಮ ದುಷ್ಟಬುದ್ಧಿ ಬಾವಯ್ಯನಿಗೆ ಇನ್ನೊಂದು ಸಮಸ್ಯೆ ಎದುರಾಗಿದೆ. ಪರಪ್ಪನವನ ವಾಸದಲ್ಲಿರುವಾಗ ನಮಗೆ ಪ್ರತಿನಿತ್ಯ ’ಸೂರ್ಯಚಂದ್ರರ’ ದರ್ಶನ ಸಿಗುವುದಾದರೂ ಹೇಗೆ? ಅದಕ್ಕೆ ಅಲ್ಲಿ ಯಾವುದಾದರೂ ವ್ಯವಸ್ಥೆ ಉಂಟೇ? ಬಾಗಿಲಲ್ಲಿ ಬ್ರಹ್ಮರಾಕ್ಷಸ ಇರುವುದು ಸುಳ್ಳು ಆದರೆ ಅಲ್ಲಿ ಗೊಡೆಗಳಲ್ಲೇ ’ಬ್ರಹ್ಮರಾಕ್ಷಸ’ ಅಡಗಿರುತ್ತಾನಲ್ಲ ಏನು ಮಾಡೋಣ?

ನಮ್ಮ ಹಾವಿಗೆ ಕೈ ಹಚ್ಚಿದರೆ ಇಲ್ಲದ ಸಮಸ್ಯೆ ಗಂಟು ಬೀಳುತ್ತದೆ ಎಂದು ನಾವು ಸತ್ಯಾನಂದನ ರೀತಿ ಪುರುಷತ್ವ ಇಲ್ಲವೆಂದು ಹೇಳದೇ ಆರಂಭದಿಂದಲೇ ನಾವು ಸಮರ್ಥ ಪುರುಷರು ಎಂದು ಹೇಳುತ್ತಲೇ ಬಂದಿದ್ದೇವೆ. ಈ ವಿಷಯದಲ್ಲಿ ನಮ್ಮ ಕುಲಪತಿ ಬಾವಯ್ಯ ಸಹ ಡಬ್ಬಲ್ ಸಮರ್ಥ ಪುರುಷ.

ನಾವು ಇಷ್ಟೆಲ್ಲ ಹೇಳಿದರೂ ಅವರು ಹಾವು ತೆಗೆದು ತೋರಿಸಬೇಕು ಎಂದರೆ ಅಲ್ಲಿ ಏನೂ ಕುರುಹುಗಳು ಕಾಣಸಿಗದಂತೆ ಮಾಡುವುದು ಹೇಗೆ? ಹಾವು ಜಾಸ್ತಿ ಹಾರದಂತೆ ಇಂಜೆಕ್ಷನ್ ತೆಗೆದುಕೊಂಡಿದ್ದೇವೆ ನಾವು. ಆದರೂ ಅದು ಬುಸ್ ಗುಡುವುದನ್ನು ನಿಲ್ಲಿಸಲಿಲ್ಲ ಮಾರಾಯ್ರೆ. ಈಗ ಅದರದ್ದೆ ಇನ್ನೊಂದು ಸಮಸ್ಯೆ.

ಏನೂ ಇರಲಿ, ಅಡಿಕೆ ಅಂಗಳದಲ್ಲಿ ಒಣಹಾಕಿದ ಅಡಕೆಯನ್ನು ಕಾದ ಹಾಗೆ ನಾವು ಬರುವವರೆಗೆ ನೀವು ಸೀಟನ್ನು ಕಾದುಕೊಂಡಿರಿ ಎಂದು ಪಾದುಕೆ ಕೊಟ್ಟುಬಿಟ್ಟಿದ್ದೇವೆ ನಾವು. ನಾವಿಲ್ಲದಿದ್ದರೂ ಕಚ್ಚೆಹರುಕರಾದ ನಮ್ಮ ಹೆಸರಿನಲ್ಲೆ ಸಂಸ್ಥಾನ ನಡೆಯುತ್ತದೆ ಯಾಕೆಂದರೆ ನಮ್ಮ ಕುರಿಗಳೆಲ್ಲ ನಾವು ಹೇಳಿದ್ದನ್ನು ನಡೆಸಿಯೇ ತೀರುತ್ತವೆ.”

Thumari Ramachandra

source: https://www.facebook.com/groups/1499395003680065/permalink/1606250069661224/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s