ಎರಡು ವರ್ಷಗಳ ಹಿಂದೆ ದೇವಭೂಮಿಯಲ್ಲಿ ಹಾವಾಡಿಸಿದ ಪರಿಣಾಮ

ಎರಡು ವರ್ಷಗಳ ಹಿಂದೆ ದೇವಭೂಮಿಯಲ್ಲಿ ಹಾವಾಡಿಸಿದ ಪರಿಣಾಮ

“ಎರಡು ವರ್ಷಗಳ ಹಿಂದೆ ನಾವು ದೇವಭೂಮಿಗೆ ಹೋಗಿದ್ದೆವು. ಹಿಮಾಲಯದ ಎತ್ತರಕ್ಕೆ ಏರಿ ಏರಿ ಏರಿ ಹೃಷಿಕೇಶದಲ್ಲಿದ್ದಾಗ ಕೇದಾರನಾಥದಲ್ಲಿ ಜಲ ಪ್ರಳಯವಾಯಿತು.

ನಮಗೇನೂ ಆಗಲಿಲ್ಲ. ನಾವು ಎಂದಿನಂತೆ ಹಾವಾಡಿಸಿಕೊಂಡು ಆರಾಮಾಗಿದ್ದೆವು. ನಂತರ ಅದಕ್ಕೂ ಮೇಲೇರಿ ಹೋಗಿದ್ದೆವು. ನಮಗೆ ಮೇಲೇರುವುದು ಕೆಳಗಿಳಿಯುವುದು ಎಂದರೆ ಯಾವಾಗಲೂ ಖುಷಿಯೇ.

ಇಂದು ನಮ್ಮ ಕುರಿಗಳು ಹೇಳಿಕೊಳ್ಳುತ್ತಿರುತ್ತವೆ, “ನೋಡಿ ನಮ್ಮ ಸಂಸ್ಥಾನದ ಪವಾಡ. ’ಅಪರಾಧಿ’ ಎಂದಿದ್ದೇ ತಡ ಎಲ್ಲೆಲ್ಲೂ ಭೂಕಂಪ ನಡೆದುಹೋಯಿತು” ಎಂದು.

ಆದರೆ ನಮ್ಮಲ್ಲಿ ಪವಾಡ ನಡೆಸುವ ಯಾವ ಸಿದ್ಧಿಗಳೂ ಇಲ್ಲವೆಂಬುದು ಅವುಗಳಿಗೆ ತಿಳಿದಿಲ್ಲ. ನಾವು ’ಪವಾಡ’ ಮಾಡಿದ್ದೆಲ್ಲ ಮಾಟ ಮಂತ್ರಗಳಿಂದವೆ ಹೊರತು ಬೇರೆ ಯಾವ ಪವಾಡಗಳೂ ನಡೆದಿಲ್ಲ. ನಮಗೆ ನಮ್ಮ ಬಗೆಗೆ ಹಾಗೆ ಹೊಗಳುವ ಹೊಗಳುಭಟರನ್ನು ಕಂಡರೆ ಬಹಳ ಇಷ್ಟ.

ಇಂದು ಮಧ್ಯಾಹ್ನ ನಾವು ಯೋಚಿಸಿದ್ದು ಏನೆಂದರೆ ಒಂದೊಮ್ಮೆ ನಾವು ಇಂದು ಉತ್ತರ ಭಾರತದ ಕಡೆಗಿದ್ದರೆ ನಾವೇ ಹೆಚ್ಚಿಗೆ ಪ್ರಯಾಸಪಟ್ಟು ಶೇಕ್ ಮಾಡಬೇಕಾದ ಅಗತ್ಯ ಬೀಳುತ್ತಿರಲಿಲ್ಲ. ತಂತಾನೇ ಶೇಕ್ ಆಗುತ್ತಿತ್ತು ಅಂತ.

ದೇವ ಭೂಮಿಯಲ್ಲಿ ನಾವು ಶೇಖ್ ಮಾಡಿದ ನಂತರವೇ ಕೇದಾರದಲ್ಲಿ ಜಲಪ್ರಳವಾಗಿದ್ದು. ಈಗ ಅದೇ ಪ್ರಾಂತದ ಆ ಕಡೆ ಈ ಕಡೆ ಭೂಕಂಪ ಸಂಭವಿಸಿದ್ದು. ನಮ್ಮ ಶೇಕ್‍ನ ಪವಾಡ ಈ ರೀತಿ ಇದೆ.

ಸನ್ಯಾಸಿಯಾದವ ಶೇಕ್ ಮಾಡುವುದರ ಬಗೆಗೆ ಎಂದೂ ಚಿಂತನೆಯಿಟ್ಟುಕೊಳ್ಳುವುದಿಲ್ಲ ಎನ್ನುತ್ತಾರೆ ಕಡುಮೂರ್ಖರು. ನಾವು ಮೂರ್ಖರಲ್ಲದ ಕಾರಣ ಶೇಕ್ ಮಾಡುವುದಕ್ಕೆ ಮರೆಯುವುದಿಲ್ಲ.

ಅಷ್ಟೇ ಅಲ್ಲ ’ಡಿಬೆಚ್ಲರ್ ಆಫ್ ಶೇಕಿಂಗ್ ಟೆಕ್ನಾಲಜಿ’ ಪದವಿ ಅನುಗ್ರಹಿಸುವ ಕಾಲೇಜೊಂದನ್ನು ತೆರೆಯುವ ಅಸೆ ಕೂಡ ನಮಗಿದೆ. ಅಲ್ಲಿ ನಮ್ಮಂತ ’ಬುದ್ಧಿಜೀವಿ’ ಸನ್ಯಾಸಿಗಳಿಗೆ ತರಬೇತಿ ನೀಡೋಣ ಎಂಬುದು ಮೂಲ ಪರಿಕಲ್ಪನೆ. ಬರುವವರು ಸನ್ಯಾಸಿನಿಯರಾದರೆ ಇನ್ನೂ ಉತ್ತಮ.

Thumari Ramachandra

source: https://www.facebook.com/groups/1499395003680065/permalink/1605918463027718/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s