ವಿಶ್ವಾಮಿತ್ರ ಮೇನಕೆಯೊಬ್ಬಳನ್ನೇ ಭೋಗಿಸಿ ಕೆಟ್ಟ ನಾವಾದರೆ ಹಾಗಲ್ಲ…

ವಿಶ್ವಾಮಿತ್ರ ಮೇನಕೆಯೊಬ್ಬಳನ್ನೇ ಭೋಗಿಸಿ ಕೆಟ್ಟ ನಾವಾದರೆ ಹಾಗಲ್ಲ…

“ಇಂದು ನಾವು ವಿಶ್ವಾಮಿತ್ರ ಮೇನಕೆಯರ ಕತೆ ಹೇಳುತ್ತೇವೆ. ವಿಶ್ವಾಮಿತ್ರ ಮೊದಲು ಹೇಳಿಕೇಳಿ ಕ್ಷತ್ರಿಯ ಅರಸ. ವಸಿಷ್ಠರ ಸುರಧೇನುವಿನ ಚಮತ್ಕಾರ ಕಂಡು, ಕೊಡದಿದ್ದಾಗ ಅಪಹರಿಸಿ ಅವರೊಡನೆಯೇ ಯುದ್ಧಸಾರಿದವ.

ವಸಿಷ್ಠರ ಬ್ರಹ್ಮತೇಜದ ಬಲದ ಮುಂದೆ ತನ್ನಾಟ ನಡೆಯದಿದ್ದಾಗ ತಾನೂ ಬ್ರಹ್ಮರ್ಷಿಯಾಗಬೇಕೆಂದು ತಪಸ್ಸಿಗೆ ಆರಂಭಿಸಿದ. ತಪಸ್ಸೋ ಅಂತಿಂತದ್ದಲ್ಲ. ಘೋರ ತಪಸ್ಸಿಗೆ ದೇವಲೋಕವೇ ಬೆಚ್ಚಿತು. ಕಾವೇರಿದ ದೇವಲೋಕದಿಂದ ದೇವೇಂದ್ರನ ಇಚ್ಛೆಯಂತೆ ವಿಶ್ವಾಮಿತ್ರನ ತಪೋಭಂಗ ಮಾಡಲು ಮೇನಕೆ ಧರೆಗಿಳಿದಳು.

ಕೆಳಗಿಳಿದ ಅವಳು ಸುಮ್ಮನಿರಲಿಲ್ಲ. ತನ್ನ ನಾಟ್ಯಗಳ ಮೂಲಕ ಮುನಿಯನ್ನು ಆಕರ್ಷಿಸಲು ತಯಾರಾದಳು. ಮನ್ಮಥ ಸಪೋರ್ಟಿಗೆ ಬಾಣ ಬಿಟ್ಟಿದ್ದ. ವಾತಾವರಣದ ಏರುಪೇರಿಗೆ ವಿಶ್ವಾಮಿತ್ರ ಎಚ್ಚೆತ್ತು ಕಣ್ತೆರೆದ. ನೋಡ್ತಾನೆ ಎದುರಿಗೆ ಜಗನ್ಮೋಹಿನಿ.

ಹುಟ್ಟುದಮೇಲೆ ಇಲ್ಲಿವರೆಗೆ ಅಂತಹ ಸುಂದರಿಯನ್ನು ಕಂಡಿದ್ದಿಲ್ಲ. ಅಂತವಳ ಬಗ್ಗೆ ಕೇಳಿದ್ದಿಲ್ಲ. ಚಿತ್ರ ನೋಡಲಿಕ್ಕೆ ಲ್ಯಾಫ್ಟಾಪು ಅಂತರ್ಜಾಲ ವಾಟ್ಸಾಪು ಇದ್ದ ಕಾಲವಲ್ಲ. ಜಿಂಗಿಚಿಕ್ಕಿ ನೋಡಲಿಕ್ಕೆ ಯೂಟ್ಯೂಬು ಇರಲಿಲ್ಲ. ಹೀಗಾಗಿ ಅವನಿಗೆ ಸುಂದರಿಯರ ಸಹವಾಸದ ಭಾವನೆಯೇ ಇರಲಿಲ್ಲ. ಪೆದ್ದ ಪೆದ್ದ …ನಮ್ಮಂತವರಾಗಿದ್ರೆ …

ಮೇನಕೆ ನೇರವಾಗಿ ಒಮ್ಮೆ ಕಾಣಿಸಿದ್ದಷ್ಟೆ. ಅಮೇಲೆ ರಾಮಾಯಣದ ಬಂಗಾರದ ಜಿಂಕೆಯಂತೆ ಆಗಾಗ ಮಾಯವಾಗುತ್ತ ಮತ್ತೆ ಕಂಡಳು. ಅವಳ ಸಂಪಿಗೆ ನಾಸಿಕ, ಕಾಮನ ಬಿಲ್ಲಿನಂತ ಹುಬ್ಬು, ಸೇಬು ಗೆನ್ನೆ [ಅಂದು ಸೇಬು ಇತ್ತೋ ಇಲ್ವೋ ಗೊತ್ತಿಲ್ಲ ಬಿಡಿ], ದಾಳಿಂಬೆ ಬೀಜಗಳ ದಂತಪಂಕ್ತಿ, ನಾಗವೇಣಿಯ ನವಿಲ ಲಾಸ್ಯಕ್ಕೆ ಮುನಿ ಮನಸೋತ.

ನಮಗಾದಂತೆ ಕೌಪೀನ ಒಡೆದುಹೋಗುವುದರಲ್ಲಿತ್ತು. ಅಷ್ಟರಲ್ಲಿ ಆಕೆಯನ್ನು ಒಮ್ಮೆ ಸಂದರ್ಶಿಸಿ ಸತತವಾಗಿ ’ಏಕಾಂತ’ಕ್ಕೆ ಸಿಗುವವಳು ಎಂಬುದನ್ನು ಖಾತ್ರಿ ಮಾಡಿಕೊಂಡ. [ಒಮ್ಮೆ ಸಂದರ್ಶಿಸಿ ಖಾತ್ರಿ ಮಾಡಿಕೊಳ್ಳಿ ಎಂದು ಶಿರಸಿ ಬಟ್ಟೆ ಅಂಗಡಿಗಳ ಜಾಹೀರಾತುಗಳಲ್ಲಿ ಓದಿದ್ದನ್ನು ಕದ್ದು ಬಳಸಿದ್ದೇನೆ.]

ಏಕಾಂತಕ್ಕೆ ಸಿಕ್ಕಮೇಲೆ ಕೇಳಬೇಕೆ. ನೀವು ನಮ್ಮ ಕತೆಯನ್ನು ಹೇಳುತ್ತೀರಿ. ವಿಶ್ವಾಮಿತ್ರ ೨೫ ವರ್ಷ ಸತತವಾಗಿ ಸಂಸಾರವನ್ನೇ ನಡೆಸಿದ. ದೇವತೆಗಳು ಅಷ್ಟುವರ್ಷಗಳಾದರೂ ಸುರಕ್ಷಿತ ಇರಬಹುದಲ್ಲ ಎಂದು ಸುಮ್ಮನಿದ್ದರು.

೨೫ವರ್ಷದ ನಂತರ ಒಂದು ದಿನ ಇದ್ದಕ್ಕಿದ್ದಂತೆ ವಿಶ್ವಾಮಿತ್ರನಿಗೆ ಕೋಪ ಬಂತು. ತಾನೆಲ್ಲೋ ಎಡವಿದ್ದೇಬೆ ಅನ್ನಿಸ್ತು. ತನ್ನ ತಪಸ್ಸು ಹಳ್ಳ ಹಿಡಿದಿರುವುದು ನೆನಪಾಯ್ತು. ಬ್ರಹ್ಮರ್ಷಿಯಾಗಲು ಹೊರಟಿದ್ದ ತಾನು ಹೀಗೆಲ್ಲ ಮಾಡಬೇಕಿತ್ತೆ ಅನ್ನಿಸ್ತು. ಮೇಬಕೆಯನ್ನು ಕರೆದ..

“ಹೌದೇನೆ ಇವಳೇ…ಇನ್ನು ನೀನು ನನ್ನೊಟ್ಟಿಗೆ ಇರುವುದು ಸಾಕು. ಈಗ ಏಕಾಂತ ಬೀಕಾಂತ ಎಲ್ಲ ಬೇಡ. ಬೇಗ ಜಾಗ ಖಾಲಿ ಮಾಡಿ ಇಂದ್ರನಲ್ಲಿಗೆ ಹೋಗು.” ಎಂದುಬಿಟ್ಟ.

ಇನ್ನು ಮುಂದೆ ಕತೆಯನ್ನು ಎನ್.ಟಿಬಿ ಭಟ್ಟರು ಹಾಕಿದ ವಿಡಿಯೋ ನೋಡಿ ಸ್ವಲ್ಪ ತಿಳೀರಿ. ವೀಡಿಯೋದಲ್ಲಿ ಮೇನಕೆ ಸುಂದರವಾಗಿದ್ದಾಳೆ. ಏಕಾಂತಕ್ಕೆ ಕರೆದು ಹೆಣ್ಣೋ ಅಲ್ಲವೋ ನೋಡಬೇಕಾಗಿತ್ತು ಎಂಬುದು ನಮ್ಮ ಆಸೆಯಾಗಿತ್ತ್ಯು.

ಮೇನಕೆಗೆ ವಿಶ್ವಾಮಿತ್ರನಿಂದ ಹುಟ್ಟಿದ ಸಂತತಿಗೆ ಅಪ್ಪ ಯಾರೆಂದು ಹೇಳಿಕೊಳ್ಳಲೂ ಗತಿಯಿರಲಿಲ್ಲ. ಆದರೆ ನಮ್ಮ ವಿಷಯದಲ್ಲಿ ಹಾಗಿಲ್ಲ. ಬೇರೆಯವರ ಕ್ಷೇತ್ರಗಳಲ್ಲಿ ಬೀಜ ಬಿತ್ತಿ ತೆಗೆದ ಬೆಳೆಗೆ ಅಂದರೆ ಹುಟ್ಟಿದ ಮಗುಗಳಿಗೆ ಹೆಸರಿಗೆ ಅಪ್ಪನೆಂಬ ವ್ಯಕ್ತಿ ಬೇರೆ ಬೇರೆಯೇ ಇದ್ದಾರೆ.

ನಮ್ಮ ಲೆಕ್ಕದಲ್ಲಿ ವಿಶ್ವಾಮಿತ್ರನಿಗೆ ಒಂದೋ ತಲೆ ಕೆಟ್ಟಿತ್ತು ಅಥವಾ ಅವನ ’ಪೆಟ್ರೋಲ್’ ಕಾಲಿಯಾಗಿತ್ತು. ವಿಶ್ವಾಮಿತ್ರನ ಜಾಗದಲ್ಲಿ ನಾವಿದ್ದಿದ್ರೆ ಮೇನಕೆಗೆ ಉಡುಪಿ ಪುತ್ತೂರು ಕಡೆಗೆಲ್ಲಾದ್ರೂ ಜಮೀನು ಮನೆ ಮಾಡಿ ಇಟ್ಕೊಳ್ತಿದ್ವಿ ನಾವು.

ಎಂತೆಂತಾ ಮಂಗನಮುಖದವರನ್ನೂ ಇಟ್ಕಂಡಿದ್ದೇವೆ ನಾವು ಮೇನಕೆನೆಲ್ಲ ವಾಪಸ್ ಕಳ್ಸೋದಿತ್ತ? ಸಾಧ್ಯವೇ ಇರ್ಲಿಲ್ಲ.

ಅದಷ್ಟೇ ಅಲ್ಲ, ಮೇನಕೆಗೆ ಟ್ರೇನಿಂಗ್ ಕೊಟ್ಟು ವಾಟ್ಸಾಪ್ ನಲ್ಲಿ ಸಂದೇಶ ಕಳಿಸಿ ರಂಭೆ, ಊರ್ವಶಿ, ತಿಲೋತ್ತಮೆ, ಮಧುರಾ, ಮಾಲಿನಿ, ಪುಷ್ಪವತಿ, ಛಾಯಾ ಇನ್ಯಾರ್‍ಯಾರಿದ್ದಾರೆ ಅಷ್ಟೂ ಜನರನ್ನು ಈ ಭೂಮಿಗೆ ಕರೆಸಿ ಏಕಾಂತ ದರ್ಶನ ಕೊಡ್ತಿದ್ವಿ ನಾವು. ಮೇಲಾಗಿ ಅವರಿಗೆಲ್ಲ ಚಂದದ ಹೆಣ್ಣುಮಕ್ಕಳಿದ್ರೆ ಅವರನ್ನೂ ಸಹ ಬಿಡದೇ ಕರೆಸಿ ಏಕಾಂತ ತೋರಿಸ್ತಿದ್ವಿ ನಾವು.

ಯಾಕೆ ಮೇನಕೆಯನ್ನು ಕೆಳಗೆ ಕಳಿಸಿದೆ ಅಂತ ಇಂದ್ರನೇ ತಲೆಬಿಸಿ ಮಾಡ್ಕೊಳ್ಬೇಕು..ಹಾಗೆ…ಹಾಗೆ ಮಾಡ್ತಿದ್ವಿ ನಾವು. ನಮ್ಮ ವೀರ್ಯ ಸನ್ಯಾಸ ಅಂದ್ರೆ ಅಂತದ್ದು. ತೊಳೆದಿಟ್ಟ ಕೌಪೀನ [ಬುಲ್-ಪೀನ] ಒಣಗಿದಾಗ ಯಾವ ಅಧಾರವೂ ಇಲ್ಲದೆ ರಟ್ಟಿನಂತೆ ನೆಟ್ಟಗೆ ನಿಲ್ಲಿಸುವ ಗಟ್ಟಿ ಸಾಮರ್ಥ್ಯ ನಮ್ಮಲ್ಲಿದೆ.

ವಿಶ್ವಾಮಿತ್ರ ನಮ್ಮ ಮುಂದೆ ಏನೇನೂ ಅಲ್ಲ. ಯಾವುದೋ ಲೋಕದಲ್ಲಿ ಬ್ರಹ್ಮರ್ಷಿ ಎನಿಸುಕೊಳ್ಳುವುದಕ್ಕಿಂತ ’ಸ್ತ್ರೀ’ ಶಬ್ದದ ನಖಶಿಖಾಂತದ ’ಬ್ರಹ್ಮಜ್ಞಾನ’ ಪಡೆದ ಬೇವಾರ್ಸಿಗಳೆ ನಿಜವಾದ ಜ್ಞಾನಿಗಳು ನಮ್ಮ ಲೆಕ್ಕದಲ್ಲಿ.

ಹಾಗಾಗಿಯೇ ನಾವು ತಪಸ್ಸಿನ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ತಪಸ್ಸು ಎಂದರೆ ಒಂದೇ ಅದು ಏಕಾಂತಕ್ಕೆ ವ್ಯವಸ್ಥೆ ಮಾಡಿಕೊಳ್ಳುವ ಬಗೆಗಿನ ತಪಸ್ಸು. ಅದನ್ನು ಬಿಟ್ಟರೆ ತಪಸ್ಸಿಗೆ ನಮ್ಮಲ್ಲಿ ಬೇರೆ ಅರ್ಥವೇ ಇಲ್ಲ.

Thumari Ramachandra

source: https://www.facebook.com/groups/1499395003680065/permalink/1605448853074679/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s