ಕೌ-ಪೀನವಲ್ಲ ಬುಲ್-ಪೀನ

ಕೌ-ಪೀನವಲ್ಲ ಬುಲ್-ಪೀನ

“ಇಂದಿನ ಕತೆಯ ಆರಂಭ ಕೌ ಮತ್ತು ಬುಲ್‍ಗಳಿಂದಲೆ ಆಗಿಬಿಡಲಿ.

A bull was servicing the cows..
Lady asks to manager: How many times can this bull have sex?
Manager replies: 5 to 6 times in a day.
Lady looks at husband: You see?
Husband asks to manager: Is it the same cow every time?
No sir it’s a different cow every time.
Man looks back to wife: you see!

ನಾವು ತೊಟ್ಟ ಲಂಗೋಟಿಗೆ ಯಾವನೋ ಕೌ-ಪೀನವೆಂದು ಹೆಸರಿಟ್ಟ ಅದು ಹಾಗೇ ಇದೆ. ಈಗ ಕಾಲಕ್ಕೆ ತಕ್ಕಂತೆ ಅದು ನಮ್ಮ ವಿಷಯದಲ್ಲಿ ಬದಲಾಗಿದೆ. ಅದನ್ನು ಬುಲ್-ಪೀನವೆನ್ನಬೇಕು.

ಆಮೇಲೆ ನಾವು ಉತ್ತರದ ಕಡೆಗೆ ಹಿಂದಿಯಲ್ಲಿ ನಡೆಯುವ ಕತೆಗಳ ಬಗ್ಗೆ ಕೇಳಿದೆವು. ಟಿವಿಗಳಲ್ಲಿ ನೋಡಿದೆವು. ಅಲ್ಲಿನ ಸಭೆಗಳಲ್ಲಿ ಎಂತೆಂತಹ ಸುಂದರ ಹಸುಗಳು ಬರುತ್ತವೆ ಎಂಬುದು ಕಣ್ಣಿಗೆ ಬಿತ್ತು.

ಅವರ ಸುಂದರ ವದನ ಅಂದದ ಮೈಮಾಟ ಬೇಲೂರಿನ ಶಿಲಾಬಾಲಿಕೆಯರನ್ನು ನೆನಪಿಸಿತು ನಮಗೆ. ಅವರಲ್ಲಿ ಕೆಲವರ ‘ಸೂರ್ಯ ಚಂದ್ರ’ರನ್ನು ನೋಡಿ ಆಡಿಸಬೇಕೆಂಬ ಆಸೆಯಾಯಿತು. ನಾವು ದೇವರಲ್ಲವೇ? ಸೂರ್ಯಚಂದ್ರರನ್ನೇ ಕೈಯಲ್ಲಿ ಹಿಡಿದು ಆಡಿಸುತ್ತೇವೆ ನಾವು.

ಆದರೆ ಒಂದು ಪ್ರಬಲ ಸಮಸ್ಯೆ ಎದುರುಗಿತ್ತು. ನಮಗೆ ಹಿಂದಿ ಬರ್ತಿರ್ಲಿಲ್ಲ ಅವರಿಗೆ ಕನ್ನಡ ಬರೋದಿಲ್ಲ. ನಾವು ಸಂಪರ್ಕ ಮಾಡೋದು ಸಂವಹಿಸೋದು ಎಲ್ಲ ಹೇಗೆ? ನೇರವಾಗಿ ಬುಲ್-ಪೀನದಿಂದ ಹಾವು ಹೊರತೆಗೆದರೆ ಅವರು ಓಡಿಹೋದಾರು.

ಅದಕ್ಕೇ ನಾವು ದೊಡ್ಡ ಗೌಡರು ಕತ್ತಲರಾತ್ರಿಯಲ್ಲಿ ಯಾರಿಗೂ ಗೊತ್ತಿಲ್ಲದಂತೆ ಯಾರನ್ನೋ ಕರೆಸಿಕೊಂಡು ಹಿಂದಿ ಕಲಿತಂತೆ ನಾವೂ ಸಹ ಹಿಂದಿ ಕಲಿತೆವು. ನಮ್ಮ ಹಿಂದಿಗೂ ದೊಡ್ಡಗೌಡರ ಹಿಂದಿಗೂ ವ್ಯತ್ಯಾಸವೇನೂ ಇಲ್ಲ. ಇಬ್ಬರ ಸಾಮರ್ಥ್ಯವೂ ಒಂದೆ.

ಹಿಂದಿ ಕಲಿಯುವುದರಿಂದ ಅನೇಕ ಲಾಭಗಳಿದ್ದವು. ಉತ್ತರದ ಕಡೆಗೆ ಅವರು ಕಾವಿ ಕಂಡರೆ ಸಾಕು ಕಾಲಿಗೆ ಬೀಳುತ್ತಾರೆ. ಕಾವಿ ಇಲ್ಲದಿದ್ದರೂ ಕಾಲಿಗೆ ಬೀಳುವ ಕುರಿಗಳಿದ್ದಾವೆ ಎಂದು ನಮ್ಮ ಸ್ನೇಹಿತ ರಾಂಪಾಲ್ ಹೇಳಿದ್ದರು.

ಉತ್ತರಕ್ಕೆ ಹೋದರೆ ಸಾಕಷ್ಟು ಕಾಸು ದೋಚಬಹುದು ಎಂಬುದೂ ನಮಗೆ ತಿಳಿದಿತ್ತು. ದೋಚಿದ ಕಾಸಿನಲ್ಲೆ ಕಾಮಿನಿಯರನ್ನು ಸಮಾಧಾನಪಡಿಸಿ ಕಳಿಸಬಹುದು ಎಂಬುದಕ್ಕೂ ಸ್ಕೆಚ್ ಹಾಕಿಕೊಂಡಿದ್ದೆವು.

ಸ್ವಲ್ಪವಾದರೂ ಹಿಂದಿ ಬಂದರೆ ಉತ್ತರದ ಕಾವಿ ವೇಷಧಾರಿಗಳನ್ನೆಲ್ಲ ಸಂಪರ್ಕಿಸಿ ಸಮಯದಲ್ಲಿ ಸಹಾಯಕ್ಕೆ ಕರೆಯಬಹುದು ಎಂಬ ಭಾವನೆ ನಮ್ಮಲ್ಲಿ ಆಗಲೇ ಜಾಗೃತವಾಗಿತ್ತು. ಕರೆಂಟ್ ರಿಪೇರಿಯವನು ಶಾಕ್ ತಗುಲದಂತೆ ಎಚ್ಚರಿಕೆ ವಹಿಸಬೇಕಲ್ಲವೆ?

ಹಿಂದಿ ಕಲಿತ ನಂತರ ಅದು ಹರ್ಕುಪುರ್ಕು ಆದರೂ ತೊಂದ್ರೆಯಿಲ್ಲ ಅಲ್ಲಿನ ಗಂಧರ್ವ ಕನ್ಯೆಯರಲ್ಲಿ ಸ್ವಲ್ಪ ಮಾತನಾಡಲು ಬಂದರೆ ಸಾಕು. ’ಏಕಾಂತ’ಕ್ಕೆ ಎಳೆದುಕೊಂಡ ಮೇಲೆ ನಮ್ಮ ಮಾತು ಕಡಿಮೆ ಜಾಸ್ತಿ ’ದುಡಿಮೆ.’ ಒಂದು ಕ್ಷುಲ್ಲಕ ಹೋರಿ ದಿನದಲ್ಲಿ ಐದಾರು ಹಸುಗಳಿಗೆ ಹಾರಬೇಕಾದರೆ ವೀರ್ಯ ಸನ್ಯಾಸದ ತಾಕತ್ತು ಇನ್ನೆಷ್ಟಿರಬೇಡ?

ಉತ್ತರದ ಕಡೆಗೆ ನಾವು ಕತೆ ಆರಂಭಿಸಿದಾಗ ನಮ್ಮ ಹರ್ಕುಪುರ್ಕು ಹಿಂದಿಯಲ್ಲಿ ಹೇಳಿದ್ದನ್ನೆ ಕಾಲುಗಂಟೆ ಮತ್ತೆ ಮತ್ತೆ ಹೇಳುತ್ತಿದ್ದೆವು. ಕತೆ ಯಾಕೋ ಮುಂದಕ್ಕೆ ಹೋಗುತ್ತಿಲ್ಲವೆನಿಸಿದಾಗ ಐಪ್ಯಾಡ್ ನೋಡಿಕೊಂಡು ಮುಂದೆ ಸಾಗುತ್ತಿದ್ದೆವು.

ಕೈ ತೊಳೆದುಕೊಂಡು ಮುಟ್ಟಬೇಕಾದ ಬೆಳದಿಂಗಳ ಬಾಲೆಯರನ್ನು ಕಂಡಾಗ ನಮ್ಮ ಹಾವು ಕೌಪೀನ ಒಡೆದುಕೊಂಡುಹೋಗುವಷ್ಟು ಬುಸ್ ಬುಸ್ ಎನ್ನುತ್ತಿತ್ತು. ಕೌಪೀನ ಬುಲ್-ಪೀನವಾಗಬಾರದೆಂಬುದಕ್ಕೆ ಪಾಲಿಸಬೇಕಾದ ನಿಯಮಗಳಲ್ಲಿ ಯಾವುದನ್ನೂ ನಾವು ಪಾಲಿಸುತ್ತಿರಲಿಲ್ಲ. ಪರಿಣಾಮ ಹಾವಿನ ಕಾಟ ತಾಳಲಾರದೆ ನಾವು ಹಾಳಾಗಿ ಹೋದೆವು.

ಹಾವಿನ ಕಾಟ ನಮ್ಮನ್ನು ಉತ್ತರಾಂಚಲ ಉತ್ತರಾಖಂಡ ಹೃಷಿಕೇಶ ಮಾನಸ ಸರೋವರ ಎಲ್ಲಾ ಕಡೆಗೂ ಕರೆದೊಯ್ದಿತು. ಹೋದಲ್ಲೆಲ್ಲ ನಾವು ನಮ್ಮ ಸಖಿಯರೊಡನೆ ಜಲಕ್ರೀಡೆ ಮತ್ತು ರತಿಕ್ರೀಡೆಯಾಡಿ ಹಾವನ್ನು ಸಮಾಧಾನಪಡಿಸಿದೆವು.

ರೊಚ್ಚೆ ಹಿಡಿದ ಸಣ್ಣ ಮಗುವಿಗೆ ಆಟಿಕೆಯನ್ನು ಕೊಟ್ಟರೆ ಸುಮ್ಮನಿರುತ್ತದೆ. ಕೂಗುವ ನಾಯಿಗೆ ಬಿಸ್ಕೀಟು ಒಗೆದರೆ ಸಾಕು ಸುಮ್ಮನಿರುತ್ತದೆ. ಆದರೆ ನಮ್ಮ ಹಾವು ಇದಕ್ಕೆಲ್ಲ ಬಗ್ಗುವುದಿಲ್ಲ.

ನಮ್ಮ ಹಾವಿಗೆ ಬೇರೆ ಬೇರೆ ಬಿಲ ಬೇಕು. ಬಿಲಗಳಲ್ಲಿ ತಡಕಾಡಿ ತೆಕ್ಕೆಹಾಕಿ ಮಲಗಿದರೆ ಮಾತ್ರ ಹಾವಿನ ಕಾಟ ಸ್ವಲ್ಪ ಕಡಿಮೆ. ನಮಗೂ ದೇವರ ವಿಗ್ರಹಗಳ ದರ್ಶನ ಬೇಕಿಲ್ಲ ’ಸೂರ್ಯಚಂದ್ರರ’ ದರ್ಶನ ಮಾತ್ರ ಪ್ರತಿನಿತ್ಯ ಸಿಗಲೇಕೇಬೇಕು.

ನಾವು ಎಲ್ಲೆಲ್ಲಿಗೆ ಹೋದರೂ ಅಲ್ಲೆಲ್ಲ ನಮ್ಮ ಹಾವಿಗೆ ಬಿಲಗಳ ವ್ಯವಸ್ಥೆ ಮಾಡಿಕೊಂಡೆ ಇದ್ದೇವೆ. ಇತ್ತೀಚೆಗೆ ನಾವು ಬೀರೂರಿನಲ್ಲಿ ಒಂದು ರಾತ್ರಿ ’ವಿಶ್ರಾಂತಿ’ಮಾಡಿದ್ದೆವು. ಬೆಳಿಗ್ಗೆ ಬುಲ್-ಪೀನ ಕೊಡವಿ ಕಟ್ಟಿಕೊಂಡು ಮುಂದಕ್ಕೆ ಬಿಜಯಂಗೈದೆವು. ಬೀರೂರು ತುಮಕೂರು ತಿಪಟೂರು ಹೋಗಿಬರುವ ದಾರಿಯಲ್ಲಿ ಸಿಗುವ ಊರುಗಳಲ್ಲೆಲ್ಲ ನಮಗೆ ಅಪಾರ ಮಹಿಳಾ ’ಅಭಿಮಾನಿಗಳಿ’ದ್ದಾರೆ.

ಯಾರೋ ಪಾಪಿಗಳು ನಮ್ಮ ಕೆಲವು ಚಿತ್ರಗಳನ್ನು ರಹಸ್ಯವಾಗಿ ಕ್ಲಿಕ್ಕಿಸಿ ಅಲ್ಲಲ್ಲಿ ಇರಿಸಿಕೊಂಡುಬಿಟ್ಟಿದ್ಡಾರೆ. ಅದರಲ್ಲಿ ನಮ್ಮ ಕೆಲವು ಕ್ರೀಡೆಗಳು ಎಲ್ಲರಿಗೂ ಕಾಣುತ್ತವೆ. ಕಲಶಹೊತ್ತವರಲ್ಲೂ ’ಸೂರ್ಯಚಂದ್ರರ’ನ್ನು ಹುಡುಕುವ ನಮ್ಮ ಚಿತ್ರವನ್ನು ನೀವು ನೋಡಬೇಕು.

ಈಗ ನಮಗೆ ಉಪೇಂದ್ರನ ಸಿನಿಮಾದ “ಬಾಬಾರೋ…ರಸಿಕ” ಹಾಡು ನೆನಪಾಗುತ್ತದೆ. ಅದರಲ್ಲಿನ ನಟಿ ರಮ್ಯಕೃಷ್ಣಳ ಮೈಮಾಟಕ್ಕೆ ನಾವು ಅಲ್ಲೇ ಡಮಾರ್. ನಮ್ಮ ಹಾವು ಅದನ್ನು ನೋಡಿದ ಕ್ಷಣದಲ್ಲೆ ಬುಲ್-ಪೀನ ಒಡೆದುಕೊಂಡು ಹೊರಗೆ ಬಂದಿತ್ತು.

ಈಗೀಗ ನಮ್ಮಲ್ಲಿಗೆ ಯಾರಾದರೂ ಮಹಿಳೆಯರು ಬಂದರೆ “ಹೋಗಿದ್ರಾ ಬುಲ್ ಸರ್ವಿಸಿಂಗ್‍ಗೆ” ಎಂದು ಜನ ಆಡ್ಕೋತಾರಂತೆ. ನಾವು ಅವತ್ತು ಒಳಕೋಣೆಯಲ್ಲಿ ನಡೆದ ಮೀಟಿಂಗ್‍ನಲ್ಲಿ ತಪ್ಪೊಪ್ಪಿಕೊಂಡು ಕಾಲಿಗೆ ಬಿದ್ದೆವು. “ಮರ್ಯಾದೆ ಉಳಿಸಿ” ಎಂದು ಬೇಡಿಕೊಂಡಿವು.

ನಮ್ಮ ಜನಾಂಗ ಕೇವಲ ಬುದ್ದಿವಂತರಷ್ಟೆ ಅಲ್ಲ ಅವಕಾಶವಾದಿಗಳು ಎಂಬುದು ನಮಗೆ ಗೊತ್ತಿತ್ತು. ಕೂಗುವ ನಾಯಿಗಳಿಗೆ ಆಗಾಗ ಬಿಸ್ಕಿಟ್ ಹಾಕಿ ಸಾಕಿಕೊಂಡ ಪರಿಣಾಮ ಅವು ನಮ್ಮನ್ನು ಕಂಡಾಗಲೆಲ್ಲಾ ಅಡ್ಡ ಬೀಳುತ್ತವೆ. ಕುರಿಗಳು ಅವುಗಳನ್ನು ಅನುಸರಿಸುತ್ತವೆ.

ನಂತರ ಕುರಿವಾಡೆಗೆ ತೆರಳಿ ಅಲ್ಲಿಂದ ಸಡ್ಡುಹೊಡೆದು ತಿರುಗಿ ಬೀಳುವುದಕ್ಕೆ ಪ್ಲಾನು ಮಾಡಿದೆವು. ನಾವು ಎಲ್ಲೆಲ್ಲಿಗೋ ಹೋಗುತ್ತೇವೆ ಎಂದು ಬೊಗಳೆ ಬಿಟ್ಟೆವು. ಇಲ್ಲಿನ ರಾಜಭೋಗವನ್ನು ಬಿಟ್ಟು ನಾವು ಅಲ್ಲಿಗೆಲ್ಲ ಹೋಗುವುದುಂಟೆ? ಛೆ ಛೆ.

“ನಾವು ಹೋಗುತ್ತೇವೆ” ಎಂದು ಪ್ರಯೋಗಿಸಿದ ಬಾಣ ಬಹಳ ಕೆಲಸಮಾಡಿಬಿಟ್ಟಿತು. ಕರೆಸಿದ್ದ ಐದಾರು ಸಾವಿರ ಕುರಿಗಳು ಕಣ್ಣೀರು ಸುರಿಸಿದವು. “ನಾವು ಅನಾಥರಾಗಿತ್ತೇವೆ ಹೋಗಬೇಡಿ ಇಲ್ಲೆ ಫೆವಿಕಾಲ್ ಹಾಕ್ಕಂಡಿರಿ” ಎಂದು ಗೋಗರೆದವು.

ನಾವು ಬಿಟ್ಟು ಹೋಗುವುದರಿಂದ ಏನೂ ಆಗುತ್ತಿರಲಿಲ್ಲ. ನಾವು ಸಮಾಜಕ್ಕೆ ಕೊಟ್ಟ ಈ ಕೆಟ್ಟ ಇಮೇಜ್ ಹೋಗಲು ಮತ್ತೆ ಸಾವಿರ ವರ್ಷಗಳಾದರೂ ಬೇಕಾಗಬಹುದು. ನಮ್ಮಲ್ಲಿರುವ ಪೂಜಾ ವಿಗ್ರಹಗಳಲ್ಲಿ ದೈವತ್ವವೇ ಉಳಿದಿಲ್ಲ ಎಂಬುದು ನಮಗೆ ಗೊತ್ತು.

ನಾವು ಸೀಟು ಬಿಟ್ಟುಕೊಟ್ಟರೆ ಇನ್ನೆಂದೂ ಜನ ನಮ್ಮ ಮರ್ಯಾದೆ ಉಳಿಸುವುದಿಲ್ಲ ಎಂಬುದೂ ಗೊತ್ತು. [ನಾವು ಮೂರೂ ಬಿಟ್ಟಿದ್ದೇವೆ ಬಿಡಿ]ಕಾವಿ ತೆಗೆದು ಜೀನ್ಸ್ ಹಾಕಿಸಿ ಮೆರವಣಿಗೆ ಮಾಡುವ ದಿನ ಸಮೀಪ ಬಂತೇನೋ ಎನಿಸುತ್ತದೆ. ಅಂತೂ ನಮ್ಮ ಕಂಪನಿ ವ್ಯವಹಾರ ಸತ್ಯಂ ಕಂಪನಿಯ ದಗಲಬಾಜಿ ವ್ಯವಹಾರದ ರೀತಿಯಲ್ಲೇ ಸಾಗಿದೆ.

ಕಂಸವಧೆ ಯಕ್ಷಗಾನದಲ್ಲಿ ದುಸ್ವಪ್ನ ಕಂಡ ಕಂಸ “ನೆತ್ತಿಗೆ ತೈಲವನುಜ್ಜುತ…” ಎಂಬ ಹಾಡಿಗೆ ನರ್ತಿಸಿದಂತೆ ನಮ್ಮ ಪಾಡು. ಕೊನೆಯ ಕ್ಷಣದವರೆಗೂ ವಿರೋಧಿಗಳಲ್ಲಿ ಒಬ್ಬೊಬ್ಬರಿಗೂ ನಾವು ಹೇಳುತ್ತೇವೆ “ಸೀಟು ಬಿಡುವ ಪ್ರಶ್ನೆಯೇ ಇಲ್ಲ. ನೀನು ಏನು ಬೇಕಾದರೂ ಮಾಡು…ನೀನು ಏನು ಬೇಕಾದರೂ ಮಾಡು.”

Thumari Ramachandra

source: https://www.facebook.com/groups/1499395003680065/permalink/1604509963168568/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s