ಕುರಿಗಳು ‘ಹಂಟರ್’ ಸಿನಿಮಾ ನೋಡಬೇಕು

ಕುರಿಗಳು ‘ಹಂಟರ್’ ಸಿನಿಮಾ ನೋಡಬೇಕು

ಅನಿರೀಕ್ಷಿತವಾಗಿ ಮೆಸ್ಸೇಜು ಬಂದಾಗ ಈ ಸಿನಿಮಾವನ್ನು ನೋಡಬೇಕಾಯ್ತು. ಸಿನಿಮಾದೊಳಗೇನಿದೆ ಎಂದು ಮೆಸ್ಸೇಜ್ ಮಾಡಿದವರು ಹೇಳಿರಲಿಲ್ಲ. ಆದರೆ “ಕುರಿಗಳಿಗೆ ಈ ಸಿನಿಮಾ ನೋಡಲು ಹೇಳಿ” ಎಂದು ಹೇಳಿದ್ದರು.

ಹವ್ಯಕ ಹೈಡ್‍ಔಟ್‌ನಲ್ಲಿ ಹಲವು ತಲೆಗಳು ಕೆಲಸಮಾಡುತ್ತಿವೆ. ಹಳದೀ ತಾಲಿಬಾನ್‍ನಿಂದ ಎಲ್ಲಿ ತಮ್ಮ ತಲೆ ಉರುಳಿ ಹೋಗುವುದೋ ಎಂದು ಹೆದರಿ ತಲೆಮರೆಸಿಕೊಂಡು ಮುಂದಿರುವವರ ಮೂಲಕ ಸಂದೇಶ ಹರಡಲು ಯತ್ನಿಸುತ್ತಿವೆ. ಇದರಲ್ಲಿ ’ಸರ್ಪಾಸ್ತ್ರ’ ಪ್ರಯೋಗಕ್ಕೆ ಒಳಗಾಗಿ ಹೇಳಿಕೊಳ್ಳಲಾಗದ ಮಹಿಳೆಯರೂ ಇದ್ದಾರೆ.

ಹೇಳಿಕೊಂಡು ದೂರು ದಾಖಲಿಸಿದರೆ ತಮ್ಮ ಮೇಲೇ ಕೇಸು ಮತ್ತು ತಮಗೆ ಜೈಲು ಎಂಬ ಹೆದರಿಕೆಯಲ್ಲಿ ಹಾಗೇ ಕೂತಿದ್ದಾರೆ. ಇಂತಹ ಸುಮಾರು ನೂರಾರು ಮಹಿಳೆಯರು ಇದ್ದಾರೆಂಬುದು ಒಂದು ಗಣತಿ. ಎಲ್ಲರೂ ಮುಖ ಮರೆಸಿಕೊಂಡು ತಣ್ಣಗಿದ್ದಾರೆ.

ಯಾವುದೋ ಕುರುಹು ಸಿಕ್ಕು ವಿಚಾರಣೆಗೆ ಕರೆದು ತಮ್ಮ ವಿಷಯ ಬಹಿರಂಗಗೊಂಡರೆ ಎಂಬ ಭಯ ಅವರನ್ನು ಕಾಡುತ್ತಿದೆ. ಹಾಗೊಮ್ಮೆ ಬಹಿರಂಗಗೊಂಡರೆ ತಮ್ಮ ಕುಟುಂಬ ಒಡೆಯದೆ ಇರಬಹುದೇ ತಮ್ಮ ಕುಟುಂಬದ ಘನತೆ ಏನಾಗಬಹುದು ಎಂಬ ಆತಂಕ ಕೂಡ ಅವರಲ್ಲಿದೆ.

ಈಗ ’ಹಂಟರ್’ ಸಿನಿಮಾ ಆರಂಭಿಸುತ್ತಿದ್ದೇನೆ.

’ಹಂಟರ್’ ಎಂಬುದು ಒಂದು ಬಾಲಿವುಡ್ ಸಿನಿಮಾ. ಅದರಲ್ಲಿ ಯುವಕ ತನ್ನ ಹದಿಹರೆಯಕ್ಕೂ ಕಾಲಿಡುವ ಮುನ್ನವೇ ಅವನಲ್ಲಿ ಕಾಮದ ತೆವಲು ಜಾಗೃತಗೊಳ್ಳುತ್ತದೆ. ಹೆಂಗಸರು ಹೆಣ್ಣುಮಕ್ಕಳು ಕಂಡಲ್ಲೆಲ್ಲ ಅವನಿಗೆ ಅಪ್ಪಿಕೊಂಡು ಭೋಗಿಸುವಂತದ್ದೇ ಯೋಚನೆ.

ಬ್ಲ್ಯಾಕ್‍ನಲ್ಲಿ ಟಿಕೆಟ್ ಖರೀದಿಸಿ ಎಳೆಯ ಮಕ್ಕಳಿಗೆ ನಿಷೇಧಿತವಾದ ಬ್ಲೂ ಫಿಲ್ಮ್ ಮಿಕ್ಸ್ ಮಾಡಿದ ಡಬಲ್ ಎಕ್ಸ್ ಸಿನಿಮಾ ನೋಡುತ್ತಾನೆ. ಪೋಲೀಸರು ಹಿಡಿದು ತಲೆ ಬೋಳಿಸಿ ಕಳಿಸಿದಾಗ ಮನೆಯಲ್ಲಿ ಸುಳ್ಳು ಹೇಳುತ್ತಾನೆ. ಶಾಲೆಯಲ್ಲಿ ಹೊಟ್ಟಿನ ನಿವಾರಣೆಗೆ ತಲೆಬೋಳಿಸಿದೆ ಎನ್ನುತ್ತಾನೆ.

ಸುಂದರವಾದ ಮಹಿಳೆಯರು ಹೆಣ್ಣುಮಕ್ಕಳು ಕಂಡರೆ ಯಾವ ಕೋನದಲ್ಲಿ ಏನು ಕಾಣುತ್ತದೆ ಮತ್ತು ಹೇಗೆ ಕಾಣುತ್ತದೆ ಎಂದು ನೋಡುತ್ತಿರುತ್ತಾನೆ. ಇಷ್ಟೇ ಆದರೆ ಪರವಾಗಿರಲಿಲ್ಲ. ಹುಡುಗಿಯರನ್ನು ಮಾತಿನಲ್ಲಿ ಹೇಗೆ ಪಟಾಯಿಸಿಕೊಳ್ಳಬೇಕು ಎಂಬುದನ್ನು ಕಲಿತುಕೊಳ್ಳುತ್ತಾನೆ. ತೆವಲಿಗೆ ಯಾರಾದರೂ ಸಿಗುವರೇ ಎಂದು ಬೆನ್ನತ್ತಿ ನೋಡುತ್ತಾನೆ.

ಬೆಳೆದಂತೆ ಅವನ ಮಾತಿಗೆ ರೂಪಕ್ಕೆ ನಡಿಗೆಗೆ ಹೊರಗಿನ ವ್ಯಕ್ತಿತ್ವಕ್ಕೆ ಮಾರುಹೋಗದ ಹುಡುಗಿಯರೆ ಇಲ್ಲ ಎಂಬಷ್ಟು ಪ್ರಭಾವಶಾಲಿಯಾಗುತ್ತಾನೆ. ಒಮ್ಮೊಮ್ಮೆ ಮದುವೆಯಾಗಿ ಸೆಟ್ಲ್ ಆಗಿಬಿಡೋಣ ಅಂದುಕೊಂಡರೂ ಅವನ ವೀಕ್‍ನೆಸ್ ಅವನಿಗೇ ಗೊತ್ತಿರುತ್ತದೆ. ಒಬ್ಬಳ ಜೊತೆಗೆ ಬಹಳ ಕಾಲ ಸಂಸಾರದ ಜವಾಬ್ದಾದಿ ಹೊರುವ ಮನಸ್ಸಿನವನಲ್ಲ.

ಮದುವೆಯಾಗಿದ್ದೂ ಮನೆಯದರ ಜೊತೆಗೆ ಬೇರೆ ಉಪ್ಪಿನಕಾಯಿ ನೆಕ್ಕುವ ಚಟದ ಕೆಲವು ಹೆಂಗಸರನ್ನು ಪತ್ತೆಹಚ್ಚಿ ಅವರ ಜೊತೆ ಸಂಬಂಧ ಇರಿಸಿಕೊಳ್ಳುತ್ತಾನೆ. ಅದು ಬಹಳ ಗೋಪ್ಯವಾಗಿರುತ್ತದೆ. ಹೊರಗೆ ಯಾರಿಗೂ ತಿಳಿಯುವುದಿಲ್ಲ. ಒಬ್ಬಳ ಜೊತೆಗಿನ ಸಂಬಂಧ ಇನ್ನೊಬ್ಬಳಿಗೆ ತಿಳಿಯುವುದಿಲ್ಲ. ಅಷ್ಟರಮಟ್ಟಿಗಿನ ಚಾಣಾಕ್ಷ.

ನಿಗದಿತ ಉದ್ಯೋಗವಿಲ್ಲ ಸಂಬಳವಿಲ್ಲ. ಇತರ ಯಾವುದೇ ಆದಾಯವಿಲ್ಲ. ಆದರೂ ಆಗಾಗ ಮದುವೆಯಾಗುವ ಮನಸ್ಸು. ಬೇಡ ಹಲವು ಹುಡುಗಿಯರೊಟ್ಟಿಗೆ ಮಜಾ ಮಾಡುತ್ತ ಕಾಲಹರಣ ಮಾಡೋಣ ಎಂಬುದು ಇನ್ನೊಂದು ಮನಸ್ಸು.

ಈಗ ಇಂಟರವಲ್ ತೆಗೆದುಕೊಳ್ಳೋಣ.

ರಾಮಚಂದ್ರ ನಿಜ ಸಂಗತಿಗಳನ್ನು ಹೇಳಲು ಜಾಸ್ತಿ ರೀಲುಗಳನ್ನು ಬಳಸುತ್ತಾನೆಯೇ ಹೊರತು ’ರೈಲು’ಬಿಡುವುದಕ್ಕೆ ತಯಾರಿಲ್ಲ.

ಪ್ರತೀ ಮನುಷ್ಯನಲ್ಲೂ ದೌರ್ಬಲ್ಯ ಇದ್ದೇ ಇರುತ್ತದೆ. ತನ್ನ ದೌರ್ಬಲ್ಯವನ್ನು ತಾನೇ ಅರಿತುಕೊಂಡು ಅದನ್ನು ನಿಯಂತ್ರಿಸಿಕೊಳ್ಳುವುದು ಶ್ರೀಸಾಮಾನ್ಯನ ಲಕ್ಷಣ.

ದೌರ್ಬಲ್ಯಗಳನ್ನು ನಿಯಂತ್ರಿಸಿಕೊಳ್ಳಲಾಗದವರು ಸಮಾಜದಲ್ಲಿ ಪ್ರತ್ಯೇಕವಾಗಿ ಬೆರಳುಮಾಡಿ ಗುರುತಿಸಲ್ಪಡುತ್ತಾರೆ. ದೌರ್ಬಲ್ಯಗಳಲ್ಲಿ ಕಾಮುಕ ಸ್ವಭಾವ ಅತಿದೊಡ್ಡ ದೌರ್ಬಲ್ಯ.

ಇದು ಹೆಣ್ಣು ಮತ್ತು ಗಂಡು ಎರಡೂ ವರ್ಗಗಳಲ್ಲೂ ಇದೆ. ಹೆಂಗಸರು ಸ್ವಲ್ಪ ಹೆಚ್ಚಿಗೆ ಗೌಪ್ಯತೆ ಕಾಪಾಡುತ್ತಾರೆ. ಗಂಡಸರು ಕಚ್ಚೆಹರುಕರಾಗಿ ಸಿಕ್ಕಿ ಬೀಳುತ್ತಾರೆ. ’ಏಕಾಂತ’ಕ್ಕೆ ಹೋದವರಲ್ಲಿ ಕೆಲವರು ಕಾಮುಕ ಸ್ವಭಾವದ ಮಹಿಳೆಯರೂ ಇರಬಹುದು ಮತ್ತು ಅವರಿಗೆ ಅದೇ ’ಅನುಗ್ರಹ’ ಪದೇ ಪದೆ ಬೇಕು.

ಇತರರ ದೌರ್ಬಲ್ಯಗಳನ್ನು ಎನ್‍ಕ್ಯಾಷ್ ಮಾಡಿಕೊಳ್ಳುವ ಜನರೂ ಇರುತ್ತಾರೆ ಬಾವಯ್ಯಂದಿರೂ ಇರುತ್ತಾರೆ. ಹುಟ್ಟಿನಿಂದ ಬಂದ ಚಟ ಚಟ್ಟ [ಕೆಲವು ಕಡೆ ಘಟ್ಟ ಎಂದೂ ಹೇಳುತ್ತಾರೆ] ಹತ್ತಿದರೂ ಬಿಡುವುದಿಲ್ಲವಂತೆ. ಕಾಮುಕರಿಗೆ ಅದು ಜನ್ಮಜಾತ ಸ್ವಭಾವ. ಅದನ್ನು ನಿಯಂತ್ರಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ.

ಕಾಮದ ಮುಖವಾಡವನ್ನು ಮುಚ್ಚಿಡಲು ಹೊರನೋಟಕ್ಕೆ ಅವರು ಜನಪ್ರಿಯರೆನಿಸಿಕೊಳ್ಳಬಯಸುತ್ತಾರೆ. ಗೋಮಾಳದ ಗೋವುಗಳನ್ನು ದಾನಮಾಡುದರು ಎಂಬಂತೆ [ಯಾರದೋ ದುಡ್ಡಿನಲ್ಲಿ] ಯಾವುದೋ ಸಮಾಜಮುಖಿ ಕೆಲಸ ನಡೆಸಿದಂತೆ ನಾಟಕವಾಡುತ್ತಾರೆ.

ಕಾಮದ ತೆವಲಿನಲ್ಲಿ ಇಂತವರು ಹಲವು ಜೀವಹರಣಗಳಿಗೆ ಕಾರಣರಾಗುತ್ತಾರೆ. ಅದು ಪ್ರತ್ಯಕ್ಷವಾಗಿರಬಹುದು ಅಥವಾ ಪರೋಕ್ಷವಾಗಿರಬಹುದು. ತಮ್ಮ ಕಾಮುಕ ಮುಖ ಬಹಿರಂಗಗೊಳ್ಳುವುದೆಂದು ಗೊತ್ತಾದರೆ ಅದನ್ನು ಬಹಿರಂಗಗೊಳಿಸುವವರಿಗೆ ಜೀವ ಬೆರದಿಕೆಯನ್ನೂ ಒಡ್ಡುತ್ತಾರೆ. ತಮ್ಮ ಪಟಾಲಮ್ ಕಳಿಸಿ ಮುಗಿಸಲೂ ಹೇಸುವವರಲ್ಲ.

ದೌರ್ಬಲ್ಯವನ್ನು ನಿವಾರಿಸಿಕೊಳ್ಳುವುದು [ಪತಂಜಲಿ ಮಹರ್ಷಿಯ ಅಷ್ಟಾಂಗಯೋಗ ಚಿತ್ತವೃತ್ತಿಯನ್ನು ನಿರೋಧಿಸುವುದರಿಂದ ಅದನ್ನು ಬಳಸಿ ಸಾಧನೆಗೈದ]ಯೋಗಿಗಳಿಗೆ ಮಾತ್ರ ಸಾಧ್ಯವೇ ಹೊರತು ಕಾವಿ ವೇಷದವರಿಗಲ್ಲ.

ಹಾಂ…..ಈಗ ಸಿನಿಮಾ ಮುಂದುವರಿಯುತ್ತದೆ.

ಹಂಟರ್ ಸಿನಿಮಾದ ಹೀರೋ ಮುಗ್ಧ ಹುಡುಗಿಯರನ್ನು ಹೇಗೆ ತನ್ನ ತೋಳ್ತೆಕ್ಕೆಯಲ್ಲಿ ಬೀಳಿಸಿಕೊಂಡು ಮಜಾ ಉಡಾಯಿಸುತ್ತಾನೆ ಎಂಬುದು ಬಹಳ ಸಮಯದವರೆಗೆ ಯಾರಿಗೂ ಗೊತ್ತಾಗುವುದಿಲ್ಲ.

ತಾನಿರುವ ವಸತಿ ಅಪಾರ್ಟ್‍ಮೆಂಟಿನ ಪಕ್ಕದಲ್ಲೆ ಇರುವ ಹೆಂಗಸನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾನೆ. ಛೆ ಮುಂದೆ ಹೇಳಬಾರದು..

ನಿರ್ದೇಶಕರು ಪ್ರಾಚೀನ ಸಿನಿಮಾಗಳಲ್ಲಿ ತೋರಿಸಿದಂತೆ ಹೂವಿಗೆ ದುಂಬಿ ಮುತ್ತಿಡುವುದು ಅಥವಾ ಹೂವಿಗೆ ಹೂವು ತಾಗುವುದು ಇತ್ಯಾದಿ ಕಸರತ್ತುಗಳನ್ನೆಲ್ಲ ಬಿಟ್ಟು ಎಲ್ಲವನ್ನೂ ಹಿತಮಿತವಾಗಿ ತೋರಿಸಿದ್ದಾರೆ. ತೀರಾ ಅತಿಯಾಗಿದೆ ಎನಿಸುವಷ್ಟೇನಿಲ್ಲ. ವಿಷಯ ಗೊತ್ತಾಗುತ್ತದೆ ಆದರೆ ಪೂರ್ಣಕಾಮದ ದೃಶ್ಯಗಳು ಕಾಣಿಸುವುದಿಲ್ಲ.

ಹೆಂಗಸೊಬ್ಬಳು ಹೀರೋನ ಕೋಣೆಯಲ್ಲಿರುವಾಗಲೇ ಮೊದಲು ಆತನಿಂದ ಭೋಗಕ್ಕೊಳಗಾದ ಇನ್ನೊಬ್ಬ ಹುಡುಗಿ ಮತ್ತೆ ಆತನ ಸಂಗ ಬಯಸಿ ಬರುತ್ತಾಳೆ. ಅವಳಿಗೆ ಆತನಮೇಲಿರುವುದು ನಿಜವಾದ ಪ್ರೀತಿ. ತನ್ನನ್ನೇ ಮದುವೆಯಾಗುತ್ತಾನೆ ಎಂಬುದು ಅವಳ ಭಾವನೆ.

ಬಂದ ಹುಡುಗಿಯನ್ನು ಬಾಗಿಲಾಚೆಗಿಂದಲೆ ಮರಳಿ ಕಳಿಸುತ್ತಾನೆ. ಒಳಗೆ ಯಾರೋ ಇರುವುದು ಆಕೆಗೆ ಗೊತ್ತಾಗುತ್ತದೆ. ಆದರೆ ಟಿವಿಯ ಸದ್ದಿರಬಹುದು ಎಂಬ ಸಂದೇಹವೂ ಉಂಟಾಗುತ್ತದೆ.

ಸುಂದರವಾದ ಹೆಂಗಸರು ಯಾರೇ ಇರಲಿ ಪರಿಚಯಮಾಡಿಕೊಳ್ಳಲು ಹವಣಿಸುತ್ತಾನೆ. ಕೆಲವು ಪ್ರಯತ್ನಗಳಲ್ಲಿ ಯಶಸ್ಸನ್ನೂ ಕಾಣುತ್ತಾನೆ. ಬೆನ್ನುನೋವು ಮಂಡಿನೋವು ಅಂದರೆ ಮಸಾಜ್ ಮಾಡಿಕೊಡುತ್ತೇನೆಂಬ ನೆಪ ಒಡ್ಡಿ ಮೈ ಮುಟ್ಟುತ್ತಾನೆ. ಯಾರನ್ನೋ ಸಂಪರ್ಕಿಸಿ ಯಾವುದೋ ಕೆಲಸಗಳನ್ನು ಮಾಡಿಕೊಳ್ಳಬೇಕಾಗಿತ್ತು ಎಂದು ಅವರು ಹೇಳಿದರೆ ತಾನೇ ಮಾಡಿಕೊಡುವುದಾಗಿ ಹೇಳುತ್ತಾನೆ.

ಮನೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಲು ಒಪ್ಪಿದರೆ ಹುಡುಗಿ ಸಿಗಬೇಕಲ್ಲ? ಹುಡುಗಿಯರು ಸಿಕ್ಕಾಗ ತನಗೆ ಒಂದೆರಡು ಚಿಲ್ಲರೆ ಅಫೇರ್‌ಗಳಿದ್ದವು ಎಂದಿದ್ದಕ್ಕೆ ಸಂದರ್ಶನದ ಜಾಗದಿಂದ ಆವರೆಲ್ಲ ಓಡಿಹೋಗುತ್ತಾರೆ.

ನಂತರ ಸುಳ್ಳು ಹೇಳಿ ಹುಡುಗಿಯೋರ್ವಳನ್ನು ಒಪ್ಪಿಸುತ್ತಾನೆ. ನೋಡಿದರೆ ಅವಳದ್ದೂ ಸ್ವಲ್ಪ ಎಡವಟ್ಟಿನ ಕೇಸೇ ಆಗಿತ್ತು. ಒಮ್ಮೆ ಹಗಲುಗನಸಿನಲ್ಲಿ ಅವನ ಲಂಪಟತನವನ್ನು ಕಂಡು ಸಾರ್ವಜನಿಕರು ಚೆನ್ನಾಗಿ ಥಳಿಸಿದಂತೆ ಕಂಡು ಭಯಪಡುತ್ತಾನೆ.

ಸಿನಿಮಾ ಆರಂಭದಿಂದ ಅಂತ್ಯದವರೆಗೂ ಅವನ ಮನಸ್ಸು ಬಯಸುವುದು ಸಂಭೋಗವನ್ನು ಮತ್ತು ಕಣ್ಣುಗಳು ಸದಾ ಹಂಟ್ ಮಾಡುವುದು ಶೋಧಿಸುವುದು ಸುಂದರ ಮಹಿಳೆಯರನ್ನು. ಬರೇ ಕತೆಯಲ್ಲಿ ಹೀಗೆ ಬರೆದರೆ ಅವು ರಂಜನೀಯವಲ್ಲ. ನೋಡಿದರಷ್ಟೆ ಅನುಭವಕ್ಕೆ ಬರುವಂತದ್ದು.

ತುಮರಿ ರಾಮಚಂದ್ರ ಇಲ್ಲಿಗೆ ಸಿನಿಮಾ ಮುಗಿಸುತ್ತಾನೆ. ಸಮಾಜದಲ್ಲಿ ಹೇಗೆಲ್ಲ ರಾಂಗ್ ಕ್ಯಾರೆಕ್ಟರ್‌ಗಳು ಇರುತ್ತವೆ ಎಂಬುದನ್ನು ’ಹಂಟರ್’ ತೋರಿಸುತ್ತದೆ ಎಂದು ಷರಾ ಬರೆಯುತ್ತಾನೆ. ಹಂಟರ್ ಸಿನಿಮಾದ ಹೀರೋ [ಪಾತ್ರಧಾರಿಯನ್ನಲ್ಲ]ವನ್ನು ವಿಲನ್ ಎಂದೂ ಹೇಳಬಹುದು ಮತ್ತು “ಅಂತವನು ಸನ್ಯಾಸಿಯಾದರೆ ಹೇಗಿರಬಹುದು?” ಎಂದು ತನಲ್ಲೇ ಪ್ರಶ್ನಿಸಿಕೊಂಡು “ರಾಂಗ್ ವೇಷದ ರೀತಿ ಇರುತ್ತದೆ” ಎಂಬ ಉತ್ತರವನ್ನು ರಾಮಚಂದ್ರ ನಿಮ್ಮ ಮುಂದಿಟ್ಟಿದ್ದಾನೆ.

Thumari Ramachandra

source: https://www.facebook.com/groups/1499395003680065/permalink/1603026693316895/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s