ಸನ್ಯಾಸಿ ಮದುವೆ

ಸನ್ಯಾಸಿ ಮದುವೆ

ಒಂದಾನೊಂದು ರಾಜ್ಯದಲ್ಲಿ ಸುಮಾರಿಗೆ ದೊಡ್ಡದಾದೊಂದು ಸಂಸ್ಥಾನವಿತ್ತು. ಅದಕ್ಕೊಬ್ಬ ಅಧಿಪತಿಗಳು. ಮನುಷ್ಯ ಜೀವನ ಶಾಶ್ವತವೇ? ಆ ಸಂಸ್ಥಾನದ ಅಧಿಪತಿಗಳು ಮುದುಕರಾದರು. ಮನುಷ್ಯರೆಲ್ಲರಿಗೂ ಸಹಜವಾಗಿ ಬರುವಂತೆ ಅಧಿಪತಿಗಳಿಗೂ ಕಾಯಿಲೆ ಬಂತು.

ಸಂಸ್ಥಾನದ ಹೊಣೆಯನ್ನು ಯಾರಿಗಾದರೂ ವಹಿಸಬೇಕಲ್ಲ? ಅದು ಬ್ರಹ್ಮಚರ್ಯದ ಸೀಟು. ಹೀಂಗಾಗಿ ಮುದಿ ಅಧಿಪತಿಗಳಿಗೆ ಮದುವೆ ಸಂಸಾರ ಇರಲಿಲ್ಲ. ಆದರೆ ಮಕ್ಕಳ ರೀತಿಯಲ್ಲೆ ಶಿಷ್ಯಂದಿರಿದ್ದರು. ಶಿಷ್ಯ ಬಳಗದಲ್ಲಿ ಯಾರಾದ್ರೂ ಸಿಗ್ತಾರಾ ನೋಡಿದರು.

ಶಿಷ್ಯ ಬಳಗದಲ್ಲಿ ಅಪ್ಪನೊಬ್ಬನ ಮಗ ಬೀಚಿನಲ್ಲಿ ಆಡಿಕೊಂಡಿದ್ದ. ಅಧಿಪತಿಗಳು ಅಧಿಕಾರ ಹಸ್ತಾಂತರಿಸುವ ಸುದ್ದಿ ಕೇಳಿ ಮಾಣಿಯ ಅಪ್ಪನಿಗೆ ಒಳಗೊಳಗೆ ಖುಷಿಯಾಯಿತು. ಮಾಣಿಯ ಅಪ್ಪ ಸೀದಾ ಸಂಸ್ಥಾನಕ್ಕೆ ಹೋದ.

ಹೊಣೆಯನ್ನು ವಹಿಸುವ ಅಧಿಪತಿಗಳು ಸ್ಪರ್ಧಾಳುಗಳ ತಲಾಷ್ ನಡೆಸುತ್ತ ಜಾತಕಗಳನ್ನು ತರಿಸಿಕೊಳ್ಳುತ್ತಿದ್ದರು. “ಇಲ್ಲೆಲ್ಲೋ ಬಂದಿದ್ದೆ ಹೀಗೇ ಬಂದೆ” ಎಂದ ಮಾಣಿಯ ದುಡುಗುಟ್ಟಿಕೊಂಡು ಮನೆಗೆ ಓಡಿ ಹೋಗಿ ಊರಲ್ಲೆಲ್ಲೂ ಇಲ್ಲದ ಯೋಗಗಳನ್ನು ಹಾಕಿಸಿ ಮಾಣಿಯ ಜಾತಕ ತಿದ್ದಿಸಿದ.

ಎರಡೇ ದಿನದಲ್ಲಿ ಮತ್ತೆ ಸಂಸ್ಥಾನಕ್ಕೆ ಹೋಗಿ ಮಾಣಿಗೆ ಸನ್ಯಾಸ ಯೋಗವಿದೆ ಎಂದ. ಅಧಿಪತಿಗಳಿಗೆ ಆರೋಗ್ಯ ಚೆನ್ನಾಗೇ ಇರಲಿಲ್ಲ. ಸರಿಯಾದ ಸಮಯ ನೋಡಿ ಮಾಣಿಯ ಅಪ್ಪ ಜಾತಕವನ್ನು ಅಧಿಪತಿಗಳಿಗೆ ತಲುಪಿಸುವ ವ್ಯವಸ್ಥೆ ಮಾಡಿದ. ಬೀಚಿನಲ್ಲಿ ಆಡಿಕೊಂಡಿದ್ದ ಮಾಣಿಗೆ ಫೋನ್ ಮಾಡಿ ಕರೆಸಿಕೊಂಡ.

“ಮಾಣೀ, ನೀನು ಓದಿದ್ದೆಲ್ಲ ಸಾಕು. ಈಗ ಆ ಸೀಟು ಹಿಡಿ. ಸೀಟು ಹಿಡ್ಕಂಡ್ರೆ ಕಡಿಗೆ ಬೇಕಾದದ್ದೆಲ್ಲ ಅಲ್ಲೆ ಸಿಗ್ತು. ಸುಮ್ನೇ ಯಾದೋ ಮನಿಗೆ ಹೋಮ ಸುಡಲೆ ಹೋಪಬದಲು ಆರಾಮಾಗಿ ಇರ್ಲಕ್ಕನ” ಅಂದ.

“ಅಪ್ಪಯ್ಯ ಯನ್ನತ್ರ ಅದೆಲ್ಲ ಆಗ್ತಿಲ್ಲೆ. ಯನಗೆ ಅಷ್ಟೆಲ್ಲ ವ್ರತಗಿತ ಮಾಡಲಂತೂ ಸಾಧ್ಯವಿಲ್ಲೆ.” ಅಂದ ಮಾಣಿ.

ಹೇಗೋ ಓಂಡೇ ಮ್ಯಾಚ್ ರೀತಿಲಿ ಮಾಣಿಯ ಅಪ್ಪನೇ ಮಾತಿನಲ್ಲಿ ಗೆದ್ದ. ಮಾಣಿಗೆ ಅಪ್ಪ ಹೇಳಿದ್ದೂ ಹೌದೆನಿಸಿತು. ಹಣ ಅದು ಇದು ಎಲ್ಲವೂ ಅಲ್ಲೆ ಸಿಗುವಾಗ ಜೋಳಿಗೆ ಹಾಕಿಕೊಂಡು ಹೋಮ ಸತ್ನಾಣ ಕತೆ ಮಾಡಿಸೋದು ಬೇದ ಅನ್ನಿಸಿತು.

ಮಾಣಿಯ ಇಂಟರ್ವ್ಯೂ ಬಂದೇ ಬಂತು. ಅಪ್ಪನ ಹೈ ಇನ್‍ಫ್ಲೂಯೆನ್ಸ್‍ನಿಂದ ಮಾಣಿಯ ಸೆಲೆಕ್ಷನ್ ಕೂಡ ಆಗಿಹೋಯ್ತು. ಮುದಿ ಅಧಿಪತಿಗಳು ಕಾಲವಾದರು.

ಗೊತ್ತಾದ ದಿನ ಸೀಟನ್ನೇರಿದ ಮಾಣಿಗೆ ಹದಾ ವಯಸ್ಸಿನ ಹುಡುಗಿಯರು ಮೊದಲು ಕಣ ಹತ್ತಿದರು. ಜಪವಂತೆ ಪೂಜೆಯಂತೆ ಇದನ್ನೆಲ್ಲ ಬಿಟ್ಟಾಕಿ ಯಾವ್ದಾದ್ರೂ ಚಂದದ ಹುಡುಗಿ ಸೊಂಟ ಹಿಡ್ಕಂಡು ಬೀಚ್ನಲ್ಲಿ ತಿರುಗಾಡದ್ರೆ ಎಷ್ಟು ಸುಖ ಇತ್ತು ಅನ್ನಿಸತೊಡಗಿತು.

ಸೀಟನ್ನೇರಿದ ಮಾಣಿ ಹೊರಗಿನಿಂದ ಜಪ ಪೂಒಜೆ ಜೋರಾಯಿತು. ನಿತ್ಯ ಒಳಮನಸ್ಸಿನಲ್ಲಿ ದೇವರೆ ಹೇಗಾದರೂ ಮಾಡಿ ನನಗೆ ಬೇಕಾದ್ದು ಕೊಡು ಎಂದು ಪ್ರಾರ್ಥಿಸುತ್ತಿದ್ದ.

ಒಂದಾನೊಂದು ದಿನ ಮಾಣಿಗೆ ಅದ್ಭುತ ಕನಸೊಂದು ಬಿತ್ತು. ಕನಸಿನಲ್ಲಿ ಮಾಣಿ ಮದುಮಗನಾಗಿ ದಿಬ್ಬಣ ಹೊರಟಿದ್ದ. ಬಾಸಿಂಗದ ಗೊಂಡೆ ಅಲ್ಲಾಡಿಸುತ್ತ ನಾಚುತ್ತ ಹಲವು ಜನರ ಮಧ್ಯೆ ಸಾಗುತ್ತಿದ್ದ. ಕನಸಿನೊಳಗೊಂದು ಕನಸು ಕಂಡು ಮದುವೆಯಾಗುವ ಹುಡುಗಿ ಅದರಲ್ಲಿ ಕಾಣಿಸಿಕೊಂಡು ನಕ್ಕಳು. ಅವಳ ನಾಚಿಕೆಯ ನಗುವಿಗೆ ಮಾರುಹೋದ ದುಷ್ಯಂತನಾದ.

ಕಾಲಿಗೆ ಚುಚ್ಚಿದ ಮುಳ್ಳನ್ನು ತೆಗೆಯುವಂತೆ ಶಕುಂತಕೆ ದುಷ್ಯಂತನನ್ನು ಕಣ್ಣಲ್ಲೇ ಕರೆದಳು.

“ಗುರುಗಳೇ, ಬೆಳಗಿನ ಸ್ನಾನಕ್ಕೆ ರೆಡಿಯಾಯ್ತು” ಎಂದ ಕರ್ಕಶ ಕಾಕಾರವಕ್ಕೆ ಹಾರಿಬಿದ್ದ ಮಾಣಿ ಸೇವೆಮಾಡಲಿದ್ದ ಗಿಂಡಿಮಾಣಿಯ ತಲೆಗೊಂದು ಮೊಟಕುವುದರಲ್ಲಿದ್ದ ಆದರೆ ತಡೆದುಕೊಂಡು ದೊಡ್ಡದಾಗಿ ನುಂಗಿಬಿಡುವಂತೆ ಕಣ್ಣುಬಿಟ್ಟ.

ಮತ್ತೆ ಇನ್ನೊಂದು ಮಧ್ಯಾಹ್ನ ವಿಶ್ರಾಂತಿಗೆ ತೆರಳಿ ಇಂಟರ್ನೆಟ್ ಓಪನ್ ಮಾಡಿದಾಗ ಸುಂದರಿಯೊಬ್ಬಳು ಚಂದದ ಫೋಟೋ ಹಾಕಿದ್ದಳು. ಕಾಮನ ಬಿಲ್ಲಿನಂತ ಹುಬ್ಬು ಸಂಪಿಗೆಯ ನಾಸಿಕ ದಾಳಿಂಬದ ದಂತಪಂಕ್ತಿ ಇವೆಲ್ಲವನ್ನೂ ಮುಖದಲ್ಲಿ ಕಂಡ. ಹಾಗೇ ಕೆಳಭಾಗಕ್ಕೆ ಚಲಿಸುತ್ತ ಛೆ…. ಬೇಡ ಬಿಡಿ ಹೇಳಿದರೆ ಆತನಿಗೆ ಬೇಜಾರಾಗುತ್ತದೆ.

ತಡೆಯಲಾರದೆ “ಹಾಯ್” ಎಂದ.

ಅವಳೂ “ಹಾಯ್” ಎಂದಳು. ನಂತರ ಪರಸ್ಪರ ವಿಚಾರ ವಿನಿಮಯಗಳು ನಡೆಯತೊಡಗಿದವು. ತಾನು ಸಂಸ್ತಾನದ ಎಡ್ಮಿನ್ ಅಂದ. ಮಾತುಕತೆ ಆಗಾಗ ’ಧ್ಯಾನ’ದ ರೂಪದಲ್ಲಿ ನಡೆಯುತ್ತಿತ್ತು.

ಇದ್ದಕ್ಕಿದ್ದಲ್ಲೆ ಆ ರಾತ್ರಿ ಮಾಣಿಗೆ ಕನಸಿನಲ್ಲಿ ದೇವರು ಕಾಣಿಸಿದ. “ಓ ದೇವರೆ ಅಂತೂ ಬಂದೆಯಾ? ನನ್ನ ಪ್ರಾರ್ಥನೆ ನಿನಗರ್ಥವಾಯಿತಲ್ಲವೇ? ನಾನು ಬಾಕಿ ಎಲ್ಲವನ್ನೂ ಹಾಗೂ ಹೀಗೂ ನಿಭಾಯಿಸುತ್ತೇನೆ. ಆದರೆ ’ಪೋಚಗಣಿ’ಗೊಂದು ವ್ಯವಸ್ಥೆ ಮಾಡು ಸ್ವಾಮೀ” ಎಂದ. ದೇವರು “ತಥಾಸ್ತು” ಹೇಳುವಷ್ಟರಲ್ಲೆ ಕನಸಿ ಮುಗಿದಿತ್ತು.

ಕೆಲವೇ ದಿನಗಳಲ್ಲಿ ಮಾಣಿಗೊಂದು ಪ್ಲಾನು ಹೊಳೆಯಿತು. ಭಕ್ತೆಯರಿಗೆಲ್ಲ ಮುಕ್ತ ಅವಕಾಶ ಕಲ್ಪಿಸಬೇಕು ಎಂದ. ಏಕಾಂತ ದರ್ಶನ ನೀಡಿತ್ತೇನೆ ಎಂದ. ಜೊತೆಗಿರುವ ಗಿಂಡಿಗಳಿಗೆಲ್ಲ ಮೊದಮೊದಲಿ ಮಾಣಿಯ ವರ್ತನೆ ಅರ್ಥವೇ ಆಗಲಿಲ್ಲ.

ಅಂತೂ ಬಹಳ ಸಮಯ ಕಾದುಕೊಂಡಿದ್ದ ಮಾಣಿ ಒಂದಾನೊಂದು ದಿನ ಚಂದದ ಹೆಂಗಸಿಗೆ ಪ್ರಸಾದ ಕೊಡುತ್ತೇನೆ ಎಂದು ಏಕಾಂತಕ್ಕೆ ಕರೆದ. ಏಕಾಂತದಲ್ಲಿ ಅವಳ ಚಾರಿತ್ರ್ಯಕ್ಕೆ ದೋಖಾ ಕೊಡುವುದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನೂ ಮಾಡಿಟ್ಟುಕೊಂಡಿದ್ದ.

ಸೀಟನ್ನೇರಿದ ಬ್ರಹ್ಮಚಾರಿಯ ಆಶೀರ್ವಾದವನ್ನು ಕೋಣೆಯೊಳಗೆ ಪಡೆಯಲು ಮನಸ್ಸಿಲ್ಲದಿದ್ದರೂ ಅಂತೂ ಆಕೆ ಹೋದಳು. ಸಣ್ಯಾಸಿ ಹುದ್ದೆಯಲ್ಲಿದ್ದ ಮಾಣಿ ಮಂಚದಿಂದ ಕೆಳಗೆ ಹಾರಿ ಕಿಟಕಿ ಬಾಗಿಲುಗಳನ್ನೆಲ್ಲ ಖುದ್ದಾಗಿ ಮುಚ್ಚಿದ.

ಯಾವುದೋ ಪ್ರಸಾದವೆಂದು ಮಂಪರಿಗೆ ಜಾರುವ ತಿನಿಸು ನೀಡಿ ಪೋಚಗಣಿ ನಡೆಸಿಯೇ ಬಿಟ್ಟ.

ಕೋಣೆಯೊಳಗೆ ಏನಾಯ್ತೆಂಬುದು ಆಕೆಗೆ ಸರಿಯಾಗಿ ಎಚ್ಚರವಾದಾಗ ಅರಿವಿಗೆ ಬಂತು. ಅಸಹ್ಯ ಹುಟ್ಟಿ ತನಗೆ ತಾನೇ ಬಿದುಕೊಂಡರೂ ಹೊರಜಗತ್ತಿಗೆ ವಿಷಯ ಹೇಳದೆ ಮರ್ಯಾದೆ ಮುಚ್ಚಿಕೊಂಡಳು. ಗಂದ ಮಕ್ಕಳು ಬೃಹತ್ ಕುಟುಂಬದ ಇನ್ನಿತರ ಸದಸ್ಯರು ಬಂಧುಬಳಗ ಎಲ್ಲರ ನೆನಪಾಗಿ ಅತ್ತಳು.

ಅದಕ್ಕೂ ಮೊದಲೇ ಇನ್ನೂ ಹಲವು ’ಪೋಚಗಣಿ’ಗಳು ನಡೆದಿದ್ದವು ಎಂಬುದು ಅವಳಿಗೆ ಅಂದಾಜಾಯ್ತು. ಪೋಚಗಣಿ ಧ್ಯಾನ ಮೀಟಿಂಗು ಆಗಾಗ ನಡೆಯುತ್ತಲೇ ಹೋಯ್ತು.

ಐವತ್ತು ವರ್ಷದೊಳಗಿನ ಸುಂದರ ಅಮ್ಮಂದಿರನ್ನು ಪೋಚಗಣಿಗೆ ಕರೆಸಿಕೊಂಡ ಮಾಣಿ ಅವರ ಸುಂದರ ಹೆಣ್ಣುಮಕ್ಕಳನ್ನೂ ’ಆಶೀರ್ವಾದ’ಕ್ಕೆ ಕರೆತರುವಂತೆ ಹಠಮಾಡತೊಡಗಿದ.

ಅಧಿಕಾರ, ಹಣ, ಸೇವಕರು, ಜೈಕಾರ, ಮೃಷ್ಟಾನ್ನ, ಕಾರು-ಬಾರು ಜೊತೆಗೆ ಪೋಚಗಣಿಗೆ ಬೇಕಾದಾಗ ಬೇಕಾದಷ್ಟು ಹೆಣ್ಣುಮಕ್ಕಳು ಹೆಂಗಸರು. “ಅಪ್ಪ, ನೀನು ಅವತ್ತು ಬಹಳ ಒಳ್ಳೇ ಕೆಲಸ ಮಾಡಿದೆ. ನಾನು ಮನೆಯಲ್ಲೇ ಇದ್ದರೆ ಒಂದೇ ಮದುವೆ ಮತ್ತು ಜೋಳಿಗೆ ಹಾಕಿಕೊಂಡು ಎಲ್ಲಾದರೂ ಪೌರೋಹಿತ್ಯಕ್ಕೆ ಹೋದಾಗ ಪೋಚಗಣಿಗೆ ಹುಡುಕಬೇಕಾಗ್ತಿತ್ತು. ಈಗ ಇಲ್ಲಿ ಚೆನ್ನಾಗಿದೆ. ಈ ಸೀಟು ನನಗೆ ಹೇಳಿ ಮಾಡಿಸಿದ ಹಾಗಿದೆ” ಎಂದು ಮನಸ್ಸಿನಲ್ಲೇ ಹೇಳಿಕೊಂಡ.

ಒಂದು ರಾತ್ರಿ ಹಠಾತ್ತಾಗಿ ಕನಸಿನಲ್ಲಿ ಮತ್ತೆ ದೇವರು ಕಾಣಿಸಿಕೊಂಡು. “ಏನಯ್ಯಾ ನಿನ್ನ ಅವಾಂತರ? ಏನದು ಬೇಗ ಹೇಳು” ಎಂದ,

“ನಾನೊಂದು ದೊಡ್ಡ ಅರಮನೆಯನ್ನು ಕಟ್ಟಿಸಬೇಕು. ಅದಕ್ಕೆ ೩೬೫ ಕೋಣೆಗಳಿರಬೇಕು. ಎಲ್ಲಾ ಕೋಣೆಗಳಲ್ಲೂ ಸುಂದರಿಯರು ಇರಬೇಕು. ಲೆಕ್ಕಕ್ಕೆ ದಿನಕ್ಕೆ ಒಂದೆಂದಾದರೂ ದಿನಕ್ಕೆ ಒಂದಷ್ಟು ಕೋಣೆಗೆ ಹೋಗಿ ಪೋಚಗಣಿ ಮಾಡುತ್ತ ಬದುಕಬೇಕು. ನಾನೇ ದೇವರೆಂದು ಹೇಳಿದರೆ ನಂಬುವ ಬಕಾರಗಳು ಶಿಷ್ಯರಾಗಬೇಕು. ಪ್ರಸಾದ ಪಡೆಯಲು ಸದಾ ಹೊಸ ಹೊಸ ಲಲನೆಯರು ಬರುತ್ತಿರಬೇಕು.”

“ನೋಡಯ್ಯಾ, ಉತ್ತಮರಲ್ಲಿ ಮದುವೆಯಾದವರಿಗೆ ಬ್ರಹ್ಮಚರ್ಯವೇ ವಾಸಿಯಾಗಿತ್ತು ಎನಿಸುತ್ತದೆ. ಬ್ರಹ್ಮಚಾರಿಗಳಿಗೆ ಮದುವೆಯಲ್ಲೇ ಸುಖವಿರುವುದಾಗಿ ಭಾಸವಾಗುತ್ತದೆ. ಅವೆಲ್ಲವೂ ಬಿಸಿಲ್ಗುದುರೆಗಳಿದ್ದಂತೆ. ಸುಖ ಅಲ್ಲೆಲ್ಲೂ ಇಲ್ಲ. ನನ್ನನ್ನು ಸೇರುವುದರಲ್ಲಿದೆ. ನನ್ನನ್ನು ಸೇರಲು ಇರುವ ಸೀಟಿಗೆ ಬರಲು ನಿನಗೆ ಯೋಗ್ಯತೆಯಿಲ್ಲ. ಜನ್ಮಾಂತರಗಳಲ್ಲೂ ನೀನು ಪೋಚಗಣಿ ಮಾಡುತ್ತಲೇ ಬದುಕು.

ನನ್ನನ್ನು ಸೇರುವ ಸಾಧಕರಿಗಾಗಿ ಇಟ್ಟ ಸೀಟನ್ನೇರಿದ ನೀನು ಪೋಚಗಣಿ ವ್ಯವಹಾರದಲ್ಲೇ ಕಾಲಹರಣ ಮಾಡುತ್ತಿರುವ ಅಪರಾಧಕ್ಕೆ ಶಿಕ್ಷೆಯಾಗಿ ನನ್ನ ಪ್ರೇರಣೆಯಂತೆ ಈ ಲೋಕದ ಪೋಲೀಸರು ನಿನನ್ನು ಬಂಧಿಸುತ್ತಾರೆ. ಏಳುವರ್ಷಗಳಕಾಲ ಜೈಲಿನ ಕೋಣೆ ಕೋಣೆಗಳಲ್ಲಿದ್ದು ನಂತರ ಅಪ್ಪನ ಮಾಣಿಯಾಗಿ ಯಾರಾದರೂ ಹೆಣ್ಣು ಕೊಟ್ಟರೆ ಮದುವೆಯಾಗು” ಎಂದವನೇ ಅಪೀಲಿಗೂ ಅವಕಾಶ ಕೊಡದೇ ಅಂತರ್ಧಾನನಾದ.

Thumari Ramachandra

source: https://www.facebook.com/groups/1499395003680065/permalink/1602092376743660/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s