ಘರವಾಲೀ ಬಾಹರವಾಲೀ

ಘರವಾಲೀ ಬಾಹರವಾಲೀ

ತಪ್ಪು ಮಾಡದವ್ರು ಯಾರವ್ರೇ? ರಪ್ಪೇ ಮಾಡದವ್ರು ಎಲ್ಲವ್ರೆ?

“ಹೌದು. ನಾವು ಎಷ್ಟೋ ಸಲ ಇದನ್ನೇ ಅಂದುಕೊಂಡಿದ್ದೇವೆ. ಈ ಜಗತ್ತಿನಲ್ಲಿ ತಪ್ಪು ಮಾಡದವರು ಇಲ್ಲವೇ ಇಲ್ಲ. ಎಲ್ಲರೂ ತಪ್ಪು ಮಾಡಿಯೇ ಮಡುತ್ತಾರೆ. ಯಾಕೆಂದ್ರೆ …ಯಾಕೆಂದ್ರೆ… ಪ್ರತಿಯೊಬ್ಬರೂ ತಪ್ಪನ್ನು ಮಾಡಿಯೇ ತೀರುತ್ತಾರೆ.

ಆಕಾರ ಪಡೆದು ಭೂಮಿಯಲ್ಲಿ ಹುಟ್ಟಿದ ದೇವರಾದ ನಾವೂ ಅದಕ್ಕೆ ಹೊರತಾಗಿಲ್ಲ. ಆದರೆ ನಮ್ಮ ತಪ್ಪುಗಳು ತಪ್ಪುಗಳಲ್ಲ. ಸೃಷ್ಟಿಕರ್ತ ಬ್ರಹ್ಮನನ್ನೇ ಹುಟ್ಟಿಸಿದವರು ನಾವು. ಆಮ್ಲಜನಕ ಸಾರಜನಕ ಸಸಾರಜನಕ ಎಲ್ಲ ಇದ್ದಹಾಗೆ ನಮಗೆ ’ಬ್ರಹ್ಮಜನಕ’ ಎನ್ನಬಹುದು. ಆದರೂ ಬ್ರಹ್ಮನ ಸಾಲಿನಲ್ಲಿ ತ್ರಿಮೂರ್ತಿಗಳಲ್ಲೊಬ್ಬರಾಗಿ ನಾವಿರುತ್ತೇವೆ.

ಬಳಸಿದ ಬಟ್ಟೆಗಳನ್ನು ನಮಗೆ ಬೇಡವೆನಿಸಿದಾಗ ಬಡವರಿಗೆ ಕೊಟ್ಟರೆ ಹೊಸದೆಂಬಂತೆ ಸಂಭ್ರಮಿಸಿ ಹಾಕಿಕೊಳ್ತಾರೆ. ಹವ್ಯಕರಲ್ಲಿ ಬಡಪಾಯಿಗಳಾದ ಪ್ರಾಯದ ಹುಡುಗರು ನಲ್ವತ್ತಾದರೂ ಮದುವೆಯಾಗುತ್ತಿಲ್ಲ. ಅವರಿಗೆ ಹೆಣ್ಣುಮಕ್ಕಳೇ ಸಿಗುತ್ತಿಲ್ಲ.

ಹಾಗಾದರೆ ಹವ್ಯಕರಲ್ಲಿ ಹೆಣ್ಣುಮಕ್ಕಳೇ ಇಲ್ಲವೆ? ಇದ್ದಾರೆ. ಅವರೆಲ್ಲ ….ಅವರೆಲ್ಲ,,,, ಅವರೆಲ್ಲ ಇತರೆ ಯಾರೊಟ್ಟಿಗೋ ಮದುವೆಯಾಗುತ್ತಿದ್ದಾರೆ. ಹಣ ಮತ್ತು ಉದ್ಯೋಗ ಇವೆರಡನ್ನಷ್ಟೆ ಗಮನಿಸಿ ನಮ್ಮ ಹುಡುಗರನ್ನು ಮೂಸಿಯೂ ನೋಡುವವರಿಲ್ಲ.

ನಮಗೆ ಅಂದರೆ ದೇವರಿಗೆ ಇದನ್ನೆಲ್ಲ ಕಂಡು ಕನಿಕರವಾಯಿತು. ಎಷ್ಟೋ ಅನುಕೂಲಸ್ಥರ ಮನೆಯ ಹೆಣ್ಣುಮಕ್ಕಳು ಸಾಫ್ಟ್ ವೇರ್ ಎಂಜಿನೀಯರುಗಳಾಗಿದ್ದಾರೆ. ಎಂ.ಬಿ.ಎ ಮಾಡಿಕೊಂಡು ಬಹುರಾಷ್ಟ್ರೀಯ ಕಂಪನಿಗಳಲ್ಲಿ ದೊಡ್ಡ ದೊಡ್ಡ ಸಂಬಳವನ್ನು ಪಡೆಯುತ್ತಿದ್ದಾರೆ.

ಕೈಯಲ್ಲಿ ಕಾಸು ಓಡಾಡುವುದರಿಂದ ಅವರಿಗೆಲ್ಲ ಹವ್ಯಕ ಹುಡುಗರು ಕಾಣಿಸುವುದೇ ಇಲ್ಲ. ಬರೀ ಸೊಕ್ಕು. ಅದಕ್ಕೇ ನಾವೊಂದು ಪ್ಲಾನ್ ಮಾಡಿದೆವು. ನಮ್ಮಲ್ಲಿಗೆ ಅವರನ್ನು ಆಕರ್ಷಿಸಿ ಕರೆಸಿದೆವು. ನಮ್ಮ ಏಕಾಂತ ದರ್ಶನದಲ್ಲಿ ಅವರಿಗೆ ’ಯೋಗಾಸನ’ಗಳನ್ನು ಕಲಿಸಿದೆವು.

ಶಹರಗಳಲ್ಲಿ ಘರವಾಲಿಗಳು ಎಂದಿರುತ್ತಾರಂತಲ್ಲ? ಹರೆಯದ ಹೆಣ್ಣುಮಕ್ಕಳು ಒಮ್ಮೆ ಅಂತವರ ಕೈಗೆ ಸಿಕ್ಕಿದರೆ ಸರಿಯಾಗಿ ಪಳಗಿಸುವವರೆಗೂ ಅವರು ಬಿಡುವುದಿಲ್ಲವಂತೆ. ಪಳಗಿದ ಬಹುತೇಕ ಹೆಣ್ಣುಮಕ್ಕಳು ಮತ್ತೆ ಅಲ್ಲಿಂದ ತಪ್ಪಿಸಿಕೊಂಡು ಹೋಗುವ ಸಾಧ್ಯತೆಯನ್ನೇ ಮರೆತುಬಿಡುತ್ತಾರಂತೆ.

ನಮ್ಮ ತರಬೇತಿಯೂ ಅದೇ ರೀತಿ ಇದೆ. ನಮ್ಮಲ್ಲಿ ಏಕಾಂತ ದರ್ಶನಕ್ಕೆ ಬರುವಾಗ ಬಹಳ ಅಹಂಕಾರದಿಂದ ಘಟಸರ್ಪಗಳಂತೆ ಒಳಗೆ ಬರುವ ಅವರೆಲ್ಲ ನಮ್ಮ ಸರ್ಪಾಸ್ತ್ರದ ಪ್ರಯೋಗವಾಗಿ ಹೊರಗೆ ತೆರಳುವಾಗ ನಾವು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುವಷ್ಟು ತರಬೇತಿ ಹೊಂದಿರುತ್ತಾರೆ.

ತಾವು ಯಾರು ಯಾವ ವಿದ್ಯೆ ಯಾವ ಉದ್ಯೋಗ ಅದನ್ನೆಲ್ಲ ಮರೆತು ನಾವು ಹೇಳಿದ ಹವ್ಯಕಮಾಣಿಗಳನ್ನು ಅವರು ಮದುವೆಯಾಗುತ್ತಾರೆ. ನಮ್ಮೊಡನೆ ಪೂರ್ಣಾವಧಿ, ಅರೆಕಾಲಿಕ ಮತ್ತು ಹಂಗಾಮಿ ಈ ಮೂರು ರೀತಿಯ ಜೈಕಾರದ ಮೇಳಗಳಿದ್ದು ಅವರಲ್ಲಿ ಇರುವ ಹುಡುಗರೆಲ್ಲ ಹುಡುಗಿಯರು ಸಿಗುತ್ತಾರೆ ಎಂದುಕೊಂಡೇ ಇಲ್ಲಿಗೆ ಬಂದಿರುತ್ತಾರೆ.

ನಾವು ಪಳಗಿಸಿದ ಮಾತ್ರಕ್ಕೆ ಅದೇನು ಹರಿದುಹೋಗುವುದೇ? ನಾವು ಬಳಸಿದ ವಿಶಿಷ್ಟ ಕನ್ಯೆಯರನ್ನು ಸುವರ್ಣ ಮಂತ್ರಾಕ್ಷತೆ ಸಮೇತ ನಮ್ಮ ಖರ್ಚಿನಲ್ಲೇ ಅವರಿಗೆ ಮದುವೆ ಮಾಡಿಸುತ್ತೇವೆ. ದೇವರ ಪ್ರಸಾದದ ರೂಪದಲ್ಲಿ ಅಂತೂ ಒಂದು ಹೆಣ್ಣು ಸಿಕ್ಕಿತಲ್ಲ ಎಂದು ಕಣ್ಣುಮುಚ್ಚಿ ಆ ಮಾಣಿಗಳೂ ಒಪ್ಪಿಕೊಳ್ಳುತ್ತವೆ.

ನಡುನಡುವೆ ಆ ವಿಶಿಷ್ಟ ಕನ್ಯೆಯರಿಗೆ ಉರುಫ್ ಮಾಣಿಗಳನ್ನು ಮದುವೆಯಾಗುವ ಮಹಿಳೆಯರಿಗೆ ನಾವೇ ಒತ್ತಾಯಪೂರ್ವಕವಾಗಿ ದರ್ಶನ ಕೊಟ್ಟು ಹೆಚ್ಚಿನ ತರಬೇತಿ ನೀಡುತ್ತೇವೆ. ಶಾಲೆಯ ಮೇಷ್ಟ್ರಿಗೆಲ್ಲ ಆಗಾಗ ಹೆಚ್ಚಿನ ತರಬೇತಿ ಇರುವುದಿಲ್ಲವೇ? ಹಾಗೆ.

ಮೊದಲನೆಯ ಸಲ ಮಾತ್ರ ಹದಕ್ಕೆ ತಂದುಕೊಳ್ಳುವವವರೆಗೆ ನಮಗೆ ಸ್ವಲ್ಪ ತ್ರಾಸಾಗುತ್ತದೆ. ಹೊಸದಾಗಿ ಹಡೆದ ಮಣಕ ಕಚಗುಳಿಯಾಗುವುದರಿಂದ ಹಾಲುಕುಡಿಯಲು ಕೆಚ್ಚಲಿಗೆ ಬಾಯಿಹಾಕಿದ ಕರುವಿಗೆ ಝಾಅಡಿಸಿ ಒದ್ದಂತೆ ನಮಗೂ ಒದೆತಗಳು ಬೀಳುತ್ತವೆ. ದೇವರ ತೆಕ್ಕೆಯನ್ನು ಕಂಡತಕ್ಷಣ ಒದೆಯುವುದು ನಿಂತುಹೋಗುತ್ತದೆ.

ಹೇಳ್ತೇವೆ ಕೇಳಿ ಮೊದಮೊದಲು ಇದು ನಮಗೂ ಅಭ್ಯಾಸವಿರಲಿಲ್ಲ. ನಾವು ಬೀಚ್ ನಲ್ಲಿ ಓಡಾಡುವ ಸಮಯದಲ್ಲಿ ವಿದೇಶೀ ಮಹಿಳೆಯರು ಬಣ್ಣಬಣ್ಣದ ಸಣ್ಣ ಸಣ್ಣ ಉಡುಪುಗಳಲ್ಲಿ ಬರುತ್ತಿದ್ದರು. ಆಹಾ ಅದೇನು ಬಣ್ಣ ಅದೇನು ಮೈಮಾಟ. ಆಗಲೆ ನಮ್ಮ ಚಡ್ಡಿ ಇದ್ದಕಿದ್ದಲ್ಲೆ ಒದ್ದೆಯಾಗತೊಡಗಿದ್ದು. ಇದಕ್ಕೆ ಪರಿಹಾರವುಂಟೆ ಎಂದು ಹುಡುಕಿದೆವು. ಚಡ್ಡಿ ಒದ್ದೆಯಾಗುವುದಕ್ಕೆ ಪರಿಹಾರ ದೊರೆತ ಮೇಲೆ ನಮಗೆ ಬೇರೆ ಒಂದು ಲೋಕವೇ ಸಿಕ್ಕಿದೆ.

ಸೀಟಿನಲ್ಲಿ ನಮ್ಮ ಹಿಂದಿನವರಿರುವಾಗ ನಮ್ಮ ಅಂದರೆ ದೇವರ ಜುಗಾರೀ ಅಪ್ಪ ಅಜ್ಜ ಎಲ್ಲರೂ ಅಲ್ಲಿಗೆ ಬರುತ್ತಿದ್ದರಂತೆ. ಬರುವವರೆಲ್ಲ ಕೇವಲ ಭಕ್ತಿಯಿಂದ ಬರುವವರಲ್ಲ ಸ್ವಂತ ಹಿತಾಸಕ್ತಿಯಿಂದ ಬರುವವರೂ ಇರುತ್ತಾರೆ ಎಂಬ ಸೂತ್ರ ನಮಗೆ ಹೊಳೆದದ್ದೆ ಆಗ.

ಸ್ವಂತ ಹಿತಾಸಕ್ತಿಯ ಕಾಳಜಿ ಯರ್‍ಯಾರಿಗಿದೆಯೋ ಅಂತವರನ್ನು ನಾವು ಒಗ್ಗೂಡಿಸಿ ಜೈಕಾರದ ಸಂಘಗಳನ್ನು ರೆಡಿಮಾಡಿಕೊಂಡೆವು. ಜೈಕಾರದ ಸಂಘದಲ್ಲಿ ಹಣಕ್ಕಾಗಿ ಬಂದವರಿದ್ದಾರೆ ಹೆಣ್ಣಿಗಾಗಿ ಬಂದವರಿದ್ದಾರೆ ನೆಲದ ವ್ಯಾಜ್ಯವನ್ನು ಬಗೆಹರಿಸಿಕೊಳ್ಳಲು ಬಂದವರಿದ್ದಾರೆ ಉದ್ಯೋಗಾಕಾಂಕ್ಷಿಗಳು ಇದ್ದಾರೆ.

ಯಾವ ಮಾಣಿಗೆ ಏನು ಬೇಕು ಎಂಬುದನ್ನು ಗುರುತಿಸಿ “ತಮ್ಮಾ ನೀನು ನಮ್ಮ ತಾಲಿಬಾನ್ ನಲ್ಲಿ ಕೆಲಸಮಾಡು ನಿನ್ನ ಕೋರಿಕೆಯನ್ನು ದೇವರು ಈಡೇರಿಸಿತ್ತಾನೆ” ಎನ್ನುತ್ತೇವೆ. ಅವನು ಬಯಸಿದ್ದು ಸ್ವಲ್ಪವಾದರೂ ಸಿಗುವಂತೆ ಮಾಡುತ್ತೇವೆ. ಅದರಿಂದ ನಮ್ಮ ಕೈಯಿಂದ ಹೋಗುವುದೇನೂ ಇಲ್ಲ. ಉದಾಹರಣೆಗೆ ಯವುದೋ ಸೇವೆಯ ಹೆಸರಿನಲ್ಲಿ ಸಂಗ್ರಹಿಸಿಕೊಂಡು ಬಂದ ಹಣದಲ್ಲಿ ಒಂದು ಭಾಗ ಅವನಿಗೇ ಹೋಗುತ್ತದೆ.

ಎಲ್ಲಾ ವಿಧದಲ್ಲೂ ನಮ್ಮ ಪಿಷ್ಟಿಯನ್ನು ಅಂದರೆ ಪ್ರಸಾದವನ್ನು ತಿನ್ನುವ ಮಾಣಿಗಳು ಅಥವಾ ದೊಡ್ಡಮಾಣಿಗಳು ಸಹಜವಾಗಿ ನಮಗೆ ಜೈಕಾರ ಹಾಕುತ್ತಾರೆ. ಜೈಕಾರ ಹಾಕದಿದ್ದರೆ ಅವರ ಸಂಸಾರ ಒಡೆದುಹೋಗುತ್ತದೆ ಎಂಬುದು ಅವರಿಗೆಲ್ಲ ಗೊತ್ತು. ನಮ್ಮ ಜೊತೆಗೆ ಇಲ್ಲದಿದ್ದರೆ ಅಷ್ಟೊಂದು ಮೇವು ಸಿಗುವುದಿಲ್ಲ ಎಂಬುದನ್ನೂ ಅವರು ಬಲ್ಲರು.

ನಾವು ಸೀಟು ಮತ್ತು ಅಧಿಕಾರವನ್ನು ಬಿಟ್ಟರೆ ಜೈಕಾರ ಹಾಕುವುದಕ್ಕೆ ಯಾರೂ ಬರುವುದಿಲ್ಲ ಎಂಬುದರ ಅರಿವು ನಮಗಿದೆ. ಸತ್ಯಂ ಕಂಪನಿಯ ಯಜಮಾನ ಮಾಡಿದ ಮೋಸದ ಆರ್ಥಿಕ ವ್ಯವಹಾರಕ್ಕೆ ಈಗ ಕೈದಿಯಾಗಿ ಜೈಲಿನಲ್ಲಿ ಕೂಲಿಮಾಡುತ್ತಿರುವುದು ನೆನೆದು ಕುಳಿತಲ್ಲೆ ಹಾರಿಬಿದ್ದು ಕೆಲವೊಮ್ಮೆ ನಮ್ಮ ಉತ್ತರೀಯದಲ್ಲಿ ಯಾರಿಗೂ ಕಾಣಿಸದಂತೆ ನಾವು ಬೆವರು ಒರೆಸಿಕೊಳ್ಳುತ್ತಿರುತ್ತೇವೆ.

ನಾವು ಸೀಟನ್ನು ಬಿಡುವುದಿಲ್ಲ ಮತ್ತು ನಮ್ಮನ್ನು ಅವರು ಬಿಡುವುದಿಲ್ಲ. ಇದು ನಮ್ಮ ಮ್ಯೂಚ್ವಲ್ ಅಂಡರ್ ಸ್ಠ್ಯಾಂಡಿಂಗ್ ಆಗಿದೆ.

ನಮ್ಮಲ್ಲಿ ಕೆಲವು ಹಳಬರಿದ್ದಾರೆ. ಹೆಣ್ಣುಮಕ್ಕಳ ಉಸ್ತುವಾರಿಯನ್ನು ನೋಡಿಕೊಳ್ಳುವುದರಲ್ಲಿ ಅವರು ವಿ-ಶಾರದರು. ಆ ವಿಶಾರದರಿಗೆ ಹೇಳಿದ್ದರಿಂದ ಸರಿರಾತ್ರಿಯಲ್ಲಿ ಯಾರಿಗೂ ಸಿಗದ ಏಕಾಂತ ದರ್ಶನವನ್ನು ಹಲವು ಹೆಣ್ಣುಮಕ್ಕಳು ಪಡೆಯುವಂತಾಯಿತು.

ನಮ್ಮನ್ನು ದೂರುವ ಹುಲುಮಾನವರು “ವಿ ಶಾರದರಿಗೂ ಕತ್ತೆಗೆ ವಯಸ್ಸಾದಂತೆ ವಯಸ್ಸಾಗಿದೆ. ಸನ್ಯಾಸಿಗೆ ಸಪ್ಲೈ ಮಾಡುವುದು ತಪ್ಪೆಂದು ಗೊತ್ತಾಗುವುದಿಲ್ಲವೇ?” ಎಂದು ಬೈದಿದ್ದಾರಂತೆ. ಪಾಪ ವಿಶಾರದರು ನಮ್ಮ ಅಂಕಿತದಲ್ಲೆ ಜೀವನ ನಡೆಸುತ್ತಿರುವಾಗ ಹೊರಗಿನವರು ಹೇಳುವುದನ್ನು ಅವರು ಕೇಳುತ್ತಾರೆಯೇ?

ನಮ್ಮ ತಾರಾಗಣವನ್ನು ಹೆಚ್ಚಿಸಿದವರಲ್ಲಿ ಅವರದ್ದು ಸಿಂಹಪಾಲು. ತಾರಾಗಣದಲ್ಲಿ ಹೆಚ್ಚಿನವರನ್ನು ಹದಹಚ್ಚಿದ್ದು ನಮ್ಮ ಬಾವಯ್ಯ ಅಂದರೆ ದೇವರ ಬಾವಯ್ಯ. ಹೀಂಗಾಗಿ ವಿಶಾರದರು ನಾವು ನಮ್ಮ ಬಾವಯ್ಯ ಎಲ್ಲರೂ ಘರವಾಲಿಗಳೇ.

ಐಟಂ ಸಾಂಗ್ ಇದ್ದಂತೆ ಅಪರೂಪದ ಅಪ್ಪೆಮಿಡಿ ಉಪ್ಪಿನಕಾಯಿ ಇದ್ದಂತೆ ನಮ್ಮಲ್ಲಿ ಆಗಾಗ ಹೊರಗಿನ ತಾರಾಗಣಳವರೂ ಬರುತ್ತಾರೆ. ಮಲ್ಲಿಕಾ ಆಪೂಸು ನೀಲಂ ಮೊದಲಾದ ತಾರಾಗಣ ಅದು. ಹೊರಗಿನ ತಾರಾಗಣಕ್ಕೆ ವಿದೇಶೀ ಮೂಲದವರೂ ಬರುವವರಿದ್ದರು ಯಾಕೋ ಕಾಲ ಸರಿಯಿಲ್ಲ ಕಲಿಯುಗ ಹೀಗಾಗಿ ಡಿಲೇ ಆಗುತ್ತಿದೆ.

ನಮ್ಮ ಸಲುವಾಗಿ ಕ್ಷೇತ್ರವೊಂದರ ಧರ್ಮದರ್ಶಿ ಮತ್ತು ಪೂಜಾರಿಗಳ ನಡುವೆ ಎರಡು ತಿಂಗಳ ಹಿಂದೆ ಮಾರಾಮಾರಿ ನಡೆದಿತ್ತು ಎಂದು ಜನ ಆಡಿಕೊಳ್ಳುತ್ತಾರೆ. ನಮ್ಮ ಕ್ಷೇತ್ರೀಯ ತಾಲಿಬಾನ್ ಪಡೆ ಅದನ್ನು ನಿವಾರಿಸಿ ಸಂಧಾನಚನ್ನು ಏರ್ಪಡಿಸಿತು. ನಂತರವೇ ನಾವೀಗ ಅಲ್ಲಿಗೆ ಹೋದದ್ದು.

“ಅವರು ತಪ್ಪಿತಸ್ಥರು. ಅವರು ಇಲ್ಲಿಗೆ ಬರುವುದು ಬೇಡ” ಎಂಬ ಧರ್ಮದರ್ಶಿಗೆ ಅಲ್ಲಿಗೆ ಹೋದಾಗ ಪರೋಕ್ಷವಾಗಿ ನಾವು ಹೇಳಿದ್ದು ಎಲ್ಲರೂ ತಪ್ಪನ್ನು ಮಾಡುತ್ತಾರೆ ಎಂದು. ಎಲ್ಲರೂ ಅಪರಾಧಿಗಳೇ [ಎಂದುಬಿಟ್ಟರೆ ಅಪರಾಧ ಮಾಡದೇ ಇರುವವರೇ ಇಲ್ಲವೆಂದಾಯ್ತಲ್ಲ]. ಅಪರಾಧ ನಡೆಯದ ಜಾಗವೇ ಇಲ್ಲ ಎಂದು ತಿಳಿಸಿದ್ದೇವೆ. ನಾವು ಮಾತ್ರ ಅಪರಾಧಿಗಳಲ್ಲ.ನಾವು ಮಾತ್ರ ಯಾವ ತಪ್ಪನ್ನೂ ಮಾಡಿಲ್ಲ ಎಂಬುದು ನಮಗೆ ಗೊತ್ತಿದೆ. ಯಾಕೆಂದ್ರೆ….ಯಾಕೆಂದ್ರೆ….ಯಾಕೆಂದ್ರೆ ನಾವು ಸರ್ವತಂತ್ರ ಸ್ವತಂತ್ರರು.”

Thumari Ramachandra

source: https://www.facebook.com/groups/1499395003680065/permalink/1601047260181505/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s