ಅಶ್ವಿನಿ ನಕ್ಷತ್ರ ಮತ್ತು ದೇವರ ಚಿಕ್ಕಪ್ಪ

ಅಶ್ವಿನಿ ನಕ್ಷತ್ರ ಮತ್ತು ದೇವರ ಚಿಕ್ಕಪ್ಪ

“ನಮ್ಮ ಬ್ರಹ್ಮ ಬ್ರಹ್ಮಾಂಡದಲ್ಲಿ ನಕ್ಷತ್ರಲೋಕವನ್ನು ಸೃಷ್ಟಿಮಾಡಿದ್ದಾನೆ. ಪ್ರಧಾನವಾಗಿರುವ ೨೭ ನಕ್ಷತ್ರಗಳಲ್ಲಿ ಮೊದಲನೆಯದಾದ ಅಶ್ವಿನಿ ನಕ್ಷತ್ರ ಏಕೋ ಅಷ್ಟು ಹೊಳಪಿನಿಂದ ಕೂಡಿಲ್ಲ. ದೇವರಾದ ನಾವು ಬ್ರಹ್ಮನ ಕೆಲಸವನ್ನು ಟೆಸ್ಟ್ ಮಾಡಬೇಕಲ್ಲ?

ಅದಕ್ಕಾಗಿ ನಾವು ಅಶ್ವಿನಿ[ನಕ್ಷತ್ರದ] ಉಡದಾರ ಬಿಡಿಸಿ ಟೇಸ್ಟ್ ಅನುಭವಿಸಿದೆವು. ಚೆ[ಅಥವಾ ಛೆ] ನಮಗೆ ಅಲ್ಲಿ ಅಂತಹ ತಪ್ಪೇನೂ ಕಾಣಸಿಗಲಿಲ್ಲ. ಬ್ರಹ್ಮ ಎಲ್ಲವನ್ನೂ ಸರಿಯಾಗೆ ಮಾಡಿದ್ದ. ಮಸುಕು ಎಂಬುದನ್ನು ಬಿಟ್ಟರೆ ಇರಬೇಕಾದ ಎಲ್ಲವೂ ಅಲ್ಲಲ್ಲೆ ಇರುವುದು ಕಾಣಿಸಿತು. ಅಂತಹ ಯಾವ ಕೊರತೆಯೂ ಕಾಣಲಿಲ್ಲ.

ಉಳಿದೆಲ್ಲ ನಕ್ಷತ್ರಗಳ ತೇಜಃಪುಂಜ ಇಲ್ಲದಾಗ ಅಶ್ವಿನಿ ನಕ್ಷತ್ರದ ಮಂದ ಬೆಳಕೆ ಅರ್ಜೆಂಟಿಗೆ ನಮಗೆ ಸಾಕಾಗುತ್ತದೆ. ಯಾವುದೂ ಸಿಗದಿದ್ದರೆ ದೇವರ ಸೇವೆಗೆ ಅಂದು ಅಶ್ವಿನಿ ನಕ್ಷತ್ರ ಸಿಗಲಿ ಎಂಬುದಕ್ಕಾಗಿ ನಾವು ಅಶ್ವಿನಿಗೆ ನಕ್ಷತ್ರಕ್ಕೆ ಒಂದು ಮನೆಮಂಡಲವನ್ನು ವ್ಯವಸ್ಥೆ ಮಾಡಿಕೊಟ್ಟಿದ್ದೇವೆ.

ನಮ್ಮ ಸಾಮರ್ಥ್ಯಕ್ಕೆ ಮತ್ತು ವ್ಯವಸ್ಥೆಗೆ ಮಾರುಹೋದ ಅಶ್ವಿನಿ ನಕ್ಷತ್ರ “ದೇವರೆ ನಿಮ್ಮ ಸೇವೆಗೆ ನಾನು ಮುಡಿಪು” ಎಂದುಬಿಟ್ಟಿತು. ಅಲ್ಲಿಂದೀಚೆಗೆ ಅದರ ಕಾಯಂ ಸರ್ವಿಸ್ ನಮಗೆ ಸಲ್ಲುತ್ತಲೆ ಇದೆ.

ಈ ಹುಕುಮಾನವರು ನಮ್ಮನ್ನು ಕಂಡರೆ ಲಾರಿ ಡ್ರೈವರ್‌ಗಳನ್ನು ನೋಡಿದಂತೆ ನೋಡುತ್ತಾ ಹಲ್ಲಿಯಂತೆ ಲೊಚಗುಡುತ್ತಾರೆ. ಲಾರಿ ಡ್ರೈವರ್‌ಗಳಿಗೆ ಅವರ ದಾರಿಗುಂಟ ಅಲ್ಲಲ್ಲಿ ಕೆಲವು ಗುತ್ತು[ಅಡ್ಡೆ]ಗಳಿರುತ್ತವೆ. ಲಾರಿಯನ್ನು ರಸ್ತೆಯ ಪಕ್ಕಕ್ಕೆ ಹಾಕಿ ಅಲ್ಲಿಗೆ ಹೋಗಿ ಅವರು ’ವಿಶ್ರಾಂತಿ’ ಪಡೆದುಕೊಂಡು ನಂತರ ಮುಂದಕ್ಕೆ ಹೋಗುತ್ತಾರೆ. ಅಂತಹ ಲಾರಿ ಡ್ರೈವರ್‌ಗಳ ಗುತ್ತಿಗೂ ನಮ್ಮ ಗುತ್ತಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಚೆನ್ನಮಲ್ಲಿಕಾರ್ಜುನ?

ಹುಲುಮಾನವರ ದೃಷ್ಟಿಯಲ್ಲಿ ನಾವೂ ಸಹ ನಮ್ಮ ಬ್ರಹ್ಮನ ಈ ಲೌಕಿಕ ಪ್ರಪಂಚದ ಹಲವು ಪ್ರದೇಶಗಳಲ್ಲಿ ಅಡ್ಡೆಗಳನ್ನು ಇರಿಸಿಕೊಂಡಿದ್ದೇವೆ. ಆಗಾಗ ಅಲ್ಲಿಗೆಲ್ಲ ತೆರಳಿ ವಿಶ್ರಾಂತಿ ಪಡೆಯುತ್ತೇವೆ. ನಾವು ಎಲ್ಲಿಗೇ ಹೊರಟರೂ ದಾರಿಗುಂಟ ಕೆಲವೆಡೆ ’ವಿಶ್ರಾಂತಿ’ ಪಡೆಯುವುದುಂಟು. ’ಪೂಜೆ’ ಮಾಡಬೇಕಲ್ಲ? ಅದಕ್ಕೆಲ್ಲ ಮೊದಲೆ ನಮ್ಮ ಅನುಕೂಲಕ್ಕೆ ಇರುವವರನ್ನು ಅಲ್ಲಿಗೆ ಅಟ್ಟಿ ವ್ಯವಸ್ಥೆ ರೂಪಿಸಿಡುತ್ತೇವೆ.

ಹುಲುಮಾನವ ನಿರ್‍ಮಿತ ಎಲ್ಲಾ ಭಾಷೆಗಳ ವರ್ಣಮಾಲೆಗಳೂ ನಮಗೆ ಅಚ್ಚುಮೆಚ್ಚು. ಅವುಗಳ ಒಂದೊಂದು ಅಕ್ಷರಗಳಲ್ಲೂ ನಮಗೆ ಪ್ರಿಯರಾದವರ ಅಂದರೆ ದೇವರ ಭಕ್ತರ ಹೆಸರುಗಳಿವೆ.

ಅದಿರಲಿ ಬಿಡಿ. ನಾವು ಆಕಾರಕ್ಕೆ ಬಂದು ಹುಟ್ಟಿದ ಸ್ಥಳ ಇದೆಯಲ್ಲ. ಹುಟ್ಟಿನಿಂದ ನಮಗೆ ಅಪ್ಪ ಅಮ್ಮ ಚಿಕ್ಕಪ್ಪ ಎಲ್ಲರೂ ಇದ್ದಾರೆ. ನಮ್ಮ ಹುಟ್ಟಿದ ಕುಟುಂಬದಲ್ಲಿ ಪೌರೋಹಿತ್ಯವೂ ಒಂದು ವೃತ್ತಿ. ಅಜ್ಜ ಅಪ್ಪ ಚಿಕ್ಕಪ್ಪ ಎಲ್ಲರೂ ಅದನ್ನು ನಡೆಸಿದವರೇ. ಪೌರೋಹಿತ್ಯಕ್ಕೆ ಹೋದಾಗ ಅಲ್ಲಲ್ಲಿ ಅಡ್ಡೆಗಳನ್ನು ಮಾಡಿಕೊಂಡು ’ವಿಶ್ರಾಂತಿ’ಪಡೆದುಕೊಳ್ಳುವುದು ನಮ್ಮ ಕುಟುಂಬದಲ್ಲಿ ಲಾಗಾಯ್ತಿನಿಂದಲೂ ನಡೆದುಬಂದ ಪದ್ಧತಿ.

ಹುಟ್ಟಿದ ಸ್ಥಳದ ಆಜೂಬಾಜಿನ ಗ್ರಾಮಗಳಲ್ಲಿ ನಮ್ಮ ಚಿಕ್ಕಪ್ಪ ಸತ್ಯನಾರಾಯಣ ಪೂಜೆ ಮಾಡಿಸುವುದು ಜೋರು. ನಿತ್ತೂರು ಎಂಬುದೊಂದು ಊರಿದೆ. ಅದನ್ನು ಹುಲುಮಾನವರು “ನಿಟ್ಟೂರು” ಎಂದೂ ಕರೆಯುತ್ತಾರೆ. ಮೂರು ತಿಂಗಳ ಹಿಂದೆ ನಮ್ಮ ಚಿಕ್ಕಪ್ಪ ಅಂದರೆ ದೇವರ ಚಿಕ್ಕಪ್ಪ ಅಲ್ಲಿಗೆ ಸತ್ಯನಾರಾಯಣ ಪೂಜೆ ಮಾಡಿಸಲು ಹೋಗಿದ್ದ.

ಪೂಜೆ ಮಾಡಿಸಲು ಹೋದಾಗ ಸುಸ್ತಾಗಿ ’ವಿಶ್ರಾಂತಿ’ ಪಡೆಯಲು ಜಾಗ ಹುಡುಕಿದ. ಸುಮಾರಿಗೆ ಸುಂದರವಾದೊಂದು ಜಾಗ ಕಂಡಿತು. ಅದೇ ಅಡ್ಡಿಲ್ಲವೆಂದುಕೊಳ್ಳುತ್ತ ’ವಿಶ್ರಾಂತಿ’ಗೆ ತೆರಳಿಯೇ ಬಿಟ್ಟ.

ಅಲ್ಲೇನಿತ್ತು ಗೊತ್ತೆ? ಬ್ರಹ್ಮರಾಕ್ಷಸಿ. ’ವಿಶ್ರಾಂತಿ’ಗಾಗಿ ದಿಂಬು ಬೆಡ್ ಶೀಟು ಬರಗುವಾಗ ಬ್ರಹ್ಮರಾಕ್ಷಸಿಯ ಕೂಗು ಕೇಳಿಸಿತು. ಆದರೂ ಧೈರ್ಯ ಮಾಡಿ ತಿರುಗಿ ನೋಡಿದ. ಎಷ್ಟೆಂದರೂ ದೇವರ ವಂಶದವನಲ್ಲವೇ? ಎಲ್ಲ [ಅಡ್ಡ]ಕಸುಬುಗಳೂ ಗೊತ್ತು. “ಈ ರಾಕ್ಷಸಿಯನ್ನು ಎಲ್ಲೋ ನೋದಿದ್ದೇನಲ್ಲಾ” ಅಂದುಕೊಂಡ.

ಪೂಜೆಗೆ ಬಂದು ನಿಂತವರ ಮಧ್ಯೆ ಹುಲುಮಾನಚ ವೇಷದಲ್ಲಿ ಆಕೆ ಬಂದು ನಿಂತಿದ್ದಳಂತೆ. ಪೂಜೆಗೆ ಯಾವುದೋ ಸಾಮಾನು ಬೇಕಾದಾಗ ಮಧ್ಯೆ ತರುವುದಕ್ಕಾಗಿ ಮನೆಗೆ ಬಂದಿದ್ದಾಳೆ. ಅವಳಿಗೆ ಅದನ್ನು ಆಯ್ದು ತರಲು ಸಹಕರಿಸುವುದಕ್ಕಾಗಿ ನಮ್ಮ ಚಿಕ್ಕಪ್ಪನೂ ಜೊತೆಗೆ ನಡೆದಿದ್ದ.

ಮನೆಯೊಳಗೆ ಪ್ರವೇಶ ಆದ ತಕ್ಷಣ ಅವನಿಗೆ ’ವಿಶ್ರಾಂತಿ’ ಮುಗಿಸಿಕೊಂಡೇ ಹೋಗೋಣವೆನಿಸಿತು. ನಾವೂ ಹಾಗೇ ಅಲ್ಲವೆ? ಎಲ್ಲೆಲ್ಲಿ ಎಷ್ಟೆಷ್ಟೊತ್ತಿಗೆ ಮಾನವ ದೇಹವೆಂಬ ಈ ಆಕಾರ ’ವಿಶ್ರಾಂತಿ’ಯನ್ನು ಬಯಸುತ್ತದೋ ಅಲ್ಲೆಲ್ಲ ’ವಿಶ್ರಾಂತಿ’ಯನ್ನು ಪಡೆದೇ ಮುನ್ನಡೆಯುತ್ತೇವೆ. ಅದರಲ್ಲೇನು ತಪ್ಪು?

ಆ ದರಿದ್ರ ಬ್ರಹ್ಮರಾಕ್ಷಸಿ ಕಿರುಚಿದ ತಕ್ಷಣ ಊರ ಹುಲುಮಾನವರೆಲ್ಲ ಕಪಿಸೈನ್ಯ ಬ್ರಿಜ್ಜಿನ ಮೇಲೆ ಲಂಕೆಯತ್ತ ಓಡುತ್ತ ಬಂದಂತೆ ಓಡುತ್ತ ಓಡುತ್ತ ಬಂದರು. ಕಪಿಗಳ ಕೈಗಳಲ್ಲಿ ಇದ್ದಂತೆ ಇಲ್ಲಿಯೂ ಅವರೆಲ್ಲರ ಕೈಗಳಲ್ಲಿ ದೊಣ್ಣೆಗಳು, ಕಲ್ಲು, ಹಗ್ಗ ಇತ್ಯಾದಿಗಳಿದ್ದವು.

ನಮ್ಮ ಚಿಕ್ಕಪ್ಪನಿಗೆ ಆ ಕೆಟ್ಟ ಹುಲುಮಾನವರು ಥಳಿಸುವುದರಲ್ಲಿದ್ದರಂತೆ. ಅಷ್ಟರಲ್ಲಿ ಅವರಲ್ಲೆ ಸ್ವಲ್ಪ ಅಡ್ಡಿಲ್ಲ ಎನ್ನಬಹುದಾದ ಕೆಲವರು ಹೊಡೆಯಬೇಡಿ ಹಾಗೇ ಓಡಿಸಿ ಎಂದರಂತೆ. ಫಾರೆಸ್ಟ್ ಡಿಪಾರ್ಟ್‍ಮೆಂಟಿನವರು ಊರಿಗೆ ಬಂದ ಕಾಡಾನೆಗಳನ್ನು ಕಾಡಿಗೆ ಅಟ್ಟಿಸಿದಂತೆ ಅವರೆಲ್ಲ ಸೇರಿ ನಮ್ಮ ಚಿಕ್ಕಪ್ಪನನ್ನು ಅಲ್ಲಿಂದ ಅಟ್ಟಿಸಿದರಂತೆ.

ಆ ದರಿದ್ರ ಜನ ಅದನ್ನು ಅಷ್ಟಕ್ಕೇ ಬಿಡಲಿಲ್ಲ. ನಮ್ಮಲ್ಲಿಗೂ ದೂರು ತಂದರು. “ಚಿಕ್ಕಪ್ಪ ನಿನ್ನ ಮೇಲೆ ಹೀಗೆ ದೂರು ಬಂದಿದೆ. ನೀನು ಬೆಂಗಳೂರಿಗೆ ಹೋಗಿ ಪೌರೋಹಿತ್ಯ ಮಾಡು. ಅಲ್ಲಿ ನಿನಗೆ ಬಣ್ಣಬಣ್ಣದ ಕನಸುಗಳ ’ವಿಶ್ರಾಂತಿ’ ಸಿಗುತ್ತದೆ. ’ವಿಶ್ರಾಂತಿ’ಗೆ ಕೊರತೆಯೇ ಇರುವುದಿಲ್ಲ.” ಎಂದೆವು.

ನಮ್ಮ ಚಿಕ್ಕಪ್ಪನಿಗೆ ಮೊದಲು ಅನುಮಾನವಾಯಿತು. ನಂತರ ತಿಳಿಸಿ ಹೇಳಿದ ಮೇಲೆ ಬೆಂಗಳೂರೆ ಉತ್ತಮ ಎನಿಸಿತು. ಹೀಗಾಗಿ ನಮ್ಮ ಅಂದರೆ ದೇವರ ಚಿಕ್ಕಪ್ಪ ಈಗ ಬೆಂಗಳೂರಿನಲ್ಲಿದ್ದಾನೆ. ನಾವು ಬೆಂಗಳೂರಿಗೆ ಹೋದಾಗ ನಮಗೂ ಕೂಡ ’ವಿಶ್ರಾಂತಿಗೆ’ ಬೇಕಾದರೆ ವ್ಯವಸ್ಥೆಮಾಡಿಕೊಡುತ್ತಾನೆ.

ಹೀಗೆ ದೇವರು ಹುಟ್ಟಿದ ಕುಟುಂಬವೇ ’ಮಹಿಮಾನ್ವಿತರ’ ಕುಟುಂಬ. ಕೆಲವು ದರ್ವೇಶಿ ಹುಲುಮಾನವರು ನಮ್ಮ ಕುಟುಂಬಕ್ಕೆ “ಕಚ್ಚೆಹರುಕರ ಕುಟುಂಬ” ಎಂದು ಟೀಕಿಸುವುದಿದೆ. ಅದನ್ನೆಲ್ಲ ಕಟ್ಟಿಕೊಂಡು ನಮಗೇನಾಗಬೇಕು? ನಮಗೆ ಯಾವಾಗ ಯಾವುದು ಬೇಕೋ ಅದು ಸಿಕ್ಕರೆ ಸಾಕು. ನಮ್ಮನ್ನೆಲ್ಲ ಟೀಕಿಸುವವರನ್ನು ನೋಡಿಕೊಳ್ಳಲು ನಮ್ಮ ಭಕ್ತ ಸಮೂಹದಲ್ಲಿ ’ಹಳದೀ ತಾಲಿಬಾನ್’ ಗ್ಯಾಂಗನ್ನು ನಾವು ಸೃಷ್ಟಿಮಾಡಿದ್ದೇವೆ.”

Thumari Ramachandra

Source: https://www.facebook.com/groups/1499395003680065/permalink/1599930623626502/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s