ವೀರ್ಯ ಸನ್ಯಾಸ

ವೀರ್ಯ ಸನ್ಯಾಸ

ಸನ್ಯಾಸದಲ್ಲಿ ಹಲವಾರು ವಿಧಗಳಿವೆ ಎಂದು ಕೆಲವು ಗ್ರಂಥಗಳು ಹೇಳಿವೆ. ಇಂದಿನ ದಿನಗಳಲ್ಲಿ ಕೆಲವು ವಿಧಗಳ ಸನ್ಯಾಸಿಗಳನ್ನು ಮಾತ್ರ ಕಾಣಬಹುದು.

ಸನ್ಯಾಸಕ್ಕೆ ಇತ್ತೀಚಿನ ಕೆಲವರು ನೀಡಿದ ವ್ಯಾಖ್ಯಾನ ಈ ಕೆಳಗಿನಂತಿದೆ.

ಸಮ್ಯಕ್+ನ್ಯಾಸ=ಸನ್ಯಾಸ. [ಸಮ್ಯಕ್=ಸರಿಯಾದ; ನ್ಯಾಸ=ತ್ಯಜಿಸುವುದು] ಸನ್ಯಾಸ=ಸರಿಯಾದದ್ದನ್ನು ತ್ಯಜಿಸುವುದು. ಸರಿಯಾದದ್ದು ಎಂದರೆ ಸರಳವಾದದ್ದು ಅಥವಾ ಸುಲಭವಾದದ್ದು ಎಂದರ್ಥ. ಸುಲಭವಾದ ಸಾಂಸಾರಿಕ ಲೌಕಿಕ ಜೀವನದ ಹಾದಿಯನ್ನು ಬಿಟ್ಟು ಕಠಿಣ ವ್ರತೋಪಾಸನೆಗಳ ಮೂಲಕ ಪಾರಮಾರ್ಥಿಕ ಮಾರ್ಗದಲ್ಲಿ ಕ್ರಮಿಸುವುದು ಸನ್ಯಾಸ. ತಾನು ತನ್ನದು ಎಂಬುದರ ಲವಲೇಶವೂ ಅವರಲ್ಲಿರುವುದಿಲ್ಲ. ಅದಕ್ಕಾಗಿಯೆ ಅವರು ತ್ಯಾಗಿಗಳು.

ಸನ್ಯಾಸ ಎಂಬುವುದುನಾಲ್ಕುಬಗೆಯದ್ದು

ಮೊದಲನೆಯದು “ಮರ್ಕಟಸನ್ಯಾಸ”

ಚಿಕ್ಕ ಚಿಕ್ಕ ಕಾರಣಗಳಿಗೇ ಸನ್ಯಾಸಿಗಳಾಗುತ್ತಾರೆ. ಇರುವ ಸಂಸಾರವನ್ನು ತ್ಯಜಿಸುತ್ತಾರೆ. ಕೆಲವು ದಿನಗಳ ನಂತರ ಇನ್ನೊಂದು ಸಂಸಾರದ ಬಂಧನದಲ್ಲಿ ಸಿಕ್ಕಿಕೊಳ್ಳುತ್ತಾರೆ. ಇದು ಶೂದ್ರ ಸನ್ಯಾಸ.

ನಂತರದ್ದು “ಆಪತ್ಸನ್ಯಾಸ”

ಸ್ವಲ್ಪ ಹೊತ್ತಿನಲ್ಲೊ, ಇನ್ನು ಸ್ವಲ್ಪ ಹೊತ್ತಿನಲ್ಲೊ ಸಾಯುತ್ತೇವೆಂದು ತಿಳಿದ ನಂತರ ಸ್ವರ್ಗದಲ್ಲಿ ಸ್ಥಾನ ಹೊಂದಬೇಕೆಂಬುವ ಆಸೆಯಿಂದ ಸನ್ಯಾಸ ಸ್ವೀಕರಿಸುತ್ತಾರೆ. ’ ಆಪತ್ ’ ಎಂದರೆ ಮರಣ ಸಮಯದಲ್ಲಿ ಸ್ವೀಕರಿಸುವ ಸನ್ಯಾಸ. ಇದು ವೈಶ್ಯ ಸನ್ಯಾಸ.

ಮೂರನೆಯದು “ಕ್ಷತ್ರಿಯಸನ್ಯಾಸ”

ಬುದ್ಧಿ ತತ್ವಕ್ಕೆ ಹೊಂದಿದವರು. ಸತ್ಯವನ್ನು ತಿಳಿದುಕೊಳ್ಳಬೇಕೆಂಬುವ ಆಕಾಂಕ್ಷೆ, ಜ್ಞಾನತೃಷ್ಣೆಯಿಂದ … ತಮ್ಮ ಹತ್ತಿರ ಇರುವುದೆಲ್ಲಾ ತ್ಯಜಿಸಿ … ಸನ್ಯಾಸ ಸ್ವೀಕರಿಸುತ್ತಾರೆ. ವಿವೇಕಾನಂದ ಅಂತವರು. ಇದು ಕ್ಷತ್ರಿಯ ಸನ್ಯಾಸ.

ನಾಲ್ಕನೆಯದು ’ವಿದ್ವತ್ಸನ್ಯಾಸ”

ಅತ್ಯುನ್ನತ ಹಂತ … ಆತ್ಮ ಮಟ್ಟ. ಅಜ್ಞಾನವನ್ನು ತ್ಯಜಿಸುತ್ತಾರೆ. ದಿನ ನಿತ್ಯದ ಜೀವನಕ್ಕೆ ಅವಶ್ಯಕವಾದದ್ದನ್ನು ಹಲವನ್ನು ಬಿಟ್ಟು ಸೀಮಿತವಾದ ಜೀವನ ನಡೆಸುತ್ತಾರೆ. ಇದೇ ಬ್ರಾಹ್ಮಣ ಸನ್ಯಾಸ. ಲೌಕಿಕವಾಗಿ ಯಾವ ಆಸೆಗಳನ್ನೂ ಸಹ ಇಟ್ಟುಕೊಳ್ಳುವುದಿಲ್ಲ. ಯಾವುದಕ್ಕೂ ಅಂಟಿಕೊಳ್ಳುವುದಿಲ್ಲ. ನೀರಿನಲ್ಲಿಯೇ ಇರುವ ತಾವರೆ ಎಲೆ ನೀರಿನಿಂದ ಒದ್ದೆಯಾಗದಂತೆ ಪ್ರಪಂಚದಲ್ಲಿದ್ದೂ ಸಹ ವಿಷಯ ಸುಖಗಳನ್ನು ಅಂಟಿಸಿಕೊಳ್ಳದಿರುತ್ತಾರೆ.

ಈ ಸನ್ಯಾಸವನ್ನು ಮೋಕ್ಷ ಸನ್ಯಾಸವೆಂದು ಗೀತೆಯಲ್ಲಿ ಕೃಷ್ಣ ಹೆಸರಿಸಿದ್ದಾನೆ. ಇದರಲ್ಲಿಯೂ ಆರಂಭಿಸುವವರಿಗೆಲ್ಲ ಮೋಕ್ಷ ಸಿಕ್ಕಿಬಿಡುತ್ತದೆ ಎಂದಿಲ್ಲ. ಪ್ರೀಕೆಜಿಯಿಂದ ಹಿಡಿದು ಎಲ್.ಕೆ.ಜಿ. ಯು.ಕೆ.ಜಿ ಫಸ್ಟ್ ಶ್ತ್ಯಾಂಡರ್ಡ್ ಹೀಗೆ ಸಾಧನೆಯ ಹಂತದಲ್ಲಿ ಮುನ್ನಡೆಯಬೇಕಾಗುತ್ತದೆ.

ಅಂತಿಮವಾಗಿ ಸಾಧನೆಗಳಿಂದ ಪರಿಪಕ್ವಗೊಂಡವರು ತುರ್ಯದಾಚೆಗಿನ ಳೋಕವನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲೇನಿದೆ ಎಂದು ಹೇಳುವುದು ನನ್ನಿಂದ ಸಾಧ್ಯವಿಲ್ಲ. ಅದು ಪರಮಾತ್ಮ ಸಾಯುಜ್ಯ ಎಂದು ಋಷಿಗಳು ಹೇಳಿದ್ದಾರೆ. ಆಧ್ಯಾತ್ಮದಲ್ಲಿ ಇದಕ್ಕಿಂತ ಹೆಚ್ಚಿನ ಕೊರೆತ ಇಲ್ಲಿನ ಅಗತ್ಯವಿಲ್ಲ.

ವಿದ್ವತ್ ಸನ್ಯಾಸಿಗಳು ಯಾರಿಂದಲೂ ಏನನ್ನೂ ಅಪೇಕ್ಷಿಸುವವರಲ್ಲ. ಲೋಕದಲ್ಲಿ ಯಾರನ್ನೂ ಯಾವ ಕಾರಣಕ್ಕೂ ದ್ವೇಷಿಸುವವರಲ್ಲ. ಶಿಷ್ಯರನ್ನು ಎಂತಾ ಕೆಟ್ಟ ಗಳಿಗೆಯಲ್ಲೂ ಶಪಿಸುವವರಲ್ಲ. ಬಹಿಷ್ಕಾರ ಮತ್ತು ಷಡ್ಯಂತ್ರ ಮೊದಲಾದ ಪದಗಳು ಅವರಿಗೆ ಬೇಕಾಗಿಯೆ ಇಲ್ಲ.

ಹೊಸ ಸಂಶೋಧನೆ “ವೀರ್ಯ ಸನ್ಯಾಸ”

ಮೇಲೆ ಹೇಳಿದ ಎಲ್ಲ ವಿಧಗಳನ್ನು ಬಿಟ್ಟು ಹೊಸದೊಂದು ಮಾರ್ಗವನ್ನು ರಾಂಗ್ ವೇಷದವರು ಪರಿಕಲ್ಪನೆ ಮಾಡಿಕೊಂಡು ಸಂಶೋಧಿಸಿ ಪರಿಷ್ಕರಿಸಿ ಪ್ರಸಾದನ ನಡೆಸಿ ಸ್ತ್ರೀಯರನ್ನು ನಿಯೋಜಿಸಿ ಗಾಯನ ವಾಚನ ನರ್ತನ ತಾಡನ ತೀಡನ ತಬಲಮೃದಂಗಣ ಮೊಬೈಲು ರಿಂಗಣ ಮತ್ತು ಮರುಳುಕಲೆಗಳ ಮಸಾಲೆ ಹಾಕಿ ಅಭಿವೃದ್ಧಿಪಡಿಸಿ ನಿರೂಪಿದ್ದಾರೆ.ಅದೇ ವೀರ್ಯ ಸನ್ಯಾಸ. ಇದಕ್ಕೆ ವಾತ್ಸಾಯನನ ಕಾಮಸೂತ್ರವೆಂಬ ಮಹದ್ಗ್ರಂಥದ ಆಧಾರವಿದೆ. ವಿಶ್ವಾಮಿತ್ರ ಮೇನಕೆಯೊಬ್ಬಳನ್ನೆ ಬಳಸಿಕೊಂಡಿದ್ದಕ್ಕೆ ಇವರ ಆಕ್ಷೇಪವಿದೆ.

ಸಂಸಾರವನ್ನು ಕಟ್ಟಿಕೊಳ್ಳದಿದ್ದರೂ ಸಂಸಾರಿಗಳಿಗಿಂತ ಹೆಚ್ಚಿನ ಲೌಕಿಕ ಸುಖಗಳನ್ನು ಅನುಭವಿಸುತ್ತ ಸಂಸಾರಿಗರ ನೀತಿಗೂ ಮೀರಿ ಕದ್ದುಮುಚ್ಚಿ ಹಲವು ಸ್ತ್ರೀಯರೊಡನೆ ಸಂಭೋಗ ನಡೆಸುವುದು. ಹೊರಗಿನಿಂದ “ವಿರಕ್ತ” “ಸಾಧಕ” “ಮಹಾತಪಸ್ವಿ” ಎಂದು ಭಟ್ಟಂಗಿಗಳಿಂದ ಪ್ರಚಾರ ಮಾಡಿಸುವುದು ವೀರ್ಯ ಸನ್ಯಾಸಿಗಳ ತಾಕತ್ತು.

“ಇವನು ನಿಜವಾದ ಸನ್ಯಾಸಿಯಲ್ಲ” ಎಂದವರ ಮೇಲೆ ಮತ್ತು ಅತ್ಯಾಚಾರದ ಕಂಪ್ಲೇಂಟ್ ಕೊಟ್ಟ ಮಹಿಳೆಯರ ಮೇಲೆ ದಾಳಿನಡೆಸಿ ಅನ್ಯಾಯವಾಗಿ ಅವರಿಗೆ ಶಿಕ್ಷೆ ಕೊಡಿಸುವುದು. ತನಗೆ ಬಾಣಬಿಡಲೂ ಬರುತ್ತದೆ ಎಂದು ಭಾಷಣ ಮಾಡುವುದು ಇಂತ ಪುಂಗಿದಾಸರ ಪ್ರವೃತ್ತಿ. ಬಾಣ ಬಿಡಲು ಬರುತ್ತದೆ ಎಂಬುದು ಈಗ ಇಡೀ ಹವ್ಯಕ ಸಮಾಜಕ್ಕೆ ಗೊತ್ತಿದೆ ಅದನ್ನು ಇಂವ ಹೊಸದಾಗಿ ಹೇಳುವುದೇನಿದೆ? ಇವನು ಬಿಟ್ಟ ಬಾಣ[ಸರ್ಪಾಸ್ತ್ರ]ಗಳಿಂದ ಹಲವು ಮಕ್ಕಳು ಈ ಲೋಕಕ್ಕೆ ಬಂದಿವೆ ಎಂಬುದು ಸಹ ತಲೆಯಿದ್ದವರಿಗೆ ಗೊತ್ತು.

ಕುರಿಗಳಿಗೆ ಮಾತ್ರ ಬಾಣ ಎಂಬುದರ ಅರ್ಥ ಗೊತ್ತಿಲ್ಲ. ರಾಂಗ್ ವೇಷದ ಕತೆ ಕೇಳಿದ್ದರಿಂದ ಬಾಣವೆಂದರೆ ಶಿವಧನುಸ್ಸಿಗೆ ಹೂಡುವ ರಾಮಬಾಣ ಎಂದೊ ಅಥವಾ ಯಕ್ಷಗಾನದ ಯುದ್ಧಗಳಲ್ಲಿ ಬಳಸುವ ಮರದ ತುಂಡುಗಳೆಂದೊ ತಿಳಿದುಕೊಂಡಿರಬಹುದು.

ಕುರಿಗಳ ಕತೆಯೆ ಹಾಗೆ ಪಾಪ. ಕತ್ತರಿಸುವ ಕ್ಷಣದವರೆಗೂ ಅವುಗಳಿಗೆ ತಾವೆಲ್ಲಿದ್ದೇವೆಂದು ಗೊತ್ತಾಗುವುದಿಲ್ಲ ಯಾಕೆ ಎಲ್ಲೆಲ್ಲೊ ಕರೆದೊಯ್ಯುತ್ತಾರೆಂದೂ ಸಹ ತಿಳಿಯುವುದಿಲ್ಲ. ಮುಷ್ಠಿ ಸೊಪ್ಪು ಮತ್ತು ಅಷ್ಟಿಷ್ಟು ನೀರು ಕೊಟ್ಟರೆ ಅವುಗಳು ಅಲ್ಲಲ್ಲೆ ತೃಪ್ತ ಮತ್ತು ತಟಸ್ಥ.

ಕುರಿಮೆಂದೆಯಲ್ಲಿ ಕೆಲವು ಠಗರುಗಳಿವೆ. ಅವುಗಳಿಗೆ ಸ್ವಲ್ಪ ಹೆಚ್ಚಿಗೆ ಸೊಪ್ಪು ಮತ್ತು ನೀರು ಬೇಕು. ಜೊತೆಗೆ ಕೂಟಕ್ಕೆ ಪಕ್ಕದಲ್ಲಿರುವ ಹೆಣ್ಣುಕುರಿಗಳಲ್ಲಿ ಕೆಲವು ಸಿಕ್ಕರೆ ಸಾಕು. ಬಾಣಬಿಟ್ಟ ಸದ್ದಿಗೆ ವಿರುದ್ಧವಾದ ಸದ್ದು ಕೇಳಿದರೆ ಮೊದಲು “ಮೇ” ಎನ್ನುವುದು ಈ ಠಗರುಗಳ ಕೆಲಸ. ಉಳಿದ ಕುರಿಗಳು ಏಕಕಾಲದಲ್ಲಿ “ಮೇ ಮೇ” ಎನ್ನುತ್ತ ಅವುಗಳನ್ನು ಅನುಸರಿಸುತ್ತವೆ.

ಕುರಿಮೆಂದೆಯಲ್ಲಿ ಕರ್ಣಾನಂದಕರವಾಗಿ ಬಾಣಬಿಡುವ ಸುದ್ದಿ ಹೇಳುವುದು ವೀರ್ಯ ಸನ್ಯಾಸದ ಲಕ್ಷಣ. ಸತತವಾಗಿ ಸಾಧ್ಯವಾದ ಕ್ಷೇತ್ರಗಳನ್ನು ಕಬ್ಜಾಕ್ಕೆ ಪಡೆದು ವೀರ್ಯವನ್ನು ಚೆಲ್ಲುತ್ತಲೆ ನಿಜವಾದ ಸನ್ಯಾಸಿ ಮಾಡಬೇಕಾದುದನ್ನೆಲ್ಲ ತ್ಯಜಿಸುವುದು ಎಂದರ್ಥ. ಕಬ್ಜಾಕ್ಕೆ ಸಿಗದಿದ್ದರೆ ಬಗರ್ ಹುಕುಂ ಮೂಲಕ ಪಡೆದುಕೊಳ್ಳುವುದು ವೀರ್ಯ ಸನ್ಯಾಸಿಯ ಸಾಚಾತನ. ಅಡಿಗೆ ಬಿದ್ದರೂ ಮೂಗು ಮೇಲೇ ಇದೆ ಎಂದುಕೊಳ್ಳುವುದು ವೀರ್ಯ ಸನ್ಯಾಸಿಯ ಕ್ಷಾತ್ರಧರ್ಮ.

Thumari Ramachandra

source: https://www.facebook.com/groups/1499395003680065/permalink/1598377920448439/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s