ಹಿಂದೂ ಪರ ಸಂಘಟನೆಗಳ ದಿಕ್ಕುತಪ್ಪಿಸುತ್ತಿದ್ದಾರೆ

ಹಿಂದೂ ಪರ ಸಂಘಟನೆಗಳ ದಿಕ್ಕುತಪ್ಪಿಸುತ್ತಿದ್ದಾರೆ

ಧಾರ್ಮಿಕ ಕ್ಷೇತ್ರ ಮತ್ತು ಮಠಮಾನ್ಯಗಳಲ್ಲಿರುವ ಕಚ್ಚೆಹರುಕರು ತಮ್ಮ ತಪ್ಪುಗಳನ್ನು ಮುಚ್ಚಿಹಾಕಿಕೊಳ್ಳಲು ಹಿಂದೂ ಪರ ಸಂಘಟನೆಗಳ ದಿಕ್ಕುತಪ್ಪಿಸುತ್ತಿದ್ದಾರೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಅನ್ಯ ಕೋಮುಗಳ ಮತಾಂತರ ಕೆಲಸಗಳು ಹೆಚ್ಚಿ ಹಿಂದೂ ಜನರನ್ನು ಮತಾಂತರಿಸಿದ್ದನ್ನು ನೀವೆಲ್ಲ ತಿಳಿದಿದ್ದೀರಿ.

ಹಿಂದೂಜನರನ್ನೆಲ್ಲ ಈ ನೆಲದಲ್ಲಿ ಮನವೊಲಿಸಿ ಆಮಿಷ ತೋರಿಸಿ ಅಥವಾ ಹೆದರಿಸಿ ಬೆದರಿಸಿಯಾದರೂ ಮತಾಂತರಿಸಬೇಕೆಂದು ಅನ್ಯ ಮತಗಳ ಕೆಲವು ಸಂಘಟನೆಗಳು ಗುಪ್ತವಾಗಿ ಕೆಲಸಮಾಡುವುದನ್ನು ತಿಳಿದ ಉದಾರ ಮನೋಭಾವದ ಹಿಂದೂಗಳು ಹಿಂದೂ ಧರ್ಮ ರಕ್ಷಣೆಗಾಗಿ ಮತ್ತು ಹಿಂದೂ ಗಳ ಹಿತರಕ್ಷಣೆಗಾಗಿ ಹಿಂದೂಪರ ಸಂಘಟನೆಗಳನ್ನು ಹುಟ್ಟುಹಾಕಿದರು.

ಹಿಂದೂ ವಿರೋಧಿ ಚಟುವಟಿಕೆಗಳು ಸಮಾಜದಲ್ಲಿ ಕಂಡು ಬಂದರೆ ಅದರ ವಿರುದ್ಧ ಅವು ಹೋರಾಡುತ್ತವೆ. ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಹಲವು ಡೂಪ್ಲಿಕೇಟ್ ಸನ್ಯಾಸಿಗಳು, ಕಾವಿ ವೇಷದ ಕಚ್ಚೆಹರುಕರು ತಮ್ಮ ವಿರುದ್ಧ ಆಪಾದಿಸುತ್ತಿರುವುದು ಹಿಂದೂ ಧರ್ಮಕ್ಕೆ ಎಸಗುವ ಅಪಚಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಿಂದೂಪರ ಸಂಘಟನೆಗಳ ಮುಖ್ಯವಾಹಿನಿಯಲ್ಲಿರುವವರಿಗೆ ತಪ್ಪು ಮಾಹಿತಿಗಳನ್ನು ಕೊಟ್ಟು ತಮ್ಮ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ನಂಬುವಂತೆ ಹೇಳುತ್ತಾರೆ.

ಸಂಕ ಮುರಿದಲ್ಲೆ ಸ್ನಾನ ಎಂಬ ಗಾದೆ ಇದೆ. ಯಾರೋ ಹೋಗುವಾಗ ಕಿರುಹೊಳೆಯ ಸಂಕ ಮುರಿದು ನೀರಿಗೆ ಬಿದ್ದರಂತೆ. ಉಳಿದವರು ನೋಡಿದಾಗ ನಾನು ಸ್ನಾನಕ್ಕೆ ಬಂದಿದ್ದು ಅಂದರಂತೆ. ಉಳಿದವರಿಗೆ ಸಂಕ ಮುರಿದಿದ್ದು ಸರಿಯಾಗಿ ಕಾಣಲಿಲ್ಲ. ಪಾಪ ಎಷ್ಟೋ ದೂರದಿಂದ ಸ್ನಾನಕ್ಕೆ ಅಂತ ಬಂದಿದ್ದಾರೆ ಅಂದುಕೊಂಡರು.

ಅದೇ ರೀತಿಯಲ್ಲಿ ಹಿಂದೂಗಳ ವಿರುದ್ಧ ಅನ್ಯ ಮತಗಳು ತಂತ್ರ ಕುತಂತ್ರಗಳನ್ನು ನಡೆಸುತ್ತಿರುವುದೇನೋ ಸರಿ. ಆದರೆ ಕಚ್ಚೆಹರುಕರಿಗೂ ಅದಕ್ಕೂ ಸಂಬಂಧವಿಲ್ಲ. ಹಿಂದೂ ಕಚ್ಚೆಹರುಕರಿಗೆ ಇಲ್ಲೊಂದು ಅವಕಾಶ ಸಿಕ್ಕಿಬಿಟ್ಟಿದೆ. ಏನೇ ತಪ್ಪುಮಾಡಿದರೂ ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಸುವವರ ಕೈವಾಡ ಎಂದು ಹೇಳಲು ಆರಂಭಿಸುತ್ತಾರೆ.

ಕಳೆದ ವಾರವೂ ಕೂಡ ಕಚ್ಚೆಹರುಕ ಒಬ್ಬನ ಪರವಾಗಿರುವ ಜನ ಹಿಂದೂ ಪರ ಸಂಘಟನೆಯ ಕೆಲವು ಮುಖ್ಯಸ್ಥರನ್ನು ಭೇಟಿಮಾಡಿದ್ದರಂತೆ. ಅವರಿಗೆ ವಿಷಯ ಮನವರಿಕೆ ಮಾಡಿದೆವು ಎಂದು ಹೇಳಿಕೊಂಡಿದ್ದಾರೆ. ಹಿಂದೂ ಪರ ಸಂಘಟನೆಗಳು ಈ ಕಚ್ಚೆ ಹರುಕನ ವಿಷಯದಲ್ಲಿ ದಿವ್ಯ ಮೌನ ತಳೆದಿರುವುದು ನಿಜಕ್ಕೂ ಶೋಚನೀಯ. ಅವು ಸುಮ್ಮನಿರುವುದು ಧರ್ಮದಲ್ಲಿ ನಡೆಯುತ್ತಿರುವ ಅಧರ್ಮಕ್ಕೆ ಮತ್ತು ಅಧರ್ಮಿಗಳಿಗೆ ಅವಕಾಶ ಹೆಚ್ಚುವಂತೆ ಮಾಡುತ್ತದೆ.

ಕವಳದ ಗೋಪಣ್ಣ ತಿಳಿಸಿದಂತೆ ಕುರಿಗಳಲ್ಲದ ಹವ್ಯಕರ ಅಭಿಪ್ರಾಯ ಹೀಗಿದೆಯಂತೆ. ಆಂಧ್ರದಲ್ಲಿ ರಕ್ತಚಂದನದ ಕಾಡಿನಲ್ಲಿ ಮೊನ್ನೆ ಇಪ್ಪತ್ತು ಕಾಡುಗಳ್ಳರನ್ನು ಪೋಲೀಸರು ಹೊಡೆದು ಹಾಕಿದ್ದು ನಿಮಗೆ ಗೊತ್ತಿದೆಯಲ್ಲ? ಒಂದೆರಡು ಸಲ ಹಾಗೆ ಮಾಡಿದರೆ ಕಾಡುಗಳ್ಳತನ ನಿಂತು ಹೋಗುತ್ತದೆ ಎಂಬ ಪೋಲೀಸರ ಅಭಿಪ್ರಾಯಕ್ಕೆ ಅನೇಕ ಜನ ಒಪ್ಪಿದ್ದಾರಂತೆ. ಅದೇ ಮಾದರಿಯಲ್ಲಿ ಖಂಡಿತ ಹೊಡೆದುರುಳಿಸುವುದು ಬೇಡ. ಆದರೆ ಕಚ್ಚೆಹರುಕರನ್ನು ಗುರುತಿಸಿ ಅವರನ್ನು ಸಾರ್ವಜನಿಕವಾಗಿ ’ಸನ್ಮಾನಿಸುವ’ ಕೆಲಸವನ್ನು ಹಿಂದೂಪರ ಸಂಘಟನೆಗಳು ಮಾಡಬೇಕಿತ್ತು.

ಆದರೆ ಕಳೆದ ಹತ್ತಾರು ವರ್ಷಗಳ ಕೆಲವು ಘಟನೆಗಳನ್ನು ನೋಡಿದರೆ ಹಿಂದೂ ಸಂಘಟನೆಗಳು ಹಾಗೆ ಮಾಡುತ್ತಿಲ್ಲ. ಅವುಗಳ ಮೌನ ತಮ್ಮ ಕೆಲಸಕ್ಕೆ ಸಮ್ಮತಿಯ ಲಕ್ಷಣವೆಂದು ಭಾವಿಸಿದ ಕಚ್ಚೆಹರುಕರು ಇನ್ನೂ ಹೆಚ್ಚುತ್ತಲೇ ಇದ್ದಾರೆ. ಅತ್ತ ಕಾನೂನಿಗೆ ಕಂದಕ ಕೊರೆದು ನುಣುಚಿಕೊಳ್ಳುವ ಖದೀಮರು ಇತ್ತ ಹಿಂದೂಪರ ಸಂಘಟನೆಗಳ ಬೆಂಬಲವನ್ನು ಪಡೆದುಕೊಳ್ಳಲು ಹವಣಿಸುತ್ತಾರೆ.

ಸದ್ಯ ನಡೆಯುತ್ತಿರುವ ಪ್ರಕರಣದಲ್ಲಂತೂ ಕಚ್ಚೆಹರುಕನ ರಕ್ಷಣೆಗೆ ಇಮ್ಮಡಿ ವಿಶ್ವೇಶ್ವರಯ್ಯನವರ ಮುಂದಾಳತ್ವದ ಸಮಿತಿ ಹಗಲಿರುಳೂ ಶಕ್ತಿಯುಕ್ತಿ ಮೀರಿ ಪ್ರಯತ್ನಿಸುತ್ತಿದೆ. ತನ್ಮಧ್ಯೆ ಐ.ಎ.ಎಸ್ ಅಧಿಕಾರಿಯ ಪ್ರಕರಣ ಎದುರಿಗೆ ಬಂದಿದ್ದರಿಂದ ಮಾಧ್ಯಮಗಳಲ್ಲಿ ಕಾಣದ ಕೈಗಳು ಬೂಸಾ ತಿಂದು ಈ ಪ್ರಕರಣವನ್ನು ಮುಚ್ಚಿಹಾಕೋದಕ್ಕೆ ಅನುಕೂಲಮಾಡಿಕೊಡುತ್ತಿವೆ.

ಸಮಾನ ಮನಸ್ಕರು ಯಾಕೋ ಇನ್ನೂ ಹೆಚ್ಚಿನ ಚಳುವಳಿಗೆ ಮುಂದಾದ ಹಾಗೆ ಕಾಣುತ್ತಿಲ್ಲ. ಲೋಹ ಕಾದಿರುವಾಗಲೆ ಅದನ್ನು ಹಣಿಯುವ ಕೆಲಸವಾಗಬೇಕು. ಆಮೇಲೆ ತಣಿದಮೇಲೆ ಅದು ಸಾಧ್ಯವಾಗುವುದಿಲ್ಲ. ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿಬಾಗಿಲು ಹಾಕಿದರು ಎನ್ನುವ ಹಾಗೆ ಕಚ್ಚೆಹರುಕ ಜಾರಿಕೊಳ್ಳುವ ಮುನ್ನ ಮುಂದಿನ ಕೆಲಸಗಳು ನಡೆಯಬೇಕು. ಅಲ್ಲೆಲ್ಲೊ ಒಮ್ಮೆ ಕೂಗುತ್ತ ಬಂದ ಕೇಂದ್ರದ ಮಹಿಳೆಯರ ಮೇಳ ಈಗ ಕಾಣುತ್ತಲೆ ಇಲ್ಲ. ಅವರ ಹಕ್ಕುಗಳನ್ನು ಯಾರು ಕಸಿದುಕೊಂಡರು? ಅಥವಾ ಅವರೂ ಪವಾಡಕ್ಕೊಳಗಾದರೆ?

ಕೇಂದ್ರ ಸರಕಾರ ಈ ಪ್ರಕರಣದ ತನಿಖೆಗೆ ಮನಸ್ಸು ಮಾಡುವಂತಾಗಬೇಕು. ಇದು ಶೀಘ್ರ ಇತ್ಯರ್ಥವಾಗಿ ತಪ್ಪಿತಸ್ಥ ವ್ಯಕ್ತಿಗೆ ಶಿಕ್ಷೆಯಾಗಬೇಕು. ಕಾನೂನಿನ ಮೂಲಕ ನಡೆಸುವ ಕಿರೀಟೋತ್ಸವಕ್ಕಾಗಿ ನಾವೆಲ್ಲ ಕಾದಿದ್ದೇವೆ.

ಸಮಾನ ಮನಸ್ಕರು ಇನ್ನು ಮುಂದೆ ಆದಷ್ಟು ಜಗೃತರಾಗಬೇಕು. ಮುಚ್ಚುಮರೆ ಮಾಡಬೇಕಾದ ಅಗತ್ಯವೇನಿಲ್ಲ. ಹೆಚ್ಚಿನ ಕಡೆಗಳಲ್ಲಿ ಸಭೆಗಳನ್ನು ನಡೆಸಿ ಉಳಿದ ಸಮಾಜಗಳೆದುರು ತೆರೆದುಕೊಳ್ಳಬೇಕು. ಸಂಸ್ಥೆಗಿಂತ ವ್ಯಕ್ತಿ ದೊಡ್ಡವನಲ್ಲ. ಅರ್ಹತೆಯಿಲ್ಲದ ವ್ಯಕ್ತಿ ಸಂಸ್ಥೆಯ ಯಜಮಾನನಾಗಿರುವುದು ಸಂಸ್ಥೆಗೂ ಮತ್ತು ಸಮಾಜಕ್ಕೂ ಹಾನಿಕಾರಕ.

Thumari Ramachandra

source: https://www.facebook.com/groups/1499395003680065/permalink/1597984367154461/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s