ಕಚ್ಚೆಹರುಕರದ್ದು ಸಹ ಅವಿಚ್ಛಿನ್ನ ಪರಂಪರೆಯೇ

ಕಚ್ಚೆಹರುಕರದ್ದು ಸಹ ಅವಿಚ್ಛಿನ್ನ ಪರಂಪರೆಯೇ

ಸೊಗಸಾಗಿ ಬರೆಯುತ್ತೇನೆಂದು ಸರ್ಟಿಫಿಕೇಟ್ ಕೊಟ್ಟಿದ್ದರಿಂದ ನನಗೆ ಸಂತೋಷವೇನಿಲ್ಲ. ವಾಸ್ತವವಾಗಿ ಇಡೀ ಸಮಾಜ ಅನುಭವಿಸುತ್ತಿರುವ ದುಃಖದುಮ್ಮಾನ ಮತ್ತು ಅವಮಾನ ನನ್ನನ್ನು ತಬ್ಬಿಬ್ಬಾಗಿಸಿದೆ. ಅದಕ್ಕಾಗಿ ನನ್ನ ಸಮಯ ಹಾಳಾದರೂ ಚಿಂತೆಯಿಲ್ಲವೆಂದು ಬರೆಯ ಹತ್ತಿದೆ.

ಓದುವ ನಮ್ಮ ಸಮಾಜದ ಕೆಲವು ಕುರಿಗಳಾದರೂ ಕುರಿತನವನ್ನು ಬಿಟ್ಟು ನಿಜವಾದ ಹವ್ಯಕರಾದರೆ ಅದರಿಂದ ಸಿಗುವ ಸಂತೋಷಕ್ಕೆ ಇದು ಸಾಟಿಯಾಗಲಾರದು. ಒಂದೊಮ್ಮೆ ಯಾರಾದರೂ ನನ್ನನ್ನು ಅವಾಚ್ಯವಾಗಿ ಬೈದರೂ ಜರಿದರೂ ನನಗೆ ಬೇಸರವಿಲ್ಲ. ಯಾವುದೆ ಕಾಮೆಂಟುಗಳಿಗೆ ನಾನು ಉತ್ತರಿಸುವುದಿಲ್ಲ. ನನ್ನ ಅನಿಸಿಕೆಯನ್ನಷ್ಟೆ ನಾನು ಹೇಳಿಕೊಳ್ಳುತ್ತಿದ್ದೇನೆ.

ಶತಮಾನದ ಹಿಂದೆ ಸಂಪೆಕಟ್ಟೆ ಮಠ ಎಂಬುದಿತ್ತು. ಅಲ್ಲಿ ತಪಸ್ಸು ಸಾಧನೆ ಶೂನ್ಯಕ್ಕೆ ಹತ್ತಿರವಿದ್ದಿದ್ರಿಂದ ಬರೋ ಭಕ್ತರ ಸಂಖ್ಯೆ ಕ್ಷೀಣಿಸಿ ಮಠದ ಖರ್ಚಿಗೆ ಆದಾಯಮೂಲ ಅಂತ ಅಡಿಕೆ ತೋಟವನ್ನೆ ನಂಬಿದ್ದರು. ಮುಕ್ಕಾಲು ಶತಮಾನದ ಹಿಂದೆ ಅಲ್ಲಿದ್ದ ಒಬ್ಬ ’ಯತಿ’ ಮಠದ ತೋಟದಲ್ಲಿ ಸಾಂಸಾರಿಕರಂತೆ ಸ್ವತಃ ಕೃಷಿ ಕೆಲಸಗಳನ್ನು ನಡೆಸುತ್ತಿದ್ದರು.

ಸದ್ಗುರು ಶ್ರೀಧರ ಸ್ವಾಮಿಗಳು ದೀಕ್ಷೆ ಪಡೆಯೋ ಮೊದಲು ಒಮ್ಮೆ ಅಲ್ಲಿಗೆ ಹೋಗಿದ್ದಾಗ ಆ ’ಯತಿ’ಗಳು ಮಠದ ಕೆಲಸಗಳಲ್ಲಿ ಭಾಗಿಯಾಗಿ ಸೇವೆಮಾಡುವಂತೆ ಕೇಳಿದರು. ಅಲ್ಲಗಳೆಯಲಾಗದೆ ಶ್ರೀಧರರು ಸೇವೆ ಮಾಡಿದರು. ಇಂತವರೂ ಇರುತ್ತಾರೆ ಎಂಬುದನ್ನು ಶ್ರೀಧರರು ತಮ್ಮ ಶಿಷ್ಯರಿಗೆ ಅರುಹಲು ಅದನ್ನು ನಂತರ ತಮ್ಮ ಶಿಷ್ಯರಲ್ಲಿ ಹೇಳಿದ್ದಾರೆಯೆ ಹೊರತು ಹಾದಿಬೀದಿಯಲ್ಲಿ ಹೋಗುವ ಕಾವಿಧಾರಿಗಳನ್ನೆಲ್ಲ “ಯತಿ ನಾರಾಯಣ” ಅಂದ್ಕೊಂಡು ಸೇವೆ ಮಾಡಿ ಎಂದು ಹೇಳಲಿಲ್ಲ.

ದೀಕ್ಷೆಯ ನಂತರ ಸಂಚಾರ ಮಾರ್ಗದಲ್ಲಿ ಅನ್ಯ ಮತೀಯನೊಬ್ಬ ಶ್ರೀಧರ ಸ್ವಾಮಿಗಳಿಗೆ ಅಡ್ಡಬಿದ್ದು “ದುಡಿದದ್ದು ಕೈಲಿ ನಿಲ್ತಾನೇ ಇಲ್ಲ ಸ್ವಾಮೀಜಿ. ಯಾವ ರೀತಿ ಪ್ರಯತ್ನಿಸಿದ್ರೂ ಕುಟುಂಬ ದೇಡಗತಿ ಹತ್ತತಾ ಇಲ್ಲ. ಆಶೀರ್ವಾದ ಬೇಕು ಸ್ವಾಮೀಜಿ” ಎಂದಾಗ ಅವನನ್ನೊಮ್ಮೆ ಆಮೂಲಾಗ್ರ ನೋಡಿ “ತಮ್ಮ ನೀನು ಪರಸ್ತ್ರೀಯರ ಸಹವಾಸವನ್ನು ಈ ಕ್ಷಣದಿಂದ ನಿಲ್ಲಿಸು. ಎಲ್ಲವೂ ಸರಿಯಾಗುತ್ತದೆ” ಎಂದು ಪ್ರತ್ಯಕ್ಷ ಕಂಡವರಂತೆ ಹೇಳಿದರು. ಒಪ್ಪಿದ ಆತ ಮಂತ್ರಾಕ್ಷತೆ ಪಡೆದು ತೆರಳಿದ್ದ.

“ಶ್ರೀಧರ ಸ್ವಾಮಿಗಳ ಆದರ್ಶಗಳನ್ನು ಪಾಲಿಸುವವರು ಕಾವಿ ವೇಷ ತೊಟ್ಟವರನ್ನೆಲ್ಲ ಯತಿನಾರಾಯಣ ಸ್ವರೂಪವೆಂದು ಸೇವೆಮಾಡಬೇಕು”ಎಂಬ ಬಿಟ್ಟಿ ಉಪದೇಶವನ್ನು ಕೊಡುವವರು ಕಾವಿವೇಷದ ಯತಿನಾರಾಯಣರ ಏಕಾಂತ ಸೇವೆಗೆ ತಮ್ಮ ಹೆಂಡತಿ ಹೆಣ್ಣುಮಕ್ಕಳನ್ನು ನೇಮಿಸಿಕೊಳ್ಳುವುದಕ್ಕೆ ನಮ್ಮ ಅಭ್ಯಂತರವೇನೂ ಇರೋದಿಲ್ಲ. ಶ್ರೀಧರ ಸ್ವಾಮಿಗಳ ಶಿಷ್ಯರು ಕಾವಿವೇಷಕ್ಕೆ ಗೌರವಕೊಡುವವರಲ್ಲ. ಯತಿಯೆನಿಸಿದವನ ಅಂತಃಸತ್ವವನ್ನು ಗುರುತಿಸಿ ಸೇವೆ ಮಾಡ್ತಾರೆ ಅನ್ನೋದನ್ನ ಅವರು ತಿಳಿದುಕೊಳ್ಳಲಿ.

ಮಾನವನಿಗಿರುವ ಸ್ವಾತಂತ್ರ್ಯ ಮತ್ತು ಆಲೋಚನ ಶಕ್ತಿ ಉಳಿದ ಜೀವಿಗಳಲ್ಲಿ ಕಾಣೋದಿಲ್ಲ. ಆಯಾ ಪ್ರಾಣಿಗಳಿಗೆ ಸಂತಾನೋತ್ಪತ್ತಿಗೆ ಸೀಮಿತ ಸೀಸನ್‍ಗಳಿವೆ. ಆಗ ಮಾತ್ರ ಅವುಗಳಿಗೆ ಹೆಣ್ಣು ಗಂಡುಗಳ ಲಿಂಗಭೇದದ ಸಂಬಂಧವನ್ನುಳಿದು ಬೇರೆ ಯಾವ ಸಂಬಂಧವೂ ತಿಳಿಯುವುದಿಲ್ಲ. ಗಂಡು ಹೆಣ್ಣನ್ನು ಸೇರುತ್ತದೆ ಅಥವಾ ಕೆಲವೊಮ್ಮೆ ಹಲವು ಗಂಡುಗಳು ಒಂದೆ ಹೆಣ್ಣನ್ನು ಸೇರುತ್ತವೆ.

ಕೆಲವು ಜೀವಿಗಳಲ್ಲಿ ಒಂದೆ ಮರಿ ಜನಿಸಿದರೆ ಹಲವು ಜೀವಿಗಳಲ್ಲಿ ಒಂದಕ್ಕಿಂತ ಹೆಚ್ಚು ಸಂತಾನಗಳ ಜನನ ನಡೆಯುತ್ತದೆ. ಆಯಾ ಜೀವಿಗಳಿಗೆ ಸಂಬಂಧಿಸಿದ ಋತುಮಾನಗಳನ್ನು ಬಿಟ್ಟರೆ ವರ್ಷಪೂರ್ತಿ ಅವು ಮೈಥುನಕ್ಕೆ ತೊಡಗುವುದಿಲ್ಲ. ಮನುಷ್ಯ ಮಾತ್ರ ಹಾಗಲ್ಲ.

ಸುಂದರವುಳ್ಳ ವಿರುದ್ಧ ಲಿಂಗಿಗಳನ್ನು ಕಂಡಾಗ ಆಕರ್ಷಣೆಗೆ ಒಳಗಾಗುವುದು ಕಂಡುಬರುತ್ತದೆ. ಆಕರ್ಷಣೆಯಲ್ಲಿ ದೈಹಿಕವಾಗಿ ಕೂಡುವ ಕರ್ಚಿನ ಮಟ್ಟಿಗೆ ಪ್ರೀತಿ ಇರುತ್ತದೆ. ಹೆಚ್ಚೆಂದರೆ ಪದೇ ಪದೆ ದೈಹಿಕವಾಗಿ ಕೂಡಲು ಬೇಕಾದಾಗ ಬಹಳ ಪ್ರೀತಿಯೆಂಬಂತೆ ನಡೆದುಕೊಳ್ಳುವುದು ಕಾಣುತ್ತದೆ. “ಸಂಸಾರದ ಭಾಗವಾಗಿ ಸ್ವೀಕರಿಸಿ” ಎಂಬ ಬೇಡಿಕೆ ಬಂದರೆ ಅಂತ ಪ್ರೀತಿ ಒಣಗುವುದೆ ಹೆಚ್ಚು.

ಇಂತ ಆಕರ್ಷಣೆಯನ್ನು ಮೀರಿ ಪ್ರಾಣಿವರ್ಗಕ್ಕಿಂತ ಭಿನ್ನವಾಗಿ ನಿಲ್ಲುವುದು ಹೆಚ್ಚಿನ ಭಾರತೀಯರಲ್ಲಿ ಕಂಡುಬರುವ ಸಂಸ್ಕೃತಿ. ಇದಕ್ಕೆ ವಿರುದ್ಧವಾಗಿ ಪ್ರಾಣಿಗಳನ್ನೂ ಮೀರಿಸುವ ’ಆಲ್ ಸೀಸನ್ ಬ್ರೀಡರ್ಸ್’ ಇರುತ್ತಾರೆ. ಅಂತವರಿಗೆ ಹೆಣ್ಣು ಗಂಡು ಎರಡೇ ಸಂಬಂಧ ಹೊರತು ಉಳಿದದ್ದು ಮುಖ್ಯವಲ್ಲ. ಮತ್ತು ವರ್ಷದಲ್ಲಿ ಸದಾಕಾಲ ಅವರಿಗೆ ಸಂಭೋಗದ್ದೆ ಚಿಂತೆ. ಸುಂದರವಾದವರನ್ನು ಕಂಡೊಡನೆಯೆ ಭೋಗಿಸುವುದಕ್ಕೆ ಪ್ಲಾನ್ ಮಾಡೋದು.

ಕೆಲವು ವಂಶಾವಳಿಯಲ್ಲಿ ಈ ಜೀನ್ಸು ಪರಂಪರೆಯಿಂದ ಹರಿದು ಬಂದಿದ್ದು ಕಾಣಿಸುತ್ತದೆ. ಯಾವುದಾದರೂ ತುಂಡಾಗಬಹುದು ಇವರ ಪರಂಪರೆ ಮಾತ್ರ ಅವಿಚ್ಛಿನ್ನ. ಬಿತ್ತಿದಲ್ಲೆ ಬೀಜ ಮೊಳೆಯುವ ಪಾರ್ಥೇನಿಯಂ ತಳಿಯ ಜನ. ಹೊರನೋಟಕ್ಕೆ ಅವರಷ್ಟು ಸುಂದರರು ಸಂಭಾವಿತರು ಪ್ರಾಮಾಣಿಕರು ಸೃಜನಶೀಲರು ಸಾಧಕರು ಬೇರೆ ಯಾರೂ ಇಲ್ಲವೇನೋ ಎಂಬಂತೆ ಅವರು ಪ್ರದರ್ಶನ ನೀಡುತ್ತಾರೆ. ಅಬ್ಬರದ ಪ್ರಚಾರದ ಮೂಲಕವೇ ತಾವು ಕಣ್ಣಿಟ್ಟ ವಿರುದ್ಧ ಲಿಂಗಿಗಳನ್ನು ಅವರು ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ನಿಜವಾದ ಪ್ರತಿಭೆಗಳು ಇವರಷ್ಟು ಪ್ರಚಾರ ಪ್ರಿಯರಾಗಿರೋದಿಲ್ಲ.

ಬುಡ್ಡಿ ದೀಪದಲ್ಲಿ ಬೆಂಕಿ ಇದೆ ಎಂಬುದನ್ನು ಅರಿಯದ ಪತಂಗಗಳು ಅದನ್ನು ಮುತ್ತಿಕೊಂಡು ಮುದ್ದಿಸಿ ಸಾಯುವಂತೆ ಅವಿಚ್ಛಿನ್ನ ಪರಂಪರೆಯ ಕಚ್ಚೆಹರುಕರ ಓರೆನೋಟ ಮಂದಸ್ಮಿತ ತುಟಿ ನೆಕ್ಕಿಕೊಳ್ಳುವುದು ತುಟಿ ಕಚ್ಚಿಕೊಳ್ಳುವುದು ತೊನೆಯುವುದು ಕಣ್ಣಲ್ಲಿ ತಮಗೆ ಬೇಕಾದವರಿಗೆ ಸ್ಪೆಶಲ್ ಇಫೆಕ್ಟ್ ತೋರಿಸುವುದು ಕೈಕಾಲುಗಳಲ್ಲಿ ನಡೆ ನಿಲುವುಗಳಲ್ಲಿ ಸನ್ನೆಯನ್ನು ತೋರಿಸುವುದು ಎಲ್ಲದರಿಂದಲೂ ವಿರುದ್ಧ ಲಿಂಗಿಗಳು ಅವರಲ್ಲಿ ಆಸಕ್ತರಾಗುತ್ತಾರೆ.

ಹೀಗೆ ಆಕರ್ಷಿಸುವುದರಲ್ಲಿ ಕಚ್ಚೆಹರುಕ ಗಂಡಸರದು ಎತ್ತಿದ ಕೈ. ಏನಾಗುತ್ತದೆ ಎಂದು ತಿಳಿಯುವ ಮೊದಲೆ ಬುಟ್ಟಿಗೆ ಬಿದ್ದ ಹೆಣ್ಣುಗಳ ಮೇಲೆ ತಮ್ಮ ಸರ್ಪಾಸ್ತ್ರವನ್ನು ಪ್ರಯೋಗಿಸಿಬಿಟ್ಟಿರುತ್ತಾರೆ. ಇದಿಷ್ಟೇ ಅಲ್ಲ. ಒಂದೇ ಹೆಣ್ಣಿನಲ್ಲಿ ಇವರಿಗೆ ತೃಪ್ತಿ ಸಿಗುವುದಿಲ್ಲ. ಕಂಡಿದ್ದೆಲ್ಲ ಬೇಕು. ತನ್ನ ಸರ್ಪಾಸ್ತ್ರ ಪ್ರಯೋಗಕ್ಕೊಳಗಾದ ಹೆಣ್ಣುಮಕ್ಕಳು ಅಥವಾ ಹೆಂಗಸರು ಯಾವುದೇ ಸಂದರ್ಭದಲ್ಲಿ ಒಟ್ಟಿಗೆ ಎದುರಾದರೆ ಪರಸ್ಪರ ಈ ವಿಷಯ ವಿನಿಮಯ ಮಾಡಿಕೊಳ್ಳದಂತೆ ಅವರೆಲ್ಲರನ್ನೂ ನಿಭಾಯಿಸುವ ಕಲೆಯಲ್ಲಿ ಇವರು ನಿಪುಣರು.

ಸಭೆ ಸಮಾರಂಭಗಳಲ್ಲಿ ಆಕರ್ಷಣೆಯಲ್ಲಿರುವ ಭಾವೀ ಮಿಕಗಳು ಕಚ್ಚೆಹರುಕನನ್ನು ಹೊಗಳುತ್ತಿದ್ದಾಗ ಮೊದಲೆ ಸರ್ಪಾಸ್ತ್ರ ಪ್ರಯೋಗಕ್ಕೆ ಒಳಗಾದ ಮತ್ತು ಅದನ್ನೆ ಬಯಸುವ ಕೆಲವರು ಒಳಗೊಳಗೇ ಖುಷಿ ಪಡುತ್ತಾರೆ. ತನ್ನಮೇಲೆ ಬಲಾತ್ಕಾರವಾಗಿದೆ ಎಂಬ ಭಾವನೆಯುಳ್ಳ ಹೆಂಗಸರು ಅಥವಾ ಹೆಣ್ಣುಮಕ್ಕಳು ಮಾತ್ರ ಒಳಗೊಳಗೆ ಕುದಿಯುತ್ತಿರುತ್ತಾರೆ. ಕೆಲವರು ಮಾರ್ಯಾದೆಗೆ ಅಂಜಿ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಾರೆ. ಕೇವಲ ಸಾವಿರದಲ್ಲೊಬ್ಬರು ಅದನ್ನು ಹೇಳಿಕೊಳ್ಳಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಹತ್ತುಸಾವಿರದಲ್ಲಿ ಒಬ್ಬರು ಮಾತ್ರ ಗೆಳತಿಯರಲ್ಲಿ ಹೇಳಿಕೊಳ್ಳುವುದರಲ್ಲಿ ಯಶಸ್ಸು ಕಾಣುತ್ತಾರೆ. ಹತ್ತುಲಕ್ಷದಲ್ಲಿ ಒಬ್ಬರು ಬಹಿರಂಗವಾಗಿ ಹೇಳಲು ಧೈರ್ಯತಾಳುತ್ತಾರೆ.

ಸಿನೆಮಾ ರಂಗಭೂಮಿ ಸಂಗೀತ ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಇಂತಹ ಕಚ್ಚೆಹರುಕರ ಸಂತಾನಗಳೆ ತುಂಬಿರುತ್ತವೆ. ಧಾರ್ಮಿಕ ಕ್ಷೇತ್ರ ಮತ್ತು ಮಠಮಾನ್ಯಗಳಲ್ಲಿ ಸಹ ಕಚ್ಚೆಹರುಕರ ಕಾವಾಡಿಗ ತನಕ್ಕೆ ಕೊರತೆಯಿಲ್ಲ. ಸ್ವಲ್ಪ ಲೋಯರ್ ಗ್ರೇಡ್‍ನವರು ರಸ್ತೆಕಾಮಣ್ಣಗಳಾಗಿ ಚಪ್ಪಲಿಸೇವೆ ಪಡೆಯುತ್ತಾರೆ. ಮಧ್ಯಮ ತರಗತಿಯವರು ಜಗಳದಲ್ಲಿ ಮುಗಿಸಿಕೊಳ್ಳುತ್ತಾರೆ. ಅಧಿಕಾರ ಮತ್ತು ಹಣ ಇರುವ ಹೈಗ್ರೇಡ್‍ನವರು ಆಯಕಟ್ಟಿನ ಸ್ಥಳಗಳಲ್ಲಿ ಮಾತ್ರ ನಡೆಸಿ ಬ್ಲ್ಯಾಕ್ ಮೇಲ್ ತಂತ್ರದಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯ ಬಾಯಿ ಮುಚ್ಚಿಸುತ್ತಾರೆ.

ಯಾವುದೇ ಕಚ್ಚೆಹರುಕನು ತನ್ನಾ ಮೇಲೆ ಆಪಾದನೆ ಬಂತೆಂದು ಕಂಡರೆ ಸಮಾಜದಲ್ಲಿ ತನ್ನ ಹಿರಿಮೆ ಇಂತದ್ದು ಎಂದು ಪ್ರದರ್ಶಿಸಿ ತಾನು ಅಂತವನಲ್ಲ ಎಂದು ಬಿಂಬಿಸುವುದಕ್ಕೆ ಪ್ರಯತ್ನಿಸುತ್ತಾರೆ. ಕುಡಿದವನು ಬೀಡಾ ಹಾಕಿಕೊಂಡರೆ ಒಳಗಿನಿಂದ ಹೊಡೆಯುವ ಎಣ್ಣೆಯ ’ಸುವಾಸನೆ’ ಬರದೇ ಹೋಗುವುದೇ?

ಸದ್ಗೃಹಸ್ಥರಲ್ಲಿ ಕೆಲವರಿಗೆ ಕೆಲವೊಮ್ಮೆ ಬೇಕೆಂದು ಹರಕೆ ಹೊತ್ತರೂ ಮಕ್ಕಳಾಗುವುದು ಕಷ್ಟ. ಕಚ್ಚೆಹರುಕರ ಪರಂಪರೆಗೆ ಮಾತ್ರ ಹರಕೆ ಕೋರಿಕೆ ಪುತ್ರಕಾಮೇಷ್ಠಿ ಯಾಗ ಔಷಧಚಿಕಿತ್ಸೆ ಐವಿಎಫ್ ಯಾವುದೂ ಬೇಡ. ಇವರಲ್ಲಿ ಸಂತಾನಕ್ಕೆ ಕೊರತೆಯೆ ಇರೋದಿಲ್ಲ. ಹುಟ್ಟುವ ಸಂತಾನಗಳಲ್ಲಿ ನವರಂಧ್ರಗಳಲ್ಲೂ ಕಾಮವೇ ತುಂಬಿರುವುದರಿಂದ ಜನಸಾಮಾನ್ಯರಿಗೆ ಬರುವ ಸಾದಾ ಕಾಯಿಲೆಗಳು ಅವರಿಗೆ ಬಾಧಿಸುವುದೆ ಇಲ್ಲ. ಅವರದೇನಿದ್ದರೂ ಎಸ್.ಟಿ.ಡಿ ರಕ್ತ ಶಿಶ್ನ ಗುಹ್ಯ, ಮತ್ತು ಭಗೇಂದ್ರಿಯಗಳಿಗೆ ಸಂಬಂಧಿಸಿದ ಸಿಫಿಲಿಸ್ ಗುನೋರಿಯಾ ಹೆಚ್.ಐ.ವಿ ಇತ್ಯಾದಿ ಕಾಯಿಲೆ.

ಕೆಲವು ಹೈಪ್ರೊಫೈಲ್ ಕಚ್ಚೆಹರುಕರು ಅಂತಹ ಕಾಯಿಲೆಗಳಿಂದ ಸತ್ತರೂ ಬೇರೆ ಯಾವುದೊ ಕಾರಣಕ್ಕೆ ಸತ್ತರು ಎಂದು ಹೇಳುತ್ತದೆ ಸಮಾಜ. ಕಚ್ಚೆಹರುಕರ ಸಾಲಿನಲ್ಲಿ ದೇಶವನ್ನು ಆಳಿದ ಪ್ರಮುಖ ರಾಜಕಾರಣಿಗಳೂ ಇದ್ದರು ಮತ್ತು ಈಗಲೂ ಕೆಲವರಿದ್ದಾರೆ.

ಕಚ್ಚೆಹರುಕರಿಗೆ ಎರಡು ಗೋತ್ರಗಳು. ಹುಟ್ಟಿನಿಂದ ಬರುವ ಗೋತ್ರ ಒಂದು ಮತ್ತು ಸ್ವಭಾವದಿಂದ ಬರುವ ಶುನಕ ಗೋತ್ರ ಇನ್ನೊಂದು. ಮನುಷ್ಯ ಬರೆದ ಜಾತಕವನ್ನು ಮನುಷ್ಯ ತಿದ್ದಲು ಸಾಧ್ಯವಿಲ್ಲವೆ? ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಜವಾಬ್ದಾರಿಯುತ ಜಾಗಕ್ಕೆ ಅಥವಾ ಹುದ್ದೆಗೆ ಆಯ್ಕೆ ಮಾಡುವ ಜವಾಬ್ದಾರಿಯುಳ್ಳ ಜನ ಕೇವಲ ಜಾತಕವೆ ಪ್ರಮಾಣವೆಂಬ ಕುರುಡು ಸಂಪ್ರದಾಯಗಳನ್ನು ಅನುಸರಿಸುವುದಿಲ್ಲ. ಸ್ಪರ್ಧಾಳುವಿನ ಅರ್ಹತೆ ಕುಲಗೋತ್ರ ಪ್ರವರ ವಂಶಾವಳಿ ಮತ್ತು ನಡಾವಳಿಗಳನ್ನು ಗುಪ್ತವಾಗಿ ಕೂಲಂಕಷವಾಗಿ ತಿಳಿದುಕೊಳ್ಳುತ್ತಾರೆ. ಶುನಕ ಗೋತ್ರದ ವಾಸನೆ ಇಲ್ಲ ಎಂಬುದನ್ನು ಪಕ್ಕಾ ಮಾಡಿಕೊಳ್ಳುತ್ತಾರೆ.

ಸಾಮಾನ್ಯವಾಗಿ ಸನ್ಯಾಸ ದೀಕ್ಷೆ ನೀಡುವುದಾದರೆ ದೀಕ್ಷೆ ಪಡೆಯುವ ವಟುವಿನ ಪರಿಚಯ ಕೇವಲ ಅಫಿಡೆವಿಟ್ ರೀತಿಯಲ್ಲಿರದೆ ವಟುವನ್ನು ಕನಿಷ್ಠ ಐದಾರುವರ್ಷ ತನ್ನ ಸನಿಹ ಸಂಪರ್ಕದಲ್ಲಿ ಇರಿಸಿಕೊಂಡು ಸಂದೇಹ ಬಗೆಹರಿಸಿಕೊಳ್ಳುತ್ತಾರೆ. ಆದಿಶಂಕರರು ಆತುರ ಸನ್ಯಾಸ ಗ್ರಹಣ ನಡೆಸಿದ್ದರೂ ತನ್ನ ಶಿಷ್ಯನೆಂದು ದೀಕ್ಷೆಯನ್ನು ಕೊಡುವ ಮುನ್ನ ಗೋವಿಂದ ಭಗವತ್ಪಾದರು ಅವರನ್ನು ಹಲವು ವಿಧದಲ್ಲಿ ಪರೀಕ್ಷಿಸಿರುತ್ತಾರೆ.

ಗದ್ದುಗೆಯ ಆಸೆಹೊತ್ತು ಪ್ರಭಾವಿ ಕುಳಗಳಿಂದ ಇನ್‍ಫ್ಲೂಯೆನ್ಸ್ ಮಾಡಿಸಿ ಕಠಿಣ ಪರೀಕ್ಷೆಗೆ ಒಳಗಾಗದೆ ಶಾರ್ಟ್‍ಕಟ್‍ನಲ್ಲಿ ನುಸುಳಿ ಸನ್ಯಾಸ ಪಡೆದುಕೊಳ್ಳುವವನು ಕೊನೆತನಕ ಸನ್ಯಾಸಿಯಾಗಿರುತ್ತಾನೆ ಎನ್ನಲು ಬರೋದಿಲ್ಲ. ಅದರಲ್ಲಂತೂ ಕಚ್ಚೆಹರುಕು ಪರಂಪರೆಯವನಾದರೆ ಸನ್ಯಾಸಿ ಕಪಟಿಯಾಗುವುದರಲ್ಲಿ ಯಾವುದೆ ಸಂಶಯ ಇರೋದಿಲ್ಲ.

ಸನ್ಯಾಸಿ ಕಪಟಿಯಾದರೆ ಯತಿಧರ್ಮ ನಿಯಮಗಳು ಅವನಿಗೆ ಬೇಕಾಗೋದಿಲ್ಲ ಮತ್ತು ಯಾವುದೆ ನೀತಿ ನಿಯಮಗಳಿಗೆ ಅತೀತನಾದವನಂತೆ ವರ್ತಿಸತೊಡಗುತ್ತಾನೆ. ತಾನು ಮಾಡಿದ್ದೆಲ್ಲ ಸರಿ ಮತ್ತು ತಾನು ಸನ್ಮಾರ್ಗದಲ್ಲಿ ಮುನ್ನಡೆಯುತ್ತ ಸಮಾಜೋದ್ಧಾರ ಮಾಡುತ್ತಿದ್ದೇನೆ ಎಂದು ಹೇಳುತ್ತಿರುತ್ತಾನೆ. ಅಲ್ಲಿಂದಲೇ ತನ್ನ ಸಂತಾನಾಭಿವೃದ್ಧಿ ಕಾರ್ಯವನ್ನು ಸದಾ ಪರಿಪಾಲನೆ ಮಾಡಿಕೊಳ್ಳುತ್ತ ಸಮಾಜದಲ್ಲಿ ಕಚ್ಚೆಹರುಕರ ಸಂಘ ಹೆಚ್ಚುವಂತೆ ನೋಡಿಕೊಳ್ಳುತ್ತಾನೆ.

Thumari Ramachandra

source: https://www.facebook.com/groups/1499395003680065/permalink/1597550017197896/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s