ಸತ್ಯ ಕಹಿಯಾಗಿದ್ದರೂ ಸಹಿಸಿಕೊಳ್ಳಬೇಕು

ಸತ್ಯ ಕಹಿಯಾಗಿದ್ದರೂ ಸಹಿಸಿಕೊಳ್ಳಬೇಕು

ತಿಮ್ಮಪ್ಪಣ್ಣನವರ ಮಾತುಗಳನ್ನು ಈ ಕಂತಿನಲ್ಲಿ ಮುಗಿಸಲು ಪ್ರಯತ್ನಿಸುತ್ತೇನೆ.

“ಶ್ರೀಧರ ಸ್ವಾಮಿಗಳ ಮಹತ್ಸಾಧನೆಯನ್ನು ಕಂಡ ಶೃಂಗೆರಿಯ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಖುದ್ದಾಗಿ ಅವರನ್ನು ಕಾಣಲು ವರದಹಳ್ಳಿಗೆ ಬಂದಿದ್ದರು.

“ಶ್ರೀಧರ ಸ್ವಾಮಿಗಳು ಪವಾಡ ಮಾಡ್ತಾರೆ, ಸನ್ಯಾಸಿಗಳು ಪವಾಡ ಮಾಡ್ಬಾರ್ದು” ಇಂವನ ಹಿಂದಿನವರ ಹೇಳಿಕೆಯಾಗಿತ್ತು. ಇಂವನ ಹಿಂದಿನವರಿಗೆ ಸ್ವಲ್ಪ ಅಹಂ ಇತ್ತು. ಶ್ರೀಧರ ಸ್ವಾಮಿಗಳು ಪವಾಡವನ್ನೇನೂ ಮಾಡ್ತಿರಲಿಲ್ಲ. ಅವರ ಮನಸ್ಸಿಗೆ ಬಂದಿದ್ದು ನಡೆದು ಹೋಗ್ತಿತ್ತು. ಅವರಿಂದ ಸಾವಿರಾರು ಜನ ಆದಿವ್ಯಾಧಿಗಳಿಂದ ಪರಿಹಾರ ಪಡೆದು ಸಂಸಾರ ನಡ್ಸಿದಾರೆ.

ಹೀಗಿದ್ದೂ ಶ್ರೀಧರ ಸ್ವಾಮಿಗಳ ಬಗ್ಗೆ ಹಿಂದಿನವರು ಇಟ್ಟುಕೊಂಡಿದ್ದ ಧೋರಣೆ ನಮಗೆಲ್ಲ ಹಿಡಿಸುತ್ತಿರಲಿಲ್ಲ. ಶ್ರೀಧರ ಸ್ವಾಮಿಗಳಿಂದ ನಮಸ್ಕಾರ ಪಡೆಯುವ ಅರ್ಹತೆ ಯಾರಿಗೂ ಇರ್ಲಿಲ್ಲ. ಆದ್ರೂ ಶ್ರೀಧರ ಸ್ವಾಮಿಗಳು ತಾವೆ ಹೋಗಿ ಇಂವನ ಹಿಂದಿನವರಿಗೆ ನಮಸ್ಕಾರ ಮಾಡಿದ್ದರಂತೆ. ಅದು ಅವರ ದೊಡ್ಡತನವನ್ನು ತೋರಿಸ್ತದೆ

ರಾಜಸನ್ಯಾಸ ಎಂದುಕೊಳ್ಳುವವರ ಒಳ ರಾಜಕೀಯ ಬಹಳ ವಿಚಿತ್ರವಾಗಿರ್ತದೆ. ಮಠ ಮಠಗಳ ನಡುವೆ ಒಳಗಿಂದೊಳ್ಗೆ ಗುದ್ದಾಟ ನಡೀತದೆ. ರಾಜಸನ್ಯಾಸದ ರಾಜಕೀಯವನ್ನು ನೋಡಿದರೆ ಯಾರೂ ಹತ್ರ ಹೋಗೊದಕ್ಕೆ ಅಸಹ್ಯ ಪಡ್ತಾರೆ. ಕೆಲವೊಂದು ಸಲ ನನ್ನಂತವರಲ್ಲಿಲ್ದ ಷಡ್ವರ್ಗಗಳು ಅವರಲ್ಲಿ ಕಾಣ್ಸೊದುಂಟು. ತಾನೇ ದೊಡ್ಡವ ಎಲ್ಲರೂ ಬಂದು ತನ್ನ ಕಾಲಿಗೆ ಬೀಳಬೇಕು ಎಂಬ ಧೋರಣೆ ಇಟ್ಕಳ್ತಾರೆ. ಇದು ಶಂಕರರು ಹೇಳಿದ ತತ್ವವೇ? ಕೆಲವರು ಮಾತ್ರ ಇದನ್ನೆಲ್ಲ ಮೀರಿ ಆಧ್ಯಾತ್ಮಿಕ ಸಾಧನೆ ಮಾಡ್ತಾರೆ.

“ಸರಿಯಾದವರನ್ನು ಗುರುತಿಸಿ ಸನ್ಯಾಸ ಕೊಟ್ಟಿದ್ದೇವೆ” ಎಂದಿದ್ರು ಹಿಂದಿನವರು. ಇಂತ ಅಪಾಪೋಲಿಗೆ ಸನ್ಯಾಸ ಕೊಡ್ತಾರೆ ಅಂತ ಯಾರೂ ಅಂದ್ಕಂಡಿರ್ಲಿಲ್ಲ. ಎಲ್ಲಾ ಸನ್ಯಾಸಿಗಳಿಗೂ ದಿವ್ಯಜ್ಞಾನ ಇರ್ತದೆ ಅಂದ್ಕೊಳ್ಳೋದರಲ್ಲಿ ಅರ್ಥವಿಲ್ಲ. ಹಾಂಗಿದ್ರೆ ಹಿಂಗಾಗದಕ್ಕೆ ಸಾಧ್ಯತೆಯೆ ಇರ್‍ತಿರಲಿಲ್ಲ.

ದೀಕ್ಷೆ ಕೊಟ್ಟ ವರ್ಷದೊಳಗೆ ಅಧಿಕಾರಕ್ಕಾಗಿ ಹೋರಾಟ ಮಾಡಿದ್ದ ಇಂವ. ಗುರುಗಳು ಹೆಚ್ಚಿನ ವೇದ ಶಾಸ್ತ್ರಾಭ್ಯಾಸ ಮಾಡ್ಲಿಕ್ಕೆ ಹೇಳಿದರೆ ಯಾವ್ದನ್ನೂ ಸರಿಯಾಗಿ ಮಾಡ್ಲಿಲ್ಲ. ಇವತ್ತಿಗೂ ನನ್ನಂತವನಿಗೆ ಗೊತ್ತಿರುವಷ್ಟು ಅವನಿಗೆ ಗೊತ್ತಿಲ್ಲ.

ಅದಕ್ಕೆ ಸರಿಯಾಗಿ ಜೊತೆಗಾರ ಸಿಕ್ಕಿದಾನೆ. ಅವನೂ ಸ್ವಾಮಿಯಾಗದಕ್ಕೆ ಹೋಗಿದ್ದ. ಅವನಿಗೆ ದಕ್ಕಲಿಲ್ಲ. ಅವನಿಗೆ ದಕ್ಕಿದ್ದರೆ ಹವ್ಯಕರ ಕತೆ ಮುಗ್ದೇ ಹೋಗ್ತಿತ್ತು. ಅವನಿಂದ ವಿರೋಧ ಬರೋದ್ ಬ್ಯಾಡ ಹೇಳಿ ಇಂವನ ತಂಗಿನೆ ಅವನಿಗೆ ಕೊಟ್ಟು ಮದುವೆ ಆತು. ನಂತರ ಆ ಬಾವನೆ ಇಂವನ ಆಸ್ಥಾನದ ಮಹಾಮಂತ್ರಿಯಾಗಿ ಅಧಿಕಾರ ಹಿಡ್ದ. ಅದ್ಕು ಮುಂದೆ ನಡ್ದಿದ್ದೆಲ್ಲ ಬಾವ ನೆಂಟ ಹೂಡಿದ ಪ್ಲಾನು.

ಇಂತ ಸಂಸ್ಥಾನಕ್ಕೆಲ್ಲ ಒಬ್ಬರದ್ದೆ ಸರ್ವಾಧಿಕಾರ ಅನ್ನದನ್ನ ತಿದ್ದುಪಡಿ ಮಾಡ್ಬೇಕು. ಆಡಳಿತಕ್ಕೆ ಒಂದು ಕಮಿಟಿ ಮಾಡ್ಬೇಕು. ಒಬ್ಬಂದೆ ಅಧಿಕಾರ ಆದ್ರೆ ಭಕ್ತರ ಹಣ ಬೇಕಾಬಿಟ್ಟಿ ಕರ್ಚಾಗ್ತದೆ. ಎಲ್ಲಿಗೋಗ್ತದೆ ಹೇಳಿ ಗೊತ್ತಾಗದಿಲ್ಲ. ಎಲ್ಲಿ ನೋಡಿದರೂ ಹೆಗ್ಗಣದ ಬಿಲ. ಮೇಲಾಗಿ ಯಾರಿಗೂ ಹೇಳ್ಲಿಕ್ಕೆ ಕೇಳ್ಕಿಕ್ಲೆ ಅಧಿಕಾರವೆ ಇಲ್ದ ರೀತಿ. ಹಿಟ್ಲರ್‌ನ ಆಡಳಿತ ಇದ್ದಂಗೆಯ.

ಅಡ್ಡಗೋಡೆಮೇಲೆ ದೀಪ ಇಟ್ಟಿರೊ ರೀತಿ ಕಾನೂನುಗಳಲ್ಲಿ ಹೇಳಿರೊ ಕೆಲವು ಅನುಚ್ಛೇದಗಳನ್ನು ಇಂವ ತನಗೆ ಬೇಕಾದಂಗೆ ಬಳಸ್ಕಂಡಿದಾನೆ. ತಪ್ಪಿಸಿಕೊಳ್ಳಲಿಕ್ಕೆ ಏನು ಬೇಕೊ ಅದ್ಕೆಲ್ಲ ದಾರಿ ಹುಡ್ಕಕೆ ಅಂತ ಕೆಲವು ಜನರನ್ನ ಇಟ್ಗಂಡಿದಾನೆ. ತನ್ನ ಮೇಲೆ ದೂರು ದಾಖಲಾಗ್ತದೆ ಅಂತ ಸುದ್ದಿ ಗೊತ್ತಾದ ತಕ್ಷಣ ದೂರು ಕೊಡೊರ ವಿರುದ್ಧ ಚಕ್ರವ್ಯೂಹ ಹೆಣೀತಾನೆ. ಅವರಿಗೆ ಜೈಲುಶಿಕ್ಷೆ ಕೊಡಿಸ್ತಾನೆ. ಅತ್ಯಾಚಾರದ ಆರೋಪಿನ ವಿಚಾರ್ಸೊ ಬದ್ಲು ಬಂದವ್ರು ಅತ್ಯಾಚಾರಕ್ಕೆ ಒಳಗಾದವರನ್ನ ಮತ್ತು ಅವರ ಮನೆಯವರನ್ನ ವಾರಗಟ್ಟಲೆ ವಿಚಾರಣೆ ಮಾಡ್ತಾರೆ.

ಅತ್ಯಾಚಾರದ ಆರೋಪಿನ ಒಂದೂವರೆ ತಿಂಗಳ ತನಕ ವಿಚಾರಣೆ ನಡೆಸದಂಗೆ ವ್ಯವಸ್ಥೆ ಮಾಡ್ಕಳ್ತಾನೆ. ಬೇಕಾದಾಗ ವಿಮಾನ ಹತ್ತಿ ಬುರ್ರನೆ ಬೆಂಗಳೂರಿಗೆ ಬರೊ ಇಂವನಿಗೆ ವಿಚಾರಣೆಗೆ ಕರ್ದಾಗ ಒಂದೆ ದಿನದಲ್ಲಿ ತಲ್ಪಲಿಕ್ಕೆ ಸುಸ್ತಾಗ್ತದೆ ಹೇಳೊ ನೆಪ ಒಡ್ತಾನೆ. ಇದೆಲ್ಲ ’ಪವಾಡ’ ಅಲ್ದೆ ಇನ್ನೇನು?

ಒಟ್ನಲ್ಲಿ ಈ ಕಪಟಿ ಹವ್ಯಕ ಸಮಾಜಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದಾನೆ. ಹೇಳ್ದ್ನಲ್ಲ ಅನ್ಯ ಜನಾಂಗದಲ್ಲಾಗಿದ್ರೆ ಇಷ್ಟೊತ್ತಿಗೆ ಇಂವ ಕೃಷ್ಣ ಜನ್ಮಸ್ಥಾನದ ಗರ್ಭಗುಡೀಲಿರ್ತಿದ್ದ. ಇಲ್ಲಿ ಹೇಳ್ವವರಿಲ್ಲ ಕೇಳ್ವವರಿಲ್ಲ. ನಮ್ಮ ಜನ ಇನ್ನಾದ್ರೂ ಎಚ್ಚೆತ್ಕಂಡು ಇಂವನ ಕಳ್ಸದೆ ಹೋದ್ರೆ ಮುಂದೆ ಆಗುವಂತ ಎಲ್ಲ ಅನಾಹುತಕ್ಕೂ ಅವರೆ ಜವಾಬ್ದಾರರಾಗ್ತಾರೆ….. ”

ತಿಮ್ಮಪ್ಪಣ್ಣ ಇನ್ನೂ ಹೇಳುತ್ತಲೇ ಇದ್ದರು. “ತಿಮ್ಮಪ್ಪಣ್ಣ, ಯನಗೆ ಒಂಚೂರು ಯಾರ್‍ನೋ ಕಾಣವು ತಡ ಆದ್ರೆ ಅವು ತಪ್ಪಿಹೋಗ್ತ ಬರ್ಲಾ?” ಎಂದವನೇ ಉತ್ತರಕ್ಕೂ ಕಾಯದೆ ಮುನ್ನಡೆದಿದ್ದೆ. ಊರಿಗೆ ಬಂದಿದ್ದಾಗ ಇನ್ನೂ ಕೆಲವರನ್ನು ನಾನು ಭೇಟಿ ಮಾಡಿದ್ದೆ. ಅವರೆಲ್ಲ ಹೇಳಿದ್ದನ್ನ ನಿಧಾನಕ್ಕೆ ಹೇಳುತ್ತೇನೆ.

ಕವಳದ ಗೋಪಣ್ಣ ಹೇಳ್ತಾ ಇದ್ದ,”ಪುತ್ರಕಾಮೇಷ್ಠಿ ಹವನನೆಲ್ಲ ಮಾಡ್ಸಿ ಹೇಳೊ ಬದಲು ಏಕಾಂತ ದರ್ಶನಕ್ಕೆ ಬಂದ್ರೆ ಸಂತಾನವೂ ಆಗ್ತು ಮೇಲಿಂದ ಖರ್ಚಿಗೂ ಸಿಗ್ತು ಹೇಳಿ ಫರ್ಮಾನು ಹೊರಡಿಸ್ಬುಟ್ರೆ ಕುರಿಮೆಂದೆಲಿ ಒಂದಷ್ಟ ಕುರಿಗಳು ಹೋಗದಂತು ಗ್ಯಾರಂಟಿ.

ಅಲ್ದ ರಾಮು “ಮಹಾನಗರ್‍ದಗೆ ಗೋಲ್ಡ್ ಪಾಲಿಶ್ ಮಾಡೋರು ನೋಟ್ ಡಬ್ಬಲ್ ಮಾಡೋರು ಎಲ್ಲ ಬರ್ತಾ ಇ‍ರ್ತಾರೆ ಹುಷಾರು. ಅಂಥವ್ರಿಗೆ ಅವಕಾಶ ಕೊಡಬೇಡಿ” ಹೇಳಿ ಪೋಲೀಸರು ಹೇಳದರೂ ಒಂದಷ್ಟ್ ಜನ ಯಾವ್ದೊ ಆಸೆಯಿಂದ ಅಂತದಕ್ಕೆ ಅವಕಾಶ ಕೊಡತ್ವನ ಹಂಗೇಯ ಇದೂವ.”

Thumari Ramachandra

source: https://www.facebook.com/groups/1499395003680065/permalink/1597048367248061/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s