ಕನ್ಯಾ ಸಂಸ್ಕಾರವೆಂದರೆ ಏಕಾಂತದಲ್ಲಿ ಅಪ್ಪಿಕೊಂಡು ಚುಂಬಿಸುವುದಲ್ಲ

ಕನ್ಯಾ ಸಂಸ್ಕಾರವೆಂದರೆ ಏಕಾಂತದಲ್ಲಿ ಅಪ್ಪಿಕೊಂಡು ಚುಂಬಿಸುವುದಲ್ಲ

ತುಮರಿಯವನಾಗಿ ನಾನು ಯಾಕೆ ಬರೆದೆ ಎಂದು ಕೇಳಿದ್ದೀರಿ. ಅವನ ಚಿಕ್ಕಪ್ಪನ ಬಗೆಗೆ ಬರೆಯಲು ತಿಳಿಸಿದ್ದೀರಿ. ಒಂದನ್ನು ನೀವೆಲ್ಲ ತಿಳಿದುಕೊಳ್ಳಬೇಕು ಏನೆಂದರೆ ನಾನು ಸತ್ಯ ಏನೆಂಬುದನ್ನು ಚೆನ್ನಾಗಿ ಬಲ್ಲೆ. ಕೇವಲ ಸತ್ಯದ ಪ್ರತಿಪಾದನೆಗಾಗಿ ನಾನು ಬರೆದಿದ್ದೇನೆ.

ನಮ್ಮ ಸದ್ಗುರು ಶ್ರೀಧರ ಸ್ವಾಮಿಗಳ ಆರಾಧನೆ ನಡೆಯುತ್ತಿದೆ. ತಪ್ಪನ್ನೆ ಮಾಡದ ತಮ್ಮನ್ನು ಗೇಲಿಮಾಡಿದ ಮತ್ತು ತಮಗೆ ತೊಂದರೆ ನೀಡಿದ ಜನರನ್ನು ಸಹ ಸದ್ಗುರುಗಳು ಅಕ್ಕರೆಯಿಂದಲೆ ಕಂಡರು. ಅವರ ಹೀನಬುದ್ಧಿಗೆ ಮರುಗಿದರು. ಟೀಕಿಸಿದವರ ಮತ್ತು ತೊಂದರೆ ಕೊಟ್ಟವರ ವಿರುದ್ಧ ಯಾವುದೆ ಕ್ರಮಜರುಗಿಸದಂತೆ ತನ್ನ ಶಿಷ್ಯರಿಗೆ ಆದೇಶಿಸಿದರು. ತಪ್ಪಿತಸ್ಥರು ತಾವಾಗಿಯೆ ಬಂದು ಅವರ ಕಾಲಿಗೆ ಬಿದ್ದು ಕ್ಷಮೆಕೇಳುವ ಪರಿಸ್ಥಿತಿ ಉಂಟಾಗುತ್ತಿತ್ತು.

ಸಾಧು ಸ್ಥಿತಿಯಲ್ಲಿ ಸಜ್ಜನಗಡದಲ್ಲಿ ಸೇವೆ ಮಾಡಲು ಸೇರಿಕೊಂಡಾಗ ನಿತ್ಯವೂ ಹೊಸಹೊಸ ಕೀಟಲೆಗಳನ್ನು ಅನುಭವಿಸುತ್ತಿದ್ದರು. “ಹೋಗೋ ಧಾಂಡಿಗ ದುಡಿದು ತಿನ್ನಲು ನಿನಗೇನು ತೊಂದರೆ?” ಮೊದಲಾದ ಬೈಗುಳಗಳಿಂದ ನಿಂದಿಸಿದವರಿದ್ದಾರೆ. ಚಳಿಗಾಲದ ರಾತ್ರಿ ಬರಿಮೈಲಿ ಮಲಗಿದ್ದಾಗ ಸಮರ್ಥರ ಸಮಾಧಿಯ ಶಲ್ಯ ಇವರ ಮೈಮೇಲೆ ಬಂದು ಬಿದ್ದಿತ್ತು. ಶ್ರೀಧರರೇ ಅದನ್ನು ತೆಗೆದುಕೊಂಡಿದ್ದಾರೆಂದು ಭಾವಿಸಿ ಅವರನ್ನು ಹೊಡೆದ ಜನ ಅನುಭವಿಸಿದ ಶಿಕ್ಷೆಯನ್ನು ನೀವು ಓದಿ ತಿಳಿದಿರಬಹುದು. ಶ್ರೀಧರ ಸಾಧುಗಳು ಶ್ರೀಧರಸ್ವಾಮಿಗಳಾಗಿ ಪರಮಹಂಸ ಸ್ಥಾನಕ್ಕೇರಿದಾಗ ತೊಂದರೆ ಕೊಟ್ಟವರೆಲ್ಲ ಪಶ್ಚಾತ್ತಾಪ ಪಟ್ಟರು. ಅಂತಹ ಸದ್ಗುರುವಿನ ಆರಾಧನೆಯ ದಿನ ಯಾರನ್ನೂ ವಿನಾಕಾರಣ ತಪ್ಪಿತಸ್ಥ ಎನ್ನಬೇಕು ಅನ್ನೋದು ನನ್ನ ಸಂಕಲ್ಪವಲ್ಲ.

ಇಲ್ಲಿನ ಘಟನೆ ಹಾಗಿಲ್ಲ. ಈತ ತಪ್ಪಿತಸ್ಥ ಎಂಬುದು ಸ್ವಲ್ಪ ತಲೆಯಿರುವ ಕುರಿಗಳಿಗೆಲ್ಲ ಗೊತ್ತು. ಅವು ಸ್ವಹಿತಾಸಕ್ತಿಗಾಗಿ ಗುಟ್ಟನ್ನು ಬಿಟ್ಟುಕೊಡದೆ ಜೈಕಾರ ಹಾಕುತ್ತಿದ್ದಾರೆ. ಜೊತೆಗೆ ತಲೆಯಿಲ್ಲದ ಕುರಿಗಳು ಸೇರಿಕೊಂಡಿರುವುದು ಸಹಜ.

ತಿಮ್ಮಪ್ಪಣ್ಣನ ಮಾತಿನ ಮುಂದಿನ ಭಾಗವನ್ನು ಈಗ ಕೇಳಿ.

“ಬಾವ ನೆಂಟ ಸೇರಿ ಆಡಿದ ನಾಟಕಗಳು ಒಂದೆರಡಲ್ಲ. ಕನ್ಯಾಸಂಸ್ಕಾರ ಮಾಡ್ತೇವೆ ಅಂದ್ರು. ಚಿಕ್ಕ ಹುಡುಗಿಯರನ್ನು ಏಕಾಂತಕ್ಕೆ ಕರೆಸಿಕೊಂಡು ಚುಂಬಿಸಿದ್ದಾನೆ ಇವ. ಅವರಲ್ಲಿ ಕೆಲವರು ಪ್ರಾಯಕ್ಕೆ ಕಾಲಿಟ್ಟವರು.ಹವ್ಯಕರಲ್ಲಿ ಕನ್ಯಾಸಂಸ್ಕಾರವನ್ನು ಪ್ರತ್ಯೇಕವಾಗಿ ಮಾಡಲೇಬೇಕೆಂದಿರ್ಲಿಲ್ಲ. ಮದುವೆಯ ಸಂದರ್ಭದಲ್ಲಿ ನಾಂದಿಯ ವೇಳೆಗೆ ಅದನ್ನು ವೈದಿಕರು ನಡೆಸುತ್ತಿದ್ದರು.

ಗಂಡು ಮಕ್ಳಿಗೆ ಮುಂಜಿ ಮಾಡಿದಂತೆ ತಮಗೇನೂ ಇಲ್ಲವೆಂದು ಹೆಣ್ಣುಮಕ್ಳು ಬೇಜಾರುಮಾಡಿಕೊಳ್ಳಬಾರದು ಅನ್ನೋದಕ್ಕಾಗಿ ಅಲ್ಲಲ್ಲಿ ಕೆಲವರು ಇದನ್ನು ನಡೆಸಿದರು. ಒಳ್ಳೆಯ ಸಂಸ್ಕಾರ ಸಿಗುವುದಾದರೆ ಯಾರ್ ಬಿಡ್ತಾರೆ? ತಾವೂ ಮುಂದಾಗಿ ಕನ್ಯಾಸಂಸ್ಕಾರ ನಡೆಸ್ತೇವೆ ಅಂತ ಇಂವ ಹೇಳಿದಾಗ ಹವ್ಯಕರಲ್ಲಿ ಅನೇಕರು ಹೆಣ್ಣುಮಕ್ಕಳನ್ನು ಕಳಿಸಿದರು. ಇಂವ ಅಲ್ಲಿ ಆಡಿದ ಆಟವೆ ಬೇರೆ.

ಶಾಸ್ತ್ರ ಗೀಸ್ತ್ರ ಅರಿಯದಿದ್ದ ಅಪ್ಪ ಅಮ್ಮಂದಿರಿಗೆ ಬಾವ ನೆಂಟ ಹೇಳಿದ್ದೆ ವೇದವಾಕ್ಯ ಆಗ್ಬುಟ್ಟಿತ್ತು. ಹೇಳಿದ್ನೆಲ್ಲ ನಂಬ್ತಿದ್ರು. ಆ ನಂಬಿಕೆಯನ್ನೆ ದುರುಪಯೋಗ ಪಡಿಸಿಕೊಂಡ ಬಾವ ನೆಂಟ ಹೆಣ್ಣುಮಕ್ಕಳನ್ನು ಬರಗೋದಕ್ಕೆ ಶುರುಮಾಡಿದರು. ಚಂದದ ಹೆಣ್ಣುಮಕ್ಕಳು ಹೆಂಗಸರು ಯಾರೇ ಬಂದ್ರೂ ಇವರ ಕಣ್ಣು ಅವರ ಮೇಲೆ ಇರ್ತಿತ್ತು. ಸಮಯ ನೋಡಿ ಅವರಿಗೆ ಗಾಳ ಹಾಕ್ತಿದ್ರು.

ನೋಡಲಿಕ್ಕೆ ರೂಪವತಿಯರು ಸಿಗದಿದ್ದ ಸಮಯದಲ್ಲಿ ಸಾಮಾನ್ಯದ್ದಾದರೂ ಆಗ್ತಿತ್ತು. ಇಂವ ಇಟ್ಕಂಡಿರ ಹುಡುಗಿ ಬಗ್ಗೆ ಯಾರಿಗ್ಗೊತ್ತಿಲ್ಲ ಹೇಳಿ ತಿಳ್ಕಂಡಿದ್ಯ? ಅವಳಿಗೆ ಮನೆ ಮಠ ಜಮೀನು ಎಲ್ಲ ಕೊಡ್ಸಿದಾನೆ. ಈಗಾಗಲೆ ಅವಳು ಹೇಳಿಕೆ ಕೊಟ್ಟಿದ್ದಾಳಂತೆ. ಅದೇರೀತಿ ಕೆಲವು ಹೆಣ್ಮಕ್ಕಳನ್ನ ತಾನು ಬಳಸ್ಕೆಂಡು ಪರಿವಾರದವರಿಗೆ ಕಟ್ಟಿದಾನೆ. ಮತ್ತೆ ಬೇಕಾದ್ರೆ ಅಲ್ಲೆ ಆಗಾಗ ಏಕಾಂತಕ್ಕೆ ಕರೀಬಹುದಲ? ಅದ್ಕೇಯ.

ಇಂವನ ಆಟ ಗೊತ್ತಿದ್ದೂ ಕೆಲವು ಸದ್ಗುಣಿಗಳು ಸುಮ್ನೆ ಇದ್ರು. ನಮ್ಮ ಪೀಠಕ್ಕೆ ಸಮಾಜದಲ್ಲಿ ಮಾನ್ಯತೆ ಹೋಗಿಬಿಡ್ತದೆ ಅಂತ ಏನೂ ಹೇಳ್ತಾ ಇರ್ಲಿಲ್ಲ. ಅಲ್ಲಿ ಶಿರ್ಸಿಲಿ ಒಂದ್ ಮಠ ತಗಂಡ್ನಲ. ಅವನಿಗು ಇವನಿಗು ವ್ಯತ್ಯಾಸವೆ ಇಲ್ಲ. ಅವನ ಕೌಪೀನ ಪೂರ್ತಿ ಕಿತ್ತೋಗಿ ಅಲ್ಲಿ ಜನ ಬರುದನ್ನೆ ನಿಲ್ಸಿದ್ರು. ಅದೇ ವೇಳೆಗೆ ಮಹಾತಪಸ್ವಿಯಂತೆ ಪೋಸ್ ಕೊಟ್ಗೆಂಡು ಇಂವ ಅಲ್ಲಿಗೆ ಎಂಟ್ರಿಕೊಟ್ಟಿದಾನೆ. ಹೇಗೂ ಹಣ ಬೇಕಷ್ಟಿತ್ತು. ಖರೀದಿ ಮಾಡ್ದ.

ಇಂವ ಮಾಡ್ದ ಅನಾಚಾರದ ವಿರುದ್ಧ ಯಾರಾದ್ರೂ ಏನಾದರೂ ಹೇಳಿದ್ರೆ ಸಾಕಿದ ನಾಯಿಗಳನ್ನ ಛೂ ಬಿಡ್ತಾನೆ. ಅವುಗಳಿಗೆ ಬೊಗೊಳೋದಕ್ಕೆ ಕಚ್ಚೋದಕ್ಕೆ ಎಲ್ಲಾ ಕಲ್ಸಿದಾನೆ. ಇಂವನ ಸಂಸ್ಕಾರವೇ ಅಂತದ್ದಿರುವಾಗ ಇಂವನ ಶಿಷ್ಯರು ಹೇಗೆ ಬದಲಾಗ್ತಾರೆ? ಹಾಗಾಗೆ ಅವರು ಮಲ್ಲಿಕಾ ಶೇರಾವತ್ ಬಂದಾಗ್ಲೂ ಸ್ವರ್ಗದಿಂದ ದೇವತೆ ಪಲ್ಲಕ್ಕಿ ಇಳಿದು ಬಂದಂಗೆ ನೋಡಿಕೊಂಡ್ರು. “ಆಹಾ, ನಮ್ಮ ಗುರುಗ್ಳಿಗೆ ಸಿನೆಮಾದವರು ಪ್ರಖ್ಯಾತ ಉದ್ಯಮಿಗಳು ಎಲ್ಲರೂ ಶಿಷ್ಯರು” ಎಂದು ಪ್ರಚಾರ ಮಾಡಿದರು.

ಮಾಧ್ಯಮದವರು “ಸನ್ಯಾಸಿಯಾಗಿ ನೀವು ಹೀಗೇಕೆ ಮಾಡಿದ್ರಿ?’ ಎಂದ್ರೆ “ಅವಳು ಪವಿತ್ರಾತ್ಮ” ಎಂದು ಹೇಳಿಕೆ ಕೊಟ್ಟಿದಾನೆ. ಈಗ ನಡೀತಿರೊ ಪ್ರಕರಣ ಹೇಗಾದ್ರೂ ಮುಚ್ಚಾಕಿಸ್ಕೆಂಡು ಮುಂದೆ ಅವಳ್ಯಾರೋ ಇದ್ದಾಳಲ ಸನ್ನಿ ಲಿನಾಯಿ ಅವಳನ್ನ ಕರೆಸಿಕೊಂಡು ವಿಜಯೋತ್ಸವ ಮಾಡುವುದಕ್ಕೆ ಸ್ಕೆಚ್ ಹಾಕ್ತಿದಾನೆ.

ಇಂತ ಕಪಟೀನ ಮಹಾತಪಸ್ವಿಗಳು ಮಹಾಸಾಧಕರು ರಾಮ, ಶಂಕರಾಚಾರ್ಯರ ಅವತಾರ ಅಂತೆಲ್ಲ ಪ್ರಚಾರ ಮಾಡ್ತಾರೆ. ಪಾಪ ಆ ರಾಮನಿಗೆ ಹೊತ್ತಿಂದೊತ್ತಿಗೆ ಪೂಜೆ ಸರಿಯಾಗಿ ನಡೀತಿಲ್ಲ. ಒಂದಿನ ಹೊತ್ತಲ್ಲೆ ಪೂಜೆ ಇನ್ನೊಂದಿನ ಮಧ್ಯಾಹ್ನ ಎರಡು ಗಂಟಿಗೆ ಪೂಜೆ ಒಂದಿನ ರಾತ್ರಿ ಪೂಜೆ ಸಂಜೆ ಐದೂವರಿಗಾದ್ರೆ ಇನ್ನೊಂದಿನ ರಾತ್ರಿ ಹನ್ನೆರಡಕ್ಕೆ.

ಇಂವನ ವ್ಯಾಪಾರ ರಾಮ ವಿಮಾನ ಹತ್ತಬೇಕಾಯ್ತು. ಅಲ್ಲೆಲ್ಲ ಸೆಕ್ಯೂರ್‍ಇಟಿಯವ್ರು ದೇವರ ಬಾಕ್ಸ್ ತೆಗೆದು ನೋಡದೆ ಇರ್ತಾರನ? ಪರಂಪರೆ ಅಂತಾನಲ ದೇವರ ಪೆಟ್ಟಿಗೆ ಬಂದ್ ಮಾಡಿದ್ಮೇಲೆ ಇನ್ನೊಂದ್ ಕಡೆಗೆ ಪೂಜೆಗೆ ರೆಡಿ ಮಾಡ್ವಾಗಷ್ಟೆ ಅದನ್ನ ತೆಗ್ಯೂದಿತ್ತು. ಅದನ್ನೆಲ್ಲ ಮುರ್ದಿದಾನೆ. ರಾಮ ಎಲ್ಲೆಲ್ಲಿದೊ ನೀರನ್ನ ಕಾಣೊ ಹಂಗಾಯ್ತು. ಇದೆಲ್ಲ ಪರಂಪರೆಯೊಳಗಿತ್ತನ?

ಶಂಕರಾಚಾರ್ಯರ ಕಾಲದಲ್ಲಿ ಇರ್ಲಿಲ್ಲ ಈಗ ಕಾಲ ಬದಲಾಗಿದೆ. ತಾನು ಬಳಸ್ತೇನೆ ಅನ್ನೊದಾದ್ರೆ “ಕದೀಮ ಬಾ ಮೊದ್ಲು ಜೀನ್ಸ್ ಹಾಕ್ಕೆಂಡು ಹೆಣ್ಮಕ್ಳ ಹಿಂದೆ ಹೋಗು ಇಲ್ಲಿಂದ ಜಾಗ ಖಾಲಿ ಮಾಡು” ಎಂದು ಓಡಿಸ್ಬೇಕು. ಶಂಕರಾಚಾರ್ಯರ ಕಾಲದಲ್ಲಿ ರಾಜರಿದ್ದರು. ಬಂಗಾರದ ಪಲ್ಲಕ್ಕಿ ಕಿರೀಟ ಛತ್ರ ಚಾಮರ ಹಣ ಭೂಮಿ ಎಲ್ಲಾನೂ ಕೊಡೊದಕ್ಕೆ ಮುಂದೆ ಬಂದಿದ್ರು. ಶಂಕರರು ಅದನ್ನು ತಿರಸ್ಕರಿಸ್ಬುಟ್ರು.”

ತಿಮ್ಮಪ್ಪಣ್ಣವರ ಮಾತು ಇಷ್ಟಕ್ಕೆ ಮುಗಿಯಲಿಲ್ಲ. ಇನ್ನೊಂದು ಕಂತಿನಲ್ಲಿ ಅದನ್ನು ಮುಗಿಸುತ್ತೇನೆ. ತಿಮ್ಮಪ್ಪಣ್ಣನವರಿಂದ ತಪ್ಪಿಸಿಕೊಂಡು ಮುಂದೆ ಹೋದ ಮೇಲೆ ಪುರಪ್ಪೆಮನೆ ಊರ ಜನ ಒಬ್ಬರು ಸಿಕ್ಕಿದ್ರು. ಸ್ವಲ್ಪ ಪರಿಚಯ ಅಷ್ಟೆ. ನಾನು ಹವ್ಯಕ ಅಂತ ಗೊತ್ತಿದದ್ರಿಂದ ಎಂದೂ ಮಾತನಾಡದವ್ರು ಅಂದು ಶುರುಮಾಡದ್ರು. ಇದು ಕುರಿಯಿರಬಹುದೇ ನನ್ನ ಮನದ ಪ್ರಶ್ನೆ. ರಕ್ಷಣೆಗಾಗಿ ನಾನು ಮತ್ತೆ ಮೌನಕ್ಕೆ ಶರಣು.

“ಅಣ್ಣಯ್ಯ ನಾಲ್ಕೈದ್ ಜನ ಜಡ್ಜುಗಳು ಹಿಂದೆ ಸರ್ದ್ ಬುಟ್ಟದ್ವಲ. ಇದು ಸುಳ್ಳು ಆರೋಪ ಹೇಳದು ಅವ್ಕೆಲ್ಲ ಮನವರಿಕೆ ಆಯ್ದು. ಅವಳದ್ದು ಅದೆ ದಂಧೆಯಡನ. ಆ ಪಾಪಿಗೆ ಯಾವ ದೇವರು ಈ ಬುದ್ಧಿ ಕೊಟ್ನೊ……”

ಮಾತು ಜೈಕಾರ ಹಾಕುವವರೆಗೂ ಮುಂದುವರೀತು. ತಾಲೀಬಾನಿನ ಸರಹದ್ದಾದ್ರಿಂದ ನಾನು ಏನನ್ನೂ ಹೇಳಲಿಲ್ಲ. ಅಂತೂ ಕುರಿಯನ್ನು ಕಳಿಸಿ ಮುಂದೆ ನಡೆದೆ. ಜಡ್ಜುಗಳು ಹಿಂದೆ ಸರಿದಿದ್ದರ ಬಗ್ಗೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೆ ಹೇಳಿದ್ದು ನಿಮಗೆಲ್ಲ ನೆನಪಿರಬಹುದು. ಅದು ಪವಾಡ ಇರಬಹುದೆ?

ಕವಳದ ಗೋಪಣ್ಣ ಹೇಳಿದ್ದು ನೆನಪಾಗ್ತಾ ಇದೆ.”ರಾಮು, ಇವನ ಕುಲಪತಿ ಬಾವಯ್ಯ ಕನಿಷ್ಠ ಹದಿನೆಂಟಿಪ್ಪತ್ತು ಮಂದಿ ಹತ್ತನೆ ಕ್ಲಾಸ್ ಹುಡಿಗೀರಿಗೆ ಕನ್ಯಾಸಂಸ್ಕಾರ ಕೊಟ್ಟಿದಾನೆ. ಯಾರಿಗು ಮಾತಾಡೊ ಧೈರ್ಯ ಇಲ್ಲ. ಸಾಗರ್‍ದಗೆ ಪಾನಿ ಪೂರಿ ಮಾರ್‍ಕಂಡಿದ್ದವರ ಮಗಳನ್ನು ಬಡತನದಲ್ಲಿ ಓದ್ಸಕಾಗ್ದೆ ಅಲ್ಲಿಗೆ ಓದಕ್ಕೆ ಕಳಸಿದ್ರು. ಅವಳಿಗೆ ಎರಡು ಮೂರ್ ಬಾರಿ ಅಬಾರ್ಷನ್ ಮಾಡ್ಸಿದಾನೆ.

ಪವಾಡ ಮಾಡಿದ್ನಂತ್ರ ಆ ಬಡ ಪಾನಿಪೂರಿ ದಂಪತಿ ನಡುವೆ ಜಗಳ ತಂದು ಬೇರೆ ಮಾಡ್ಸಿದ. ಕುಲಪತಿ ಬಾವಯ್ಯ ತನ್ನ ಏಕಾಂತ ದರ್ಶನದಲ್ಲಿ ಒಪ್ಪದಿದ್ರೆ ಹುಡುಗೀರ ಕೂದಲು ಹಿಡ್ದು ಹೋಡೆಗೆ ಜಪ್ತಿದ್ನಂತೆ. ಪ್ರಕರಣ ಹತ್ಗೆಂಡು ಉರ್‍ದಾಗ ಪರಿಷತ್ತನೆಲ್ಲ ಬದಲಿ ಮಾಡಿ ಕುಲಪತಿ ಬಾವಯ್ಯನ್ನ ಕೆಲವು ತಿಂಗಳು ಅಜ್ಞಾತವಾಸಕ್ಕೆ ಕಳ್ಸಿದ. ಬಾವ ಮತ್ತು ನೆಂಟನೊಳಗೆ ಮತ್ತೆ ಜಗ್ಳ ಆಗಿ ಸಂಧಾನ ಮಾಡ್ಕೆಂಡ್ರು. ಇಲ್ದಿದ್ರೆ ಆರೇಳು ವರ್ಷದ ಕೆಳಗೇ ಇವರ ಹಗರಣ ಎಲ್ಲ ಬಯಲಾಗಿ ಜನ ಪೊರಕೆ ತಗಂಡು ಅಟ್ಟಿಸ್ತಿದ್ರು. ಇನ್ನೂ ರಾಶಿ ಕತೆ ಇದ್ದು. ಪವಾಡ ಅಂದ್ರೆಂತ ಸಾಮಾನ್ಯ ಪವಾಡ ಮಾಡ್ಕೆಂಡ್ಯನು ?”

Thumari Ramachandra

source: https://www.facebook.com/groups/1499395003680065/permalink/1596640613955503/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s