ಐಪ್ಯಾಡು ಐಫೊನು ಅಂತರ್ಜಾಲದಲ್ಲಿ ವಿಹರಿಸುವವ ಸನ್ಯಾಸಿಯಲ್ಲ

ಐಪ್ಯಾಡು ಐಫೊನು ಅಂತರ್ಜಾಲದಲ್ಲಿ ವಿಹರಿಸುವವ ಸನ್ಯಾಸಿಯಲ್ಲ

ತಿಮ್ಮಪ್ಪಣ್ಣನವರ ಮಾತುಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕನಿಷ್ಠ ಇನ್ನೆರಡು ಎಪಿಸೋಡಾದ್ರೂ ಬೇಕು. ಸಿಕ್ಕಾಪಟ್ಟೆ ಕುದಿದು ಹೋಗಿದ್ದ ಅವರ ಮಾತುಗಳನ್ನು ಮರದ ಬೊಂಬೆ ಹಂಗೆ ನಿಂತ್ಕಂಡಿದ್ದ ನಾನು ಕೇಳಿಸಿಕೊಳುತ್ತಲೆ ಇದ್ದೆ.

“ಸನ್ಯಾಸಿಗಳಿಗೆ ವಿರಕ್ತಿಯೆ ಬಹಳ ಮುಖ್ಯ ಸ್ವಭಾವ. ನಾವೆಲ್ಲರೂ ಬಳಸೊದಕ್ಕೆ ಆಸೆ ಪಡುದ್ನ ಮತ್ತು ವಸ್ತುವಿಷಯ ರೂಪದಲ್ಲೆ ಸುಖವಿದೆಯೆಂದುಕೊಳ್ಳೋದ್ನ ಅವರು ತ್ಯಜಿಸುತ್ತಾರೆ. ಅದ್ಕಾಗೆ ಅವರಿಗೆ ಮಕ್ಕಳುಮರಿ ಸಂಸಾರ ಆಸ್ತಿ ಇರದಿಲ್ಲ. ಈ ವ್ಯಕ್ತಿಗೆ ದಾಖಲೆಗೆ ಸಿಗದಂತೆ ಇದೆಲ್ಲವೂ ಉಂಟು.

ನನ್ನ ದೂರದ ಸಂಬಂಧಿ ಹುಡುಗಿ ಜೊತೆಗೆ ಇಂವ ಆಟ ಆರಂಭಿಸುವುದರಲ್ಲಿದ್ದ. ಅವಳಿಗೆ ಫೋನ್‍ಮಾಡಿ ದ್ವಂದ್ವಾರ್ಥದ ಮಾತನಾಡಲಿಕ್ಕೆ ಶುರುಮಾಡಿದ್ದ. ಅವಳಲ್ಲಿ ಏನೆಲ್ಲಾ ಹೇಳಿದ್ದಾನೆ ಎಂಬುದು ನಮಗೆಲ್ಲ ಈಗ ಗೊತ್ತಾಗ್ಬುಟ್ಟದ್ಯ. ಅವಳು ಹೆದರ್ಕೆಂಡು ಅಲ್ಲಿಗೆ ಹೋಗುವುದನ್ನು ನಿಲ್ಲಿಸಿದ್ದರಿಂದ ಬಚಾವಾದಳು. ಇಲ್ಲದಿದ್ದರೆ ಅವಳಿಗೂ ಪ್ರಸಾದ ಕೊಡ್ತಿದ್ದ. ಆ ಮನ್ಮಥ ಯಾರ್ಯಾರಿಗೆ ಫೋನ್ ಮಾಡ್ತಿದ್ದ ಮೆಸ್ಸೇಜ್ ಕಳಸ್ತಿದ್ದ ಎಂದು ನನಗೆ ಅನೇಕ ಜನ ಹೇಳಿದಾರೆ. ಪಾಪ ಅವರಲ್ಲಿ ಬಹಳ ಮಂದಿ ಪ್ರಸಾದ ತಿಂದವರೆ ಆಗಿರೊದ್ರಿಂದ ಹೇಳಿಕೊಳ್ಳಲಿಕ್ಕೆ ಮರ್ಯಾದಿ. ಹೇಳಿದ್ರೆ ಹಳದೀ ಶಾಲಿನ ತಾಲೀಬಾನನೋರು ಹೊಡ್ದಾಕ್ಬುಡ್ತಾರೆ ಅನ್ನೊ ಹೆದರಿಕೆನೂ ಇದೆ.

ಅವನಿಗೆ ತಕ್ಕ ಹಾಗೆ ಅವನು ಸಾಕಿಕೊಂಡ ಬಳಗವೂ ಇದೆ. ದೊಡ್ಡ ದೊಡ್ಡವರನ್ ಹಿಡಿದು ಅವರಿಗೆ ಸನ್ಮಾನ ಮಾಡಿ ತನ್ನ ಬಳಗಕ್ಕೆ ಸೇರಿಸಿಕೊಳ್ತಾನೆ. ಪಾಪ ಅವರೆಲ್ಲ ಸಭೆ ನಡೀತಿರೋವಾಗ ಬರ್ತಾರೆ ಹೋಗ್ತಾರೆ. ಅವರಿಗೆ ಇವನ ಏಕಾಂತ ದೋಖಾಂತ ದರ್ಶನ ಎಲ್ಲ ಗೊತ್ತಿಲ್ಲ. ತನ್ನ ಮೇಲೆ ಆಪಾದನೆ ಬಂದ ತಕ್ಷಣ ಅಂತವರಿಗೆಲ್ಲ ಫೋನ್ ಮಾಡಿ “ನಮ್ಮ ಮೇಲೆ ಸುಳ್ಳು ಆಪಾದನೆ ಬಂದಿದೆ. ನಾವು ರಾಮನ ಹೆಜ್ಜೆಯಲ್ಲಿರುವವರು. ನೀವು ನಮ್ಮ ಬೆಂಬಲಕ್ಕಿರಬೇಕು”ಅಂತ ಬೆಂಬಲ ಕೇಳ್ತಾನೆ. ರಾಮನ ಹೆಸರು ಕೇಳಿದ ತಕ್ಷಣ ಅವರಿಗೆ ಸಹಾಯ ಮಡುವ ಮನಸ್ಸು ಬಂದ್ಬುಡ್ತದೆ. ಇದೊಂತರ್‍ದ ಇಮೋಶನಲ್ ಬ್ಲ್ಯಾಕ್ ಮೇಲು.

ಅದ್ಯಾರ ಹತ್ರವೊ ಹೇಳಿ ಐಪ್ಯಾಡು ಐಫೋನು ಎಲ್ಲ ತರ್ಸ್ಕಂಡಿದಾನಂತೆ. ಯಾರ ಮನಿಗೆ ಹೋದರೂ ಅಲ್ಲೆಲ್ಲ ಇಂಟರ್ನೆಟ್ಟು ಇರಲೇಬೇಕಿತ್ತಂತೆ. ಅದೇನೊ ಯೂಟ್ಯೂಬ್ ಇದ್ಯಂತಲ? ನನ್ನ ಅಣ್ಣನ ಮಗ ಹೇಳ್ತಾ ಇದ್ದ. ಅದರಲ್ಲೆಲ್ಲ ನೆಟ್ಟಗಿರೊ ಸಂಸಾರಿಗಳೂ ನೋಡ್ಬಾರದ ನೀಲಿಚಿತ್ರ ನೋಡುವಂತ ರಸಿಕರರ ರಾಜ ಅಂವ. ಅವನ ಬಳಕೆಲಿದ್ದ ಮೊಬೈಲು ಲ್ಯಾಪ್ಟಾಪು ಐಪ್ಯಾಡು ಇಂತದ್ನೆಲ್ಲ ಮಟ್ಟಹಾಕ್ಕೊಂಡು ಡೀಟೇಲ್ಸ್ ತಗಸಿದ್ರೆ ಅನೇಕ ಮಾಹಿತಿ ಸಿಗ್ತಿತ್ತು. ಅವನ ಸುತ್ತ ಇದ್ದಾರಲ ಜೈಕಾರದ ಮೇಳ ಅವರಲ್ಲಿ ದುಡ್ಡ್ ತಗಂಡು ಮಾಧ್ಯಮದಲ್ಲಿ ಕೈ ಆಡಿಸೊ ಕೆಲವು ಮಂದಿಯೂ ಇದಾರೆ. ಎಲ್ಲ ಸೇರಿ ದಾಖಲೆ ಸಿಗದಂತೆ ಮಾಡ್ತಿದಾರಂತೆ.

ಐಪ್ಯಾಡು ಐಫೊನು ಅಂತರ್ಜಾಲದಲ್ಲಿ ವಿಹಾರ ಮಾಡೊ ವ್ಯಕ್ತಿ ಸನ್ಯಾಸಿಯೆ ಅಲ್ಲ. ಅದಕ್ಕೆ ತದ್ವಿರುದ್ಧವಾಗಿ ಇಂವ ದಿನದಲ್ಲಿ ಕನಿಷ್ಠ ಮೂರ್ನಾಲ್ಕು ತಾಸು ಅದರಲ್ಲೆ ಇರ್ತಾನೆ. ಇಂವ ಮಾಡಿದ ದೊಡ್ಡ ತಪಸ್ಸು ಅದೇಯ. ಇಂತವರನ್ನು ಇಟ್ಕಂಡು ಪೂಜೆ ಮಾಡೊದರಿಂದ ಇಡೀ ಸಮಾಜ ನೈತಿಕತೆ ಕಳ್ಕಂಡು ಹಾಳಾಗ್ತದೆ. ಇವನ ನಿಜವಾದ ’ಪವಾಡ’ ಬಯಲಾದ್ರೆ ನೂರಾರು ಕುಟುಂಬ ಒಡೆದು ಹೋಗ್ತದೆ. ಎಷ್ಟೊ ಹೆಂಗಸರ ವಿಷಯ ಅವರವರ ಮನೆಯವರಿಗೆ ಗೊತ್ತಿಲ್ಲ. ಅವರಲ್ಲಿ ಕೆಲವರು ಹೇಳಲಿಕ್ಕೂ ಆಗದೆ ಬಿಡಲಿಕ್ಕೂ ಆಗದೆ ಸುಮ್ಮನಿದ್ರೆ ಇನ್ನೂ ಕೆಲವರಿಗೆ ಹಣಸಹಾಯದ ಆಮಿಷವೂ ಇದ್ಯಂತೆ. ಇಲ್ದಿದ್ರೆ ಏನೂ ಇಲ್ಲದ ಗಿಂಡಿಮಾಣಿಗಳು ಕೋಟಿಗಟ್ಲೆ ಹಣ ಹಾಕಿ ಆಸ್ತಿಮನೆ ಇಂಡಸ್ಟ್ರಿ ಎಲ್ಲಾ ಮಾಡ್ಲಿಕ್ಕಾಗ್ತಿತ್ತನ? ಇನ್ನೂ ಕೆಲವರು ಯವ್ದೊ ಖುಷಿಗಾಗಿ ಅದೇ ಚಟಕ್ಕೆ ಬಿದ್ದವರೂ ಇರಬಹುದು. ಮುಂದಗಡೆಯಿಂದ ಎಲ್ಲವೂ ಚಂದ. ಒಳಗಡೆ ನೋಡದ್ರೆ ಎಲ್ಲೆಲ್ಲು ರಂಧ್ರ.

ಇಂತವರನ್ನೆಲ್ಲ ಓಡಿಸಿದ ಹೊರತು ಅವರಾಗೆ ಅವರು ಬಿಟ್ಟು ಹೋಗ್ವವರಲ್ಲ. ಸುತ್ತ ಇರೊ ಬೇಟೆನಾಯಿಗಳಂತ ಸಾಕುನಾಯಿಗಳು ಓಡಿಹೋದ್ರೆ ನಂತರ ಇಂವನೂ ಓಡ್ತಾನೆ. ಒಳ್ಳೆ ಹವ್ಯಕರೆಲ್ಲ ಅಲ್ಲಿಗೆ ಹೋಗದನ್ನ ಕಾಣಿಕೆ ಕೊಡೊದನ್ನ ನಿಲ್ಲಿಸಿಬಿಡಬೇಕು. ಈಗಾಗಲೇ ಕೆಲವ್ರು ನಿಲ್ಸಿದಾರೆ ಇನ್ಮುಂದೆ ಬಹಳ ಜನ ನಿಲ್ಲಿಸ್ತಾರೆ. ಒಂದಲ್ಲಾ ಒಂದ್ ದಿವಸ ಎರಡನೆ ರಾಂಪಾಲನ ಕತೆ ಆಗದೇಯ ಇದು.”

ಪ್ರಶ್ನೆ ಮತ್ತು ಉತ್ತರ ಎಲ್ಲಾನೂ ಅವರೆ ಹೇಳಿಕೊಳ್ಳುವ ಪ್ರಶ್ನೋತ್ತರ ಮೇಷ್ಟ್ರಂತೆ ತಿಮ್ಮಪ್ಪಣ ಕೂಗೇ ಕೂಗಿದರು.

ಕವಳದ ಗೋಪಣ್ಣನ ಸರದಿ ಬಂತು. “ಹೌದನ ರಾಮು, ಜಾಸ್ತಿ ಓದ್ಕೆಂಡು ಅಪ್ಪ ಅಮ್ಮನ ಮಾತ್ ಕೇಳ್ದೆ ಯಾವ ಹುಡುಗನನ್ನೂ ಒಪ್ದೆ ಇದ್ದ ಹೆಣ್ಣುಡ್ರಿದ್ವಲ ಜನಮರುಳೊ ಜಾತ್ರೆ ಮರುಳೊ ಅನ್ನೊ ಹಂಗೆ ಇಂವನ ಕತೆ ಕೇಳಕ್ಕೆ ಹೋಗ್ತಿದ್ದ. ಅಲ್ಲೇ ಗಾಳಹಾಕಿ ಏಕಾಂತಕ್ಕೆ ಕರ್ಸ್ಕೆಂಡು ರಾಂಪ್ರಸಾದ ಕೊಟ್ಟು ಬುಸ್ಸ್ ಹಾಂವು ಬಿಟ್ಟಿದ್ದೆ ಸೈ ನೋಡು. ನಂತ್ರ ತಡೆಹಾಕಿದ ಹಾಂವಿನಂಗೆ ಅಂವ ಹೇಳಿದ ಮಾಣಿಗಳನ್ನೆ ಕಣ್ಮುಚ್ಚಿ ಮದ್ವೆ ಆದ್ವನ. ಅದ್ಕೆ ಮದ್ವೆ ಆಗದ ಮಾಣಿಗಳಿದ್ದರೆ ಅಲ್ಲಿ ಗಿಂಡಿಮಾಣಿಗಳಾಗಿ ಸೇರ್ಕೆಳಿ ಹೇಳ್ತಿದ್ದಿ ಆನು. ಕೊನೆಪಕ್ಷ ಸೆಕೆಂಡ್ ಹ್ಯಾಂಡೊ ಥರ್ಡ್ ಹ್ಯಾಂಡೊ ಆದ್ರೂ ಸಿಗ್ತನ. ಕರ್ದಾಗೆಲ್ಲ ಒಂದಿನ ಕಳ್ಸಿರಾತು. ಇಲ್ದಿದ್ರೆ ಈ ದುಬಾರಿ ಕಾಲ್ದಗೆ ಎಂತೆಂತಾ ಮಳ್ಳುಗಳಿಗೆಲ್ಲ ಎಂಬಿಎ ಮಾಡಿದೋರು ಸಾಫ್ಟ್ ವೇರ್ ಹುಡ್ಗೀರು ಸಿಗ್ತಿದ್ವನ? ಎಲ್ಲಾ ಇಲ್ಲಿಯ ರಾಂಪಾಲನ ದಯೆ.”

ಊರಿಗೆ ಬಂದಾಗ ಊರಮನೆದೇನಾದ್ರೂ ಸುದ್ದಿ ಇರ್ತಿತ್ತು. ಮಳೆಬೆಳೆ ಹಲಸು ಮಾವಿನ ಸುದ್ದಿ ಅಪ್ಪೆಮಿಡಿ ಸುದ್ದಿ ಮಾರಿಜಾತ್ರೆ ಸುದ್ದಿ ಮದುವೆ ಮುಂಜಿ ಸುದ್ದಿ ಇಂತದ್ದಷ್ಟೆ ಇರ್ತಿತ್ತು. ಈ ಸಲ ಮಾತ್ರ ಅದ್ಯಾವುದಕ್ಕೂ ಅವಕಾಶವೆ ಇರ್ಲಿಲ್ಲ.

Thumari Ramachandra

source: https://www.facebook.com/groups/1499395003680065/permalink/1596102594009305/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s