ಮಲ್ಲಿಕಾ ಶೇರಾವತ್‍ಳನ್ನು ಕರೆಸಿದಾಗಲೇ ಹವ್ಯಕರು ಇಂವ ಸನ್ಯಾಸಿಯಲ್ಲ ಬಿಕನಾಸಿ ಎಂದರಿಯಬೇಕಿತ್ತು

ಮಲ್ಲಿಕಾ ಶೇರಾವತ್‍ಳನ್ನು ಕರೆಸಿದಾಗಲೇ ಹವ್ಯಕರು ಇಂವ ಸನ್ಯಾಸಿಯಲ್ಲ ಬಿಕನಾಸಿ ಎಂದರಿಯಬೇಕಿತ್ತು

ತಿಮ್ಮಪ್ಪಣನ ಮಾತುಗಳ ಉತ್ತರಾರ್ಧದ ಕೆಲವಂಶವನ್ನು ನೀವೀಗ ನೋಡಿ.

“ಹವ್ಯಕರು ಪುರೋಹಿತರು, ಗುರು, ಮಠ ಇಂತವರನ್ನೆಲ್ಲ ವಿನಾಕಾರಣ ದೂರುವುದಿಲ್ಲ. ಅವರ ಮನಸ್ಸು ನೊಂದರೆ ಪರೋಕ್ಷವಾಗಿ ಜನ್ಮಜನ್ಮಾಂತರಕ್ಕೂ ಕಾಡುವ ಶಾಪ ತಾಗುತ್ತದೆ ಎಂಬ ಭಾವನೆಯುಳ್ಳವರು. ಇವನು ಹೇಳ್ತಾನೆಂತ ಯಾರೂ ಹಣಕ್ಕಾಗಿ ಸುಳ್ಳು ದೂರು ದಾಖಲಿಸುವಷ್ಟು ಖದೀಮರಲ್ಲ. ಹಣ ಹೊಡೆಯೋದು ಮಜಾಮಾಡೋದು ಇವನ ಅಭ್ಯಾಸವೇ ಹೊರತು ಅದು ಸಮಾಜದ ಮುತ್ಸದ್ಧಿಗಳಲ್ಲಿ ಕಂಡುಬರುವುದಿಲ್ಲ. ಇಅವನೋ ಇವನ ಪಟಾಲಮ್ಮೋ ಕೂಗುವುದನ್ನು ನೋಡಬೇಕು. ಜಗತ್ತಿನಲ್ಲೆ ತನ್ನಂತ ಸನ್ಯಾಸಿ ಇನ್ನೊಬ್ಬನಿಲ್ಲವೆನ್ನಿಸಿಬಿಡಬೇಕು ಅನ್ನೋದು ಈ ಕಚ್ಚೆಹರುಕನ ಖಯಾಲಿಗಳಲ್ಲಿ ಒಂದು.

ಮೇಲಾಗಿ ತಾನು ಏನೇ ಮಾಡಿದರೂ ತನ್ನ ವಿರುದ್ಧ ಯಾರೂ ದೂರು ಕೊಡಲಾರರು ಎಂದುಕೊಂಡುಬಿಟ್ಟಿದ್ದ. ತನ್ನ ಸುತ್ತ ನಾಯಿಗಳ ಹಾಗೆ ಅನೇಕರನ್ನ ಸಾಕಿಕೊಂಡಿದಾನೆ. ಅವರೆಲ್ಲರ ಜೈಕಾರಗಳಲ್ಲಿ ಏನೂ ಅರಿಯದ ಮುಗ್ಧ ಕುರಿಗಳೂ ಜೈಕಾರ ಕೂಗುತ್ತವೆ. ಕಳೆದ ಆಗಸ್ಟ್ ನಿಂದ ಅಕ್ಟೋಬರ್ ಕೊನೆವರೆಗೂ ಹೊನ್ನಾವರ ಕುಮಟಾ ಭಟ್ಕಳಗಳಲ್ಲಿ ಕೇಬಲ್ ಟಿವಿಯಲ್ಲಿ ರಾತ್ರಿ ಪಬ್ಲಿಕ್ ಟಿವಿ ಬರದಂತೆ ವ್ಯವಸ್ಥೆ ಮಾಡ್ಸಿದ್ದನಂತೆ. ಯಾಕೆಂದರೆ ಗಟ್ಟಿಯಾಗಿ ಜೈಕಾರ ಹಾಕುವ ಕುರಿಗಳು ಅಲ್ಲೇ ಹೆಚ್ಚಿಗೆ ಇರೋದು ಎಂದು ಅವನಿಗೆ ಗೊತ್ತಿದೆ. ಅವರಿಗೆಲ್ಲ ಯಾವ ವಿಷಯವೂ ಸ್ಪಷ್ಟವಾಗಬಾರದು. ಅವರು ಇದ್ದಹಾಗೆ ಇರಬೇಕು ಎಂಬುದು ಅದಕ್ಕೆ ಕಾರಣ. ಪಾಪ ಅಲ್ಲಿನವರಲ್ಲಿ ಅನೇಕರಿಗ್ ಇನ್ನೂ ಸರಿಯಾದ ವಿಷಯ ಗೊತ್ತಿಲ್ಲ. ಬೇರೆ ಕಡೆ ಈಗ ಇವನ ಮಾತಿಗೆ ಯಾವ ಕಿಮ್ಮತ್ತೂ ಇಲ್ಲ.

ನಮ್ ಸಾಗರದಗೆ ನಾಲ್ಕಳ್ಳಿಪಾಲು ಅಂತಿದ್ಯಲ? ಅದರ ಹಿಂದೊಂದು ಕತೆಯಿದೆ. ಅಲ್ಲಿನ ಜನರಿಗೆ ಯಾವುದೋ ಆರ್ಥಿಕ ಮುಗ್ಗಟ್ಟು ಇದ್ದಿತ್ತು ಎಂಬುದನ್ನೂ ಅರಿಯದ ಹಿಂದಿದ್ದ ಒಬ್ಬ ಸ್ವಾಮಿ ಕಾಣಿಕೆ ಕೊಡೋದಿಕ್ಕೆ ತಡವಾಯ್ತು ಅಂತ ನಾಲ್ಕು ಹಳ್ಳಿಗಳ ಜನರಿಗೆ ತೀರ್ಥ ಮಂತ್ರಾಕ್ಷತೆ ಕೊಡ್ಲಿಲ್ವಂತೆ. ಅವರನ್ನು ಸೀಮೆಯಿಂದ ಹೊರಹಾಕದ್ರು. ಅದು ಇವತ್ತಿಗೂ ನಾಲ್ಕಳ್ಳಿಪಾಲು ಅಂತಲೇ ಕರೆಸಿಕೊಳ್ತಾ ಇದೆ. ಕಾಣಿಕೆ ಕೊಟ್ರೆ ಮಾತ್ರ ಮಂತ್ರಾಕ್ಷತೆ ಇಲ್ಲ ಅಂದ್ರೆ ಇಲ್ಲ ಹೇಳೋದಾದ್ರೆ ಇಂತ ಸಂಸ್ಥಾನವೆಲ್ಲ ಯಾಕ್ ಬೇಕು? ಮಹಾಯೋಗಿ ಶ್ರೀಧರ ಸ್ವಾಮಿಗಳ ತರದವರೆ ಸಾಕು.

ಅಲ್ಲಪ್ಪಾ ಮಲ್ಲಿಕಾ ಶೇರಾವತ್‍ಳನ್ನು ಕರೆಸಿದಾಗಲೇ ಹವ್ಯಕರು ಇಂವ ಸನ್ಯಾಸಿಯಲ್ಲ ಸನ್ಯಾಸಿ ವೇಷದ ಬಿಕನಾಸಿ ಎಂದರಿಯಬೇಕಿತ್ತು. ಹನುಮಂತ ಬ್ರಹ್ಮಚಾರಿ. ಅಲ್ಲಿ ಹನುಮಂತನ ವಿಗ್ರಹ ನೆಡೋ ಅಗತ್ಯವೇನೂ ಇರ್ಕ್ಲಿಲ್ಲ. ಬಾವ ನೆಂಟ ಕೂಡಿ ಹನುಮಂತ ಅಲ್ಲೆ ಹುಟ್ಟಿದ್ದ ಅಂತ ಕತೆ ಕಟ್ಟಿದ್ದಾರೆ. ಅದೇ ಜಾಗದಲ್ಲಿ ಜಗತ್ತಿನಲ್ಲೆ ಎಲ್ಲೂ ಇಲ್ದಷ್ಟು ದೊಡ್ಡ ವಿಗ್ರಹ ಮಾಡ್ತೀವಿ ಅಂತ ಹೊರ್‍ಟಿದಾರೆ. ಆ ಜಾಗದ ಶಿಲಾನ್ಯಾಸಕ್ಕೆ ಅವಳನ್ನ ಕರೆಸಿದ್ನಲ್ಲಪ್ಪಾ ಲೋಕದಲ್ಲಿ ಯಾವ ಸನ್ಯಾಸಿಯಾದರೂ ಹಿಂದೆ ಹೀಗೆ ಮಾಡಿದ ದಾಖಲೆ ಉಂಟಾ? ಬಂದವಳು ಸಾದಾ ನಟಿಯೂ ಅಲ್ಲ. ಅವಳ ಬಗ್ಗೆ ಯಾರಿಗೂ ಏನೂ ಬಿಡಿಸಿ ಹೇಳುವ ಅಗತ್ಯವೆ ಇಲ್ಲ.

ಇವನು ಐಲು ಅನ್ನೋದು ಅವಳಿಗೆ ಗೊತ್ತಾಗಿಬುಟ್ಟದ್ಯ. ಅವಳು ಅದರಲ್ಲೆ ಇದ್ದವಳು. ಯಾವುದೇ ವ್ಯಕ್ತಿ ಗಂಡು ನಾಯಿಯಂತೆ ಜೊಲ್ಲು ಸುರಿಸುತ್ತ ಹಿಂಬಾಲಿಸಿದ್ರೆ ಸಂಬಂಧಿಸಿದ ಮಹಿಳೆಗೆ ಗೊತ್ತಾಗಿಬಿಡ್ತದೆ. ಆಗಿನ್ನೂ ಇವನ ರಾಂಪ್ರಸಾದ ತಯಾರಾಗಿರ್ಲಿಲ್ಲ. ಇಲ್ದಿದ್ರೆ ಅವಳೆ ಕಂಪ್ಲೇಂಟ್ ಕೊಡ್ತಿದ್ಳೇನೊ. ಅಷ್ಟು ದೂರ ಲಾಸ್ ಏಂಜಲೀಸ್ನಿಂದ ಅವಳನ್ನ ಅರ್ಜೆಂಟಾಗಿ ಕರ್ಸ್ಕೊಂಡಿದ್ದೇಕೆ? ಅದಕ್ಕೆಲ್ಲ ಎಷ್ಟು ಕೋಟಿ ಖರ್ಚು ಮಾಡಿದಾನೆ? ಯಾರಾದ್ರೂ ಲೆಕ್ಕ ಕೊಡ್ತಾರನ? ಅವಳು ವಾಪಸ್ ಹೋಗೋವಾಗ ಜೊಲ್ಲು ಸುರಿಸಿದ್ದು ಕಂಡು “ಅಲ್ಲಿಗೇ ಬನ್ನಿ ನೀವು ಶಂಕರಾಚಾರ್ಯರ ಪರಂಪರೆಯಲ್ಲೆ ಮೊದಲನೆಯವರಾಗ್ತೀರಿ” ಎಂದಳಂತೆ.

ಇಂವ ಹೊರಟುಬಿಡ್ತಿದ್ದ. ವೀಸಾ ತಯಾರಾಗೋದ್ರೊಳಗೆ ಪೇಪರಿನವ್ರು ಬರೆದುಬಿಟ್ರು.ಅವಳು ಬಂದುಹೋದ ಮರುದಿನ ಆಂಗ್ಲ ಪತ್ರಿಕೆಗಳು ಇವನಿಗೆ ಛೀಮಾರಿ ಹಾಕಿದವು. ಸನ್ಯಾಸಿಗೆ ಇದು ಹೇಳಿಸಿದ್ದಲ್ಲ ಎಂದವು. ಅವು ಪ್ರಕಟಿಸಿದ ಲೇಖನಗಳು ಇನ್ನೂ ದೊರೆಯುತ್ತವೆ ಎಂದು ಸ್ನೇಹಿತರು ಹೇಳಿದ್ದಾರೆ. ಇಲ್ದಿದ್ರೆ ಮಲ್ಲಿಕಾ ಬಂದಿದ್ದೆ ಸುಳ್ಳು ಎಂದು ಸಾಬೀತು ಮಾಡಿಬಿಡುತ್ತಿದ್ದ. ಇಂತವರನ್ನೆಲ್ಲ ಸನ್ಯಾಸಿ ಅಂತಾರನ? ಅಂವ ಕಳ್ಳ ಅನ್ನೋದಕ್ಕೆ ಇದೊಂದೆ ಘಟನೆ ಸಾಕು.

ನಂತರವೂ ಸಮಾಜದ ಹಿತರಕ್ಷಣೆಗಾಗಿ ಡಾ|ಟಿಟಿ ಹೆಗಡೆಯವ್ರಂತ ಕೆಲವು ಮುಖಂಡರು ಖುದ್ದಾಗಿ ಹೋಗಿ ಕೇಳದ್ರು. ಅವರ ಪ್ರಶ್ನೆಗಳಿಗೆ ಇವನಲ್ಲಿ ಉತ್ತರ ಉಂಟನ? ಇಂವನ ಪಟಾಲಮ್ಮು ಅವರಿಗೆ ಹೊಡೆದು ಅವಮಾನ ಮಾಡ್ತು. ಕೆಲವು ಕುರಿಗಳು ಅವರ ಮೇಲೆ ದಾಳಿ ನಡೆಸಿದರೆ ಉಳಿದ ಕುರಿಗಳು ಅವರಿಗೆ ಧಿಕ್ಕಾರ ಕೂಗಿದ್ವು. ಇದನ್ನೆಲ್ಲ ತಿಳಿದೂ ನಮ್ಮ ಜನ ವಿವೇಚನೆ ಇಲ್ದೆ ಅಡ್ಡಬಿದ್ದು ಉದ್ದಂಡ ನಮಸ್ಕಾರ ಹಾಕ್ತಾ ಇದ್ರೆ ಉವರನ್ನ ಯಾವ ದೇವರೂ ಕಾಪಾಡಲಾರ.”

ತಿಮ್ಮಪ್ಪಣ್ಣನವರ ಎಲ್ಲ ಮಾತುಗಳನ್ನೂ ಇಲ್ಲಿ ಉದ್ದೇಶ ಪೂರ್ವಕವಾಗಿ ಹೇಳುತ್ತಿಲ್ಲ. ಅವರು ಇಷ್ಟು ಬಿರುಸಾಗಿ ಮಾತನಾಡಿದ್ದನ್ನು ಹಿಂದೆ ನಾನೆಂದು ಕಂಡಿರಲಿಲ್ಲ.

ಕವಳದ ಗೋಪಣ್ಣ ಒಂದು ಮಾತು ಹೇಳಿದ್ದು ನೆನಪಾಯ್ತು. “ಮಲ್ಲಿಕಾ ಶೆರಾವತ್‍ಳನ್ನು ಕರೆಸೋದಕ್ಕೆ ಒಂದು ತಿಂಗಳ ಮುಂಚಿನಿಂದಲೇ ಮಾಸ್ಟರಬೇಟ್ ಮಾಡಲಿಕ್ಕೆ ಆರಂಭಿಸಿದ್ದ ಅಂತ ಯಾರೋ ಹೇಳಿದ್ರು ರಾಮು. ಹಾಗಂದ್ರೆಂತ?” ಅಂತ ನನ್ನಲ್ಲಿ ಕೇಳಿದ. “ಕಳ್ಳ ಸನ್ಯಾಸಿಗಳು ನಡೆಸುವ ಪುರಶ್ಚರಣೆಗಳಲ್ಲಿ ಅದು ಒಂದು ವಿಧಾನ” ಅಂದೆ. ಅವನ ಸಂದೇಹ ಪರಿಹಾರವಾಗಲಿಲ್ಲ. ಬಿಡಿಸಿ ಹೇಳಿದೆ. “ಛೆ ಎಂತಾ ಪದಬಳಕೆ ರಾಮು ನೀನೊಬ್ಬ ತತ್ವಜ್ಞಾನಿಯಾಗ್ಬೇಕಿತ್ತು ಮಾರಾಯ” ಅಂದ. “ಅಷ್ಟೆಲ್ಲ ಕೊಟ್ಟು ಕರ್ಸಿರೂ ಕೊನೆಗೂ ತಬಲೆ ಬಾರಿಸಲಿಕ್ಕೂ ಸಿಗಲಿಲ್ವಲ ಮಾರಾಯ. ಆ ದಿನ ಹೆಂಗ ತಡಕಂಡನೋ ಭಗವಂತನಿಗೆ ಗೊತ್ತು.ನರಿ ದ್ರಾಕ್ಷಿ ತಿಂದ ಕತೆಯಾಗೋತು. ಮುಂದೆಲ್ಲಾರೂ ಸಿಗ್ತಾಳೆ ಅಂತ ಲೆಕ್ಕ ಹಾಕ್ಕೆಂಡಿದ್ನೇನ ಅಷ್ಟರೊಳಗೆ ಹೀಂಗಾಗೋತಲ ಮಾರಾಯ.” ಅಂದ. ಇಬ್ಬರಲ್ಲೂ ಐದು ನಿಮಿಷ ಮಾತಿನ ಬದಲಿಗೆ ನಗುವೇ ತುಂಬಿತ್ತು.

Thumari Ramachandra

source: https://www.facebook.com/groups/1499395003680065/permalink/1595597947393103/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s