ನೀನು ಹೊರಗೆ ಕೂರು ಹೆಂಡತಿಯನ್ನು ಮಾತ್ರ ಏಕಾಂತ ದರ್ಶನಕ್ಕೆ ಕಳಿಸು ಎಂದವನ ಕತೆ ಬೇರೇನೆ ಆಗುತ್ತಿತ್ತು.

ನೀನು ಹೊರಗೆ ಕೂರು ಹೆಂಡತಿಯನ್ನು ಮಾತ್ರ ಏಕಾಂತ ದರ್ಶನಕ್ಕೆ ಕಳಿಸು ಎಂದವನ ಕತೆ ಬೇರೇನೆ ಆಗುತ್ತಿತ್ತು.

ಊರಿಗೆ ಬಂದಿದ್ದಾಗ ಎಲ್ಲಿ ನೋಡಿದರೂ ರಾಂಗ್ ವೇಷದ್ದೇ ಅಬ್ಬರದ ಸುದ್ದಿ. ಪರ ವಿರೋಧಿಗಳ ನಡುವೆ ಮುಸುಕಿನ ಗುದ್ದಾಟ ನಡೆದೇ ಇತ್ತು. ಸಾಗರದ ಪೇಟೆಯಲ್ಲಿ ಸುತ್ತುತ್ತಿದ್ದಾಗ ತಿಮ್ಮಪ್ಪಣ್ಣ ಸಿಕ್ಕಿದ್ದರು. ಅವರ ಒಲವು ಯಾವ ಕಡೆ ಎಂಬುದು ನನಗೆ ಗೊತ್ತಿರಲಿಲ್ಲ. ಹಳದೀ ಶಾಲಿನ ಸಂಘಟನೆಯ ಕುರಿಯಾಗಿದ್ದರೆ ಸ್ಥಳದಲ್ಲೇ ಬಳಗವನ್ನು ಕರೆಸಿ ನನ್ನುನ್ನು ಹೊಡೆಯುವ ತಾಲೀಬಾನ್ ನವರಾಗಿರುತ್ತಾರೆ. ಮಾತಾಡಿಸಲೋ ಬಿಡಲೋ ಎಂದು ಕಂಡರೂ ಕಾಣದ ಹಾಗಿದ್ದೆ. ತಿಮ್ಮಪ್ಪಣ್ಣ ನನಗೆ ಬಹಳ ಆತ್ಮೀಯರು, ಸಜ್ಜನ. ಅಷ್ಟೇ ದೈವ ಭಕ್ತರು. ನಾನು ಮಾತನಾಡಿಸದೇ ಮುಂದೆ ಹೋಗುವುದನ್ನು ಕಂಡ ತಿಮ್ಮಪ್ಪಣ್ಣ ಕರೆದರು, “ಹೇ ರಾಮು, ರಾಮು ಅಲ್ದನ? ಎಲ್ಲಿಗ್ ಹೊಂಟಿ ಮಾರಾಯ? ಯಾವಾಗ್ ಬೈಂದಿ? ..”ಎನ್ನುತ್ತ ಮಾತಿಗೆ ನಿಂತರು. ಕೆಲವೇ ನಿಮಿಷದಲ್ಲಿ ಮಾತು ರಾಂಗ್ ವೇಷದ ವಿಷಯಕ್ಕೆ ಹೊರಳಿತು. ಅವರ ನಿಲುವು ಗೊತ್ತಿಲ್ಲದ ನಾನು ಸುಮ್ಮನೆ ನಿಂತಿದ್ದೆ. ಅವರು ಕೋಪಗೊಂಡು ಒಂದೇ ಸಮನೆ ಕೂಗುತ್ತಿದ್ದರು.

“ಜೈಕಾರ ಹಾಕುವ ಕುರಿಗಳಿಗೆ, “ತಪ್ಪಿಸಿಕೊಂಡ ಒಂದು ಕುರಿಗೆ ನಾವು ಚಿಂತೆ ಮಾಡಬಾರದು ಉಳಿದ ಕುರಿಗಳು ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು” ಎಂದರೂ ಜೈಕಾರ ಹಾಕ್ತಾರೆ ಪಾಪ, ಇದು ಶಿಷ್ಯ ಸಮುದಾಯಕ್ಕೆ ನೀಡಿದ ಬಿರುದು ಎಂಬುದು ಅ ಕುರಿಗಳಿಗೆಲ್ಲಿ ಅರ್ಥವಾಗಬೇಕು? ಶಿಷ್ಯ ಸಮುದಾಯವನ್ನು ಕುರಿಯೆಂದು ಕರೆಯುವವನೂ ಒಬ್ಬ ಗುರುವೇ? ಅಲ್ಲಿರುವವರೆಲ್ಲ ಕುರಿಗಳೇ ಎಂಬುದು ಅವನಿಗೆ ಖಾತ್ರಿಯಿದೆ.

ನನ್ನ ಹತ್ತಿರ ಏನಾದರೂ ಆ ರೀತಿ “ನಿನ್ನ ಹೆಂಡತಿಯನ್ನು ಮಾತ್ರ ಒಳಗೆ ಕಳ್ಸು, ನೀನು ಹೊರಗೆ ಇರು” ಎಂದು ಹೇಳಿದ್ದರೆ ಅದರ ಕತೆ ಅವತ್ತಿಗೇ ಬೇರೆ ಆಗಿರ್ತಿತ್ತು. ಏನೂ ಇರ್ಲಿ ಆ ತಂಗ್ಯಮ್ಮ ಕಂಪ್ಲೇಂಟ್ ಕೊಟ್ಟಿದ್ದಾಳಲ್ಲ ಅವಳ ಸಾಹಸಕ್ಕೆ ನಾನು ಶಹಭಾಸ್ ಹೇಳ್ತೇನೆ. ಇಡೀ ಹವ್ಯಕ ಸಮುದಾಯದ ಪರವಾಗಿ ಅವಳಿಗೆ ನನ್ನ ಕೃತಜ್ಞತೆ. ಯಾವ ಸೀಮೆ ಗುರುವೊ ಅಂವ? ಅದು ಅವನ ತಪ್ಪಲ್ಲ. ಬೀಜವೇ ಅಂತದ್ದು. ಅವನಾದ್ರು ಏನ್ಮಾಡ್ತಾನೆ ಜೀನ್ಸ್ ಹಾಕ್ಕೊಳೊ ಬದ್ಲು ಕಾವಿ ಹಾಕ್ಕಂಡಿದಾನೆ.

ಮುಂದ್ಗಡೆ ಕುರ್‍ಇಗಳಿಗೆ ಬೇಕಾದಂಗಿರ್ತಾನೆ. ಹಿಂದ್ಗಡೆ ಅವನಿಗೆ ಬೇಕಾದಂಗೆ ವ್ಯವಸ್ಥೆ ಮಾಡ್ಕಳ್ತಾನೆ. ಅವಳು ಹಾಂಗೆ ಹೀಂಗೆ ಅಂತ ಇವರೆಲ್ಲ ಸುಮ್ಮನೇ ಕತೆ ಕಟ್ತಾರಲ ಅವಳು ಹ್ಯಾಂಗೂ ಇರ್ಲಿ ಎಲ್ಲರಿಗಿಂತ ಮೇಲೆ ಕುಳಿತ ಅಂವ ಎಂತವ? ಅದನ್ನ ಕೇಳ್ವವರೆ ಇಲ್ಲ. ರಾಜಕೀಯದ ಮಂದಿನೂ ಹಾಂಗೆ ಇದಾರೆ. ಎಲ್ಲಾ ತಿಂದ್ಕಂಡು ಸುಮ್ನೆ ಕೂತಿದಾರೆ.

ಕುರಿಗಳನ್ನ ಬಿಟ್ಟು ಉಳಿದ ಹವ್ಯಕರಿದಾರಲ್ಲ ಅವರೆಲ್ಲ ಸೇರಿ ಬೇರೆ ಮಠ ಮಾಡ್ಕೊಳೊ ಬಗ್ಗೆ ಏನಾದರೂ ಆಲೋಚನೆ ಮಾಡ್ಬೇಕು. ಇದರೊಳಗಂತೂ ಏನೂ ಇಲ್ಲ. ಎಲ್ಲಾ ಬಾವ ಬಾವ ಸ್ವಾಹ. ಶಕುನಿ ಮಾವ ಇದ್ದಾಂಗಿರೊ ಆ ಕುಲಪತಿ ಬಾವಯ್ಯನ್ನ ಒಂದ್ಸಲ ಎತ್ತಾಕ್ಕೊಂಡೋಗಿ ಏರೋಪ್ಲೇನ್ ನಲ್ಲಿ ಕೂರ್ಸಿ ಸನ್ಮಾನ ಮಾಡಿದ್ರೆ ಎಲ್ಲಾ ಗುಟ್ಟು ರಟ್ಟಾಗ್ತಿತ್ತು. ಒಂದ್ಸಲ ಎರಡ್ಮೂರು ಜನ ಮಾಣಿಗಳನ್ನ ಸರಿಯಾಗಿ ವಿಚಾರ್ಸ್ಕಂಡಿದ್ರೂ ಆಗ್ತಿತ್ತು.”

ತಿಮ್ಮಪ್ಪಣ್ಣನ ಮಾತು ಮುಂದುವರಿದೇ ಇತ್ತು. ರಸ್ತೆಯಲ್ಲಿ ಹೋಗಿಬರೋರೆಲ್ಲ ನಮ್ಮೊಳಗೆ ಏನೋ ಜಗಳ ನಡೀತಿದೆಯೋ ಎಂಬಂತೆ ನೋಡಿಯೇ ನೋಡಿದರು. ಕೆಲವು ಜನ ಹತ್ತಿರ ಬಂದಾಗ ನಾನು “ಏನಿಲ್ಲ ಯಾವ್ದೋ ಸುದ್ದಿ ಹೇಳ್ತಿದಾರೆ” ಎಂದು ಮುಗುಳ್ಕಕ್ಕು ಕಳುಹಿಸಿದೆ. ಸುಮಾರು ಅರ್ಧಗಂಟೆ ತನಕ ಮಾತನಾಡ್ತಾ ನನಗೆ ಮುಂದೆ ಹೋಗಲಿಕ್ಕೇ ಕೊಡಲಿಲ್ಲ. ಅವರು ಹೇಳಿದ್ದೆಲ್ಲ ಇನ್ನೂ ಭಾರೀ ಭಾರೀ ಮತುಗಳು. ಮಾತು ಮುಗಿಸಿದಾಗ ಇರುವುದರಲ್ಲೆ ಸ್ವಲ್ಪ ನಿರಾಳರಾದ ಹಾಗೆ ಕಂಡಿತು. “ತಿಮ್ಮಪ್ಪಣ ಆನಿನ್ ಬರ್ಲಾ?” ಅಂದೆ. ಸರಿಯಾಗಿ ಹೂಂ ಎಂದರೋ ಇಲ್ಲವೋ ನಾನು ಮುಂದೆ ಹೋದೆ.

ಕವಳದ ಗೋಪಣ್ಣ ಹೇಳಿದ ಪವಾಡದಗಳ ಸಾಲಿನ ಇನ್ನೊಂದು ಕತೆ. “ಎಮ್ಮನೆ ಟೋಟದ ಬಾವಿಯೊಳಗೆ ಕಳೇದ ಬೇಸಗೆಲಿ ನೀರು ಇಂಗಿ ಹೋಗಿತ್ತು ಮಾರಾಯ. ಹ್ಯಾಂಗೂ ಇರ್ಲಿ ಹೇಳಿ ಮಂತ್ರಾಕ್ಷತೆ ತಕಂಡ್ಬಂದು ಹಾಕ್ಬುಟ್ಟಿದ್ದೆ. ಮಂತ್ರಾಕ್ಷತೆ ಹಾಕಿದ್ಮೇಲೆ ಗಟ್ಟಿಯಾಗೋದಕ್ಕೆ ಒಂದಷ್ಟ್ ದಿನ ಬೇಕಲ್ಲ? ಅಷ್ಟರಲ್ಲೇ ಮಳೆಗಾಲ ಬಂದದ್ದೆ ನೋಡು ಎಂತಾ ನೀರು ಗೊತ್ತಾ? ನೀರು ತುಂಬಿ ಹೊರಗೆ ಹರಿಯೋಕೆ ಶುರುವಾಗಿಬಿಡ್ತು.

ಇನ್ನೊಂದ್ ಪವಾಡ ಹೇಳ್ತಿ ಕೇಳು. ಕೆಲವು ಕಡೆ ಬೀಜಮಂತ್ರಾಕ್ಷತೆ ಹಾಕಿದ್ದು ಗಟ್ಟಿ ಆಪ್ಲೆ ಒಂಬತ್ತು ತಿಂಗಳ ತಗೈಂದು. ಈಗ ಮರಿಗಳಿಗೆಲ್ಲ ಬಯಾಲಜಿಕಲ್ ಅಪ್ಪ ಇವ್ನೇಯ. ಹಲವು ಶಿಷ್ಯರಿಗೆ ಬಯಾಲಜಿಕಲ್ ಅಳಿಯನೂ ಹೌದು. ಇಷ್ಟ್ ಸಾಧನೆ ಸಾಕಾಗ್ದನ?”

Thumari Ramachandra

source: https://www.facebook.com/groups/1499395003680065/permalink/1595035364116028/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s