ಹನ್ನೊಂದುಲಕ್ಷ ಜನರ ಸಮುದಾಯ ಇಬ್ಭಾಗವಾಯಿತು ಎನ್ನುತ್ತ ಕಣ್ಣೀರಾದರು

ಹನ್ನೊಂದುಲಕ್ಷ ಜನರ ಸಮುದಾಯ ಇಬ್ಭಾಗವಾಯಿತು ಎನ್ನುತ್ತ ಕಣ್ಣೀರಾದರು

ಎರಡು ತಿಂಗಳ ಹಿಂದೆ ಊರಿಗೆ ಬಂದಿದ್ದಾಗ ಸಿಕ್ಕಿದ್ದ ಒಬ್ಬ ಸದ್ಗೃಸ್ಥರಿಗೆ ದೂರದೇಶದಿಂದ ಬರುವ ನನ್ನಂತ ಕೆಲವರನ್ನು ಕಂಡರೆ ಬಹಳ ಪ್ರೀತಿ.ಯಾಕೋ ಅಸಹಾಯಕತೆಯಲ್ಲಿರುವಂತೆ ಚಡಪಡಿಸುತ್ತಿದ್ದರು. ಹವ್ಯಕ ಸಮುದಾಯದ ಬಗ್ಗೆ ಅಪಾರ ಕಾಳಜಿ ಮತ್ತು ಅಭಿಮಾನ ಇರಿಸಿಕೊಂಡಿದ್ದ ಅವರ ಕಣ್ಣುಗಳು ಮಾತಿಗೆ ಮೊದಲೇ ಮಂಜುಗಟ್ಟಿದ್ದವು.

“ದೇಶದ ಜನಸಂಖ್ಯೆ 130 ಕೋಟಿ. ಅದರಲ್ಲಿ ಎಲ್ಲಾ ಬ್ರಾಹ್ಮಣರೂ ಸೇರಿ 5.6 ಕೋಟಿ. ಹವ್ಯಕರ ಸಂಖ್ಯೆ ಒಟ್ಟೂ ಬರೀ ಹನ್ನೊಂದು ಲಕ್ಷ. ಬುದ್ಧಿವಂತರು, ಸಜ್ಜನರು, ಸುಸಂಸ್ಕೃತರು, ಆಚಾರವಂತರು, ವಿಶ್ವಾಸಾರ್ಹರು, ಅತಿಥಿಸೇವಾ ಮನೋಭಾವದವರು ಎಂದೆಲ್ಲ ಹೆಸರು ಪಡೆದಿದ್ದ ಜನಾಂಗ ಇಂದು ಈ ಕಪಟಿಯ ದೆಸೆಯಿಂದ ಇಬ್ಭಾಗವಾಗಿದೆ. ಮನೆಮನೆಯಲ್ಲೂ ಗಂಡ ಹೆಂಡಿರು ಮಕ್ಕಳಲ್ಲೂ ಸಹ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದೆ. ಇಡೀ ದೇಶದಲ್ಲಿ ಎಲ್ಲೇ ಹೋದರೂ ಹವ್ಯಕರಿಗೊಂದು ಗೌರವವಿತ್ತು. ಮೋಸದ ಜನ ಅಲ್ಲವೆಂಬ ಭಾವನೆ ಎಲ್ಲರಲ್ಲೂ ಇತ್ತು.

ಯಾರನ್ನೂ ಹಾಗೆಲ್ಲ ನಂಬದ ಉತ್ತರದ ಜನರನ್ನೆಲ್ಲ ನಂಬಿಸಿ ಹೇರಳವಾಗಿ ಹಣ ಹೊಡೆದುಕೊಂಡರು. ನೂರೆಂಟು ರೀತಿಯ ಸೇವೆ ಎನ್ನುತ್ತ ಹಲ್ಲುಗಿಂಜಿ ಹಲವು ಖ್ಯಾತನಾಮ ಉದ್ಯಮಪತಿಗಳಿಂದ ಸಾಧ್ಯವಾಗಬಹುದಾದ ಎಲ್ಲಾ ವಿಧದಲ್ಲೂ ಹಣವನ್ನು ಹೊಡೆದರು. ಅತ್ಯಂತ ಶ್ರದ್ಧಾ ಭಕ್ತಿಗಳಿಂದ ನಡೆದುಕೊಂಡ ಅನ್ಯಜನಾಂಗೀಯ ಪ್ರಮುಖರ ಕಿವಿಗಳ ಮೇಲೆ ಕೊನೆಗೂ ಪ್ಲಾಸ್ಟಿಕ್ ಹೂವಿಟ್ಟು ಹವ್ಯಕರು ನಂಬುಗೆಗೆ ಅರ್ಹರಲ್ಲ ಎನಿಸಿಬಿಟ್ಟರು.

ಬೇರೇ ಯಾವುದೇ ಜನಾಂಗದಲ್ಲಾದರೂ ಇಂತಹ ಸನ್ನಿವೇಶ ಎದುರಾಗಿದ್ದರೆ ಇಷ್ಟೊತ್ತಿಗೆ ಇಂವ “ಆ ಒಂದು ಆ ಎರಡು ಆ ಮೂರು” ಎಣಿಸಬೇಕಾಗ್ತಿತ್ತು. ಹವ್ಯಕರಾದ್ದರಿಂದ ಅತ್ಯಂತ ಸಹನೆಯಿಂದ ದಿನದೂಡಿದರು. ಒಂದೊಮ್ಮೆ ಇಂವ ಜೈಲಿಗೆ ಹೋದರೆ ಇಡೀ ಸಮಾಜವೇ ಶಾಶ್ವತವಾಗಿ ತಲೆತಗ್ಗಿಸಬೇಕಾಗುತ್ತದೆ ಎಂಬುದು ಪರ ಮತ್ತು ವಿರೋಧಿ ಎಂಬೆರಡು ಬಣಗಳಲ್ಲಿರುವ ಸದ್ಗುಣೀ ಹವ್ಯಕರಿಗೆ ಇಲ್ಲಿಯವರೆಗಿದ್ದ ಸಾಮಾನ್ಯ ಸಮಸ್ಯೆ. ಹೇಗೂ ಹೋಗುವುದೆಲ್ಲಾ ಹೋಗಿಬಿಟ್ಟಿದೆ ಎಂಬುದು ಅರ್ಥವಾದ ನಂತರ ತಪ್ಪಿತಸ್ಥನಿಗೆ ಶಿಕ್ಷೆ ಆಗಲೇಬೇಕೆಂಬುದು ಒಟ್ಟಾರೆ ಸಮುದಾಯದಲ್ಲಿ ಧ್ವನಿತವಾಗಿದೆ.

ಹಲವಾರು ಬ್ಯಾಂಕುಗಳಲ್ಲಿ ಬೇನಾಮಿ ಖಾತೆಗಳಲ್ಲಿ ಕೋಟ್ಯಾವಧಿ ದುಡ್ದು ಇಟ್ಟಿರುವುದು, ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರದಲ್ಲಿ ಬೇನಾಮಿ ಹೆಸರುಗಳಲ್ಲಿ ಜಾಗ ಖರೀದಿಸಿದ್ದು ಮತ್ತು ಬೆಂಗಳೂರಿನ ವರ್ತೂರಿನ ಸುತ್ತಮುತ್ತ ಜೊತೆಗೆ ಮೈಸೂರಿನಲ್ಲಿ ಪೂರ್ವಾಶ್ರಮ [ಪಶ್ಚಿಮಾಶ್ರಮ ಉತ್ತರಾಶ್ರಮ ದಕ್ಷಿಣಾಶ್ರಮ ಎಲ್ಲಾ ಆಶ್ರಮ]ದಲ್ಲಿ ಬಳಸುತ್ತಿದ್ದ ಹೆಸರುಗಳಲ್ಲಿ ನಿವೇಶನಗಳನ್ನು ಖರೀದಿಸಿದ್ದು ಎಲ್ಲವನ್ನೂ ಗಮನಿಸಿದರೆ ನಾಳೆ ಬಿಟ್ಟು ಹೊರಟರೂ ಬಾವ ನೆಂಟ ಇಬ್ಬರೂ ಸಾವಿರ ಕೋಟಿಗಳ ಸರದಾರರಾಗಿ ಬದುಕುವಷ್ಟು ಸಾಧನೆ ಮಾಡಿದ್ದಾರೆ. ಸಂಸ್ಥೆಗೆ ಸಾಲಮಾಡಿಟ್ಟು ಹೊರೆಯನ್ನು ಶಿಷ್ಯ ಸಮುದಾಯಕ್ಕೆ ಹೊರಿಸುತ್ತಾರೆ.

ವಿಶ್ವೇಶ್ವರಯ್ಯನವರ ಸಮಿತಿ ರಚಿಸಿ ಎಲ್ಲವನ್ನೂ ಖುಲಾಸೆಮಾಡಿಸಿಕೊಳ್ಳುವುದಕ್ಕೆ ಸಕಲ ವಿಧದಲ್ಲೂ ವಿಪರೀತ ಪ್ರಯತ್ನಿಸಿದ್ದಾರೆ. “ನಮ್ಮನ್ನು ಅವರೆಲ್ಲ ಚೆನ್ನಾಗಿ ನೋಡಿಕೊಂಡರು. ಕುರ್ಚಿಯಮೇಲೆ ಕೂರಿಸಿ ಅವರೆಲ್ಲ ನೆಲದಮೇಲೆ ಕೂತರು. ಅವರಿಗೆಲ್ಲ ನಾವು ತಪ್ಪು ಮಾಡಿಲ್ಲ ಎಂಬುದು ಗೊತ್ತು” ಎಂದು ಪರೀಕ್ಷೆಗೆ ಹೋಗಿಬಂದವ ಭಟ್ಟಂಗಿಗಳಲ್ಲಿ ಭೋಂಗುಬಿಟ್ಟು ಸಾಮಾಜಿಕ ಸಂದೇಶದಂತೆ ಹಬ್ಬಿಸಿದ್ದಾನೆ. ಹಾದರದ ಚಿಟ್ಟೆಯಿಂದ ಹವ್ಯಕ ಸಮಾಜ ಹಾದಿಯಲ್ಲಿ ಬಿತ್ತು” ಎಂದ ಅವರು ಕಣ್ಣೀರು ಹಾಕಿದರು.

ಬೇಸರಗೊಂಡ ಮನಸ್ಸಿಗೆ ಕವಳದ ಗೋಪಣ್ಣ ಆಗಲೇ ಪವಾಡಗಳ ಬಗೆಗೆ ಹೇಳಿದ್ದ. ಮಲ್ಲಿಕಾ ಬಂದುಹೋದ ಮರುದಿನ ಬೆಳಿಗ್ಗೆ ಕೌಪೀನ ತೊಳೆಯಲು ಹೊರಟ ಮಾಣಿಗೆ ರಬ್ಬರ್ ಹಾಗಿರುವ ಗಮ್ಮು ಕಾಣಿಸಿತು. ಥೂ ಇಶ್ಶಿ ಗಬ್ಬುನಾತ ಎಂದುಕೊಂಡು ಎಷ್ಟು ತೊಳೆದರೂ ಹೋಗದ ಕಾರಣ ಹಾಗೇ ಇಟ್ಟರೆ ಬೈದಾರೆಂದು ಚಿಂತಾಕ್ರಾಂತನಾದ ಮಾಣಿ ಎರಡು ಮಂತ್ರಾಕ್ಷತೆ ಒಗೆದುಕೊಂಡಿದ್ದಷ್ಟೇ ಗೊತ್ತು. ಒಂದು ಬಿಲ್ಲೆ ಸರ್ಫ್ ಎಕ್ಸೆಲ್ ಸೋಪು ಖಾಲಿಯಾಗುವುದರೊಳಗೆ ಗಮ್ಮು ಮಂಗಮಾಯ.

Thumari Ramachandra

source: https://www.facebook.com/groups/1499395003680065/permalink/1594139600872271/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s