ಮುಂಗೈಯಿಂದ ತಬಲಾ ಬಾರಿಸಿದ್ದು ಕಂಡ ಛಾಯಾಚಿತ್ರ ಗ್ರಾಹಕ ಮತ್ತೆಂದೂ ಅಲ್ಲಿಗೆ ಹೋಗಲಿಲ್ಲ

ಮುಂಗೈಯಿಂದ ತಬಲಾ ಬಾರಿಸಿದ್ದು ಕಂಡ ಛಾಯಾಚಿತ್ರ ಗ್ರಾಹಕ ಮತ್ತೆಂದೂ ಅಲ್ಲಿಗೆ ಹೋಗಲಿಲ್ಲ

ಗೋಪಣ್ಣ ಸಿಕ್ಕಾಗಲೆಲ್ಲಾ ಈಗೀಗ ಇದೇ ಸುದ್ದಿ. ನಮ್ಮ ಗೋಪಣ್ಣಂಗೆ ಪಾಪ ರೈತ ಐಪ್ಯಾಡು ಸ್ಕೈಪು ಬಳಸಿ ಗೊತ್ತಿಲ್ಲ. ಪಕ್ಕದ ಮನೆ ಮಾಣಿ ಸುನಿಲ ಕಾಲೇಜಿಗೆ ಹೋಗಿ ಬಂದ್ಮೇಲೆ ಎಲ್ಲಾದ್ರೂ ಸಮಯ ಇದ್ರೆ ಅವನ ದಯೆ ಇದ್ರೆ ಅವನದ್ದೇ ಸ್ಕೈಪ್ ಮೂಲಕ ನನ್ನೊಡನೆ ಮಾತಾಡೋದಿದೆ. ಕವಳದ ತಂಬೂರಿ ಗೋಪಣ್ಣ ಅದರಲ್ಲೇ ನಿತ್ಯತೃಪ್ತನಾಗಿದ್ದರಿಂದ ಸಮಾಜದಲ್ಲಿ ನಿರುಪದ್ರವಿ ಎನಿಸಿದ್ದಾನೆ. ಇಲ್ಲಾಂದ್ರೆ ನಮ್ಮ ನಡುಗಡ್ಡೆಲಿ ಏನೆಲ್ಲಾ ನಡೆಸೋ ಜನ ಇದ್ದಾರೆ ಅಂತ ಹೇಳೋದೇ ಕಷ್ಟ. “ಅಲ್ದ ರಾಮು ಅದ್ಯಂತದೋ ರಾಂಪ್ರಸಾದ್ವಡ ಅದ್ಯೆಲ್ಲಿ ಸಿಗ್ತ ಮಾರಾಯ? ಎಲ್ಲಾರೂ ಸಿಕ್ಕ್ರೆ ಯನಗೊಂದಷ್ಟು ಬೇಕಾಗಿತ್ತ. ಹುಟ್ಟಿ ಇಷ್ಟ ವರ್ಷಾದ್ರೂ ಯಂಗ್ಳಿಗೆ ವಶೀಕರಣ ಬರದೇ ಬರೇ ವೇಸ್ಟ್ ಬಾಡಿಗಳಾಗ್ಬುಟಿದ್ಯ ನೋಡ” ಅಂದವನೇ ಗಿಕ್ಕಿ ಗಿಕ್ಕಿ ನಗೋದಕ್ಕೆ ಆರಂಭಿಸಿದ.

“ಅದ್ಯಾವ್ದೋ ನಗರದ ಕಡೆ ’ಹಾವಾಡಿಗರ’ ಒಕ್ಕೂಟ ರಾಂಪ್ರಸಾದ ತಯಾರ್ಸ್ತಡ, ಯನಗೂ ಈಗೀಗ್ಲೇ ಗೊತ್ತಾಗ್ತಾ ಇದ್ದು. ಲೈಸೆನ್ಸ್ ಇಲ್ದಿದ್ರಿಂದ ಅದಕ್ಕೆ ಸರಿಯಾದ ವಿಳಾಸ ಗಿಳಾಸ ಇಲ್ಯಡ. ಒಂದೊಮ್ಮೆ ಸಿಕ್ಕಿರೆ ಹೇಳ್ತಿ ತಗಳ” ಅಂದೆ.

ನಂತರ ಗೋಪಣ್ಣನಿಗೆ ನಾನೊಂದು ಘಟನೆ ಹೇಳಿದೆ. ನಗರದ ಮೈದಾನದಲ್ಲಿ ಮೂವರು ಹವ್ಯಕ ಸುಂದರಿಯರು ನಿಂತಿದ್ರಂತೆ. ಅವರಲ್ಲಿ ಒಬ್ಬಳು ಇನ್ನಿಬ್ರಿಗಿಂತ ಸ್ವಲ್ಪ ಆಭರಣ ಸುಂದರಿ. “ಅಯ್ಯೋ ಯೆನಗೆ ರಾಂಗ್ ವೇಷ ತುಂಬಾ ಕ್ಲೋಸು. ನಿತ್ಯ ಫೋನ್‍ನಲ್ಲೇ ಮತಾಡ್ತಾ ಇರ್ತ ಅವು” ಎಂದು ಪರಸ್ಪರ ಮಾತಾಡಿಕೊಳ್ತಿದ್ದ ಅವರೆದುರು ನಿಂತು ಅದೂ ಇದೂ ಮಾತಾಡ್ತಾ ಇದ್ದ ರಾಂಗ್ ವೇಷ ಆಭರಣ ಸುಂದರಿಯ ಕಂಠೀಹಾರವನ್ನು ಹಿಡಿದು ನೋಡುವ ನೆಪದಲ್ಲಿ ಮುಂಗೈಲೇ ತಬಲಾ ಬಾರಿಸಿದ್ದನ್ನು ಸ್ಥಳದಲ್ಲೇ ಇದ್ದ[ಮತ್ತು ಅಲ್ಲಿನವರೆಗೂ ರಾಂಗ್ ವೇಷದ ಖಾಸಾ ಶಿಷ್ಯನಾಗಿದ್ದ]ಫೋಟೊ ಗ್ರಾಫರ್ ಕಂಡುಬಿಟ್ಟ. ಮರುಕ್ಷಣದಲ್ಲೇ ಯಾವ್ದೋ ಅರ್ಜೆಂಟ್ ಕಾಲ್ ಅಂತ ಹೇಳಿದೋನೇ ಬೆಂಗಳೂರ್ ಕಡೆ ಹೊರಟುಹೋದನಂತೆ. ನಂತರ ರಾಂಗ್ ವೇಷದ ನೆನಪಾದ್ರೂ ಸಾಕು ಉರಿದುರಿದು ಬೀಳ್ತಾನಂತೆ ಅಂತ ಅವನ ಹತ್ತರದವರು ಹೇಳಿದರು. ಬನಾರಿ ಬಾವಯ್ಯ ಹೇಳಿದ ಕತೆಯಲ್ಲಿ “ಹನುಮ ಹಾರಿದ ಹಾರಿದ ಹಾರಿದಾ ಹಾರಿದಾ….. ಹಾ…ರಿ ಹೋಗಿ ಲಂಕೆ ಸೇರಿದ” ಎನ್ನುವ ಸಾಲು ನೆನಪಿಗೆ ಬರ್ತಾ ಇದೆ. ಲಂಕೆ ಸೇರಿದ ಹನುಮ ನಂತರ ಮರಳಿ ಬಂದಿದ್ದ. ಆದರೆ ಫೋಟೋಗ್ರಾಫರ್ ಹನುಮ ಈ ರಾಮ ನಿಜವಾದ ರಾಮನ ಭಕ್ತ ಸಹ ಅಲ್ಲ ಎಂಬುದನ್ನು ಅರಿತವನೇ ಮತ್ತೆಂದೂ ಅಲ್ಲಿಗೆ ಮರಳಲಿಲ್ಲ.

“ಅಲ್ದ ಗೋಪಣ್ಣಾ, ಇವು ಮನೆ ಕಟ್ಟಿಸಿಕೊಟ್ಟಿದ್ದೆಂತ ಇವರ ಹಣದಗನ? ಯಾರದೋ ದುಡ್ಡು ರಾಂಗ್ ವೇಷದ ಜಾತ್ರೆ ಅದು. ಯಡ್ಯೂರ್ ಕೃಪೆಯಿಂದ ಮನೆಗಳ ನಿರ್ಮಾಣ ಅಗಿದ್ದನ್ನೆ ಇವರು ತಾವು ಕೊಟ್ಟಿದ್ದು ಅಂತಾರಲ್ಲ ಮಾರಾಯ” ಅಂದೆ.

“ರಾಮು, ಎಲ್ಲಾನೂ ಹಂಗೇಯ ಮಾರಾಯ. ಕಳೆದ ಆರೇಳ್ ತಿಂಗಳಿನಿಂದ ಬಾಲಬಡುಕ ಮರುಳು ಚಿತ್ರದೋರು, ಛದ್ಮ ವೇಷದೋರು, ಮಹಾಕವಿಗಳು, ಅಸ್ಥಾನ ವಿದ್ವಾನ್‍ರು, ಆಸ್ಥಾನ ನರ್ತಕಿಯರು, ’ಪ್ರಸಾದ’ದ ಗಂಧಗಾಳಿ ಗೊತ್ತಿಲ್ದ ಪ್ರಸಾಧನದೋರು ಎಲ್ಲಾ ಖಾಲೀ ಹೊಡೀತಾ ಇದ್ವ. ಅವರ್ನೆಲ್ಲಾ ಕರ್ಸ್ಕೆಂಡು ಆನಾರು ಎಂತಾರು ಕತೆ ಶುರುಹಚ್ಕಬುಡ್ಲಾಗಿತ್ತನ ಮಾರಾಯ. ಅಂತ ಟೆಂಟಿನ ನಾಟಕಕ್ಕೆ ಒಂದಷ್ಟ್ ಜನ ಅಂತೂ ಬಂದೇ ಬತ್ತ. ಹೆಂಗೆ ಯನ್ ಐಡಿಯಾ?”

“ಅದಿರ್ಲಿ ತಗ ಗೋಪಣ್ಣ ಈಗ ’ಅಖಿಲ ಭಾರತ ಪ್ರಸಾದ ತಯಾರಕ ’ಹಾವಾಡಿಗರ’ ಒಕ್ಕೂಟ ಮಹಾಮಂಡಲ ನಿಗಮ (ಅನಿಯಮಿತ) ತಯಾರಾಯ್ದು. ಅದರ ಸಮಿತಿ ಹೀಂಗಿದ್ದು ನೋಡು

ಸನ್ಮಾನ್ಯ ಶ್ರೀ ಸುರಸುಂದರ್ ರಾಂಗ್ ವೇಷ –ಸಂಸ್ಥಾಪಕ ಅಧ್ಯಕ್ಷರು ಮತ್ತು ಶಾಶ್ವತ ಸಂಚಾಲಕರು
ಸನ್ಮಾನ್ಯ ಶ್ರೀ ಮಡದಿ ಸತ್ಯಾನಂದಜೀ ಮಹಾರಾಜ್—ಉಪಾಧ್ಯಕ್ಷರು ಮತ್ತು ವಿದೇಶಾಂಗ ವಿಭಾಗದ ಮುಖ್ಯಸ್ಥರು
ಸನ್ಮಾನ್ಯ ಶ್ರೀ ಕಾಳಿ ಕಬಾಬ್ ಯತಿಗಳು –ಖಜಾಂಚಿ[ಕಳ್ಳರಲ್ಲೇ ಇನ್ನೂ ಕಳ್ಳ ಎನಿಸಿದವರ ಕೈಲೇ ಬೀಗ ಕೊಡಬೇಕಲ್ಲ?]
ಸನ್ಮಾನ್ಯ ಶ್ರೀ ಅಸರಾಂ ಸುತರಾಂ ನಕರಾಪಾಪು—ಲೇಸರ್ ತಾಂತ್ರಿಕತೆಯ ಸಲಹೆಗಾರರು
ಸನ್ಮಾನ್ಯ ಶ್ರೀ ರಾಂಪಾಲ್ ಮಹರ್ಷಿಗಳು—ಕಾನೂನು ಸುವ್ಯವಸ್ಥೆ ಮತ್ತು ರಕ್ಷಣಾ ವಿಭಾಗದ ಅಧ್ಯಕ್ಷರು
ಸನ್ಮಾನ್ಯ ಶ್ರೀ ಭಗವತೀ ಪತ್ನೀ ಸಮೇತ ಹಲ್ಕಾ ಅಪ್ಪ ಭಗವಾನರು—ಗೌರವ ಸಲಹೆಗಾರರು

.
.
.

ಪಟ್ಟಿ ಇನ್ನೂ ಮುಗ್ಯಲ್ಯೋ ಮತೆ, ತಾವಾಗೇ ಬಂದು ಸೇರೋರಿಗೆಲ್ಲಾ ಮುಕ್ತ ಹಸ್ತದ ಸ್ವಾಗತ ಇದ್ದು ಹೇಳಿ ಶಾಶ್ವತ ಸಂಚಾಲಕರ ಭಾಷಣ ಆಯ್ದು. ಅಗತ್ಯ ಬಿದ್ರೆ ಬೇಕಾಗ್ತು ಹೇಳೇ ಹತ್ ಹನ್ನೆರಡು ವರ್ಷಗಳ ಹಿಂದೆ ಗುಡಗುಡಿ ಭಂಗಿ ಸೇದೋರ್ನೆಲ್ಲಾ ಕರಿಸಿ ಹೋಮ ಸುಡಲ್ಯನು? ಅಲ್ಲಿಂದೆಲ್ಲಾ ಬರವಿದ್ದ. ಸಮಿತಿ ಬಲಾಬಲ ಕಮ್ಮಿಯೇನಿಲ್ಲೆ. ಹದಿನೆಂಟ್ ವರ್ಗದೋರು ಬರ್ದೇ ಇದ್ರೂ ಗುಡಗುಡಿ ಭಂಗೀ ಬಾಬಾಗಳಂತೂ ಬತ್ವನ. ಅದೆಲ್ಲಾ ಸರಿ.. ಮಾಡದ್ ಪೂರ್ತಿ ಬ್ಯಾಡದೇ ಇರೋ ಕೆಲಸ ಆಗಿದ್ರಿಂದ್ಲೇಯ ಅಧಿಕೃತವಾದ ಕಚೇರಿ ಹೇಳಿ ಇಲ್ಲೆ. ಹಿಂದೆ ಓಸಿ ಹೇಳಿ ಅದೆಂತೊ ಇತ್ತಲ ಆಟ. ಅದ್ರಾಂಗೇಯ ಬರೇ ವಿಶ್ವಾಸದಲ್ಲೇ ನಡೀತು ವ್ಯವಹಾರ. ಛೆ ಛೆ ಬಾರೀ ಹೊತ್ತಾಗ್ಬುಡ್ಚು ಗೋಪಣ್ಣಾ, ಬರ್ಲಾ?”

ಗೋಪಣ್ಣ ಸ್ಕೈಪ್ ಇನ್ನೂ ನೋಡ್ತಾ ಇದ್ದನೋ ಗೊತ್ತಿಲ್ಲ. ನಾನಂತೂ ಲ್ಯಾಪ್ಟಾಪ್ ಮಡಚಿಟ್ಟು ಬೇರೆ ಕೆಲಸಕ್ಕೆ ತೆರಳಿದೆ.

Thumari Ramachandra

source: https://www.facebook.com/groups/1499395003680065/permalink/1593666304252934/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s