ಮನೆತನವೇ ಹಾಗಿದ್ದಾಗ ಅದರ ಘಾಟು ಇಲ್ಲದೇ ಇರೋದಾದ್ರೂ ಹೇಗೆ?

ಮನೆತನವೇ ಹಾಗಿದ್ದಾಗ ಅದರ ಘಾಟು ಇಲ್ಲದೇ ಇರೋದಾದ್ರೂ ಹೇಗೆ?

ಇದು ಯನಗೆ ಬಂದ ಇನ್ ಬಾಕ್ಸ್ ಮೆಸ್ಸೇಜು. “ನೀವು ಸಾಗರ ಕಡೆಯ ಹವ್ಯಕ ಭಾಷೆಯಲ್ಲಿ ಬರೆದರೆ ನಮಗೆ ಅರ್ಥ ಆಗೋದು ಕಷ್ಟ. ದಯಮಾಡಿ ಎಲ್ಲರಿಗೂ ಅರ್ಥವಾಗುವ ರೀತಿ ಬರೆದರೆ ಅನುಕೂಲ.” ಈ ಕಾರಣದಿಂದ ಇಂದಿನಿಂದ ಅಪರೂಪಕ್ಕೊಮ್ಮೆ ಏನಾದರೂ ಬರೆದರೆ ಆದಷ್ಟು ಎಲ್ಲರಿಗೂ ಅರ್ಥವಾಗುವ ಭಾಷೆಯಲ್ಲಿ ಆಗಾಗ ಬರೆಯುತ್ತೇನೆ.

ರಾಮ ಯಾರು ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ ಎಂದು ಟಿವಿಯಲ್ಲಿ ತರ್ಕ ನಡೀತಿತ್ತು. ಅದರಲ್ಲಿ ಪಂಡಿತರು, ಅರೆಪಂಡಿತರು ಎಲ್ಲರೂ ಇದ್ದರು. ಭಗವಾನ್ ಎಂಬಾತ ರಾಮನ ಮೇಲೆ ನಡೆಸಿದ ವಾಗ್ದಾಳಿಯ ಬಗ್ಗೆ ಅಲ್ಲಿ ತರ್ಕ ನಡೆಯುತ್ತಿತ್ತು. ಅದನ್ನು ನೋಡಿದಾಗ ನನಗೆ ಅನಿಸಿದ್ದೇನೆಂದರೆ ಮುಂದಿನ ವರ್ಷದೊಳಗೆ ಕಿರೀಟೋತ್ಸವ ಆಗದೇ ಇದ್ದರೆ ಆ ಭಗವಾನನಿಗೇ ಸಕಲಕಲಾ ಸಾರ್ವಭೌಮ ಪ್ರಶಸ್ತಿ ಕೊಟ್ಟು ಪುರಸ್ಕರಿಸಲಾಗುತ್ತದೆ. ಇದನ್ನು ಅರ್ಥಮಾಡಿಕೊಳ್ಳುವ ಮೊದಲು ನಿಜವಾದ ರಾಮ ಯಾರು ಮತ್ತು ಕಳ್ಳ ರಾಮ ಯಾರು ಎಂಬುದನ್ನು ತಿಳಿದುಕೊಳ್ಳಬೇಕು. ರಾಮನ ಹೆಸರನ್ನು ಪ್ರಿಫಿಕ್ಸ್ ಮತ್ತು ಸಫಿಕ್ಸ್ ಮಾಡಿ ಜಲರಾಮ, ಸಾಯಿರಾಮ, ಮಂಗಾರಾಮ, ಗಂಗಾರಾಮ, ಹಳದೀರಾಮ ಮೊದಲಾದ ಚಿತ್ರ ವಿಚಿತ್ರ[ಅಥವಾ ಚಿತ್ರಾನ್ನದ] ಹೆಸರನ್ನು ಬಳಸಿಕೊಳ್ಳಲಾಗಿದೆ. ಅದು ಅವರವರ ಇಷ್ಟ ಮತ್ತು ಹಕ್ಕು ಬಿಡಿ. ಆದರೆ “ರಾಮ ಮದ್ಯ ಸೇವನೆ ಮಾಡುತ್ತಿದ್ದ ಮತ್ತು ಸೀತೆಗೂ ಮದ್ಯ ಸೇವನೆ ಮಾಡಿಸಿಕೊಂಡು ಸರಸವಾಡುತ್ತಿದ್ದ. ರಾಮ ಏಕಪತ್ನೀ ವ್ರತಸ್ಥನಲ್ಲ” ಎಂಬೆಲ್ಲಾ ಹೇಳಿಕೆಯನ್ನು ಶ್ರೀಮಾನ್ ಶ್ರೀ ಶ್ರೀ ಶ್ರೀ ಭಗವಾನ್ ಕೊಟ್ಟಿರುವುದರಿಂದ, ಸಮಾಜದಲ್ಲಿರುವ ಕಳ್ಳ ರಾಮರಿಗೆಲ್ಲ ಅದರಿಂದ ಭೀಮ ಬಲ ಬಂದಂತಾಗಿದೆ. ಶ್ರೀರಾಮನೇ ಹಾಗೆಲ್ಲಾ ಇದ್ದನೆಂದಾದ ಮೇಲೆ ನಾವೆಲ್ಲಾ ಹಾಗಿದ್ದರೆ ತಪ್ಪೇನು ಎಂಬ ಉಡಾಫೆಯ ವಾಗ್ಝರಿಗೆ ಆಧಾರ ಸಿಕ್ಕಂತಾಗಿದೆ.

ವಾಸ್ತವ ಸಂಗತಿ ನಿಮೆಗೆಲ್ಲ ಗೊತ್ತೋ? ಲಕ್ಮೀನಾರಾಯಣ ಬಾವಯ್ಯನವರು ಕೇವಲ ಜಾತಕದ ಸುದ್ದಿ ಬರೆದರು. ಅದಷ್ಟೇ ಅಲ್ಲ. ಸನ್ಯಾಸಕ್ಕೆ ಆಯ್ಕೆ ಮಾಡುವಾಗ ಮೂರು ಜನರನ್ನು ಫೈನಲ್ ಲಿಸ್ಟಿನಲ್ಲಿ ಇರಿಸಿಕೊಂಡಿದ್ದರು. ಅದರಲ್ಲಿ ಧಾರವಾಡದಲ್ಲಿ ಹೆಸರುವಾಸಿಯಾಗಿದ್ದ ಭಾಲಚಂದ್ರ ಶಾಸ್ತ್ರಿಗಳಲ್ಲಿ ವೇದ ಮತ್ತು ಶಾಸ್ತ್ರಾರ್ಥ ಗ್ರಂಥಗಳನ್ನು ಕಲಿತ ಘಟ್ಟದ ಕೆಳಗಿನ ವ್ಯಕ್ತಿಯೋರ್ವರೂ ಇದ್ದರು. ಎಲ್ಲಾ ವಿಧದಲ್ಲೂ ಆ ವ್ಯಕ್ತಿ ಆಯ್ಕೆಯಾಗಿದ್ದರೂ ಅವರ ಅಮ್ಮನಿಗೆ ಬಿಳಿ ತೊನ್ನು ಇದೆಯೆಂಬ ಕಾರಣಕ್ಕೆ ಅವರನ್ನು ಕೈಬಿಡಲಾಯಿತು. ನನಗೆ ಈ ವಿಷಯವನ್ನು ಅಧಿಕೃತ ಮುದಿಶಿಷ್ಯರೊಬ್ಬರು ಹೇಳಿದ್ದಾರೆ. ಜಾತಕವನ್ನೇ ಬದಲಾಯಿಸಿಕೊಂಡು ಬಣ್ಣಬಣ್ಣದಲ್ಲಿ ಮಿಂಚಿದ ರಾಂಗ್ ವೇಷವನ್ನು ಆಯ್ಕೆಮಾಡಲಾಯಿತು. ಆಯ್ಕೆಯ ನಂತರದ ಈರುಳ್ಳಿ ಉಪ್ಪಿಟ್ಟಿನ ಕತೆಯನ್ನು ಸಚ್ಚಿದಾನಂದ ಬಾವಯ್ಯನವರು ಆಗಲೇ ಎಲ್ಲರಿಗೂ ಬಡಿಸಿದ್ದಾರೆ. ಮನೆತನವೇ ಹಾದರಕ್ಕೆ ಹೆಸರುವಾಸಿಯಾಗಿದ್ದರಿಂದ ಮನಸ್ಸಿಗೆ ತೊನ್ನು ಇರುವ ವ್ಯಕ್ತಿಯನ್ನು ಆಯ್ಕೆಮಾಡಲಾಯಿತು ಎಂಬುದು ಗೊತ್ತಾಗುತ್ತದೆ. ಅಲ್ಲಿಂದೀಚೆಗೆ ನಡೆದದ್ದೆಲ್ಲವೂ ರಾಂಗ್ ವೇಷದ ರಾಂಗ್‍ರಾಂಗ್ ವೇಷಗಳೇ.

ವಿದ್ಯಾರ್ಥಿ ವೇಷದಲ್ಲಿದ್ದಾಗ ಬೀಚ್‍ಬದಿಯಲ್ಲಿ ಅವರ ಫ್ರೆಂಡು ನಡೆಸಿದ ಕೆಲವು ಕತೆಗಳನ್ನು ಕೇಳಿದರೆ ಭಗವಾನ್ ಖಂಡಿತ ಪುಳಕಿತರಾಗುತ್ತಾರೆ. ಹಾಲಕ್ಕಿ ಸಮಾಜದ ಮಹಿಳೆಗೆ ಮಗುವನ್ನು ಕರುಣಿಸಿದ ಖ್ಯಾತಿಯೂ ಇತ್ತೀಚೆಗೆ ಗುಸುಗುಸು ಹರಿದಾಡುತ್ತಿದೆ. “ಯನಗನಿಸಿದ ಮಟ್ಟಿಗೆ ಐದಾರು ಮಕ್ಕಳ ಡಿಎನ್‍ಎ ತಗ್ಸಿರೆ ಎಲ್ಲಾ ಪಕ್ಕಾ ಆಗೋಗ್ತು” ಅಂತ ಗೋಪಣ್ಣನ ಹೇಳಿದ್ದಾನೆ. “ಚಾಲುಕ್ಯರ ಕಾಲದ ಹೋಟೆಲ್‍ನಲ್ಲಿ ಇದರ ಬಗ್ಗೆ ಬಂದೋಬಸ್ತು ನಡೆದಿದೆಯಂತೆ” ಅಂತ ಗೋಪಣ್ಣ ಹೇಳಿದಾಗ ಆ ಕಾಲದಲ್ಲಿ ಹೋಟೆಲ್ ವ್ಯವಸ್ಥೆಯೇ ಇರಲಿಲ್ಲವೆಂದು ತಿಳಿಸಿ ಅದು ಹೋಟೆಲ್ ಹೆಸರಿರಬಹುದು ಎಂದು ಹೇಳಿದೆ. ಮಕ್ಕಳು ಮರಿಗಳ ಬಗ್ಗೆ ನನಗೆ ತಿಳಿಯದ್ದರಿಂದ ಯಾವಾಗ ಅರುಣೋದಯವಾಗಿ ಎಲ್ಲವೂ ಗೊತ್ತಾಗಬಹುದು ಎಂಬ ಕುತೂಹಲದಲ್ಲಿದ್ದೇನೆ.

ಎರಡು ತಿಂಗಳ ಹಿಂದೆ ನಾನು ಊರಿಗೆ ಬಂದಿದ್ದಾಗ ಹಳ್ಳಿ ಹರಟೆಗೆ ಗೋಪಣ್ಣ ಸಿಕ್ಕಿದ್ದ. ಕೋಗಾರ್ ಘಾಟಿಯಲ್ಲಿ ಸಿಗುವ ಕಾಡಿನ ಮಧ್ಯದಲ್ಲಿ ವಾಹನ ಹೋಗದ ದೂರದಲ್ಲಿ ನಡೆಸಿದ ವಾಮಾಚಾರದ ಹೋಮಗಳ ಬಗೆಗೆ ನಿಮಗೆಲ್ಲ ತಿಳಿದಿಲ್ಲವೆಂದುಕೊಳ್ಳುತ್ತೇನೆ. ಶ್ಯಾಮ ಶಾಸ್ತ್ರಿ ಸತ್ತದ್ದು ಶಾಪದಿಂದ ಎಂದು ಕತೆ ಹೆಣೆದ ಜನ ಮುಂಬೈಯಲ್ಲಿ ಆ ಕುಟುಂಬಕ್ಕೆ ಸಂಬಂಧಿಸಿದ ಮಗುವೊಂದು ಕುಳಿತಲ್ಲೇ ಹಾರ್ಟ್ ಫೇಲಾಗಿ ಸತ್ತುಹೋಯಿತು ಎಂದೂ ’ಪವಾಡ’ದ ಪುಂಗಿ ಊದಿದ್ದರು. ಪವಾಡಗಳ ಸಾಲು ಒಂದೆರಡಲ್ಲ. ’ರಾಮಾಯಣ ಮಹಾನ್ವೇಷಣ’ದ ಬದಲಾಗಿ ’ರಾಂಗಾನುಗ್ರಹ’ ಪವಾಡದ ಗ್ರಂಥಕ್ಕೇ ಸರಸ್ವತೀ ಸಮ್ಮಾನ್ ಬರುತ್ತದೆ ಎಂಬುದು ಕಾಶೀ ವಿಶ್ವೇಶ್ವರನ ನಿರೀಕ್ಷೆಯಾಗಿತ್ತೇ? ಪ್ರಶಸ್ತಿ ಅದಕ್ಕೆ ಹೋದದ್ದಕ್ಕೆ ನಡೆಸಿದ ಅಬ್ಬರದ ಮೂರ್ಖತನ ನೋಡಿದರೆ ಹಾಗನ್ನಿಸುವುದಿಲ್ಲವೇ? ಅನ್ನೋದು ನಮ್ಮ ಗೋಪಣ್ಣನ ಪ್ರಶ್ನೆ. ಮುಂದಿನ ಪವಿತ್ರಾತ್ಮ ಸನ್ನಿ ಲಿಯಾನ್‍ಳನ್ನು ನೆನೆದು ಹಲವು ಬಾರಿ ಕೌಪೀನ ಬದಲಾಯಿಸಿರಬಹುದು ಎಂದಿದ್ದಕ್ಕೆ ನಗುವ ಅವಸರದಲ್ಲಿ ಗೋಪಣ್ಣ ಕವಳ ಪುರ್ ಗುಡಿಸಿಕೊಂಡು ಮೈಮೇಲೆಲ್ಲ ಮರುಳು ಚಿತ್ರ ಮೂಡಿದ್ದು ನೋಡಿಕೊಳ್ಳುತ್ತ ನಕ್ಕ. ಕೌಪೀನ ತೊಳೆಯುವ ಗಿಂಡಿಮಾಣಿಗಳ ಮುಖ ಮೈ ನೆನಪಾಗಿ ನಾನೂ ನಗುತ್ತಲೇ ಪ್ಲೇನ್ ಹತ್ತಿದೆ. ಅಂವ ಊರಲ್ಲೇ ಉಳಿದ.

Thumari Ramachandra

source: https://www.facebook.com/groups/1499395003680065/permalink/1593189874300577/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s