ಅಲ್ದನ ಬಾವಯ್ಯ? ತಿರುಪ್ತಿ ತಿಮ್ಮಪ್ಪನೂ ಕಾಣಿಕೆ ತಗತ್ನನ ಅಂದ್ಕೈಂದಿ.

ಅಲ್ದನ ಬಾವಯ್ಯ? ತಿರುಪ್ತಿ ತಿಮ್ಮಪ್ಪನೂ ಕಾಣಿಕೆ ತಗತ್ನನ ಅಂದ್ಕೈಂದಿ.

ಕಳ್ಳ ಜನರನ್ನ ಹಿಡ್ಯಲೆ ಹೇಳಿ ಸರಕಾರ ಅಧಿಕಾರಗಳ್ನ ನೇಮಕ ಮಾಡ್ಕೆತ್ತು. ನಂತ್ರ ಅಲ್ಲಿಪ್ಪ ಕಳ್ರೇ ಅಧಿಕಾರಗಳ್ನ ಹಿಡಿತಾ ಇರ್‍ತ. ಪ್ರಾಮಾಣಿಕ ಅಧಿಕಾರಿ ಆಪ್ದು ತುಂಬಾನೆ ಕಸ್ಟ. ಈಗ ಕಾಣ್ತಲ್ಯನ ದಕ್ಷ ಅಧಿಕಾರಿ ಹೇಳಿ ಹೆಸರ್ ತಗಂಡವ್ನ ಕತೆನೋಡ ಬಾವಯ್ಯ. ಅಲ್ದ ಅಂವ ಹೋದ ಮೇಲೆ ಅದ್ಯಾವ್ ಪರಿ ಕತೆ ಕಟ್ಟಿದ್ದ ನೋಡ. ಮಾಧ್ಯಮದ ಜನ ಎಲ್ಲ ಹಿಂಗೇ ಆಗ್ಬುಟಿದ್ವ ಹೇಳಿ. ಇವತ್ತು ಬೆಳಿಗ್ಗೆ ಸರಿ ಅಂತ ಹೇಳಿದ್ನೇ ಸಂಜೆ ತಪ್ಪು ಹೇಳ್ತ. ತಮಗೆ ಬೇಕಾದ ಹಾಂಗೆಲ್ಲಾ ಹ್ಯಾಂಗಾರೂ ಹೇಳ್ಲಕ್ಕನ?

ಅಲ್ದನ ಬಾವ ಇಸ್ಟ್‍ದಿನ ಕಾಶೀ ವಿಶ್ವೇಶ್ವರಂಗೆ ಮಾತ್ರ ಕಾಣಿಕೆ ಅಂದ್ಕಡಿದ್ನ. ಈಗೀಗ ಎನಗೆ ತಿರುಪತಿ ತಿಮ್ಮಪ್ಪನ ಮೇಲೂ ಅನುಮಾನ ಬರಲೆ ಹಿಡಿದ್ದು. ಅಲ್ದ ತಿರುಪ್ತಿಲಿ ಇರಂವ ತಿಮ್ಮಪ್ಪಲ್ಲ ಅಮ್ಮನವರು ಹೇಳೆಲ್ಲ ಸುದ್ಯಲ ಅದೆಂತದೂ ಇರ್ಲಿ ತಿಮ್ಮಪ್ಪ ಗಟ್ಟಿಯಾಗಿರಕ್ಕೆ ಯಾವ್ದಾರೂ ರೀತಿಲಿ ವ್ಯವಸ್ಥೆ ಮಾಡ್ಕೆತ್ನ ಬಿಡು. ದೇವರೆಲ್ಲ ಒಂದೇಯ ಹೇಳ್ತ್ವನ? ಅಲ್ದ ಕಾಶೀ ವಿಶ್ವೇಶ್ವರಂಗೂ ತಿರುಪ್ತಿ ತಿಮ್ಮಪ್ಪಂಗೂ ಒಳಗಿಂದೊಳಗೆ ನೆಂಟಸ್ತನ ಇದ್ದೊ ಹೇಳಿ. ಏನೂ ಇರ್ಲಿ ರಾಂಗ್ ವೇಷಕ್ಕೆ ರೈಟ್ ಅಂತ ಸರ್ಟಿಫಿಕೇಟ್ ಕೊಡ್ಸಕ್ಕೆ ಇಬ್ಬರೂ ಸೊಂಟಕಟ್ಕೆಂಡು ನಿತ್ಕೈಂದ. ಕಾಣಿಕೆ ಎಲ್ಲಾ ಒಟ್ಟೂ ಎಸ್ಟು ಹೇಳಿ ಗೊತ್ತಾಗಲೆ. ಕ್ಕೆ ಕತ್ಲೆ ಕೋಣೆಲಂತೂ ಯಾವಾಗ್ಲೂ ಬೆಳಕು ಬರದಿಲ್ಲೆ ತಗ. ಅದು ಇದ್ದಲ್ಲಿವರಿಗೂ ಅಸ್ಟೇಯ. ಅಯ್ಯ ಯನಗೆಂತ ಗೊತ್ತಿಲ್ಯನ ಆನು ಆ ಕೋಣೆ ಕಟ್ದಾಗಿಂದ ನೋಡ್ತಾನೇ ಇದ್ದಿ. ತನ್ನ ಗರ್ಭಗುಡಿ ಕತ್ಲೆ ಕೋಣೆಯೇ ಆಗಿರ್ಲಿ ಹೇಳಿ ಒಳಗಿಪ್ಪ ಯಜಮಾನ ಸಕಲೇಶ್ವರಂಗೇ ಇಸ್ಟ ಇದ್ರೆ ಯಾರು ಎಂತಮಾಡಲಾಗ್ತು? ಹೀಂಗೆಲ್ಲ ಇರದ್ರಿಂದ ಕಾಶೀ ವಿಶ್ಹೇಶ್ವರ ಮತ್ತು ತಿರುಪ್ತಿ ತಿಮ್ಮಪ್ಪನ ದಯೆಯಿಂದ ರಾಂಗ್ ವೇಷ ಇನ್ನೂ ರೈಟು ಹೇಳಸ್ಕಂಬ ಪ್ರಯತ್ನದಲ್ಲಿ ಬಿಕ್ಕೆ ತಿರಗದು ಮತ್ತೆ ದೊಂಬರಾಟ ನಡೀತಾನೇ ಇದ್ದು. ಅಂತಾ ರವಿ ಕೇಸೇ ಹಂಗಾತು ಇನ್ನಿದೆಂತ ಹೇಳಿ ಹಳದೀ ಶಾಲಿನ ಬಾವಯ್ಯಂದ್ರು ಯುಗಾದಿ ಹಬ್ಬ ಮಾಡಿದ್ವಡ.

ಬಾವಯ್ಯ ಅಲ್ದ ಇಲ್ಲೊಂದ್ ಮಾತ್ ಕೇಳು ಆನೀಗ ದಿನಪತ್ರಿಕೆ ತರ್ಸದೇ ನಿಲ್ಲಸ್ಬುಡನ ಅಂದ್ಕೈಂದ್ನ. ಎಂತಕೆ ಗೊತಿದನ? ಬರೊ ಸುದ್ದೀಲಿ ಎಸ್ಟೊ ಸುದ್ದಿ ಸತ್ಯತೆ ಇರದಿಲ್ಲ ಅಂಬ್ನ ಇಲ್ಲೊಬ್ಬ. ಯನಗೂ ಹೌದು ಅನ್ನಶ್ಚು ಬಿಡು. ಇಸ್ಟ ದಿನ ಕರ್ನಾಟಕ ಪತ್ರಿಕೆ ನೋಡ್ತಿದ್ನ. ಅಲ್ಲಿ ಖಳ್ಳರ ಸುದ್ದಿನೆಲ್ಲ ಸ್ವಲ್ಪ ಸರಿಯಾಗಿ ಬರಿತಿದ್ದ. ಈಗ ಕೆಲ್ವು ದಿನದ ಹಿಂದೆ ಟಿವಿಲಿ ತಿಮ್ಮಪ್ಪ ಹೆಣ್ಣೊ ಗಂಡೊ ತರ್ಕ ಬಂದದ್ದೆಯ ನೋಡು. ಈಗ ಕರ್ನಾಟಕ ಪತ್ರಿಕೆಲೂ ಹಾಳು-ಮೂಳು ಬರಕೆ ಹಿಡತ್ತು. ಇದು ತಿಮ್ಮಪ್ಪನ ಪವಾಡವೇ ಸೈ ಹೇಳಿ ಗೊತಾತು ಬಿಡು.

ಬನಾರಿ ಬಾವಯ್ಯನ ಲೇಖನ ಓದ್ಕೆಂಡು ನಗವೋ ಅಳವೋ ಗೊತಾಗಲ್ಲ್ಯೋ. ಸಮಾಜದ ಹುಡ್ರು ಕದ್ದು ಮುಚ್ಚಿ ಬಾರಿಗೆ ಹೋಪ ಕಾಲ ಹತ್ತ-ಹದಿನೈದು ವರ್ಷದ ಹಿಂದೆ ಇತ್ತು. ಈಗೆಂತ ಎಡಬಲ ಇರ ಮಂದಿಲಿ ಯಾರೆಲ್ಲ ತೀರ್ಥ ತಗಂಬರು ಹೇಳಿ ಗೊತ್ತಾಗ್ತಲ್ಲೆ. ಹತ್ರಕ್ ಬಂದಾಗ ಕೊಳ್ತ ಚಿಕ್ಕು ಹಳ್ಳಿನ ವಾಸ್ನೆ ಬರಕ್ ಹಿಡದ್ರೆ ಆಗ ಮಾತ್ರ ಗೊತ್ತಾಗ್ತು. ಇದೇ ಸಂಸ್ಕ್ರುತಿ ಮುಂದ್ವರದ್ರೆ ಹವ್ಯಕರು ಹೇಳ್ಕೆಂಬ್ದಕ್ಕೆ ನಾಚಿಕೆಯಾಗಡ ಇವಕೆ? ಅದೆಂತಾರೂ ಇರ್ಲಿ ಗಂಡುಡ್ರಿಗೆ ಹೆಣ್ಣುಡ್ರು ಸಿಕ್ದೇ ಇದ್ರೂ ರಾಂಗ್ ವೇಷಕ್ಕೆ ಮಾತ್ರ ಯಾವ್ದೂ ಕೊರತೆ ಇಲ್ಯಡ ತಗ. ಬಾರಿಗೂ ಭಾರಕ್ಕೂ ಏನಾರೂ ಸಂಬಂದ ಇದ್ದನ ಬಾವಯ್ಯ? ಕಳ್ದ ಸಲ ಅಡಕೆ ರೇಟು ಹೆಚ್ಗೆ ಬಂದಾಗ ಪವಾಡದ ಕತೆ ಕಟ್ಟಿದ ಜನ ಇದ್ದ ಬಿಡು. ಅಡಕೆ ರೇಟು ಕಿಂಟಲ್ಲಿಗೆ ಯಾವಾಗಲೂ ಬಂಗಾರದ ರೇಟಿನ ಹಾಂಗಿದ್ರೆ ಪವಾಡನಾರೂ ಒಪ್ಪಗಳ್ಲಕ್ಕು. ಅದಿಲ್ದಿದ್ರೆ ಭಾರ ಬರೀ ಭಾರವೇ ಸೈ. ಅದೆಲ್ಲ ಇರ್ಲಿ ರಾಂಗ್ ವೇಷನೇ ಮುಂದಿಟ್ಕಂಡು ಇನ್ನೂ ರಾಮಾ ಹೇಳದಿದ್ದಲ ಅದು ರಾಮಂಗೆ ಮಾಡ ಅನ್ಯಾಯ. ನೀರ್ಚಾಲ್ ಬಾವಯ್ಯ ಅದ್ಯಂತದೋ ತಾರೀಕು ಟೈಮು ಎಲ್ಲ ಹಾಕಿದ್ನ ಮಾರಾಯ.ಅದ್ಯಂತು ಹೇಳಿ ಯನಗೆ ತಲೆಬುಡ ಅರ್ಥಾಗಲ್ಲೆ.

ಬರ್ಲನ ಬಾವ? ಹೇಳಿದ್ನಲ ಯಮ್ಮನೆ ಅಮ್ಮಿ ಒಬ್ಳೇ ಇರ್‍ತ. ಹಳದೀ ಶಾಲನ ಕಣ್ಣಿಗೆ ಬೀಳದಂಗೆ ಆವಳ್ನ ಕಾಪಾಡ್ಕೆಂಬದೇ ಕಸ್ಟ. ಯಾವ ಹುತ್ತದಲ್ಲಿ ಯಾವು ಹಾವಿದ್ದು ಹೇಳಿ ಗೊತ್ತಾಗದಿಲ್ಲೆ ಹೇಳ್ತ್ವನ ಹಂಗೇಯ ಯಾವ ಹಳದೀ ಶಾಲ್ನಲ್ಲಿ ’ಸರ್ಪಾಸ್ತ್ರ’ ಅಡಕ್ಕೈಂದು ಹೇಳಿ ಯಾರಿಗೂ ಗೊತ್ತಾಗದಿಲ್ಲೆ. ಹುಶಾರು ವರಾಡ ಗಿರಾಡ ವಸೂಲಿ ಎಲ್ಲ ಜಾಸ್ತಿ ಆಯ್ದು. ವರಾಡಕ್ಕೆ ಬಂದವ್ರನ್ನ ಕೆಲವು ಕಡೆ ಏನೂ ಕೊಡದಿಲ್ಲೆ ಹೇಳಿ ಸಾಗಹಾಕಿದ್ವಡ ಹೇಳ ಸುದ್ದಿಯೂ ಬೈಂದು. ಕೆಲವು ಗ್ರಾಮದಲ್ಲಂತೂ ಈ ಕಡೆ ತಲೆ ಹಾಕಿ ಮಲಗಡಿ ಹೇಳಿ ಪರಸ್ಪರ ಕಳ್ಶಿದ್ವಡ. ಒಂದಲ್ಲಾ ಒಂದಿನ ರಾಂಗ್ ವೇಷದ ’ಕಿರೀಟೋತ್ಸವ’ ಇರದೇಯ ಹೇಳದಂತೂ ಕುರಿಮೆಂದೆಲಿ ಸೇರ್ದೆ ಇಪ್ಪ ಹವ್ಯಕರಿಗೆ ಗೊತಿದು. ಸಿಗನ ಹಾಂ.

Thumari Ramachandra

source: https://www.facebook.com/groups/1499395003680065/permalink/1592441217708776/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s